Categories
ಸಿನಿ ಸುದ್ದಿ

ಅನಿರುದ್ಧ್ ವಾಯ್ಸ್!‌‌ ಆಪರೇಶನ್ D ಸಾಂಗ್ಸ್; ಫಸ್ಟ್‌ ಟೈಮ್‌ ಎಲ್ಲಾ ಸಾಂಗ್‌ ಹಾಡಿದ್ರು ಶಾಸ್ತ್ರಿ

ಅದ್ವಿತ ಫಿಲಂ ಫ್ಯಾಕ್ಟರಿ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಆಪರೇಶನ್ D” ಚಿತ್ರದ ಹಾಡುಗಳ ಧ್ವನಿಮುದ್ರಣ ಪೂರ್ಣಗೊಂಡಿದೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನಾಲ್ಕನ್ನು ಅನಿರುದ್ಧ್ ಶಾಸ್ತ್ರಿ ಅವರೇ ಹಾಡಿರುವುದು ವಿಶೇಷ. ಚಿತ್ರದ ಎಲ್ಲಾ ಹಾಡುಗಳನ್ನು ತಾವೇ ಹಾಡಿರುವುದು ಇದೇ ಮೊದಲು ಎಂಬುದು ಅನಿರುದ್ಧ್ ಶಾಸ್ತ್ರಿ ಮಾತು. ವೇದಿಕ ಹಾಗೂ ಪೃಥ್ವಿ ಭಟ್ (ಸರಿಗಮಪ ಖ್ಯಾತಿ) ಸಹ ಅನಿರದ್ಧ್ ಅವರೊಂದಿಗೆ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.

ಸದ್ಯದಲ್ಲೇ ಆಡಿಯೋ ರಿಲೀಸ್ ಆಗಲಿದೆ. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ನಾಲ್ಕು ಹಾಡು ಹಾಗೂ ಮೂರು ಸಾಹಸ ಸನ್ನಿವೇಶಗಳ ಚಿತ್ರೀಕರಣ ಬಾಕಿಯಿದೆ. ಕಲಾವಿದರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ತಿರುಮಲೇಶ್, ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ರಾಜ ರವಿಶಂಕರ್, ತಿರುಮಲೇಶ್, ಸಿದ್ದರಾಜು, ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ.


ವೇದಿಕ ಹಾಗೂ ದ್ವೇಪಾಯನ‌ ಸಿಂಗ ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕೆಂಪಗಿರಿ ಹಾಗೂ ವೇದಿಕ ಹಾಡುಗಳನ್ನು ರಚಿಸಿದ್ದಾರೆ. ಕಾರ್ತಿಕ್ ಪ್ರಸಾದ್ ಛಾಯಾಗ್ರಹಣವಿದೆ. ವಿಕ್ರಮ್ ಶ್ರೀಧರ್ ಸಂಕಲನವಿದೆ. ತರ್ಮಾಕೋಲ್ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಕ್ರಿಯೇಟಿವ್ ಹೆಡ್ ಸುರೇಶ್ ಜಯ ಹರಿಪ್ರಸಾದ್ (ಜೆರ್ರಿ ಮಾಸ್ಟರ್‌) ನೃತ್ಯ ನಿರ್ದೇಶನವಿದೆ. ವಿನೋದ್ ದೇವ್, ಸುಹಾಸ್ ಆತ್ರೇಯ (ಕಮಲಿ ಧಾರಾವಾಹಿ), ರುದ್ರೇಶ್ ಬುದನೂರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯರಾಗಿ ಸ್ನೇಹ ಭಟ್, ಇಂಚರ ಬಿ ಚನ್ನಪ್ಪ ಇದ್ದಾರೆ. ಶಿವಮಂಜು, ವೆಂಕಟಾಚಲ, ರಂಗನಾಥ ಬಿ, ಶ್ರೀಧರ್ ಟಿ ಎಸ್, ಸುರೇಶ್ ಬಿ, ಶಿವಾನಂದ, ಮಹೇಶ್ ಎಸ್ ಕಲಿ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ವ್ಹೀಲ್ ಚೇರ್‌ ರೋಮಿಯೊ ಚಿತ್ರದ ಲಿರಿಕಲ್‌ ಸಾಂಗ್‌ ರಿಲೀಸ್‌ ರಂಗುರಾಟೆ ಹಾಡಿಗೆ ಭರಪೂರ ಮೆಚ್ಚುಗೆ

ಕನ್ನಡದಲ್ಲಿ ವಿಭಿನ್ನ ಕಥೆಯುಳ್ಳ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ ಮತ್ತೊಂದು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದರೆ, ಅದು “ವ್ಹೀಲ್‌ ಚೇರ್‌ ರೋಮಿಯೊ”. ಹೌದು, ಈ ಚಿತ್ರದ ಹಾಡೊಂದು ರಿಲೀಸ್‌ ಆಗಿದೆ. ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ “ರಂಗುರಾಟೆ” ಎಂಬ ಹಾಡು ಇದೀಗ ರಿಲೀಸ್‌ ಆಗಿದ್ದು, ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.


ವಿಭಿನ್ನ ಕಥಾಹಂದರ ಹೊಂದಿರುವ “ವ್ಹೀಲ್ ಚೇರ್ ರೋಮಿಯೋ” ಚಿತ್ರದ ಈ ಹಾಡಿಗೆ .ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಝೇಂಕಾರ್‌ ಮ್ಯೂಸಿಕ್ ಮೂಲಕ ಹಾಡು ರಿಲೀಸ್‌ ಆಗಿದೆ. ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತವಿದೆ. ಸದ್ಯದಲ್ಲೇ “ವ್ಹೀಲ್ ಚೇರ್ ರೋಮಿಯೋ” ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ವಿಕಲ ಚೇತನವೊಬ್ಬನ ಲವ್‌ಸ್ಟೋರಿ ಚಿತ್ರದ ಹೈಲೈಟ್.‌ ಕಾಲು ಕಳೆದುಕೊಂಡಿರುವ ಹುಡುಗನ ಪಾತ್ರದಲ್ಲಿ ರಾಮ್ ಚೇತನ್ ಅಭಿನಯಿಸಿದ್ದಾರೆ. ಕಣ್ಣಿಲ್ಲದಿರುವ ಹುಡುಗಿಯ ಪಾತ್ರದಲ್ಲಿ ಮಯೂರಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲ ನಾಣಿ, ಗಿರೀಶ್ ಶಿವಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


ತಂದೆ-ಮಗನ‌ ಬಾಂಧವ್ಯದ ಸನ್ನಿವೇಶಗಳು ಚಿತ್ರದ ಮತ್ತೊಂದು ಹೈಲೈಟ್.‌ .ನಟರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಮೂಲಕ ಟಿ.ವೆಂಕಟಾಚಲಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. .ನಾಗೇಂದ್ರ ಪ್ರಸಾದ್ ಹಾಗೂ ಜಯಂತ್ ಕಾಯ್ಕಿಣಿ ಅವರು ಬರೆದಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಸಂತೋಷ್ ಪಾಂಡಿ ಛಾಯಾಗ್ರಹಣ, ಕಿರಣ್ ಸಂಕಲನ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಕಂಬಿರಾಜು ನೃತ್ಯ ನಿರ್ದೇಶನವಿದೆ.

Categories
ಸಿನಿ ಸುದ್ದಿ

1980 ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್;‌ ಇದು ಪ್ರಿಯಾಂಕ ಉಪೇಂದ್ರ ನಟನೆಯ ಚಿತ್ರ

ಪ್ರಿಯಾಂಕ ಉಪೇಂದ್ರ ಅಭಿನಯದ 1980 ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿಶೇಷವೆಂದರೆ, ಈ ಚಿತ್ರದ ಟ್ರೇಲರ್‌ ಅನ್ನು ನಟ ಸುದೀಪ್‌ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತಿಗಿಳಿದ ಸುದೀಪ್‌, “ನಾನು ಎರಡು ವರ್ಷಗಳಿಂದ ದೊಡ್ಡ ಪರದೆಯ ಮೇಲೆ ಚಿತ್ರವನ್ನಾಗಲಿ, ಟ್ರೇಲರ್ ಆಗಲಿ ನೋಡಿಲ್ಲ.‌ ತುಂಬಾ ದಿನಗಳ ನಂತರ ಈ ಅವಕಾಶ ತಂದುಕೊಟ್ಟ ಚಿತ್ರತಂಡಕ್ಕೆ ಧನ್ಯವಾದ. ಚಿತ್ರದ ಬಿಡುಗಡೆ ವೇಳೆಗೆ ಈಗಿರುವ ಸಂಕಷ್ಟದ ಪರಿಸ್ಥಿತಿ ದೂರವಾಗಿ, ಜನರಿಂದ ‌ಚಿತ್ರಮಂದಿರ ತುಂಬಿ ತುಳುಕುವಂತಾಗಲಿ ಎಂದು ಶುಭ ಕೋರಿದರು. ಇನ್ನು, ನಟ ಉಪೇಂದ್ರ ಕೂಡ ಈ ವೇಳೆ ಮಾತಿಗಿಳಿದರು. “ವಿಭಿನ್ನ ಕಥೆ ಇಟ್ಟುಕೊಂಡು, ನಿರ್ದೇಶಕರು ಹೊಸತನ್ನು ಹೇಳ ಹೊರಟ್ಟಿದ್ದಾರೆ. ಚಿತ್ರ ನಮ್ಮ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹರಸಿ ಅಂದರು.

ಅಂದು ನಟಿ ಪ್ರಿಯಾಂಕ ಉಪೇಂದ್ರ ಹೈಲೈಟ್‌ ಆಗಿದ್ದರು. ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್ ಹಾಗೂ ಉಪೇಂದ್ರ ಅವರಿಗೆ ಧನ್ಯವಾದ ಹೇಳಿದ ಪ್ರಿಯಾಂಕ, “ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ತುಂಬಾ ಚೆನ್ನಾಗಿದೆ. ಪ್ಯಾರಲಲ್ ಯುನಿವರ್ಸಲ್ ನ ಈ ಕಥಾಹಂದರ ನೋಡುಗರ ಮನ ಗೆಲ್ಲಲಿದೆ. ಚಿತ್ರೀಕರಣದ ವೇಳೆ ಲಾಕ್ ಡೌನ್ ಮುಂತಾದ ಸಮಸ್ಯೆ ಎದುರಾದವು. ಇಲ್ಲದಿದ್ದರೆ ಕಳೆದ ಮೇನಲ್ಲಿ ಈ ಚಿತ್ರ ತೆರೆಗೆ ಬರಬೇಕಿತ್ತು. ಇದೇ ಅಕ್ಟೋಬರ್ ೧೫ ಚಿತ್ರ ನಮ್ಮ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಹಾರೈಸಿ ಅನ್ನೋದು ಪ್ರಿಯಾಂಕ ಮಾತು.


