ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ ಆರತಿ ಗಂಧದಗುಡಿಯಿಂದ ಅಂತರಕಾಯ್ದುಕೊಂಡು ದಶಕಗಳೇ ಉರುಳಿವೆ. ಆದರೆ, ರಂಗನಾಯಕಿಯನ್ನು ಮಾತ್ರ ಯಾರೂ ಮರೆತಿಲ್ಲ, ಮುಂದೆ ಮರೆಯೋದು ಇಲ್ಲ. ‘ಗೆಜ್ಜೆಪೂಜೆ’ ಮೂಲಕ ಚಂದನವಕ್ಕೆ ಬಲಗಾಲಿಟ್ಟು ಬಂದ ‘ಶುಭಮಂಗಳ’ದ ಚೆಲುವೆ ದಶಕಗಳ ಕಾಲ ಬೆಳ್ಳಿತೆರೆಯನ್ನಾಳಿದರು. ಸೂಪರ್‌ಸ್ಟಾರ್‌ಗಳೊಟ್ಟಿಗೆ ಸ್ಕ್ರೀನ್ ಶೇರ್ ಮಾಡಿದರು. ಸ್ಟಾರ್‌ನಟಿಯರಿಗೆ ಭರ್ಜರಿ ಪೈಪೋಟಿ ನೀಡಿದರು. ಅತೀ ಕಡಿಮೆ ಅವಧಿಯಲ್ಲಿ ನೇಮು-ಫೇಮಿನ ಕಿರೀಟ ಮುಡಿಗೇರಿಸಿಕೊಂಡರು. ಬಹುಬೇಡಿಕೆ ನಟಿಯಾಗಿ ಮಿಂಚುತ್ತಾ, ಶತಮಾನದ ಮಾಧರಿ ಹೆಣ್ಣಾಗಿ ಬೆಳೆದುನಿಂತರು. ರತ್ನಖಚಿತ ರಂಗನಾಯಕಿ ಪಟ್ಟಕ್ಕೇರಿ ಮುತ್ತಿನಂತೆ ಹೊಳೆದರು ಈಗಲೂ ಹೊಳೆಯುತ್ತಿದ್ದಾರೆ. ಚಿತ್ರರಂಗದಿಂದ ದೂರ ಉಳಿದ ಕಾಲದಲ್ಲೂ ಕನ್ನಡ ನಾಡಿನ ಸಿನಿಮಾ ರಸಿಕರು ರಂಗನಾಯಕಿಗಾಗಿ ಕನವರಿಸುತ್ತಿದ್ದಾರೆ. ಮನಸ್ಸು ಬದಲಾಯಿಸಿಕೊಂಡು ಮುಖಕ್ಕೆ ಬಣ್ಣ ಹಚ್ಚಿಕೊಂಡು ಮತ್ತೆ ಕ್ಯಾಮೆರಾ ಮುಂದೆ ಬಂದು ನಿಲ್ಲುವ ಕ್ಷಣಕ್ಕಾಗಿ ಹಾತೊರೆಯುತ್ತಿದ್ದಾರೆ.
