Categories
ಸಿನಿ ಸುದ್ದಿ

ಡೆಡ್ಲಿ ಆದಿತ್ಯಗೆ ಪ್ರಕಾಶ್ ಹೆಬ್ಬಾಳ ಆ್ಯಕ್ಷನ್ ಕಟ್

ಮತ್ತೊಂದು‌ಆ್ಯಕ್ಷನ್, ಥ್ರಿಲ್ಲರ್ ಸಿನಿಮಾದಲ್ಲಿ  ಡೆಡ್ಲಿ

ಡೆಡ್ಲಿ ಆದಿತ್ಯ ಆಭಿನಯದಲ್ಲಿ ಹೊಸ ಸಿನಿಮಾ‌ ಶುರುವಾಗುತ್ತಿದೆ. ಪ್ರಕಾಶ್ ಹೆಬ್ಬಾಳ್ ನಿರ್ದೇಶನದ ಆ್ಯಕ್ಷನ್, ಥ್ರಿಲ್ಲರ್ ಕಥಾ ಹಂದರ ಸಿನಿಮಾಕ್ಕೆ‌ಆದಿತ್ಯ ನಾಯಕರಾಗಿದ್ದಾರೆ.  ಸದ್ಯಕ್ಕೆ ಚಿತ್ರಕ್ಕೆ ಕತೆ, ಚಿತ್ರಕತೆ ಹಾಗೂ‌ಸಂಭಾಷಣೆ ಕೆಲಸಗಳೆಲ್ಲ ಮುಗಿದಿದೆ. ಇಷ್ಟರಲ್ಲಿಯೇ ಸಿನಿಮಾ‌‌‌ಸೆಟ್ಟೇರುವುದು ಖಚಿತವಾಗಿ ದೆ. ಸಿಎಚ್ ಇ ಕಂಬೈನ್ಸ್ ಮೂಲಕ‌ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅನುಭವಿ ತಂತ್ರಜ್ಞರೆ ಕೆಲಸ ಮಾಡಲಿದ್ದಾರೆ.

 

 

Categories
ಸಿನಿ ಸುದ್ದಿ

ಅವಳಿ‌ ಸಹೋದರಿಯರ ನಡುವೆ ಅವನೊಬ್ಬ ಗಣಪ…!?

ಸ್ಯಾಂಡಲ್ವುಡ್ ನಲ್ಲಿ ಸದ್ಯಕ್ಕೆ‌ ಸೆನ್ಸೆಷೆನಲ್ ಸಿಸ್ಟರ್ ಅಂದ್ರೆ ಅದ್ವಿತಿ ಶೆಟ್ಟಿ ಹಾಗೂ ಅಶ್ವಿತ ಶೆಟ್ಟಿ. ಈಗಾಗಲೇ ಅದ್ವಿತಿ ಶೆಟ್ಟಿ‌ಚಿತ್ರರಂಗಕ್ಕೆ‌ ಬಂದು ಸಾಕಷ್ಟು ಹೆಸರು ಮಾಡಿರುವುದು ನಿಮಗೂ‌ಗೊತ್ತು. ಈಗ ಅಕ್ಕನ‌ ಹಾದಿಯಲ್ಲಿ ತಂಗಿಯೂ ಇದ್ದಾರೆ.‌ ಇಂತಿಪ್ಪಾ ಅವಳಿ ಸಹೋದರಿಯರ ನಡುವೆ ಅವನೊಬ್ಬ ಗಣಪ ಬಂದಿದ್ದಾನೆ.‌ಆತ ಇಬ್ಬರಿಗೂ ಇಷ್ಡ.

