Categories
ಸಿನಿ ಸುದ್ದಿ

ರೆಡ್‌ ಶೇಡ್‌ ಟೊಮೆಟೊ ! ದಿ ಕಲರ್‌ ಆಫ್‌ ಟೊಮೆಟೊ ಟೀಸರ್‌ಗೆ ಜನ ಮೆಚ್ಚುಗೆ

“ರಕ್ತ ಚಿಮ್ಮುವ ಅಖಾಡದಲ್ಲಿ ನಿಷ್ಠೆಯ ನೂರು ತಲೆಗಳು ಬಿದ್ದರೂ, ಪ್ರತಿಷ್ಠೆಯ ತಲೆ ಮಾತ್ರ ಬೀಳಬಾರದು… ಮಾರ್ಕೆಟ್‌ನಲ್ಲಿ ಮಾರೋಕೆ ಏನ್‌ ತಂದಿದ್ದೇವೆ ಅನ್ನೋದರ ಮೇಲೆ ಬೆಲೆ..” ಇದಿಷ್ಟೇ ಡೈಲಾಗ್‌ ಆ ಟೀಸರ್‌ನಲ್ಲಿದೆ. ಅದರ ಮೇಕಿಂಗ್‌ ನೋಡಿದವರಿಗೆ ಅದೊಂದು ಪಕ್ಕಾ ಮಾಸ್‌ ಫೀಲ್‌ ಇರುವ ಸಿನಿಮಾ ಎನಿಸದೇ ಇರದು. ಅಷ್ಟರಮಟ್ಟಿಗೆ ನಿರ್ದೇಶಕ ತಾಯಿ ಲೋಕೇಶ್‌ ಕಟ್ಟಿಕೊಟ್ಟಿದ್ದಾರೆ. ಶೀರ್ಷಿಕೆ ಹೇಳುವಂತೆಯೇ, ಇದೊಂದು ಟೊಮೆಟೊ ಕಥೆ ಎನಿಸುತ್ತೆ. ಟೊಮ್ಯಾಟೊ ಕಲರ್‌ ರೆಡ್‌ ಆಗಿದ್ದರೂ, ಅದರಲ್ಲಿ ರೆಡ್‌ ಶೇಡ್‌ ಜಾಸ್ತೀನೆ ಇರಬಹುದಾ ಎಂಬ ಪ್ರಶ್ನೆ ಟೀಸರ್‌ ನೋಡಿದವರಿಗೆ ಗೊತ್ತಾಗುತ್ತೆ. ಇದು ವಾಸ್ತವತೆಗೆ ಹತ್ತಿರದ ಕಥೆ ಅನ್ನುವುದನ್ನು ಹೇಳುತ್ತದೆ

ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಸಿನಿಮಾಗಳು ಶುರುವಾಗುತ್ತಲೇ ಇವೆ. ಅದರಲ್ಲೂ ಹೊಸ ಪ್ರತಿಭಾವಂತರು ಅಂದರೆ ಸುಮ್ಮನೆ ಅಲ್ಲ ಬಿಡಿ. ಮೊದಲ ಪ್ರಯತ್ನದಲ್ಲೇ ಸುದ್ದಿಯಾಗಿಬಿಡುತ್ತಾರೆ. ಇಲ್ಲೀಗ ಹೇಳಹೊರಟಿರುವುದು ಹೊಸ ಸಿನಿಮಾದ ಫಸ್ಟ್‌ ಲುಕ್‌ ಕುರಿತು. ಅಷ್ಟೇ ಅಲ್ಲ, ಈಗಾಗಲೇ ಆ ಚಿತ್ರದ ಟೀಸರ್‌ ಕೂಡ ಬಿಡುಗಡೆಯಾಗಿದೆ. ಪ್ರತಾಪ್‌ ನಾರಾಯಣ್‌ ಅಭಿನಯದ ಈ ಚಿತ್ರದ ಫಸ್ಟ್‌ ಲುಕ್‌ ವಿಶೇಷವೆನಿಸಿದೆ. ಹೌದು, ಅ ಚಿತ್ರದ ಹೆಸರು. “ದಿ ಕಲರ್‌ ಆಫ್‌ ಟೊಮೆಟೊ” ಚಿತ್ರದ ಶೀರ್ಷಿಕೆಯೇ ವಿಭಿನ್ನ ಅಂದುಕೊಂಡರೆ, ಕಥೆ ಅದಕ್ಕಿಂತಲೂ ವಿಭಿನ್ನವಾಗಿರುತ್ತೆ ಎನ್ನುವುದರಲ್ಲಿ ಎರಡು ಮಾತಿಲ್ಲ ಬಿಡಿ.

ಯಾಕೆಂದರೆ, ಈ ಚಿತ್ರದ ಕಥೆ ಬರೆದಿರೋದು. ಕೋಟಿಗಾನಹಳ್ಳಿ ರಾಮಯ್ಯ. ಈ ಹೆಸರೇ ಸಾಕು ಅದ್ಭುತ ಕಥೆಗಾರ ಅನ್ನುವುದಕ್ಕೆ. ಈಗಾಗಲೇ “ಮೂಕ ಹಕ್ಕಿ” ಸಿನಿಮಾನೇ ಸಾಕು ಅವರ ಬರಹ ಎಂಥದ್ದು ಅಂತ ತಿಳಿಯೋಕೆ. ಅದಾಗಲೇ ಸಾಬೀತು ಮಾಡಿರುವ ಕೋಟಿಗಾನಹಳ್ಳಿ ರಾಮಯ್ಯ, ಈಗ ಮತ್ತೊಂದು ಸಿನಿಮಾ ಮೂಲಕ ಹೊಸ ವಿಷಯ ಹೇಳೋಕೆ ಬಂದಿದ್ದಾರೆ. ಅವರ ಬರಹದಲ್ಲಿ ಸಾಕಷ್ಟು ವಿಶೇಷತೆಗಳಿರುತ್ತವೆ ಎನ್ನುವುದನ್ನು ಹೆಚ್ಚೇನು ಹೇಳಬೇಕಿಲ್ಲ. ಇನ್ನೂ ಬಿಡುಗಡೆಯ ಹಂತದಲ್ಲಿರುವ ಕನ್ನೇರಿ ಸಿನಿಮಾಗೂ ಕೋಟಿಗಾನಹಳ್ಳಿ ರಾಮಯ್ಯ ಅವರದೇ ಬರವಣಿಗೆ ಇದೆ. ಈಗ “ದಿ ಕಲರ್‌ ಆಫ್‌ ಟೊಮೆಟೊ” ಸಿನಿಮಾಗೂ ಕಥೆ ಬರೆದಿದ್ದಾರೆ.
ಈ ಸಿನಿಮಾಗೆ ಸ್ವಾತಿ ಕುಮಾರ್ ನಿರ್ಮಾಪಕರು. ತಾಯಿ ಲೋಕೇಶ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು. ಈಗಾಗಲೇ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಅದರೊಂದಿಗೆ ಟೀಸರ್‌ ಕೂಡ ರಿಲೀಸ್‌ ಮಾಡಲಾಗಿದೆ.

“ರಕ್ತ ಚಿಮ್ಮುವ ಅಖಾಡದಲ್ಲಿ ನಿಷ್ಟೆಯ ನೂರು ತಲೆಗಳು ಬಿದ್ದರೂ, ಪ್ರತಿಷ್ಟೇಯ ತಲೆ ಮಾತ್ರ ಬೀಳಬಾರದು… ಮಾರ್ಕೆಟ್‌ನಲ್ಲಿ ಮಾರೋಕೆ ಏನ್‌ ತಂದಿದ್ದೇವೆ ಅನ್ನೋದರ ಮೇಲೆ ಬೆಲೆ..” ಇದಿಷ್ಟೇ ಡೈಲಾಗ್‌ ಆ ಟೀಸರ್‌ನಲ್ಲಿದೆ. ಅದರ ಮೇಕಿಂಗ್‌ ನೋಡಿದವರಿಗೆ ಅದೊಂದು ಪಕ್ಕಾ ಮಾಸ್‌ ಫೀಲ್‌ ಇರುವ ಸಿನಿಮಾ ಎನಿಸದೇ ಇರದು.

ದಿ ಕಲರ್‌ ಆಫ್‌ ಟೊಮೆಟೊ ಟೀಸರ್

ಅಷ್ಟರಮಟ್ಟಿಗೆ ನಿರ್ದೇಶಕ ತಾಯಿ ಲೋಕೇಶ್‌ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಶೀರ್ಷಿಕೆ ಹೇಳುವಂತೆಯೇ, ಇದೊಂದು ಟೊಮ್ಯಾಟೊ ಕಥಾಹಂದರ ಹೊಂದಿರುವ ಸಿನಿಮಾ. ಟೊಮೆಟೊ ಕಲರ್‌ ರೆಡ್‌ ಆಗಿದ್ದರೂ, ಅದರಲ್ಲಿ ರೆಡ್‌ ಶೇಡ್‌ ಜಾಸ್ತೀನೆ ಇರಬಹುದಾ ಎಂಬ ಪ್ರಶ್ನೆ ಟೀಸರ್‌ ನೋಡಿದವರಿಗೆ ಗೊತ್ತಾಗುತ್ತೆ.

ಅದರಲ್ಲೂ, ಇದು ವಾಸ್ತವತೆಗೆ ಹತ್ತಿರವಾಗಿರುವ ಕಥೆ ಅನ್ನುವುದನ್ನು ಈ ಟೀಸರ್‌ ಹೇಳುತ್ತದೆ. ರೈತ ಇಂದು ಟೊಮೆಟೊ ಬೆಳೆಗೆ ಬೆಂಬಲ ಸಿಗದೆ ಪರದಾಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ರೈತ ರೊಚ್ಚಿಗೆದ್ದರೆ ರಕ್ತಪಾತವೂ ಗ್ಯಾರಂಟಿ ಅನ್ನೋದು ಯಾವಾಗಲೋ ಸಾಬೀತಾಗಿದೆ. ಅದೇನೆ ಇರಲಿ, ಇಲ್ಲಿ ನಿರ್ದೇಶಕ ತಾಯಿ ಲೋಕೇಶ್‌ ಏನು ಹೇಳೋಕೆ ಹೊರಟಿದ್ದಾರೋ ಗೊತ್ತಿಲ್ಲ. ಟೀಸರ್‌ ನೋಡಿದ ಮೇಲೆ, ಅದೊಂದು ಪಕ್ಕಾ ಮಾಸ್‌ ಎಲಿಮೆಂಟ್ಸ್‌ ಇರುವ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಟೀಸರ್‌ ಮೇಕಿಂಗ್‌ ಜೊತೆಗೆ ಹಿನ್ನೆಲೆ ಸಂಗೀತ ಇಲ್ಲಿ ಗಮನಸೆಳೆಯುತ್ತದೆ. ಅಲ್ಲೊಂದು ಕುತೂಹಲವೂ ಇದೆ. ಆ ಕುತೂಹಲ ಏನೆಂಬುದಕ್ಕೆ ಸಿನಿಮಾ ಬರೋವರೆಗೆ ಕಾಯಬೇಕು.

ನಿರ್ದೇಶಕ ತಾಯಿ ಲೋಕೇಶ್‌ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಹಾಗಾಗಿ ಒಂದಷ್ಟು ಹೋರಾಟದ ಛಾಯೆ ಈ ಟೀಸರ್‌ನಲ್ಲೂ ಈಗಾಗಲೇ ಎದ್ದು ಕಾಣುತ್ತಿದೆ. ಸಾಂಸ್ಕೃತಿಕ ಲೋಕದ ಬಗ್ಗೆ ಅಪಾರ ಒಲವು ಇಟ್ಟುಕೊಂಡಿರುವ ತಾಯಿ ಲೋಕೇಶ್, ಹಲವು ಬೀದಿ ಬದಿಯ ಬದುಕನ್ನು, ಪಾತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ದಾಖಲಿಸಿದ್ದಾರೆ.

