“ರಕ್ತ ಚಿಮ್ಮುವ ಅಖಾಡದಲ್ಲಿ ನಿಷ್ಠೆಯ ನೂರು ತಲೆಗಳು ಬಿದ್ದರೂ, ಪ್ರತಿಷ್ಠೆಯ ತಲೆ ಮಾತ್ರ ಬೀಳಬಾರದು… ಮಾರ್ಕೆಟ್‌ನಲ್ಲಿ ಮಾರೋಕೆ ಏನ್ ತಂದಿದ್ದೇವೆ ಅನ್ನೋದರ ಮೇಲೆ ಬೆಲೆ..” ಇದಿಷ್ಟೇ ಡೈಲಾಗ್ ಆ ಟೀಸರ್‌ನಲ್ಲಿದೆ. ಅದರ ಮೇಕಿಂಗ್ ನೋಡಿದವರಿಗೆ ಅದೊಂದು ಪಕ್ಕಾ ಮಾಸ್ ಫೀಲ್ ಇರುವ ಸಿನಿಮಾ ಎನಿಸದೇ ಇರದು. ಅಷ್ಟರಮಟ್ಟಿಗೆ ನಿರ್ದೇಶಕ ತಾಯಿ ಲೋಕೇಶ್ ಕಟ್ಟಿಕೊಟ್ಟಿದ್ದಾರೆ. ಶೀರ್ಷಿಕೆ ಹೇಳುವಂತೆಯೇ, ಇದೊಂದು ಟೊಮೆಟೊ ಕಥೆ ಎನಿಸುತ್ತೆ. ಟೊಮ್ಯಾಟೊ ಕಲರ್ ರೆಡ್ ಆಗಿದ್ದರೂ, ಅದರಲ್ಲಿ ರೆಡ್ ಶೇಡ್ ಜಾಸ್ತೀನೆ ಇರಬಹುದಾ ಎಂಬ ಪ್ರಶ್ನೆ ಟೀಸರ್ ನೋಡಿದವರಿಗೆ ಗೊತ್ತಾಗುತ್ತೆ. ಇದು ವಾಸ್ತವತೆಗೆ ಹತ್ತಿರದ ಕಥೆ ಅನ್ನುವುದನ್ನು ಹೇಳುತ್ತದೆ
ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಸಿನಿಮಾಗಳು ಶುರುವಾಗುತ್ತಲೇ ಇವೆ. ಅದರಲ್ಲೂ ಹೊಸ ಪ್ರತಿಭಾವಂತರು ಅಂದರೆ ಸುಮ್ಮನೆ ಅಲ್ಲ ಬಿಡಿ. ಮೊದಲ ಪ್ರಯತ್ನದಲ್ಲೇ ಸುದ್ದಿಯಾಗಿಬಿಡುತ್ತಾರೆ. ಇಲ್ಲೀಗ ಹೇಳಹೊರಟಿರುವುದು ಹೊಸ ಸಿನಿಮಾದ ಫಸ್ಟ್ ಲುಕ್ ಕುರಿತು. ಅಷ್ಟೇ ಅಲ್ಲ, ಈಗಾಗಲೇ ಆ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಪ್ರತಾಪ್ ನಾರಾಯಣ್ ಅಭಿನಯದ ಈ ಚಿತ್ರದ ಫಸ್ಟ್ ಲುಕ್ ವಿಶೇಷವೆನಿಸಿದೆ. ಹೌದು, ಅ ಚಿತ್ರದ ಹೆಸರು. “ದಿ ಕಲರ್ ಆಫ್ ಟೊಮೆಟೊ” ಚಿತ್ರದ ಶೀರ್ಷಿಕೆಯೇ ವಿಭಿನ್ನ ಅಂದುಕೊಂಡರೆ, ಕಥೆ ಅದಕ್ಕಿಂತಲೂ ವಿಭಿನ್ನವಾಗಿರುತ್ತೆ ಎನ್ನುವುದರಲ್ಲಿ ಎರಡು ಮಾತಿಲ್ಲ ಬಿಡಿ.
