ಹುಡ್ಗೀರ ಡಾರ್ಲಿಂಗ್.. ಲಕ್ಕಿಮ್ಯಾನ್ ಕೃಷ್ಣನ `ದಿಲ್’ ಪಸಂದ್ ; ಮೇಘಾ-ನಿಶ್ವಿಕಾ ಜೊತೆ ನಿಧಿಮಾ ಹಸ್ಬೆಂಡ್ ಡ್ಯುಯೆಟ್ !

ಜಿಲೇಬಿ, ದೂದ್‌ಪೇಡಾ ಆಯ್ತು, ಈಗ ದಿಲ್‌ಪಸಂದ್ ಟೈಮು. ಶುಗರ್ ಇದ್ದವರು ಇಲ್ಲದವರು ಎಲ್ಲರೂ ಕೂಡ ಒಮ್ಮೆಯಾದರೂ ದಿಲ್‌ಪಸಂದ್ ಟೇಸ್ಟ್ ಮಾಡಿರ್ತಾರೆ. ಮಿಕ್ಚರ್ ಆಫ್ ಸ್ವೀಟ್ಸ್ ಅಂಡ್ ಡ್ರೈ ಫ್ರೂಟ್ಸ್ ಒಳಗೊಂಡಿರುವ ದಿಲ್‌ಪಸಂದ್ ರುಚಿ ಹೇಗಿರುತ್ತೆ ಅಂತ ಎಲ್ಲರಿಗೂ ಗೊತ್ತಿರುತ್ತೆ. ಆದರೆ, ಗಾಂಧಿನಗರದಲ್ಲಿ ಹೊಸದಾಗಿ ತಯ್ಯಾರಾಗುತ್ತಿರುವ ಈ ದಿಲ್‌ಪಸಂದ್ ಸ್ವಾದದ ಬಗ್ಗೆ ಹೇಳಲೇಬೇಕು. ನೀವು ಒಮ್ಮೆ ಇದನ್ನು ನೋಡ್ಲೇಬೇಕು.

ಕನ್ನಡ ನಾಡಿನ ಸಿನಿರಸಿಕರ ದಿಲ್' ಕದಿಯೋದಕ್ಕೆ ನಿರ್ದೇಶಕರು ಒಂದಿಲ್ಲೊಂದು ಕಸರತ್ತು ಮಾಡುತ್ತಲೇ ಇರುತ್ತಾರೆ. ಸಿನಿಮಾ ಟೈಟಲ್- ಸಾಂಗ್ಸ್- ಡೈಲಾಗ್ಸ್-ಕಥೆ- ಚಿತ್ರಕಥೆ-ಸಂಭಾಷಣೆ-ಸ್ಟಾರ್‌ ಕಾಸ್ಟಿಂಗ್ ಹೀಗೆ ಎಲ್ಲದರಲ್ಲೂ ಹೊಸತನ ತೋರಿಸಿ, ತಾಜಾ ಸಮಾಚಾರ ಹೇಳಿ ಚಿತ್ರಪ್ರೇಮಿಗಳ ಹೃದಯ ಗೆಲ್ಲೋದಕ್ಕೆ ಹಪಹಪಿಸುತ್ತಾರೆ. ಅದರಂತೇ, ಇಲ್ಲೊಂದು ಚಿತ್ರತಂಡ ಪ್ರೇಕ್ಷಕಮಹಾಪ್ರಭುಗಳ ಹಾರ್ಟ್ ಕದಿಯೋದಕ್ಕೆ, ಬಿಗ್‌ ಸ್ಕ್ರಿನ್ ನಲ್ಲಿ ಮೆರೆಯೋದಕ್ಕೆ ಹಾಗೂ ಬಾಕ್ಸ್ಆಫೀಸ್ ಲೂಟಿ ಹೊಡೆಯೋದಕ್ಕೆದಿಲ್ ಪಸಂದ್’ ಹೆಸರಲ್ಲೇ ಸಿನಿಮಾ ಮಾಡ್ತಿದೆ.

