ರಾಜ್ಯದ ಕೆಲವೆಡೆಗಳಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಇರುವ ನಿರ್ಬಂಧವನ್ನು ಬಗೆಹರಿವುದಾಗಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭರವಸೆ ನೀಡಿದ್ದಾರೆ. ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಹಿನ್ನೆಲೆಯಲ್ಲಿ ವಿಧಾನ ಸೌಧದ ಕಾನ್ಪರೆನ್ಸ್ ಹಾಲ್ ನಲ್ಲಿ ಸೋಮವಾರ ಪ್ರವಾಸೋಧ್ಯಮ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
‘ ಸಿನಿಮಾದವರಿಗೆ ಕೆಲವು ಕಡೆ ನಿರ್ಬಂಧವಿದೆ. ದೇವಾಲಯಗಳು ಸೇರಿದಂತೆ ಕೆಲವು ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಾಗಗಳಲ್ಲಿ ಶೂಟಿಂಗ್ ಗೆ ನಿರ್ಬಂಧವಿರುವುದು ನನ್ನ ಗಮನಕ್ಕೂ ಬಂದಿದೆ. ಪ್ರವಾಸೋದ್ಯಮದ ಅಭಿವೃದ್ದಿ ದೃಷ್ಟಿಯಿಂದ ಕೂಡಲೇ ಇಂತಹ ಸಮಸ್ಯೆಯನ್ನು ಆದಷ್ಟು ಬಗ್ಗೆ ಬಗೆಹರಿಸುತ್ತೇವೆ. ಸಿಂಗಲ್ ವಿಂಡೋ ಯೋಜನೆಯಡಿ ಅವಕಾಶ ನೀಡುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು. ಸಿಂಗಲ್ ವಿಂಡೋ ವ್ಯವಸ್ಥೆ ಮಾಡಿದರೆ ಪ್ರಾಚ್ಯವಸ್ತು, ಅರಣ್ಯ, ಪ್ರವಾಸೋಧ್ಯಮ ಇಲಾಖೆ ಹೀಗೆ ಮೂರು ಇಲಾಖೆಗಳ ಅನುಮತಿಯೂ ಸಿಗಲಿದೆ. ಏಕಗವಾಕ್ಷಿ ವ್ಯವಸ್ಥೆಯಡಿ ಇದನ್ನ ತರುತ್ತೇವೆ. ಇದರಿಂದ ಅವರಿಗೂ ಅನುಕೂಲವಾಗಲಿದೆ. ನಮಗೂ ಉದ್ಯಮ ಬೆಳೆಯಲು ಅವಕಾಶವಾಗಲಿದೆ ಎಂದು ಹೇಳಿದರು.