Categories
ಸಿನಿ ಸುದ್ದಿ

ಕರ್ವ ನವನೀತ್ ಜತೆ ಕಾಮಿಡಿ‌ ಕಿಂಗ್ಸ್

ಕಾಮಿಡಿ ಕಿಂಗ್ಸ್ ಜತೆಗೆ ನವನೀತ್

  ಕಾಮಿಡಿ‌ ಟಾನಿಕ್ ಗೆ ನವನೀತ್ ಫುಲ್ ಖುಷ್

‘ಕರ್ವ’ ಖ್ಯಾತಿಯ ನಿರ್ದೇಶಕ ಈಗ ಹೊಸದೊಂದು ಸಿನಿಮಾದ ಸಿದ್ದತೆಯಲ್ಲಿದ್ದಾರೆ. ಈಗಾಗಲೇ ಈ‌ಚಿತ್ರಕ್ಕೆ ಚಾಲನೆ‌ಯೂ‌ ಸಿಕ್ಕಿದೆ.  ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನವನೀತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತರುಣ್ ಶಿವಪ್ಪ ಅದರ ನಿರ್ಮಾಣದ ಹೊಣೆ ಹೊತ್ತಿದ್ದಾರೆ‌ .‌ಕೊರೊನಾ ಕಾರಣಕ್ಕೆ ಆ ಸಿನಿಮಾದ ಕೆಲಸ ಈಗ ತಟಸ್ಥಗೊಂಡಿದೆ.‌ ಅದಕ್ಕೀಗ ಮತ್ತೆ ಚಾಲನೆ ಸಿಕ್ಕಂತೆ ಕಾಣುತ್ತಿದೆ.‌‌ನಿರ್ದೇಶಕ ನವನೀತ್ ಮನೆಯಲ್ಲಿ ಕನ್ನಡದ ಕಾಮಿಡಿ‌ಕಿಲಾಡಿಗಳ ಬಳಗ ಒಂದಾಗಿದೆ.  ಅಂದ ಹಾಗೆ, ಕಾಮಿಡಿ‌ಕಿಲಾಡಿಗಳು ಅಂದಾಕ್ಣಣ ಜೀ ಕನ್ನಡದ ಕಾಮಿಡಿ ಕಿಲಾಡಿಗಳ ಪ್ರತಿಭೆಗಳಲ್ಲ, ಇವರು ರಿಯಲ್ ಲೈಫ್ ನಲ್ಲಿನ‌ಕಾಮಿಡಿ ಕಿಂಗ್ ಗಳು.‌ಹಾಸ್ಯ ಕಾರ್ಯಕ್ರಮಗಳ ಮೂಲಕ‌ಮನೆ ಮಾತಾದ ಗಂಗಾವತಿ ಪ್ರಾಣೇಶ್,  ಜೋಷಿ, ಮಹಾಮನೆ ಜತೆಗೆ ಅವರದೇ ಮನೆಯಲ್ಲಿ ತಿಂಡಿ ಸವಿದಿದ್ದಾರೆ.‌ ಅವರೆಲ್ಲ ಜತೆಗಿರುವ ಫೋಟೋವೊಂದನ್ನು‌ಸೋಷಲ್ ಮೀಡಿಯಾದಲ್ಲಿ ಹಂಚಿಕೊ‌ಂಡಿದ್ದು‌ಕುತೂಹಲ‌ಕೆರಳಿಸಿದೆ.ಕೊರೋನಾ‌ನಡುವೆಯೂ ಇವರೆಲ್ಲ ಒಟ್ಟಾಗಿರುವುದನ್ನು‌ನೋಡಿದರೆ,ನವನೀತ್  ಮುಂದಿನ‌ಸಿನಿಮಾದಲ್ಲಿ ಇವರೆಲ್ಲ ಇರುತ್ತಾರಾ ಎನ್ನುವ ಆಸಕ್ತಿಗೂ ಹುಟ್ಟಿದೆ.

 

Categories
ಸಿನಿ ಸುದ್ದಿ

‘ಆಡಿಸಿದಾತ’ನ ಟೀಸರ್ ಲಾಂಚ್

ರಾಘವೇಂದ್ರ ರಾಜಕುಮಾರ್ ಅಭಿನಯದ 25 ನೇ ಚಿತ್ರ ‘ಆಡಿಸಿದಾತ’ ಟೀಸರ್ ಹೊರಬಂದಿದೆ. ಡಿ.ಬಿಟ್ಸ್ ಮ್ಯೂಜಿಕ್ ಸಂಸ್ಥೆಯ ಮೂಲಕ ಟೀಸರ್ ಲಾಂಚ್ ಆಗಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಟೀಸರ್ ಲಾಂಚ್ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದರು. ‘ ಟೀಸರ್ ತುಂಬಾ ಚೆನ್ನಾಗಿದೆ’. ಅಣ್ಣ ರಾಘವೇಂದ್ರ ರಾಜ್ ಕುಮಾರ್ ಲುಕ್ ಅದ್ಬುತವಾಗಿದೆ. ಚಿತ್ರ ಪ್ರೇಕ್ಷಕರಿಗೆ ಖುಷಿ ಕೊಡಲಿದೆ‌ ಅಂತ ‘ಆಡಿಸಿದಾತ’ ಚಿತ್ರತಂಡಕ್ಕೆ ಶುಭ ಕೋರಿದರು.ಈ ಸಂದರ್ಭದಲ್ಲಿ ಎಸ್.ಎ.ಗೋವಿಂದ ರಾಜು, ನಿರ್ಮಾಪಕ ಹೆಚ್‌. ಹಾಲೇಶ್, ನಾಗರಾಜ್ ವಿ ಹಾಗೂ ನಿರ್ದೇಶಕ ಫಣೀಶ್ ಭಾರದ್ವಾಜ್ ಉಪಸ್ಥಿತಿತರಿದ್ದರು.

Categories
ಸಿನಿ ಸುದ್ದಿ

ಡಿಎನ್ಎ ಟೆಸ್ಟ್ ಗೆ ರೆಡಿ

ಸಿನಿಮಾ ಪ್ರೇಕ್ಷಕ ಡಿ ಎನ್ ಎ ಟೆಸ್ಟ್ ಗೆ ರೆಡಿ ಆಗಬೇಕಿದೆ. ಯಾಕಂದ್ರೆ ನಿರ್ದೇಶಕ ಪ್ರಕಾಶ್ ಮೇಹು ಡಿಎನ್ ಎ ಟೆಸ್ಟ್ ಮಾಡಿಸಲು ಬರುತ್ತಿದ್ದಾರೆ. ಅಂದ ಹಾಗೆ ಅವರೇನು ವೈದ್ಯರೇ ಅಂತ ಯೋಚಿಸಬೇಡಿ. ಅವರು ನಿರ್ದೇಶಿಸಿ, ತೆರೆಗೆ ತರಲು ಹೊರಟಿರುವ ‘ಡಿಎನ್ ಎ’ ಹೆಸರಿನ ಚಿತ್ರ ರಿಲೀಸ್ ಗೆ ರೆಡಿ ಆಗಿದೆ. ಸದ್ಯಕ್ಕೆ ಚಿತ್ರದ ಸೆನ್ಸಾರ್ ಕೂಡ ಮುಗಿದಿದೆ. ಮೇಹು ಪ್ರಕಾರ ಅದಕ್ಲೆ ಸೆನ್ಸಾರ್ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆಯಂತೆ.