“ನನ್ನ ಈ ಕಥೆಗೆ ಕೆಲವು ಇಂಗ್ಲೀಷ್ ಸಿನಿಮಾಗಳು ಸ್ಪೂರ್ತಿ ಎನ್ನಬಹುದು. ಪ್ಯಾರಲಲ್ ಯುನಿವರ್ಸಲ್ ಕಥೆ ಆಧಾರಿತ ಚಿತ್ರ ನನಗೆ ತಿಳಿದ ಮಟ್ಟಿಗೆ ಇದೇ ಮೊದಲು ಎನ್ನಬಹುದು. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂಬ ಭರವಸೆ ಇದೆ. ಎಲ್ಲರ ಹಾರೈಕೆ ಇರಲಿ ಎಂಬುದು ನಿರ್ದೇಶಕ ರಾಜ್ ಕಿರಣ್ ಮಾತು. ನಟ ನಿರಂಜನ್ ಸುಧೀಂದ್ರ, ನಿರ್ಮಾಪಕ ಜಾಕ್ ಮಂಜು, ನಮ್ಮ ಫ್ಲಿಕ್ಸ್ ನ ವಿಜಯ ಕುಮಾರ್ ಇದ್ದರು. ಈ ಚಿತ್ರವನ್ನು ಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಪೂಜಾಶ್ರೀ ಹಾಗೂ ಸ್ವಾಮಿರಾಜ್ ನಿರ್ಮಿಸಿದ್ದಾರೆ. ಬಹುತೇಕ ಈ ಚಿತ್ರದ ಚಿತ್ರೀಕರಣ ಶನಿವಾರಸಂತೆ ಸುತ್ತಮುತ್ತ ನಡೆದಿದೆ. ಚಿತ್ರಕ್ಕೆ ರಾಜ್ ಕಿರಣ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮ ಇತರರು ನಟಿಸಿದ್ದಾರೆ. ಚಿಂತನ್ ವಿಕಾಸ್ ಸಂಗೀತವಿದೆ. ಜೀವನ್ ಆಂತೋಣಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನವಿದೆ.

Categories
ಸಿನಿ ಸುದ್ದಿ

ಡೈಲಾಗ್ ರೈಟರ್ ಗುರುಗೆ ಹೃದಯಘಾತ; ಕಂಬನಿ ಮಿಡಿದ ಕನ್ನಡ ಚಿತ್ರರಂಗ !

ವಿಧಿ ಅಕ್ಷರಶಃ ಕ್ರೂರಿ ಬಿಡ್ರಿ. ಸ್ಯಾಂಡಲ್‌ವುಡ್ ಗುರುನಾ ಏಕಾಏಕಿ ಕಿತ್ಕೊಂಡ ಆ ವಿಧಿಗೆ ಹಿಡಿಶಾಪ ಹಾಕ್ಲೆಬೇಕು. ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಇದ್ದ, ಕಲಾಸರಸ್ವತಿಯನ್ನ ಆರಾಧನೆ ಮಾಡುತ್ತಿದ್ದ, ಅಕ್ಷರಗಳಿಗೆ ಜೀವತುಂಬಿ ಬರೆಯುತ್ತಿದ್ದ, ಗಂಧದಗುಡಿಯಲ್ಲಿ ಬಹುಬೇಡಿಕೆಯ ಸಂಭಾಷಣೆಕಾರರಾಗಿ ಗುರ್ತಿಸಿಕೊಂಡಿದ್ದ, ಗುರುಕಶ್ಯಪ್‌ನ ಜವರಾಯ ಏಕ್ದಮ್ ಕಿತ್ಕೊಂಡಿದ್ದಾನೆ. ಮುಂದೆಂದೂ ತಿರುಗಿ ಬಾರದ ಲೋಕಕ್ಕೆ ಎಳೆದೊಯ್ದಿದ್ದಾನೆ. ಗುರುನಾ ಕಳೆದುಕೊಂಡ ಚಂದನವನ ಕಂಬನಿ ಮಿಡಿಯುತ್ತಿದೆ.

ಗುರುಕಶ್ಯಪ್ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸಂಭಾಷಣೆಕಾರರಾಗಿ ಹೆಸರು ಮಾಡಿದ್ದರು. ರಮೇಶ್ ಅರವಿಂದ್ ನಟನೆಯ ಪುಷ್ಪಕ ವಿಮಾನ', ಸುಂದರಾಂಗ ಜಾಣ, ೧೦೦ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು. ಪ್ರಿಯಾಂಕ ಉಪೇಂದ್ರ ಅಭಿನಯದದೇವಕಿ’ ಚಿತ್ರಕ್ಕೆ ಡೈಲಾಗ್ಸ್ ಗೀಚಿದ್ದರು. ಇದಲ್ಲದೇ ಸುಮಾರು ೧೫ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ಒದಗಿಸಿದ್ದರು. ಗುರುಕಶ್ಯಪ್ ನಿಧನಕ್ಕೆ ರಮೇಶ್ ಅರವಿಂದ್ ಸಂತಾಪ ಸೂಚಿಸಿದ್ದಾರೆ. `ನಾನು ಕಂಡಂತ ಅತಿ ಪ್ರತಿಭಾವಂತರಲ್ಲಿ ಗುರುಕಶ್ಯಪ್ ಕೂಡ ಒಬ್ಬರು. ಒಬ್ಬ ಒಳ್ಳೆಯ ವ್ಯಕ್ತಿ, ಶ್ರೇಷ್ಟ ಬರಹಗಾರರನ್ನು ಕಳೆದುಕೊಂಡಿದ್ದೇವೆ ಓಂ ಶಾಂತಿ’ ಎಂದು ಟ್ವೀಟ್ ಮಾಡಿದ್ದಾರೆ.

ತಾವು ಜೀವತುಂಬಿ ಸಂಭಾಷಣೆ ಒದಗಿಸುತ್ತಿದ್ದ ಸಿನಿಮಾಗಳು ಬೆಳ್ಳಿಪರದೆ ಮೇಲೆ ತೆರೆಕಾಣುವ ಮೊದಲೇ ಗುರುಕಶ್ಯಪ್ ಇಹಲೋಕ ತ್ಯಜಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಭೈರಾಗಿ', ಡಾಲಿ ಧನಂಜಯ್ ಅಭಿನಯಿಸಿರುವಮಾನ್ಸೂನ್ ರಾಗ’, ವ್ಹೀಲ್‌ಚೇರ್ ರೋಮಿಯೋ, ಸತ್ಯಮಂಗಲ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಡೈಲಾಗ್ ಬರೆಯುತ್ತಿದ್ದರು. ಗುರುಕಶ್ಯಪ್ ಅವ್ರದ್ದು ಸಾಯೋ ವಯಸ್ಸಲ್ಲ. ೪೫ ವರ್ಷ ವಯಸ್ಸಾಗಿತ್ತಷ್ಟೇ, ಸೋಮವಾರ ರಾತ್ರಿ ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಹಾಗೂ ಮಗಳನ್ನ ಅಗಲಿದ್ದಾರೆ. ಡಾಲಿ ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಗುರುಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ.

ಗುರುಕಶ್ಯಪ್ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ. ಪುಷ್ಪಕ ವಿಮಾನ' ನಿರ್ದೇಶಕ ರವೀಂದ್ರನಾಥ್ಗುರು ದೇವ್ರಂತ ಮನುಷ್ಯರಾಗಿದ್ದರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ’. ಇನ್ಸ್ಪೆಕ್ಟರ್ ವಿಕ್ರಮ್ ಚಿತ್ರಕ್ಕೆ ಗುರು ಸಂಭಾಷಣೆ ಬರೆದುಕೊಟ್ಟಿದ್ದರು. `ಗುರುನಾ ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವೇ ಸರಿ ‘ನಟ ರಘುಮುಖರ್ಜಿ ಟ್ವೀಟ್ ಮಾಡಿದ್ದಾರೆ. ಇವರಷ್ಟೇ ಅಲ್ಲ ಕಲಾವಿದರಾದ ಧರ್ಮಣ್ಣ ಕಡೂರ್, ನಟಿ ಆರೋಹಿ ನಾರಾಯಣ್, ಮಮ್ಮಿ ನಿರ್ದೇಶಕ ಲೋಹಿತ್, ನಿರ್ದೇಶಕ ಆಕಾಶ್ ಶ್ರೀವತ್ಸ ಸೇರಿದಂತೆ ಹಲವರು ಗುರು ಅಗಲಿಕೆ ಕಣ್ಣೀರು ಹಾಕಿದ್ದಾರೆ.

  • ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಗಂಧದಗುಡಿಯ ಯುವರಾಜ ನಿಖಿಲ್ ಪತ್ನಿಗೆ ಸೀಮಂತ : ಆನಂದದ ಕಡಲಲ್ಲಿ ದೊಡ್ಡಗೌಡ್ರ ಕುಟುಂಬ !

ಬರ್ತಾನವ್ವ ಭೂಪ..ಬರ್ತಾನವ್ವ ಭೂಪ..ದೊಡ್ಮನೆ ಯುವರಾಣಿ ಮಡಿಲಿನಲಿ. ಮುತ್ತು ರತ್ನದಂತೆ..ಬೆಳ್ಳಿ ಬೊಂಬೆ ಯಂತೆ..ದೊಡ್ಡಗೌಡರ ವಂಶದಲ್ಲಿ. ಯಸ್, ದೊಡ್ಡಗೌಡರ ಕುಟುಂಬದಲ್ಲಿ ಸಂತೋಷ-ಸಂಭ್ರಮ ಮನೆಮಾಡಿದೆ.ಕರುಳ ಕುಡಿಯನ್ನ ಸ್ವಾಗತಿಸುವುದಕ್ಕೆ ಕಾತುರದಿಂದ ಕಾಯ್ತಿದೆ. ಪುಟ್ಟ ಕಂದಮ್ಮನ ಆಗಮನಕ್ಕಾಗಿ ತುದಿಗಾಲಿನಲ್ಲಿ ನಿಂತಿರುವ ಗೌಡ್ರ ಫ್ಯಾಮಿಲಿ, ವಿಜೃಂಭಣೆಯಿಂದ ಸೀಮಂತಶಾಸ್ತ್ರ ನೆರವೇರಿಸಿದ್ದಾರೆ.

ದೊಡ್ಡಗೌಡರ ಮನೆ-ಮನದಂಗಳದಲ್ಲಿ ಸಂತೋಷ- ಸಂಭ್ರಮ ಹಾಗೂ ಹಬ್ಬದ ವಾತಾವರಣ. ಆನಂದಸಾಗರದಲ್ಲಿ, ಖುಷಿಯ ಅಲೆಯಲ್ಲಿ ಗೌಡ್ರ ಕುಟುಂಬ ನಲಿಯುತ್ತಿದೆ. ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ತಮ್ಮ ಮನೆಯ ಕೀರ್ತಿಯ ಕೂಸನ್ನ ಮಡಿಲಲ್ಲಿ ಹೊತ್ತಿರುವ, ಮನೆಮಗಳ ರೂಪದಲ್ಲಿರುವ ರೇವತಿಗೆ ಸೀಮಂತಕಾರ್ಯ ನಡೆಸಿದ್ದಾರೆ. ಎಚ್ ಎಸ್ ಆರ್ ಲೇಔಟ್‌ನ ಖಾಸಗಿ ಕನ್ವೆಷನ್ ಹಾಲ್‌ನಲ್ಲಿ ಗೌಡ್ರ ಕುಟುಂಬ ವಿಜೃಂಭಣೆಯಿಂದ ಸೀಮಂತಶಾಸ್ತ್ರವನ್ನು ಮಾಡಿಮುಗಿಸಿದ್ದಾರೆ.

