ಪ್ರಶಾಂತ್ ಸಂಬರಗಿ ಮುಖವಾಡ ಬಯಲು ಮಾಡಿದ ಬೆನ್ನಲ್ಲೇ ಅವರ ವಿರುದ್ಧ ಕಾನೂನು ಸಮರಕ್ಕೆ ಅಣಿಯಾದ್ರಾ ಚಂದ್ರಚೂಡ್‌ ?

ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಅವರಿಗೆ ನಿರ್ದೇಶಕ ಹಾಗೂ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಶನಿಯಂತೆ ಹೆಗಲೇರುವುದು ಗ್ಯಾರಂಟಿ ಆಗಿದೆ. ಅತ್ತ ಡ್ರಗ್ಸ್ ಕೇಸ್ ನಲ್ಲಿರುವವರೆಲ್ಲರೂ ಜೈಲು ಕಂಬಿ ಎಣಿಸಬೇಕೆಂದು ಸಂಬರಗಿ ಗುಡುಗುತ್ತಿದ್ದರೆ, ಇತ್ತ ಸಂಬರಗಿ ಅವರನ್ನೇ ಚಂದ್ರಚೂಡ್ ಕಾನೂನು ತಂತ್ರ ಹೆಣೆಯುತ್ತಿದ್ದಾರೆ. ಗಣೇಶ್ ಹಬ್ಬದ ದಿನವಾದ ಶುಕ್ರವಾರವಷ್ಟೇ ಸೋಷಲ್ ಮೀಡಿಯಾದಲ್ಲಿ ಸಂಬರಗಿ ಅವರ ಮುಖವಾಡ ಬಯಲು ಮಾಡಿದ್ದ ಚಂದ್ರಚೂಡ್, ಈಗ ಅವರ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ದತೆ ನಡೆಸಿದ್ದಾರೆ. ಶುಕ್ರವಾರವೇ ಸಂಜೆ ಈ ಸಂಬಂಧ ವಕೀಲರೂ ಹಾಗೂ ಆವರ ಆತ್ಮೀಯರಾದ ಸೂರ್ಯ ಮುಕುಂದರಾಜ್ ಮತ್ತು ಸಂಪತ್ ಕುಮಾರ್‌, ಜತೆಗೆ ಚರ್ಚೆ ನಡೆಸಿದ್ದಾರೆ. ತಮ್ಮ ನಿವಾಸದಲ್ಲಿಯೇ ಈ ಕುರಿತು ಮಾತುಕತೆ ನಡೆಸಿರುವ ಫೋಟೋಗಳನ್ನು ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಚಂದ್ರಚೂಡ್, ಕಾನೂನು ಸಮರಕ್ಕೆ ಸಿದ್ದ ಎಂದು ಹೇಳಿದ್ದಾರೆ. ಇಷ್ಟಕ್ಕೂ, ಸಂಬರಗಿ ವಿರುದ್ಧ ಕಾನೂನು ಹೋರಾಟಕ್ಕೆ ಚಂದ್ರಚೂಡ್ ನೀಡುವ ಪ್ರಮುಖ ಕಾರಣಗಳೇನು ? ಸಂಬರಗಿ ಮಾಡಿರುವ ಅಪರಾಧಗಳೇನು ? ಅದೆಲ್ಲದ್ದರ ಬಗ್ಗೆ ಚಂದ್ರಚೂಡ್ ಅಧಿಕೃತವಾಗಿಯೇ ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೀಷ್ಟು…

 • ಸಾಮಾಜಿಕ ಕಾರ್ಯಕರ್ತ (ನಿಜವಾದ ಹೋರಾಟಗಾರರಲ್ಲಿ ಕ್ಷಮೆ ಕೇಳಿ )ನನ್ನ ಮೇಲೆ ವಿಪರೀತ ಕೇಸುಗಳನ್ನು ಹಾಕಲಾಗಿದೆ ಎಂದು ಪೋಸು ಕೊಡುವಾಗಲೇ -ಸಣ್ಣದೊಂದು ಮಾಹಿತಿ ತೆಗೆದರೆ ಈತ ಒಬ್ಬ ನೆಲಹಿಡುಕ ಅವುಗಳ ಹಳವಂಡದ ಕೇಸುಗಳವು. ಸೋನಿಯಾ ಗಾಂಧಿ ಮತ್ತು ಕುಸುಮಾ ಹನುಮಂತರಾಯರಪ್ಪ ಅವರ ವಿರುದ್ಧ ನೀಡಿದ ಸಂವಿಧಾನ ವಿರೋಧಿ ಹೇಳಿಕೆಗಳ ಕಾರಣಕ್ಕೆ ಕಾಂಗ್ರೆಸ್ ನ ಲೀಗಲ್ ಸೆಲ್ ಕೇಸು ಜಡಿದಿದೆ. ನಂತರ ದೇವನಾಥ್ ಎಂಬುವವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.ಉಳಿದವುಗಳಲ್ಲೇ ಭೂತಾಯಿಯ ದಲ್ಲಾಳಿ (ಅವನದೇ ಹೇಳಿಕೆ)ತನದ ಕಾರಣದ ಕೇಸುಗಳು.
