ಅನಿರುದ್ಧ್ ವಾಯ್ಸ್!‌‌ ಆಪರೇಶನ್ D ಸಾಂಗ್ಸ್; ಫಸ್ಟ್‌ ಟೈಮ್‌ ಎಲ್ಲಾ ಸಾಂಗ್‌ ಹಾಡಿದ್ರು ಶಾಸ್ತ್ರಿ

ಅದ್ವಿತ ಫಿಲಂ ಫ್ಯಾಕ್ಟರಿ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಆಪರೇಶನ್ D” ಚಿತ್ರದ ಹಾಡುಗಳ ಧ್ವನಿಮುದ್ರಣ ಪೂರ್ಣಗೊಂಡಿದೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನಾಲ್ಕನ್ನು ಅನಿರುದ್ಧ್ ಶಾಸ್ತ್ರಿ ಅವರೇ ಹಾಡಿರುವುದು ವಿಶೇಷ. ಚಿತ್ರದ ಎಲ್ಲಾ ಹಾಡುಗಳನ್ನು ತಾವೇ ಹಾಡಿರುವುದು ಇದೇ ಮೊದಲು ಎಂಬುದು ಅನಿರುದ್ಧ್ ಶಾಸ್ತ್ರಿ ಮಾತು. ವೇದಿಕ ಹಾಗೂ ಪೃಥ್ವಿ ಭಟ್ (ಸರಿಗಮಪ ಖ್ಯಾತಿ) ಸಹ ಅನಿರದ್ಧ್ ಅವರೊಂದಿಗೆ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.

ಸದ್ಯದಲ್ಲೇ ಆಡಿಯೋ ರಿಲೀಸ್ ಆಗಲಿದೆ. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ನಾಲ್ಕು ಹಾಡು ಹಾಗೂ ಮೂರು ಸಾಹಸ ಸನ್ನಿವೇಶಗಳ ಚಿತ್ರೀಕರಣ ಬಾಕಿಯಿದೆ. ಕಲಾವಿದರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ತಿರುಮಲೇಶ್, ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ರಾಜ ರವಿಶಂಕರ್, ತಿರುಮಲೇಶ್, ಸಿದ್ದರಾಜು, ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ.


ವೇದಿಕ ಹಾಗೂ ದ್ವೇಪಾಯನ‌ ಸಿಂಗ ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕೆಂಪಗಿರಿ ಹಾಗೂ ವೇದಿಕ ಹಾಡುಗಳನ್ನು ರಚಿಸಿದ್ದಾರೆ. ಕಾರ್ತಿಕ್ ಪ್ರಸಾದ್ ಛಾಯಾಗ್ರಹಣವಿದೆ. ವಿಕ್ರಮ್ ಶ್ರೀಧರ್ ಸಂಕಲನವಿದೆ. ತರ್ಮಾಕೋಲ್ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಕ್ರಿಯೇಟಿವ್ ಹೆಡ್ ಸುರೇಶ್ ಜಯ ಹರಿಪ್ರಸಾದ್ (ಜೆರ್ರಿ ಮಾಸ್ಟರ್‌) ನೃತ್ಯ ನಿರ್ದೇಶನವಿದೆ. ವಿನೋದ್ ದೇವ್, ಸುಹಾಸ್ ಆತ್ರೇಯ (ಕಮಲಿ ಧಾರಾವಾಹಿ), ರುದ್ರೇಶ್ ಬುದನೂರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯರಾಗಿ ಸ್ನೇಹ ಭಟ್, ಇಂಚರ ಬಿ ಚನ್ನಪ್ಪ ಇದ್ದಾರೆ. ಶಿವಮಂಜು, ವೆಂಕಟಾಚಲ, ರಂಗನಾಥ ಬಿ, ಶ್ರೀಧರ್ ಟಿ ಎಸ್, ಸುರೇಶ್ ಬಿ, ಶಿವಾನಂದ, ಮಹೇಶ್ ಎಸ್ ಕಲಿ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Related Posts

error: Content is protected !!