ಚಿ ತ್ರ ನೋಡಿದ ತಂತ್ರಜ್ಞರು ಅನೇಕರು ಬಹಳ ಮೆಚ್ಚುಗೆಯ ಮಾತನ್ನಾಡಿದ್ದಾರೆ, ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೆ ಒಟ್ಟಿಗೆ ಕುಳಿತು ಕುತೂಹಲದಿಂದ ನೋಡಿಸಿಕೊಳ್ಳುವ ಭಾವನಾತ್ಮಕ ಚಿತ್ರ ಇದಾಗಿದೆ, ರಾಜಕುಮಾರ್,ಪುಟ್ಟಣ್ಣನವರ ಕಾಲದ ಕಥಾಪ್ರಧಾನ ಚಿತ್ರಗಳನ್ನು ನೆನಪಿಸಿಕೊಳ್ಳುವವರಿಗೆ ಈ ಚಿತ್ರ ರಸದೌತಣ ನೀಡಲಿದೆ ಅನ್ನುವುದು ನೋಡಿದವರ ಒಟ್ಟಾರೆ ಅಭಿಪ್ರಾಯ, ಪುನೀತ್ ರಾಜಕುಮಾರ್ ಅವರ “ರಾಜಕುಮಾರ” ನಂತರ ಆ ಜಾನರ್ನಲ್ಲಿ ಬರುತ್ತಿರುವ ಉತ್ತಮ ಚಿತ್ರ ಅನ್ನುವುದು ಸೆನ್ಸಾರ್ ಮಾಡಿದವರು ವ್ಯಕ್ತಪಡಿಸಿದ ಅಭಿಪ್ರಾಯ’ ಎನುತ್ತಾರೆ ನಿರ್ದೇಶಕ ಪ್ರಕಾಶ್ ಮೇಹು.

Categories
ಸಿನಿ ಸುದ್ದಿ

ಮಳೆಯ ಹಾಡಲ್ಲಿ ಮಿಂದೆದ್ದ ಸಲಗ

ದುನಿಯಾ ವಿಜಯ್ ಇದೇ ಮೊದಲ ಸಲ ನಿರ್ದೇಶನ ಮಾಡಿರುವ ಸಲಗ ಚಿತ್ರ ಇನ್ನೇನು ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ನಾಲ್ಕು ಕ್ವಾರ್ಟರ್ ಕುಡಿದ್ರು ಸ್ಟಡಿಯಾಗಿ ನಿಲ್ತಿದ್ದೆ ಸೂರಿಯಣ್ಣ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗ ಮತ್ತೊದು ಮಳೆಯ ಹಾಡು ಹೊರ ಬಂದಿದೆ. ಮಳೆಯೇ ಮಳೆಯೇ ಲೊರಿಕಲ್ ಸಾಂಗ್ ರಿಲೀಸ್ ಆಗಿದ್ದು, ಒಳ್ಳೆಯ ಮೆಚ್ಚುಗೆ ಪಡೆಯುತ್ತಿದೆ.

Categories
ಸಿನಿ ಸುದ್ದಿ

ಕ್ರೇಜಿ ಪುತ್ರನ ಕಲರ್ ಫುಲ್ ಪೋಸ್ಟರ್ ರಿಲೀಸ್- ಮುಗಿಲ್ ಪೇಟೆಯಲ್ಲೊಂದು ಸುತ್ತು

#mugilpete

ಕ್ರೇಜಿ ಪುತ್ರನ ಚಿತ್ರದ ಕಲರ್ ಫುಲ್ ಪೋಸ್ಟರ್ ರಿಲೀಸ್

ಮನುರಂಜನ್ ಅಭಿನಯದ ಮುಗಿಲ್ ಪೇಟೆ ಚಿತ್ರತಂಡ
“ಗೌರಿ -ಗಣೇಶ” ಹಬ್ಬದಲ್ಲಿನಮ್ಮ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.
ಭರತ್ ನಾವುಂದ ನಿರ್ದೇಶನದ ಈ ಚಿತ್ರ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ.
ರಕ್ಷಾ ವಿಜಯಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ರಂಗಾಯಣ ರಘು, ತಾರಾ, ಸಾಧುಕೋಕಿಲ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಮಳೆ‌ ಮಳೆ ಹಾಡಿಗೆ ಮೈ ಮನವೆಲ್ಲಾ ತಂಪು

