ಸೋಮವಾರ ಅಂಬುಜ ಚಿತ್ರದ ಫಸ್ಟ್ ಲುಕ್ ಲಾಂಚ್ : ಶುಭಾ ಪೂಂಜಾ ಪಾತ್ರದ ಇನ್ನೊಂದು ಮುಖ ರಿವೀಲ್ ಆಗುತ್ತಾ?

ನಟಿ ಶುಭಾ ಪೂಂಜಾ ಅಭಿನಯ ಹಾಗೂ ಶ್ರೀನಿ ಹನುಮಂತರಾಜು ನಿರ್ದೇಶನದ ‘ಅಂಬುಜ’ ಚಿತ್ರ ತಂಡ ಶೂಟಿಂಗ್ ಹೊರಡುವ ತವಕದಲ್ಲಿದೆ. ಎಲ್ಲವೂ ಚಿತ್ರತಂಡ ಅಂದುಕೊಂಡಂತಾದರೆ ಅಕ್ಟೋಬರ್ ಮೊದಲ ವಾರದಿಂದ ಚಿತ್ರೀಕರಣ ಶುರುವಾಗಲಿದೆ. ಆ ನಿಟ್ಟಿನಲ್ಲಿಯೇ ತೆರೆ ಮರೆಯಲ್ಲಿ ಎಲ್ಲಾ ರೀತಿಯ ಸಿದ್ದತೆ ನಡೆಸಿದರುವ ಚಿತ್ರ ತಂಡ ಸೆಪ್ಟೆಂಬರ್ 13 ರಂದು ಸೋಮವಾರ ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡಲು ರೆಡಿ ಆಗಿದೆ. ಅಂದು ಬೆಳಗ್ಗೆ 9 ಗಂಟೆಗೆ ಫಸ್ಟ್ ಲುಕ್ ಲಾಂಚ್ ಆಗಲಿದೆ. ಗ್ಲಾಮರಸ್ ನಟಿ ಶುಭಾ ಪೂಂಜಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಈಗಾಗಲೇ ಹಲವು ಕಾರಣಕ್ಕೆ ಸುದ್ದಿ ಮಾಡಿದೆ. ‘ಕೆಲವು ದಿನಗಳ ನಂತರ’ ಹೆಸರಿನ ಚಿತ್ರದ ಮೂಲಕ ಭರವಸೆ ಮೂಡಿಸಿದ ನಿರ್ದೇಶಕ ಶ್ರೀನಿ ಹನುಮಂತರಾಜು ಮತ್ತೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. ಇದು ಅವರ ಸೆಕೆಂಡ್ ಅಟ್ಮೆಂಟ್.

ಚೊಚ್ಚಲ ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಮೂಲಕ ಕುತೂಹಲ ಮೂಡಿಸಿದ್ದ ನಿರ್ದೇಶನ ಶ್ರೀನಿ, ಈಗ ಪಕ್ಕಾ ಮಹಿಳಾ ಪ್ರಧಾನ ಕಥೆ ಆಯ್ಕೆ ಮಾಡಿಕೊಂಡಿರುವುದು ಮತ್ತೆ ಕುತೂಹಲ ಕೆರಳಿಸಿದೆ. ಈಗಾಗಲೇ ಅವರೇ ಮಾಹಿತಿ ನೀಡಿರುವ ಪ್ರಕಾರ ಇದು ಕೂಡ ಕ್ರೈಮ್ ಥ್ರಿಲ್ಲರ್ ಕಥಾ ಹಂದರದ ಪಕ್ಕಾ ಲವ್ ಸ್ಟೋರಿ ಸಿನಿಮಾ. ಎಲ್ಲವೂ ಅಂದುಕೊಂಡಂತಾಗಿದ್ದರೆ ಇಷ್ಟೊರಳಗಾಗಿಯೇ ಈ ಚಿತ್ರಕ್ಕೆ ಚಿತ್ರೀಕರಣ ಆಗಬೇಕಿತ್ತು. ಆದರೆ ಕೊರೋನಾ ಕಾರಣಕ್ಕೆ ಚಿತ್ರೀಕರಣದ ಪ್ಲಾನ್ ಕೂಡ ಏರು ಪೇರಾಯಿತು. ಅದರ ಪರಿಣಾಮ ಒಂದಷ್ಟು ದಿನ ಸೂಕ್ತಸಮಯಕ್ಕಾಗಿ ಕಾಯಬೇಕಾಯಿತು. ಈ ನಡುವೆ ಚಿತ್ರದ ಕಥಾ ನಾಯಕಿ ಶುಭಾ ಪೂಂಜಾ ಬಿಗ್ ಬಾಸ್ ಗೆ ಹೋದರು. ಇನ್ನೊಂದೆಡೆ ಈ ಚಿತ್ರದ ಇನ್ನೊಬ್ಬ ಪಾತ್ರಧಾರಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡರಿಗೆ ಆಕ್ಸಿಡೆಂಟ್ ಆಯ್ತು. ಈಗ ಎಲ್ಲವೂ ಸರಿ ಹೋಗಿದೆ. ಅದೇ ಹಿನ್ನೆಲೆಯಲ್ಲಿ ಚಿತ್ರ ತಂಡ ಚಿತ್ರೀಕರಣಕ್ಕೆ ಸಿದ್ದತೆ ನಡೆಸಿದೆ.

ಸದ್ಯಕ್ಕೆ ಫಸ್ಟ್ ಲುಕ್ ಲಾಂಚ್ ಸಿದ್ದತೆಯಲ್ಲಿರುವ ನಿರ್ದೇಶಕ ಶ್ರೀನಿ ಸಿನಿ ಲಹರಿ ಜತೆಗೆ ಮಾತನಾಡಿ, ಕೊರೋನಾ ಕಾರಣಕ್ಕೆ ಸಿನಿಮಾ ಕೆಲಸಗಳು ತಡವಾದವು. ಈಗ ಎಲ್ಲವೂ ಸರಿ ಹೋಗಿದೆ. ಸೋಮವಾರ ಫಸ್ಟ್ ಲುಕ್ ಲಾಂಚ್ ಆಗುತ್ತಿದೆ. ಬಹುತೇಕ ಅಕ್ಟೋಬರ್ ಫಸ್ಟ್ ವೀಕ್ ನಿಂದ ಶೂಟಿಂಗ್ ಹೊರಡೋಣ ಅಂತಂದುಕೊಂಡಿದ್ದೇವೆ ಎಂದರು. ಇನ್ನು ಫಸ್ಟ್ ಲುಕ್ ಕುತೂಹಲ ಮೂಡಿಸಿದೆ. ನಿರ್ದೇಶಕರ ಪ್ರಕಾರ ಚಿತ್ರದ ಕಥಾ ನಾಯಕಿ ಶುಭಾ ಪೂಂಜಾ ಅವರ ಪಾತ್ರದ ಇನ್ನೊಂದು ಲುಕ್ ಸೋಮವಾರ ರಿವೀಲ್ ಆಗಲಿದೆಯಂತೆ.

ಎಂಟರ್‌ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!