ಬೈಟು ಲವ್ ಟೀಸರ್ ಸದ್ದು! ಧನ್ವೀರ್ ಬರ್ತ್ ಡೇಗೆ ಟೀಮ್ ಸ್ಪೆಷಲ್ ಗಿಫ್ಟ್

ಹರಿ ಸಂತೋಷ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಬೈ ಟು ಲವ್‌’ ಸಿನಿಮಾ ತಂಡ, ನಟ ಧನ್ವೀರ್ ಬರ್ತ್ ಡೇ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದ್ದ ಟೀಸರ್ ಗೆ ಎಲ್ಲೆಡೆಯಿಂದ, ಮೆಚ್ಚುಗೆ ಸಿಕ್ಕಿದೆ.ಪೋಸ್ಟರ್ ನೋಡಿದವರಿಗೆ ಫ್ಯಾಮಿಲಿ ಇದೊಂದು ಪಕ್ಕಾ ಸಿನಿಮಾ ಅನ್ನಿಸಿದೇ ಇರದು. ಇನ್ನು ರಿಲೀಸ್ ಆಗಿರುವ ಟೀಸರ್ ನೋಡಿದರೆ ಮಾಸ್ ಫೀಲ್ ಸಿನಿಮಾ ಅನ್ನುತ್ತಿದ್ದಾರೆ.

‘ಬಜಾರ್‌’ ಬಳಿಕ ಧನ್ವೀರ್‌ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ಫಸ್ಟ್ ಲುಕ್‌ ಮೂಲಕ ಸಾಕಷ್ಟು ಕುತೂಹಲ ಮೂಡಿಸಿತ್ತು ಚಿತ್ರತಂಡ. ಧನ್ವೀರ್‌-ಶ್ರೀಲೀಲಾ ಹಾಗೂ ಪುಟ್ಟ ಮಗುವೊಂದು ಹಸೆಮಣೆ ಮೇಲೆ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್‌ ಆಗಿತ್ತು.ಸೆಪ್ಟೆಂಬರ್‌ 8ರಂದು ಚಿತ್ರದ ನಾಯಕ ಧನ್ವೀರ್‌ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಖುಷಿಗೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಮೊದಲ ಚಿತ್ರದಲ್ಲಿ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಧನ್ವೀರ್‌ಗಿಲ್ಲಿ ಲವರ್‌ ಬಾಯ್‌ ಪಾತ್ರ ಆಗಿದ್ದಾರೆ.

ಸುಮಾರು 70 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ನಡೆಸಸಲಾಗಿದೆ. ಧನ್ವೀರ್‌ ಹಾಗೂ ಶ್ರೀಲೀಲಾ ಜೋಡಿ ತೆರೆಯ ಮೇಲೆ ಮೋಡಿ ಮಾಡಲಿದೆ ಎಂಬುದು ನಿರ್ದೇಶಕರ ಮಾತು. ಗಣೇಶ್‌ ನಟನೆಯ ಸಖತ್‌, ನಿಖಿಲ್‌ ಕುಮಾರ್‌ಸ್ವಾಮಿ ನಟನೆಯ ಹೊಸ ಸಿನಿಮಾ ಹಾಗೂ ಜೋಗಿ ಪ್ರೇಮ್‌-ಧ್ರುವ ಸರ್ಜಾ ಕಾಂಬಿನೇಷನ್‌ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್‌ ಪ್ರೊಡಕ್ಷನ್ಸ್ ‘ಬೈ ಟು ಲವ್‌’ಗೆ ಹಣ ಹಾಕಿದೆ.ಚಿತ್ರದ ಕಥೆ ಮೆಚ್ಚಿಕೊಂಡು ಈ ಸಿನಿಮಾ ನಿರ್ಮಾಣ ಮಾಡಲು ಮುಂದಾದ ಕೆವಿಎನ್‌ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾದ ಎರಡನೇ ಸಿನಿಮಾವಿದು. ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.

Related Posts

error: Content is protected !!