ಫಿಲ್ಮ್ ಆಡಿಯನ್ಸ್ ಕ್ಲಬ್‌ನಲ್ಲಿ ಕಳೆದ ಶನಿವಾರ 50ನೇ ಚಿತ್ರವಾಗಿ ‘ದಾರಿ ಯಾವುದಯ್ಯ ವೈಕುಂಠಕ್ಕೆ’ ಪ್ರದರ್ಶನ ಕಂಡಿತು. ಈಗಾಗಲೇ ಈ ಚಿತ್ರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವೆಲ್ ಗಳಲ್ಲಿ 134 ಪ್ರದರ್ಶನ ಕಂಡಿದ್ದು,135 ನೇ ಶೋ ಆಗಿ ಫಿಲ್ಮ್ ಆಡಿಯನ್ಸ್ ಕ್ಲಬ್‌ನಲ್ಲಿ ಪ್ರದರ್ಶನ ಕಂಡಿತು. ಬೆಂಗಳೂರು ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಸಿನಿಮಾ ಪ್ರೇಮಿಗಳು ಆಗಮಿಸಿದ್ದರು. ಚಿತ್ರ ಪ್ರದರ್ಶನದ ನಂತರ ಅವರು ಚಿತ್ರದ ಕುರಿತು ಮೆಚ್ಚುಗೆಯ ಮಾತನಾಡಿದರು.
‘ಕನ್ನಡದ ಸಿನಿಮಾವೊಂದು 120ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದೆ ಎಂದಾಗ ತುಂಬಾ ಖುಷಿ ಆಯ್ತು. ಈ ಚಿತ್ರ ನೋಡಲೇ ಬೇಕು ಎಂದುಕೊಂಡು ಆಡಿಯನ್ಸ್ ಕ್ಲಬ್‌ನಲ್ಲಿ ಸಿನಿಮಾ ನೋಡಿದೆ. ಚಿತ್ರ ನೋಡಿ ಖುಷಿ ಆಗಿದ್ದು, ಇನ್ನು ಹೆಚ್ಚೆಚ್ಚು ಪ್ರಶಸ್ತಿಗಳನ್ನು ಈ ಸಿನಿಮಾ ಪಡೆಯಲಿದೆ ಎಂದನಿಸಿದೆ. ಎಲ್ಲಾ ವಿಭಾಗ ಚನ್ನಾಗಿ ಕೆಲಸ ಮಾಡಿದ್ದು, ಕೊರೋನಾ ನಂತರ ಒಂದು ಒಳ್ಳೆ ಸಿನಿಮಾ ನೋಡಿದ ಅನುಭವ ಆಯ್ತು’ ಎನ್ನುವದು ಚಿತ್ರ ವೀಕ್ಷಣೆ ಮಾಡಿದ ವೀಕ್ಷರೊಬ್ಬರ ಮಾತು.
ಗಾಂಧಿಕ್ಲಾಸ್ ಪ್ರೇಕ್ಷಕನಿಂದ ಹಿಡಿದು ಸಿನಿಮಾ ತಂತ್ರಜ್ಞರು, ಸಿಎ ಆಫೀಸರ್‌ಗಳು ರಾಜಕೀಯ ವ್ಯಕ್ತಿಗಳು ಸೇರಿದಂತೆ ವಿಭಿನ್ನ ಅಭಿರುಚಿ ಹೊಂದಿರುವ ಪ್ರೇಕ್ಷಕರು ಆಡಿಯನ್ಸ್ ಕ್ಲಬ್‌ಗೆ ಬಂದು ಸಿನಿಮಾ ನೋಡಿದರು. ಎಲ್ಲರ ಬಾಯಲ್ಲೂ ಒಂದೇ ಮಾತು ‘ಸಿನಿಮಾ ಚನ್ನಾಗಿದ್ದು, ಆದಷ್ಟು ಬೇಗ ರಿಲೀಸ್ ಮಾಡಿ. ನಾವು ಫ್ಯಾಮಿಲಿ ಸಮೇತ ಸಿನಿಮಾ ನೋಡಬೇಕು’ ಎಂಬುದು. ಸಿನಿಮಾ ಪ್ರದರ್ಶನದ ನಂತರ ಪ್ರೇಕ್ಷಕ ಮತ್ತು ತಂಡದ ಜೊತೆ ಸಂವಾದ ನಡೆಯಿತು. ಇದೇ ಸಂದರ್ಭದಲ್ಲಿ ತಂಡದ ಜೊತೆ ಆಡಿಯನ್ಸ್ ಕ್ಲಬ್‌ನ ಸದಸ್ಯರು ಸರ್ಕಾರ ಥಿಯೇಟರ್‌ಗೆ 100% ಅವಕಾಶ ಕೊಟ್ಟಿದ್ದರಿಂದ ಸಿಹಿ ಹಂಚಿ ಸಂಭ್ರಮಿಸಿದರು.
ಉತ್ತರ ಕರ್ನಾಟಕದವರಾದ ಶರಣಪ್ಪ ಎಂ. ಕೊಟಗಿ ಮೊದಲ ಬಾರಿ ನಿರ್ಮಾಣ ಮಾಡಿದ್ದು, ಮೊದಲ ಚಿತ್ರಕ್ಕೇ ಚಿತ ಇಷ್ಟೊಂದು ಒಳ್ಳೆಯ ರೆಸ್ಪಾನ್ಸ್ ಬರುತ್ತಿರುವುದರಿಂದ ಖುಷಿಯಾಗಿದ್ದು, ಆ ಸಂತೋಷವನ್ನು ಆಡಿಯನ್ಸ್ ಜೊತೆಗೆ ಹಂಚಿಕೊಂಡರು. ಅಲ್ಲದೆ ನಿರ್ದೇಶಕ ಸಿದ್ದು ಪೂರ್ಣಚಂದ್ರ ಸಿನಿಮಾ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು. ಇದೇ ಸಂದರ್ಭದಲ್ಲಿ ಚಿತ್ರದ ನಾಯಕ ವರ್ಧನ, ನಾಯಕಿ ಪೂಜಾ ಹಾಗೂ ಕಲಾವಿದರಾದ ಸಿದ್ದಾರ್ಥ, ಸುಚಿತ್ ಮತ್ತು ಶೀಭಾ ತಮ್ಮ ಅನುಭವ ಹಂಚಿಕೊಂಡರು.ಸದ್ಯ ಥಿಯೇಟರ್‌ನಲ್ಲಿ ತುಂಬಿದ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದ್ದು, ಸದ್ಯದಲ್ಲೇ ಚಿತ್ರಮಂದಿರಕ್ಕೆ ʼದಾರಿ ಯಾವುದಯ್ಯಾ ವೈಕುಂಠಕ್ಕೆʼ ಬರಲಿದೆ.
- ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿಲಹರಿ