ರೈತರು ಹೇಡಿಗಳು ಅಂತ ಹೇಳ್ಬೇಡಿ, ಹಾಗೆ ಹೇಳಿದ್ರೆ ಚೆನ್ನಾಗಿರಲ್ಲ- ಸಚಿವ ಬಿ.ಸಿ. ಪಾಟೀಲ್‌ ಗೆ ನಟ ಹುಚ್ಚ ವೆಂಕಟ್‌ ಎಚ್ಚರಿಕೆ

ನಟ ಹುಚ್ಚ ವೆಂಕಟ್‌ ಅವರಿಗಿರುವ ರೈತ ಪರ ಕಾಳಜಿ ಕನ್ನಡದ ಇತರೆ ಸ್ಟಾರ್‌ಗಳಿಗೆ ಯಾಕಿಲ್ಲ ?

ರೈತರ ಬಗ್ಗೆ ನೀವ್ಯಾಕೆ ಹೀಗೆ ಮಾತಾನಾಡ್ತೀರಿ- ಕೃಷಿ ಸಚಿವ ಬಿ.ಸಿ. ಪಾಟೀಲ್‌ ವಿರುದ್ಧ  ಫೈರಿಂಗ್‌ ಸ್ಟಾರ್‌ ಕೆಂಡಾಮಂಡಲ

ಕೃಷಿ ಸಚಿವರೂ ಆದ ನಟ ಬಿ.ಸಿ. ಪಾಟೀಲ್‌ ಅವರಿಗೆ ನಟ ಹುಚ್ಚ ವೆಂಕಟ್‌ ಕೊಟ್ಟ ಫೈರಿಂಗ್‌ ಎಚ್ಚರಿಕೆ ಇದು. ಇದಕ್ಕೆ ಕಾರಣ ರೈತರ ಬಗ್ಗೆ ಬಿ.ಸಿ. ಪಾಟೀಲ್‌ ನೀಡಿದ ಹೇಳಿಕೆ. ಅದೇನು, ಯಾಕೆ ಎನ್ನುವುದಕ್ಕಿಂತ ಮುಂಚೆ ಇವತ್ತಿನ ರೈತಾಪಿ ಬದುಕಿನ ಕತೆ ಕೇಳಿ.

ದೇಶದಲ್ಲಿ ರೈತರು ದಂಗೆ ಎದ್ದಿದ್ದಾರೆ. ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಅಂತಲೋ, ಸರ್ಕಾರ ಜಾರಿಗೆ ತಂದ ಕೃಷಿ ಮಸೂದೆ ರೈತ ವಿರೋಧಿ ಆಗಿದೆ ಅಂತಲೋ ರೈತರು ಬೀದಿಗಿಳಿದ್ದಾರೆ. ಈ ಹೋರಾಟ ರಾಜ್ಯದಲ್ಲೂ ನಡೆದಿದೆ ಎನ್ನುವುದು ನಿಮಗೂ ಗೊತ್ತಿರುವ ವಿಚಾರ. ಈ ಸಂಕಷ್ಟದ ಪರಿಸ್ಥಿತಿಯ ನಡುವೆಯೇ ರಾಜ್ಯದಲ್ಲಿ ರೈತರು ಬೆಳೆ ಸಾಲದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿ ಅಗಿದೆ. ಇದು ರಾಜ್ಯದ ರೈತರ ಪಾಲಿಗೆ ಅತ್ಯಂತ ಅಘಾತಕಾರಿ ಬೆಳವಣಿಗೆ.  ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್‌, ಆತ್ಮಹತ್ಯೆಗೆ ಯತ್ನಿಸುವ ರೈತರು ಹೇಡಿಗಳು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಾಗಲಿ, ಹೋರಾಟ ಮಾಡುತ್ತಿರುವವರಾಗಲಿ ರೈತರಲ್ಲ ಎಂಬುದಾಗಿ ಹೇಳಿದ್ದಾರೆ.

