ನಾನೆಲ್ಲೂ ಓಡಿ ಹೋಗಿಲ್ಲ; ಓಡಿ ಹೋಗಲ್ಲ; ಮಾಧ್ಯಮ ಮುಂದೆ ಆಂಕರ್ ಅನುಶ್ರೀ ಪ್ರತ್ಯಕ್ಷ!


ಸ್ಯಾಂಡಲ್‌ವುಡ್ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎ2 ಆರೋಪಿ ಕಿಶೋರ್ ಶೆಟ್ಟಿ ಹೇಳಿಕೆಯನ್ನ ಆಧರಿಸಿ ಮಂಗಳೂರು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆಂದು ಸುದ್ದಿಯಾಗಿದೆ. ಕಿಶೋರ್ ಶೆಟ್ಟಿ ಅನುಶ್ರೀ ವಿರುದ್ದ ಹೇಳಿಕೆ ನೀಡಿದ್ದಾರೆಂದು ಮೊದಲು ಸುದ್ದಿಯಾಯ್ತು. ಕೊನೆಗೆ ಕಿಶೋರ್ ಶೆಟ್ಟಿ ನಾನು ಅನುಶ್ರೀ ವಿರುದ್ದ ಹೇಳಿಕೆ ನೀಡಿಲ್ಲವೆಂದು
ಡ್ರಗ್ಸ್ ಪಾರ್ಟಿ ಮಾಡಿಲ್ಲವೆಂದು ಕ್ಲ್ಯಾರಿಟಿ ಕೊಟ್ಟರು. ಅಷ್ಟಕ್ಕೂ, ಇದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು? ಎನ್ನುವುದು ಗೊಂದಲದ ಗೂಡಾಗಿದೆ. ಈ ನಡುವೆ ಕಿಶೋರ್ ಹೇಳಿಕೆ ಅನುಶ್ರೀಗೆ ಮುಳುವಾಗ್ಬೋದು, ನಶೆಯ ಸುಳಿಯಲ್ಲಿ ಸಿಲುಕಿ ಲಾಕ್ ಆಗ್ಬೋದು ಎನ್ನುವಂತಹ ಮಾತುಗಳು ಕೇಳಿಬಂದವು. ಎಲ್ಲಿ ಲಾಕ್ ಆಗ್ತೀನೋ ಎಂಬ ಭಯದಿಂದ ಆಂಕರ್ ಕಮ್ ನಟಿ ಅನುಶ್ರೀ ತಲೆಮರೆಸಿಕೊಂಡಿದ್ದಾರೆ, ಮುಂಬೈನಲ್ಲಿ ಅಡಗಿ ಕುಳಿತಿದ್ದಾರೆ ಅಂತೆಲ್ಲಾ ಚರ್ಚೆಯಾಯ್ತು. ಇದೆಲ್ಲದಕ್ಕೂ ಸ್ವತಃ ಅನುಶ್ರೀ ಫುಲ್ ಸ್ಟಾಪ್ ಹಾಕಿದ್ದಾರೆ. ವೃತ್ತಿ ನಿಮಿತ್ತ ಮುಂಬೈಗೆ ಹೋಗಿದ್ದು ನಿಜ ಆದರೆ ನಾನು ಓಡಿಹೋಗಿಲ್ಲ. ಎಂತಹದ್ದೇ ಸಂದರ್ಭ ಬಂದರೂ ಕೂಡ ಎದುರಿಸಿ ನಿಲ್ತೇನೆ ಹೊರೆತು ಈ ಕನ್ನಡ ನೆಲ ಬಿಟ್ಟು ಓಡಿಹೋಗೋದಿಲ್ಲ ಎಂದಿದ್ದಾರೆ.