ರಂಗನಾಯಕಿ ಎಲ್ಲಿದ್ದಾರೆ? ಹೇಗಿದ್ದಾರೆ? ಈ ಎರಡು ಪ್ರಶ್ನೆ ಎದ್ದಾಗಲೆಲ್ಲಾ ಬರುವುದು ಒಂದೇ ಉತ್ತರ ಅಮೇರಿಕಾದಲ್ಲಿದ್ದಾರೆನ್ನುವುದು. ಯಸ್, ರಂಗನಾಯಕಿ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡ ಮೇಲೆ ಅಮೇರಿಕಾಗೆ ಹೋಗಿ ಸೆಟಲ್ ಆಗಿದ್ದಾರಂತೆ. ಆಗಾಗ ಬೆಂಗಳೂರಿಗೆ ಬರುತ್ತಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಅವ್ರಂತೆ ವೇಷ ಮರೆಸಿಕೊಂಡು, ಯಾರಿಗೂ ಗುರುತು ಸಿಗದ ರೀತಿ ಓಡಾಡುತ್ತಾರೆ ಎನ್ನುವ ಮಾತಿದೆ. ಈ ಮಾತು ಎಷ್ಟು ಸತ್ಯವೋ ಗೊತ್ತಿಲ್ಲ. ಹೋದಲ್ಲಿ-ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುವುದರಿಂದ ಪ್ರೈವೆಸಿಗಾಗಿ ಸ್ಟಾರ್‌ನಟ-ನಟಿಯರು ಈ ರೀತಿ ಮಾಡೋದು ಕಾಮನ್ ಬಿಡಿ. ಇದೀಗ, ರಂಗನಾಯಕಿಯ ಲೈಫ್‌ಸ್ಟೋರಿಗೆ ಆಕ್ಷನ್ ಕಟ್ ಹೇಳುವ ಕನಸೊತ್ತು, ಆರತಿಯನ್ನು ಹೋಲುವ ನಟಿಗಾಗಿ ಸರ್ಚಿಂಗ್‌ನಲ್ಲಿದ್ದಂತವರಿಗೆ ಸೂಪರ್ ಸಪ್ರೈಸ್ ಕೊಡುವುದಕ್ಕಾಗಿ ಈ ಸುದ್ದಿಯನ್ನು ಹೊತ್ತು ತಂದಿದ್ದೇವೆ.
‘ಶುಭಮಂಗಳ’ದ ಚೆಲುವೆ ಚಿತ್ರರಂಗದಿಂದ ದೂರ ಉಳಿದಿದ್ದೇಕೆ? ನಟನೆಗೆ ಗುಡ್‌ಬೈ ಹೇಳಿದ್ದೇಕೆ? ಈ ಕೂತೂಹಲಕಾರಿ ಕೊಶ್ಚನ್‌ಗೆ ಒಂದೇ ಸಾಲಿನ ಅಂತಿಮ ಉತ್ತರವಿಲ್ಲ. ವೈಯಕ್ತಿಕ ಬದುಕಿನಲ್ಲಾದ ಕಾರಣಕ್ಕೆ ಮಾಯಲೋಕ ತೊರೆದರು ಎನ್ನುವ ಮಾತಿದೆ. ಅದೇನೇ ಇರಲಿ, ಬೆಳ್ಳಿತೆರೆಯಿಂದ ದೂರ ಉಳಿದ್ಮೇಲೂ, ಯಾರ ಕಣ್ಣಿಗೂ ಬೀಳದಂತೆ ದೂರದ ಪ್ರದೇಶಕ್ಕೆ ಹಾರಿಹೋದ್ಮೇಲೂ ಕೂಡ ನಟಿ ಆರತಿಯವರ ಬಗ್ಗೆ ತಿಳಿದುಕೊಳ್ಳುವ ಕೂತೂಹಲ, ಅಲುಮೇಲುನಾ ಮತ್ತೆ ಬಿಗ್‌ಸ್ಕ್ರೀನ್ ಮೇಲೆ ನೋಡುವ ಕಾತುರ ಇನ್ನೂ ಕೂಡ ಕಡಿಮೆಯಾಗಿಲ್ಲ. ಕಲಾರಸಿಕರಿಗೆ ಇಷ್ಟೊಂದು ಕೌತುಕ ಇರುವಾಗ ರಂಗನಾಯಕಿಯ ರಂಗುರಂಗಾದ ಬದುಕನ್ನ ಬೆಳ್ಳಿತೆರೆಮೇಲೆ ಕಟ್ಟಿಕೊಡುವ ಕನಸು ಚಿತ್ರಬ್ರಹ್ಮ ಎಂದೆನಿಸಿಕೊಳ್ಳುವ ಸಾರಥಿಗಳಿಗಿರುವುದಿಲ್ಲವೇ? ಇಲ್ಲ ಎನ್ನುವುದಕ್ಕೆ ಸಾಧ್ಯವೇ ಇಲ್ಲ ಬಿಡಿ. ಅನ್ನದಾತ ಮಹಾಶಯ ರೆಡಿ ಅಂದರೇ ಮುಗೀತು ನೂರು ಮಂದಿ ನಿರ್ದೇಶಕರು ಒಂಟಿಕಾಲಿನಲ್ಲಿ ನಿಂತುಬಿಡ್ತಾರೆ. ಯಾಕಂದ್ರೆ, ಹಂಗೈತಿ `ನಾಗರಹಾವು’ ಚಿತ್ರದ ಅಲುಮೇಲು ಹಂಗಾಮ ಮತ್ತು ಕಥಾಸಂಗಮ.
