Categories
ಸಿನಿ ಸುದ್ದಿ

ನಿರ್ದೇಶಕ ಸಂತೋಷ್ ಆನಂದ್ ರಾಮ್ ಗೆ ಅವಮಾನ; ‘ಅಗ್ರಜ’ ಸೆಟ್ ನಲ್ಲಿ ಆನಂದ್ ಭವಿಷ್ಯ ನಿರ್ಧಾರ ಜಗ್ಗೇಶ್ ನುಡಿದ ಮಾತು ನಿಜವಾಯ್ತು !

ಸಂತೋಷ್ ಆನಂದ್ ರಾಮ್ ಇವತ್ತು ಸ್ಯಾಂಡಲ್ ವುಡ್ನ ಸ್ಟಾರ್ ಡೈರೆಕ್ಟರ್. ಸೌತ್ ಸಿನಿಮಾ ಇಂಡಸ್ಟ್ರಿ ತಿರುಗಿ ನೋಡುವಂತಹ ಸಿನಿಮಾ ಕೊಟ್ಟಿದ್ದಾರೆ. ಗಂಧದಗುಡಿಯ ಇಬ್ಬರು ಸ್ಟಾರ್ ನಟರಿಗೆ ಬಿಗ್ ಬ್ರೇಕ್ ಕೊಟ್ಟಿದ್ದಾರೆ. ತಮ್ಮ ಸಿನಿಕರಿಯರ್ ನ ಮೈಲೇಜ್ ಹೆಚ್ಚಿಸಿಕೊಂಡಿದ್ದಾರೆ. ಯುವನಟರಿಂದ ಹಿಡಿದು ಸ್ಟಾರ್ ನಟರು ಕೂಡ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಅಭಿನಯಿಸೋಕೆ ಕಾತರಿಸುತ್ತಿದ್ದಾರೆ. ಇಂತಿಪ್ಪ ಜನಪ್ರಿಯ ಹಾಗೂ ಬಹುಬೇಡಿಕೆಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ಭಾರೀ ಅವಮಾನ ಎದುರಿಸಿದ್ದಾರೆ. ಅವತ್ತು ಸ್ಟಾರ್ ನಿರ್ದೇಶಕರೊಬ್ಬರಿಂದ ಬಾಯಿಗೆ ಬಂದ ಹಾಗೇ ತೆಗಳಿಸಿಕೊಂಡ ಸಂತೋಷ್ ಆನಂದ್ ರಾಮ್ ಇವತ್ತು ಆ ನಿರ್ದೇಶಕರಿಗೆ ಸೆಡ್ಡು ಹೊಡೆಯುವ ರೇಂಜ್ಗೆ ಬೆಳೆದು ನಿಂತಿದ್ದಾರೆ.

ಅವಮಾನ- ಅಪಮಾನ- ನಿಂದನೆ-ನೋವು- ಕಷ್ಟ-ದುಃಖ- ಸೋಲು-ತುಳಿತ ಇದ್ಯಾವುದನ್ನು ನೋಡದೇ ಯಶಸ್ಸಿನ ಉತ್ತುಂಗಕ್ಕೇರುವುದಕ್ಕೆ ಸಾಧ್ಯವಿಲ್ಲ. ಗೆಲುವಿನ ಗದ್ದುಗೆ ಏರಿ ಗಹಗಹಿಸೋದಕ್ಕೆ ಅವಕಾಶ ಸಿಕ್ಕುವುದಿಲ್ಲ. ಒಂದ್ವೇಳೆ ಸಿಕ್ಕರೂ ಕೂಡ ಅದು ಅವರುಗಳ ಸಕ್ಸಸ್ ಆಗಿರುವುದಿಲ್ಲ‌ ಬದಲಾಗಿ ಗಾಡ್ ಫಾದರ್ ಗಳ ಯಶಸ್ಸಾಗಿರುತ್ತೆ. ಯಾಕಂದ್ರೆ, ಇವರುಗಳು ಬೆನ್ನೆಲುಬಾಗಿ ನಿಂತಿದ್ದರಿಂದಲೇ ಅವಮಾನ ಎದುರಿಸದೇ ಕೆಲವರು ಮೇಲಕ್ಕೇರುತ್ತಾರೆ ಬಿಡಿ. ಅವರನ್ನು ಪಕ್ಕಕಿಡೋಣ ನಾವು ಮಾತನಾಡ್ತಿರುವುದು ಕಷ್ಟಜೀವಿಗಳ ಬಗ್ಗೆ, ಹೋರಾಡಿ ಗೆದ್ದವರ ಬಗ್ಗೆ.

ಸಂತೋಷ್ ಆನಂದ್ ರಾಮ್ ಚಂದನವನದ ಸ್ಟಾರ್ ಡೈರೆಕ್ಟರ್. ಕನ್ನಡ ಚಿತ್ರರಂಗ ಹೆಮ್ಮೆ ಪಡುವಂತಹ ನಿರ್ದೇಶಕ. ರಾಕಿಂಗ್ ಸ್ಟಾರ್ ಹಾಗೂ ಪವರ್ ಸ್ಟಾರ್ ಗೆ ಬಿಗ್ ಬ್ರೇಕ್ ಕೊಟ್ಟಂತಹ ಚಿತ್ರಬ್ರಹ್ಮ. ಯುವನಿರ್ದೇಶಕನನ್ನು ನಂಬಿ ಅವಕಾಶ ಕೊಟ್ಟ ಆ ಇಬ್ಬರು ಸ್ಟಾರ್ ಗಳು ಸಂತೋಷ್ ಆನಂದ್ ರಾಮ್ ಪಾಲಿಗೆ ರಿಯಲ್ ಗಾಡ್ ಫಾದರ್ ಗಳು. ಅಪಾರವಾದ ಪ್ರತಿಭೆ, ಸಿನಿಮಾನ ಪ್ರೀತ್ಸೋ ರೀತಿಗೆ ರಾಕಿ ಹಾಗೂ ಅಪ್ಪು ಇಬ್ಬರು ಕ್ಲೀನ್ ಬೋಲ್ಡ್. ಹೀಗಾಗಿಯೇ, ಸಂತೋಷ್ ಆನಂದ್ ರಾಮ್ ಗೆ ಕಾಲ್ ಶೀಟ್ ಕೊಟ್ಟರು. ಇಬ್ಬರು ಸ್ಟಾರ್ ನಟರುಗಳು ತನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಆನಂದ್ ರಾಮ್ ಉಳಿಸಿಕೊಂಡರು. ಇದೆಲ್ಲಾ ನಿಮಗೆ ಗೊತ್ತಿರುವ ವಿಚಾರವೇ. ಆದರೆ, ಸಂತೋಷ್ ಆನಂದ್ ರಾಮ್ ಗೆ ಸೆಟ್ನಲ್ಲಿ ಅವಮಾನ ಮಾಡಿ, ಮನಬಂದಂತೆ ಮಾತನಾಡಿ ನಿಂದಿಸುತ್ತಿದ್ದ ಆ ನಿರ್ದೇಶಕರ ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ. ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ ಜಗ್ಗೇಶ್ ಬಿಚ್ಚಿಟ್ಟಿದ್ದೇನು ಹೇಳ್ತೀವಿ‌ ನೋಡಿ.

ನವರಸನಾಯಕ ಜಗ್ಗೇಶ್ ಗೆ ಸಂತೋಷ್ ಆನಂದ್ ರಾಮ್ ಡೈರೆಕ್ಟ್ ಮಾಡ್ತಿರುವ ವಿಷ್ಯ ಈಗಾಗಲೇ ತಿಳಿದೇ ಇದೆ. ರಾಘವೇಂದ್ರ ಸ್ಟೋರ್ಸ್ ಚಿತ್ರದ ಮೂಲಕ ಇಬ್ಬರು ಒಂದಾಗ್ತಿದ್ದಾರೆ. ಹೊಂಬಾಳೆ ಸಂಸ್ಥೆ ಬಂಡವಾಳ ಹೂಡ್ತಿದೆ. ಈ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಡದ ಜಗ್ಗಣ್ಣ, ಮಗ ಗುರುರಾಜ್ ನಟನೆಯ ಕಾಗೆಮೊಟ್ಟೆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಸಂತೋಷ್ ಆನಂದ್ ರಾಮ್ ಎದುರಿಸಿದ ಅವಮಾನ ಹಾಗೂ ಬೆಳೆದುನಿಂತ ಪರಿಯ ಬಗ್ಗೆ ಹೆಮ್ಮೆಪಟ್ಟರು. ಸಂತೋಷ್ ಆನಂದ್ ರಾಮ್ ದೊಡ್ಡ ಮಟ್ಟಕ್ಕೆ ಎದ್ದುನಿಲ್ತಾನೆ ಎಂದು ಅವತ್ತೇ ನಾನು ಹೇಳಿದ್ದೆ, ನನ್ನ ಮಾತು ಸತ್ಯವಾಗಿದೆ ಎನ್ನುತ್ತಾ ಖುಷಿಪಟ್ಟರು.

ಹೌದು, ಜಗ್ಗಣ್ಣ ನುಡಿದ ಭವಿಷ್ಯ ನಿಜವಾಗಿದೆ. ಸಂತೋಷ್ ಆನಂದ್ ರಾಮ್ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೇರಿದ್ದಾರೆ. ಇದಕ್ಕೆ ಕಾರಣ ಸಂತೋಷ್ ಮೆದುಳೊಳಗೆ ಉದುಗಿರುವ ಅಘಾದವಾದ ಪ್ರತಿಭೆ. ಆದರೆ, ಆ ಪ್ರತಿಭೆಯ ಬಗ್ಗೆ ಅರಿಯದೇ ‘ ಅಗ್ರಜ’ ಸಿನಿಮಾ ಸೆಟ್ ನಲ್ಲಿ ನಿರ್ದೇಶಕ ಮನಬಂದಂತೆ ಮಾತನಾಡುತ್ತಿದ್ದರಂತೆ. ಇದನ್ನು ಖುದ್ದು ಕೇಳಿಸಿಕೊಂಡು ಮರುಗಿದ ಜಗ್ಗಣ್ಣ, ಎಲ್ಲರ ಮುಂದೆ ಸಂತೋಷ್ ಆನಂದ್ ರಾಮ್ ನ ನಿಲ್ಲಿಸಿ ಮುಂದೊಂದು ದಿನ ಯಾವ್ ಮಟ್ಟಕ್ಕೆ ಬೆಳೆದು ನಿಲ್ತಾನೆ‌ ನೋಡ್ತಾಯಿರಿ ಎಂದಿದ್ದರಂತೆ.

ಮೊದಲು ಅವಮಾನ ನಂತರ ಸನ್ಮಾನ ಎನ್ನುವ ಮಾತಿದೆ. ಸೋತ ಜಾಗದಲ್ಲೇ ಗೆಲ್ಲಬೇಕು, ಬಿದ್ದ ಜಾಗದಲ್ಲೇ ಎದ್ದು ನಿಲ್ಲಬೇಕು ಎನ್ನುವ ವಾಕ್ಯವಿದೆ. ಅದರಂತೇ, ಅವಮಾನಗೊಂಡ ಜಾಗದಲ್ಲೇ ಸಂತೋಷ್ ಸನ್ಮಾನ ಮಾಡಿಸಿಕೊಳ್ತಿದ್ದಾರೆ. ಸವಾಲುಗಳಿಗೆ ಸೆಡ್ಡುಹೊಡೆದು ಗಟ್ಟಿಯಾಗಿ ನಿಂತುಕೊಂಡಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ, ಕಾಲೆಳೆದು ಹೀಯಾಳಿಸಿದವರು ಕೂಡ ಸಂತೋಷ್ ಆನಂದ್ ರಾಮ್ ಪೋಟೋನ ಡಿಪಿಯಾಗಿಸಿಕೊಳ್ಳುವಷ್ಟು

ಗೆಲ್ಲಬೇಕು ನೀ ನಿಲ್ಲೋವರೆಗೂ, ನಿಲ್ಲಬೇಕು ನೀ ಗೆಲ್ಲೋವರೆಗೂ, ಛಲದಿಂದ ನಿಲ್ಲು, ನಗುವಲ್ಲೇ ಕೊಲ್ಲು, ಅವಮಾನ ಮಾಡಿದವರ ಪವರ್ ಆಫ್ ಯೂತ್ ಅಂತ ಯುವರತ್ನ ಚಿತ್ರದ ಹಾಡೊಂದಕ್ಕೆ ಲಿರಿಕ್ಸ್ ಬರೆದಿದ್ದಾರೆ. ಆ ಲಿರಿಕ್ಸ್ ನಂತೆಯೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ರಾಕಿ ಚಿತ್ರಕ್ಕೆ ಲಿರಿಕ್ಸ್ ಬರೆಯೋ ಮೂಲಕ ಸಿನಿಕರಿಯರ್ ಶುರುಮಾಡಿದರು. ಭಜರಂಗಿ ಹರ್ಷ ಅವರೊಟ್ಟಿಗೆ ಸಹಾಯಕ ನಿರ್ದೇಶಕರಾಗಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿಂಗಾರಿ ಚಿತ್ರಕ್ಕೆ ಡೈಲಾಗ್ ಬರೆದುಕೊಟ್ಟರು ಜೊತೆಗೆ ಡೈರೆಕ್ಷನ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡಿದರು. ಅಗ್ರಜ ಹಾಗೂ ಗಜಕೇಸರಿಗೆ ಮತ್ತೆ ಡೈಲಾಗ್ ಬಾಣಬಿಟ್ಟರು. ಸಂತೋಷ್ ಸಾಹಿತ್ಯಕ್ಕೆ ಮತ್ತು ಸಂಭಾಷಣೆಗೆ ಇದ್ದ ಪವರ್ ನ ಗುರ್ತಿಸಿದ ರಾಕಿಭಾಯ್ ಅವಕಾಶ ಕೊಟ್ಟರು.

