ಫೈಟ್ ಮಾಡೋಕೆ ಬೇಕಾಗಿರೋದು ಗ್ರೌಂಡು..ಬ್ಯಾಗ್ರೌಂಡ್ ಅಲ್ಲ.. ಇದು ಕೇವಲ ಬಿಲ್ಡಪ್‌ಗೋಸ್ಕರ ಹೊಡೆದಂತಹ ಡೈಲಾಗ್ ಅಲ್ಲ. ಆ ಡೈಲಾಗ್‌ಗೆ ಬಿಲ್ಡಪ್ ಸಿಗಲಿ ಅಂತ ಹೊಡೆಸಿದ್ದು ಅಷ್ಟೇ. ಇದೇ ರಿಯಲ್ಲು.. ಇದೇ ಫ್ಯಾಕ್ಟು. ಆ ಫ್ಯಾಕ್ಟ್ನಂತೆಯೇ ಫೀಲ್ಡಿಗಿಳಿದವರು, ಮೈಕೊಡವಿಕೊಂಡು ಅಖಾಡಕ್ಕೆ ಇಳಿದು ತೊಡೆತಟ್ಟಿದವರು, ಕಲೆಗಾಗಿ ಬೆವರೊಟ್ಟಿಗೆ ರಕ್ತಬಸಿದವರು, ಅಪ್ಪನ ಹೆಸರು ಬಳಸಿಕೊಳ್ಳದೇ ಸ್ವಂತ ಪರಿಶ್ರಮದಿಂದ ಹೋರಾಡಿದವರು, ಬಜಾರ್‌ನಲ್ಲಿ ಸ್ವಂತ ಬ್ರಾಂಡ್ ಆದವರು, ಗಂಧದಗುಡಿಯಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿದವರು, ಇಷ್ಟೆಲ್ಲಾ ಮಾಡಿದವರು ಬೇರಾರು ಅಲ್ಲ ತೂಗುದೀಪದ ಕುಡಿ, ಒನ್ ಅಂಡ್ ಓನ್ಲೀ ಡಿಬಾಸ್..!
ಚಾಲೆಂಜಿಂಗ್ ಸ್ಟಾರ್, ಚಕ್ರವರ್ತಿ, ಬಾಕ್ಸ್ ಆಫೀಸ್ ಸುಲ್ತಾನ್, ಯಜಮಾನ, ಒಡೆಯ, ಕುಲಕೋಟಿ ಅಭಿಮಾನಿಗಳ ಆರಾಧ್ಯದೈವ, ದಾಸ, ದಚ್ಚು, ದರ್ಶನ್, ಹೀಗೆ ಒಂದಾ.. ಎರಡಾ..ಹತ್ತಾರು ಹೆಸರುಗಳಿಂದ ಕರೆಸಿಕೊಳ್ಳುವ ನಾಯಕ ಇವರು. ಯಾರಿಗೂ ಸಲಾಂ ಹೊಡೆಯದೇ, ಬಕೆಟ್ ಹಿಡಿಯದೇ, ಸಿಂಟ್ಯಾಕ್ಸ್ ಬಳಸದೇ, ಸ್ವಂತ ಪರಿಶ್ರಮದಿಂದ ಒಂದೊಂದೇ ಮೆಟ್ಟಿಲೇರಿ ಸ್ಟಾರ್ ಆದವರು. ಶ್ರೇಷ್ಟ ಖಳನಾಯಕನ ಮಗನಾದರೂ ಕೂಡ ಅಪ್ಪನ ಹೆಸರೇಳಿ ಅವಕಾಶ ಗಿಟ್ಟಿಸಿಕೊಳ್ಳಲು ಹಿಂಜರಿದವರು. ಬಣ್ಣದ ಲೋಕಕ್ಕೆ ಧುಮಕಲೆಬೇಕು, ಅಪ್ಪನಂತೆ ಕಲಾವಿದನಾಗ್ಬೇಕು ಎನ್ನುವ ಹಂಬಲಕ್ಕೆ, ತುಡಿತಕ್ಕೆ, ಕನಸಿಗೆ, ಮಹದಾಸೆಗೆ ತಾವೇ ನೀರೆರೆದುಕೊಂಡು ಪೋಷಿಸಿದವರು. ಲೈಟ್‌ಮ್ಯಾನ್ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಹೆಜ್ಜೆಹೆಜ್ಜೆಗೂ ಕಷ್ಟ-ನೋವು-ಅವಮಾನ, ಅಪಮಾನ, ನಿಂದನಗೆಳನ್ನು ಎದುರಿಸಿದವರು. ಸವಾಲುಗಳಿಗೆ ಹೆದರದೇ ಸೆಡ್ಡುಹೊಡೆದು ಮೆಟ್ಟಿನಿಂತವರು. ಕೊನೆಗೆ ಚಾಲೆಂಜ್ ಹಾಕಿಯೇ ಲೈಫ್‌ನ ಕಂಡುಕೊಂಡವರು. ಹೀಗಾಗಿಯೇ ಇವತ್ತು ಇವರಿಗೆ ಚಾಲೆಂಜಿಂಗ್ ಸ್ಟಾರ್ ಅಂತ ಕರೆಯುತ್ತಾರೆ. ಕೋಟ್ಯಾಂತರ ಭಕ್ತರು ತಲೆಮೇಲೆ ಹೊತ್ತು ಮೆರೆಸುತ್ತಾರೆ.