ದೊಡ್ಡವರ, ಚಿಂತಕರ ಒಡನಾಟವಿರಿಸಿಕೊಂಡಿರುವ ಅವರಿಗೆ ಸಿನಿಮಾ ಹುಚ್ಚು ಹೆಚ್ಚು. ಸಿನಿಮಾ ಕಥೆ ಬಗ್ಗೆ ಅಪಾರ ಆಸಕ್ತಿ ತೋರುವ ಅವರಿಗೆ ಸಿನೆಮಾವನ್ನು ಹೇಗೆ ಕಟ್ಟಬೇಕು ಎಂಬ ಕುರಿತು ಅರಿವಿದೆ. ಒಳ್ಳೆಯ ಆಲೋಚನೆಗಳೊಂದಿಗೆ “ದಿ ಕಲರ್‌ ಆಫ್‌ ಟೊ‌ಮೆಟೊ” ಸಿನಿಮಾ ಮಾಡಲು ಹೊರಟಿರುವ ಅವರ ತಂಡಕ್ಕೆ “ಸಿನಿಲಹರಿ” ಶುಭ ಹಾರೈಸಲಿದೆ.

Categories
ಸಿನಿ ಸುದ್ದಿ

ಕಾಂಟ್ರೋವರ್ಸಿ ಚೇತನ್‌- ಹೀಗೇಕಾದ್ರೂ ಆ ದಿನಗಳ ಹೀರೋ ?

ಚೇತನ್‌ ಒಬ್ಬ ನಟ. ಹಾಗೆಯೇ ಒಬ್ಬ ಸಾಮಾಜಿಕ ಹೋರಾಟಗಾರ. ಅವರಿಗಿರುವ ಅವೆರೆಡು ಬ್ರಾಂಡ್‌ ಗಳ ಬಗ್ಗೆ ಅನುಮಾನವೇ ಇಲ್ಲ. ಅದರಾಚೆ ಅವರು ಯಾರು ? ಅವರ ಹಿಂದಿನ ಶಕ್ತಿಯಾವುದು ? ಹೋಗ್ಲಿ ಅವರು ಒಪ್ಪಿ-ಅಪ್ಪಿಕೊಂಡಿರುವ ಸಿದ್ದಾಂತವಾದ್ರು ಯಾವ್ದು? ಈ ಪ್ರಶ್ನೆಗಳಿಗೆ ಈಗಲೂ ಉತ್ತರ ಇಲ್ಲ. ಹಾಗೆಯೇ ಚೇತನ್‌ ಅವರದ್ದು ಎಡಪಂಥವೂ ಅಲ್ಲ ಬಲಪಂಥವೂ ಅಲ್ಲ.

ನಟ ಚೇತನ್‌ ಅಹಿಂಸ ಹೀಗೇಕಾದ್ರೂ ? ಹೀಗಂತ ಕೇಳ್ತೀರೋದು ನಾವಲ್ಲ, ಬದಲಿಗೆ ಕನ್ನಡದ ಸಿನಿಮಾ ಪ್ರೇಕ್ಷಕರು ಹಾಗೂ ಅವರನ್ನು ಹತ್ತಿರದಿಂದ ಬಲ್ಲವರು. ಯಾಕಂದ್ರೆ ನಟ ಚೇತನ್‌ ದಿನೇ ದಿನೇ ತಾವೊಬ್ಬ ಕಾಂಟ್ರೋವರ್ಷಿ ಹೀರೋ ಎನ್ನುವುದನ್ನು ಪ್ರೂ ಮಾಡುತ್ತಲೇ ಹೊರಟಿದ್ದಾರೆ. ಕೊರೋನಾ ನಂತರದ ಈ ದಿನಗಳಲ್ಲಿ ಉಪೇಂದ್ರ ಆಯ್ತು, ಕುಮಾರ ಸ್ವಾಮಿ ಆಯ್ತು, ಕೊನೆಗೆ ಸಿದ್ದರಾಮಯ್ಯ ಅವರನ್ನು ಬಿಡದೆ ಅವರನ್ನು ಟೀಕಿಸಿದ್ದು ಮುಗೀತು. ಅಲ್ಲಿಂದೀಗ ಕಾಂಗ್ರೆಸ್‌ಗೂ ಆರ್‌ಎಸ್‌ಎಸ್‌ ಸಂಘಟನೆಯ ನಂಟು ಅಂಟು ಹಾಕಿ, ಬಾಯಿಗೆ ಬಂದಂತೆ ಟೀಕಿಸಿದ್ದಾರೆ. ಸೋಷಲ್‌ ಮೀಡಿಯಾದಲ್ಲಿ ಅವರು ಹಾಕಿರುವ ಸ್ಟೇಟಸ್ ದೊಡ್ಡ ವಿವಾದಕ್ಕೂ ನಾಂದಿ ಹಾಡಿದೆ. ಉಪೇಂದ್ರ ಬಿಟ್ರು, ಕುಮಾರ ಸ್ವಾಮಿ ಬಿಟ್ರು, ಹೋಗ್ಲಿ ಬಿಡಿ ಆತ ನಮ್ಮಡುಗ ಅಂತ ಸಿದ್ದರಾಮಯ್ಯ ಕೂಡ ಬಿಟ್ರು, ಹಾಗಂತ ಇಡೀ ಪಾರ್ಟಿಗೇ ಡ್ಯಾಮೇಜ್‌ ಮಾಡಲು ಹೊರಟ್ರೆ, ಕಾಂಗ್ರೆಸ್‌ನವ್ರು ಬಿಡ್ತಾರಾ?

ಸದ್ಯಕ್ಕೆ ಗೊತ್ತಾಗಿರುವ ಮಾಹಿತಿ ಪ್ರಕಾರ ನಟ ಚೇತನ್‌ ಅವರ ವಿರುದ್ಧ ಸೋಷಲ್‌ ಮೀಡಿಯಾದಲ್ಲಿಯೇ ತಕ್ಕ ಉತ್ತರ ನೀಡಲು ಕಾಂಗ್ರೆಸ್‌ ಮುಂದಾಗಿದೆ. ಮುಂದೆಯೂ ಹೀಗೆಯೇ ಅರ್ಥಹೀನ ಟೀಕೆ ಮಾಡಿದರೆ ಸರಿಯಾದ ಉತ್ತರ ನೀಡಲು ಕಾಂಗ್ರೆಸ್‌ ಮುದಾಗಿದೆಯಂತೆ. ಇರಲಿ ಬಿಡಿ, ಅದನ್ನ ಅವರವರು ನೋಡಿ ಕೊಳ್ತಾರೆ. ಪ್ರಶ್ನೆ ಇರೋದು ನಟ ಚೇತನ್‌ ಹೀಗೇಕೆ ಅಂತ. ಹಾಗಂತ ಸಿನಿಮಾ ಪ್ರೇಕ್ಷಕರಿಗೆ ಈ ಪ್ರಶ್ನೆ ಕಾಡ್ತಿರೋದು ಇದೇ ಮೊದಲು ಅಲ್ಲ. ಅವರು ನಟರಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಆ ದಿನಗಳಿಂದಲೂ ನಟ ಚೇತನ್‌ ಕೊಂಚ ವಿಚಿತ್ರವಾಗಿಯೇ ಕಾಣಿಸಿಕೊಂಡಿದ್ದು ನಿಮಗೆಲ್ಲ ಗೊತ್ತೇ ಇದೆ. ಅದು ಅವರ ಖಾಸಗಿ ಬದುಕಿನ ಜತೆಗೆ ಸಿನಿ ಕೆರಿಯರ್‌ ದೃಷ್ಟಿಯಿಂದಲೂ ಹೌದು. ಯುವ ನಿರ್ದೇಶಕ ಕೆ.ಎಂ. ಚೈತನ್ಯ ನಿರ್ದೇಶನ ʼ ಆ ದಿನಗಳುʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದವರು ನಟ ಚೇತನ್‌. ಇದು ಅವರ ಚೊಚ್ಚಲ ಸಿನಿಮಾ. ಅಮೆರಿಕದಲ್ಲಿದ್ದ ಹುಡುಗ ದಿಢೀರ್‌ ಕನ್ನಡಕ್ಕೆ ಬಂದು ದೊಡ್ಡ ಸಂಚಲನ ಸೃಷ್ಟಿಸಿದರು.

ಮಾಜಿ ಡಾನ್‌ ಅಗ್ನಿ ಶ್ರೀಧರ್‌ ಅವರದ್ದೇ ಬದುಕಿನ ಈ ಕಥಾ ಚಿತ್ರದಲ್ಲಿ ನಟ ಚೇತನ್‌ ಭರವಸೆಯ ತಾರೆಯಾಗಿ ಕಾಣಿಸಿಕೊಂಡರು. ಇನ್ನೇನು ಬಹುಬೇಡಿಕೆಯ ನಟನಾಗಿ ಅವರು ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ನಟ ಎನಿಸಿಕೊಳ್ತಾರೆ ಎನ್ನುವ ಸಿನಿಮಾ ಪ್ರೇಕ್ಷಕರ ನಿರೀಕ್ಷೆಯ ನಡುವೆಯೇ ಚೇತನ್‌ ಕಾಣೆಯಾದರು. ವಾಪಾಸ್‌ ಅಮೆರಿಕಕ್ಕೆ ಹೋದರು. ಒಂದಷ್ಟು ದಿನಗಳ ನಂತರ ಮತ್ತೆ ಅಲ್ಲಿಂದ ಬಂದವರುʼ ಮೈನಾʼ ದಂತಹ ಬ್ಲಾಕ್‌ ಬಸ್ಟರ್‌ ಚಿತ್ರದಲ್ಲಿ ಅಭಿನಯಿಸಿದರು. ಕನ್ನಡ ಚಿತ್ರರಂಗದಲ್ಲಿ ಮತ್ತೆ ಹೊಸ ಭರವಸೆ ಮೂಡಿಸಿದರು. ಆದ್ರೇನು, ಮುಂದೆ ಮತ್ತೆ ಚೇತನ್‌ ನಟನೆಯಾಚೆ ಹೋರಾಟ, ಸಾಮಾಜಿಕ ಕೆಲಸ ಅಂತೆಲ್ಲ ಬ್ಯುಸಿಯಾದರು. ಅವರ ಈ ನಿಲುವು ಪ್ರಶ್ನಾತೀತವೇ. ಯಾಕಂದ್ರೆ ಪ್ರತಿಯೊಬ್ಬರ ಬದುಕಿನ ಆಯ್ಕೆ, ಇನ್ನಾರೋ ಬಯಸಿದಂತೆಯೇ ಇರಬೇಕಿಲ್ಲ. ತಾನೊಬ್ಬ ನಟನಾಗುವುದಕ್ಕಿಂತ ಸಾಮಾಜಿಕ ಹೋರಾಟಗಾರನಾಬೇಕಿದೆ ಅಂತ ಚೇತನ್‌ ಅದಕ್ಕೆ ಸ್ಪಷ್ಟನೆ ಕೊಟ್ಟರು. ಕನ್ನಡ ಚಿತ್ರರಂಗದ ಮಟ್ಟಿಗೆ ಚೇತನ್‌ ಅವರನ್ನು ಇದು ಭಿನ್ನವಾದ ಸ್ಥಾನದಲ್ಲಿ ನಿಲ್ಲಿಸಿತು. ಯಾಕಂದ್ರೆ ನಟರಂದ್ರೆ, ಸಿನಿಮಾ ಮಾಡಬೇಕು, ಸ್ಟಾರ್‌ ಆಗಿ ಮೆರೀಬೇಕು, ಆ ಮೂಲಕ ಐಷಾರಾಮಿಯ ಕಂಪೋರ್ಟ್‌ ಜೋನ್‌ ನಲ್ಲಿ ಕುಳಿತಿರಬೇಕು ಅನ್ನೋ ಸಿನಿಮಾದ ರಂಗದ ಸಿದ್ಧ ಸೂತ್ರಗಳನ್ನು ಬ್ರೇಕ್‌ ಮಾಡಿ, ಅವರು ಜನರ ಪರವಾಗಿ ಬೀದಿಗಿಳಿಬೇಕು ಅಂದಾಗ ವಾಹ್ಹ್….‌ ಇಂತಹ ನಟ ಕನ್ನಡಕ್ಕೆ ಬೇಕಿತ್ತು ಅಂತ ಮೆಚ್ಚಿಕೊಂಡು ಮಾತನಾಡಿದವರು ಕಮ್ಮಿ ಇರಲಿಲ್ಲ.