  -ಇವನ ಬಳಿ ಇರುವ ರೇಂಜ್ ರೇವರ್ ಕಾರು ಸಿಸಿಬಿ ಕೇಸು, ಬಿಡಿಎ ರವಿ ಎಂಬಾತ ,ದೇವನಾಥ್ ಎಂಬಾತನ ಗೆಳೆತನ -ಇವುಗಳ ಸಣ್ಣ ತನಿಖೆ ಮಾಡಿದಾಗ ತಿಳಿದದ್ದು ತನ್ನ ಹೆಸರಿನ ಲೋನ್ ಪಡೆದು ಕಾರ್ ಕೊಡಿಸಿ ಅದಕ್ಕೂ ಕಮಿಷನ್ ಪಡೆದು ರಾತ್ರೋರಾತ್ರಿ ತನ್ನದೇ ಕಾರೆಂದು ನಂಬಿದ ಸ್ನೇಹಿತನಿಗೇ ವಿಶ್ವಾಸ ದ್ರೋಹ ಮಾಡಿದ ಆಸಾಮಿ ಕಂಡವರ ಬಗ್ಗೆ ಸುಳ್ಳು ಆಸ್ತಿಗಳ ಲೆಕ್ಕ ಕೇಳುತ್ತಾನೆ.
 • ರಾಗಿಣಿ ಸಂಜನಾ ,ಅನುಶ್ರೀ ಜಮೀರ್ ಮಹಮದ್ ಮುಂತಾದವರ ಬಗ್ಗೆ ಈತ ಈವರೆಗೂ ಒಂದು ಔನ್ಸಿನ ಮಾಹಿತಿ ಕೊಟ್ಟಿಲ್ಲ. ಪೋಲೀಸರ ಕಾರ್ಯಚರಣೆಯ predictions ಗಳನ್ನ ಹೇಳುವ ಜ್ಯೋತಿಷಿ ಇವನು.ಸಿಸಿಬಿ ಕಛೇರಿಯಿಂದ ಬುಲಾವ್ ಹೋದಾಗ ಇವನು ಹಿಡಿದಿದ್ದ ಫೈಲನ್ನೇ ಝೂಮ್ ಮಾಡಿ ಮಾಡಿ ತೋರಿಸಿದವು ಕ್ಯಾಮರಾಗಳು.
  -ಇವನ ಮೂಲ ಊರು ಮರಾಠರ ಪ್ರಾಂತ್ಯದ್ದು.ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಇವನು ಕನ್ನಡ ವಿರೋಧಿ ಹಿಂದಿ ಹೇರಿಕೆಯ ಹೇಳಿಕೆಗಳನ್ನ ನಾವೆಲ್ಲ ನೋಡಿಯೂ ಕೇಳಿಯೂ ಕನ್ನಡಿಗ ಅಂತ ಒಪ್ಪಿಕೊಳ್ಳುವವರ ಎದೆಭಾಷೆಯಬಗ್ಗೆ ನನಗಂತೂ ಅನುಮಾನ. ಹಾಳುಬಿದ್ದು ಹೋಗಲಿ ರಾಜಕೀಯ ಕಾರಣಕ್ಕೆ ತಾಯಿಭಾಷೆಯ ಬಲಿಕೊಡುವ ಇಂತಹ ನೆಲಹಿಡುಕರೂ ಇದ್ದಾರೆಂದರೆ ನೆಟ್ಟಗೆ ಕನ್ನಡದ ಸ್ವರ ವ್ಯಂಜನಗಳ ಪರಿಚಯವಿಲ್ಲ.
 • ಇನ್ನು ಇವನಿಗೆ ಜೀವದ ಗೆಳೆಯರಿರುವುದು ನನಗೆ ಅರಿವಿಲ್ಲ .ಎಲ್ಲರ ಮಾತೂ ರೆಕಾರ್ಡ್ ಎಲ್ಲರ ವೀಡಿಯೋ ರೆಕಾರ್ಡೂ…. ಬಿಗ್ ಬಾಸ್ ನ ಎರಡನೇ ಇನ್ನಿಂಗ್ಸ್ ನ ಕ್ವಾರೈಂಟೈನ್ ಸಂದರ್ಭದಲಿ ಸ್ಪರ್ಧಿ ಅರವಿಂದ ಸೇರಿದಂತೆ ಹಲವರಿಗೆ ಮಧ್ಯಪಾನದ ಪಾರ್ಟಿಕೊಟ್ಟು ( ಚಾನಲ್ ನಿಯಮಾವಳಿ ವಿರೋಧಿಸಿ)ವಿಡಿಯೋ ಮಾಡಿದ .ಸಧ್ಯ ನಾನು ಇಂತಹ ಚಾಣಪತ್ರಿಗಳನ್ನ ತುಂಬಾ ನೋಡಿದವನು ಕ್ಷಣಮಾತ್ರದಲ್ಲಿ ಕುತಂತ್ರ ಕಂಡುಹಿಡಿದು ಹೆಣ್ಣುಮಕ್ಕಳು ಅವನ ರೂಮಿಂದ ಹೋಗುವಂತೆ ಮಾಡಿದೆ.ಆದರೂ ಅರವಿಂದರ ವೀಡಿಯೋ ಮಾಡಿ ಅದನ್ನು ಯಾವಾಗ ಬಿಡುಗಡೆ ಮಾಡಬೇಕೆಂದು ಚಂದನ್ ಎಂಬ ಟ್ರೋಲಿಗನಿಗೆ ಕೊಟ್ಟುಬಂದ
