ಗಂಧದಗುಡಿಯ ಕಲಾವಿದರು ಒಬ್ಬೊಬ್ಬರಾಗಿ ಗಡಿದಾಟುತ್ತಿದ್ದಾರೆ. ಪರಭಾಷಾ ಅಂಗಳಕ್ಕೆ ಲಗ್ಗೆ ಇಟ್ಟು ಹವಾ ಎಬ್ಬಿಸುತ್ತಿದ್ದಾರೆ. ಅಖಾಡ ನಿಮ್ಮದಾದರೇನಂತೆ ಆಟ ನಮ್ದು ಅಂತ ತೊಡೆತಟ್ಟಿ ಫೀಲ್ಡ್ ಗೆ ಇಳಿಯುತ್ತಿರುವ ನಮ್ಮ ಚಂದನವನದ ಸ್ಟಾರ್ ಹೀರೋಗಳು ಪರರ ಅಖಾಡದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಅದೇ ಸಾಲಿನಲ್ಲಿ ಈಗ ಲೂಸಿಯಾ ಹೀರೋ ಸತೀಶ್ ನಿನಾಸಂ ಸರದಿ.
ಸತೀಶ್ ನಿನಾಸಂ ಸ್ಯಾಂಡಲ್‌ವುಡ್‌ನ ಒನ್ ಆಫ್ ದಿ ಫೈನೆಸ್ಟ್ ಆಕ್ಟರ್. ಗಾಡ್‌ಫಾದರ್‌ಗಳಿಲ್ಲದೇ ಗಂಧದಗುಡಿಗೆ ಕಾಲಿಟ್ಟ ಮಂಡ್ಯಹೈದ ಹೀರೋ ಪಟ್ಟಕ್ಕೇರಿದ್ದು ಇತಿಹಾಸವೇ ಸರೀ. ರಂಗಭೂಮಿಯಲ್ಲಿ ಪಳಗಿ ಥಿಯೇಟರ್‌ನಲ್ಲಿ ಕೆಲಸ ಮಾಡಿಕೊಂಡು ಬಣ್ಣದ ನಂಟನ್ನು ಬೆಸೆದುಕೊಂಡ ಸತೀಶ್ ನಿನಾಸಂ, ಸೀರಿಯಲ್‌ಗಳಲ್ಲಿ ಅಭಿನಯಿಸುತ್ತಾ, ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಾ `ಲೂಸಿಯಾ’ ಮೂಲಕ ಹೀರೋ ಆದರು. ಅಲ್ಲಿಂದ ಶುರುವಾದ ಹೀರೋಯಿಸಂ ಇವತ್ತು ಕ್ವಾಟ್ಲೇ ಹೀರೋನಾ ಗಡಿದಾಟಿಸಿದೆ. ತಮಿಳು ಚಿತ್ರರಂಗದಲ್ಲಿ ನಾಯಕನಟನಾಗಿ ಮೆರೆಯುವ ಗೋಲ್ಡನ್ ಚಾನ್ಸ್ ಸಿಕ್ಕಿದೆ.
ಯಸ್, ಲೂಸಿಯಾ ಹೀರೋ ಗಡಿದಾಟಿದ್ದಾರೆ. `ಪಗೈವುನುಕು ಅರುಳ್ವಾಯ್’ ಚಿತ್ರದ ಮೂಲಕ ಕಾಲಿವುಡ್‌ಗೆ ಗ್ರಾಂಡ್ ಎಂಟ್ರಿಕೊಟ್ಟಿದ್ದಾರೆ. ತಮಿಳಿನ ಪ್ರಖ್ಯಾತ ನಟ ನಿರ್ದೇಶಕ ಸಮುದ್ರಖಣಿಯವರು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸ್ಯಾಂಡಲ್‌ವುಡ್ ಹೀರೋನಾ ವೆಲ್‌ಕಮ್ ಮಾಡಿಕೊಂಡಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ, ಫಾರಿನ್‌ನಲ್ಲೆಲ್ಲೋ ಸೆಟಲ್ ಆಗಿರುವ ಮೋಹಕತಾರೆ ರಮ್ಯಾ ಮೇಡಂ, ಸತೀಶ್ ಅಭಿನಯದ ಚೊಚ್ಚಲ ತಮಿಳು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭಾಷಯ ಕೋರಿರುವುದು.
ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರದಿಂದ ಅಂತರ ಕಾಯ್ದುಕೊಂಡು ಬಿಂದಾಸ್ ಲೈಫ್ ಲೀಡ್ ಮಾಡ್ತಿರುವ ಗೋಲ್ಡನ್ ಕ್ವೀನ್, ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಇದೀಗ, ಅದೇ ಮೀಡಿಯಾನ ಬಳಸಿಕೊಂಡು ನಮ್ಮ ಹೀರೋ ಹೊಸ ಸಾಹಸಕ್ಕೆ ಪ್ಲಸ್ ಸಾಧನೆಗೆ ಸಾಥ್ ಕೊಟ್ಟಿದ್ದಾರೆ. ನಟ ಸತೀಶ್ ನಿನಾಸಂ ಪಾತ್ರ ಪರಿಚಯದ ಪೋಸ್ಟರ್ ರಿಲೀಸ್ ಮಾಡಿಕೊಟ್ಟು ಲೂಸಿಯಾ ಹೀರೋಗೆ ಹೊಸ ಹುರುಪು ತುಂಬಿದ್ದಾರೆ. ದಿಲ್ಲಿ ಮೇಡಂ ಸಾಥ್- ಶುಭಾಶಯ ಗಿಟ್ಟಿಸಿಕೊಂಡಿರುವ ಬ್ಯೂಟಿಫುಲ್ ಮನಸ್ಸಿನ ನಾಯಕ ಕಾಲಿವುಡ್ ಅಂಗಳದಲ್ಲೂ ಸುನಾಮಿ ಎಬ್ಬಿಸೋ ತವಕದಲ್ಲಿದ್ದಾರೆ.