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ, ಸಿನಿಮಾ ರಂಗದಲ್ಲಿನ ಮೀಟೂ ಪ್ರಕರಣ, ಸರ್ಕಾರದ ಬೆಲೆ ಏರಿಕೆ ಧೋರಣೆಗಳು.. ಹೀಗೆ ಒಂದಲ್ಲ ನಟ ಚೇತನ್‌ ಪ್ರತಿಯೊಂದಕ್ಕೂ ಇಲ್ಲಿ ಒಬ್ಬ ಸಾಮಾಜಿಕ ಹೋರಾಟಗಾರನಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇಲ್ಲೆಲ್ಲವೂ ಅನಗತ್ಯ ವಿವಾದವೇ ಆಗಿದೆ.

ಆ ಹೊತ್ತಿಗೆ ಅವರೊಬ್ಬ ಸಾಮಾಜಿಕ ಹೋರಾಟಗಾರನಾಗಿ ಮಾತ್ರ ಗುರುತಿಸಿಕೊಂಡಿದ್ದರು. ಅಲ್ಲಿಂದಾಚೆ ಯಾವುದೇ ಈಸಂ ಗೂ ಸಿಲುಕಿರಲಿಲ್ಲ. ಹಾಗಾಗಿ ಕನ್ನಡದ ಅದೆಷ್ಟೋ ಸಿನಿಮಾ ಪ್ರೇಕ್ಷಕರು ನಟ ಚೇತನ್‌ ಅವರನ್ನು ಒಬ್ಬ ಡಿಫೆರೆಂಟ್‌ ಆಕ್ಟರ್‌ ಅಂತಲೇ ಮಾತನಾಡಿದ್ದರು. ಮುಂದೇನಾಯ್ತೋ ಗೊತ್ತಿಲ್ಲ, ಚೇತನ್‌ ನಿಲುವು, ನಡೆ ಎಲ್ಲವೂ ಬದಲಾದವು. ಯಾರ ಅಂಕೆಗೂ ಸಿಲುಕದೆ ಹುಚ್ಚು ಕುದುರೆಯಂತೆ ಓಡತೊಡಗಿದರು ಚೇತನ್. ರಾಜಕೀಯ, ಸಾಮಾಜಿಕ, ಆರ್ಥಿಕ ರಂಗಗಳು ಸೇರಿದಂತೆ ಪ್ರಚಲಿತ ವಿದ್ಯಮಾನಗಳಿಗೆಲ್ಲ ಪ್ರತಿಕ್ರಿಯೆ ನೀಡತೊಡಗಿದರು. ವಿವಾದವೋ, ವಿಚಿತ್ರವೋ ದೊಡ್ಡ ಮಟ್ಟದ ಪ್ರಚಾರದಲ್ಲಿ ಚೇತನ್‌ ಧಗ ಧಗಸಿತೊಡಗಿದರು. ಮೊದಲೆಲ್ಲ ಅವರನ್ನು ಮೆಚ್ಚಿಕೊಂಡು ಮಾತನಾಡಿದವರೆಲ್ಲ ಚೇತನ್‌ ವಿರುದ್ಧ ಗಡುಗತೊಡಗಿದರು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ, ಸಿನಿಮಾ ರಂಗದಲ್ಲಿನ ಮೀಟೂ ಪ್ರಕರಣ, ಸರ್ಕಾರದ ಬೆಲೆ ಏರಿಕೆ ಧೋರಣೆಗಳು.. ಹೀಗೆ ಒಂದಲ್ಲ ನಟ ಚೇತನ್‌ ಪ್ರತಿಯೊಂದಕ್ಕೂ ಇಲ್ಲಿ ಒಬ್ಬ ಸಾಮಾಜಿಕ ಹೋರಾಟಗಾರನಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇಲ್ಲೆಲ್ಲವೂ ಅನಗತ್ಯ ವಿವಾದವೇ ಆಗಿದೆ. ಚೇತನ್‌ ಪ್ರಸ್ತಾಪಿಸಿದ ವಿಷಯ ಎಷ್ಟು ಗಂಭೀರವಾದದ್ದು ಎನ್ನುವುದಕ್ಕಿಂತ ಚೇತನ್‌ ಅವರನ್ನೇ ಟಾರ್ಗೆಟ್‌ ಮಾಡಿ, ಟೀಕಿಸಲಾಯಿತು. ಮೀಟೂ ಪ್ರಕರಣದಲ್ಲಂತೂ ಚೇತನ್‌ ಕೊಲೆ ಬೆದರಿಕೆ ಎದುರಿಸಿದರು. ಚಿತ್ರರಂಗ ಕೂಡ ಅವರನ್ನು ದೂರವೇ ನಿಲ್ಲಿಸಿತು. ಯಾಕಂದ್ರೆ, ಇಲ್ಲಿ ಚೇತನ್‌ ಅಂದ್ರೆ ಒಬ್ಬ ನಟ ಎಂದಷ್ಟೇ ಕಂಡಿತೇ ಹೊರತು, ಅದರಾಚೆ ಅವರಾರು ಅನ್ನೋದೇ ಇಲ್ಲಿ ದೊಡ್ಡ ಪ್ರಶ್ನೆ ಆಗಿ ಉಳಿಯಿತು.

ಹೌದು, ಅದು ನಿಜವೂ ಕೂಡ, ಚೇತನ್‌ ಅಂದ್ರೆ ಯಾರು ಎನ್ನುವುದು ಈಗಲೂ ಎಲ್ಲರಿಗೂ ಇರುವ ಯಕ್ಷ ಪ್ರಶ್ನೆ. ಚೇತನ್‌ ಒಬ್ಬ ನಟ ಹಾಗೆಯೇ ಒಬ್ಬ ಸಾಮಾಜಿಕ ಹೋರಾಟಗಾರ. ಅವರಿಗಿರುವ ಅವೆರೆಡು ಬ್ರಾಂಡ್‌ ಗಳ ಬಗ್ಗೆ ಅನುಮಾನವೇ ಇಲ್ಲ. ಅದರಾಚೆ ಅವರು ಯಾರು ? ಅವರ ಹಿಂದಿನ ಶಕ್ತಿಯಾವುದು ? ಹೋಗ್ಲಿ ಅವರು ಒಪ್ಪಿ-ಅಪ್ಪಿಕೊಂಡಿರುವ ಸಿದ್ದಾಂತವಾದ್ರು ಯಾವ್ದು? ಈ ಪ್ರಶ್ನೆಗಳಿಗೆ ಈಗಲೂ ಉತ್ತರ ಇಲ್ಲ. ಚೇತನ್‌ ಅವರದ್ದು ಎಡಪಂಥಿಯವೋ, ಬಲಪಂಥೀಯವೋ ಅದರಲ್ಲೂ ಗೊಂದಲ ಇದೆ. ಹಾಗಂತ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳಲ್ಲಿ ಅವರು ಒಲವು ಹೊಂದಿರುವ ಪಕ್ಷ ಯಾವುದು ಅಂತಲೂ ಹೇಳೋ ಹಾಗಿಲ್ಲ. ಒಂದೊಮ್ಮೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರ ಸ್ವಾಮಿ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದ ಚೇತನ್‌, ಈಗ ಈಗ ಕಾಂಗ್ರೆಸ್‌ -ಬಿಜೆಪಿ ಎರಡು ಆರ್‌ ಎಸ್‌ ಎಸ್‌ ನ ಕೊಂಬೆಗಳೇ ಅಂತ ಟೀಕಿಸಿ ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ಅಲ್ಲಿಂದಾಚೆ, ಚೇತನ್‌ ಅವರು ಒಬ್ಬ ಕಮ್ಯುನಿಸ್ಟಾ? ಅದು ಅಲ್ಲ. ಕಮ್ಯುನಿಸ್ಟರ ಮೇಲೂ ನಂಬಿಕೆ ಇಲ್ಲ. ಉಳಿದಂತೆ ಉಪೇಂದ್ರ ಅವರ ಪ್ರಜಾಕೀಯವನ್ನು ಅವರು ಒಪ್ಪಿಕೊಂಡಿಲ್ಲ. ಉಪೇಂದ್ರ ಅವರು ಕೂಡ ಚೇತನ್‌ ಅವರ ಟೀಕೆಯ ಬಾಣಕ್ಕೆ ಸಿಲುಕಿ ಒದ್ದಾಡಿದವರೇ. ಹೀಗಾಗಿ ಒಂದ್ರೀತಿ ಚೇತನ್ ಅವರದ್ದು ಏಕಾಂಗಿ, ಎಡಬಿಡಂಗಿ ನಿಲುವು.‌ ಮೇಲ್ನೋಟಕ್ಕೆ ಚೇತನ್‌ , ಬಿಜೆಪಿ ಸೇರಿದಂತೆ ಬಲಪಂಥೀಯ ಶಕ್ತಿಗಳ ವಿರೋಧಿ ಅಂತ ಕಂಡರೂ, ಈಗ ತಾವೊಬ್ಬ ಕಾಂಗ್ರೆಸ್‌ ವಿರೋಧಿ ಅಂತಲೂ ತೋರಿಸಿಕೊಂಡಿದ್ದಾರೆ. ಈ ನಿಲುವೇ ಅವರನ್ನು ಒಬ್ಬ ಎಡಬಿಡಂಗಿ ವ್ಯಕ್ತಿಯನ್ನಾಗಿ ರೂಪಿಸುತ್ತಿದೆ. ಯಾರನ್ನು, ಹೇಗೆ, ಯಾವ ರೂಪದಲ್ಲಿ ಟೀಕಿಸಬೇಕೆನ್ನುವ ಅರಿವಿಲ್ಲದೆ ಸಿಕ್ಕ ಸಿಕ್ಕವರನ್ನು ಟೀಕಿಸುತ್ತಿದ್ದಾರೆ. ಆ ಮೂಲಕ ಚೇತನ್‌ ಒಬ್ಬ ಸಾಮಾಜಿಕ ಹೋರಾಟಗಾರ ಎನ್ನುವುದರ ಬದಲಿಗೆ, ಕಾಂಟ್ರೋವರ್ಷಿ ಹೀರೋ ಅಂತ ಗುರುತಿಸುವಂತೆ ಮಾಡಿದೆ. ಚೇತನ್‌ ಅವರಿಗೆ ಈ ಅರಿವು ಈಗಲಾದರೂ ಬಂದರೆ ಒಳ್ಳಿತು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ
Categories
ಸಿನಿ ಸುದ್ದಿ

ಬರ್ಕ್ಲಿ ಲಿರಿಕಲ್‌ ಸಾಂಗ್‌ ರಿಲೀಸ್‌ ; ಹಾಡು ಕೇಳಿದ ಮಂದಿಯಿಂದ ಮೆಚ್ಚುಗೆ

ಹಬ್ಬಗಳು ಬಂದರೆ ಸಿನಿಮಾ ಮಂದಿಗೆ ಅದೊಂದು ರೀತಿ ದೊಡ್ಡ ಸಂಭ್ರಮ. ಕಾರಣ, ತಮ್ಮ ಸಿನಿಮಾಗಳ ಪೋಸ್ಟರ್‌, ಟೀಸರ್‌, ಟ್ರೇಲರ್‌, ಸಾಂಗ್‌ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರುವಿಟ್ಟುಕೊಳ್ಳುತ್ತಾರೆ. ಆ ಸಾಲಿಗೆ “ಬರ್ಕ್ಲಿʼ ಸಿನಿಮಾ ಕೂಡ ಸೇರಿದೆ. ಹೌದು, ಗೌರಿ-ಗಣೇಶ ಹಬ್ಬಕ್ಕೆ “ಬರ್ಕ್ಲಿ” ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆಗೂ ಪಾತ್ರವಾಗಿದೆ.