 • ಜೀವನದಲ್ಲಿ ತಪ್ಪೇ ಮಾಡಾದವರು ಇಲ್ಲವೆಂದಲ್ಲ.ಈಗ ನೋಡಿ ಶುಗರ್ ಡ್ಯಾಡಿ ಪುಸ್ತಕ ಅಂತಾನೆ ಜಮೀರ್ ದಾಯಿತೀಗ ನವೆಂಬರ್ ಒಂದರ ಮಹೂರ್ತಕ್ಕೆ ಆಡಿಯೋ ಬಿಡ್ತೀನಿ ಅಂತಾನೆ.ಮಾಧ್ಯಮಗಳು ಜೊಲ್ಲಿನ ನಾಲಿಗೆಯೊಡ್ಡುತ್ತವೆ.ಹೀಗೆ ತಿಂಗಳಾನುಗಟ್ಟಲೆ ತಾರೀಖು ನೀಡಿ ದಾಖಲೆ ಕೊಡ್ತೀನಿ ಎನ್ನುವ ಕಳ್ಳಾಟದಿಂದ ಆಗುವ ಅನಾಹುತಕ್ಕೆ ಮಾಧ್ಯಮಗಳೂ ಹೊಣೆ.ಇವನ ಬ್ಲಾಕ್ ಮೇಲ್ ತಂತ್ರದಲ್ಲಿ ಈಗ ಅವರೂ ಪಾಲುದಾರರು.
 • ಇವನ ಸಿಮ್ ಕಾರ್ಡ್ ಮೊಬೈಲ್ ಜಪ್ತಿ ಮಾಡಿ ಕಾರ್ ಡೀಲರ್ ಹೆಸರಿನ ನಂಬರ್ ಗಳ ತಲೆಹಿಡುಕರ ಪಟ್ಟಿ ತೆಗೆದರೆ ಇವನ ಪತ್ನಿ ಸಂಗೀತ ಸಂಬರ್ಗಿ ಪಾಪ ಅದು ಹೇಗೆ ಮತ್ತೆ ಇವನ ಮುಖ ನೋಡುತ್ತಾರೋ?
  -ಖ್ಯಾತ ಗಾಯಕ ರಘುಧೀಕ್ಷಿತ್ ಬಗ್ಗೆ ಡ್ರಗ್ಸ್ ಆರೋಪ ಮಾಡಿದ.ರಘು ವ್ಯಯಕ್ತಿಕ ಜೀವನದ ನೋವು ನಲಿವುಗಳೇನೇ ಇರಲಿ ಇವನ ಆರೋಪವನ್ನ ಧೂಳಂತೆ ಕೊಡವಿಕೊಂಡು ಎದ್ದರು.ಈ ಗಿಂಡಿಮಾಣಿ ರಘು ಅವರನ್ನ ಇನ್ನೋವೇಟಿವ್ ಸಿಟಿಯಲ್ಲಿ ಮಾತಾದರೂ ಆಡಿಸಲು ತುಂಬಾ ಕರುಳು ಸವೆಸಿದರೂ ಪ್ರಯೋಜನವಾಗಲಿಲ್ಲ.ಅಷ್ಟಕ್ಕೂ ಡ್ರಗ್ ಕುರಿತಂತೆ ಪಾಲುದಾರರಿಗೆ ಶಿಕ್ಷೆಯಾಗಲಿ .ಜೊತೆಗೆ ಇಂತಹ ನಕಲಿಗಳ ಮುಖವಾಡ ಬಯಲಾಗಲಿ. ಈ ಕುರಿತಂತೆ ಯಾವ ವೇದಿಕೆಯಲ್ಲಾದರೂ ಚರ್ಚೆಗೆ ಸಿದ್ಧ…..
  ಸಾಮಾಜಿಕ ಹೋರಾಟಗಾರ ಪ್ರಶಾಂತ್‌ ಸಂಬರಗಿ ವಿರುದ್ಧ ಚಕ್ರವರ್ತಿ ಚಂದ್ರಚೂಡ್‌ ಮಾಡಿರುವ ಆರೋಪಗಳಿವು. ಸದ್ಯಕ್ಕೆ ಅವರು ಇವೆಲ್ಲವನ್ನು ಇಟ್ಟುಕೊಂಡೇ ಕಾನೂನು ಸಮರ ನಡೆಸುವುದಾಗಿ ಹೇಳುತ್ತಿದ್ದಾರೆ. ಮುಂದೆನದು ಕಾನೂನು ಹೋರಾಟ. ಅದು ಎಲ್ಲಿಗೆ ಹೋಗಿ ನಿಲ್ಲತ್ತೋ ಕಾದು ನೋಡಬೇಕಿದೆ.
 • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!