ರಮ್ಯಾ ಮೇಡಂ ಜೊತೆಗೆ ಐಶಾನಿ ಶೆಟ್ಟಿ, ದಿಗಂತ್, ಅದಿತಿ ಪ್ರಭುದೇವ್, ರಾಗಿಣಿ, ಕಾರುಣ್ಯ, ರಕ್ಷಿತಾ ಪ್ರೇಮ್, ಶರ್ಮಿಳಾ ಮಾಂಡ್ರೆ, ನೆನಪಿರಲಿ ಪ್ರೇಮ್, ಶರಣ್, ರಾಜ್‌ವರ್ಧನ್, ಎ.ಪಿ ಅರ್ಜುನ್ ಲೂಸಿಯಾ ಪವನ್‌ಕುಮಾರ್, ಬಹದ್ದೂರ್ ಚೇತನ್, ಅಯೋಗ್ಯ ಮಹೇಶ್ ಸೇರಿದಂತೆ ಚಂದನವನದ ಹಲವು ಕಲಾವಿದರು ಮತ್ತು ನಿರ್ದೇಶಕರು ನಟ ಸತೀಶ್ ನಿನಾಸಂ ಹೊಸ ಜರ್ನಿಗೆ ಶುಭಹಾರೈಸಿದ್ದಾರೆ. ಗಡಿದಾಟಿದ ನನ್ನ ಮೊದಲ ಸಾಹಸಕ್ಕೆ ನನ್ನ ಜೊತೆ ಮತ್ತೆ ನೀವೆಲ್ಲರೂ ನಿಲ್ಲಬೇಕಿದೆ ಎಂದು ತಮ್ಮ ಅಭಿಮಾನಿ ದೇವರುಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಪಗೈವುನುಕು ಅರುಳ್ವಾಯ್' ಚಿತ್ರದಲ್ಲಿ ಇಬ್ಬರು ಹೀರೋಗಳು. ಸಸಿಕುಮಾರ್ ಜೊತೆ ಸತೀಶ್ ನಿನಾಸಂ ಲೀಡ್ ರೋಲ್‌ನಲ್ಲಿ ಅಭಿನಯಿಸಿದ್ದು,ವಾಣಿಭೋಜನ್ ನಾಯಕಿಯಾಗಿದ್ದಾರೆ. ಖ್ಯಾತ ಇಂಗ್ಲೀಷ್ ಸಾಹಿತಿ ವಿಲಿಯಂ ಷೇಕ್ಸ್ಪಿಯರ್‌ರ ಮ್ಯಾಕ್‌ಬೆತ್ ನಾಟಕದಿಂದ ಸ್ಪೂರ್ತಿ ಪಡೆದಿರುವ ಡೈರೆಕ್ಟರ್ ಅನೀಸ್ ಅಜಾನ್‌ದಾನ್,
ಪಗೈವುನುಕು ಅರುಳ್ವಾಯ್’ ಚಿತ್ರ ನಿರ್ದೇಶಿಸಿದ್ದಾರೆ. ಇದೊಂದು ಬಿಗ್‌ಬಜೆಟ್ ಸಿನಿಮಾ ಆಗಿದ್ದು, ಕರ್ನಾಟದ ವಿವಿಧ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ರಿಲೀಸ್‌ಗೆ ರೆಡಿಯಾಗ್ತಿದೆ. ಕನ್ನಡದಲ್ಲಿ ಪೆಟ್ರೋಮ್ಯಾಕ್ಸ್, ಗೋದ್ರಾ ಸಿನಿಮಾಗಳು ತೆರೆಗೆ ಅಪ್ಪಳಿಸೋಕೆ ಸಜ್ಜಾಗಿವೆ. ರಚಿತಾ ಜೊತೆ ಮ್ಯಾಟ್ನಿ, ಶರ್ಮಿಳಾ ಮಾಂಡ್ರೆ ಜೊತೆ ದಸರಾ ಸೇರಿದಂತೆ ಪರಿಮಳ ಲಾಡ್ಜ್, ಮೈ ನೇಮ್ ಈಸ್ ಸಿದ್ದೇಗೌಡ ಚಿತ್ರಗಳು ಸತೀಶ್ ಕೈಯ್ಯಲಿವೆ. ಒಟ್ನಲ್ಲಿ ಲೂಸಿಯಾ ಹೀರೋ ಸ್ಯಾಂಡಲ್‌ವುಡ್‌ನ ಬ್ಯುಸಿಯೆಸ್ಟ್ ಆಕ್ಟರ್ ಕಮ್ ಫೈನೆಸ್ಟ್ ಆಕ್ಟರ್. ಕನ್ನಡದಲ್ಲಿ ಬ್ಯುಸಿಯಾದಂತೆ ತಮಿಳು ಚಿತ್ರರಂಗದಲ್ಲೂ ಸತೀಶ್ ಬ್ಯುಸಿಯಾಗ್ಲಿ. ಕನ್ನಡದ ಕೀರ್ತಿಪತಾಕೆ ಕಾಲಿವುಡ್‌ನಲ್ಲಿ ಎತ್ತಿಹಿಡಿಯಲಿ.
- ಎಂಟರ್‌ಟೈನ್ಮೆಂಟ್ ಬ್ಯುರೋ ಸಿನಿಲಹರಿ