‘ಕ್ರಾಂತಿ’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಸಿನಿಮಾ. ಗಣೇಶ ಹಬ್ಬದಂದು ವಿಶೇಷವಾಗಿ ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ. ಡಿ55 ಟೈಟಲ್ ಏನಿರಬಹುದು ಎನ್ನುವ ದರ್ಶನ್ ಭಕ್ತಗಣದ ಮಹಾ ನಿರೀಕ್ಷೆಗೆ ಕುಂಬಳಕಾಯಿ ಹೊಡೆದಾಗಿದೆ. ಟೈಟಲ್ ಅನೌನ್ಸ್ ಆದ ಒಂದೇ ಗಂಟೆಯಲ್ಲಿ ಟ್ರೆಂಡಿಂಗ್ ಆಗಿದೆ. ಇದು ದರ್ಶನ್ ಹೆಸರಿಗಿರುವ ಶಕ್ತಿ, ದಾಸನ ಅಭಿಮಾನಿ ಬಳಗಕ್ಕಿರುವ ತಾಕತ್ತು.
ಕಳೆದ ಒಂದು ತಿಂಗಳಿಂದ ದಚ್ಚು ಭಕ್ತರು ಒಂಟಿಕಾಲಿನಲ್ಲಿ ನಿಂತಿದ್ದರು. ಡಿ55 ಅನೌನ್ಸ್ ಆಗುವ ದಿವ್ಯಕ್ಷಣಕ್ಕಾಗಿ ಕಾತುರದಿಂದ ಕಾದಿದ್ದರು. ಆ ಸುಂದರ ಕ್ಷಣಕ್ಕೆ ಗಣೇಶನ ಹಬ್ಬ ಸಾಕ್ಷಿಯಾಗಿದೆ. ಗಜಾನನ ಆಶೀರ್ವಾದದೊಂದಿಗೆ ‘ ಕ್ರಾಂತಿ’ಗೆ ಕಿಕ್ ಸ್ಟಾರ್ಟ್ ಸಿಕ್ಕಿ
ದೆ. ಇಂಟ್ರೆಸ್ಟಿಂಗ್ ಅಂದರೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಕ್ರಾಂತಿ ಆಗ್ತಿರುವುದು.
ಬಜಾರ್ ನಲ್ಲಿ, ಬೆಳ್ಳಿತೆರೆ ಅಂಗಳದಲ್ಲಿ, ಬಾಕ್ಸ್ ಆಫೀಸ್ ಅಡ್ಡದಲ್ಲಿ ಚಾಲೆಂಜಿಂಗ್ ಚಕ್ರವರ್ತಿಯ ಸಿನಿಮಾಗಳು ಎಷ್ಟೆಲ್ಲಾ ಕ್ರಾಂತಿ ಮಾಡಿವೆ ಎನ್ನುವುದು ಇಡೀ ಕರ್ನಾಟಕ ಮಾತ್ರವಲ್ಲ ಪಕ್ಕದ ರಾಜ್ಯವೂ ಕಣ್ಣರಳಿಸಿ ನೋಡಿದೆ. ದಾಸ ಬರ್ತಾವ್ನೆ ಅಂದಾಗ ಬೆಳ್ಳಿತೆರೆ ಕುಣಿಯುತ್ತೆ, ಬಾಕ್ಸ್ ಆಫೀಸ್ ಪಟಾಕಿ ಕೇಕೆ ಹಾಕುತ್ತೆ. ಅದಕ್ಕೆ ಕಾರಣ ಚಿತ್ರಮಂದಿರ ಹೌಸ್ ಫುಲ್ ಮಾಡಿ, ಬಾಕ್ಸ್ ಆಫೀಸ್ ಡಬ್ಬದಲ್ಲಿ ಕೋಟಿಕೋಟಿ ಕುಣಿಯುವಂತೆ ಕ್ರಾಂತಿ ಮಾಡುವ ಪವರ್ ಚಕ್ರವರ್ತಿಗಿರುವುದಕ್ಕೆ. ಅಪ್ ಕೋರ್ಸ್ ಇದೆ. ಆ ಪವರ್ ಇರುವುದಕ್ಕೇನೇ ಬಾಕ್ಸ್ ಆಫೀಸ್ ಸುಲ್ತಾನ್ ಪಟ್ಟ ಸಿಕ್ಕಿರುವುದು.
ಅಷ್ಟಕ್ಕೂ, ಈ ಭಾರಿ ‘ಕ್ರಾಂತಿ’ ಟೈಟಲ್ ಇಟ್ಟುಕೊಂಡೇ ಫೀಲ್ಡಿಗಿಳಿಯುತ್ತಿರುವ ದರ್ಶನ್, ಯಾವ ಕ್ಷೇತ್ರದಲ್ಲಿ ರೆವಲ್ಯೂಷನ್ ತರುತ್ತಾರೆ ಎನ್ನುವ ಕೂತೂಹಲ ಹೆಚ್ಚಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಕ್ರಾಂತಿಯಾಗಬಹುದಾ ಎನ್ನುವ ನಿರೀಕ್ಷೆಯ ಜೊತೆಗೆ
ಫ್ರೀಡಂ ಫೈಟರ್ ಆಗಿ ತೊಡೆತಟ್ಟಲಿದ್ದಾರಾ ಯಜಮಾನ? ಈ ಮಹಾನಿರೀಕ್ಷೆಯ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಚಿತ್ರತಂಡವೇ ಉತ್ತರ ನೀಡಲಿದೆ.
ಕುಲಕೋಟಿ ಅಭಿಮಾನಿಗಳ ಒಡೆಯನನ್ನ ಕ್ರಾಂತಿಯ ಕಣಕ್ಕೆ ಇಳಿಸ್ತಿರುವುದು ಯಜಮಾನ ಸಿನಿಮಾ ತಂಡ. ನಿರ್ಮಾಪಕಿ ಶೈಲಜನಾಗ್ ಹಾಗೂ ಬಿ ಸುರೇಶ್ ಅವರು ದರ್ಶನ್ ಆಗಿದ್ದಾಗ್ಲೀ ಈ ಭಾರಿ ಕ್ರಾಂತಿ ಮಾಡೆಬಿಡೋಣ ಅಂತ ಸಜ್ಜಾಗಿದ್ದಾರೆ. ಸಾರಥಿಯ ಜೊತೆಜೊತೆಗೆ ಹೆಜ್ಜೆಹಾಕುತ್ತಿರುವ ವಿ ಹರಿಕೃಷ್ಣ ‘ ಕ್ರಾಂತಿ’ ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಬಹುಭಾಷೆಯಲ್ಲಿ ಕ್ರಾಂತಿ ಮಾಡೋದಕ್ಕೆ ಹೊರಟಿರುವ ಫಿಲ್ಮ್ ಟೀಮ್ ಗಣೇಶನ ಹಬ್ಬಕ್ಕೆ ಟೈಟಲ್ ಅನೌನ್ಸ್ ಮಾಡಿ ಫ್ಯಾನ್ಸ್ ಗೆ ಹಬ್ಬದೂಟ ಹಾಕಿಸಿದೆ. ಯಜಮಾನ ತಂಡ ಮತ್ತೆ ಒಂದಾಗಿರುವುದಕ್ಕೆ ದಾಸನ ಭಕ್ತರಲ್ಲಿ ಮಾತ್ರವಲ್ಲ ಇಡೀ ಗಾಂಧಿನಗರದ ಮಂದಿಯಲ್ಲಿ ನಿರೀಕ್ಷೆ ಮುಗಿಲೆತ್ತರಕ್ಕೇರಿದೆ.
ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