ಅಷ್ಟಕ್ಕೂ, ಕಳೆದ ವರ್ಷ ಮಂಗಳೂರು ಸಿಸಿಬಿ ಪೊಲೀಸರು ನನ್ನ ಕರೆಸಿ ತನಿಖೆ ಮಾಡಿದ್ದು ನಾನು ಆರೋಪಿ ಅಥವಾ ಅಪರಾಧಿ ಎನ್ನುವ ಕಾರಣಕ್ಕೆ ಅಲ್ಲ. ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ತರುಣ್ ಇಬ್ಬರು ಕೂಡ ನನ್ನ ಡ್ಯಾನ್ಸ್ ರಿಯಾಲಿಟಿ ಶೋಗೆ ಕೊರಿಯಾಗ್ರಫಿ ಮಾಡಿದ್ದರು. ಹೀಗಾಗಿ ನನ್ನ ಕರೆಸಿ ತನಿಖೆ ನಡೆಸಿದ್ದರು. ನಾನು ತನಿಖೆಗೆ ಸ್ಪಂಧಿಸಿ ಅವರು ಏನೆಲ್ಲಾ ಪ್ರಶ್ನೆಗಳನ್ನ ಕೇಳಿದ್ದರೋ ಅದೆಲ್ಲದಕ್ಕೂ ಉತ್ತರಿಸಿ ಬಂದಿದ್ದೆ. ಈಗ, ಚಾರ್ಜ್ಶೀಟ್‌ನಲ್ಲಿ ನನ್ನ ಹೆಸರು ಕೇಳಿಬಂದಿದೆ ಎನ್ನುವ ಸುದ್ದಿ ಹರಿದಾಡ್ತಿದೆ. ಒಂದ್ವೇಳೆ ನನ್ನ ಹೆಸರು ಚಾರ್ಜ್ ಶೀಟ್‌ನಲ್ಲಿದ್ದು, ಆರೋಪಿ ಕಿಶೋರ್ ಶೆಟ್ಟಿ ನನ್ನ ವಿರುದ್ದ ಹೇಳಿಕೆ ನೀಡಿದ್ದರೆ, ಪೊಲೀಸರು ತನಿಖೆಗೆ ಕರೆದರೆ ನಾನು ಹಾಜರಾಗ್ತೀನಿ ಮತ್ತು ತನಿಖೆಗೆ ಸ್ಪಂಧಿಸ್ತೇನೆ ಎಂದಿದ್ದಾರೆ.

ನನ್ನ ವಿರುದ್ದ ನೂರು ಜನ ನೂರು ಮಾತನಾಡ್ತಿದ್ದಾರೆ ಮತ್ತು ಆರೋಪ ಮಾಡ್ತಿದ್ದಾರೆ. ಅವರೆಲ್ಲರ ಮಾತಿಗೆ ಹಾಗೂ ಆರೋಪಕ್ಕೆ ನಾನು ಉತ್ತರ ಕೊಡುವುದಿಲ್ಲ. ಕಾನೂನಿದೆ, ಪೊಲೀಸರು ತನಿಖೆ ಮಾಡ್ತಿದ್ದಾರೆ ಮಾಡಲಿ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಹೀಗಾಗಿ ನಾನು ಕಾನೂನಿಗೆ ತಲೆಬಾಗ್ತೀನಿ ಎಂದಿದ್ದಾರೆ. ಅಷ್ಟೇ ಅಲ್ಲದೇ ಬೆಂಗಳೂರಲ್ಲಿ ೪ ಕೋಟಿ ಮನೆಯಿದೆ, ಮಂಗಳೂರಲ್ಲಿ ೧೨ ಕೋಟಿ ಮನೆಯಿದೆ ಅಂತೆಲ್ಲಾ ಹೇಳಿಕೆ ಕೊಡ್ತಿದ್ದಾರೆ. ಕಳೆದ ೩ ವರ್ಷದಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಿದ್ದೇನೆ. ಬ್ಯಾಂಕ್‌ನಲ್ಲಿ ಲೋನ್ ಪಡೆದು ಮಂಗಳೂರಿನಲ್ಲಿ ಮನೆ ಕಟ್ಟಿದ್ದೇನೆ. ಕಷ್ಟಪಟ್ಟು ಕೆಲಸ ಮಾಡಿ ದುಡಿದು ಬದುಕುತ್ತಿದ್ದೇನೆ. ಯಾವ ಪ್ರಭಾವಿಗಳ ಸಹಾಯವೂ ನನಗಿಲ್ಲ. ಯಾರ ಸಹಾಯವೂ ನನಗೆ ಬೇಕಾಗಿಲ್ಲ. ಏನೇ ಬಂದರೂ ಒಬ್ಬಳೇ ಎದುರಿಸುತ್ತೇನೆ. ಬೆಂಗಳೂರಿಗೆ ಒಬ್ಬಳೇ ಬಂದಿದ್ದೇನೆ, ಬದುಕು ಕಟ್ಟಿಕೊಂಡಿದ್ದೇನೆ. ಹಾಗೆಯೇ ಒಬ್ಬಳೇ ಮುಂದೆ ಸಾಗುತ್ತೇನೆ ಎಂದು ಹೆಮ್ಮೆಯಿಂದ ಮಾತನಾಡಿದ್ದಾರೆ ಆಂಕರ್ ಕಮ್ ನಟಿ ಅನುಶ್ರೀಯವರು

Related Posts

error: Content is protected !!