ರೈತರ ಬಗ್ಗೆ ನೀವ್ಯಾಕೆ ಹೀಗೆ ಮಾತಾನಾಡ್ತಿರಿ- ಕೃಷಿ ಸಚಿವ ಬಿ.ಸಿ. ಪಾಟೀಲ್‌ ವಿರುದ್ಧ  ಫೈರಿಂಗ್‌ ಸ್ಟಾರ್‌ ಕೆಂಡಾಮಂಡಲ

ಇದು ಸಾಕಷ್ಟು ವಿವಾರ ಎಬ್ಬಿಸಿದೆ. ರಾಜ್ಯದ ರೈತ ಸಂಘಟನೆಗಳು ಬಿ.ಸಿ. ಪಾಟೀಲ್‌ ಹೇಳಿಕೆಯನ್ನು ಖಂಡಿಸಿವೆ. ಇಷ್ಟಾಗಿಯೂ ಕನ್ನಡದ ಯಾವುದೇ ನಟ-ನಟಿಯರು ರಾಜ್ಯದ ರೈತರ ಪರವಾಗಿ ಮಾತನಾಡಿಲ್ಲ. ತಾವಾಯಿತು, ತಮ್ಮ ಪಾಡಾಯಿತು ಎನ್ನುವ ಹಾಗೆಯೇ ಇದ್ದಾರೆ. ಈ ನಡುವೆ ಫೈರಿಂಗ್‌ ಸ್ಟಾರ್‌ ಹುಚ್ಚ ವೆಂಕಟ್‌, ಮೊದಲು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದ ರೈತರ ಬಗ್ಗೆ ಕೃಷಿ ಸಚಿವರು ಇಷ್ಟು ಹಗುರವಾಗಿ ಮಾತನಾಡಬಾರದು, ಮಾತನಾಡಿದರೆ ಚೆನ್ನಾಗಿರಲ್ಲ ಎಂಬುದಾಗಿ ಎಚ್ಚರಿಸಿದ್ದಾರೆ. ತಮ್ಮ ಫೇಸ್‌ ಬುಕ್‌ ಅಕೌಂಟ್‌ ನಲ್ಲಿ ಹಾಕಿರುವ ವಿಡಿಯೋದಲ್ಲಿ ಹುಚ್ಚ ವೆಂಕಟ್‌ ಹೇಳಿದಿಷ್ಟು..

https://m.facebook.com/story.php?story_fbid=476912306638092&id=100029579808767

” ಇದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರಿಗೆ. ಯಾಕೆ ಅವರು ರೈತರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುತ್ತಾರೋ ನಂಗೆ ಅರ್ಥವಾಗುತ್ತಿಲ್ಲ. ರೈತರು ಹೇಡಿಗಳು ಅಂತ ಹೇಳಿದ್ದಾರೆ. ಅವರಿಗೆ ರಾಜ್ಯದ ಕಷ್ಟ ಗೊತ್ತಿಲ್ಲ. ಮಳೆ ಜಾಸ್ತಿ ಬಂದ್ರೂ ಬೆಳೆ ನಷ್ಟ, ಮಳೆ ಕಮ್ಮಿಯಾದ್ರೂ ಬೆಳೆ ನಷ್ಟ. ಇಂತಹ ಪರಿಸ್ಥಿತಿಯಲ್ಲಿ ಬೆಳೆ ಬೆಳೆಯುವ ರೈತರಿಗೆ ನಾವು ಸದಾ ಬೆಂಬಲವಾಗಿರಬೇಕು. ಲಾಕ್‌ ಡೌನ್‌ ಕಾಲದಲ್ಲಿ ಅವರು ತುಂಬಾ ಸಂಕಷ್ಟ ಅನುಭವಿಸಿದ್ದಾರೆ. ಅವರು ನಮಗಾಗಿ ಕಷ್ಟ ಪಟ್ಟು ಬೆಳೆ ಯುತ್ತಾರೆ. ಅಂತಹ ಜನರಿಗೆ ನೆರವು ನೀಡಬೇಕಾದ ಸರ್ಕಾರದ ಪ್ರತಿನಿಧಿಯಾಗಿ ತಾವು, ರೈತರ ಬಗ್ಗೆ ಸರಿಯಾಗಿ ಮಾತನಾಡಬೇಕು, ಹಾಗೆ ಮಾತನಾಡದಿದ್ದರೆ ಚೆನ್ನಾಗಿರಲ್ಲ ʼ ಎಂದಿದ್ದಾರೆ ಹುಚ್ಚ ವೆಂಕಟ್.

Related Posts

error: Content is protected !!