ಸದ್ಯಕ್ಕೆ, ಯಾವ ಯಾವ ನಿರ್ದೇಶಕರ ಕಲ್ಪನೆಯಲ್ಲಿ, ಯಾವ್ ಯಾವ್ ರೀತಿ ರಂಗನಾಯಕಿ ಮೂಡುತ್ತಿದ್ದಾರೋ ಗೊತ್ತಿಲ್ಲ? ಯಾರ್ ಯಾರ್ ಕಸ್ತೂರಿ ನಿವಾಸದ ಕೆಂಡಸಂಪಿಗೆಯ ಮೇಲೆ ಕಥೆ ಹೊಸೆಯುತ್ತಿದ್ದಾರೋ ಅದೂ ತಿಳಿದಿಲ್ಲ. ಅಲುಮೇಲು ಮೇಲೆ ಕಥೆ ಬರೆದು ಯಾರು ಯಾರು ನಿರ್ಮಾಪಕರಿಗಾಗಿ ಹುಡುಕಾಟ ನಡೆಸಿದ್ದಾರೋ ಅದು ಕೂಡ ಇನ್ನೂ ಮುನ್ನಲೆಗೆ ಬಂದಿಲ್ಲ? ಶುಭಮಂಗಳದ ಚೆಲುವೆಯ ಮೇಲೆ ಸಿನಿಮಾ ಮಾಡ್ಬೇಕು ಎನ್ನುವ ಕನಸು ಅದ್ಯಾವ್ಯಾವ ನಿರ್ಮಾಪಕರಿಗೆ ಇದೆಯೋ ಅದು ಕೂಡ ಬೆಳಕಿಗೆ ಬಂದಿಲ್ಲ? ಆದರೆ, ನಟಿಮಣಿಯರು ಮಾತ್ರ ಎವರ್‌ಗ್ರೀನ್ ಹೀರೋಯಿನ್‌ಗಳ ಜೀವನಗಾಥೆಗೆ ಬಣ್ಣ ಹಚ್ಚಬೇಕು ಎನ್ನುವ ಕನಸನ್ನು ಮಾತ್ರ ಇಟ್ಟುಕೊಂಡಿರ‍್ತಾರೆ. ಕೆಲವು ನಟಿಮಣಿಯರು ಮುಕ್ತವಾಗಿ ಮಾಧ್ಯಮದ ಮುಂದೆ ಹೇಳಿಕೊಳ್ತಾರೆ. ಹೀಗೆ, ಮೀಡಿಯಾ ಮುಂದೆ ಹೇಳಿಕೊಳ್ಳುವ ಮೊದಲೇ ನಟಿ ಅನುಪಮಾಗೌಡ ಸುದ್ದಿಯಾಗಿದ್ದಾರೆ. ಥೇಟ್ ರಂಗನಾಯಕಿಯಂತೆ ಕಂಗೊಳಿಸಿದ್ದಾರೆ, ಶುಭಮಂಗಳ ಚೆಲುವೆಯನ್ನ ಕಣ್ಮುಂದೆ ತಂದು ನಿಲ್ಲಿಸಿದ್ದಾರೆ.