ಸಂತೋಷ್ ಬಾಲರಾಜ್ ಹೀರೋ ಆಗಿರುವ ಈ ಚಿತ್ರವನ್ನು ಸುಮಂತ್ ಕ್ರಾಂತಿ ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ “ಬರ್ಕ್ಲಿ” ಚಿತ್ರದ ಲಿರಿಕಲ್ ಸಾಂಗ್ ಝೇಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಬಹದ್ದೂರ್ ಚೇತನ್ ಬರೆದಿರುವ ಈ ಹಾಡನ್ನು ಸಂಜಿತ್ ಹೆಗ್ಡೆ‌ ಹಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಇರುವ ಚಿತ್ರವನ್ನು ಸಂತೋಷ್ ಎಂಟರ್ ಪ್ರೈಸಸ್ ಬ್ಯಾನರ್‌ನಲ್ಲಿ ಆನೇಕಲ್ ಬಾಲರಾಜ್ ನಿರ್ಮಿಸಿದ್ದಾರೆ.
ಸದ್ಯ ಚಿತ್ರದ ಮೊದಲ ಪ್ರತಿ ಸಿದ್ಧವಾಗುತ್ತಿದೆ. “ಕರಿಯ”, “ಗಣಪ”, “ಕರಿಯ ೨”, ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಅವರ ನಿರ್ಮಾಣದ ಮತ್ತೊಂದು ಅದ್ದೂರಿ ಚಿತ್ರ “ಬರ್ಕ್ಲಿ‌”. ಉತ್ತಮ‌ ಮನೋರಂಜನೆಯ ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.


ಗಣಪ, ಕರಿಯ ೨ ಚಿತ್ರಗಳಲ್ಲಿ ನಟಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ಬಾಲ್ಯದಲ್ಲಿ ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್ ನಾಟೇಕರ್ ಈ ಚಿತ್ರದ ನಾಯಕಿ. ಬಹುಭಾಷ ನಟ ಚರಣರಾಜ್, ಖ್ಯಾತ ನಟಿ ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಇತರರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಶಿವಾಜಿಯಾಗಿ ಮತ್ತೆ ರಮೇಶ್‌ ಅರವಿಂದ್‌ ; ಪಾರ್ಟ್‌‌ 2 ಬರಲಿದ ಶಿವಾಜಿ ಸುರತ್ಕಲ್

ಕನ್ನಡದಲ್ಲಿ ಈಗಾಗಲೇ ಭಾಗ-2 3 ಸಿನಿಮಾಗಳಿಗೆ ಲೆಕ್ಕವಿಲ್ಲ. ಪಾರ್ಟ್‌ 1, ಪಾರ್ಟ್‌ 2 ಮತ್ತು ಪಾರ್ಟ್‌ 3 ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ಆ ಸಾಲಿಗೆ ಈಗ ರಮೇಶ್‌ ಅರವಿಂದ್‌ ಅಭಿಯದ ಸಿನಿಮಾ ಕೂಡ ಸೇರಿದೆ. ಹೌದು, ಕಳೆದ 2020ರಲ್ಲಿ ಬಿಡುಗಡೆಯಾಗಿದ್ದ “ಶಿವಾಜಿ ಸುರತ್ಕಲ್” ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಸ್ವತಃ ವಿತರಕರಿಂದಲೇ ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಿತ್ತು. ರಮೇಶ್ ಅರವಿಂದ್ ಅವರ ಈ ಚಿತ್ರವನ್ನು ಆಕಾಶ್ ಶ್ರೀವತ್ಸ ನಿರ್ದೇಶಿಸಿದ್ದರು. ರೇಖಾ ಕೆ.ಎನ್ ಮತ್ತು ಅನೂಪ್ ಅವರು ನಿರ್ಮಿಸಿದ್ದರು. ಈಗ ಅದೇ ಶೀರ್ಷಿಕೆಯಲ್ಲಿ ಭಾಗ -2 ಮಾಡ ಹೊರಟಿರುವುದು ಗೊತ್ತೇ ಇದೆ.

ಕಥೆ, ಚಿತ್ರಕಥೆ ರೆಡಿ ಮಾಡಿ ಕೊಂಡಿರುವ ಚಿತ್ರತಂಡ, ಅಕ್ಟೋಬರ್‌ನಲ್ಲಿ ಚಿತ್ರೀಕರಿಸುವ ಯೋಜನೆ ರೂಪಿಸಿದೆ.
ಶಿವಾಜಿಯಾಗಿ ರಮೇಶ್ ಅರವಿಂದ್ ಕಾಣಿಸಿಕೊಳ್ಳಲಿದ್ದು, ರಾಧಿಕಾ ನಾರಾಯಣ್, ರಘು ರಾಮನಕೊಪ್ಪ ಮತ್ತು ವಿದ್ಯಾಮೂರ್ತಿ ಭಾಗ-2ರಲ್ಲೂ ಮುಂದುವರಿಯಲಿದ್ದಾರೆ. ಉಳಿದಂತೆ ಚಿತ್ರದಲ್ಲಿ ಒಂದಷ್ಟು ಹೊಸ ಪ್ರತಿಭೆಗಳು ಕಾಣಿಸಿಕೊಳ್ಳಲಿವೆ. “ಶಿವಾಜಿ ಸುರತ್ಕಲ್” ಎರಡು ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿತ್ತು.

ಆದರೆ, ಭಾಗ-2 ಬಹುಕೋನಗಳಿರುವ ಚಿತ್ರಕಥೆ ಹೊಂದಿದ್ದು, ಪತ್ತೇದಾರಿ ಕತೆಯಾಗಿರುವುದರಿಂದ ಕೊಲೆಗಾರನ ಹುಡುಕಾಟದ ಅಂಶಗಳು ಇಲ್ಲಿ ಹೈಲೈಟ್‌ ಆಗಿರಲಿವೆ. ಚಿತ್ರಕ್ಕೆ ಗುರುಪ್ರಸಾದ್ ಕ್ಯಾಮೆರಾ ಹಿಡಿಯಲಿದ್ದು, ಉಳಿದಂತೆ ತಾಂತ್ರಿಕ ತಂಡದ ಆಯ್ಕೆ ಇಷ್ಟರಲ್ಲೇ ನಡೆಯಲಿದೆ. “ಶಿವಾಜಿ ಸುರತ್ಕಲ್‌” ಚಿತ್ರದ ಯಶಸ್ಸು ಮತ್ತು ತಮಿಳು, ಮಲಯಾಳಂ, ತೆಲುಗಿಗೆ ರೀಮೇಕ್ ರೈಟ್ಸ್ ಮಾರಾಟವಾಗಿದ್ದರಿಂದ ಚಿತ್ರತಂಡ ಮತ್ತಷ್ಟು ಉತ್ಸಾಹದಿಂದ ಅದ್ದೂರಿಯಾಗಿ ಚಿತ್ರ ಮಾಡುವ ತಯಾರಿಯಲ್ಲಿದೆ.

Categories
ಸಿನಿ ಸುದ್ದಿ

ದರ್ಶನ್ ಈಗ ‘ಕ್ರಾಂತಿ’ಕಾರಿ; ನಯಾ ‘ಕ್ರಾಂತಿ’ ಮಾಡಲು ಚಾಲೆಂಜಿಂಗ್ ಸ್ಟಾರ್ ಸಜ್ಜು ; ಪೋಸ್ಟರ್ ಟ್ರೆಂಡಿಂಗ್ ಆದ್ಮೇಲೆ ಸಿನಿಮಾ ಸುನಾಮಿ ಅಲ್ಲವೇ !

‘ಕ್ರಾಂತಿ’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಸಿನಿಮಾ. ಗಣೇಶ ಹಬ್ಬದಂದು ವಿಶೇಷವಾಗಿ ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ. ಡಿ‌55 ಟೈಟಲ್ ಏನಿರಬಹುದು ಎನ್ನುವ ದರ್ಶನ್ ಭಕ್ತಗಣದ ಮಹಾ ನಿರೀಕ್ಷೆಗೆ ಕುಂಬಳಕಾಯಿ ಹೊಡೆದಾಗಿದೆ. ಟೈಟಲ್ ಅನೌನ್ಸ್ ಆದ ಒಂದೇ ಗಂಟೆಯಲ್ಲಿ ಟ್ರೆಂಡಿಂಗ್ ಆಗಿದೆ. ಇದು‌ ದರ್ಶನ್ ಹೆಸರಿಗಿರುವ ಶಕ್ತಿ, ದಾಸನ ಅಭಿಮಾನಿ ಬಳಗಕ್ಕಿರುವ ತಾಕತ್ತು.

ಕಳೆದ ಒಂದು ತಿಂಗಳಿಂದ ದಚ್ಚು ಭಕ್ತರು ಒಂಟಿಕಾಲಿನಲ್ಲಿ ನಿಂತಿದ್ದರು. ಡಿ‌55 ಅನೌನ್ಸ್ ಆಗುವ ದಿವ್ಯಕ್ಷಣಕ್ಕಾಗಿ ಕಾತುರದಿಂದ ಕಾದಿದ್ದರು. ಆ ಸುಂದರ ಕ್ಷಣಕ್ಕೆ ಗಣೇಶನ ಹಬ್ಬ ಸಾಕ್ಷಿಯಾಗಿದೆ. ಗಜಾನನ ಆಶೀರ್ವಾದದೊಂದಿಗೆ ‘ ಕ್ರಾಂತಿ’ಗೆ ಕಿಕ್ ಸ್ಟಾರ್ಟ್ ಸಿಕ್ಕಿ
ದೆ. ಇಂಟ್ರೆಸ್ಟಿಂಗ್ ಅಂದರೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಕ್ರಾಂತಿ ಆಗ್ತಿರುವುದು.