ಯಾಕೆಂದರೆ, ಈ ಚಿತ್ರದ ಕಥೆ ಬರೆದಿರೋದು. ಕೋಟಿಗಾನಹಳ್ಳಿ ರಾಮಯ್ಯ. ಈ ಹೆಸರೇ ಸಾಕು ಅದ್ಭುತ ಕಥೆಗಾರ ಅನ್ನುವುದಕ್ಕೆ. ಈಗಾಗಲೇ “ಮೂಕ ಹಕ್ಕಿ” ಸಿನಿಮಾನೇ ಸಾಕು ಅವರ ಬರಹ ಎಂಥದ್ದು ಅಂತ ತಿಳಿಯೋಕೆ. ಅದಾಗಲೇ ಸಾಬೀತು ಮಾಡಿರುವ ಕೋಟಿಗಾನಹಳ್ಳಿ ರಾಮಯ್ಯ, ಈಗ ಮತ್ತೊಂದು ಸಿನಿಮಾ ಮೂಲಕ ಹೊಸ ವಿಷಯ ಹೇಳೋಕೆ ಬಂದಿದ್ದಾರೆ. ಅವರ ಬರಹದಲ್ಲಿ ಸಾಕಷ್ಟು ವಿಶೇಷತೆಗಳಿರುತ್ತವೆ ಎನ್ನುವುದನ್ನು ಹೆಚ್ಚೇನು ಹೇಳಬೇಕಿಲ್ಲ. ಇನ್ನೂ ಬಿಡುಗಡೆಯ ಹಂತದಲ್ಲಿರುವ ಕನ್ನೇರಿ ಸಿನಿಮಾಗೂ ಕೋಟಿಗಾನಹಳ್ಳಿ ರಾಮಯ್ಯ ಅವರದೇ ಬರವಣಿಗೆ ಇದೆ. ಈಗ “ದಿ ಕಲರ್ ಆಫ್ ಟೊಮೆಟೊ” ಸಿನಿಮಾಗೂ ಕಥೆ ಬರೆದಿದ್ದಾರೆ.
ಈ ಸಿನಿಮಾಗೆ ಸ್ವಾತಿ ಕುಮಾರ್ ನಿರ್ಮಾಪಕರು. ತಾಯಿ ಲೋಕೇಶ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು. ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅದರೊಂದಿಗೆ ಟೀಸರ್ ಕೂಡ ರಿಲೀಸ್ ಮಾಡಲಾಗಿದೆ.
“ರಕ್ತ ಚಿಮ್ಮುವ ಅಖಾಡದಲ್ಲಿ ನಿಷ್ಟೆಯ ನೂರು ತಲೆಗಳು ಬಿದ್ದರೂ, ಪ್ರತಿಷ್ಟೇಯ ತಲೆ ಮಾತ್ರ ಬೀಳಬಾರದು… ಮಾರ್ಕೆಟ್‌ನಲ್ಲಿ ಮಾರೋಕೆ ಏನ್ ತಂದಿದ್ದೇವೆ ಅನ್ನೋದರ ಮೇಲೆ ಬೆಲೆ..” ಇದಿಷ್ಟೇ ಡೈಲಾಗ್ ಆ ಟೀಸರ್‌ನಲ್ಲಿದೆ. ಅದರ ಮೇಕಿಂಗ್ ನೋಡಿದವರಿಗೆ ಅದೊಂದು ಪಕ್ಕಾ ಮಾಸ್ ಫೀಲ್ ಇರುವ ಸಿನಿಮಾ ಎನಿಸದೇ ಇರದು.
ಅಷ್ಟರಮಟ್ಟಿಗೆ ನಿರ್ದೇಶಕ ತಾಯಿ ಲೋಕೇಶ್ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಶೀರ್ಷಿಕೆ ಹೇಳುವಂತೆಯೇ, ಇದೊಂದು ಟೊಮ್ಯಾಟೊ ಕಥಾಹಂದರ ಹೊಂದಿರುವ ಸಿನಿಮಾ. ಟೊಮೆಟೊ ಕಲರ್ ರೆಡ್ ಆಗಿದ್ದರೂ, ಅದರಲ್ಲಿ ರೆಡ್ ಶೇಡ್ ಜಾಸ್ತೀನೆ ಇರಬಹುದಾ ಎಂಬ ಪ್ರಶ್ನೆ ಟೀಸರ್ ನೋಡಿದವರಿಗೆ ಗೊತ್ತಾಗುತ್ತೆ.