ದರ್ಶನ್ ಇವತ್ತು ಏನೇ ಆಗಿದ್ದರೂ ಕೂಡ ಅದಕ್ಕೆ ಕಾರಣ ಅವರೇ. 150 ರೂಪಾಯಿ ಬಾಟದಿಂದ ಹಿಡಿದು ೧೦ ಕೋಟಿ ಸಂಭಾವನೆ ಪಡೆಯುವುದಕ್ಕೆ ಡಿಬಾಸ್ ಪಟ್ಟಿರುವ ಕಷ್ಟ ಡಿಬಾಸ್‌ಗೆ ಮಾತ್ರ ಗೊತ್ತು. ಹೀಗಾಗಿಯೇ, ಸಾಕಷ್ಟು ಭಾರಿ ಅವರೇ ಹೇಳಿಕೊಂಡಿದ್ದಾರೆ. ನಾನು ದರ್ಶನ್‌ಗೆ ಬೆಳೆಸದೇ, ನಾನು ದರ್ಶನ್‌ಗೆ ಅವಕಾಶ ಕೊಡಿಸಿದೇ, ಈ ರೀತಿ ಹೇಳಿಕೊಳ್ಳುವ ಅವಕಾಶವನ್ನ ನಾನು ಯಾರಿಗೂ ಕೊಟ್ಟಿಲ್ಲವೆಂದು. ಅಪ್‌ಕೋರ್ಸ್ ಯಾರಿಗೂ ಸಲಾಂ ಹೊಡೆದು ಚಾನ್ಸ್ ಗಿಟ್ಟಿಸಿಕೊಂಡಿಲ್ಲ, ಸಲಾಂ ಹೊಡೆದು ಆಳೆತ್ತರಕ್ಕೆ ಬೆಳೆದು ನಿಂತಿಲ್ಲ. ಲೈಟ್‌ಮ್ಯಾನ್ ಕೆಲಸ ಮಾಡಿ, ಸಣ್ಣ-ಪುಟ್ಟ ಪಾತ್ರಗಳಿಗೆ ಜೀವತುಂಬಿ, ಸೀರಿಯಲ್ ಮಾಡಿ ತನ್ನ ಕಲೆಯನ್ನ ಪ್ರೂ ಮಾಡಿದವರು. ದಾಸನ ಕಲೆಗೆ ಬೆಲೆಕೊಟ್ಟು ಪಿ.ಎನ್. ಸತ್ಯ, ಎಂ.ಜಿ ರಾಮ್‌ಮೂರ್ತಿ ಅವರು ಬೆಳ್ಳಿತೆರೆಗೆ ಕರೆತಂದರು. ಮೆಜೆಸ್ಟಿಕ್‌ನಲ್ಲೇ ಮೆಜೆಸ್ಟಿಕ್ ತೋರ‍್ಸಿದರು. ಮುಂದಾಗಿದ್ದೆಲ್ಲವೂ ಇವತ್ತಿಗೂ ಇತಿಹಾಸವೇ ಸರೀ.