ಬಜಾರ್ ನಲ್ಲಿ, ಬೆಳ್ಳಿತೆರೆ ಅಂಗಳದಲ್ಲಿ, ಬಾಕ್ಸ್ ಆಫೀಸ್ ಅಡ್ಡದಲ್ಲಿ ಚಾಲೆಂಜಿಂಗ್ ಚಕ್ರವರ್ತಿಯ ಸಿನಿಮಾಗಳು ಎಷ್ಟೆಲ್ಲಾ ಕ್ರಾಂತಿ ಮಾಡಿವೆ ಎನ್ನುವುದು ಇಡೀ ಕರ್ನಾಟಕ ಮಾತ್ರವಲ್ಲ ಪಕ್ಕದ ರಾಜ್ಯವೂ ಕಣ್ಣರಳಿಸಿ‌ ನೋಡಿದೆ. ದಾಸ ಬರ್ತಾವ್ನೆ ಅಂದಾಗ ಬೆಳ್ಳಿತೆರೆ ಕುಣಿಯುತ್ತೆ, ಬಾಕ್ಸ್ ಆಫೀಸ್ ಪಟಾಕಿ ಕೇಕೆ ಹಾಕುತ್ತೆ. ಅದಕ್ಕೆ ಕಾರಣ ಚಿತ್ರಮಂದಿರ ಹೌಸ್ ಫುಲ್ ಮಾಡಿ, ಬಾಕ್ಸ್ ಆಫೀಸ್ ಡಬ್ಬದಲ್ಲಿ ಕೋಟಿಕೋಟಿ ಕುಣಿಯುವಂತೆ ಕ್ರಾಂತಿ ಮಾಡುವ ಪವರ್ ಚಕ್ರವರ್ತಿಗಿರುವುದಕ್ಕೆ. ಅಪ್ ಕೋರ್ಸ್ ಇದೆ. ಆ ಪವರ್ ಇರುವುದಕ್ಕೇನೇ ಬಾಕ್ಸ್ ಆಫೀಸ್ ಸುಲ್ತಾನ್ ಪಟ್ಟ ಸಿಕ್ಕಿರುವುದು.

ಅಷ್ಟಕ್ಕೂ, ಈ ಭಾರಿ ‘ಕ್ರಾಂತಿ’ ಟೈಟಲ್ ಇಟ್ಟುಕೊಂಡೇ ಫೀಲ್ಡಿಗಿಳಿಯುತ್ತಿರುವ ದರ್ಶನ್, ಯಾವ ಕ್ಷೇತ್ರದಲ್ಲಿ ರೆವಲ್ಯೂಷನ್ ತರುತ್ತಾರೆ ಎನ್ನುವ ಕೂತೂಹಲ ಹೆಚ್ಚಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಕ್ರಾಂತಿಯಾಗಬಹುದಾ ಎನ್ನುವ ನಿರೀಕ್ಷೆಯ ಜೊತೆಗೆ
ಫ್ರೀಡಂ ಫೈಟರ್ ಆಗಿ ತೊಡೆತಟ್ಟಲಿದ್ದಾರಾ ಯಜಮಾನ? ಈ ಮಹಾನಿರೀಕ್ಷೆಯ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಚಿತ್ರತಂಡವೇ ಉತ್ತರ ನೀಡಲಿದೆ.

ಕುಲಕೋಟಿ ಅಭಿಮಾನಿಗಳ ಒಡೆಯನನ್ನ ಕ್ರಾಂತಿಯ ಕಣಕ್ಕೆ ಇಳಿಸ್ತಿರುವುದು ಯಜಮಾನ ಸಿನಿಮಾ ತಂಡ. ನಿರ್ಮಾಪಕಿ ಶೈಲಜನಾಗ್ ಹಾಗೂ ಬಿ ಸುರೇಶ್ ಅವರು ದರ್ಶನ್ ಆಗಿದ್ದಾಗ್ಲೀ ಈ‌ ಭಾರಿ ಕ್ರಾಂತಿ ಮಾಡೆಬಿಡೋಣ ಅಂತ ಸಜ್ಜಾಗಿದ್ದಾರೆ. ಸಾರಥಿಯ ಜೊತೆಜೊತೆಗೆ ಹೆಜ್ಜೆಹಾಕುತ್ತಿರುವ ವಿ ಹರಿಕೃಷ್ಣ ‘ ಕ್ರಾಂತಿ’ ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಬಹುಭಾಷೆಯಲ್ಲಿ ಕ್ರಾಂತಿ ಮಾಡೋದಕ್ಕೆ ಹೊರಟಿರುವ ಫಿಲ್ಮ್ ಟೀಮ್ ಗಣೇಶನ ಹಬ್ಬಕ್ಕೆ ಟೈಟಲ್ ಅನೌನ್ಸ್ ಮಾಡಿ ಫ್ಯಾನ್ಸ್ ಗೆ ಹಬ್ಬದೂಟ ಹಾಕಿಸಿದೆ. ಯಜಮಾನ ತಂಡ ಮತ್ತೆ ಒಂದಾಗಿರುವುದಕ್ಕೆ ದಾಸನ ಭಕ್ತರಲ್ಲಿ ಮಾತ್ರವಲ್ಲ ಇಡೀ ಗಾಂಧಿನಗರದ ಮಂದಿಯಲ್ಲಿ ನಿರೀಕ್ಷೆ ಮುಗಿಲೆತ್ತರಕ್ಕೇರಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Categories
ಸಿನಿ ಸುದ್ದಿ

ನಾನೆಲ್ಲೂ ಓಡಿ ಹೋಗಿಲ್ಲ; ಓಡಿ ಹೋಗಲ್ಲ; ಮಾಧ್ಯಮ ಮುಂದೆ ಆಂಕರ್ ಅನುಶ್ರೀ ಪ್ರತ್ಯಕ್ಷ!


ಸ್ಯಾಂಡಲ್‌ವುಡ್ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎ2 ಆರೋಪಿ ಕಿಶೋರ್ ಶೆಟ್ಟಿ ಹೇಳಿಕೆಯನ್ನ ಆಧರಿಸಿ ಮಂಗಳೂರು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆಂದು ಸುದ್ದಿಯಾಗಿದೆ. ಕಿಶೋರ್ ಶೆಟ್ಟಿ ಅನುಶ್ರೀ ವಿರುದ್ದ ಹೇಳಿಕೆ ನೀಡಿದ್ದಾರೆಂದು ಮೊದಲು ಸುದ್ದಿಯಾಯ್ತು. ಕೊನೆಗೆ ಕಿಶೋರ್ ಶೆಟ್ಟಿ ನಾನು ಅನುಶ್ರೀ ವಿರುದ್ದ ಹೇಳಿಕೆ ನೀಡಿಲ್ಲವೆಂದು
ಡ್ರಗ್ಸ್ ಪಾರ್ಟಿ ಮಾಡಿಲ್ಲವೆಂದು ಕ್ಲ್ಯಾರಿಟಿ ಕೊಟ್ಟರು. ಅಷ್ಟಕ್ಕೂ, ಇದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು? ಎನ್ನುವುದು ಗೊಂದಲದ ಗೂಡಾಗಿದೆ. ಈ ನಡುವೆ ಕಿಶೋರ್ ಹೇಳಿಕೆ ಅನುಶ್ರೀಗೆ ಮುಳುವಾಗ್ಬೋದು, ನಶೆಯ ಸುಳಿಯಲ್ಲಿ ಸಿಲುಕಿ ಲಾಕ್ ಆಗ್ಬೋದು ಎನ್ನುವಂತಹ ಮಾತುಗಳು ಕೇಳಿಬಂದವು. ಎಲ್ಲಿ ಲಾಕ್ ಆಗ್ತೀನೋ ಎಂಬ ಭಯದಿಂದ ಆಂಕರ್ ಕಮ್ ನಟಿ ಅನುಶ್ರೀ ತಲೆಮರೆಸಿಕೊಂಡಿದ್ದಾರೆ, ಮುಂಬೈನಲ್ಲಿ ಅಡಗಿ ಕುಳಿತಿದ್ದಾರೆ ಅಂತೆಲ್ಲಾ ಚರ್ಚೆಯಾಯ್ತು. ಇದೆಲ್ಲದಕ್ಕೂ ಸ್ವತಃ ಅನುಶ್ರೀ ಫುಲ್ ಸ್ಟಾಪ್ ಹಾಕಿದ್ದಾರೆ. ವೃತ್ತಿ ನಿಮಿತ್ತ ಮುಂಬೈಗೆ ಹೋಗಿದ್ದು ನಿಜ ಆದರೆ ನಾನು ಓಡಿಹೋಗಿಲ್ಲ. ಎಂತಹದ್ದೇ ಸಂದರ್ಭ ಬಂದರೂ ಕೂಡ ಎದುರಿಸಿ ನಿಲ್ತೇನೆ ಹೊರೆತು ಈ ಕನ್ನಡ ನೆಲ ಬಿಟ್ಟು ಓಡಿಹೋಗೋದಿಲ್ಲ ಎಂದಿದ್ದಾರೆ.

ಅಷ್ಟಕ್ಕೂ, ಕಳೆದ ವರ್ಷ ಮಂಗಳೂರು ಸಿಸಿಬಿ ಪೊಲೀಸರು ನನ್ನ ಕರೆಸಿ ತನಿಖೆ ಮಾಡಿದ್ದು ನಾನು ಆರೋಪಿ ಅಥವಾ ಅಪರಾಧಿ ಎನ್ನುವ ಕಾರಣಕ್ಕೆ ಅಲ್ಲ. ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ತರುಣ್ ಇಬ್ಬರು ಕೂಡ ನನ್ನ ಡ್ಯಾನ್ಸ್ ರಿಯಾಲಿಟಿ ಶೋಗೆ ಕೊರಿಯಾಗ್ರಫಿ ಮಾಡಿದ್ದರು. ಹೀಗಾಗಿ ನನ್ನ ಕರೆಸಿ ತನಿಖೆ ನಡೆಸಿದ್ದರು. ನಾನು ತನಿಖೆಗೆ ಸ್ಪಂಧಿಸಿ ಅವರು ಏನೆಲ್ಲಾ ಪ್ರಶ್ನೆಗಳನ್ನ ಕೇಳಿದ್ದರೋ ಅದೆಲ್ಲದಕ್ಕೂ ಉತ್ತರಿಸಿ ಬಂದಿದ್ದೆ. ಈಗ, ಚಾರ್ಜ್ಶೀಟ್‌ನಲ್ಲಿ ನನ್ನ ಹೆಸರು ಕೇಳಿಬಂದಿದೆ ಎನ್ನುವ ಸುದ್ದಿ ಹರಿದಾಡ್ತಿದೆ. ಒಂದ್ವೇಳೆ ನನ್ನ ಹೆಸರು ಚಾರ್ಜ್ ಶೀಟ್‌ನಲ್ಲಿದ್ದು, ಆರೋಪಿ ಕಿಶೋರ್ ಶೆಟ್ಟಿ ನನ್ನ ವಿರುದ್ದ ಹೇಳಿಕೆ ನೀಡಿದ್ದರೆ, ಪೊಲೀಸರು ತನಿಖೆಗೆ ಕರೆದರೆ ನಾನು ಹಾಜರಾಗ್ತೀನಿ ಮತ್ತು ತನಿಖೆಗೆ ಸ್ಪಂಧಿಸ್ತೇನೆ ಎಂದಿದ್ದಾರೆ.