ಪ್ರತಿಹೆಣ್ಣು ತನ್ನ ಮದುವೆ ಬಗ್ಗೆ ಎಷ್ಟು ಕನಸುಗಳನ್ನ ಕಂಡಿರುತ್ತಾಳೋ ಅಷ್ಟೇ ಆಸೆ-ಕನಸು ತನ್ನ ಸೀಮಂತಶಾಸ್ತ್ರದ ಮೇಲೆಯೂ ಹೊತ್ತಿರುತ್ತಾಳೆ. ಅದರಂತೇ, ರೇವತಿ ಕೂಡ ಬೇಬಿಶವರ್ ಮೇಲೆ ಮಹದಾಸೆ ಹೊತ್ತಿದ್ದರು. ಪತ್ನಿ ರೇವತಿಯ ಕನಸಿನಂತೆಯೇ ನಿಖಿಲ್ ಸೀಮಂತಶಾಸ್ತ್ರವನ್ನು ಅರೇಂಜ್ ಮಾಡಿದ್ದರು. ವೈಟ್ ಅಂಡ್ ವೈಟ್ ಲುಕ್‌ನಲ್ಲಿ ಗೌಡ್ರುಡುಗ ನಿಖಿಲ್ ಮಿಂಚಿದರೆ, ಗೋಲ್ಡನ್ ವಿತ್ ಆರೇಂಜ್ ಕಲರ್ ಕಾಂಬಿನೇಷನ್ ರೇಷ್ಮೆಸ್ಯಾರಿಯಲ್ಲಿ ರೇವತಿ ಕಂಗೊಳಿಸಿದರು. ಅಪ್ಪ-ಅಮ್ಮನಾಗಿ ಪ್ರಮೋಷನ್ ಪಡೆಯುತ್ತಿರುವ ನಿಖಿಲ್-ರೇವತಿ ಖುಷಿಖುಷಿಯಾಗಿ ಈ ರೀತಿ ಕ್ಯಾಮೆರಾಗೆ ಪೋಸ್ ಕೊಟ್ಟರು ನೋಡಿ.

ಕೊರೊನಾ ಆತಂಕದ ಹಿನ್ನಲೆ ಕುಟುಂಬಸ್ತರ ಜೊತೆಗೆ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಸಿನಿಮಾ ಹಾಗೂ ರಾಜಕೀಯ ಲೋಕದ ಕೆಲವೇ ಕೆಲವು ಗಣ್ಯರು ಸೀಮಂತಶಾಸ್ತ್ರದಲ್ಲಿ ಭಾಗಿಯಾಗಿದ್ದರು. ದೊಡ್ಡಗೌಡರ ಕುಡಿಯನ್ನ ಹೊತ್ತಿರುವ ರೇವತಿಗೆ ಶುಭಹಾರೈಸಿದರು. ಅಂದ್ಹಾಗೇ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಿಖಿಲ್-ರೇವತಿಗೆ ಗಂಡುಮಗು ಜನಿಸುವುದಾಗಿ ವಿನಯ್ ಗುರೂಜಿ ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಆ ಮಗು ಭವಿಷ್ಯ ಉಜ್ವಲವಾಗಿರುತ್ತದಲ್ಲದೇ ನಿಖಿಲ್‌ಗೆ ಶಾಸಕನಾಗುವ ಅದೃಷ್ಠ ಇರುವುದಾಗಿ ವಿನಯ್ ಗುರೂಜಿ ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್‌ಕುಮಾರಸ್ವಾಮಿಯವರು ಸಿನಿಮಾ ಮಾತ್ರವಲ್ಲದೇ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್, ಗಂಧದಗುಡಿಯ ಅಂಗಳದಲ್ಲಿ ಗೆಲುವಿನ ಗದ್ದುಗೆ ಏರುವುದರ ಜೊತೆಗೆ ರಾಜಕೀಯ ನಾಯಕರಾಗಿ ಅಧಿಕಾರದ ಚುಕ್ಕಾಣಿ ಹಿಡಿಬೇಕು ಎನ್ನುವ ಮಹದಾಸೆವೊತ್ತಿದ್ದಾರೆ. ಪಕ್ಷಸಂಘಟನೆ ಹಾಗೂ ಪ್ರಚಾರದ ಜೊತೆಗೆ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ, ರೈಡರ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಪತ್ನಿಯ ಆಸೆಯಂತೆ ಸೀಮಂತಶಾಸ್ತ್ರ ನೆರವೇರಿಸಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಬಿಡದಿಯ ಫಾರ್ಮ್ಹೌಸ್‌ನಲ್ಲಿ ನಿಖಿಲ್-ರೇವತಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಇವರಿಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಇದೀಗ ರೇವತಿಗೆ ಎಂಟುತಿಂಗಳು. ಇನ್ನೊಂದು ತಿಂಗಳಲ್ಲಿ ಗೌಡ್ರ ಮನೆಗೆ ಪುಟ್ಟಕಂದಮ್ಮನ ಆಗಮನವಾಗಲಿದೆ. ಮರಿಯುವರಾಜನೋ.. ಅಥವಾ ಮರಿ ಯುವರಾಣಿಯೋ ಕಾದುನೋಡ್ಲೆಬೇಕು ಅಲ್ಲವೇ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಪ್ರೇಕ್ಷಕರ ಮುಂದೆ ಬರಲು ದನಗಳು ರೆಡಿ! ಬಿ.ಎಲ್.ವೇಣು ಅವರ ಮತ್ತೊಂದು ಕಾದಂಬರಿ ಸಿನಿಮಾ ಆಯ್ತು- ಫಸ್ಟ್‌ ಟೈಮ್‌ ಮಧು ಮಂದಗೆರೆ ಹೀರೋ!!

ಮಧು ಮಂದಗೆರೆ ಈವರೆಗೆ ನಟಿಸಿರುವ 75 ಚಿತ್ರಗಳ ಪೈಕಿ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ಅದಕ್ಕೆ ಕಾರಣ, ಅವರ ಪರ್ಸನಾಲಿಟಿ. ಒಳ್ಳೇ ಹೈಟು, ಕಟ್ಟುಮಸ್ತಾದ ದೇಹ ಅವರನ್ನು ಪೊಲೀಸ್‌ ಅಧಿಕಾರಿ ಪಾತ್ರಕ್ಕೆ ಆಯ್ಕೆ ಮಾಡುವಂತಾಗಿದೆ. ಈಗ ಅವರು “ದನಗಳು’ ಚಿತ್ರದಲ್ಲೂ ದಕ್ಷ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ

ಕನ್ನಡದಲ್ಲಿ ಕಾದಂಬರಿ ಆಧಾರಿತ ಚಿತ್ರಗಳಿಗೇನು ಕೊರತೆ ಇಲ್ಲ. ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಕಾಂಬರಿ ಆಧಾರಿತ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೂ ಇವೆ. ಒಂದಷ್ಟು ಸಿನಿಮಾಗಳು ಸದ್ದು ಮಾಡಿದ್ದೂ ಇದೆ. ಈಗ ಆ ಸಾಲಿಗೆ “ದನಗಳು’ ಎಂಬ ಚಿತ್ರವೂ ಸೇರಿದೆ ಅನ್ನೋದು ವಿಶೇಷ. ಹೌದು, ಇದು ಕಥೆಗಾರ ಡಾ.ಬಿ.ಎಲ್‌.ವೇಣು ಅವರ ಕಾದಂಬರಿ ಆಧರಿಸಿದ ಚಿತ್ರ. ಈ ಚಿತ್ರಕ್ಕೆ ಬಾಲಾಜಿ ಪೋಳ್‌ ನಿರ್ದೇಶಕರು. ಇದರೊಂದಿಗೆ ಅವರೇ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಚಿತ್ರದ ಮೂಲಕ ಮಧು ಮಂದಗೆರೆ ಅವರೂ ಹೀರೋ ಆಗಿ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಹಾಗೆ ನೋಡಿದರೆ, ಮಧು ಅವರಿಗೆ ಸಿನಿಮಾರಂಗ ಹೊಸದೇನೂ ಅಲ್ಲ, ಒಂದು ದಶಕಕ್ಕೂ ಹೆಚ್ಚು ಕಾಲ ಕನ್ನಡ ಸಿನಿಮಾರಂಗವನ್ನು ಅರಿತಿರುವ ಮಧು ಮಂದಗೆರೆ, ಸಾಕಷ್ಟು ಹೀರೋಗಳ ಜೊತೆ ನಟಿಸಿದ್ದಾರೆ. ಈಗಿನ ಸ್ಟಾರ್‌ ನಟರ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಹಾಗೆ ಹೇಳುವುದಾದರೆ, ಮಧು ಮಂದಗೆರೆ ಅವರು ಇದುವರೆಗೆ ಸುಮಾರು ‌೭೫ ಚಿತ್ರಗಳಲ್ಲಿ ನಟಿಸಿದ್ದಾರೆ ಅನ್ನೋದು ಮತ್ತೊಂದು ವಿಶೇಷ.

ಹೌದು, ಮಧು ಮಂದಗೆರೆ ಈವರೆಗೆ ನಟಿಸಿರುವ ೭೫ ಚಿತ್ರಗಳ ಪೈಕಿ ಸುಮಾರು ೫0 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ಅದಕ್ಕೆ ಕಾರಣ, ಅವರ ಪರ್ಸನಾಲಿಟಿ. ಒಳ್ಳೇ ಹೈಟು, ಕಟ್ಟುಮಸ್ತಾದ ದೇಹ ಅವರನ್ನು ಪೊಲೀಸ್‌ ಅಧಿಕಾರಿ ಪಾತ್ರಕ್ಕೆ ಆಯ್ಕೆ ಮಾಡುವಂತಾಗಿದೆ. ಈಗ ಅವರು “ದನಗಳು’ ಚಿತ್ರದಲ್ಲೂ ದಕ್ಷ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದು ಕಲಾತ್ಮಕ ಚಿತ್ರ. ನೈಜ ಘಟನೆಯೊಂದನ್ನು ಲೇಖಕರು ಕಾದಂಬರಿಗೆ ಅಳವಡಿಸಿದ್ದು, ಅದನ್ನು ನೈಜವಾಗಿಯೇ ಚಿತ್ರೀಕರಿಸಿರುವ ಖುಷಿ ಚಿತ್ರ ನಿರ್ದೇಶಕರದ್ದು. “ದನಗಳು” ಚಿತ್ರ ಈಗ ರಿಲೀಸ್‌ಗೆ ರೆಡಿಯಾಗಿದೆ. ಸೆನ್ಸಾರ್‌ ಮುಗಿಸಿರುವ ಚಿತ್ರ, ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ. ಕೊರೊನಾ ಹಾವಳಿಯಿಂದಾಗಿ ಶೇ.೫೦ರಷ್ಟು ಆಸನ ಭರ್ತಿಗೆ ಅವಕಾಶ ಕೊಟ್ಟಿರುವುದರಿಂದ ರಿಲೀಸ್‌ಗೆ ತಡವಾಗುತ್ತಿದೆ. ಸರ್ಕಾರ ಶೇ.೧೦೦ ರಷ್ಟು ಆಸನ ಭರ್ತಿಗೆ ಅವಕಾಶ ಕೊಟ್ಟರೆ, ಚಿತ್ರ ಬಿಡುಗಡೆ ಮಾಡಲು ತಂಡ ತಯಾರಿ ಮಾಡಿಕೊಳ್ಳಲಿದೆ.

