ಜಗ್ಗೇಶ್‌ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ಪುತ್ರ ಗುರುರಾಜ್ ; ಊಹೆಗೂ ಮೀರಿದ ಕಥೆ-ಚಿತ್ರಕಥೆ, ಇಂಡಿಯನ್ ಸಿನ್ಮಾ ಇಂಡಸ್ಟ್ರಿಯ ದಿ ಬೆಸ್ಟ್ ಸ್ಕ್ರಿಫ್ಟ್‌ !

ಸೌತ್ ಸಿನ್ಮಾ ಇಂಡಸ್ಟ್ರಿ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುತಿರುಗಿ ನೋಡ್ತಿದೆ ಎನ್ನುವುದು ಕಣ್ಮುಂದಿರುವ ಸತ್ಯ. ಅಷ್ಟರ ಮಟ್ಟಿಗೆ ನಮ್ಮ ಕನ್ನಡ ಸಿನಿಮಾರಂಗ ಬೆಳೆದು ನಿಂತಿದೆ. ಈ ಮಧ್ಯೆ ನವರಸನಾಯಕ ಜಗ್ಗೇಶ್ ಅವರ ಪುತ್ರ ಇಲ್ಲಿವರೆಗೂ ಯಾರು ಯೋಚನೆ ಮಾಡದ ರೀತಿಯಲ್ಲಿ ಥಿಂಕ್ ಮಾಡಿ ಒಂದು ಸಬ್ಜೆಕ್ಟ್ ರೆಡಿಮಾಡಿಕೊಂಡಿದ್ದಾರೆ. ಆ ಇಂಟ್ರೆಸ್ಟಿಂಗ್ ಕಥೆಯ ಹೀರೋ ನವರಸನಾಯಕ ಜಗ್ಗೇಶ್ ಎಂಬುದೇ ಮತ್ತೊಂದು ವಿಶೇಷ.

ನವರಸಗಳಿಗೆ ನಾಯಕ ಒನ್ ಅಂಡ್ ಓನ್ಲೀ ಜಗ್ಗೇಶ್. ಈ ಮಾತನ್ನು ಕರ್ನಾಟಕದ ಕಲಾಭಿಮಾನಿಗಳು ಒಪ್ಪಿಕೊಂಡಿದ್ದಾರೆ. ಹಾಗೆಯೇ ಬೆಳ್ಳಿತೆರೆ ಮತ್ತು ಬಾಕ್ಸ್ ಆಫೀಸ್ ಡಬ್ಬವೂ ಅಪ್ಪಿಕೊಂಡು ಒಪ್ಪಿಕೊಂಡಿದೆ. ಬಿಗ್‌ಸ್ಕ್ರಿನ್ ಮೇಲೆ ಹಾಸ್ಯಲೋಕದ ಸರದಾರನ ಪಯಣ ಯಶಸ್ವಿಯಾಗಿ ಮುಂದುವರೆಯುತ್ತಲೇ ಇದೆ. ಭರ್ತಿ ನಾಲ್ಕು ದಶಕಗಳಿಂದ ಮನರಂಜನೆಯ ಹಬ್ಬದೂಟ ಬಡಿಸುತ್ತಾ ಸವಾರಿ ಮಾಡುತ್ತಿರುವ ನಗೆಮಾಂತ್ರಿಕ ಹಾಸ್ಯರತ್ನ ಜಗ್ಗಣ್ಣ 100 ರ ಗಡಿದಾಟಿದ್ದಾರೆ. ತರ್ಲೆ ನನ್‌ಮಗ, ಸರ್ವರ ಸೋಮಣ್ಣ, ಗಡಿಬಿಡಿಗಂಡ, ಜಗತ್‌ ಕಿಲಾಡಿ, ಮಠ, ಎದ್ದೇಳು ಮಂಜುನಾಥ, ಹೀಗೆ ಹಲವು ಸೂಪರ್‌ಹಿಟ್ ಸಿನಿಮಾಗಳಲ್ಲಿ ಹುಚ್ಚೆಬ್ಬಿಸಿದ್ದಾರೆ. ನೂರಕ್ಕೂ ಹೆಚ್ಚು ಚಿತ್ರಗಳಿಗೆ ಜೀವಕೊಟ್ಟು ಮಾಯಲೋಕದಲ್ಲಿ ಧೂಳೆಬ್ಬಿಸಿಕೊಂಡು ಧಗಧಗಿಸುತ್ತಲೇ ಇದ್ದಾರೆ.