ಯಸ್, ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿಗೆ ಸಂತೋಷ್ ಡೈರೆಕ್ಟರ್ ಹ್ಯಾಟ್ ತೊಟ್ಟರು. ಮೊದಲ ಪ್ರಯತ್ನದಲ್ಲೇ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡರು. ರಾಕಿಂಗ್ ಜೋಡಿಗೆ ಬಿಗ್ ಬ್ರೇಕ್ ಸಿಕ್ಕಂತೆ ಸಂತೋಷ್ ಕರಿಯರ್ ನೇ ಚೇಂಜ್ ಮಾಡ್ತು. ಅಲ್ಲಿಂದ, ದೊಡ್ಮನೆ ರಾಜಕುಮಾರನಿಗೆ ಆಕ್ಷನ್ ಕಟ್ ಹೇಳಿ ಗೆಲುವಿನ ಕೇಕೆ ಹಾಕಿದರು. ಯುವರತ್ನ ಚಿತ್ರದ ಮೂಲಕ ಗಡಿದಾಟಿದರು. ಈಗ ಮತ್ತೊಮ್ಮೆ ಪವರ್ ಸ್ಟಾರ್ ಗೆ ಆಕ್ಷನ್ ಕಟ್ ಹೇಳುವ ಚಾನ್ಸ್ ಸಿಕ್ಕಿದೆ. ಅದಕ್ಕೂ ಮುನ್ನನವರಸನಾಯಕನನ್ನು ನಿರ್ದೇಶನ ಮಾಡಲಿದ್ದಾರೆ.ಒಟ್ನಲ್ಲಿ ಸಂತೋಷ್ ಆನಂದವಾಗಿದ್ದಾರೆ. ವೃತ್ತಿಬದುಕು ಹಾಗೂ ವೈಯಕ್ತಿಕ ಬದುಕಿನಲ್ಲಿ ಸಂತೋಷ‌ ಕಂಡಿರುವ ಆನಂದ್ ರಾಮ್, ಗಡಿದಾಟಿ ಘರ್ಜಿಸಲಿ, ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ಹೊರಹೊಮ್ಮಲಿ ಎನ್ನುವುದೇ ಸಿನಿಲಹರಿ ಆಶಯ

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ‌ಸಿನಿಲಹರಿ

Categories
ಸಿನಿ ಸುದ್ದಿ

ಹುಡ್ಗೀರ ಡಾರ್ಲಿಂಗ್.. ಲಕ್ಕಿಮ್ಯಾನ್ ಕೃಷ್ಣನ `ದಿಲ್’ ಪಸಂದ್ ; ಮೇಘಾ-ನಿಶ್ವಿಕಾ ಜೊತೆ ನಿಧಿಮಾ ಹಸ್ಬೆಂಡ್ ಡ್ಯುಯೆಟ್ !

ಜಿಲೇಬಿ, ದೂದ್‌ಪೇಡಾ ಆಯ್ತು, ಈಗ ದಿಲ್‌ಪಸಂದ್ ಟೈಮು. ಶುಗರ್ ಇದ್ದವರು ಇಲ್ಲದವರು ಎಲ್ಲರೂ ಕೂಡ ಒಮ್ಮೆಯಾದರೂ ದಿಲ್‌ಪಸಂದ್ ಟೇಸ್ಟ್ ಮಾಡಿರ್ತಾರೆ. ಮಿಕ್ಚರ್ ಆಫ್ ಸ್ವೀಟ್ಸ್ ಅಂಡ್ ಡ್ರೈ ಫ್ರೂಟ್ಸ್ ಒಳಗೊಂಡಿರುವ ದಿಲ್‌ಪಸಂದ್ ರುಚಿ ಹೇಗಿರುತ್ತೆ ಅಂತ ಎಲ್ಲರಿಗೂ ಗೊತ್ತಿರುತ್ತೆ. ಆದರೆ, ಗಾಂಧಿನಗರದಲ್ಲಿ ಹೊಸದಾಗಿ ತಯ್ಯಾರಾಗುತ್ತಿರುವ ಈ ದಿಲ್‌ಪಸಂದ್ ಸ್ವಾದದ ಬಗ್ಗೆ ಹೇಳಲೇಬೇಕು. ನೀವು ಒಮ್ಮೆ ಇದನ್ನು ನೋಡ್ಲೇಬೇಕು.

ಕನ್ನಡ ನಾಡಿನ ಸಿನಿರಸಿಕರ ದಿಲ್' ಕದಿಯೋದಕ್ಕೆ ನಿರ್ದೇಶಕರು ಒಂದಿಲ್ಲೊಂದು ಕಸರತ್ತು ಮಾಡುತ್ತಲೇ ಇರುತ್ತಾರೆ. ಸಿನಿಮಾ ಟೈಟಲ್- ಸಾಂಗ್ಸ್- ಡೈಲಾಗ್ಸ್-ಕಥೆ- ಚಿತ್ರಕಥೆ-ಸಂಭಾಷಣೆ-ಸ್ಟಾರ್‌ ಕಾಸ್ಟಿಂಗ್ ಹೀಗೆ ಎಲ್ಲದರಲ್ಲೂ ಹೊಸತನ ತೋರಿಸಿ, ತಾಜಾ ಸಮಾಚಾರ ಹೇಳಿ ಚಿತ್ರಪ್ರೇಮಿಗಳ ಹೃದಯ ಗೆಲ್ಲೋದಕ್ಕೆ ಹಪಹಪಿಸುತ್ತಾರೆ. ಅದರಂತೇ, ಇಲ್ಲೊಂದು ಚಿತ್ರತಂಡ ಪ್ರೇಕ್ಷಕಮಹಾಪ್ರಭುಗಳ ಹಾರ್ಟ್ ಕದಿಯೋದಕ್ಕೆ, ಬಿಗ್‌ ಸ್ಕ್ರಿನ್ ನಲ್ಲಿ ಮೆರೆಯೋದಕ್ಕೆ ಹಾಗೂ ಬಾಕ್ಸ್ಆಫೀಸ್ ಲೂಟಿ ಹೊಡೆಯೋದಕ್ಕೆದಿಲ್ ಪಸಂದ್’ ಹೆಸರಲ್ಲೇ ಸಿನಿಮಾ ಮಾಡ್ತಿದೆ.

ಹೆಣೈಕ್ಳ ಆಲ್‌ಟೈಮ್ ಡಾರ್ಲಿಂಗ್ ಹಾಗೂ ನಿಧಿಮಾ ಹಸ್ಬೆಂಡ್ ಕೃಷ್ಣ ದಿಲ್ ಪಸಂದ್' ಹೀರೋ. 'ಲವ್‌ಮಾಕ್ಟೇಲ್' ರುಚಿ ತೋರ್ಸಿ ಲವ್‌ಬರ್ಡ್ಸ್ ಪಾಲಿಗೆ ಹೀರೋ ಆಗಿರುವ ಕೃಷ್ಣ ಈಗ ಲಕ್ಕಿಮ್ಯಾನ್ ಆಗ್ಬಿಟ್ಟಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆಲಕ್ಕಿಮ್ಯಾನ್’ ಹೆಸರಲ್ಲಿ ಸಿನಿಮಾ ಮಾಡುವಷ್ಟು ಲಕ್ಕಿಫೇಲೋ ಕೃಷ್ಣ ಅವರು. ಬಣ್ಣದ ಜಗತ್ತಿಗೆ ರೈಟ್ ಟೈಮ್‌ನಲ್ಲಿ ಬಂದ್ರೋ ಅಥವಾ ರಾಂಗ್ ಟೈಮ್‌ನಲ್ಲಿ ಬಣ್ಣ ಹಚ್ಚಿದ್ರೋ ಇಲ್ಲವೋ ಗೊತ್ತಿಲ್ಲ. ಆದರೆ, ಜೀವನದಲ್ಲಿ ನಿಧಿಮಾ ಎಂಟ್ರಿಕೊಟ್ಟ ಕಥೆಯನ್ನೇ ಸಿನಿಮಾ ಆಗಿಸಿ ಸಿನಿಮಾಪ್ರೇಮಿಗಳಿಂದ ರೈಟ್ ಎನಿಸಿಕೊಂಡು, ಬೆಳ್ಳಿತೆರೆಯಿಂದ ಭೇಷ್ ಎನಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಮಾಯಲೋಕದಲ್ಲಿ ಬೇಡಿಕೆ ಹೆಚ್ಚಿಸಿಕೊಂಡು ಡಿಮ್ಯಾಂಡಿಂಗ್ ನಾಯಕನಾಗಿ ಮೆರೆಯುತ್ತಿದ್ದಾರೆ.

ಡಾರ್ಲಿಂಗ್ ಕೃಷ್ಣ ಅವರ ಕೈಯಲ್ಲೀಗ ಏಳೆಂಟು ಸಿನಿಮಾಗಳಿವೆ. ಲವ್‌ಮಾಕ್ಟೇಲ್೨',ಶುಗರ್ ಫ್ಯಾಕ್ಟರಿ’, ಲವ್ ಮೀ ಆರ್ ಹೇಟ್ ಮೀ' ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಹಾಕಿ ಶೈನ್ ಆಗ್ತಿರುವ ಡಾರ್ಲಿಂಗ್ ಈಗದಿಲ್ ಪಸಂದ್’ ಹೆಸರಿನ ಚಿತ್ರಕ್ಕೆ ನಾಯಕ ನಟನಾಗಿ ಸೇರಿಕೊಂಡಿದ್ದಾರೆ. ಮಳೆ, ಧೈರ್ಯಂ, ಶಿವಾರ್ಜುನ, ಲೌಡ್‌ಸ್ಪೀಕರ್ ಚಿತ್ರಗಳ ನಿರ್ದೇಶಕ ಶಿವತೇಜಸ್ ದಿಲ್‌ಪಸಂದ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಟೈಟಲ್ ಬಿಡುಗಡೆಯಾಗಿದೆ. ಕನ್ನಡ ನಾಡಿನ ಹೆಮ್ಮೆಯ ಹಾಗೂ ದಕ್ಷ ಐಪಿಎಸ್ ಅಧಿಕಾರಿ ರವಿ.ಡಿ. ಚೆನ್ನಣ್ಣನವರ್ದಿಲ್‌ಪಸಂದ್’ ಶೀರ್ಷಿಕೆ ಅನಾವರಣ ಮಾಡಿದ್ದಾರೆ.

‘ಜೊತೆಜೊತೆಯಲಿ’ ಸೀರಿಯಲ್ ಮೂಲಕ ಕರುನಾಡಿನ ಮನೆ-ಮನ ತಲುಪಿರುವ ಮೇಘಾಶೆಟ್ಟಿ ಹಾಗೂ ನಿಶ್ವಿಕಾ ನಾಯ್ಡು ಡಾರ್ಲಿಂಗ್ ಕೃಷ್ಣಗೆ ಜೊತೆಯಾಗಿದ್ದಾರೆ. ನಾನಿ, ಬರ್ಕ್ಲಿ, ಕಾಲಚಕ್ರ ಸಿನಿಮಾಗಳ ನಿರ್ದೇಶಕ ಸುಮಂತ್ ಕ್ರಾಂತಿ ಈಗ ಅನ್ನದಾತರಾಗಿ ಬಡ್ತಿಹೊಂದಿದ್ದಾರೆ. `ದಿಲ್ ಪಸಂದ್’ಗೆ ಬಂಡವಾಳ ಹೂಡಿದ್ದಾರೆ. ರೊಮ್ಯಾಂಟಿಕ್ ಲವ್ ಕಾಮಿಡಿ ಚಿತ್ರವಾಗಿದ್ದು ಅತೀ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ತಬಲನಾಣಿ, ರಂಗಾಯಣ ರಘು, ಸಾಧುಕೋಕಿಲ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿದ್ದಾರೆ. ಅರ್ಜುನ್ ಜನ್ಯಾ ಸಂಗೀತ, ಶೇಖರ್ ಚಂದ್ರು ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದ್ದು, ಅಕ್ಟೋಬರ್ 04 ರಿಂದ ಫಿಲ್ಮಿ ಟೀಮ್ ಶೂಟಿಂಗ್ ಅಖಾಡಕ್ಕೆ ಧುಮ್ಕಲಿದೆ.
ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಜಗ್ಗೇಶ್‌ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ಪುತ್ರ ಗುರುರಾಜ್ ; ಊಹೆಗೂ ಮೀರಿದ ಕಥೆ-ಚಿತ್ರಕಥೆ, ಇಂಡಿಯನ್ ಸಿನ್ಮಾ ಇಂಡಸ್ಟ್ರಿಯ ದಿ ಬೆಸ್ಟ್ ಸ್ಕ್ರಿಫ್ಟ್‌ !