ಇನ್ನ, “ದನಗಳು” ಚಿತ್ರದ ಕಥೆ ಬಗ್ಗೆ ಹೇಳುವುದಾದರೆ, ರಾತ್ರಿ ವೇಳೆಯಲ್ಲಿ ದನ, ಹಸುಗಳನ್ನು ವಾಹನಗಳಲ್ಲಿ ಸಾಗಿಸುವ ಮೂಲಕ ಅವುಗಳನ್ನು ಕಸಾಯಿ ಖಾನೆಗೆ ತಳ್ಳುವ ಗುಂಪಿನ ಕಥೆಯೇ ಇದರ ಹೈಲೈಟು. ಆ ದುಷ್ಟ ಗುಂಪನ್ನು ಹಿಡಿದು, ಬಗ್ಗು ಬಡಿಯುವ ಪೊಲೀಸ್‌ ಅಧಿಕಾರಿ, ರೈತರ ಗೋವುಗಳನ್ನು ರಕ್ಷಣೆ ಮಾಡಿ ರೈತರಿಗೆ ಒಪ್ಪಿಸುವ ಕಥೆ ಇಲ್ಲಿದೆ. ಚಿತ್ರದ ಚಿತ್ರೀಕರಣ ಬಹುತೇಕ ಕೆ.ಆರ್‌.ಪೇಟೆ, ಕಿಕ್ಕೇರಿ, ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಸುಮಾರು 35 ದಿನಗಳ ಕಾಲ ನಡೆದಿದೆ.

ಈಗಾಗಲೇ “ದನಗಳು’ ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆ ಇದೆ. ವಾಸ್ತವ ಸಂಗತಿಗಳನ್ನೂ ಇಲ್ಲಿ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ. ಹೀರೋ, ಮಧು ಮಂದಗೆರೆ ಅವರಿಗೆ ಈ ಸಿನಿಮಾ ಒಳ್ಳೆಯ ಅನುಭವ ನೀಡಿದೆಯಂತೆ. ಒಂದೊಳ್ಳೆಯ ಕಥಾಹಂದರ ಇರುವಂತಹ ಚಿತ್ರದಲ್ಲಿ ನಟಿಸಿದ್ದು, ಖುಷಿ ಕೊಟ್ಟಿದೆ ಎನ್ನುವ ಅವರು, “ದನಗಳು” ಚಿತ್ರ ಹೊರಬಂದರೆ, ನಿಜಕ್ಕೂ ಮೆಚ್ಚುಗೆ ಪಡೆದುಕೊಳ್ಳುತ್ತದೆ ಎಂಬ ನಿರೀಕ್ಷೆ ಇದೆ ಎನ್ನುತ್ತಾರೆ.


ಚಿತ್ರದಲ್ಲಿ ಮಧು ಮಂದಗೆರೆ ಅವರ ಜೊತೆ ಸಂಗೀತಾ ಜೋಡಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ವಿವನ್‌ಕೃಷ್ಣ, ಅಶೋಕ್‌ ಜಂಬೆ, ಸಂಪತ್‌, ಪ್ರಿಯಾ, ಚಂದ್ರು, ಹರಿಚರಣ ತಿಲಕ್‌, ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಶ್ವನಾಥ್‌ ಛಾಯಾಗ್ರಹಣವಿದೆ. ಸ್ವಾಮಿ ಅವರ ಸಂಕಲನವಿದೆ. ಅರವ್‌ ರಿಶಿಕ್‌ ಸಂಗೀತವಿದೆ. ಮಧು ಮಂದಗೆರೆ ಅವರು ನಟಿಸಿರುವ “ಭಜರಂಗಿ ೨”, “ಅರ್ಜುನ್‌ ಗೌಡ”, “ಜಾಸ್ತಿ ಪ್ರೀತಿ”,” ಕಬ್ಜ”,” ಪ್ರಾರಂಭ”,” ಅಲ್ಲೇ ಡ್ರಾ ಅಲ್ಲೇ ಬಹುಮಾನ”, “ಫೈಟರ್‌” ಸೇರಿದಂತೆ ಒಂದಷ್ಟು ಚಿತ್ರಗಳಿವೆ.

Categories
ಸಿನಿ ಸುದ್ದಿ

ಶುಭಪುಂಜಾ ಹೊಸ ಅವತಾರ ! ಲಂಬಾಣಿ ಗೆಟಪ್ಪು- ಕೈಲಿ ಚೂರಿ- ತಲೆಬುರುಡೆ!! ಏನಿದರ ಗುಟ್ಟು?


ಶುಭಕ್ಕ ಒಂದೇ ತರಹದ ಪಾತ್ರಕ್ಕೆ ಸ್ಟಿಕನ್ ಆಗಲಿಕ್ಕೆ ಬಯಸಲ್ಲ. ಗ್ಲಾಮರಸ್ ಪಾತ್ರಗಳ ಮೂಲಕ ಕ್ಯಾಮೆರಾ ಮುಂದೆ ಕಿಕ್ಕೇರಿಸುವುದಕ್ಕೆ ಇಷ್ಟಪಡುವುದಿಲ್ಲ. ಸಿನಿಮಾದಿಂದ ಸಿನಿಮಾಗೆ ಎಕ್ಸ್ ಪಿರಿಮೆಂಟ್ ಮಾಡೋದಕ್ಕೆ ಹಾತೊರೆಯುತ್ತಾರೆ. ಅಭಿನಯಕ್ಕೆ ಆದ್ಯತೆ ಇರುವ ಪಾತ್ರಗಳಿಗಾಗಿ ಹಂಬಲಿಸ್ತಾರೆ. ಕಲೆ ಮತ್ತು ಪಾತ್ರಕ್ಕಾಗಿ ಹಪಹಪಿಸುವ ಶುಭಕ್ಕನಿಗೆ ‘ಅಂಬುಜ’ ಹೆಸರಿನ ಸಿನಿಮಾ ಸಿಕ್ಕಿದೆ. ಮಹಿಳಾಪ್ರಧಾನ ಸಿನಿಮಾ ಇದಾಗಿದ್ದು, ಲಂಬಾಣಿ ಲುಕ್ ನಲ್ಲಿ ಶುಭಕ್ಕ ಧಗಧಗಿಸ್ತಿರುವ ಪೋಸ್ಟರ್ ಸಿನಿಲಹರಿಗೆ ಲಭ್ಯವಾಗಿದೆ

ಸ್ಯಾಂಡಲ್ ವುಡ್ ನ ಸೆಕ್ಸಿ ಸುಂದರಿ, ಪಡ್ಡೆಹೈಕ್ಳ ಮೋಹಕ ಮದನಾರಿ ಶುಭಪುಂಜಾ, ತಮ್ಮ ಮಾದಕ ನೋಟ ಹಾಗೂ ಮೈಮಾಟದಿಂದಲೇ ನೋಡುಗರ ಎದೆಗೆ ಕಿಚ್ಚು ಹಚ್ಚುತ್ತಾರೆ. ಬೋಲ್ಡ್ ಅಂಡ್ ಬೊಂಬಾಟ್ ಅಭಿನಯದ ಮೂಲಕ ಸಿನಿಪ್ರಿಯರ ಮನಸೂರೆಗೊಳ್ತಾರೆ. ಬೆಲ್ಲಿಡ್ಯಾನ್ಸ್ ಮಾಡುತ್ತಾ ಬೆಳ್ಳಿತೆರೆಯನ್ನ ಬೆಳಗುತ್ತಾರೆ. ಇಂತಿಪ್ಪ‌ ನಟಿ
ಶುಭಾ ಪುಂಜಾ ಈಗ ತಮ್ಮ ನಯಾ ಲುಕ್ ನಿಂದ ಚಿತ್ರಪ್ರೇಮಿಗಳನ್ನ ದಂಗುಬಡಿಸಿದ್ದಾರೆ. ಯಸ್, ನಟಿ ಶುಭಾ ಪುಂಜಾ ನಯಾ ಅವತಾರದಲ್ಲಿ ಮಿಂಚಿ ನೋಡುಗರನ್ನ ಬೆರಗುಗೊಳಿಸಿದ್ದಾರೆ. ಲಂಬಾಣಿ ಉಡುಗೆ ತೊಟ್ಟುಒಂದು ಕೈಯಲ್ಲಿ ಚೂಪಾದ ಚೂರಿ, ಇನ್ನೊಂದು ಕೈಯಲ್ಲಿ ತಲೆಬುರುಡೆ ಹಿಡ್ಕೊಂಡು ಕ್ಯಾಮರಾ ಕಣ್ಣಿಗೆ ಕೆಂಡದಂತಹ ಪೋಸ್ ಕೊಟ್ಟಿದ್ದಾರೆ. ಬದಲಾದ ಲುಕ್ ಗೆಟಪ್ ನಲ್ಲಿ ಮೊಗ್ಗಿನ ಮನಸ್ಸಿನ ಹುಡುಗಿಯನ್ನ ನೋಡಿದವರು ವಾರೆವ್ಹಾ ಶುಭಕ್ಕ ಅಂತ ಚಪ್ಪಾಳೆ ತಟ್ಟುತ್ತಿದ್ದಾರೆ.

ಅಂದ್ಹಾಗೇ, ಶುಭಕ್ಕ ಒಂದೇ ತರಹದ ಪಾತ್ರಕ್ಕೆ ಸ್ಟಿಕನ್ ಆಗಲಿಕ್ಕೆ ಬಯಸಲ್ಲ. ಗ್ಲಾಮರಸ್ ಪಾತ್ರಗಳ ಮೂಲಕ ಕ್ಯಾಮೆರಾ ಮುಂದೆ ಕಿಕ್ಕೇರಿಸುವುದಕ್ಕೆ ಇಷ್ಟಪಡುವುದಿಲ್ಲ. ಸಿನಿಮಾದಿಂದ ಸಿನಿಮಾಗೆ ಎಕ್ಸ್ ಪಿರಿಮೆಂಟ್ ಮಾಡೋದಕ್ಕೆ ಹಾತೊರೆಯುತ್ತಾರೆ. ಅಭಿನಯಕ್ಕೆ ಆದ್ಯತೆ ಇರುವ ಪಾತ್ರಗಳಿಗಾಗಿ ಹಂಬಲಿಸ್ತಾರೆ. ಕಲೆ ಮತ್ತು ಪಾತ್ರಕ್ಕಾಗಿ ಹಪಹಪಿಸುವ ಶುಭಕ್ಕನಿಗೆ ‘ಅಂಬುಜ’ ಹೆಸರಿನ ಸಿನಿಮಾ ಸಿಕ್ಕಿದೆ. ಮಹಿಳಾಪ್ರಧಾನ ಸಿನಿಮಾ ಇದಾಗಿದ್ದು, ಲಂಬಾಣಿ ಲುಕ್ ನಲ್ಲಿ ಶುಭಕ್ಕ ಧಗಧಗಿಸ್ತಿರುವ ಪೋಸ್ಟರ್ ಸಿನಿಲಹರಿಗೆ ಲಭ್ಯವಾಗಿದೆ.ಕುತೂಹಲಭರಿತ ಫಸ್ಟ್ ಲುಕ್ ಪೋಸ್ಟರ್ ಸಿನಿಮಾ ಪ್ರೇಮಿಗಳ ದಿಲ್ ಕದಿಯುತ್ತಿದೆ.‌