ಜಗ್ಗಣ್ಣ ಕಾಳಿದಾಸ ಕನ್ನಡ ಮೇಷ್ಟ್ರಾಗಿ ಪಾಠ ಮಾಡಿದ್ಮೇಲೆ ಸಿನಿರಸಿಕರಿಗೆ ʼತೋತಾಪುರಿʼ ತಿನ್ನಿಸೋಣ ಅಂತ ರೆಡಿಯಾಗ್ತಿದ್ದರು. ಅಷ್ಟರಲ್ಲಿ ಇಡೀ ವಿಶ್ವಕ್ಕೆ ಕೊರೊನಾ ಅಟಕಾಯಿಸಿಕೊಂಡ್ತು. ಇದ್ರಿಂದ ಇಡೀ ಜಗತ್ತು ಲಾಕ್ ಆಯ್ತು ಅದರಂತೇ ಕರುನಾಡಿಗೂ ಕೂಡ ಬೀಗ ಹಾಕಬೇಕಾಗಿ ಬಂತು. ಈಗ ಕೊರೊನಾ ಅಟ್ಟಹಾಸ ತಗ್ಗಿದೆ, ಶೂಟಿಂಗ್‌ಗೆ ಅವಕಾಶ ಸಿಕ್ಕಿದೆ, ಥಿಯೇಟರ್ ಕೂಡ ಓಪನ್ ಆಗಿದೆ. ಜಗ್ಗೇಶ್ ಪುತ್ರ ಗುರುರಾಜ್ ಅಭಿನಯದ `ಕಾಗೆಮೊಟ್ಟೆ’ ಸಿನಿಮಾ ಅಕ್ಟೋಬರ್ 1 ರಂದು ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ. ಕಾಗೆಮೊಟ್ಟೆ ರಿಲೀಸ್ ಕುರಿತಾದ ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿದ್ದ ನಟ ಜಗ್ಗೇಶ್ ಮಗನ ಡೈರೆಕ್ಷನ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂ0ಡರು. ಊಹೆಗೂ ಮೀರಿದ ಕಥೆ-ಚಿತ್ರಕಥೆಯ ರಹಸ್ಯ ಬಿಚ್ಚಿಟ್ಟರು.

ನವರಸನಾಯಕ ಜಗ್ಗೇಶ್‌ಗೆ ಆಕ್ಷನ್ ಕಟ್ ಹೇಳಬೇಕು ಎನ್ನುವುದು ಎಷ್ಟೋ ನಿರ್ದೇಶಕರ ಕನಸು. ಅಂತಹದ್ದೊಂದು ಮಹದಾಸೆ ಜಗ್ಗೇಶ್ ಅವರ ಪುತ್ರ ಗುರುರಾಜ್‌ಗೂ ಇದೆ. ತಂದೆಯನ್ನು ನಿರ್ದೇಶಿಸುವ ಕನಸೊತ್ತ ಗುರುರಾಜ್, ಸದ್ದಿಲ್ಲದೇ ಸೈಲೆಂಟಾಗಿಯೇ ಸ್ಕ್ರಿಫ್ಟ್ ರೆಡಿಮಾಡಿಕೊಂಡಿದ್ದಾರೆ. ಅದೊಂದು ದಿನ ಫ್ರೀ‌ ಆಗಿ ಕುಳಿತಿದ್ದಾಗ ಗುರುರಾಜ್, ತಮ್ಮ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ತಂದೆ ಜಗ್ಗೇಶ್ ಬಳಿ ಡಿಸ್ಕಸ್ ಮಾಡಿದ್ದಾರೆ. ಸಿನಿಮಾ ಡೈರೆಕ್ಟ್ ಮಾಡ್ಬೇಕು ಅಂದುಕೊಂಡಿದ್ದೇನೆ, ನಿಮಗಾಗಿ ಒಂದು ಕಥೆ ರೆಡಿಮಾಡಿಕೊಂಡಿದ್ದೇನೆ ಎಂದಿದ್ದಾರೆ. ಮನೆಯಲ್ಲೇ ಕೂತು ಕಥೆಯನ್ನು ನರೇಟ್ ಮಾಡಿದ್ದಾರೆ. ಮಗ ಹೇಳಿದ ಕಥೆ ಕೇಳಿ ಜಗ್ಗಣ್ಣ ಥ್ರಿಲ್ಲಾಗಿದರು. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಗ್ಗೇಶ್ ಅವರು, ನಿರೀಕ್ಷೆಗೂ ಮೀರಿದ ಕಥೆ-ಚಿತ್ರಕಥೆ ಮಾಡಿಕೊಂಡಿದ್ದಾನೆ. ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲೇ ಇಂತಹದ್ದೊಂದು ಕಥೆ ಇಲ್ಲಿವರೆಗೂ ಮೂಡಿಬಂದಿಲ್ಲ. ನನ್ನ ಮಗನ ಇಮ್ಯಾಜಿನೇಷನ್ ಕಂಡು ನಾನೇ ದಿಗ್ಬ್ರಾಂತಗೊಂಡಿರುವುದಾಗಿ ಜಗ್ಗಣ್ಣ ಹೇಳಿಕೊಂಡರು.

ಅಷ್ಟಕ್ಕೂ, ಗುರುರಾಜ್ ಯಾವ್ ರೀತಿ ಕಥೆ ಮಾಡಿಕೊಂಡಿದ್ದಾರೆ ? ಯಾವ ಜಾಹ್ನರ್ ಸಿನಿಮಾ? ತಮ್ಮ ನಿರ್ದೇಶನದಲ್ಲಿ ತಂದೆಯನ್ನು ಹೇಗೆ ತೋರಿಸಲಿದ್ದಾರೆ ? ಈ ಯಾವ ಕೂತೂಹಲದ ಪ್ರಶ್ನೆಗೂ ಸದ್ಯಕ್ಕೆ ಉತ್ತರವಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗುರುರಾಜ್ ಆಗಲೀ, ನಟ ಜಗ್ಗೇಶ್ ಅವರಾಗಲೀ ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, 2020 ಮಾರ್ಚ್ 17 ರಂದು ಅಧಿಕೃತವಾಗಿ ಸಿನಿಮಾ ಅನೌನ್ಸ್ ಮಾಡುವ ಹಂಬಲದಲ್ಲಿದ್ದಾರೆ ಗುರುರಾಜ್. ಮಾರ್ಚ್ 17 ಜಗ್ಗೇಶ್ ಅವರ ಜನ್ಮದಿನ ಹೀಗಾಗಿ ಅಂದೇ ಸಿನಿಮಾ ಸೆಟ್ಟೇರಲಿದೆ. ತಂದೆಯ ಮೇಕಪ್' ಚಿತ್ರಕ್ಕೆ ರೈಟಪ್ ಬರೆದುಕೊಟ್ಟು ಸೈ ಎನಿಸಿಕೊಂಡಿದ್ದ ಗುರುರಾಜ್, ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ದಿ ಬೆಸ್ಟ್ ಸ್ಕ್ರಿಪ್ಟ್‌ ನೊಂದಿಗೆ ಡೈರೆಕ್ಟರ್ ಕ್ಯಾಪ್ ತೊಡಲಿಕ್ಕೆ ಸಿದ್ದವಾಗಿದ್ದಾರೆ. ಬಿಗ್‌ಸ್ಕ್ರಿನ್‌ನಲ್ಲಿ ತಂದೆಯನ್ನು ವಿಭಿನ್ನವಾಗಿ-ವಿಶಿಷ್ಟವಾಗಿ ತೋರಿಸುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ. ‌ಒಳ್ಳೆಯ ಕಥೆ-ಚಿತ್ರಕಥೆ-ಸಂಭಾಷಣೆಯ ಜೊತೆಗೆ ಬಾ೧೦೦’ ದಿನ ಕಾಲ್‌ಶೀಟ್ ಕೊಟ್ಟು ಕೆಲಸ ಮಾಡುವುದಾಗಿ ಹೇಳಿದ್ದಾರೆ. ಪುತ್ರನ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸೋಕೆ ಜಗ್ಗಣ್ಣ ಕೂಡ ಉತ್ಸುಕರಾಗಿದ್ದಾರೆ.