ನನ್ನ ವಿರುದ್ದ ನೂರು ಜನ ನೂರು ಮಾತನಾಡ್ತಿದ್ದಾರೆ ಮತ್ತು ಆರೋಪ ಮಾಡ್ತಿದ್ದಾರೆ. ಅವರೆಲ್ಲರ ಮಾತಿಗೆ ಹಾಗೂ ಆರೋಪಕ್ಕೆ ನಾನು ಉತ್ತರ ಕೊಡುವುದಿಲ್ಲ. ಕಾನೂನಿದೆ, ಪೊಲೀಸರು ತನಿಖೆ ಮಾಡ್ತಿದ್ದಾರೆ ಮಾಡಲಿ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಹೀಗಾಗಿ ನಾನು ಕಾನೂನಿಗೆ ತಲೆಬಾಗ್ತೀನಿ ಎಂದಿದ್ದಾರೆ. ಅಷ್ಟೇ ಅಲ್ಲದೇ ಬೆಂಗಳೂರಲ್ಲಿ ೪ ಕೋಟಿ ಮನೆಯಿದೆ, ಮಂಗಳೂರಲ್ಲಿ ೧೨ ಕೋಟಿ ಮನೆಯಿದೆ ಅಂತೆಲ್ಲಾ ಹೇಳಿಕೆ ಕೊಡ್ತಿದ್ದಾರೆ. ಕಳೆದ ೩ ವರ್ಷದಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಿದ್ದೇನೆ. ಬ್ಯಾಂಕ್‌ನಲ್ಲಿ ಲೋನ್ ಪಡೆದು ಮಂಗಳೂರಿನಲ್ಲಿ ಮನೆ ಕಟ್ಟಿದ್ದೇನೆ. ಕಷ್ಟಪಟ್ಟು ಕೆಲಸ ಮಾಡಿ ದುಡಿದು ಬದುಕುತ್ತಿದ್ದೇನೆ. ಯಾವ ಪ್ರಭಾವಿಗಳ ಸಹಾಯವೂ ನನಗಿಲ್ಲ. ಯಾರ ಸಹಾಯವೂ ನನಗೆ ಬೇಕಾಗಿಲ್ಲ. ಏನೇ ಬಂದರೂ ಒಬ್ಬಳೇ ಎದುರಿಸುತ್ತೇನೆ. ಬೆಂಗಳೂರಿಗೆ ಒಬ್ಬಳೇ ಬಂದಿದ್ದೇನೆ, ಬದುಕು ಕಟ್ಟಿಕೊಂಡಿದ್ದೇನೆ. ಹಾಗೆಯೇ ಒಬ್ಬಳೇ ಮುಂದೆ ಸಾಗುತ್ತೇನೆ ಎಂದು ಹೆಮ್ಮೆಯಿಂದ ಮಾತನಾಡಿದ್ದಾರೆ ಆಂಕರ್ ಕಮ್ ನಟಿ ಅನುಶ್ರೀಯವರು

Categories
ಸಿನಿ ಸುದ್ದಿ

ವಿಕ್ರಾಂತ್ ರೋಣ ಗಣೇಶನ ಗ್ರಾಂಡ್‌ ಎಂಟ್ರಿ : ಗನ್ ಹಿಡಿದ ಗಣೇಶ – ಬಾರ್ಸಿ ತಮಟೆ !

ನಾಡಿನಾದ್ಯಂತ ಗೌರಿ-ಗಣೇಶ ಸಂಭ್ರಾಮಚರಣೆ ಜೋರಾಗಿದೆ. ತರಹೇವಾರಿ ಗೌರಿ-ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ, ಜನರನ್ನ ಭಾರೀ ಅಟ್ರ್ಯಾಕ್ಟ್‌ ಮಾಡ್ತಿರುವುದು ವಿಕ್ರಾಂತ್ ರೋಣ ಗಣೇಶ. ಯಸ್, ಈ ಭಾರಿ ವಿಕ್ರಾಂತ್ ರೋಣ ಗಣೇಶನ ಹವಾ ಜೋರಾಗಿದೆ. ಸುದೀಪಿಯನ್ಸ್ ಮಾತ್ರವಲ್ಲ ಸಾಮಾನ್ಯರು ಕೂಡ ವಿಕ್ರಾಂತ್ ರೋಣ ಗಣೇಶನಿಗಾಗಿ ಮುಗಿಬೀಳ್ತಿದ್ದಾರೆ. ಬೇಡಿಕೆ ಹೆಚ್ಚಿಸಿಕೊಂಡು ಟ್ರೆಂಡ್ ಸೃಷ್ಟಿಮಾಡುತ್ತಿರುವ `ವಿಕ್ರಾಂತ್ ರೋಣ ಗಣೇಶನ’ ಸೂಪರ್ಬ್ ಸ್ಟೋರಿ ಇಲ್ಲಿದೆ ಹ್ಯಾವ್ ಎ ಲುಕ್.

ಮಾಯಲೋಕದಲ್ಲಿ ವಿಕ್ರಾಂತ್ ರೋಣ ಹವಾ ಹೆಂಗೈತಿ ಎನ್ನುವುದು ಬಹುಶ: ನಿಮ್ಮೆಲ್ಲರಿಗೂ ಗೊತ್ತಿದೆ. ಬುರ್ಜ್ ಖಲೀಫಾವನ್ನು ಮೆಟ್ಟಿನಿಂತು ನಯಾ ಮೇನಿಯಾ ಸೃಷ್ಟಿಸಿಕೊಂಡಿರುವ ಅಭಿನಯ ಚಕ್ರವರ್ತಿ ಅಭಿನಯದ ʼವಿಕ್ರಾಂತ್ ರೋಣ’, ಗೌರಿ-ಗಣೇಶ ಹಬ್ಬದಂದು ಹೊಸದೊಂದು ಹವಾ ಶುರುವಿಟ್ಟುಕೊಂಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಪಡೆದು ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಅದಕ್ಕೆ ಕಾರಣ ವಿಕ್ರಾಂತ್ ರೋಣ ಗಣೇಶ’ ಮೂರ್ತಿ ಎನ್ನುವುದು ವಿಶೇಷ ಪ್ರತಿವರ್ಷ ಗೌರಿ-ಗಣೇಶ ಹಬ್ಬಕ್ಕೆ ಸ್ಟಾರ್‌ನಟರುಗಳ ಅವತಾರವೆತ್ತಿ ಗಣೇಶಪ್ಪ ಗ್ರಾಂಡ್ ಎಂಟ್ರಿಕೊಡ್ತಾನೆ. ಮಾರುಕಟ್ಟೆಯಲ್ಲಿ ನಂದೇ ಹವಾ ಅಂತ ತಿಂಗಳಾನುಗಟ್ಟಲ್ಲೇ ಮೆರೆಯುತ್ತಾನೆ. ಸ್ಟಾರ್‌ನಟರುಗಳ ಅಭಿಮಾನಿಗಳನ್ನು ಮಾತ್ರವಲ್ಲ ನಾಡಿನ ಜನರ ಹೃದಯ ಗೆದ್ದು ಅವರುಗಳ ಮನೆಯಲ್ಲಿ ಹೋಗಿ ಚಕ್ಕಮಕ್ಕಳ ಹಾಕಿಕೊಂಡು ಕೂತುಬಿಡ್ತಾನೆ. ಅದರಂತೇ, ಈ ವರ್ಷವಿಕ್ರಾಂತ್ ರೋಣ ಗಣೇಶ’ ಅಖಾಡದಲ್ಲಿ ಹವಾ ಎಬ್ಬಿಸುತ್ತಿದ್ದಾನೆ. ಕಿಚ್ಚನಂತೆ ಹ್ಯಾಟ್ ಹಾಕಿಕೊಂಡು, ಕೈಯಲ್ಲಿ ಗನ್ ಹಿಡಿದುಕೊಂಡು ಮ್ಯಾಸೀವ್ ಸೀಟ್‌ನಲ್ಲಿ ಕುಳಿತಿರುವ ಗಣೇಶನನ್ನ ನೋಡಿ ಕಿಚ್ಚ ಫ್ಯಾನ್ಸ್ ಮಾತ್ರವಲ್ಲ ಸಕಲರೂ ಕೂಡ ಫಿದಾ ಆಗಿದ್ದಾರೆ. ವಿಕ್ರಾಂತ್ ರೋಣ ಗಣೇಶನನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ.

ಅಷ್ಟಕ್ಕೂ, ವಿಕ್ರಾಂತ್ ರೋಣ ಗಣೇಶನ ಕಲ್ಪನೆ ಮೂಡಿದ್ದು ಮತ್ತು ಮಾರುಕಟ್ಟೆಗೆ ತರಬೇಕು ಎನ್ನುವ ಕನಸು ಕಂಡಿದ್ದು ಮಾಣಿಕ್ಯನ ಅಪ್ಪಟ ಅಭಿಮಾನಿ ಯಶ್ವಂತ್ ಶೆಟ್ಟಿ. ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಎದುರುನೋಡ್ತಿರುವ ಯಶ್ವಂತ್, ಭಾರತೀಯ ಚಿತ್ರರಂಗದಲ್ಲಿ ಹವಾ ಎಬ್ಬಿಸುವವಿಕ್ರಾಂತ್ ರೋಣ’ ಲುಕ್‌ನ ನೋಡಿ ಪ್ರೇರಣೆಗೊಂಡರು. ಈ ಭಾರಿ ಗೌರಿ-ಗಣೇಶ ಹಬ್ಬಕ್ಕೆ ಕಿಚ್ಚನ ಅಭಿಮಾನಿಯಾಗಿ ಕಾಣಿಕೆ ಕೊಡಬೇಕು ಎಂದು ನಿರ್ಧರಿಸಿ ವರದನಾಯಕನ’ ಮೂರ್ತಿ ಕೆತ್ತನೆಯ ಕೆಲಸದಲ್ಲಿ ಬ್ಯುಸಿಯಾದರು. ಸುಮಾರು ಎರಡು ತಿಂಗಳು ಟೈಮ್ ತೆಗೆದುಕೊಂಡುವಿಕ್ರಾಂತ್ ರೋಣ ಗಣೇಶಪ್ಪನಿಗೆ’ ಜೀವ ತುಂಬಿದರು. ಆನ್‌ಲೈನ್‌ನಲ್ಲಿ ಹಾಗೆಯೇ ಪೋಸ್ಟ್ ಮಾಡಿದರು. ಇದಾಗಿ, ಕೆಲವೇ ನಿಮಿಷಗಳಲ್ಲಿ ಟ್ರೆಂಡ್‌ಸೆಟ್ ಆಗಿದೆ ಜೊತೆಗೆ ಸುದೀಪಿಯನ್ಸ್ ಕಡೆಯಿಂದ ಶುಭಾಷಯದ ಮಹಾಪೂರವು ಹರಿದು ಹೋಗಿದೆ.

ವಿಕ್ರಾಂತ್ ರೋಣ’ ಗಣೇಶನನ್ನು ಕೆತ್ತನೆ ಮಾಡಿ ನಿಲ್ಲಿಸಿರುವ ಯಶ್ವಂತ್‌ಗೆ ಬೇಜಾನ್ ಆರ್ಡರ್ ಬುಕ್ ಆಗಿದೆ. ಮಾಣಿಕ್ಯನ ಅಭಿಮಾನಿಗಳು ಮಾತ್ರವಲ್ಲ ಬೇರೆಯವರು ಕೂಡವಿಕ್ರಾಂತ್ ರೋಣ ಗಣೇಶನನ್ನು ಬುಕ್ ಮಾಡಿಕೊಂಡು ಮನೆಗೆ ಕೊಂಡೊಯ್ದಿದ್ದಾರಂತೆ. ಈ ಬಗ್ಗೆ ಖಾಸಗಿ ಪತ್ರಿಕೆಗೆ ಯಶ್ವಂತ್ ಸಂದರ್ಶನ ನೀಡಿದ್ದು ಖುಷಿ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈಗೇನಿದ್ರೂ ವಿಕ್ರಾಂತ್ ರೋಣನದ್ದೇ ಕಾರುಬಾರು. `ಊರಲ್ಲೆಲ್ಲಾ ಒಬ್ಬರದ್ದೇ ಸೌಂಡು ಅವರೇ ವಿಕ್ರಾಂತ್ ರೋಣ’ ಅಂತ ಶ್ರೀಲಂಕನ್ ಬ್ಯೂಟಿ ಹೇಳಿದ್ದೇ ಬಂತು ಸೌಂಡ್ ಇನ್ನೂ ಜಾಸ್ತಿಯಾಗಿದೆ. ಅನುಪ್ ಭಂಡಾರಿ ನಿರ್ದೇಶನದ-ಕಿಚ್ಚ ಅಭಿನಯದ- ಜಾಕ್‌ಮಂಜು ನಿರ್ಮಾಣದ ಈ ಮಹಾಮೂವೀಯ ಮೇಲಿನ ನಿರೀಕ್ಷೆ ಗಳಿಗಳಿಗೆಗೂ ಹೆಚ್ಚುತ್ತಲೇ ಇದೆ. ಡೆಡ್ಸ್ ಆಂಥಮ್ ಸಾಂಗ್ ಸುನಾಮಿ ಎಬ್ಬಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಜಾಕ್ವೆಲಿನ್ ಡಬ್ಬಿಂಗ್ ಮಾಡೋದಕ್ಕೆ ಮತ್ತೆ ಬೆಂಗಳೂರಿಗೆ ಬರಲಿದ್ದಾರೆ. ಅಲ್ಲಿವರೆಗೂ ಕಿಚ್ಚನಷ್ಟೇ ತಾಳ್ಮೆಯಿಂದ ನೀವೆಲ್ಲರೂ ಕಾಯ್ರಿ.