ನಟಿ ಶುಭಾ ಪೂಂಜಾ ಅವರ ಸಿನಿ ಕೆರಿಯರ್‌ ನಲ್ಲಿಯೇ ಇದೊಂದು ಸ್ಪೆಷಲ್‌ ಲುಕ್.‌ ಲಂಬಾಣಿ ಪಾತ್ರ ಈ ಉಡುಗೆಯಲ್ಲಿ ಅವರು ಕಾಣಿಸಿಕೊಂಡಿದ್ದು ಇದೇ ಮೊದಲು. ಅವರಿಲ್ಲಿ ಹಾಕಿರುವ ಈ ಕಾಸ್ಟ್ಯೂಮ್‌ನ ತೂಕ ಬರೋಬ್ಬರಿ ೨೦ ಕೆಜಿ ಇದೆ. ಗದಗ ಜಿಲ್ಲೆಯ ಒಂದು ಲಂಬಾಣಿ ತಾಂಡದಲ್ಲಿ ಇದನ್ನು ನಾಲ್ಕು ತಿಂಗಳು ಸಮಯ ತೆಗೆದುಕೊಂಡು ತಯಾರು ಮಾಡಿಸಿದ್ದಾರಂತೆ ಶ್ರೀನಿ ಹನುಮಂತ ರಾಜು. ಅವರ ಪ್ರಕಾರ ಇದೊಂದು ವಿಶೇಷ ಕಥಾಹಂದರದ ಚಿತ್ರ. ʼ ಸಮಾಜದಲ್ಲಿ ಆಗುವ ಒಂದಷ್ಟು ಅವಘಡಗಳು ಹೇಗೆ ಸಾಮಾನ್ಯ ಜನರ ಬದುಕನ್ನ ಹಾಳು ಮಾಡುತ್ತದೆ, ಹಾಗೂ ಅವರು ಅನುಭವಿಸುವ ತೊಂದರೆಗಳೇನು ಎನ್ನುವುದರ ಜತೆಗೆ ಅವರ ಅಸಹಾಯಕತೆಯನ್ನು ಸಮಾಜ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತದೆ ಎನ್ನುವುದರ ಒಟ್ಟು ಒಟ್ಟು ಚಿತ್ರಣ ಈ ಚಿತ್ರದಲ್ಲಿದೆ ಯಂತೆ.

‘ಅಂಬುಜ’ ನಾಯಕಿ ಪ್ರಧಾನ ಚಿತ್ರ. ಶ್ರೀನಿ ಹನುಮಂತರಾಜು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ‘ಕೆಲವು ದಿನಗಳ ನಂತರ’ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ಶ್ರೀನಿಯವರು ‘ ಅಂಬುಜ’ ಸಿನಿಮಾದ ಮೂಲಕ ನಯಾ ಸವಾಲಿಗೆ ಸಿದ್ದರಾಗಿದ್ದಾರೆ.ನಟಿ ಶುಭಪುಂಜಾ ಕೇಂದ್ರಬಿಂದು. ಹಿರಿಯ ನಟಿ ಪದ್ಮಜಾ ರಾವ್‌, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಿರ್ದೇಶಕ ಶರಣಯ್ಯ, ಕಲಾವಿದ ಗೋವಿಂದೇ ಗೌಡ, ಸಂದೇಶ್‌ ಶೆಟ್ಟಿ, ಮಜಾ ಭಾರತದ ಪ್ರಿಯಾಂಕ ಕಾಮತ್‌, ಬೇಬಿ ಆಕಾಂಕ್ಷ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಸದ್ಯಕ್ಕೀತ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸಗಳು ಮುಗಿದಿದ್ದು, ಅಕ್ಟೋಬರ್‌ ತಿಂಗಳಲ್ಲಿ ಒಂದೇ ಶೆಡ್ಯೂಲ್‌ ನಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಸಿದ್ದತೆ ನಡೆಸಿದೆ. ಬೆಂಗಳೂರು, ಗದಗ ಹಾಗೂ ಚಿಕ್ಕಮಂಗಳೂರಿನಲ್ಲಿ ಚಿತ್ರೀಕರಣಕ್ಕೆ ಲೋಕೆಷನ್‌ ಫಿಕ್ಸ್‌ ಆಗಿದೆ. ಇನ್ನು ಚಿತ್ರಕ್ಕೆ ಕಾಶೀನಾಥ್‌ ಮಡಿವಾಳರ್‌ ಬಂಡವಾಳ ಹೂಡಿದ್ದಾರೆ. ವಿಶೇಷ ಅಂದ್ರೆ ಅವರೇ ಕಥೆ ಬರೆದು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ ನಿರ್ದೇಶಕ ಶ್ರೀನಿ. ಹಾಗೆಯೇ ಚಿತ್ರದ ತಾಂತ್ರಿಕ ವರ್ಗದಲ್ಲಿ ಮುರುಳೀಧರ್ ಛಾಯಾಗ್ರಹಣ, ಪ್ರಸನ್ನ ಕುಮಾರ್‌ ಸಂಗೀತ, ಎಂಸ್‌ ತ್ಯಾಗರಾಜ್‌ ಹಿನ್ನೆಲೆ ಸಂಗೀತದ ಮಾಡುತ್ತಿದ್ಧಾರೆ.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಸೋಮವಾರ ಅಂಬುಜ ಚಿತ್ರದ ಫಸ್ಟ್ ಲುಕ್ ಲಾಂಚ್ : ಶುಭಾ ಪೂಂಜಾ ಪಾತ್ರದ ಇನ್ನೊಂದು ಮುಖ ರಿವೀಲ್ ಆಗುತ್ತಾ?

ನಟಿ ಶುಭಾ ಪೂಂಜಾ ಅಭಿನಯ ಹಾಗೂ ಶ್ರೀನಿ ಹನುಮಂತರಾಜು ನಿರ್ದೇಶನದ ‘ಅಂಬುಜ’ ಚಿತ್ರ ತಂಡ ಶೂಟಿಂಗ್ ಹೊರಡುವ ತವಕದಲ್ಲಿದೆ. ಎಲ್ಲವೂ ಚಿತ್ರತಂಡ ಅಂದುಕೊಂಡಂತಾದರೆ ಅಕ್ಟೋಬರ್ ಮೊದಲ ವಾರದಿಂದ ಚಿತ್ರೀಕರಣ ಶುರುವಾಗಲಿದೆ. ಆ ನಿಟ್ಟಿನಲ್ಲಿಯೇ ತೆರೆ ಮರೆಯಲ್ಲಿ ಎಲ್ಲಾ ರೀತಿಯ ಸಿದ್ದತೆ ನಡೆಸಿದರುವ ಚಿತ್ರ ತಂಡ ಸೆಪ್ಟೆಂಬರ್ 13 ರಂದು ಸೋಮವಾರ ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡಲು ರೆಡಿ ಆಗಿದೆ. ಅಂದು ಬೆಳಗ್ಗೆ 9 ಗಂಟೆಗೆ ಫಸ್ಟ್ ಲುಕ್ ಲಾಂಚ್ ಆಗಲಿದೆ. ಗ್ಲಾಮರಸ್ ನಟಿ ಶುಭಾ ಪೂಂಜಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಈಗಾಗಲೇ ಹಲವು ಕಾರಣಕ್ಕೆ ಸುದ್ದಿ ಮಾಡಿದೆ. ‘ಕೆಲವು ದಿನಗಳ ನಂತರ’ ಹೆಸರಿನ ಚಿತ್ರದ ಮೂಲಕ ಭರವಸೆ ಮೂಡಿಸಿದ ನಿರ್ದೇಶಕ ಶ್ರೀನಿ ಹನುಮಂತರಾಜು ಮತ್ತೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. ಇದು ಅವರ ಸೆಕೆಂಡ್ ಅಟ್ಮೆಂಟ್.

ಚೊಚ್ಚಲ ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಮೂಲಕ ಕುತೂಹಲ ಮೂಡಿಸಿದ್ದ ನಿರ್ದೇಶನ ಶ್ರೀನಿ, ಈಗ ಪಕ್ಕಾ ಮಹಿಳಾ ಪ್ರಧಾನ ಕಥೆ ಆಯ್ಕೆ ಮಾಡಿಕೊಂಡಿರುವುದು ಮತ್ತೆ ಕುತೂಹಲ ಕೆರಳಿಸಿದೆ. ಈಗಾಗಲೇ ಅವರೇ ಮಾಹಿತಿ ನೀಡಿರುವ ಪ್ರಕಾರ ಇದು ಕೂಡ ಕ್ರೈಮ್ ಥ್ರಿಲ್ಲರ್ ಕಥಾ ಹಂದರದ ಪಕ್ಕಾ ಲವ್ ಸ್ಟೋರಿ ಸಿನಿಮಾ. ಎಲ್ಲವೂ ಅಂದುಕೊಂಡಂತಾಗಿದ್ದರೆ ಇಷ್ಟೊರಳಗಾಗಿಯೇ ಈ ಚಿತ್ರಕ್ಕೆ ಚಿತ್ರೀಕರಣ ಆಗಬೇಕಿತ್ತು. ಆದರೆ ಕೊರೋನಾ ಕಾರಣಕ್ಕೆ ಚಿತ್ರೀಕರಣದ ಪ್ಲಾನ್ ಕೂಡ ಏರು ಪೇರಾಯಿತು. ಅದರ ಪರಿಣಾಮ ಒಂದಷ್ಟು ದಿನ ಸೂಕ್ತಸಮಯಕ್ಕಾಗಿ ಕಾಯಬೇಕಾಯಿತು. ಈ ನಡುವೆ ಚಿತ್ರದ ಕಥಾ ನಾಯಕಿ ಶುಭಾ ಪೂಂಜಾ ಬಿಗ್ ಬಾಸ್ ಗೆ ಹೋದರು. ಇನ್ನೊಂದೆಡೆ ಈ ಚಿತ್ರದ ಇನ್ನೊಬ್ಬ ಪಾತ್ರಧಾರಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡರಿಗೆ ಆಕ್ಸಿಡೆಂಟ್ ಆಯ್ತು. ಈಗ ಎಲ್ಲವೂ ಸರಿ ಹೋಗಿದೆ. ಅದೇ ಹಿನ್ನೆಲೆಯಲ್ಲಿ ಚಿತ್ರ ತಂಡ ಚಿತ್ರೀಕರಣಕ್ಕೆ ಸಿದ್ದತೆ ನಡೆಸಿದೆ.