ಸೌತ್ ಸಿನ್ಮಾ ಇಂಡಸ್ಟ್ರಿ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುತಿರುಗಿ ನೋಡ್ತಿದೆ ಎನ್ನುವುದು ಕಣ್ಮುಂದಿರುವ ಸತ್ಯ. ಅಷ್ಟರ ಮಟ್ಟಿಗೆ ನಮ್ಮ ಕನ್ನಡ ಸಿನಿಮಾರಂಗ ಬೆಳೆದು ನಿಂತಿದೆ. ಈ ಮಧ್ಯೆ ನವರಸನಾಯಕ ಜಗ್ಗೇಶ್ ಅವರ ಪುತ್ರ ಇಲ್ಲಿವರೆಗೂ ಯಾರು ಯೋಚನೆ ಮಾಡದ ರೀತಿಯಲ್ಲಿ ಥಿಂಕ್ ಮಾಡಿ ಒಂದು ಸಬ್ಜೆಕ್ಟ್ ರೆಡಿಮಾಡಿಕೊಂಡಿದ್ದಾರೆ. ಆ ಇಂಟ್ರೆಸ್ಟಿಂಗ್ ಕಥೆಯ ಹೀರೋ ನವರಸನಾಯಕ ಜಗ್ಗೇಶ್ ಎಂಬುದೇ ಮತ್ತೊಂದು ವಿಶೇಷ.

ನವರಸಗಳಿಗೆ ನಾಯಕ ಒನ್ ಅಂಡ್ ಓನ್ಲೀ ಜಗ್ಗೇಶ್. ಈ ಮಾತನ್ನು ಕರ್ನಾಟಕದ ಕಲಾಭಿಮಾನಿಗಳು ಒಪ್ಪಿಕೊಂಡಿದ್ದಾರೆ. ಹಾಗೆಯೇ ಬೆಳ್ಳಿತೆರೆ ಮತ್ತು ಬಾಕ್ಸ್ ಆಫೀಸ್ ಡಬ್ಬವೂ ಅಪ್ಪಿಕೊಂಡು ಒಪ್ಪಿಕೊಂಡಿದೆ. ಬಿಗ್‌ಸ್ಕ್ರಿನ್ ಮೇಲೆ ಹಾಸ್ಯಲೋಕದ ಸರದಾರನ ಪಯಣ ಯಶಸ್ವಿಯಾಗಿ ಮುಂದುವರೆಯುತ್ತಲೇ ಇದೆ. ಭರ್ತಿ ನಾಲ್ಕು ದಶಕಗಳಿಂದ ಮನರಂಜನೆಯ ಹಬ್ಬದೂಟ ಬಡಿಸುತ್ತಾ ಸವಾರಿ ಮಾಡುತ್ತಿರುವ ನಗೆಮಾಂತ್ರಿಕ ಹಾಸ್ಯರತ್ನ ಜಗ್ಗಣ್ಣ 100 ರ ಗಡಿದಾಟಿದ್ದಾರೆ. ತರ್ಲೆ ನನ್‌ಮಗ, ಸರ್ವರ ಸೋಮಣ್ಣ, ಗಡಿಬಿಡಿಗಂಡ, ಜಗತ್‌ ಕಿಲಾಡಿ, ಮಠ, ಎದ್ದೇಳು ಮಂಜುನಾಥ, ಹೀಗೆ ಹಲವು ಸೂಪರ್‌ಹಿಟ್ ಸಿನಿಮಾಗಳಲ್ಲಿ ಹುಚ್ಚೆಬ್ಬಿಸಿದ್ದಾರೆ. ನೂರಕ್ಕೂ ಹೆಚ್ಚು ಚಿತ್ರಗಳಿಗೆ ಜೀವಕೊಟ್ಟು ಮಾಯಲೋಕದಲ್ಲಿ ಧೂಳೆಬ್ಬಿಸಿಕೊಂಡು ಧಗಧಗಿಸುತ್ತಲೇ ಇದ್ದಾರೆ.

ಜಗ್ಗಣ್ಣ ಕಾಳಿದಾಸ ಕನ್ನಡ ಮೇಷ್ಟ್ರಾಗಿ ಪಾಠ ಮಾಡಿದ್ಮೇಲೆ ಸಿನಿರಸಿಕರಿಗೆ ʼತೋತಾಪುರಿʼ ತಿನ್ನಿಸೋಣ ಅಂತ ರೆಡಿಯಾಗ್ತಿದ್ದರು. ಅಷ್ಟರಲ್ಲಿ ಇಡೀ ವಿಶ್ವಕ್ಕೆ ಕೊರೊನಾ ಅಟಕಾಯಿಸಿಕೊಂಡ್ತು. ಇದ್ರಿಂದ ಇಡೀ ಜಗತ್ತು ಲಾಕ್ ಆಯ್ತು ಅದರಂತೇ ಕರುನಾಡಿಗೂ ಕೂಡ ಬೀಗ ಹಾಕಬೇಕಾಗಿ ಬಂತು. ಈಗ ಕೊರೊನಾ ಅಟ್ಟಹಾಸ ತಗ್ಗಿದೆ, ಶೂಟಿಂಗ್‌ಗೆ ಅವಕಾಶ ಸಿಕ್ಕಿದೆ, ಥಿಯೇಟರ್ ಕೂಡ ಓಪನ್ ಆಗಿದೆ. ಜಗ್ಗೇಶ್ ಪುತ್ರ ಗುರುರಾಜ್ ಅಭಿನಯದ `ಕಾಗೆಮೊಟ್ಟೆ’ ಸಿನಿಮಾ ಅಕ್ಟೋಬರ್ 1 ರಂದು ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ. ಕಾಗೆಮೊಟ್ಟೆ ರಿಲೀಸ್ ಕುರಿತಾದ ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿದ್ದ ನಟ ಜಗ್ಗೇಶ್ ಮಗನ ಡೈರೆಕ್ಷನ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂ0ಡರು. ಊಹೆಗೂ ಮೀರಿದ ಕಥೆ-ಚಿತ್ರಕಥೆಯ ರಹಸ್ಯ ಬಿಚ್ಚಿಟ್ಟರು.

ನವರಸನಾಯಕ ಜಗ್ಗೇಶ್‌ಗೆ ಆಕ್ಷನ್ ಕಟ್ ಹೇಳಬೇಕು ಎನ್ನುವುದು ಎಷ್ಟೋ ನಿರ್ದೇಶಕರ ಕನಸು. ಅಂತಹದ್ದೊಂದು ಮಹದಾಸೆ ಜಗ್ಗೇಶ್ ಅವರ ಪುತ್ರ ಗುರುರಾಜ್‌ಗೂ ಇದೆ. ತಂದೆಯನ್ನು ನಿರ್ದೇಶಿಸುವ ಕನಸೊತ್ತ ಗುರುರಾಜ್, ಸದ್ದಿಲ್ಲದೇ ಸೈಲೆಂಟಾಗಿಯೇ ಸ್ಕ್ರಿಫ್ಟ್ ರೆಡಿಮಾಡಿಕೊಂಡಿದ್ದಾರೆ. ಅದೊಂದು ದಿನ ಫ್ರೀ‌ ಆಗಿ ಕುಳಿತಿದ್ದಾಗ ಗುರುರಾಜ್, ತಮ್ಮ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ತಂದೆ ಜಗ್ಗೇಶ್ ಬಳಿ ಡಿಸ್ಕಸ್ ಮಾಡಿದ್ದಾರೆ. ಸಿನಿಮಾ ಡೈರೆಕ್ಟ್ ಮಾಡ್ಬೇಕು ಅಂದುಕೊಂಡಿದ್ದೇನೆ, ನಿಮಗಾಗಿ ಒಂದು ಕಥೆ ರೆಡಿಮಾಡಿಕೊಂಡಿದ್ದೇನೆ ಎಂದಿದ್ದಾರೆ. ಮನೆಯಲ್ಲೇ ಕೂತು ಕಥೆಯನ್ನು ನರೇಟ್ ಮಾಡಿದ್ದಾರೆ. ಮಗ ಹೇಳಿದ ಕಥೆ ಕೇಳಿ ಜಗ್ಗಣ್ಣ ಥ್ರಿಲ್ಲಾಗಿದರು. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಗ್ಗೇಶ್ ಅವರು, ನಿರೀಕ್ಷೆಗೂ ಮೀರಿದ ಕಥೆ-ಚಿತ್ರಕಥೆ ಮಾಡಿಕೊಂಡಿದ್ದಾನೆ. ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲೇ ಇಂತಹದ್ದೊಂದು ಕಥೆ ಇಲ್ಲಿವರೆಗೂ ಮೂಡಿಬಂದಿಲ್ಲ. ನನ್ನ ಮಗನ ಇಮ್ಯಾಜಿನೇಷನ್ ಕಂಡು ನಾನೇ ದಿಗ್ಬ್ರಾಂತಗೊಂಡಿರುವುದಾಗಿ ಜಗ್ಗಣ್ಣ ಹೇಳಿಕೊಂಡರು.

ಅಷ್ಟಕ್ಕೂ, ಗುರುರಾಜ್ ಯಾವ್ ರೀತಿ ಕಥೆ ಮಾಡಿಕೊಂಡಿದ್ದಾರೆ ? ಯಾವ ಜಾಹ್ನರ್ ಸಿನಿಮಾ? ತಮ್ಮ ನಿರ್ದೇಶನದಲ್ಲಿ ತಂದೆಯನ್ನು ಹೇಗೆ ತೋರಿಸಲಿದ್ದಾರೆ ? ಈ ಯಾವ ಕೂತೂಹಲದ ಪ್ರಶ್ನೆಗೂ ಸದ್ಯಕ್ಕೆ ಉತ್ತರವಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗುರುರಾಜ್ ಆಗಲೀ, ನಟ ಜಗ್ಗೇಶ್ ಅವರಾಗಲೀ ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, 2020 ಮಾರ್ಚ್ 17 ರಂದು ಅಧಿಕೃತವಾಗಿ ಸಿನಿಮಾ ಅನೌನ್ಸ್ ಮಾಡುವ ಹಂಬಲದಲ್ಲಿದ್ದಾರೆ ಗುರುರಾಜ್. ಮಾರ್ಚ್ 17 ಜಗ್ಗೇಶ್ ಅವರ ಜನ್ಮದಿನ ಹೀಗಾಗಿ ಅಂದೇ ಸಿನಿಮಾ ಸೆಟ್ಟೇರಲಿದೆ. ತಂದೆಯ ಮೇಕಪ್' ಚಿತ್ರಕ್ಕೆ ರೈಟಪ್ ಬರೆದುಕೊಟ್ಟು ಸೈ ಎನಿಸಿಕೊಂಡಿದ್ದ ಗುರುರಾಜ್, ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ದಿ ಬೆಸ್ಟ್ ಸ್ಕ್ರಿಪ್ಟ್‌ ನೊಂದಿಗೆ ಡೈರೆಕ್ಟರ್ ಕ್ಯಾಪ್ ತೊಡಲಿಕ್ಕೆ ಸಿದ್ದವಾಗಿದ್ದಾರೆ. ಬಿಗ್‌ಸ್ಕ್ರಿನ್‌ನಲ್ಲಿ ತಂದೆಯನ್ನು ವಿಭಿನ್ನವಾಗಿ-ವಿಶಿಷ್ಟವಾಗಿ ತೋರಿಸುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ. ‌ಒಳ್ಳೆಯ ಕಥೆ-ಚಿತ್ರಕಥೆ-ಸಂಭಾಷಣೆಯ ಜೊತೆಗೆ ಬಾ೧೦೦’ ದಿನ ಕಾಲ್‌ಶೀಟ್ ಕೊಟ್ಟು ಕೆಲಸ ಮಾಡುವುದಾಗಿ ಹೇಳಿದ್ದಾರೆ. ಪುತ್ರನ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸೋಕೆ ಜಗ್ಗಣ್ಣ ಕೂಡ ಉತ್ಸುಕರಾಗಿದ್ದಾರೆ.