ಸಾರಥಿ ಚಿತ್ರರಂಗಕ್ಕೆ ಬಂದು ೨೪ ವರ್ಷ ಕಳೆದಿದೆ. ಈ ೨೪ ವರ್ಷದ ಸಿನಿಜರ್ನಿಯಲ್ಲಿ ೫೩ ಸಿನಿಮಾಗೆ ಜೀವಕೊಟ್ಟಿದ್ದಾರೆ. ಮಾಸ್ ಹೀರೋ ಆಗಿ ಬೆಳ್ಳಿತೆರೆಮೇಲೆ ಧಗಧಗಿಸಿದ್ದಾರೆ, ಬಾಕ್ಸ್ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಕೊಟ್ಟು ಅನ್ನದಾತರನ್ನ ಬೆಳೆಸಿದ್ದಾರೆ. ಬಾಕ್ಸ್ಆಫೀಸ್ ಸುಲ್ತಾನ್ ಪಟ್ಟಕ್ಕೇರಿದ್ದಾರೆ. ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕೋಟಿ ಕೋಟಿ ದುಡ್ಡು ಮಾಡಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡೋದಕ್ಕೆ ದರ್ಶನ್ ಗುಂಪುಕಟ್ಟಿಕೊಂಡು ಹೋರಾಡಲಿಲ್ಲ. ಮೇಲ್ನೋಟಕ್ಕೆ ಚೆನ್ನಾಗಿದ್ದು ಒಳಗೊಳಗೆ ಕೇಡು ಬಯಸುವವರಿಗೂ ಕೂಡ ಒಳ್ಳೆಯದನ್ನೇ ಬಯಸಿದರು. ಒಬ್ಬಂಟಿಯಾಗಿ ಒಂಟಿಸಲಗದಂತೆ ಹೋರಾಡಿದರು. ಅದರ ಪ್ರತಿಫಲವೇ ಇವತ್ತು ಗಂಧದಗುಡಿಯಲ್ಲಿ ಸ್ವಂತ ಸಾಮ್ರಾಜ್ಯಕ್ಕೆ ಕಟ್ಟಲಿಕ್ಕೆ ಸಾಧ್ಯವಾಗಿದ್ದು, ತೂಗುದೀಪ ವಂಶ ವಜ್ರದಂತೆ ಹೊಳೆಯುತ್ತಿರುವುದು.
ಕ್ಷೇತ್ರ ಯಾವುದೇ ಇರಲಿ ಏಕಾಂಗಿ ಹೋರಾಟ ತುಂಬಾ ಕಷ್ಟ. ಕೈಗೊಬ್ಬರು.. ಕಾಲಿಗೊಬ್ಬರು ಆಳು.. ಹೆಸರು.. ಕೀರ್ತಿ..ಹಣ..ಆಸ್ತಿ.. ಎಲ್ಲವೂ ಇದ್ದವರು, ಬಲ ತುಂಬಿಕೊಂಡವರು ಒಂಟಿಸಲಗದ ಹೋರಾಟಕ್ಕೆ ಹಿಂಜರಿಯುತ್ತಾರೆ. ಆದರೆ, ದಚ್ಚು ಎದೆಗುಂದಲಿಲ್ಲ, ಮುಂದಿಟ್ಟ ಹೆಜ್ಜೆನಾ ಹಿಂದೆ ತೆಗೆದುಕೊಳ್ಳಲಿಲ್ಲ. ಬದಲಿಗೆ, ವ್ಯಕ್ತಿನಾ ನೋಡಿ ನನ್ನ ಶಕ್ತಿ ಡಿಸೈಡ್ ಆಗಲ್ಲ. ಸೆಡ್ಡು ಹೊಡೆದು ನಿಂತ್ಮೇಲೆ ಸೈಡಿಗೆ ಹೋಗೋ ಮಾತೇಯಿಲ್ಲ. ಹೀಗನ್ನುತ್ತಲೇ ಫೀಲ್ಡಿಗಿಳಿದರು. ಮೂವೀ ಎನ್ನುವ ಮಾಯಲೋಕದಲ್ಲಿ ಮಿನುಗಿದರು. ಸಿನಿಮಾ ಎನ್ನುವ ಸಾಮ್ರಾಜ್ಯದಲ್ಲಿ ಸುಂಟರಗಾಳಿ ಎಬ್ಬಿಸಿ ಒಡೆಯನಾದರು. ಹೀಗಾಗಿ, ಬಣ್ಣ ಹಚ್ಚುವವರು ಯಜಮಾನನ ಬದುಕನ್ನ ಸ್ಪೂರ್ತಿಯಾಗಿಟ್ಟುಕೊಂಡು ಸಿನಿಮಾ ಲೋಕಕ್ಕೆ ಎಂಟ್ರಿಕೊಡ್ತಾರೆ. ಯಜಮಾನ ಸಿನಿಮಾ ನಂತರ ಎರಡನೇ ಭಾರಿ ಕ್ಯಾಪ್ ತೊಟ್ಟಿರುವ ವಿ ಹರಿಕೃಷ್ಣ ಏಕಾಂಗಿಯಾಗಿ ಹೋರಾಡೋದನ್ನ ಕಲಿಯಿರಿ' ಎನ್ನುವ ಟ್ಯಾಗ್‌ಲೈನ್ ಜೊತೆಗೆ ಚಾಲೆಂಜಿಂಗ್
ಕ್ರಾಂತಿ’ ಮಾಡಿಸೋದಕ್ಕೆ ಹೊರಟಿದ್ದಾರೆ.