ಸದ್ಯಕ್ಕೆ ಫಸ್ಟ್ ಲುಕ್ ಲಾಂಚ್ ಸಿದ್ದತೆಯಲ್ಲಿರುವ ನಿರ್ದೇಶಕ ಶ್ರೀನಿ ಸಿನಿ ಲಹರಿ ಜತೆಗೆ ಮಾತನಾಡಿ, ಕೊರೋನಾ ಕಾರಣಕ್ಕೆ ಸಿನಿಮಾ ಕೆಲಸಗಳು ತಡವಾದವು. ಈಗ ಎಲ್ಲವೂ ಸರಿ ಹೋಗಿದೆ. ಸೋಮವಾರ ಫಸ್ಟ್ ಲುಕ್ ಲಾಂಚ್ ಆಗುತ್ತಿದೆ. ಬಹುತೇಕ ಅಕ್ಟೋಬರ್ ಫಸ್ಟ್ ವೀಕ್ ನಿಂದ ಶೂಟಿಂಗ್ ಹೊರಡೋಣ ಅಂತಂದುಕೊಂಡಿದ್ದೇವೆ ಎಂದರು. ಇನ್ನು ಫಸ್ಟ್ ಲುಕ್ ಕುತೂಹಲ ಮೂಡಿಸಿದೆ. ನಿರ್ದೇಶಕರ ಪ್ರಕಾರ ಚಿತ್ರದ ಕಥಾ ನಾಯಕಿ ಶುಭಾ ಪೂಂಜಾ ಅವರ ಪಾತ್ರದ ಇನ್ನೊಂದು ಲುಕ್ ಸೋಮವಾರ ರಿವೀಲ್ ಆಗಲಿದೆಯಂತೆ.

ಎಂಟರ್‌ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸಾರಥಿಯ ಒಂಟಿ ಹೋರಾಟ! ಚಾಲೆಂಜಿಂಗ್‌ ಲೈಫ್‌ನಿಂದಲೇ ಹೊತ್ತಿಕೊಳ್ಳುತ್ತಾ ಕ್ರಾಂತಿಯ ಕಿಚ್ಚು?

ಫೈಟ್ ಮಾಡೋಕೆ ಬೇಕಾಗಿರೋದು ಗ್ರೌಂಡು..ಬ್ಯಾಗ್ರೌಂಡ್ ಅಲ್ಲ.. ಇದು ಕೇವಲ ಬಿಲ್ಡಪ್‌ಗೋಸ್ಕರ ಹೊಡೆದಂತಹ ಡೈಲಾಗ್ ಅಲ್ಲ. ಆ ಡೈಲಾಗ್‌ಗೆ ಬಿಲ್ಡಪ್ ಸಿಗಲಿ ಅಂತ ಹೊಡೆಸಿದ್ದು ಅಷ್ಟೇ. ಇದೇ ರಿಯಲ್ಲು.. ಇದೇ ಫ್ಯಾಕ್ಟು. ಆ ಫ್ಯಾಕ್ಟ್ನಂತೆಯೇ ಫೀಲ್ಡಿಗಿಳಿದವರು, ಮೈಕೊಡವಿಕೊಂಡು ಅಖಾಡಕ್ಕೆ ಇಳಿದು ತೊಡೆತಟ್ಟಿದವರು, ಕಲೆಗಾಗಿ ಬೆವರೊಟ್ಟಿಗೆ ರಕ್ತಬಸಿದವರು, ಅಪ್ಪನ ಹೆಸರು ಬಳಸಿಕೊಳ್ಳದೇ ಸ್ವಂತ ಪರಿಶ್ರಮದಿಂದ ಹೋರಾಡಿದವರು, ಬಜಾರ್‌ನಲ್ಲಿ ಸ್ವಂತ ಬ್ರಾಂಡ್ ಆದವರು, ಗಂಧದಗುಡಿಯಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿದವರು, ಇಷ್ಟೆಲ್ಲಾ ಮಾಡಿದವರು ಬೇರಾರು ಅಲ್ಲ ತೂಗುದೀಪದ ಕುಡಿ, ಒನ್ ಅಂಡ್ ಓನ್ಲೀ ಡಿಬಾಸ್..!

ಚಾಲೆಂಜಿಂಗ್ ಸ್ಟಾರ್, ಚಕ್ರವರ್ತಿ, ಬಾಕ್ಸ್ ಆಫೀಸ್ ಸುಲ್ತಾನ್, ಯಜಮಾನ, ಒಡೆಯ, ಕುಲಕೋಟಿ ಅಭಿಮಾನಿಗಳ ಆರಾಧ್ಯದೈವ, ದಾಸ, ದಚ್ಚು, ದರ್ಶನ್, ಹೀಗೆ ಒಂದಾ.. ಎರಡಾ..ಹತ್ತಾರು ಹೆಸರುಗಳಿಂದ ಕರೆಸಿಕೊಳ್ಳುವ ನಾಯಕ ಇವರು. ಯಾರಿಗೂ ಸಲಾಂ ಹೊಡೆಯದೇ, ಬಕೆಟ್ ಹಿಡಿಯದೇ, ಸಿಂಟ್ಯಾಕ್ಸ್ ಬಳಸದೇ, ಸ್ವಂತ ಪರಿಶ್ರಮದಿಂದ ಒಂದೊಂದೇ ಮೆಟ್ಟಿಲೇರಿ ಸ್ಟಾರ್ ಆದವರು. ಶ್ರೇಷ್ಟ ಖಳನಾಯಕನ ಮಗನಾದರೂ ಕೂಡ ಅಪ್ಪನ ಹೆಸರೇಳಿ ಅವಕಾಶ ಗಿಟ್ಟಿಸಿಕೊಳ್ಳಲು ಹಿಂಜರಿದವರು. ಬಣ್ಣದ ಲೋಕಕ್ಕೆ ಧುಮಕಲೆಬೇಕು, ಅಪ್ಪನಂತೆ ಕಲಾವಿದನಾಗ್ಬೇಕು ಎನ್ನುವ ಹಂಬಲಕ್ಕೆ, ತುಡಿತಕ್ಕೆ, ಕನಸಿಗೆ, ಮಹದಾಸೆಗೆ ತಾವೇ ನೀರೆರೆದುಕೊಂಡು ಪೋಷಿಸಿದವರು. ಲೈಟ್‌ಮ್ಯಾನ್ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಹೆಜ್ಜೆಹೆಜ್ಜೆಗೂ ಕಷ್ಟ-ನೋವು-ಅವಮಾನ, ಅಪಮಾನ, ನಿಂದನಗೆಳನ್ನು ಎದುರಿಸಿದವರು. ಸವಾಲುಗಳಿಗೆ ಹೆದರದೇ ಸೆಡ್ಡುಹೊಡೆದು ಮೆಟ್ಟಿನಿಂತವರು. ಕೊನೆಗೆ ಚಾಲೆಂಜ್ ಹಾಕಿಯೇ ಲೈಫ್‌ನ ಕಂಡುಕೊಂಡವರು. ಹೀಗಾಗಿಯೇ ಇವತ್ತು ಇವರಿಗೆ ಚಾಲೆಂಜಿಂಗ್ ಸ್ಟಾರ್ ಅಂತ ಕರೆಯುತ್ತಾರೆ. ಕೋಟ್ಯಾಂತರ ಭಕ್ತರು ತಲೆಮೇಲೆ ಹೊತ್ತು ಮೆರೆಸುತ್ತಾರೆ.

ದರ್ಶನ್ ಇವತ್ತು ಏನೇ ಆಗಿದ್ದರೂ ಕೂಡ ಅದಕ್ಕೆ ಕಾರಣ ಅವರೇ. 150 ರೂಪಾಯಿ ಬಾಟದಿಂದ ಹಿಡಿದು ೧೦ ಕೋಟಿ ಸಂಭಾವನೆ ಪಡೆಯುವುದಕ್ಕೆ ಡಿಬಾಸ್ ಪಟ್ಟಿರುವ ಕಷ್ಟ ಡಿಬಾಸ್‌ಗೆ ಮಾತ್ರ ಗೊತ್ತು. ಹೀಗಾಗಿಯೇ, ಸಾಕಷ್ಟು ಭಾರಿ ಅವರೇ ಹೇಳಿಕೊಂಡಿದ್ದಾರೆ. ನಾನು ದರ್ಶನ್‌ಗೆ ಬೆಳೆಸದೇ, ನಾನು ದರ್ಶನ್‌ಗೆ ಅವಕಾಶ ಕೊಡಿಸಿದೇ, ಈ ರೀತಿ ಹೇಳಿಕೊಳ್ಳುವ ಅವಕಾಶವನ್ನ ನಾನು ಯಾರಿಗೂ ಕೊಟ್ಟಿಲ್ಲವೆಂದು. ಅಪ್‌ಕೋರ್ಸ್ ಯಾರಿಗೂ ಸಲಾಂ ಹೊಡೆದು ಚಾನ್ಸ್ ಗಿಟ್ಟಿಸಿಕೊಂಡಿಲ್ಲ, ಸಲಾಂ ಹೊಡೆದು ಆಳೆತ್ತರಕ್ಕೆ ಬೆಳೆದು ನಿಂತಿಲ್ಲ. ಲೈಟ್‌ಮ್ಯಾನ್ ಕೆಲಸ ಮಾಡಿ, ಸಣ್ಣ-ಪುಟ್ಟ ಪಾತ್ರಗಳಿಗೆ ಜೀವತುಂಬಿ, ಸೀರಿಯಲ್ ಮಾಡಿ ತನ್ನ ಕಲೆಯನ್ನ ಪ್ರೂ ಮಾಡಿದವರು. ದಾಸನ ಕಲೆಗೆ ಬೆಲೆಕೊಟ್ಟು ಪಿ.ಎನ್. ಸತ್ಯ, ಎಂ.ಜಿ ರಾಮ್‌ಮೂರ್ತಿ ಅವರು ಬೆಳ್ಳಿತೆರೆಗೆ ಕರೆತಂದರು. ಮೆಜೆಸ್ಟಿಕ್‌ನಲ್ಲೇ ಮೆಜೆಸ್ಟಿಕ್ ತೋರ‍್ಸಿದರು. ಮುಂದಾಗಿದ್ದೆಲ್ಲವೂ ಇವತ್ತಿಗೂ ಇತಿಹಾಸವೇ ಸರೀ.

ಸಾರಥಿ ಚಿತ್ರರಂಗಕ್ಕೆ ಬಂದು ೨೪ ವರ್ಷ ಕಳೆದಿದೆ. ಈ ೨೪ ವರ್ಷದ ಸಿನಿಜರ್ನಿಯಲ್ಲಿ ೫೩ ಸಿನಿಮಾಗೆ ಜೀವಕೊಟ್ಟಿದ್ದಾರೆ. ಮಾಸ್ ಹೀರೋ ಆಗಿ ಬೆಳ್ಳಿತೆರೆಮೇಲೆ ಧಗಧಗಿಸಿದ್ದಾರೆ, ಬಾಕ್ಸ್ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಕೊಟ್ಟು ಅನ್ನದಾತರನ್ನ ಬೆಳೆಸಿದ್ದಾರೆ. ಬಾಕ್ಸ್ಆಫೀಸ್ ಸುಲ್ತಾನ್ ಪಟ್ಟಕ್ಕೇರಿದ್ದಾರೆ. ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕೋಟಿ ಕೋಟಿ ದುಡ್ಡು ಮಾಡಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡೋದಕ್ಕೆ ದರ್ಶನ್ ಗುಂಪುಕಟ್ಟಿಕೊಂಡು ಹೋರಾಡಲಿಲ್ಲ. ಮೇಲ್ನೋಟಕ್ಕೆ ಚೆನ್ನಾಗಿದ್ದು ಒಳಗೊಳಗೆ ಕೇಡು ಬಯಸುವವರಿಗೂ ಕೂಡ ಒಳ್ಳೆಯದನ್ನೇ ಬಯಸಿದರು. ಒಬ್ಬಂಟಿಯಾಗಿ ಒಂಟಿಸಲಗದಂತೆ ಹೋರಾಡಿದರು. ಅದರ ಪ್ರತಿಫಲವೇ ಇವತ್ತು ಗಂಧದಗುಡಿಯಲ್ಲಿ ಸ್ವಂತ ಸಾಮ್ರಾಜ್ಯಕ್ಕೆ ಕಟ್ಟಲಿಕ್ಕೆ ಸಾಧ್ಯವಾಗಿದ್ದು, ತೂಗುದೀಪ ವಂಶ ವಜ್ರದಂತೆ ಹೊಳೆಯುತ್ತಿರುವುದು.