ಈ ಹಿಂದೆ ಪುತ್ರ ಗುರುರಾಜ್ ಅಭಿನಯದ ಗುರು' ಚಿತ್ರಕ್ಕೆ ಜಗ್ಗಣ್ಣ ಆಕ್ಷನ್ ಕಟ್ ಹೇಳಿದ್ದರು. ಈಗ ಮಗನ ಸರದಿ ತಂದೆಯ ಸಿನಿಮಾ ನಿರ್ದೇಶಿಸುವ ಸೌಭಾಗ್ಯ. ಅಂದ್ಹಾಗೇ, ತಂದೆ-ಮಗನ ಬಾಂದವ್ಯಕ್ಕೋಸ್ಕರ ಜಗ್ಗಣ್ಣ ಮಗನಿಗೆ ಕಾಲ್‌ಶೀಟ್ ಕೊಟ್ಟಿಲ್ಲ. ಬದಲಾಗಿ ಮಗ ಗುರು ಮಾಡಿಕೊಂಡಿರುವ ಕಥೆಯಲ್ಲಿ ಹೊಸ ಕಿಕ್ ಇದೆ ಅಟ್ ದಿ ಸೇಮ್ ಟೈಮ್ ಧಮ್ ಇದೆ. ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಇಲ್ಲಿವರೆಗೂ ಡೈರೆಕ್ಟರ್‌ಗಳು ಯಾರೂ ಕೂಡ ಯೋಚನೆ ಮಾಡದ ರೀತಿಯಲ್ಲಿ ಥಿಂಕ್ ಮಾಡಿ ಸ್ಕ್ರಿಫ್ಟ್‌ ಮಾಡಿಕೊಂಡಿದ್ದಾರೆ ಅಂದ್ರೆ ನೀವೇ ಲೆಕ್ಕಹಾಕಿಗುರು’ ಹೊಸೆದಿರುವ ಕಥೆಯಲ್ಲಿ ಅದೆಂತಾ ಟ್ವಿಸ್ಟ್ ಅಂಡ್ ಟರ್ನ್ಸ್ ಇರಬಹುದು ಎಂದು. ಸದ್ಯಕ್ಕೆ, ಎಲ್ಲವೂ ಕೂತೂಹಲ ಮತ್ತು ಕೌತುಕ ಅಷ್ಟೇ. ಅಂದ್ಹಾಗೇ, ಭಗವಂತ ಎಲ್ಲರಿಗೂ ಒಂದೇ ರೀತಿ ಯೋಚನೆ ಮಾಡುವ ಮೆದುಳು ಕೊಟ್ಟಿರುವುದಿಲ್ಲ. ಎಲ್ಲರಿಗಿಂತ ಡಿಫೆರೆಂಟ್ ಥಿಂಕ್ ಮಾಡುವ ಶಕ್ತಿಯಿದೆ ಅಂದ್ರೆ ಅದಕ್ಕೆ ಕಾರಣ ಮತ್ತದೇ ಭಗವಂತನ ಕೃಪೆ ಮತ್ತು ಅನುಗ್ರಹ. ರಾಯರ ಅನುಗ್ರಹದಿಂದ ಗುರುರಾಜ್'ಗೆ ವಿಶಿಷ್ಟ ಯೋಚನಾಲಹರಿ ಒಲಿದಿರಬಹುದು. ಆ ಲಹರಿ ಹೇಗಿರಲಿದೆ ಎನ್ನುವುದಕ್ಕೆ2020 ಮಾರ್ಚ್‌ 17 ವರೆಗೂ ಕಾಯಬೇಕು.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಬಂಜಾರ ಭಾಷೆಯಲ್ಲೂ ಬರುತ್ತಿದೆ ಯತಿರಾಜ್ ಅವರ ‘ಆರಾಧ್ಯ’ !

ಪತ್ರಕರ್ತ ಹಾಗೂ ನಟ ಯತಿರಾಜ್ ನಿರ್ದೇಶನದ ‘ಆರಾಧ್ಯ ‘ಕಿರುಚಿತ್ರ’ ಈಗ ಕನ್ನಡದಿಂದ ಬಂಜಾರ ಭಾಷೆಗೆ ತರ್ಜುಮೆಗೊಂಡು, ರಿಲೀಸ್ ಆಗುತ್ತಿದೆ. ನಾಳೆ ಅಧಿಕೃತವಾಗಿ ಕಲಾವಿದ ಯುಟ್ಯೂಬ್ ಚಾನೆಲ್ ಮೂಲಕ ಆರಾಧ್ಯ ಕಿರುಚಿತ್ರದ ಬಂಜಾರ ಭಾಷೆಯ ಅವತರಣಿಕೆಯನ್ನು ರಿಲೀಸ್ ಮಾಡಲು ಚಿತ್ರ ತಂಡ ಸಿದ್ದತೆ ನಡೆಸಿದೆ. ಲಾಕ್ ಡೌನ್ ಸಮಯದಲ್ಲಿ ನಟ ಯತಿರಾಜ್ ನಿರ್ದೇಶಿಸಿ, ನಟಿಸಿ ಹೊರ ತಂದ 18 ಕ್ಕೂ ಹೆಚ್ಚು ಕಿರುಚಿತ್ರಗಳ ಪೈಕಿ ಬಂಜಾರ ಭಾಷೆಯಲ್ಲಿ ಬರುತ್ತಿರುವ ಏಕೈಕ ಕಿರುಚಿತ್ರ ‘ಆರಾಧ್ಯ’. ಚಿತ್ರ ತಂಡ ಅಂದುಕೊಂಡಂತೆ ಈಗಾಗಲೇ ಅದರ ಡಬ್ಬಿಂಗ್ ಕೆಲಸಗಳು ಕೂಡ ಮುಗಿದು ಹೋಗಿವೆ. ರಿಲೀಸ್ ಮಾತ್ರ ಬಾಕಿಯಿದೆ.

ನಿರ್ದೇಶಕ ಯತಿರಾಜ್ ಅವರೇ ಈ ಕಿರುಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಅವರೇ ಈಗ ಬಂಜಾರ ಭಾಷೆಗೆ ವಾಯ್ಸ್ ಡಬ್ ಮಾಡಿದ್ದಾರೆ. ಹಾಗೆಯೇ ಚಿತ್ರದಲ್ಲಿನ ಟೀಚರ್ ಪಾತ್ರಧಾರಿ ಅಂಜಲಿ ಅವರಿಗೆ ಕಂಠದಾನ ಕಲಾವಿದೆ ರಾಜುವೇಣಿ ಧ್ವನಿ ನೀಡಿದ್ದಾರೆ. ಇನ್ನು ಚಿತ್ರದ ಪ್ರಮುಖ ಪಾತ್ರಧಾರಿ ಆರಾಧ್ಯ ಪಾತ್ರದ ಸಂಭಾಷಣೆಗೆ ಪುಟಾಣಿ ಅವಿಕಾ ರಾಥೋಡ್ ಧ್ವನಿ ನೀಡಿದ್ದಾರೆ. ಕುಮಾರ್ ರಾಥೋಡ್ ಅವರು ಸಂಭಾಷಣೆಯನ್ನು ಕನ್ನಡದಿಂದ ಬಜಾರ ಭಾಷೆಗೆ ತರ್ಜುಮೆ ಮಾಡಿದ್ದು, ಅವರಿಗೆ ಕನಕಪುರದ ಶಿವು ನಾಯ್ಕ ಸಾಥ್ ನೀಡಿದ್ದಾರೆ. ಕನ್ನಡದಲ್ಲಿ ಹಾಡಿದ್ದ ಶಿವಾನಂದ್ ಸಾಲಿಮಠ್ ಅವರೇ ಬಂಜಾರ ಭಾಷೆಯಲ್ಲಿ ಹಾಡಿರುವುದು ಈ ಕಿರುಚಿತ್ರದ ಇನ್ನೊಂದು ವಿಶೇಷ.ಈಗಾಗಲೇ ಕನ್ನಡದಲ್ಲಿ ರಿಲೀಸ್ ಆಗಿ ಸಾಕಷ್ಟು ಮೆಚ್ಚುಗೆ ಪಡೆದಿದ್ದ ‘ಆರಾಧ್ಯ’ ಕಿರುಚಿತ್ರವು ಈಗ ಬಂಜಾರ ಭಾಷೆಯಲ್ಲಿ ಬರುತ್ತಿರುವುದು ವಿಶೇಷ. ಈ ಪ್ರಯತ್ನವನ್ನು ಕಲಾವಿದ, ಪತ್ರಕರ್ತ ಯತಿರಾಜ್ ಅವರೇ ಖುದ್ದು ಆಸಕ್ತಿ ತೆಗೆದುಕೊಂಡು ಮಾಡಿದ್ದಾರೆ. ಹಾಗಾದರೆ ಯಾಕೆ?

‘ ಕನ್ನಡದ ಜತೆಗೆ ಇದನ್ನು ತೆಲುಗು, ತಮಿಳು ಭಾಷೆಯಲ್ಲಿ ತರಬೇಕೆನ್ನುವ ಉದ್ದೇಶ ಇತ್ತು. ಆದರೆ ತೆಲುಗು ಹಾಗೂ ತಮಿಳು ತರ್ಜುಮೆಯ ಪ್ರಕ್ರಿಯೆಗಳು ಸಕಾಲಿಕವಾಗಿ ಆಗಲಿಲ್ಲ. ಆಗ ಗೆಳೆಯರು ಬಂಜಾರ ಭಾಷೆಗೆ ಯಾಕೆ ತರಬಾರದು ಅಂತ ಸಲಹೆ ಕೊಟ್ಟರು. ಅದು ಸರಿಯೂ ಎನಿಸಿತು. ಯಾಕಂದ್ರೆ ಬಂಜಾರ ಭಾಷೆಯೂ ನನ್ನ ಮನೆ ಭಾಷೆ. ಅಲ್ಲಿಗೆ ನನ್ನ ಕೊಡುಗೆ ಏನಾದರೂ ಇರಲಿ ಅಂತೆನಿಸಿತು. ತಕ್ಷಣವೇ ಕೆಲಸಗಳು ಶುರುವಾದವು. ಒಂದೇ ದಿನದಲ್ಲಿ ಡಬ್ಬಿಂಗ್ ಕೆಲಸಗಳು ಮುಗಿದು ಹೋದವು. ಈಗ ಕಿರುಚಿತ್ರ ರಿಲೀಸ್ ಗೆ ರೆಡಿ ಇದೆ ಎನ್ನುತ್ತಾರೆ ನಿರ್ದೇಶಕ, ನಟ ಯತಿರಾಜ್. ಅದೆಲ್ಲಕ್ಕಿಂತ ಮುಖ್ಯವಾಗಿ ಇನ್ನೊಂದು ಕಾರಣ ಇದೆ ಯತಿರಾಜ್, ‘ ಬಂಜಾರ ಸಮಾಜದಲ್ಲಿ ಕುಡಿತ ಸಹಜ ಎನ್ನುವಷ್ಟಿದೆ. ನಾನು ನಿರ್ದೇಶಿಸಿದ ಈ ಕಿರುಚಿತ್ರದಲ್ಲಿ ಬರುವ ಕುಡುಕ ತಂದೆ, ಅದರಿಂದ ನೊಂದುಕೊಳ್ಳುವ ಅಮಾಯಕ ಮಗಳು ಅದೆಷ್ಟು ಜನರಿದ್ದಾರೋ ಗೊತ್ತಿಲ್ಲ. ಅಲ್ಲಿ ಒಂದಷ್ಟು ಜಾಗೃತಿ ತರುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯೋಗ ಅಂತಂದುಕೊಂಡು ಇದನ್ನು ಕನ್ನಡದಿಂದ ಬಂಜಾರ ಭಾಷೆಗೂ ತಂದಿದ್ದೇನೆ ಎನ್ನುತ್ತಾರೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ
Categories
ಸಿನಿ ಸುದ್ದಿ

ಶತಮಾನದ ಮಾದರಿ ಹೆಣ್ಣಿಗಾಗಿ ಹುಡುಕಾಡ್ಬೇಡಿ !? ಆರತಿ ಹೋಲುವ ನಟಿ ಇಲ್ಲೇ ಇದ್ದಾರೆ ನೋಡಿ ! ಮಾಡ್ರನ್ ಆರತಿ ಮಾತು

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ ಆರತಿ ಗಂಧದಗುಡಿಯಿಂದ ಅಂತರಕಾಯ್ದುಕೊಂಡು ದಶಕಗಳೇ ಉರುಳಿವೆ. ಆದರೆ, ರಂಗನಾಯಕಿಯನ್ನು ಮಾತ್ರ ಯಾರೂ ಮರೆತಿಲ್ಲ, ಮುಂದೆ ಮರೆಯೋದು ಇಲ್ಲ. ‘ಗೆಜ್ಜೆಪೂಜೆ’ ಮೂಲಕ ಚಂದನವಕ್ಕೆ ಬಲಗಾಲಿಟ್ಟು ಬಂದ ‘ಶುಭಮಂಗಳ’ದ ಚೆಲುವೆ ದಶಕಗಳ ಕಾಲ ಬೆಳ್ಳಿತೆರೆಯನ್ನಾಳಿದರು. ಸೂಪರ್‌ಸ್ಟಾರ್‌ಗಳೊಟ್ಟಿಗೆ ಸ್ಕ್ರೀನ್ ಶೇರ್ ಮಾಡಿದರು. ಸ್ಟಾರ್‌ನಟಿಯರಿಗೆ ಭರ್ಜರಿ ಪೈಪೋಟಿ ನೀಡಿದರು. ಅತೀ ಕಡಿಮೆ ಅವಧಿಯಲ್ಲಿ ನೇಮು-ಫೇಮಿನ ಕಿರೀಟ ಮುಡಿಗೇರಿಸಿಕೊಂಡರು. ಬಹುಬೇಡಿಕೆ ನಟಿಯಾಗಿ ಮಿಂಚುತ್ತಾ, ಶತಮಾನದ ಮಾಧರಿ ಹೆಣ್ಣಾಗಿ ಬೆಳೆದುನಿಂತರು. ರತ್ನಖಚಿತ ರಂಗನಾಯಕಿ ಪಟ್ಟಕ್ಕೇರಿ ಮುತ್ತಿನಂತೆ ಹೊಳೆದರು ಈಗಲೂ ಹೊಳೆಯುತ್ತಿದ್ದಾರೆ. ಚಿತ್ರರಂಗದಿಂದ ದೂರ ಉಳಿದ ಕಾಲದಲ್ಲೂ ಕನ್ನಡ ನಾಡಿನ ಸಿನಿಮಾ ರಸಿಕರು ರಂಗನಾಯಕಿಗಾಗಿ ಕನವರಿಸುತ್ತಿದ್ದಾರೆ. ಮನಸ್ಸು ಬದಲಾಯಿಸಿಕೊಂಡು ಮುಖಕ್ಕೆ ಬಣ್ಣ ಹಚ್ಚಿಕೊಂಡು ಮತ್ತೆ ಕ್ಯಾಮೆರಾ ಮುಂದೆ ಬಂದು ನಿಲ್ಲುವ ಕ್ಷಣಕ್ಕಾಗಿ ಹಾತೊರೆಯುತ್ತಿದ್ದಾರೆ.

