ನಾಡಿನಾದ್ಯಂತ ಗೌರಿ-ಗಣೇಶ ಸಂಭ್ರಾಮಚರಣೆ ಜೋರಾಗಿದೆ. ತರಹೇವಾರಿ ಗೌರಿ-ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ, ಜನರನ್ನ ಭಾರೀ ಅಟ್ರ್ಯಾಕ್ಟ್ ಮಾಡ್ತಿರುವುದು ವಿಕ್ರಾಂತ್ ರೋಣ ಗಣೇಶ. ಯಸ್, ಈ ಭಾರಿ ವಿಕ್ರಾಂತ್ ರೋಣ ಗಣೇಶನ ಹವಾ ಜೋರಾಗಿದೆ. ಸುದೀಪಿಯನ್ಸ್ ಮಾತ್ರವಲ್ಲ ಸಾಮಾನ್ಯರು ಕೂಡ ವಿಕ್ರಾಂತ್ ರೋಣ ಗಣೇಶನಿಗಾಗಿ ಮುಗಿಬೀಳ್ತಿದ್ದಾರೆ. ಬೇಡಿಕೆ ಹೆಚ್ಚಿಸಿಕೊಂಡು ಟ್ರೆಂಡ್ ಸೃಷ್ಟಿಮಾಡುತ್ತಿರುವ `ವಿಕ್ರಾಂತ್ ರೋಣ ಗಣೇಶನ’ ಸೂಪರ್ಬ್ ಸ್ಟೋರಿ ಇಲ್ಲಿದೆ ಹ್ಯಾವ್ ಎ ಲುಕ್.
ಮಾಯಲೋಕದಲ್ಲಿ ವಿಕ್ರಾಂತ್ ರೋಣ ಹವಾ ಹೆಂಗೈತಿ ಎನ್ನುವುದು ಬಹುಶ: ನಿಮ್ಮೆಲ್ಲರಿಗೂ ಗೊತ್ತಿದೆ. ಬುರ್ಜ್ ಖಲೀಫಾವನ್ನು ಮೆಟ್ಟಿನಿಂತು ನಯಾ ಮೇನಿಯಾ ಸೃಷ್ಟಿಸಿಕೊಂಡಿರುವ ಅಭಿನಯ ಚಕ್ರವರ್ತಿ ಅಭಿನಯದ ʼವಿಕ್ರಾಂತ್ ರೋಣ’, ಗೌರಿ-ಗಣೇಶ ಹಬ್ಬದಂದು ಹೊಸದೊಂದು ಹವಾ ಶುರುವಿಟ್ಟುಕೊಂಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಪಡೆದು ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಅದಕ್ಕೆ ಕಾರಣ ವಿಕ್ರಾಂತ್ ರೋಣ ಗಣೇಶ’ ಮೂರ್ತಿ ಎನ್ನುವುದು ವಿಶೇಷ ಪ್ರತಿವರ್ಷ ಗೌರಿ-ಗಣೇಶ ಹಬ್ಬಕ್ಕೆ ಸ್ಟಾರ್‌ನಟರುಗಳ ಅವತಾರವೆತ್ತಿ ಗಣೇಶಪ್ಪ ಗ್ರಾಂಡ್ ಎಂಟ್ರಿಕೊಡ್ತಾನೆ. ಮಾರುಕಟ್ಟೆಯಲ್ಲಿ ನಂದೇ ಹವಾ ಅಂತ ತಿಂಗಳಾನುಗಟ್ಟಲ್ಲೇ ಮೆರೆಯುತ್ತಾನೆ. ಸ್ಟಾರ್‌ನಟರುಗಳ ಅಭಿಮಾನಿಗಳನ್ನು ಮಾತ್ರವಲ್ಲ ನಾಡಿನ ಜನರ ಹೃದಯ ಗೆದ್ದು ಅವರುಗಳ ಮನೆಯಲ್ಲಿ ಹೋಗಿ ಚಕ್ಕಮಕ್ಕಳ ಹಾಕಿಕೊಂಡು ಕೂತುಬಿಡ್ತಾನೆ. ಅದರಂತೇ, ಈ ವರ್ಷವಿಕ್ರಾಂತ್ ರೋಣ ಗಣೇಶ’ ಅಖಾಡದಲ್ಲಿ ಹವಾ ಎಬ್ಬಿಸುತ್ತಿದ್ದಾನೆ. ಕಿಚ್ಚನಂತೆ ಹ್ಯಾಟ್ ಹಾಕಿಕೊಂಡು, ಕೈಯಲ್ಲಿ ಗನ್ ಹಿಡಿದುಕೊಂಡು ಮ್ಯಾಸೀವ್ ಸೀಟ್‌ನಲ್ಲಿ ಕುಳಿತಿರುವ ಗಣೇಶನನ್ನ ನೋಡಿ ಕಿಚ್ಚ ಫ್ಯಾನ್ಸ್ ಮಾತ್ರವಲ್ಲ ಸಕಲರೂ ಕೂಡ ಫಿದಾ ಆಗಿದ್ದಾರೆ. ವಿಕ್ರಾಂತ್ ರೋಣ ಗಣೇಶನನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ.