ಕ್ಷೇತ್ರ ಯಾವುದೇ ಇರಲಿ ಏಕಾಂಗಿ ಹೋರಾಟ ತುಂಬಾ ಕಷ್ಟ. ಕೈಗೊಬ್ಬರು.. ಕಾಲಿಗೊಬ್ಬರು ಆಳು.. ಹೆಸರು.. ಕೀರ್ತಿ..ಹಣ..ಆಸ್ತಿ.. ಎಲ್ಲವೂ ಇದ್ದವರು, ಬಲ ತುಂಬಿಕೊಂಡವರು ಒಂಟಿಸಲಗದ ಹೋರಾಟಕ್ಕೆ ಹಿಂಜರಿಯುತ್ತಾರೆ. ಆದರೆ, ದಚ್ಚು ಎದೆಗುಂದಲಿಲ್ಲ, ಮುಂದಿಟ್ಟ ಹೆಜ್ಜೆನಾ ಹಿಂದೆ ತೆಗೆದುಕೊಳ್ಳಲಿಲ್ಲ. ಬದಲಿಗೆ, ವ್ಯಕ್ತಿನಾ ನೋಡಿ ನನ್ನ ಶಕ್ತಿ ಡಿಸೈಡ್ ಆಗಲ್ಲ. ಸೆಡ್ಡು ಹೊಡೆದು ನಿಂತ್ಮೇಲೆ ಸೈಡಿಗೆ ಹೋಗೋ ಮಾತೇಯಿಲ್ಲ. ಹೀಗನ್ನುತ್ತಲೇ ಫೀಲ್ಡಿಗಿಳಿದರು. ಮೂವೀ ಎನ್ನುವ ಮಾಯಲೋಕದಲ್ಲಿ ಮಿನುಗಿದರು. ಸಿನಿಮಾ ಎನ್ನುವ ಸಾಮ್ರಾಜ್ಯದಲ್ಲಿ ಸುಂಟರಗಾಳಿ ಎಬ್ಬಿಸಿ ಒಡೆಯನಾದರು. ಹೀಗಾಗಿ, ಬಣ್ಣ ಹಚ್ಚುವವರು ಯಜಮಾನನ ಬದುಕನ್ನ ಸ್ಪೂರ್ತಿಯಾಗಿಟ್ಟುಕೊಂಡು ಸಿನಿಮಾ ಲೋಕಕ್ಕೆ ಎಂಟ್ರಿಕೊಡ್ತಾರೆ. ಯಜಮಾನ ಸಿನಿಮಾ ನಂತರ ಎರಡನೇ ಭಾರಿ ಕ್ಯಾಪ್ ತೊಟ್ಟಿರುವ ವಿ ಹರಿಕೃಷ್ಣ ಏಕಾಂಗಿಯಾಗಿ ಹೋರಾಡೋದನ್ನ ಕಲಿಯಿರಿ' ಎನ್ನುವ ಟ್ಯಾಗ್‌ಲೈನ್ ಜೊತೆಗೆ ಚಾಲೆಂಜಿಂಗ್ಕ್ರಾಂತಿ’ ಮಾಡಿಸೋದಕ್ಕೆ ಹೊರಟಿದ್ದಾರೆ.

ಕ್ರಾಂತಿ' ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ೫೫ನೇ ಸಿನಿಮಾ. ಸಿನಿಮಾರಂಗದಲ್ಲಿ ದಚ್ಚು ಬೆಳೆದು ನಿಂತ ಪರಿಯೇ ಒಂದು ರೀತಿ ಕ್ರಾಂತಿಯಾಗಿರುವುದರಿಂದ,ಕ್ರಾಂತಿ’ ಸಿನಿಮಾ ಬಹಳಷ್ಟು ನಿರೀಕ್ಷೆಯನ್ನ ಮೂಡಿಸಿದೆ. ಬಹುಭಾಷೆಯಲ್ಲಿ ಈ ಮೂವೀ ನಿರ್ಮಾಣ ಮಾಡೋದಕ್ಕೆ ನಿರ್ಮಾಪಕರಾದ ಶೈಲಜಾ ನಾಗ್ ಹಾಗೂ ಬಿ ಸುರೇಶ್ ನಿರ್ಧರಿಸಿದ್ದಾರೆ. ಕ್ರೇಜಾ.. ಕ್ರೇಜಿಗೆ ಅಪ್ಪನಪ್ಪನಪ್ಪ ಕಣೋ ಇವ್ರು ಅಂತ ಹೇಳಿ `ಯಜಮಾನ’ ಸುದ್ದಿಗೋಷ್ಟಿಯಲ್ಲಿ ಮತ್ತೊಂದು ಚಿತ್ರ ಮಾಡುವುದಾಗಿ ತಿಳಿಸಿದ್ದರು. ಅದರಂತೇ, ಅದ್ದೂರಿ ಚಿತ್ರಕ್ಕೆ ಕೈಹಾಕಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರಾಂತಿ ಮಾಡೋದಕ್ಕೆ ಹೊರಟಿದ್ದಾರೆ. ಅಷ್ಟಕ್ಕೂ, ಸಾರಥಿಯ ಕೈಯಲ್ಲಿ ಯಾವ್ ರೀತಿಯ ಕ್ರಾಂತಿ ಮಾಡಿಸ್ತಾರೆ? ಆದ್ರೆ ಇಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದ್ದು ಕ್ರಾಂತಿ ಹೆಸರಿನ ಚಿತ್ರಕ್ಕೆ ಕೊಟ್ಟ ಟ್ಯಾಗ್ ಲೈನ್. ಲರ್ನ್ ಟು ಫೈಟ್ ಅಲೋನ್. ಅಂದ್ರೆ ಏಕಾಂಗಿಯಾಗಿ ಹೋರಾಡೋದನ್ನು ಕಲಿ ಅಂತ. ಹಾಗಾದ್ರೆ.. ಬೆಳ್ಳಿ ತೆರೆ ಮೇಲೆ ಹೀಗೆ ಹೇಳಲು ಹೊರಟವರು ಯಾರು ? ನಿರ್ದೇಶಕ ಹರಿಕೃಷ್ಣ ತಮ್ಮ ಕಥೆ ಮೂಲಕ ದರ್ಶನ್ ಅವರ ರಿಯಲ್ ಕಥೆ ಹೇಳಿಸ್ತಾರಾ ಅಥವಾ ಹೊಸ ಕಥೆನಾ ಕಟ್ಟಿ ಕೊಡ್ತರಾ ಅನ್ನೋದಿಕ್ಕೆ ಚಿತ್ರ ನೋಡಿದಾಗಲೇ ಗೊತ್ತಗಲಿದೆ. ಅಲ್ಲಿವರೆಗೂ ನೀವು ಒಬ್ಬಂಟಿಯಾಗಿ ಫೈಟ್ ಮಾಡಿ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಪ್ರಶಾಂತ್ ಸಂಬರಗಿ ಮುಖವಾಡ ಬಯಲು ಮಾಡಿದ ಬೆನ್ನಲ್ಲೇ ಅವರ ವಿರುದ್ಧ ಕಾನೂನು ಸಮರಕ್ಕೆ ಅಣಿಯಾದ್ರಾ ಚಂದ್ರಚೂಡ್‌ ?

ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಅವರಿಗೆ ನಿರ್ದೇಶಕ ಹಾಗೂ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಶನಿಯಂತೆ ಹೆಗಲೇರುವುದು ಗ್ಯಾರಂಟಿ ಆಗಿದೆ. ಅತ್ತ ಡ್ರಗ್ಸ್ ಕೇಸ್ ನಲ್ಲಿರುವವರೆಲ್ಲರೂ ಜೈಲು ಕಂಬಿ ಎಣಿಸಬೇಕೆಂದು ಸಂಬರಗಿ ಗುಡುಗುತ್ತಿದ್ದರೆ, ಇತ್ತ ಸಂಬರಗಿ ಅವರನ್ನೇ ಚಂದ್ರಚೂಡ್ ಕಾನೂನು ತಂತ್ರ ಹೆಣೆಯುತ್ತಿದ್ದಾರೆ. ಗಣೇಶ್ ಹಬ್ಬದ ದಿನವಾದ ಶುಕ್ರವಾರವಷ್ಟೇ ಸೋಷಲ್ ಮೀಡಿಯಾದಲ್ಲಿ ಸಂಬರಗಿ ಅವರ ಮುಖವಾಡ ಬಯಲು ಮಾಡಿದ್ದ ಚಂದ್ರಚೂಡ್, ಈಗ ಅವರ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ದತೆ ನಡೆಸಿದ್ದಾರೆ. ಶುಕ್ರವಾರವೇ ಸಂಜೆ ಈ ಸಂಬಂಧ ವಕೀಲರೂ ಹಾಗೂ ಆವರ ಆತ್ಮೀಯರಾದ ಸೂರ್ಯ ಮುಕುಂದರಾಜ್ ಮತ್ತು ಸಂಪತ್ ಕುಮಾರ್‌, ಜತೆಗೆ ಚರ್ಚೆ ನಡೆಸಿದ್ದಾರೆ. ತಮ್ಮ ನಿವಾಸದಲ್ಲಿಯೇ ಈ ಕುರಿತು ಮಾತುಕತೆ ನಡೆಸಿರುವ ಫೋಟೋಗಳನ್ನು ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಚಂದ್ರಚೂಡ್, ಕಾನೂನು ಸಮರಕ್ಕೆ ಸಿದ್ದ ಎಂದು ಹೇಳಿದ್ದಾರೆ. ಇಷ್ಟಕ್ಕೂ, ಸಂಬರಗಿ ವಿರುದ್ಧ ಕಾನೂನು ಹೋರಾಟಕ್ಕೆ ಚಂದ್ರಚೂಡ್ ನೀಡುವ ಪ್ರಮುಖ ಕಾರಣಗಳೇನು ? ಸಂಬರಗಿ ಮಾಡಿರುವ ಅಪರಾಧಗಳೇನು ? ಅದೆಲ್ಲದ್ದರ ಬಗ್ಗೆ ಚಂದ್ರಚೂಡ್ ಅಧಿಕೃತವಾಗಿಯೇ ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೀಷ್ಟು…