ಹೆಣೈಕ್ಳ ಆಲ್‌ಟೈಮ್ ಡಾರ್ಲಿಂಗ್ ಹಾಗೂ ನಿಧಿಮಾ ಹಸ್ಬೆಂಡ್ ಕೃಷ್ಣ ದಿಲ್ ಪಸಂದ್' ಹೀರೋ. 'ಲವ್‌ಮಾಕ್ಟೇಲ್' ರುಚಿ ತೋರ್ಸಿ ಲವ್‌ಬರ್ಡ್ಸ್ ಪಾಲಿಗೆ ಹೀರೋ ಆಗಿರುವ ಕೃಷ್ಣ ಈಗ ಲಕ್ಕಿಮ್ಯಾನ್ ಆಗ್ಬಿಟ್ಟಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆಲಕ್ಕಿಮ್ಯಾನ್’ ಹೆಸರಲ್ಲಿ ಸಿನಿಮಾ ಮಾಡುವಷ್ಟು ಲಕ್ಕಿಫೇಲೋ ಕೃಷ್ಣ ಅವರು. ಬಣ್ಣದ ಜಗತ್ತಿಗೆ ರೈಟ್ ಟೈಮ್‌ನಲ್ಲಿ ಬಂದ್ರೋ ಅಥವಾ ರಾಂಗ್ ಟೈಮ್‌ನಲ್ಲಿ ಬಣ್ಣ ಹಚ್ಚಿದ್ರೋ ಇಲ್ಲವೋ ಗೊತ್ತಿಲ್ಲ. ಆದರೆ, ಜೀವನದಲ್ಲಿ ನಿಧಿಮಾ ಎಂಟ್ರಿಕೊಟ್ಟ ಕಥೆಯನ್ನೇ ಸಿನಿಮಾ ಆಗಿಸಿ ಸಿನಿಮಾಪ್ರೇಮಿಗಳಿಂದ ರೈಟ್ ಎನಿಸಿಕೊಂಡು, ಬೆಳ್ಳಿತೆರೆಯಿಂದ ಭೇಷ್ ಎನಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಮಾಯಲೋಕದಲ್ಲಿ ಬೇಡಿಕೆ ಹೆಚ್ಚಿಸಿಕೊಂಡು ಡಿಮ್ಯಾಂಡಿಂಗ್ ನಾಯಕನಾಗಿ ಮೆರೆಯುತ್ತಿದ್ದಾರೆ.

ಡಾರ್ಲಿಂಗ್ ಕೃಷ್ಣ ಅವರ ಕೈಯಲ್ಲೀಗ ಏಳೆಂಟು ಸಿನಿಮಾಗಳಿವೆ. ಲವ್‌ಮಾಕ್ಟೇಲ್೨',ಶುಗರ್ ಫ್ಯಾಕ್ಟರಿ’, ಲವ್ ಮೀ ಆರ್ ಹೇಟ್ ಮೀ' ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಹಾಕಿ ಶೈನ್ ಆಗ್ತಿರುವ ಡಾರ್ಲಿಂಗ್ ಈಗದಿಲ್ ಪಸಂದ್’ ಹೆಸರಿನ ಚಿತ್ರಕ್ಕೆ ನಾಯಕ ನಟನಾಗಿ ಸೇರಿಕೊಂಡಿದ್ದಾರೆ. ಮಳೆ, ಧೈರ್ಯಂ, ಶಿವಾರ್ಜುನ, ಲೌಡ್‌ಸ್ಪೀಕರ್ ಚಿತ್ರಗಳ ನಿರ್ದೇಶಕ ಶಿವತೇಜಸ್ ದಿಲ್‌ಪಸಂದ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಟೈಟಲ್ ಬಿಡುಗಡೆಯಾಗಿದೆ. ಕನ್ನಡ ನಾಡಿನ ಹೆಮ್ಮೆಯ ಹಾಗೂ ದಕ್ಷ ಐಪಿಎಸ್ ಅಧಿಕಾರಿ ರವಿ.ಡಿ. ಚೆನ್ನಣ್ಣನವರ್ದಿಲ್‌ಪಸಂದ್’ ಶೀರ್ಷಿಕೆ ಅನಾವರಣ ಮಾಡಿದ್ದಾರೆ.

‘ಜೊತೆಜೊತೆಯಲಿ’ ಸೀರಿಯಲ್ ಮೂಲಕ ಕರುನಾಡಿನ ಮನೆ-ಮನ ತಲುಪಿರುವ ಮೇಘಾಶೆಟ್ಟಿ ಹಾಗೂ ನಿಶ್ವಿಕಾ ನಾಯ್ಡು ಡಾರ್ಲಿಂಗ್ ಕೃಷ್ಣಗೆ ಜೊತೆಯಾಗಿದ್ದಾರೆ. ನಾನಿ, ಬರ್ಕ್ಲಿ, ಕಾಲಚಕ್ರ ಸಿನಿಮಾಗಳ ನಿರ್ದೇಶಕ ಸುಮಂತ್ ಕ್ರಾಂತಿ ಈಗ ಅನ್ನದಾತರಾಗಿ ಬಡ್ತಿಹೊಂದಿದ್ದಾರೆ. `ದಿಲ್ ಪಸಂದ್’ಗೆ ಬಂಡವಾಳ ಹೂಡಿದ್ದಾರೆ. ರೊಮ್ಯಾಂಟಿಕ್ ಲವ್ ಕಾಮಿಡಿ ಚಿತ್ರವಾಗಿದ್ದು ಅತೀ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ತಬಲನಾಣಿ, ರಂಗಾಯಣ ರಘು, ಸಾಧುಕೋಕಿಲ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿದ್ದಾರೆ. ಅರ್ಜುನ್ ಜನ್ಯಾ ಸಂಗೀತ, ಶೇಖರ್ ಚಂದ್ರು ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದ್ದು, ಅಕ್ಟೋಬರ್ 04 ರಿಂದ ಫಿಲ್ಮಿ ಟೀಮ್ ಶೂಟಿಂಗ್ ಅಖಾಡಕ್ಕೆ ಧುಮ್ಕಲಿದೆ.
ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!