ಯಶ್ವಂತ್ ಶೆಟ್ಟಿ
ಅಷ್ಟಕ್ಕೂ, ವಿಕ್ರಾಂತ್ ರೋಣ ಗಣೇಶನ ಕಲ್ಪನೆ ಮೂಡಿದ್ದು ಮತ್ತು ಮಾರುಕಟ್ಟೆಗೆ ತರಬೇಕು ಎನ್ನುವ ಕನಸು ಕಂಡಿದ್ದು ಮಾಣಿಕ್ಯನ ಅಪ್ಪಟ ಅಭಿಮಾನಿ ಯಶ್ವಂತ್ ಶೆಟ್ಟಿ. ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಎದುರುನೋಡ್ತಿರುವ ಯಶ್ವಂತ್, ಭಾರತೀಯ ಚಿತ್ರರಂಗದಲ್ಲಿ ಹವಾ ಎಬ್ಬಿಸುವವಿಕ್ರಾಂತ್ ರೋಣ’ ಲುಕ್‌ನ ನೋಡಿ ಪ್ರೇರಣೆಗೊಂಡರು. ಈ ಭಾರಿ ಗೌರಿ-ಗಣೇಶ ಹಬ್ಬಕ್ಕೆ ಕಿಚ್ಚನ ಅಭಿಮಾನಿಯಾಗಿ ಕಾಣಿಕೆ ಕೊಡಬೇಕು ಎಂದು ನಿರ್ಧರಿಸಿ ವರದನಾಯಕನ’ ಮೂರ್ತಿ ಕೆತ್ತನೆಯ ಕೆಲಸದಲ್ಲಿ ಬ್ಯುಸಿಯಾದರು. ಸುಮಾರು ಎರಡು ತಿಂಗಳು ಟೈಮ್ ತೆಗೆದುಕೊಂಡುವಿಕ್ರಾಂತ್ ರೋಣ ಗಣೇಶಪ್ಪನಿಗೆ’ ಜೀವ ತುಂಬಿದರು. ಆನ್‌ಲೈನ್‌ನಲ್ಲಿ ಹಾಗೆಯೇ ಪೋಸ್ಟ್ ಮಾಡಿದರು. ಇದಾಗಿ, ಕೆಲವೇ ನಿಮಿಷಗಳಲ್ಲಿ ಟ್ರೆಂಡ್‌ಸೆಟ್ ಆಗಿದೆ ಜೊತೆಗೆ ಸುದೀಪಿಯನ್ಸ್ ಕಡೆಯಿಂದ ಶುಭಾಷಯದ ಮಹಾಪೂರವು ಹರಿದು ಹೋಗಿದೆ.
ವಿಕ್ರಾಂತ್ ರೋಣ’ ಗಣೇಶನನ್ನು ಕೆತ್ತನೆ ಮಾಡಿ ನಿಲ್ಲಿಸಿರುವ ಯಶ್ವಂತ್‌ಗೆ ಬೇಜಾನ್ ಆರ್ಡರ್ ಬುಕ್ ಆಗಿದೆ. ಮಾಣಿಕ್ಯನ ಅಭಿಮಾನಿಗಳು ಮಾತ್ರವಲ್ಲ ಬೇರೆಯವರು ಕೂಡವಿಕ್ರಾಂತ್ ರೋಣ ಗಣೇಶನನ್ನು ಬುಕ್ ಮಾಡಿಕೊಂಡು ಮನೆಗೆ ಕೊಂಡೊಯ್ದಿದ್ದಾರಂತೆ. ಈ ಬಗ್ಗೆ ಖಾಸಗಿ ಪತ್ರಿಕೆಗೆ ಯಶ್ವಂತ್ ಸಂದರ್ಶನ ನೀಡಿದ್ದು ಖುಷಿ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈಗೇನಿದ್ರೂ ವಿಕ್ರಾಂತ್ ರೋಣನದ್ದೇ ಕಾರುಬಾರು. `ಊರಲ್ಲೆಲ್ಲಾ ಒಬ್ಬರದ್ದೇ ಸೌಂಡು ಅವರೇ ವಿಕ್ರಾಂತ್ ರೋಣ’ ಅಂತ ಶ್ರೀಲಂಕನ್ ಬ್ಯೂಟಿ ಹೇಳಿದ್ದೇ ಬಂತು ಸೌಂಡ್ ಇನ್ನೂ ಜಾಸ್ತಿಯಾಗಿದೆ. ಅನುಪ್ ಭಂಡಾರಿ ನಿರ್ದೇಶನದ-ಕಿಚ್ಚ ಅಭಿನಯದ- ಜಾಕ್‌ಮಂಜು ನಿರ್ಮಾಣದ ಈ ಮಹಾಮೂವೀಯ ಮೇಲಿನ ನಿರೀಕ್ಷೆ ಗಳಿಗಳಿಗೆಗೂ ಹೆಚ್ಚುತ್ತಲೇ ಇದೆ. ಡೆಡ್ಸ್ ಆಂಥಮ್ ಸಾಂಗ್ ಸುನಾಮಿ ಎಬ್ಬಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಜಾಕ್ವೆಲಿನ್ ಡಬ್ಬಿಂಗ್ ಮಾಡೋದಕ್ಕೆ ಮತ್ತೆ ಬೆಂಗಳೂರಿಗೆ ಬರಲಿದ್ದಾರೆ. ಅಲ್ಲಿವರೆಗೂ ಕಿಚ್ಚನಷ್ಟೇ ತಾಳ್ಮೆಯಿಂದ ನೀವೆಲ್ಲರೂ ಕಾಯ್ರಿ.
- ಎಂಟರ್‌ಟೈನ್ಮೆಂಟ್, ಬ್ಯೂರೋ ಸಿನಿಲಹರಿ