  • ಸಾಮಾಜಿಕ ಕಾರ್ಯಕರ್ತ (ನಿಜವಾದ ಹೋರಾಟಗಾರರಲ್ಲಿ ಕ್ಷಮೆ ಕೇಳಿ )ನನ್ನ ಮೇಲೆ ವಿಪರೀತ ಕೇಸುಗಳನ್ನು ಹಾಕಲಾಗಿದೆ ಎಂದು ಪೋಸು ಕೊಡುವಾಗಲೇ -ಸಣ್ಣದೊಂದು ಮಾಹಿತಿ ತೆಗೆದರೆ ಈತ ಒಬ್ಬ ನೆಲಹಿಡುಕ ಅವುಗಳ ಹಳವಂಡದ ಕೇಸುಗಳವು. ಸೋನಿಯಾ ಗಾಂಧಿ ಮತ್ತು ಕುಸುಮಾ ಹನುಮಂತರಾಯರಪ್ಪ ಅವರ ವಿರುದ್ಧ ನೀಡಿದ ಸಂವಿಧಾನ ವಿರೋಧಿ ಹೇಳಿಕೆಗಳ ಕಾರಣಕ್ಕೆ ಕಾಂಗ್ರೆಸ್ ನ ಲೀಗಲ್ ಸೆಲ್ ಕೇಸು ಜಡಿದಿದೆ. ನಂತರ ದೇವನಾಥ್ ಎಂಬುವವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.ಉಳಿದವುಗಳಲ್ಲೇ ಭೂತಾಯಿಯ ದಲ್ಲಾಳಿ (ಅವನದೇ ಹೇಳಿಕೆ)ತನದ ಕಾರಣದ ಕೇಸುಗಳು.
    -ಇವನ ಬಳಿ ಇರುವ ರೇಂಜ್ ರೇವರ್ ಕಾರು ಸಿಸಿಬಿ ಕೇಸು, ಬಿಡಿಎ ರವಿ ಎಂಬಾತ ,ದೇವನಾಥ್ ಎಂಬಾತನ ಗೆಳೆತನ -ಇವುಗಳ ಸಣ್ಣ ತನಿಖೆ ಮಾಡಿದಾಗ ತಿಳಿದದ್ದು ತನ್ನ ಹೆಸರಿನ ಲೋನ್ ಪಡೆದು ಕಾರ್ ಕೊಡಿಸಿ ಅದಕ್ಕೂ ಕಮಿಷನ್ ಪಡೆದು ರಾತ್ರೋರಾತ್ರಿ ತನ್ನದೇ ಕಾರೆಂದು ನಂಬಿದ ಸ್ನೇಹಿತನಿಗೇ ವಿಶ್ವಾಸ ದ್ರೋಹ ಮಾಡಿದ ಆಸಾಮಿ ಕಂಡವರ ಬಗ್ಗೆ ಸುಳ್ಳು ಆಸ್ತಿಗಳ ಲೆಕ್ಕ ಕೇಳುತ್ತಾನೆ.
  • ರಾಗಿಣಿ ಸಂಜನಾ ,ಅನುಶ್ರೀ ಜಮೀರ್ ಮಹಮದ್ ಮುಂತಾದವರ ಬಗ್ಗೆ ಈತ ಈವರೆಗೂ ಒಂದು ಔನ್ಸಿನ ಮಾಹಿತಿ ಕೊಟ್ಟಿಲ್ಲ. ಪೋಲೀಸರ ಕಾರ್ಯಚರಣೆಯ predictions ಗಳನ್ನ ಹೇಳುವ ಜ್ಯೋತಿಷಿ ಇವನು.ಸಿಸಿಬಿ ಕಛೇರಿಯಿಂದ ಬುಲಾವ್ ಹೋದಾಗ ಇವನು ಹಿಡಿದಿದ್ದ ಫೈಲನ್ನೇ ಝೂಮ್ ಮಾಡಿ ಮಾಡಿ ತೋರಿಸಿದವು ಕ್ಯಾಮರಾಗಳು.
    -ಇವನ ಮೂಲ ಊರು ಮರಾಠರ ಪ್ರಾಂತ್ಯದ್ದು.ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಇವನು ಕನ್ನಡ ವಿರೋಧಿ ಹಿಂದಿ ಹೇರಿಕೆಯ ಹೇಳಿಕೆಗಳನ್ನ ನಾವೆಲ್ಲ ನೋಡಿಯೂ ಕೇಳಿಯೂ ಕನ್ನಡಿಗ ಅಂತ ಒಪ್ಪಿಕೊಳ್ಳುವವರ ಎದೆಭಾಷೆಯಬಗ್ಗೆ ನನಗಂತೂ ಅನುಮಾನ. ಹಾಳುಬಿದ್ದು ಹೋಗಲಿ ರಾಜಕೀಯ ಕಾರಣಕ್ಕೆ ತಾಯಿಭಾಷೆಯ ಬಲಿಕೊಡುವ ಇಂತಹ ನೆಲಹಿಡುಕರೂ ಇದ್ದಾರೆಂದರೆ ನೆಟ್ಟಗೆ ಕನ್ನಡದ ಸ್ವರ ವ್ಯಂಜನಗಳ ಪರಿಚಯವಿಲ್ಲ.
  • ಇನ್ನು ಇವನಿಗೆ ಜೀವದ ಗೆಳೆಯರಿರುವುದು ನನಗೆ ಅರಿವಿಲ್ಲ .ಎಲ್ಲರ ಮಾತೂ ರೆಕಾರ್ಡ್ ಎಲ್ಲರ ವೀಡಿಯೋ ರೆಕಾರ್ಡೂ…. ಬಿಗ್ ಬಾಸ್ ನ ಎರಡನೇ ಇನ್ನಿಂಗ್ಸ್ ನ ಕ್ವಾರೈಂಟೈನ್ ಸಂದರ್ಭದಲಿ ಸ್ಪರ್ಧಿ ಅರವಿಂದ ಸೇರಿದಂತೆ ಹಲವರಿಗೆ ಮಧ್ಯಪಾನದ ಪಾರ್ಟಿಕೊಟ್ಟು ( ಚಾನಲ್ ನಿಯಮಾವಳಿ ವಿರೋಧಿಸಿ)ವಿಡಿಯೋ ಮಾಡಿದ .ಸಧ್ಯ ನಾನು ಇಂತಹ ಚಾಣಪತ್ರಿಗಳನ್ನ ತುಂಬಾ ನೋಡಿದವನು ಕ್ಷಣಮಾತ್ರದಲ್ಲಿ ಕುತಂತ್ರ ಕಂಡುಹಿಡಿದು ಹೆಣ್ಣುಮಕ್ಕಳು ಅವನ ರೂಮಿಂದ ಹೋಗುವಂತೆ ಮಾಡಿದೆ.ಆದರೂ ಅರವಿಂದರ ವೀಡಿಯೋ ಮಾಡಿ ಅದನ್ನು ಯಾವಾಗ ಬಿಡುಗಡೆ ಮಾಡಬೇಕೆಂದು ಚಂದನ್ ಎಂಬ ಟ್ರೋಲಿಗನಿಗೆ ಕೊಟ್ಟುಬಂದ
  • ಜೀವನದಲ್ಲಿ ತಪ್ಪೇ ಮಾಡಾದವರು ಇಲ್ಲವೆಂದಲ್ಲ.ಈಗ ನೋಡಿ ಶುಗರ್ ಡ್ಯಾಡಿ ಪುಸ್ತಕ ಅಂತಾನೆ ಜಮೀರ್ ದಾಯಿತೀಗ ನವೆಂಬರ್ ಒಂದರ ಮಹೂರ್ತಕ್ಕೆ ಆಡಿಯೋ ಬಿಡ್ತೀನಿ ಅಂತಾನೆ.ಮಾಧ್ಯಮಗಳು ಜೊಲ್ಲಿನ ನಾಲಿಗೆಯೊಡ್ಡುತ್ತವೆ.ಹೀಗೆ ತಿಂಗಳಾನುಗಟ್ಟಲೆ ತಾರೀಖು ನೀಡಿ ದಾಖಲೆ ಕೊಡ್ತೀನಿ ಎನ್ನುವ ಕಳ್ಳಾಟದಿಂದ ಆಗುವ ಅನಾಹುತಕ್ಕೆ ಮಾಧ್ಯಮಗಳೂ ಹೊಣೆ.ಇವನ ಬ್ಲಾಕ್ ಮೇಲ್ ತಂತ್ರದಲ್ಲಿ ಈಗ ಅವರೂ ಪಾಲುದಾರರು.
  • ಇವನ ಸಿಮ್ ಕಾರ್ಡ್ ಮೊಬೈಲ್ ಜಪ್ತಿ ಮಾಡಿ ಕಾರ್ ಡೀಲರ್ ಹೆಸರಿನ ನಂಬರ್ ಗಳ ತಲೆಹಿಡುಕರ ಪಟ್ಟಿ ತೆಗೆದರೆ ಇವನ ಪತ್ನಿ ಸಂಗೀತ ಸಂಬರ್ಗಿ ಪಾಪ ಅದು ಹೇಗೆ ಮತ್ತೆ ಇವನ ಮುಖ ನೋಡುತ್ತಾರೋ?
    -ಖ್ಯಾತ ಗಾಯಕ ರಘುಧೀಕ್ಷಿತ್ ಬಗ್ಗೆ ಡ್ರಗ್ಸ್ ಆರೋಪ ಮಾಡಿದ.ರಘು ವ್ಯಯಕ್ತಿಕ ಜೀವನದ ನೋವು ನಲಿವುಗಳೇನೇ ಇರಲಿ ಇವನ ಆರೋಪವನ್ನ ಧೂಳಂತೆ ಕೊಡವಿಕೊಂಡು ಎದ್ದರು.ಈ ಗಿಂಡಿಮಾಣಿ ರಘು ಅವರನ್ನ ಇನ್ನೋವೇಟಿವ್ ಸಿಟಿಯಲ್ಲಿ ಮಾತಾದರೂ ಆಡಿಸಲು ತುಂಬಾ ಕರುಳು ಸವೆಸಿದರೂ ಪ್ರಯೋಜನವಾಗಲಿಲ್ಲ.ಅಷ್ಟಕ್ಕೂ ಡ್ರಗ್ ಕುರಿತಂತೆ ಪಾಲುದಾರರಿಗೆ ಶಿಕ್ಷೆಯಾಗಲಿ .ಜೊತೆಗೆ ಇಂತಹ ನಕಲಿಗಳ ಮುಖವಾಡ ಬಯಲಾಗಲಿ. ಈ ಕುರಿತಂತೆ ಯಾವ ವೇದಿಕೆಯಲ್ಲಾದರೂ ಚರ್ಚೆಗೆ ಸಿದ್ಧ…..
    ಸಾಮಾಜಿಕ ಹೋರಾಟಗಾರ ಪ್ರಶಾಂತ್‌ ಸಂಬರಗಿ ವಿರುದ್ಧ ಚಕ್ರವರ್ತಿ ಚಂದ್ರಚೂಡ್‌ ಮಾಡಿರುವ ಆರೋಪಗಳಿವು. ಸದ್ಯಕ್ಕೆ ಅವರು ಇವೆಲ್ಲವನ್ನು ಇಟ್ಟುಕೊಂಡೇ ಕಾನೂನು ಸಮರ ನಡೆಸುವುದಾಗಿ ಹೇಳುತ್ತಿದ್ದಾರೆ. ಮುಂದೆನದು ಕಾನೂನು ಹೋರಾಟ. ಅದು ಎಲ್ಲಿಗೆ ಹೋಗಿ ನಿಲ್ಲತ್ತೋ ಕಾದು ನೋಡಬೇಕಿದೆ.
  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
error: Content is protected !!