ಈ ಹಿಂದೆ ಪುತ್ರ ಗುರುರಾಜ್ ಅಭಿನಯದ ಗುರು' ಚಿತ್ರಕ್ಕೆ ಜಗ್ಗಣ್ಣ ಆಕ್ಷನ್ ಕಟ್ ಹೇಳಿದ್ದರು. ಈಗ ಮಗನ ಸರದಿ ತಂದೆಯ ಸಿನಿಮಾ ನಿರ್ದೇಶಿಸುವ ಸೌಭಾಗ್ಯ. ಅಂದ್ಹಾಗೇ, ತಂದೆ-ಮಗನ ಬಾಂದವ್ಯಕ್ಕೋಸ್ಕರ ಜಗ್ಗಣ್ಣ ಮಗನಿಗೆ ಕಾಲ್‌ಶೀಟ್ ಕೊಟ್ಟಿಲ್ಲ. ಬದಲಾಗಿ ಮಗ ಗುರು ಮಾಡಿಕೊಂಡಿರುವ ಕಥೆಯಲ್ಲಿ ಹೊಸ ಕಿಕ್ ಇದೆ ಅಟ್ ದಿ ಸೇಮ್ ಟೈಮ್ ಧಮ್ ಇದೆ. ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಇಲ್ಲಿವರೆಗೂ ಡೈರೆಕ್ಟರ್‌ಗಳು ಯಾರೂ ಕೂಡ ಯೋಚನೆ ಮಾಡದ ರೀತಿಯಲ್ಲಿ ಥಿಂಕ್ ಮಾಡಿ ಸ್ಕ್ರಿಫ್ಟ್‌ ಮಾಡಿಕೊಂಡಿದ್ದಾರೆ ಅಂದ್ರೆ ನೀವೇ ಲೆಕ್ಕಹಾಕಿಗುರು’ ಹೊಸೆದಿರುವ ಕಥೆಯಲ್ಲಿ ಅದೆಂತಾ ಟ್ವಿಸ್ಟ್ ಅಂಡ್ ಟರ್ನ್ಸ್ ಇರಬಹುದು ಎಂದು. ಸದ್ಯಕ್ಕೆ, ಎಲ್ಲವೂ ಕೂತೂಹಲ ಮತ್ತು ಕೌತುಕ ಅಷ್ಟೇ. ಅಂದ್ಹಾಗೇ, ಭಗವಂತ ಎಲ್ಲರಿಗೂ ಒಂದೇ ರೀತಿ ಯೋಚನೆ ಮಾಡುವ ಮೆದುಳು ಕೊಟ್ಟಿರುವುದಿಲ್ಲ. ಎಲ್ಲರಿಗಿಂತ ಡಿಫೆರೆಂಟ್ ಥಿಂಕ್ ಮಾಡುವ ಶಕ್ತಿಯಿದೆ ಅಂದ್ರೆ ಅದಕ್ಕೆ ಕಾರಣ ಮತ್ತದೇ ಭಗವಂತನ ಕೃಪೆ ಮತ್ತು ಅನುಗ್ರಹ. ರಾಯರ ಅನುಗ್ರಹದಿಂದ ಗುರುರಾಜ್'ಗೆ ವಿಶಿಷ್ಟ ಯೋಚನಾಲಹರಿ ಒಲಿದಿರಬಹುದು. ಆ ಲಹರಿ ಹೇಗಿರಲಿದೆ ಎನ್ನುವುದಕ್ಕೆ2020 ಮಾರ್ಚ್‌ 17 ವರೆಗೂ ಕಾಯಬೇಕು.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!