ರಂಗನಾಯಕಿ ಎಲ್ಲಿದ್ದಾರೆ? ಹೇಗಿದ್ದಾರೆ? ಈ ಎರಡು ಪ್ರಶ್ನೆ ಎದ್ದಾಗಲೆಲ್ಲಾ ಬರುವುದು ಒಂದೇ ಉತ್ತರ ಅಮೇರಿಕಾದಲ್ಲಿದ್ದಾರೆನ್ನುವುದು. ಯಸ್, ರಂಗನಾಯಕಿ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡ ಮೇಲೆ ಅಮೇರಿಕಾಗೆ ಹೋಗಿ ಸೆಟಲ್ ಆಗಿದ್ದಾರಂತೆ. ಆಗಾಗ ಬೆಂಗಳೂರಿಗೆ ಬರುತ್ತಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಅವ್ರಂತೆ ವೇಷ ಮರೆಸಿಕೊಂಡು, ಯಾರಿಗೂ ಗುರುತು ಸಿಗದ ರೀತಿ ಓಡಾಡುತ್ತಾರೆ ಎನ್ನುವ ಮಾತಿದೆ. ಈ ಮಾತು ಎಷ್ಟು ಸತ್ಯವೋ ಗೊತ್ತಿಲ್ಲ. ಹೋದಲ್ಲಿ-ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುವುದರಿಂದ ಪ್ರೈವೆಸಿಗಾಗಿ ಸ್ಟಾರ್‌ನಟ-ನಟಿಯರು ಈ ರೀತಿ ಮಾಡೋದು ಕಾಮನ್ ಬಿಡಿ. ಇದೀಗ, ರಂಗನಾಯಕಿಯ ಲೈಫ್‌ಸ್ಟೋರಿಗೆ ಆಕ್ಷನ್ ಕಟ್ ಹೇಳುವ ಕನಸೊತ್ತು, ಆರತಿಯನ್ನು ಹೋಲುವ ನಟಿಗಾಗಿ ಸರ್ಚಿಂಗ್‌ನಲ್ಲಿದ್ದಂತವರಿಗೆ ಸೂಪರ್ ಸಪ್ರೈಸ್ ಕೊಡುವುದಕ್ಕಾಗಿ ಈ ಸುದ್ದಿಯನ್ನು ಹೊತ್ತು ತಂದಿದ್ದೇವೆ.

‘ಶುಭಮಂಗಳ’ದ ಚೆಲುವೆ ಚಿತ್ರರಂಗದಿಂದ ದೂರ ಉಳಿದಿದ್ದೇಕೆ? ನಟನೆಗೆ ಗುಡ್‌ಬೈ ಹೇಳಿದ್ದೇಕೆ? ಈ ಕೂತೂಹಲಕಾರಿ ಕೊಶ್ಚನ್‌ಗೆ ಒಂದೇ ಸಾಲಿನ ಅಂತಿಮ ಉತ್ತರವಿಲ್ಲ. ವೈಯಕ್ತಿಕ ಬದುಕಿನಲ್ಲಾದ ಕಾರಣಕ್ಕೆ ಮಾಯಲೋಕ ತೊರೆದರು ಎನ್ನುವ ಮಾತಿದೆ. ಅದೇನೇ ಇರಲಿ, ಬೆಳ್ಳಿತೆರೆಯಿಂದ ದೂರ ಉಳಿದ್ಮೇಲೂ, ಯಾರ ಕಣ್ಣಿಗೂ ಬೀಳದಂತೆ ದೂರದ ಪ್ರದೇಶಕ್ಕೆ ಹಾರಿಹೋದ್ಮೇಲೂ ಕೂಡ ನಟಿ ಆರತಿಯವರ ಬಗ್ಗೆ ತಿಳಿದುಕೊಳ್ಳುವ ಕೂತೂಹಲ, ಅಲುಮೇಲುನಾ ಮತ್ತೆ ಬಿಗ್‌ಸ್ಕ್ರೀನ್ ಮೇಲೆ ನೋಡುವ ಕಾತುರ ಇನ್ನೂ ಕೂಡ ಕಡಿಮೆಯಾಗಿಲ್ಲ. ಕಲಾರಸಿಕರಿಗೆ ಇಷ್ಟೊಂದು ಕೌತುಕ ಇರುವಾಗ ರಂಗನಾಯಕಿಯ ರಂಗುರಂಗಾದ ಬದುಕನ್ನ ಬೆಳ್ಳಿತೆರೆಮೇಲೆ ಕಟ್ಟಿಕೊಡುವ ಕನಸು ಚಿತ್ರಬ್ರಹ್ಮ ಎಂದೆನಿಸಿಕೊಳ್ಳುವ ಸಾರಥಿಗಳಿಗಿರುವುದಿಲ್ಲವೇ? ಇಲ್ಲ ಎನ್ನುವುದಕ್ಕೆ ಸಾಧ್ಯವೇ ಇಲ್ಲ ಬಿಡಿ. ಅನ್ನದಾತ ಮಹಾಶಯ ರೆಡಿ ಅಂದರೇ ಮುಗೀತು ನೂರು ಮಂದಿ ನಿರ್ದೇಶಕರು ಒಂಟಿಕಾಲಿನಲ್ಲಿ ನಿಂತುಬಿಡ್ತಾರೆ. ಯಾಕಂದ್ರೆ, ಹಂಗೈತಿ `ನಾಗರಹಾವು’ ಚಿತ್ರದ ಅಲುಮೇಲು ಹಂಗಾಮ ಮತ್ತು ಕಥಾಸಂಗಮ.

ಸದ್ಯಕ್ಕೆ, ಯಾವ ಯಾವ ನಿರ್ದೇಶಕರ ಕಲ್ಪನೆಯಲ್ಲಿ, ಯಾವ್ ಯಾವ್ ರೀತಿ ರಂಗನಾಯಕಿ ಮೂಡುತ್ತಿದ್ದಾರೋ ಗೊತ್ತಿಲ್ಲ? ಯಾರ್ ಯಾರ್ ಕಸ್ತೂರಿ ನಿವಾಸದ ಕೆಂಡಸಂಪಿಗೆಯ ಮೇಲೆ ಕಥೆ ಹೊಸೆಯುತ್ತಿದ್ದಾರೋ ಅದೂ ತಿಳಿದಿಲ್ಲ. ಅಲುಮೇಲು ಮೇಲೆ ಕಥೆ ಬರೆದು ಯಾರು ಯಾರು ನಿರ್ಮಾಪಕರಿಗಾಗಿ ಹುಡುಕಾಟ ನಡೆಸಿದ್ದಾರೋ ಅದು ಕೂಡ ಇನ್ನೂ ಮುನ್ನಲೆಗೆ ಬಂದಿಲ್ಲ? ಶುಭಮಂಗಳದ ಚೆಲುವೆಯ ಮೇಲೆ ಸಿನಿಮಾ ಮಾಡ್ಬೇಕು ಎನ್ನುವ ಕನಸು ಅದ್ಯಾವ್ಯಾವ ನಿರ್ಮಾಪಕರಿಗೆ ಇದೆಯೋ ಅದು ಕೂಡ ಬೆಳಕಿಗೆ ಬಂದಿಲ್ಲ? ಆದರೆ, ನಟಿಮಣಿಯರು ಮಾತ್ರ ಎವರ್‌ಗ್ರೀನ್ ಹೀರೋಯಿನ್‌ಗಳ ಜೀವನಗಾಥೆಗೆ ಬಣ್ಣ ಹಚ್ಚಬೇಕು ಎನ್ನುವ ಕನಸನ್ನು ಮಾತ್ರ ಇಟ್ಟುಕೊಂಡಿರ‍್ತಾರೆ. ಕೆಲವು ನಟಿಮಣಿಯರು ಮುಕ್ತವಾಗಿ ಮಾಧ್ಯಮದ ಮುಂದೆ ಹೇಳಿಕೊಳ್ತಾರೆ. ಹೀಗೆ, ಮೀಡಿಯಾ ಮುಂದೆ ಹೇಳಿಕೊಳ್ಳುವ ಮೊದಲೇ ನಟಿ ಅನುಪಮಾಗೌಡ ಸುದ್ದಿಯಾಗಿದ್ದಾರೆ. ಥೇಟ್ ರಂಗನಾಯಕಿಯಂತೆ ಕಂಗೊಳಿಸಿದ್ದಾರೆ, ಶುಭಮಂಗಳ ಚೆಲುವೆಯನ್ನ ಕಣ್ಮುಂದೆ ತಂದು ನಿಲ್ಲಿಸಿದ್ದಾರೆ.

ಅನುಪಮಗೌಡ ‘ಅಕ್ಕ’ ಸೀರಿಯಲ್‌ನಲ್ಲಿ ದ್ವಿಪಾತ್ರ ನಿರ್ವಹಿಸಿ ಕರುನಾಡ ಮಂದಿಯಿಂದ ಸೈ ಎನಿಸಿಕೊಂಡವರು. ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟು ಎಲ್ಲರಿಗೂ ಚಿರಪರಿಚಿತಗೊಂಡ ಅನುಪಮಗೌಡ, ‘ಆ ಕರಾಳ ರಾತ್ರಿ’ ಸಿನಿಮಾಗೆ ಬಣ್ಣ ಹಚ್ಚಿ ಬೆಳ್ಳಿತೆರೆಯಿಂದ ಮೆಚ್ಚುಗೆ ಗಿಟ್ಟಿಸಿಕೊಂಡರು. ಸೈಮಾ ಅಂಗಳದಲ್ಲಿ ಅತ್ಯುತ್ತಮ ಯುವನಟಿ ಪ್ರಶಸ್ತಿ ಗೆದ್ದರು. ಕನ್ನಡ ಕೋಗಿಲೆ, ಮಜಾಭಾರತ ರಿಯಾಲಿಟಿ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಕಂಗೊಳಿಸಿದರು. ಈಗ ರಾಜರಾಣಿ ಕಾರ್ಯಕ್ರಮದಲ್ಲಿ ಹೊಳೆಯುತ್ತಿದ್ದಾರೆ. ಈ ನಡುವೆಯೇ ಬ್ಲಾಕ್ ಕಲರ್ ವಿತ್ ಗೋಲ್ಡನ್ ಕಲರ್ ಬಾರ್ಡರ್ ಸೀರೆಯುಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅದರಲ್ಲಿ ಚಷ್ಮಾ ತೊಟ್ಟು ಕೊಟ್ಟಿರುವ ಪೋಸ್ ಇದೆಯಲ್ಲ ಅದು ರಂಗನಾಯಕಿಯ ಲುಕ್ಕನೇ ಹೋಲುತ್ತಿದೆ. ನಟಿ ಆರತಿಯವರನ್ನು ನೆನಪು ಮಾಡಿ ಕಾಡುತ್ತದೆ. ಅನುಪಮಗೌಡ ಅವರು ಆರತಿಯವರನ್ನು ಹೋಲುವ ಪೋಟೋಗಳು ಇಲ್ಲೇ ಇವೆ ನೀವು ಒಮ್ಮೆ ನೋಡಿ.