  • ಎಂಟರ್‌ಟೈನ್ಮೆಂಟ್‌, ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಗೌರಿ ಗಣೇಶರಿಗೂ ಉಂಟು , ಡಿಎನ್‌ ಎ ನಂಟು : ನಿರ್ದೇಶಕ ಪ್ರಕಾಶರಾಜ್‌ ಮೇಹು ಕಥೆ ಬಿಚ್ಚಿದಾಗಲೇ ಗೊತ್ತಾಗಲಿದೆ ಅದರ ಗುಟ್ಟು !

ಡಿಎನ್‌ಎ ಅಂದ್ರೆ ನಮಗೆಲ್ಲ ಗೊತ್ತಿರೋದು ಜೀನ್ಸ್‌ ಅಥವಾ ವಂಶವಾಹಿ ಅಂತ. ಆದ್ರೆ ನಿರ್ದೇಶಕ ಪ್ರಕಾಶ್‌ರಾಜಮೇಹುʼ ಡಿಎನ್‌ಎʼ ಎನ್ನುವ ಚಿತ್ರದ ಶೀರ್ಷಿಕೆಗೆ ಧೃವ ನಕ್ಷತ್ರ ಆಕಾಶ ಅಂತ ಸಬ್‌ ಟೈಟಲ್‌ ಇಟ್ಕೊಂಡು ಪ್ರೇಕ್ಷಕರಿಗೆ ಏನನ್ನು ಹೇಳೋದಿಕ್ಕೆ ಪ್ರಯತ್ನಿಸಿದ್ದಾರೋ ಗೊತ್ತಿಲ್ಲ, ಆದರೆ ಚಿತ್ರದ ಶೀರ್ಷಿಕೆಗೆ ತಕ್ಕಂತೆ ಇದೊಂದು ವಂಶವಾಹಿಗೆ ಕನೆಕ್ಟ್‌ ಆಗುವ ಕಥೆ ಅನ್ನೋದು ಅಷ್ಟೇ ಸತ್ಯ. ಹಾಗಾಗಿಯೇ ತಮ್ಮ ಚಿತ್ರದ ಕಥಾ ಹೂರಣಕ್ಕೆ ಕನೆಕ್ಟ್‌ ಆಗುವ ಹಾಗೆ ʼಸಂಬಂಜ ಅನ್ನೋದು ದೊಡದು ಕನಾ..ʼ ಎನ್ನುವ ಮಾತನ್ನು ಹೈಲೈಟ್‌ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕೆ ಈಗ ಗೌರಿ, ಗಣೇಶ ಹಬ್ಬದ ಸಂಭ್ರಮದಲ್ಲಿ ಚಿತ್ರ ಪ್ರೇಮಿಗಳಿಗೆ ಶುಭಾಶಯ ಕೋರಿರುವ ಚಿತ್ರ ತಂಡವು ಗೌರಿ-ಗಣೇಶನಿಗೂ ಇದೆ ಡಿಎನ್‌ ಎ ನಂಟು ಎಂಬುದಾಗಿ ಕಥೆಯ ಎಳೆಯೊಂದನ್ನು ರಿವೀಲ್‌ ಮಾಡಿದೆ.

ʼ ಇಬ್ಬರು ಗೌರಿಯರು, ಇಬ್ಬರು ಗಣೇಶಂದಿರು ಮತ್ತು ಇಬ್ಬರು ಶಿವನ ನಡುವಿನ ಭಾವನಾತ್ಮಕ ಸಂಬಂಧದ ಕಥೆಯೇ ಡಿಎನ್‌ ಎ. ಎಲ್ಲಾ ಕುಟುಂಬಗಳಿಗೂ ಕನೆಕ್ಟ್‌ ಆಗುತ್ತೆ. ಹಾಗೆಯೇ ಗೌರಿ-ಗಣೇಶ ಹಬ್ಬಕ್ಕೂ ಅದರ ಕನೆಕ್ಟ್‌ ಇದೆ. ಅದು ಹೇಗೆ ಅನ್ನೋದು ಸಿನಿಮಾ ನೋಡಿದಾಗಲೇ ಗೊತ್ತಾಗಲಿದೆ. ಸಂಬಂಜ ಅನ್ನೋದು ದೊಡದು ಕನಾ ಎನ್ನುವ ಸಂದೇಶ ಸಾರುವ ಕಥಾ ಹಂದರೊಂದಿಗೆ ಸಧಬಿರುಚಿಯ ಕೌಟುಂಬಿಕ ಚಿತ್ರ ವಿದು ಎಂದಿದ್ದಾರೆ ನಿರ್ದೇಶಕ ಪ್ರಕಾಶರಾಜ್‌ ಮೇಹು.ಮಾತೃಶ್ರೀ ಎಂಟರ್​ ಪ್ರೈಸಸ್​ ಬ್ಯಾನರ್​ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿರ್ಮಾಪಕ ಎಂ. ಮೈಲಾರಿ ಬಂಡವಾಳ ಹಾಕಿದ್ದು, ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ಎಸ್ಟರ್ ನರೋನ್ಹಾ, ಯುಮನಾ, ಮಾಸ್ಟರ್ ಆನಂದ್ ಪುತ್ರ ಮಾಸ್ಟರ್​ ಕೃಷ್ಣ ಚೈತನ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಒಂದ್ರೀತಿ ಇದು ಮಲ್ಟಿಸ್ಟಾರ್‌ ಸಿನಿಮಾ. ಅನೇಕ ಅನುಭವಿ ಕಲಾವಿದರ ಸಮಾಗಮ ಇಲ್ಲಿದೆ. ಹಾಗೆಯೇ ಇದು ಬಿಗ್‌ ಬಜೆಟ್‌ ಸಿನಿಮಾವೂ ಹೌದು. ಕಥೆಗೆ ತಕ್ಕಂತೆ ನಿರ್ಮಾಪಕರು ಅದ್ದೂರಿ ವೆಚ್ಚದಲ್ಲಿಯೇ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಅದರ ಛಾಯೆ ಚಿತ್ರದ ಪ್ರಮೋಷನಲ್‌ ಹಾಡಿನಲ್ಲಿ ಅನಾವರಣ ಗೊಂಡಿದೆ.

ಆ ಮೂಲಕ ಸೋಷಲ್‌ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಇಷ್ಟೊತ್ತಿಗೆ ಈ ಚಿತ್ರ ತೆರೆಗೆ ಬಂದು ಹಳೇ ಮಾತೇ ಆಗುತ್ತಿತ್ತೇನೋ. ಆದರೆ ಕೊರೋನಾ ಕಾರಣಕ್ಕೆ ತಡವಾಗಿ ತೆರೆ ಕಾಣಲಿದೆ. ತಡವಾದರೂ, ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಒಂದೊಳ್ಳೆಯ ಕಥಾ ಹಂದರದ ಮೂಲಕ ಭಾವನೆಗಳ ಕದ ತಟ್ಟಲಿದೆ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್‌ ರಾಜ ಮೇಹು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ
Categories
ಸಿನಿ ಸುದ್ದಿ

ಗಡಿದಾಟಿದ ಲೂಸಿಯಾ ಹೀರೋ; ಮೋಹಕತಾರೆ ರಮ್ಯಾ ಹೇಳಿದ್ದಿಷ್ಟು ?

ಗಂಧದಗುಡಿಯ ಕಲಾವಿದರು ಒಬ್ಬೊಬ್ಬರಾಗಿ ಗಡಿದಾಟುತ್ತಿದ್ದಾರೆ. ಪರಭಾಷಾ ಅಂಗಳಕ್ಕೆ ಲಗ್ಗೆ ಇಟ್ಟು ಹವಾ ಎಬ್ಬಿಸುತ್ತಿದ್ದಾರೆ. ಅಖಾಡ ನಿಮ್ಮದಾದರೇನಂತೆ ಆಟ ನಮ್ದು ಅಂತ ತೊಡೆತಟ್ಟಿ ಫೀಲ್ಡ್‌ ಗೆ ಇಳಿಯುತ್ತಿರುವ ನಮ್ಮ ಚಂದನವನದ ಸ್ಟಾರ್ ಹೀರೋಗಳು ಪರರ ಅಖಾಡದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಅದೇ ಸಾಲಿನಲ್ಲಿ ಈಗ ಲೂಸಿಯಾ ಹೀರೋ ಸತೀಶ್ ನಿನಾಸಂ ಸರದಿ.

ಸತೀಶ್ ನಿನಾಸಂ ಸ್ಯಾಂಡಲ್‌ವುಡ್‌ನ ಒನ್ ಆಫ್ ದಿ ಫೈನೆಸ್ಟ್ ಆಕ್ಟರ್. ಗಾಡ್‌ಫಾದರ್‌ಗಳಿಲ್ಲದೇ ಗಂಧದಗುಡಿಗೆ ಕಾಲಿಟ್ಟ ಮಂಡ್ಯಹೈದ ಹೀರೋ ಪಟ್ಟಕ್ಕೇರಿದ್ದು ಇತಿಹಾಸವೇ ಸರೀ. ರಂಗಭೂಮಿಯಲ್ಲಿ ಪಳಗಿ ಥಿಯೇಟರ್‌ನಲ್ಲಿ ಕೆಲಸ ಮಾಡಿಕೊಂಡು ಬಣ್ಣದ ನಂಟನ್ನು ಬೆಸೆದುಕೊಂಡ ಸತೀಶ್ ನಿನಾಸಂ, ಸೀರಿಯಲ್‌ಗಳಲ್ಲಿ ಅಭಿನಯಿಸುತ್ತಾ, ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಾ `ಲೂಸಿಯಾ’ ಮೂಲಕ ಹೀರೋ ಆದರು. ಅಲ್ಲಿಂದ ಶುರುವಾದ ಹೀರೋಯಿಸಂ ಇವತ್ತು ಕ್ವಾಟ್ಲೇ ಹೀರೋನಾ ಗಡಿದಾಟಿಸಿದೆ. ತಮಿಳು ಚಿತ್ರರಂಗದಲ್ಲಿ ನಾಯಕನಟನಾಗಿ ಮೆರೆಯುವ ಗೋಲ್ಡನ್ ಚಾನ್ಸ್ ಸಿಕ್ಕಿದೆ.