ಕ್ರಾಂತಿ' ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ೫೫ನೇ ಸಿನಿಮಾ. ಸಿನಿಮಾರಂಗದಲ್ಲಿ ದಚ್ಚು ಬೆಳೆದು ನಿಂತ ಪರಿಯೇ ಒಂದು ರೀತಿ ಕ್ರಾಂತಿಯಾಗಿರುವುದರಿಂದ,
ಕ್ರಾಂತಿ’ ಸಿನಿಮಾ ಬಹಳಷ್ಟು ನಿರೀಕ್ಷೆಯನ್ನ ಮೂಡಿಸಿದೆ. ಬಹುಭಾಷೆಯಲ್ಲಿ ಈ ಮೂವೀ ನಿರ್ಮಾಣ ಮಾಡೋದಕ್ಕೆ ನಿರ್ಮಾಪಕರಾದ ಶೈಲಜಾ ನಾಗ್ ಹಾಗೂ ಬಿ ಸುರೇಶ್ ನಿರ್ಧರಿಸಿದ್ದಾರೆ. ಕ್ರೇಜಾ.. ಕ್ರೇಜಿಗೆ ಅಪ್ಪನಪ್ಪನಪ್ಪ ಕಣೋ ಇವ್ರು ಅಂತ ಹೇಳಿ `ಯಜಮಾನ’ ಸುದ್ದಿಗೋಷ್ಟಿಯಲ್ಲಿ ಮತ್ತೊಂದು ಚಿತ್ರ ಮಾಡುವುದಾಗಿ ತಿಳಿಸಿದ್ದರು. ಅದರಂತೇ, ಅದ್ದೂರಿ ಚಿತ್ರಕ್ಕೆ ಕೈಹಾಕಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರಾಂತಿ ಮಾಡೋದಕ್ಕೆ ಹೊರಟಿದ್ದಾರೆ. ಅಷ್ಟಕ್ಕೂ, ಸಾರಥಿಯ ಕೈಯಲ್ಲಿ ಯಾವ್ ರೀತಿಯ ಕ್ರಾಂತಿ ಮಾಡಿಸ್ತಾರೆ? ಆದ್ರೆ ಇಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದ್ದು ಕ್ರಾಂತಿ ಹೆಸರಿನ ಚಿತ್ರಕ್ಕೆ ಕೊಟ್ಟ ಟ್ಯಾಗ್ ಲೈನ್. ಲರ್ನ್ ಟು ಫೈಟ್ ಅಲೋನ್. ಅಂದ್ರೆ ಏಕಾಂಗಿಯಾಗಿ ಹೋರಾಡೋದನ್ನು ಕಲಿ ಅಂತ. ಹಾಗಾದ್ರೆ.. ಬೆಳ್ಳಿ ತೆರೆ ಮೇಲೆ ಹೀಗೆ ಹೇಳಲು ಹೊರಟವರು ಯಾರು ? ನಿರ್ದೇಶಕ ಹರಿಕೃಷ್ಣ ತಮ್ಮ ಕಥೆ ಮೂಲಕ ದರ್ಶನ್ ಅವರ ರಿಯಲ್ ಕಥೆ ಹೇಳಿಸ್ತಾರಾ ಅಥವಾ ಹೊಸ ಕಥೆನಾ ಕಟ್ಟಿ ಕೊಡ್ತರಾ ಅನ್ನೋದಿಕ್ಕೆ ಚಿತ್ರ ನೋಡಿದಾಗಲೇ ಗೊತ್ತಗಲಿದೆ. ಅಲ್ಲಿವರೆಗೂ ನೀವು ಒಬ್ಬಂಟಿಯಾಗಿ ಫೈಟ್ ಮಾಡಿ.
- ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