ಈ ಫೋಟೋಗಳನ್ನು ನೋಡಿದಾಗ ತೆರೆಮರೆಯಲ್ಲಿ ಆರತಿಯವರ ಬಯೋಪಿಕ್ ಕಸರತ್ತು ನಡೆಯುತ್ತಿದೆಯಾ? ರಂಗನಾಯಕಿಯ ಬದುಕು ಬೆಳ್ಳಿತೆರೆಮೇಲೆ ಅರಳಲಿದೆಯಾ ? ಅಲುಮೇಲು ಜೀವನಗಾಥೆಗೆ ಅನುಪಮಗೌಡ ಜೀವತುಂಬುತ್ತಿದ್ದಾರಾ? ನಿರ್ದೇಶಕರು ಯಾರು? ನಿರ್ಮಾಪಕರು ಯಾರು? ಹೀಗೆ ಒಂದಿಷ್ಟು ಕೂತೂಹಲ ಮೂಡುತ್ತಾ ಹೋಗುತ್ತೆ? ಇದೇ ಕೌತುಕದಿಂದ ನಾವು ನಟಿ ಕಮ್ ನಿರೂಪಕಿ ಅನುಪಮಗೌಡ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು.’ ಆರತಿಯವರನ್ನೇ ಹೋಲುತ್ತೀರಾ ಅಂತ ನೀವು ಹೇಳ್ತಿದ್ದೀರಾ? ಹಾಗೆಯೇ ಮೊದಲಿನಿಂದಲೂ ನನಗೆ ತುಂಬಾ ಜನ ಹೇಳಿದ್ದಾರೆ ಕೂಡ. ಅಂದ್ಹಾಗೇ, ಆರತಿಯವರ ಬಯೋಪಿಕ್ ಬಗ್ಗೆ ನಂಗೇನು ಗೊತ್ತಿಲ್ಲ? ರಾಜರಾಣಿ ಕಾರ್ಯಕ್ರಮಕ್ಕೋಸ್ಕರ ಆ ರೀತಿ ರೆಡಿಯಾಗಿದ್ದೇ. ಹಾಗೆಯೇ ಕ್ಯಾಮೆರಾ ಮುಂದೆ ಒಂದಿಷ್ಟು ಫೋಸ್‌ಗಳನ್ನು ಕೊಟ್ಟಿದ್ದೇನೆ, ಅದನ್ನು ನೋಡಿ ಎಲ್ಲರೂ ಹೇಳ್ತಿದ್ದಾರೆ ಥೇಟ್ ರಂಗನಾಯಕಿ ಥರ ಕಾಣ್ತೀರಾ ಅಂತ. ನಿಜಕ್ಕೂ ನನಗೆ ಖೂಷಿಯಾಗುತ್ತೆ ಹೆಮ್ಮೆ ಎನಿಸುತ್ತೆ. ಯಾರಾದರೂ ನಿರ್ದೇಶಕರು ಆರತಿಯವರ ಜೀವನಗಾಥೆಯನ್ನ ತೆರೆಮೇಲೆ ತರೋದಕ್ಕೆ ರೆಡಿಯಾಗಿ, ನನ್ನನ್ನು ಸಂಪರ್ಕ ಮಾಡಿದರೆ ನಾನು ಅಲುಮೇಲು ಪಾತ್ರಕ್ಕೆ ಜೀವತುಂಬುತ್ತೇನೆ.

ಇದು ನಟಿ ಅನುಪಮಗೌಡ ಅವರ ಮಾತು. ಅವರಿಗೆ ಅಭಿನೇತ್ರಿ ಕಲ್ಪನ ಅವರ ಬಯೋಪಿಕ್‌ನಲ್ಲಿ ಮಿಂಚುವ ಆಸೆಯಿದೆ. ಅಟ್ ದಿ ಸೇಮ್ ಟೈಮ್ ಆರತಿಯವರ ಲೈಫ್‌ಸ್ಟೋರಿಯಿಂದ ಆಫರ್ ಬಂದರೆ ಅದಕ್ಕೂ ನ್ಯಾಯ ಒದಗಿಸುವ ಅಭಿಲಾಷೆಯಿದೆ. ಮಹಾನಟಿಯರ ಜೀವನಕಥೆನಾ ತೆರೆಮೇಲೆ ತರುವುದು ಎಷ್ಟು ಸಾಹಸವೋ ಅಷ್ಟೇ ಸಾಹಸ ಮತ್ತು ಚಾಲೆಂಜಿಂಗ್ ಆ ಮಹಾನಟಿಯರ ಪಾತ್ರಕ್ಕೆ ಜೀವತುಂಬಿ ಅಭಿನಯಿಸುವುದು. ಅಂತಹ ಪ್ರಯತ್ನಕ್ಕೆ ನಾನು ರೆಡಿಯಿದ್ದೇನೆ ಅವಕಾಶ ಸಿಗ್ಬೇಕು ಅಷ್ಟೇ ಅಂತಾರೇ ನಟಿ ಕಮ್ ನಿರೂಪಕಿ ಅನುಪಮಗೌಡ ಅವರು. ಹೀಗಾಗಿ, ಅವರ ಆಸೆ-ಕನಸಿನಂತೆ ಅವಕಾಶಗಳು ಸಿಗಲಿ. ರಂಗನಾಯಕಿಯ ಬದುಕನ್ನು ಸಿನಿಮಾವಾಗಿಸುವ ಕನಸು ಯಾರಿಗಾದರೂ ಇದ್ದಲ್ಲಿ ಅವರುಗಳು ಅನುಪಮಗೌಡ ಅವರನ್ನು ಕಣ್ಮುಂಚಿಕೊಂಡು ಸೆಲೆಕ್ಟ್ ಮಾಡಲಿ ಎನ್ನುವುದೇ ಅವರ ಅಭಿಮಾನಿಗಳ ಆಸೆ ಮತ್ತು ನಿರೀಕ್ಷೆ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಶೂಟಿಂಗ್ ನಿರ್ಬಂಧ ತೆರವಿಗೆ ಸಿಂಗಲ್ ವಿಂಡೋ ವ್ಯವಸ್ಥೆ : ಪ್ರವಾಸೋಧ್ಯಮ ಸಚಿವ ಆನಂದ್ ಸಿಂಗ್ ಭರವಸೆ

ರಾಜ್ಯದ ಕೆಲವೆಡೆಗಳಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಇರುವ ನಿರ್ಬಂಧವನ್ನು ಬಗೆಹರಿವುದಾಗಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭರವಸೆ ನೀಡಿದ್ದಾರೆ. ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಹಿನ್ನೆಲೆಯಲ್ಲಿ ವಿಧಾನ ಸೌಧದ ಕಾನ್ಪರೆನ್ಸ್ ಹಾಲ್ ನಲ್ಲಿ ಸೋಮವಾರ ಪ್ರವಾಸೋಧ್ಯಮ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

‘ ಸಿನಿಮಾದವರಿಗೆ ಕೆಲವು ಕಡೆ ನಿರ್ಬಂಧವಿದೆ. ದೇವಾಲಯಗಳು ಸೇರಿದಂತೆ ಕೆಲವು ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಾಗಗಳಲ್ಲಿ ಶೂಟಿಂಗ್ ಗೆ ನಿರ್ಬಂಧವಿರುವುದು ನನ್ನ ಗಮನಕ್ಕೂ ಬಂದಿದೆ. ಪ್ರವಾಸೋದ್ಯಮದ ಅಭಿವೃದ್ದಿ ದೃಷ್ಟಿಯಿಂದ ಕೂಡಲೇ ಇಂತಹ ಸಮಸ್ಯೆಯನ್ನು ಆದಷ್ಟು ಬಗ್ಗೆ ಬಗೆಹರಿಸುತ್ತೇವೆ. ಸಿಂಗಲ್ ವಿಂಡೋ ಯೋಜನೆಯಡಿ ಅವಕಾಶ ನೀಡುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು. ಸಿಂಗಲ್ ವಿಂಡೋ ವ್ಯವಸ್ಥೆ ಮಾಡಿದರೆ ಪ್ರಾಚ್ಯವಸ್ತು, ಅರಣ್ಯ, ಪ್ರವಾಸೋಧ್ಯಮ ಇಲಾಖೆ ಹೀಗೆ ಮೂರು ಇಲಾಖೆಗಳ ಅನುಮತಿಯೂ ಸಿಗಲಿದೆ. ಏಕಗವಾಕ್ಷಿ ವ್ಯವಸ್ಥೆಯಡಿ ಇದನ್ನ ತರುತ್ತೇವೆ. ಇದರಿಂದ ಅವರಿಗೂ ಅನುಕೂಲವಾಗಲಿದೆ. ನಮಗೂ ಉದ್ಯಮ ಬೆಳೆಯಲು ಅವಕಾಶವಾಗಲಿದೆ ಎಂದು ಹೇಳಿದರು.

Categories
ಸಿನಿ ಸುದ್ದಿ

ಬೆಳ್ಳಿತೆರೆ ಮೇಲೆ ಮಹಾತ್ಮ ಗಾಂಧಿಯ ಬಾಲ್ಯದ ಕಥನ !

ಸರ್ಕಾರ 100 ಪರ್ಸೆಂಟ್ ಅಕ್ಯೂಪೆನ್ಸಿ ನೀಡಿದ ಬೆನ್ನಲ್ಲೇ ಸ್ಟಾರ್ ವಾರ್ ಶುರುವಾಗಿದೆ. ನಾ ಮುಂದು ತಾ ಮುಂದು ಎನ್ನುತ್ತಲೇ ನಿರ್ಮಾಪಕರು ಸಿನಿಮಾ ಬಿಡುಗಡೆ ಸಜ್ಜಾಗ್ತಿದ್ದಾರೆ. ಸ್ಟಾರ್ ನಟರುಗಳ ಸಿನಿಮಾಗಳು ಏಕಕಾಲಕ್ಕೆ ತೆರೆಗೆ ಅಪ್ಪಳಿಸುತ್ತಿರುವುದರಿಂದ ಪೈಪೋಟಿ ಜೋರಾಗಿದೆ. ಈ ಮಧ್ಯೆ ಮಹಾತ್ಮ ಗಾಂಧೀಜಿಯವರ ಲೈಫ್ ಸ್ಟೋರಿ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡ್ತಿದೆ.

ಅಕ್ಟೋಬರ್ 1 ರಿಂದ ಸರ್ಕಾರ ‌100 ಪರ್ಸೆಂಟ್ ಆಸನ ಭರ್ತಿಗೆ ಅವಕಾಶ ನೀಡಿದೆ. ಹೀಗಾಗಿ, ಕಳೆದ ಒಂದೂವರೆ ವರ್ಷದಿಂದ ಡಬ್ಬದಲ್ಲೇ ಕುಳಿತಿದ್ದ ಸಿನಿಮಾಗಳು ಬಿಡುಗಡೆಗೆ ತುದಿಗಾಲಿನಲ್ಲಿ‌ ನಿಂತಿವೆ. ಆ ಪೈಕಿ ಪಿ.‌ ಶೇಷಾದ್ರಿ ನಿರ್ದೇಶನದ ‘ಮೋಹನದಾಸ’ ಸಿನಿಮಾ ಕೂಡ ಒಂದು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬಾಲ್ಯವನ್ನು ಬೆಳ್ಳಿತೆರೆ ಮೇಲೆ ತೋರಿಸಿದ್ದಾರೆ.ಮೋಹನದಾಸ ಹೆಸರಲ್ಲಿ ಸಿನಿಮಾ ಮಾಡಿ ಮುಗಿಸಿದ್ದು, ಗಾಂಧಿಜಯಂತಿ ಪ್ರಯುಕ್ತ ರಾಜ್ಯಾದ್ಯಂತ ತೆರೆಗೆ ತರಲಾಗುತ್ತಿದೆ.

‘ಮೋಹನದಾಸ’ ಕರಮಚಂದ್ರ ಗಾಂಧೀಜೀಯವರು ಮಹಾತ್ಮರಾದ ಕಥೆಯನ್ನು ಕೆಲವರು ಹಲವು‌ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಆದರೆ, ಮಹಾತ್ಮರೆನಿಸಿಕೊಳ್ಳುವುದಕ್ಕೂ ಮೊದಲಿನ ಕಥೆ ಅಂದರೆ ಬಾಲ್ಯದ ಕಥೆಯನ್ನು ಪುಸ್ತಕಗಳಲ್ಲಿ ದಾಖಲಿಸಿದ್ದಾರೆ ಹೊರೆತು ಬಿಗ್ ಸ್ಕ್ರೀನ್ ನಲ್ಲಿ ತೆರೆಗೆ ತಂದಿಲ್ಲ. ಇದೇ, ಮೊದಲ ಬಾರಿಗೆ ಕನ್ನಡ- ಇಂಗ್ಲೀಷ್- ಹಿಂದಿ ಮೂರು ಭಾಷೆಯಲ್ಲಿ ಒಂಭತ್ತು ಭಾರಿ ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡಿರುವ ನಿರ್ದೇಶಕ ಪಿ. ಶೇಷಾದ್ರಿಯವರು ಸಿನೆಮಾ ಮಾಡಿದ್ದಾರೆ. ಏಳು ವರ್ಷದಿಂದ ಹದಿನಾಲ್ಕು ವರ್ಷದ ಗಾಂಧೀಜೀಯವರ ಬಾಲ್ಯದ ಕಥೆಯನ್ನು ಒಂದು ಗಂಟೆ ಅವಧಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಸಂಚಾರಿ ಥಿಯೇಟರ್ ನಲ್ಲಿ ಪಳಗುತ್ತಿರುವ ಸಮರ್ಥ್ 14 ವರ್ಷದ ಮೋಹನದಾಸ್ ಪಾತ್ರಕ್ಕೆ ಬಣ್ಣ ಹಚ್ಚಿದರೆ, 7 ವರ್ಷದ ಮೋಹನ್ ದಾಸ್ ಪಾತ್ರದಲ್ಲಿ ಪರಮ್ ಸ್ವಾಮಿ ಮಿಂಚಿದ್ದಾರೆ. ಮೋಹನ್ ದಾಸ್ ತಾಯಿ ಪುತಲಿಬಾಯಿಯಾಗಿ ಹಿರಿಯ ನಟಿ ಶ್ರುತಿ, ತಂದೆ ಕರಮ್ ಚಂದ್ರ ಗಾಂಧಿಯಾಗಿ ಅನಂತ್ ಮಹಾದೇವನ್ ಅಭಿನಯಿಸಿದ್ದಾರೆ. ದತ್ತಣ್ಣ ಬಯೋಸ್ಕೋಪ್ ವಾಲಾ ಆಗಿ ನಟಿಸಿದ್ದಾರೆ.