ಯಸ್, ಲೂಸಿಯಾ ಹೀರೋ ಗಡಿದಾಟಿದ್ದಾರೆ. `ಪಗೈವುನುಕು ಅರುಳ್ವಾಯ್’ ಚಿತ್ರದ ಮೂಲಕ ಕಾಲಿವುಡ್‌ಗೆ ಗ್ರಾಂಡ್ ಎಂಟ್ರಿಕೊಟ್ಟಿದ್ದಾರೆ. ತಮಿಳಿನ ಪ್ರಖ್ಯಾತ ನಟ ನಿರ್ದೇಶಕ ಸಮುದ್ರಖಣಿಯವರು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸ್ಯಾಂಡಲ್‌ವುಡ್ ಹೀರೋನಾ ವೆಲ್‌ಕಮ್ ಮಾಡಿಕೊಂಡಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ, ಫಾರಿನ್‌ನಲ್ಲೆಲ್ಲೋ ಸೆಟಲ್ ಆಗಿರುವ ಮೋಹಕತಾರೆ ರಮ್ಯಾ ಮೇಡಂ, ಸತೀಶ್ ಅಭಿನಯದ ಚೊಚ್ಚಲ ತಮಿಳು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭಾಷಯ ಕೋರಿರುವುದು.

ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರದಿಂದ ಅಂತರ ಕಾಯ್ದುಕೊಂಡು ಬಿಂದಾಸ್ ಲೈಫ್ ಲೀಡ್ ಮಾಡ್ತಿರುವ ಗೋಲ್ಡನ್ ಕ್ವೀನ್, ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಇದೀಗ, ಅದೇ ಮೀಡಿಯಾನ ಬಳಸಿಕೊಂಡು ನಮ್ಮ ಹೀರೋ ಹೊಸ ಸಾಹಸಕ್ಕೆ ಪ್ಲಸ್ ಸಾಧನೆಗೆ ಸಾಥ್ ಕೊಟ್ಟಿದ್ದಾರೆ. ನಟ ಸತೀಶ್ ನಿನಾಸಂ ಪಾತ್ರ ಪರಿಚಯದ ಪೋಸ್ಟರ್ ರಿಲೀಸ್ ಮಾಡಿಕೊಟ್ಟು ಲೂಸಿಯಾ ಹೀರೋಗೆ ಹೊಸ ಹುರುಪು ತುಂಬಿದ್ದಾರೆ. ದಿಲ್ಲಿ ಮೇಡಂ ಸಾಥ್- ಶುಭಾಶಯ ಗಿಟ್ಟಿಸಿಕೊಂಡಿರುವ ಬ್ಯೂಟಿಫುಲ್ ಮನಸ್ಸಿನ ನಾಯಕ ಕಾಲಿವುಡ್ ಅಂಗಳದಲ್ಲೂ ಸುನಾಮಿ ಎಬ್ಬಿಸೋ ತವಕದಲ್ಲಿದ್ದಾರೆ.

ರಮ್ಯಾ ಮೇಡಂ ಜೊತೆಗೆ ಐಶಾನಿ ಶೆಟ್ಟಿ, ದಿಗಂತ್, ಅದಿತಿ ಪ್ರಭುದೇವ್, ರಾಗಿಣಿ, ಕಾರುಣ್ಯ, ರಕ್ಷಿತಾ ಪ್ರೇಮ್, ಶರ್ಮಿಳಾ ಮಾಂಡ್ರೆ, ನೆನಪಿರಲಿ ಪ್ರೇಮ್, ಶರಣ್, ರಾಜ್‌ವರ್ಧನ್, ಎ.ಪಿ ಅರ್ಜುನ್ ಲೂಸಿಯಾ ಪವನ್‌ಕುಮಾರ್, ಬಹದ್ದೂರ್ ಚೇತನ್, ಅಯೋಗ್ಯ ಮಹೇಶ್ ಸೇರಿದಂತೆ ಚಂದನವನದ ಹಲವು ಕಲಾವಿದರು ಮತ್ತು ನಿರ್ದೇಶಕರು ನಟ ಸತೀಶ್ ನಿನಾಸಂ ಹೊಸ ಜರ್ನಿಗೆ ಶುಭಹಾರೈಸಿದ್ದಾರೆ. ಗಡಿದಾಟಿದ ನನ್ನ ಮೊದಲ ಸಾಹಸಕ್ಕೆ ನನ್ನ ಜೊತೆ ಮತ್ತೆ ನೀವೆಲ್ಲರೂ ನಿಲ್ಲಬೇಕಿದೆ ಎಂದು ತಮ್ಮ ಅಭಿಮಾನಿ ದೇವರುಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಪಗೈವುನುಕು ಅರುಳ್ವಾಯ್' ಚಿತ್ರದಲ್ಲಿ ಇಬ್ಬರು ಹೀರೋಗಳು. ಸಸಿಕುಮಾರ್ ಜೊತೆ ಸತೀಶ್ ನಿನಾಸಂ ಲೀಡ್ ರೋಲ್‌ನಲ್ಲಿ ಅಭಿನಯಿಸಿದ್ದು,ವಾಣಿಭೋಜನ್ ನಾಯಕಿಯಾಗಿದ್ದಾರೆ. ಖ್ಯಾತ ಇಂಗ್ಲೀಷ್ ಸಾಹಿತಿ ವಿಲಿಯಂ ಷೇಕ್ಸ್ಪಿಯರ್‌ರ ಮ್ಯಾಕ್‌ಬೆತ್ ನಾಟಕದಿಂದ ಸ್ಪೂರ್ತಿ ಪಡೆದಿರುವ ಡೈರೆಕ್ಟರ್ ಅನೀಸ್ ಅಜಾನ್‌ದಾನ್,ಪಗೈವುನುಕು ಅರುಳ್ವಾಯ್’ ಚಿತ್ರ ನಿರ್ದೇಶಿಸಿದ್ದಾರೆ. ಇದೊಂದು ಬಿಗ್‌ಬಜೆಟ್ ಸಿನಿಮಾ ಆಗಿದ್ದು, ಕರ್ನಾಟದ ವಿವಿಧ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ರಿಲೀಸ್‌ಗೆ ರೆಡಿಯಾಗ್ತಿದೆ. ಕನ್ನಡದಲ್ಲಿ ಪೆಟ್ರೋಮ್ಯಾಕ್ಸ್, ಗೋದ್ರಾ ಸಿನಿಮಾಗಳು ತೆರೆಗೆ ಅಪ್ಪಳಿಸೋಕೆ ಸಜ್ಜಾಗಿವೆ. ರಚಿತಾ ಜೊತೆ ಮ್ಯಾಟ್ನಿ, ಶರ್ಮಿಳಾ ಮಾಂಡ್ರೆ ಜೊತೆ ದಸರಾ ಸೇರಿದಂತೆ ಪರಿಮಳ ಲಾಡ್ಜ್, ಮೈ ನೇಮ್ ಈಸ್ ಸಿದ್ದೇಗೌಡ ಚಿತ್ರಗಳು ಸತೀಶ್ ಕೈಯ್ಯಲಿವೆ. ಒಟ್ನಲ್ಲಿ ಲೂಸಿಯಾ ಹೀರೋ ಸ್ಯಾಂಡಲ್‌ವುಡ್‌ನ ಬ್ಯುಸಿಯೆಸ್ಟ್ ಆಕ್ಟರ್ ಕಮ್ ಫೈನೆಸ್ಟ್ ಆಕ್ಟರ್. ಕನ್ನಡದಲ್ಲಿ ಬ್ಯುಸಿಯಾದಂತೆ ತಮಿಳು ಚಿತ್ರರಂಗದಲ್ಲೂ ಸತೀಶ್ ಬ್ಯುಸಿಯಾಗ್ಲಿ. ಕನ್ನಡದ ಕೀರ್ತಿಪತಾಕೆ ಕಾಲಿವುಡ್‌ನಲ್ಲಿ ಎತ್ತಿಹಿಡಿಯಲಿ.

  • ಎಂಟರ್‌ಟೈನ್ಮೆಂಟ್ ಬ್ಯುರೋ ಸಿನಿಲಹರಿ
Categories
ಸಿನಿ ಸುದ್ದಿ

ಬೈಟು ಲವ್ ಟೀಸರ್ ಸದ್ದು! ಧನ್ವೀರ್ ಬರ್ತ್ ಡೇಗೆ ಟೀಮ್ ಸ್ಪೆಷಲ್ ಗಿಫ್ಟ್

ಹರಿ ಸಂತೋಷ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಬೈ ಟು ಲವ್‌’ ಸಿನಿಮಾ ತಂಡ, ನಟ ಧನ್ವೀರ್ ಬರ್ತ್ ಡೇ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದ್ದ ಟೀಸರ್ ಗೆ ಎಲ್ಲೆಡೆಯಿಂದ, ಮೆಚ್ಚುಗೆ ಸಿಕ್ಕಿದೆ.ಪೋಸ್ಟರ್ ನೋಡಿದವರಿಗೆ ಫ್ಯಾಮಿಲಿ ಇದೊಂದು ಪಕ್ಕಾ ಸಿನಿಮಾ ಅನ್ನಿಸಿದೇ ಇರದು. ಇನ್ನು ರಿಲೀಸ್ ಆಗಿರುವ ಟೀಸರ್ ನೋಡಿದರೆ ಮಾಸ್ ಫೀಲ್ ಸಿನಿಮಾ ಅನ್ನುತ್ತಿದ್ದಾರೆ.

‘ಬಜಾರ್‌’ ಬಳಿಕ ಧನ್ವೀರ್‌ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ಫಸ್ಟ್ ಲುಕ್‌ ಮೂಲಕ ಸಾಕಷ್ಟು ಕುತೂಹಲ ಮೂಡಿಸಿತ್ತು ಚಿತ್ರತಂಡ. ಧನ್ವೀರ್‌-ಶ್ರೀಲೀಲಾ ಹಾಗೂ ಪುಟ್ಟ ಮಗುವೊಂದು ಹಸೆಮಣೆ ಮೇಲೆ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್‌ ಆಗಿತ್ತು.ಸೆಪ್ಟೆಂಬರ್‌ 8ರಂದು ಚಿತ್ರದ ನಾಯಕ ಧನ್ವೀರ್‌ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಖುಷಿಗೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಮೊದಲ ಚಿತ್ರದಲ್ಲಿ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಧನ್ವೀರ್‌ಗಿಲ್ಲಿ ಲವರ್‌ ಬಾಯ್‌ ಪಾತ್ರ ಆಗಿದ್ದಾರೆ.

ಸುಮಾರು 70 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ನಡೆಸಸಲಾಗಿದೆ. ಧನ್ವೀರ್‌ ಹಾಗೂ ಶ್ರೀಲೀಲಾ ಜೋಡಿ ತೆರೆಯ ಮೇಲೆ ಮೋಡಿ ಮಾಡಲಿದೆ ಎಂಬುದು ನಿರ್ದೇಶಕರ ಮಾತು. ಗಣೇಶ್‌ ನಟನೆಯ ಸಖತ್‌, ನಿಖಿಲ್‌ ಕುಮಾರ್‌ಸ್ವಾಮಿ ನಟನೆಯ ಹೊಸ ಸಿನಿಮಾ ಹಾಗೂ ಜೋಗಿ ಪ್ರೇಮ್‌-ಧ್ರುವ ಸರ್ಜಾ ಕಾಂಬಿನೇಷನ್‌ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್‌ ಪ್ರೊಡಕ್ಷನ್ಸ್ ‘ಬೈ ಟು ಲವ್‌’ಗೆ ಹಣ ಹಾಕಿದೆ.ಚಿತ್ರದ ಕಥೆ ಮೆಚ್ಚಿಕೊಂಡು ಈ ಸಿನಿಮಾ ನಿರ್ಮಾಣ ಮಾಡಲು ಮುಂದಾದ ಕೆವಿಎನ್‌ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾದ ಎರಡನೇ ಸಿನಿಮಾವಿದು. ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.

error: Content is protected !!