ಅನುಪಮಗೌಡ ‘ಅಕ್ಕ’ ಸೀರಿಯಲ್‌ನಲ್ಲಿ ದ್ವಿಪಾತ್ರ ನಿರ್ವಹಿಸಿ ಕರುನಾಡ ಮಂದಿಯಿಂದ ಸೈ ಎನಿಸಿಕೊಂಡವರು. ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟು ಎಲ್ಲರಿಗೂ ಚಿರಪರಿಚಿತಗೊಂಡ ಅನುಪಮಗೌಡ, ‘ಆ ಕರಾಳ ರಾತ್ರಿ’ ಸಿನಿಮಾಗೆ ಬಣ್ಣ ಹಚ್ಚಿ ಬೆಳ್ಳಿತೆರೆಯಿಂದ ಮೆಚ್ಚುಗೆ ಗಿಟ್ಟಿಸಿಕೊಂಡರು. ಸೈಮಾ ಅಂಗಳದಲ್ಲಿ ಅತ್ಯುತ್ತಮ ಯುವನಟಿ ಪ್ರಶಸ್ತಿ ಗೆದ್ದರು. ಕನ್ನಡ ಕೋಗಿಲೆ, ಮಜಾಭಾರತ ರಿಯಾಲಿಟಿ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಕಂಗೊಳಿಸಿದರು. ಈಗ ರಾಜರಾಣಿ ಕಾರ್ಯಕ್ರಮದಲ್ಲಿ ಹೊಳೆಯುತ್ತಿದ್ದಾರೆ. ಈ ನಡುವೆಯೇ ಬ್ಲಾಕ್ ಕಲರ್ ವಿತ್ ಗೋಲ್ಡನ್ ಕಲರ್ ಬಾರ್ಡರ್ ಸೀರೆಯುಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅದರಲ್ಲಿ ಚಷ್ಮಾ ತೊಟ್ಟು ಕೊಟ್ಟಿರುವ ಪೋಸ್ ಇದೆಯಲ್ಲ ಅದು ರಂಗನಾಯಕಿಯ ಲುಕ್ಕನೇ ಹೋಲುತ್ತಿದೆ. ನಟಿ ಆರತಿಯವರನ್ನು ನೆನಪು ಮಾಡಿ ಕಾಡುತ್ತದೆ. ಅನುಪಮಗೌಡ ಅವರು ಆರತಿಯವರನ್ನು ಹೋಲುವ ಪೋಟೋಗಳು ಇಲ್ಲೇ ಇವೆ ನೀವು ಒಮ್ಮೆ ನೋಡಿ.
ಈ ಫೋಟೋಗಳನ್ನು ನೋಡಿದಾಗ ತೆರೆಮರೆಯಲ್ಲಿ ಆರತಿಯವರ ಬಯೋಪಿಕ್ ಕಸರತ್ತು ನಡೆಯುತ್ತಿದೆಯಾ? ರಂಗನಾಯಕಿಯ ಬದುಕು ಬೆಳ್ಳಿತೆರೆಮೇಲೆ ಅರಳಲಿದೆಯಾ ? ಅಲುಮೇಲು ಜೀವನಗಾಥೆಗೆ ಅನುಪಮಗೌಡ ಜೀವತುಂಬುತ್ತಿದ್ದಾರಾ? ನಿರ್ದೇಶಕರು ಯಾರು? ನಿರ್ಮಾಪಕರು ಯಾರು? ಹೀಗೆ ಒಂದಿಷ್ಟು ಕೂತೂಹಲ ಮೂಡುತ್ತಾ ಹೋಗುತ್ತೆ? ಇದೇ ಕೌತುಕದಿಂದ ನಾವು ನಟಿ ಕಮ್ ನಿರೂಪಕಿ ಅನುಪಮಗೌಡ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು.’ ಆರತಿಯವರನ್ನೇ ಹೋಲುತ್ತೀರಾ ಅಂತ ನೀವು ಹೇಳ್ತಿದ್ದೀರಾ? ಹಾಗೆಯೇ ಮೊದಲಿನಿಂದಲೂ ನನಗೆ ತುಂಬಾ ಜನ ಹೇಳಿದ್ದಾರೆ ಕೂಡ. ಅಂದ್ಹಾಗೇ, ಆರತಿಯವರ ಬಯೋಪಿಕ್ ಬಗ್ಗೆ ನಂಗೇನು ಗೊತ್ತಿಲ್ಲ? ರಾಜರಾಣಿ ಕಾರ್ಯಕ್ರಮಕ್ಕೋಸ್ಕರ ಆ ರೀತಿ ರೆಡಿಯಾಗಿದ್ದೇ. ಹಾಗೆಯೇ ಕ್ಯಾಮೆರಾ ಮುಂದೆ ಒಂದಿಷ್ಟು ಫೋಸ್‌ಗಳನ್ನು ಕೊಟ್ಟಿದ್ದೇನೆ, ಅದನ್ನು ನೋಡಿ ಎಲ್ಲರೂ ಹೇಳ್ತಿದ್ದಾರೆ ಥೇಟ್ ರಂಗನಾಯಕಿ ಥರ ಕಾಣ್ತೀರಾ ಅಂತ. ನಿಜಕ್ಕೂ ನನಗೆ ಖೂಷಿಯಾಗುತ್ತೆ ಹೆಮ್ಮೆ ಎನಿಸುತ್ತೆ. ಯಾರಾದರೂ ನಿರ್ದೇಶಕರು ಆರತಿಯವರ ಜೀವನಗಾಥೆಯನ್ನ ತೆರೆಮೇಲೆ ತರೋದಕ್ಕೆ ರೆಡಿಯಾಗಿ, ನನ್ನನ್ನು ಸಂಪರ್ಕ ಮಾಡಿದರೆ ನಾನು ಅಲುಮೇಲು ಪಾತ್ರಕ್ಕೆ ಜೀವತುಂಬುತ್ತೇನೆ.
ಇದು ನಟಿ ಅನುಪಮಗೌಡ ಅವರ ಮಾತು. ಅವರಿಗೆ ಅಭಿನೇತ್ರಿ ಕಲ್ಪನ ಅವರ ಬಯೋಪಿಕ್‌ನಲ್ಲಿ ಮಿಂಚುವ ಆಸೆಯಿದೆ. ಅಟ್ ದಿ ಸೇಮ್ ಟೈಮ್ ಆರತಿಯವರ ಲೈಫ್‌ಸ್ಟೋರಿಯಿಂದ ಆಫರ್ ಬಂದರೆ ಅದಕ್ಕೂ ನ್ಯಾಯ ಒದಗಿಸುವ ಅಭಿಲಾಷೆಯಿದೆ. ಮಹಾನಟಿಯರ ಜೀವನಕಥೆನಾ ತೆರೆಮೇಲೆ ತರುವುದು ಎಷ್ಟು ಸಾಹಸವೋ ಅಷ್ಟೇ ಸಾಹಸ ಮತ್ತು ಚಾಲೆಂಜಿಂಗ್ ಆ ಮಹಾನಟಿಯರ ಪಾತ್ರಕ್ಕೆ ಜೀವತುಂಬಿ ಅಭಿನಯಿಸುವುದು. ಅಂತಹ ಪ್ರಯತ್ನಕ್ಕೆ ನಾನು ರೆಡಿಯಿದ್ದೇನೆ ಅವಕಾಶ ಸಿಗ್ಬೇಕು ಅಷ್ಟೇ ಅಂತಾರೇ ನಟಿ ಕಮ್ ನಿರೂಪಕಿ ಅನುಪಮಗೌಡ ಅವರು. ಹೀಗಾಗಿ, ಅವರ ಆಸೆ-ಕನಸಿನಂತೆ ಅವಕಾಶಗಳು ಸಿಗಲಿ. ರಂಗನಾಯಕಿಯ ಬದುಕನ್ನು ಸಿನಿಮಾವಾಗಿಸುವ ಕನಸು ಯಾರಿಗಾದರೂ ಇದ್ದಲ್ಲಿ ಅವರುಗಳು ಅನುಪಮಗೌಡ ಅವರನ್ನು ಕಣ್ಮುಂಚಿಕೊಂಡು ಸೆಲೆಕ್ಟ್ ಮಾಡಲಿ ಎನ್ನುವುದೇ ಅವರ ಅಭಿಮಾನಿಗಳ ಆಸೆ ಮತ್ತು ನಿರೀಕ್ಷೆ.
- ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