ಗಾಂಧೀಜಿ ಹುಟ್ಟಿಬೆಳೆದ ಗುಜರಾತ್ ನ ಪೋರಬಂದರಿನ ಮನೆ ಹಾಗೂ ರಾಜ್ ಕೋಟ್ ನ ಮನೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಜೊತೆಗೆ ಅವರು ಶಿಕ್ಷಣ ಕಲಿತ ಆಲ್ ಫ್ರೆಡ್ ಹೈಸ್ಕೂಲ್ ನಲ್ಲೂ ಶೂಟಿಂಗ್ ಮಾಡಿದ್ದಾರೆ. ಬೆಂಗಳೂರಿನಲ್ಲೂ ಚಿತ್ರೀಕರಣ ನಡೆದಿದ್ದು, ಸ್ವಾತಂತ್ರ್ಯ ಪೂರ್ವದ ಚಿತ್ರಣ ಕಟ್ಟಿಕೊಡಲು ಗ್ರಾಫಿಕ್ಸ್ ಮೊರೆ ಹೋಗಿದ್ದಾರೆ. ಮಹಾತ್ಮ ಗಾಂಧೀಜಿಯವರ ಬಾಲ್ಯದ ಕಥೆಯನ್ನು ಬೆಳ್ಳಿತೆರೆ ಮೇಲೆ ಕಟ್ಟಿಕೊಡಬೇಕು ಎನ್ನುವುದು ನಿರ್ದೇಶಕ ಪಿ. ಶೇಷಾದ್ರಿಯವರ ಕನಸಾಗಿತ್ತು ಕೊನೆಗೂ ಈಡೇರಿದೆ. 100 ಚಿತ್ರಮಂದಿರಗಳಲ್ಲಿ ಮೋಹನದಾಸ ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವುದು ನಿರ್ದೇಶಕರ ಅಭಿಲಾಷೆ. ಅವರಂತೇ ಆಗಲಿದೆಯೋ, ಇಲ್ಲವೋ‌ ಗೊತ್ತಿಲ್ಲ. ಆದರೆ,ಮಾರ್ಕ್ಸ್ ಸುರೇಶ್ ಅವರು ರಾಜ್ಯದ್ಯಂತ ಸಿನಿಮಾ ವಿತರಣೆ ಮಾಡ್ತಿದ್ದಾರೆ.

ಮಿತ್ರ ಚಿತ್ರ ಲಾಂಛನದಡಿ ಮೋಹನದಾಸ ನಿರ್ಮಾಣವಾಗಿದೆ.12 ಮಂದಿ ನಿರ್ಮಾಪಕರು ಬಂಡವಾಳ ಹೂಡಿದ್ದಾರೆ. ಜಿ.ಎಸ್. ಭಾಸ್ಕರ್ ಛಾಯಾಗ್ರಹಣ, ಕೆಂಪರಾಜು ಅವರ ಸಂಕಲನ, ಪ್ರವೀಣ್ ಗೋಡ್ಕಿಂಡಿಯವರ ಸಂಗೀತ ಚಿತ್ರಕ್ಕಿದೆ. ಇದೇ ಅಕ್ಟೋಬರ್ ೨ರಂದು ಚಿತ್ರ ಬಿಡುಗಡೆಯಾಗ್ತಿದೆ. ಈ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ, ಬರೀ ಸ್ಟಾರ್ ಸಿನಿಮಾ ಪ್ರಮೋಟ್ ಮಾಡಬೇಡಿ, ನಮ್ಮ ಸಿನಿಮಾ ಕಡೆ ನೋಡಿ ಎಂದು ನಿರ್ದೇಶಕ ನಿರ್ದೇಶಕರು ಮನವಿ‌ ಮಾಡಿಕೊಂಡರು. ಈ ಮಧ್ಯೆ ಮಾತನಾಡಿದ ಹಿರಿಯ ನಟಿ ಶ್ರುತಿ ನಾಡಿನಾದ್ಯಂತ ಶಾಲಾ ಮಕ್ಕಳಿಗೆ ಸಿನಿಮಾ ತೋರಿಸುವ ನಿಮ್ಮ ಪ್ರಯತ್ನಕ್ಕೆ ಸರ್ಕಾರದ ಜೊತೆ ಮಾತನಾಡುವ ಭರವಸೆ ಕೊಟ್ಟರು. ಹಿರಿಯ ನಟ ದತ್ತಣ್ಣ ಸೇರಿದಂತೆ ಮೋಹನದಾಸ ಸಿನಿಮಾ ಟೀಂ ಹಾಜರಿತ್ತು.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ನಟಿ ಆರತಿ ಬಯೋಪಿಕ್ !? ವೈರಲ್ ಆದ ಆ ನಟಿಯ ಪೋಟೋ ಹಿಂದಿನ ಕತೆಯೇನು ?

ಕನ್ನಡದ ಹಿರಿಯ ನಟಿ‌ ‌ರಂಗ ನಾಯಕಿ ಖ್ಯಾತಿಯ ಆರತಿ ಈಗ ಎಲ್ಲಿದ್ದಾರೆ ? ಏನ್ ಮಾಡ್ತಿದ್ದಾರೆ ? ಚಿತ್ರರಂಗದಿಂದ ಅವರು ಅಷ್ಟು ದೂರ ಯಾಕೆ ಹೋದರು? ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರ ಇಲ್ಲ. ಯಾಕಂದ್ರೆ ಅವರು ನಟನೆಯಿಂದ ದೂರ ಉಳಿದು ಹಲವು ವರ್ಷಗಳೇ ಆಗಿ ಹೋದವು. ಹಾಗಾಗಿ ಈಗವರು ಎಲ್ಲಿದ್ದಾರೆನ್ನುವ ಸಿನಿಮಾ ಪ್ರೇಕ್ಷಕರ ದೊಡ್ಡ ಕುತೂಹಲದ ನಡುವೆಯೇ ಈಗ ಒಂದು ಸುದ್ದಿ ಹರಿದಾಡತೊಡಗಿದೆ. ಆರತಿ ಬಯೋಪಿಕ್ ತೆರೆ ಮೇಲೆ ಬರುತ್ತಿದೆಯಾ ಎನ್ನುವುದು ಆ‌ಸುದ್ದಿ.‌

ಸಿನಿಮಾ ಭಾಷೆಯಲ್ಲಿ ಹಾಗೊಂದು ಗಾಸಿಪ್ ಹರಿದಾಡುತ್ತಿದೆ. ಅದಕ್ಕೆ ಕಾರಣ ನಟಿ‌ ಅನುಪಮಾ ಗೌಡ ಅವರ ಒಂದು ಫೋಟೋ. ವಿಷಯಕ್ಕೆ ಬರುವ ಒಮ್ಮೆ ನೀವು ಈ ಫೋಟೋ ಗಮನಿಸಿನೋಡಿ. ಅನುಪಮಾ ಅವರ ಫೋಟೋಗೂ ಮತ್ತು ಹಿರಿಯ ನಟಿ ಆರತಿ ಅವರ ಫೋಟೋಗೋ ಹಲವು ಹೋಲಿಕೆಗಳಿವೆ. ಸಾಮಾನ್ಯವಾಗಿ‌ ಬಯೋಫಿಕ್ ಅಂತ ಸದ್ದು ಆದಾಗ ಕಂಡಿದ್ದು ಹೀಗೆ ಅಲ್ಲವೇ? ಇತ್ತೀಚೆಗೆ ಸೌತ್ ಸಿನಾ ಜಗತ್ತಿನಲ್ಲಿ ಜಯಲಲಿತಾ ಅವರ ಬಯೋಪಿಕ್ ದೊಡ್ಡ ಸದ್ದು ಮಾಡಿದಾಗ ಕಂಗನಾ ಕಾಣಿಸಿಕೊಂಡಿದ್ದು ಹೀಗೆ ಅಲ್ಲವೇ?

ಗೊತ್ತಿಲ್ಲ,ನಟಿ , ನಿರೂಪಕಿ ಅನುಪಮಾ ಗೌಡ ಯಾವ ಕಾರಣಕ್ಕಾಗಿ ಕ್ಯಾಮೆರಾ ಮುಂದೆ ಇಂತಹದೊಂದು ಫೋಸು ಕೊಟ್ಟಿದ್ದಾರೋ ಗೊತ್ತಿಲ್ಲ, ಆದರೆ ಅದು ಥೇಟ್ ಆರತಿ‌ ಅವರ ಒಂದು ಗೆಟಪ್ ನಂತೆಯೇ ಇದೆ‌ . ಆರತಿ ಅವರು ಇರೋದೆ ಹಾಗೆ.

ಹಾಗಾದ್ರೆ ಅನುಪಮಾ ಗೌಡ ಅವರು ಕ್ಯಾಮೆರಾ ಮುಂದೆ ಕೊಟ್ಟ ಪೋಸು ಆರತಿ ಅವರ ಗೆಟಪ್ ಅಲ್ಲದಿರಬಹುದು, ಆದರೆ ಆರತಿ ಅವರ ಕುರಿತು ಸಿನಿಮಾ ಮಾಡ ಹೊರಟರೆ ಒಂದಲ್ಲ ಮೂರ್ನಾ ಲ್ಕು ಸಿಕ್ವೆಲ್ ಮಾಡುವಷ್ಟು ಸಾಧನೆಯ ಜತೆಗಿನ ವಿಶಿಷ್ಟ ಬದುಕು ಅವರದು. ಅದು ಅವರ ಅದೃಷ್ಟವೋ, ದುರಾದೃ ಷ್ಟವೋ ನಟಿಯಾಗಿ ಗೆದ್ದ ಆರತಿ ಖಾಸಗಿ ಬದುಕಿನಲ್ಲಿ‌ ನೆಮ್ಮದಿ ಕಾಣಲಿಲ್ಲ ಎನ್ನುವುದು ಉದ್ಯಮವೇ ಹೇಳುವ ಮಾತು. ಅದೊಂದು‌ ಸಿನಿಮಾ ಕಥಾನಕ !

ಅದೇ ಕಾರಣಕ್ಕೆ ಸದ್ದಿಲ್ಲದೆ ಸುದ್ದಿಯೂ ಆಗದೆ ಹಿರಿಯ ನಟಿ ಆರತಿ ಅವರ ಬಯೋಪಿಕ್ ತೆರೆಗೆ ಬರುತ್ತಿದೆಯಾ ಎನ್ನುವ ಗುಮಾನಿ ಈಗ ನಟಿ‌ ಅನುಪಮಾ ಗೌಡ ಅವರ ಪೋಸು ನೋಡಿದಾಗ ಅನಿಸಿದ್ದು ಹೌದು. ಮೂಲಗಳ ಪ್ರಕಾರ ಅದು ರಾಜ ರಾಣಿ ಹೆಸರಿನ ಕಿರುತೆರೆಯ ರಿಯಾಲಿಟಿ ಶೋ ನಲ್ಲಿ ಕೊಟ್ಟ ಪೋಸ್ ಅಂತೆ. ಹೀಗಂತ ಈಗ ಸುದ್ದಿ ಹರಿದಾಡುತ್ತಿದೆ. ಇರಲಿ, ಅದು ಅಲ್ಲಿದೆ ಆಂತಿಟ್ಟುಕೊಳ್ಳೊಣ, ಆರತಿ ಅವರ ಬಯೋಪಿಕ್ ಸಿನಿಮಾ ಮಾಡಲು ಯಾರಾದರೂ ಮನಸು ಮಾಡಿದರೆ ಯಾಕೆ ನಟಿ‌ಅನುಪಮಾ‌ಗೌಡ ಅದರಲ್ಲಿ‌ನಟಿಸಬಾರದು? ಸಿನಿಮಾ‌ಮಂದಿ ಅವರನ್ನೇ ಯಾಕೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಬಾರದು?