ಅದರಲ್ಲೂ, ಇದು ವಾಸ್ತವತೆಗೆ ಹತ್ತಿರವಾಗಿರುವ ಕಥೆ ಅನ್ನುವುದನ್ನು ಈ ಟೀಸರ್ ಹೇಳುತ್ತದೆ. ರೈತ ಇಂದು ಟೊಮೆಟೊ ಬೆಳೆಗೆ ಬೆಂಬಲ ಸಿಗದೆ ಪರದಾಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ರೈತ ರೊಚ್ಚಿಗೆದ್ದರೆ ರಕ್ತಪಾತವೂ ಗ್ಯಾರಂಟಿ ಅನ್ನೋದು ಯಾವಾಗಲೋ ಸಾಬೀತಾಗಿದೆ. ಅದೇನೆ ಇರಲಿ, ಇಲ್ಲಿ ನಿರ್ದೇಶಕ ತಾಯಿ ಲೋಕೇಶ್ ಏನು ಹೇಳೋಕೆ ಹೊರಟಿದ್ದಾರೋ ಗೊತ್ತಿಲ್ಲ. ಟೀಸರ್ ನೋಡಿದ ಮೇಲೆ, ಅದೊಂದು ಪಕ್ಕಾ ಮಾಸ್ ಎಲಿಮೆಂಟ್ಸ್ ಇರುವ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಟೀಸರ್ ಮೇಕಿಂಗ್ ಜೊತೆಗೆ ಹಿನ್ನೆಲೆ ಸಂಗೀತ ಇಲ್ಲಿ ಗಮನಸೆಳೆಯುತ್ತದೆ. ಅಲ್ಲೊಂದು ಕುತೂಹಲವೂ ಇದೆ. ಆ ಕುತೂಹಲ ಏನೆಂಬುದಕ್ಕೆ ಸಿನಿಮಾ ಬರೋವರೆಗೆ ಕಾಯಬೇಕು.
ನಿರ್ದೇಶಕ ತಾಯಿ ಲೋಕೇಶ್ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಹಾಗಾಗಿ ಒಂದಷ್ಟು ಹೋರಾಟದ ಛಾಯೆ ಈ ಟೀಸರ್‌ನಲ್ಲೂ ಈಗಾಗಲೇ ಎದ್ದು ಕಾಣುತ್ತಿದೆ. ಸಾಂಸ್ಕೃತಿಕ ಲೋಕದ ಬಗ್ಗೆ ಅಪಾರ ಒಲವು ಇಟ್ಟುಕೊಂಡಿರುವ ತಾಯಿ ಲೋಕೇಶ್, ಹಲವು ಬೀದಿ ಬದಿಯ ಬದುಕನ್ನು, ಪಾತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ದಾಖಲಿಸಿದ್ದಾರೆ.
ದೊಡ್ಡವರ, ಚಿಂತಕರ ಒಡನಾಟವಿರಿಸಿಕೊಂಡಿರುವ ಅವರಿಗೆ ಸಿನಿಮಾ ಹುಚ್ಚು ಹೆಚ್ಚು. ಸಿನಿಮಾ ಕಥೆ ಬಗ್ಗೆ ಅಪಾರ ಆಸಕ್ತಿ ತೋರುವ ಅವರಿಗೆ ಸಿನೆಮಾವನ್ನು ಹೇಗೆ ಕಟ್ಟಬೇಕು ಎಂಬ ಕುರಿತು ಅರಿವಿದೆ. ಒಳ್ಳೆಯ ಆಲೋಚನೆಗಳೊಂದಿಗೆ “ದಿ ಕಲರ್ ಆಫ್ ಟೊಮೆಟೊ” ಸಿನಿಮಾ ಮಾಡಲು ಹೊರಟಿರುವ ಅವರ ತಂಡಕ್ಕೆ “ಸಿನಿಲಹರಿ” ಶುಭ ಹಾರೈಸಲಿದೆ.