ಯುವ ನಟ ಸೂರಜ್ ಗೌಡ ಅಭಿನಯದ ನಿನ್ನ ಸನಿಹಕೆ ಸಿನಿಮಾ ಈಗ ಮತ್ತೆ ಜೋರಾಗಿ ಸದ್ದು ಮಾಡುತ್ತಿದೆ. ಇದೇ ಮೊದಲ‌ ಸಲ ನಿರ್ದೇಶನ ಮಾಡಿರುವ ಸೂರಜ್ ಅವರ ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಿದೆ. ಮಳೆ ಮಳೆ ಎಂಬ ಬ್ಯೂಟಿಫುಲ್ ಹಾಡಿಗೆ ರಘುದೀಕ್ಷಿತ್ ಸಂಗೀತವಿದೆ. ಜೊತೆಗೆ ಆ ಹಾಡಿಗೆ ಧ್ವನಿಯನ್ನೂ ನೀಡಿದ್ದಾರೆ. ಇನ್ನು ವಾಸುಕಿ ವೈಭವ್ ಅವರ ಸಾಹಿತ್ಯವಿದೆ.
ಈ ಚಿತ್ರದಲ್ಲಿ ಡಾ.ರಾಜ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಾಯಕಿ.

Categories
ಸಿನಿ ಸುದ್ದಿ

ನಟ ರವಿಶಂಕರ್ ಗೌಡ ಪುತ್ರ ಈಗ ನಿರ್ದೇಶಕ

ನಟ ರವಿಶಂಕರ್ ಗೌಡ ಪುತ್ರ ಸೂರ್ಯ ತೇಜಸ್ವಿ ಈಗ ಸಿನಿಮಾರಂಗಕ್ಕೆ ಎಂಟ್ರಿಯಾಗಿದ್ದಾನೆ. ಹೌದು ಇದೇ ಮೊದಲ‌ಸಲ ಸೂರ್ಯ ತೇಜಸ್ವಿ ವೈ… ಫೈ? ಎಂಬ ಪುಟಾಣಿ ಹಾಸ್ಯ ಕಿರುಚಿತ್ರ ನಿರ್ದೇಶನ ಮಾಡುವುದರ ಜೊತೆಗೆ ನಟನೆಯನ್ನೂ ಮಾಡಿದ್ದಾನೆ. ಸದ್ಯಕ್ಕೆ ಯೂಟ್ಯೂಬ್ ಚಾನೆಲ್ ನಲ್ಲಿ  ಕಿರುಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.ಈ ಕಿರುಚಿತ್ರದಲ್ಲಿ ಸೂರ್ಯ ಜೊತೆ ನಿಖಿಲ್ ನರೇಶ್ ನಟಿಸಿದ್ದಾರೆ. ಅಜಯ್ ಜಮದಗ್ನಿ ಸಂಕಲನವಿದೆ.

Categories
ಸಿನಿ ಸುದ್ದಿ

ವಾಸಂತಿ ನಲಿದಾಗ ಚಿತ್ರಕ್ಕೆ ಚಾಲನೆ

#ವಾಸಂತಿ_ನಲಿದಾಗ ಇದು ಹೊಸಬರ ಚಿತ್ರ. ಸೋಮವಾರ ಅದ್ದೂರಿಯಾಗಿ ಮುಹೂರ್ತ ನೆರವೇರಿದೆ.
ರವೀಂದ್ರ ವಂಶಿ ನಿರ್ದೇಶಕರು. ಜೇನುಗೂಡು ಕೆ.ಎನ್ ಶ್ರೀಧರ್ ಚಿತ್ರದ ನಿರ್ಮಾಪಕರು. ಶ್ರೀದೇವಿ ಮಂಜುನಾಥ ಸಂಭಾಷಣೆ ಇದೆ. ಶ್ರೀ ಗುರು ಸಂಗೀತವಿದೆ. ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಸಾಹಿತ್ಯವಿದೆ.

error: Content is protected !!