  • ಎಂಟರ್‌ಟೈನ್‌ ಮೆಂಟ್‌ ಬ್ಯುರೋ ಸಿನಿ ಲಹರಿ
Categories
ಸಿನಿ ಸುದ್ದಿ

ಕನ್ನಡದಲ್ಲೀಗ ಸಿನಿಮಾಗಳ ಕಲರವ … ಭಜರಂಗಿ ಜೊತೆ ಪ್ರೇಮಂ ಪೂಜ್ಯಂ ರಿಲೀಸ್!‌

ಹೌದು, ಕೊರೊನಾ ಹಾವಳಿಗೆ ತತ್ತರಿಸಿ ಹೋಗಿದ್ದ ಸಿನಿಮಾರಂಗ ಈಗ ಚೇತರಿಸಿಕೊಳ್ಳುತ್ತಿದೆ. ಈವರೆಗೆ ಶೇ.50ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರ, ಅಕ್ಟೋಬರ್‌ 1ರಿಂದ ಶೇ.100ಷ್ಟು ಭರ್ತಿಗೆ ಅವಕಾಶ ಕೊಟ್ಟಿದೆ. ಇದೇ ಖುಷಿಯಲ್ಲಿರುವ ಸಿನಿಮಾ ಮಂದಿ ಹಬ್ಬದ ಸಂಭ್ರಮದಲ್ಲಿರುವುದಂತೂ ನಿಜ. ಸರ್ಕಾರ ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದ್ದೇ ತಡ, ಸ್ಟಾರ್‌ ಸಿನಿಮಾಗಳು ರಿಲೀಸ್‌ ದಿನಾಂಕವನ್ನು ಘೋಷಿಸಿಕೊಂಡಿವೆ. ಸುದೀಪ್‌ ಅಭಿನಯದ “ಕೋಟಿಗೊಬ್ಬ 3” ಮತ್ತು “ದುನಿಯಾ” ವಿಜಯ್‌ ಅಭಿನಯದ “ಸಲಗʼ ಸಿನಿಮಾಗಳು ದಸರಾಗೆ ಅಂದರೆ ಅಕ್ಟೋಬರ್‌ 14ರಂದು ದರ್ಶನ ನೀಡಲಿವೆ.

ಶಿವರಾಜ್‌ ಕುಮಾರ್‌ ಅಭಿನಯದ “ಭಜರಂಗಿ 2” ಚಿತ್ರದೊಂದಿಗೆ ಲವ್ಲಿ ಸ್ಟಾರ್‌ ಪ್ರೇಮ್‌ ಅಭಿನಯದ 25ನೇ ಚಿತ್ರ “ಪ್ರೇಮಂ ಪೂಜ್ಯಂ’ ಚಿತ್ರವೂ ಥಿಯೇಟರ್‌ಗೆ ಎಂಟ್ರಿಕೊಡುತ್ತಿದೆ. ಹೌದು, ಪ್ರೇಮ್‌ ಅವರ “ಪ್ರೇಮಂ ಪೂಜ್ಯ” ಸಿನಿಮಾ ಕೂಡ ರಿಲೀಸ್ ದಿನಾಂಕವನ್ನು ಘೋಷಿಸಿದೆ. ಅಕ್ಟೋಬರ್ 29ಕ್ಕೆ ಪ್ರೇಕ್ಷಕರ ಮುಂದೆ ಬರುವುದನ್ನು ಹೇಳಿಕೊಂಡಿದೆ. ಇನ್ನು ಈ ಚಿತ್ರವನ್ನು ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ರಕ್ಷಿತಾ ಕೆಡಂಬಾಡಿ ಮತ್ತು ಡಾ ರಾಜ್ ಕುಮಾರ್ ಜಾನಕಿ ರಾಮನ್ ನಿರ್ಮಾಣ ಮಾಡಿದ್ದಾರೆ. ಇದೊಂದು ರೋಮ್ಯಾಂಟಿಕ್ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ಪ್ರೇಮ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಬೃಂದಾ ಆಚಾರ್ಯ ನಾಯಕಿಯಾಗಿದ್ದಾರೆ.

ಅದೇನೆ ಇರಲಿ, ಕಳೆದ ಎರಡು ವರ್ಷಗಳಿಂದಲೂ ದಂಗುಬಡಿದಿದ್ದ ಚಿತ್ರರಂಗಕ್ಕೆ ಈಗ ಮಂದಹಾಸ ಮೂಡಿದೆ. ಸದ್ಯ ಸ್ಟಾರ್‌ಗಳ ಚಿತ್ರಗಳು ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿವೆ. ಆ ಮೂಲಕ ಪ್ರೇಕ್ಷಕರನ್ನು, ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಕೂಡ ನಡೆಯುತ್ತಿದೆ ಎಂಬುದೇ ವಿಶೇಷ. ಅಭಿಮಾನಿಗಳು ಈಗ ಥಿಯೇಟರ್‌ ಮುಂದೆ ಹಬ್ಬ ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಆ ವೈಭವ ಮರುಕಳಿಸಲು ಬಹಳ ದಿನಗಳೇನು ಬೇಕಿಲ್ಲ. ಆದರೂ, ಮುಂಜಾಗ್ರತೆ ಕ್ರಮ ಕೈಗೊಂಡು ಫ್ಯಾನ್ಸ್‌ ಸಿನಿಮಾ ನೋಡಿ, ಚಿತ್ರರಂಗವನ್ನು ಬೆಳೆಸಬೇಕಿದೆ. ಹಾಗೆಯೇ, ಥಿಯೇಟರ್‌ಗಳಿಗೆ ಮತ್ತೆ ಆ ಸಂಭ್ರಮ ತಂದುಕೊಡಬೇಕಿದೆ.

Categories
ಸಿನಿ ಸುದ್ದಿ

ಆಡಿಯನ್ಸ್ ಕ್ಲಬ್‌ನಲ್ಲಿ ದಾರಿ ಯಾವುದಯ್ಯಾ ವೈಕುಂಠಕ್ಕೆʼ ಪ್ರದರ್ಶನ :ಪ್ರೇಕ್ಷಕರಿಂದ ಪ್ರಶಂಸೆಯ ಸುರಿಮಳೆ

ಫಿಲ್ಮ್‌ ಆಡಿಯನ್ಸ್ ಕ್ಲಬ್‌ನಲ್ಲಿ ಕಳೆದ ಶನಿವಾರ 50ನೇ ಚಿತ್ರವಾಗಿ ‘ದಾರಿ ಯಾವುದಯ್ಯ ವೈಕುಂಠಕ್ಕೆ’ ಪ್ರದರ್ಶನ ಕಂಡಿತು. ಈಗಾಗಲೇ ಈ ಚಿತ್ರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಫಿಲ್ಮ್‌ ಫೆಸ್ಟಿವೆಲ್‌ ಗಳಲ್ಲಿ 134 ಪ್ರದರ್ಶನ ಕಂಡಿದ್ದು,135 ನೇ ಶೋ ಆಗಿ ಫಿಲ್ಮ್ ಆಡಿಯನ್ಸ್ ಕ್ಲಬ್‌ನಲ್ಲಿ ಪ್ರದರ್ಶನ ಕಂಡಿತು. ಬೆಂಗಳೂರು ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಸಿನಿಮಾ ಪ್ರೇಮಿಗಳು ಆಗಮಿಸಿದ್ದರು. ಚಿತ್ರ ಪ್ರದರ್ಶನದ ನಂತರ ಅವರು ಚಿತ್ರದ ಕುರಿತು ಮೆಚ್ಚುಗೆಯ ಮಾತನಾಡಿದರು.

‘ಕನ್ನಡದ ಸಿನಿಮಾವೊಂದು 120ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದೆ ಎಂದಾಗ ತುಂಬಾ ಖುಷಿ ಆಯ್ತು. ಈ ಚಿತ್ರ ನೋಡಲೇ ಬೇಕು ಎಂದುಕೊಂಡು ಆಡಿಯನ್ಸ್ ಕ್ಲಬ್‌ನಲ್ಲಿ ಸಿನಿಮಾ ನೋಡಿದೆ. ಚಿತ್ರ ನೋಡಿ ಖುಷಿ ಆಗಿದ್ದು, ಇನ್ನು ಹೆಚ್ಚೆಚ್ಚು ಪ್ರಶಸ್ತಿಗಳನ್ನು ಈ ಸಿನಿಮಾ ಪಡೆಯಲಿದೆ ಎಂದನಿಸಿದೆ. ಎಲ್ಲಾ ವಿಭಾಗ ಚನ್ನಾಗಿ ಕೆಲಸ ಮಾಡಿದ್ದು, ಕೊರೋನಾ ನಂತರ ಒಂದು ಒಳ್ಳೆ ಸಿನಿಮಾ ನೋಡಿದ ಅನುಭವ ಆಯ್ತು’ ಎನ್ನುವದು ಚಿತ್ರ ವೀಕ್ಷಣೆ ಮಾಡಿದ ವೀಕ್ಷರೊಬ್ಬರ ಮಾತು.

ಗಾಂಧಿಕ್ಲಾಸ್ ಪ್ರೇಕ್ಷಕನಿಂದ ಹಿಡಿದು ಸಿನಿಮಾ ತಂತ್ರಜ್ಞರು, ಸಿಎ ಆಫೀಸರ್‌ಗಳು ರಾಜಕೀಯ ವ್ಯಕ್ತಿಗಳು ಸೇರಿದಂತೆ ವಿಭಿನ್ನ ಅಭಿರುಚಿ ಹೊಂದಿರುವ ಪ್ರೇಕ್ಷಕರು ಆಡಿಯನ್ಸ್ ಕ್ಲಬ್‌ಗೆ ಬಂದು ಸಿನಿಮಾ ನೋಡಿದರು. ಎಲ್ಲರ ಬಾಯಲ್ಲೂ ಒಂದೇ ಮಾತು ‘ಸಿನಿಮಾ ಚನ್ನಾಗಿದ್ದು, ಆದಷ್ಟು ಬೇಗ ರಿಲೀಸ್ ಮಾಡಿ. ನಾವು ಫ್ಯಾಮಿಲಿ ಸಮೇತ ಸಿನಿಮಾ ನೋಡಬೇಕು’ ಎಂಬುದು. ಸಿನಿಮಾ ಪ್ರದರ್ಶನದ ನಂತರ ಪ್ರೇಕ್ಷಕ ಮತ್ತು ತಂಡದ ಜೊತೆ ಸಂವಾದ ನಡೆಯಿತು. ಇದೇ ಸಂದರ್ಭದಲ್ಲಿ ತಂಡದ ಜೊತೆ ಆಡಿಯನ್ಸ್ ಕ್ಲಬ್‌ನ ಸದಸ್ಯರು ಸರ್ಕಾರ ಥಿಯೇಟರ್‌ಗೆ 100% ಅವಕಾಶ ಕೊಟ್ಟಿದ್ದರಿಂದ ಸಿಹಿ ಹಂಚಿ ಸಂಭ್ರಮಿಸಿದರು.

ಉತ್ತರ ಕರ್ನಾಟಕದವರಾದ ಶರಣಪ್ಪ ಎಂ. ಕೊಟಗಿ ಮೊದಲ ಬಾರಿ ನಿರ್ಮಾಣ ಮಾಡಿದ್ದು, ಮೊದಲ ಚಿತ್ರಕ್ಕೇ ಚಿತ ಇಷ್ಟೊಂದು ಒಳ್ಳೆಯ ರೆಸ್ಪಾನ್ಸ್ ಬರುತ್ತಿರುವುದರಿಂದ ಖುಷಿಯಾಗಿದ್ದು, ಆ ಸಂತೋಷವನ್ನು ಆಡಿಯನ್ಸ್ ಜೊತೆಗೆ ಹಂಚಿಕೊಂಡರು. ಅಲ್ಲದೆ ನಿರ್ದೇಶಕ ಸಿದ್ದು ಪೂರ್ಣಚಂದ್ರ ಸಿನಿಮಾ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು. ಇದೇ ಸಂದರ್ಭದಲ್ಲಿ ಚಿತ್ರದ ನಾಯಕ ವರ್ಧನ, ನಾಯಕಿ ಪೂಜಾ ಹಾಗೂ ಕಲಾವಿದರಾದ ಸಿದ್ದಾರ್ಥ, ಸುಚಿತ್ ಮತ್ತು ಶೀಭಾ ತಮ್ಮ ಅನುಭವ ಹಂಚಿಕೊಂಡರು.ಸದ್ಯ ಥಿಯೇಟರ್‌ನಲ್ಲಿ ತುಂಬಿದ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದ್ದು, ಸದ್ಯದಲ್ಲೇ ಚಿತ್ರಮಂದಿರಕ್ಕೆ ʼದಾರಿ ಯಾವುದಯ್ಯಾ ವೈಕುಂಠಕ್ಕೆʼ ಬರಲಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

error: Content is protected !!