ಬರ್ಕ್ಲಿ ಲಿರಿಕಲ್‌ ಸಾಂಗ್‌ ರಿಲೀಸ್‌ ; ಹಾಡು ಕೇಳಿದ ಮಂದಿಯಿಂದ ಮೆಚ್ಚುಗೆ

ಹಬ್ಬಗಳು ಬಂದರೆ ಸಿನಿಮಾ ಮಂದಿಗೆ ಅದೊಂದು ರೀತಿ ದೊಡ್ಡ ಸಂಭ್ರಮ. ಕಾರಣ, ತಮ್ಮ ಸಿನಿಮಾಗಳ ಪೋಸ್ಟರ್‌, ಟೀಸರ್‌, ಟ್ರೇಲರ್‌, ಸಾಂಗ್‌ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರುವಿಟ್ಟುಕೊಳ್ಳುತ್ತಾರೆ. ಆ ಸಾಲಿಗೆ “ಬರ್ಕ್ಲಿʼ ಸಿನಿಮಾ ಕೂಡ ಸೇರಿದೆ. ಹೌದು, ಗೌರಿ-ಗಣೇಶ ಹಬ್ಬಕ್ಕೆ “ಬರ್ಕ್ಲಿ” ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆಗೂ ಪಾತ್ರವಾಗಿದೆ.

ಸಂತೋಷ್ ಬಾಲರಾಜ್ ಹೀರೋ ಆಗಿರುವ ಈ ಚಿತ್ರವನ್ನು ಸುಮಂತ್ ಕ್ರಾಂತಿ ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ “ಬರ್ಕ್ಲಿ” ಚಿತ್ರದ ಲಿರಿಕಲ್ ಸಾಂಗ್ ಝೇಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಬಹದ್ದೂರ್ ಚೇತನ್ ಬರೆದಿರುವ ಈ ಹಾಡನ್ನು ಸಂಜಿತ್ ಹೆಗ್ಡೆ‌ ಹಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಇರುವ ಚಿತ್ರವನ್ನು ಸಂತೋಷ್ ಎಂಟರ್ ಪ್ರೈಸಸ್ ಬ್ಯಾನರ್‌ನಲ್ಲಿ ಆನೇಕಲ್ ಬಾಲರಾಜ್ ನಿರ್ಮಿಸಿದ್ದಾರೆ.
ಸದ್ಯ ಚಿತ್ರದ ಮೊದಲ ಪ್ರತಿ ಸಿದ್ಧವಾಗುತ್ತಿದೆ. “ಕರಿಯ”, “ಗಣಪ”, “ಕರಿಯ ೨”, ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಅವರ ನಿರ್ಮಾಣದ ಮತ್ತೊಂದು ಅದ್ದೂರಿ ಚಿತ್ರ “ಬರ್ಕ್ಲಿ‌”. ಉತ್ತಮ‌ ಮನೋರಂಜನೆಯ ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.


ಗಣಪ, ಕರಿಯ ೨ ಚಿತ್ರಗಳಲ್ಲಿ ನಟಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ಬಾಲ್ಯದಲ್ಲಿ ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್ ನಾಟೇಕರ್ ಈ ಚಿತ್ರದ ನಾಯಕಿ. ಬಹುಭಾಷ ನಟ ಚರಣರಾಜ್, ಖ್ಯಾತ ನಟಿ ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಇತರರು ನಟಿಸಿದ್ದಾರೆ.

Related Posts

error: Content is protected !!