ತರುಣನ ತಳಮಳ, ತರುಣಿಯ ಕಳವಳ -ಇದು , ವಿಜಯ್ -ರಂಜನಿಯ ಅವಸ್ಥಾಂತರ !

ಪ್ಲೀಸ್‌, ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ…

ನಟ ಸಂಚಾರಿ ವಿಜಯ್‌ ಈಗ ಅವಸ್ಥೆಗೆ ಸಿಲುಕಿದ್ದಾರೆ. ಅವರ ಜತೆಗೆ ಅಲ್ಲಿ ಪುಟ್ಟ ಗೌರಿ ಖ್ಯಾತಿಯ ರಂಜನಿ ರಾಘವನ್‌ ಕೂಡ ಇದ್ದಾರೆ. ಅಂದ ಹಾಗೆ, ಅವರಿಬ್ಬರದು ಈಗ “ಅವಸ್ಥಾಂತರʼ ದ ಅವಸ್ಥೆ. ಅರೆ, ಇದೇನೂ ಸಮಾಚಾರ ಅಂತ ಕಣ್ಣರಳಿಸಿ ಕೂರಬೇಡಿ, ಅಂತಹದೇನು ಗಾಸಿಪ್‌ ಕೂಡ ಇಲಿಲ್ಲ. ಬದಲಿಗೆ ಇದು ಈ ಜೋಡಿಯ ಹೊಸ ಸಿನಿಮಾದ ವಿಚಾರ. ಆ ಚಿತ್ರದ ಹೆಸರು “ಅವಸ್ಥಾಂತರʼ. ಈ ಶೀರ್ಷಿಕೆಯೇ ಇಲ್ಲಿ ವಿಶೇಷ.

ʼಅವಸ್ಥಾಂತರʼ ಅಂದಾಗ ಒಂದು ಕ್ಷಣ ಅವಸ್ಥೆಗೆ ಸಿಲುಕುವುದು ಸಹಜ. ಟೈಟಲ್ ಕ್ಯಾಚಿ ಆರ್ಗಿಬೇಕು, ಸಿಂಪಲ್ ಆರ್ಗಿರಬೇಕು, ಜನರಿಗೆ ಅರ್ಥವಾಗುವಂತಿರಬೇಕು ಅಂತ ಸಿನಿಮಾ ಮಂದಿ ಲೆಕ್ಕಚಾರ ಹಾಕುವಾಗ ಇದೇನು ಇವರದು ಅವಸ್ಥಾಂತರ ಅಂತ ನಿಮಗೂ ಅನ್ನಿಸಿದ್ದರಲ್ಲಿ ಅಚ್ಚರಿ ಏನಿಲ್ಲ. ಆದ್ರೆ ಸಿನಿಮಾ ಜಗತ್ತಿಗೆ ಎಂಟ್ರಿಯಾದ ಹೊಸಬರಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುವುದಕ್ಕೆ ಸವಾಲು ಇರುತ್ತದೆ. ಅದನ್ನು ಎದುರಿಸಲು ಅವರಿಗೆ ಹೊಳೆಯುವುದು ಡಿಫೆರೆಂಟ್ ಕಾನ್ಸೆಫ್ಟ್. ಅದರ ಮೊದಲ ಸ್ಯಾಂಪಲ್ ಚಿತ್ರದ ಟೈಟಲ್.ಅದಕ್ಕೊಂದು ಅಷ್ಟೇ ಡಿಫೆರೆಂಟ್ ಆದ ಟ್ಯಾಗ್ ಲೈನ್ ಕೂಡ ಇದೆ. ” ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ’ ಅಂತ. ಇಲ್ಲಿ ಯಾರು ಹಾಯ್ತಾರೆ, ಯಾರು ಒದೆತಾರೋ ಸಿನಿಮಾ ನೋಡಿದಾಗ ಗೊತ್ತಾಗುವ ವಿಚಾರ. ಉಳಿದಂತೆ ಈ ಚಿತ್ರಕ್ಕೆ ಮೊನ್ನೆಯಷ್ಟೇ ಮುಹೂರ್ತ ಮುಗಿಯಿತು. ಬೆಂಗಳೂರಿನ ಎನ್. ಆರ್. ಕಾಲೋನಿಯ ರಾಯರ ಮಠದಲ್ಲಿ ಚಿತ್ರ ತಂಡ ಸಿಂಪಲ್ ಆಗಿಯೇಮುಹೂರ್ತ ನೆರವೇರಿಸಿತು.

ತುಮಕೂರು ಹುಡುಗನ ಸಿನಿಮಾ…

ಅದಕ್ಕೊಂದು ಅಷ್ಟೇ ಡಿಫೆರೆಂಟ್ ಆದ ಟ್ಯಾಗ್ ಲೈನ್ ಕೂಡ ಇದೆ. ” ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ’ ಅಂತ. ಇಲ್ಲಿ ಯಾರು ಹಾಯ್ತಾರೆ, ಯಾರು ಒದೆತಾರೋ ಸಿನಿಮಾ ನೋಡಿದಾಗ ಗೊತ್ತಾಗುವ ವಿಚಾರ. ಉಳಿದಂತೆ ಈ ಚಿತ್ರಕ್ಕೆ ಮೊನ್ನೆಯಷ್ಟೇ ಮುಹೂರ್ತ ಮುಗಿಯಿತು. ಬೆಂಗಳೂರಿನ ಎನ್. ಆರ್. ಕಾಲೋನಿಯ ರಾಯರ ಮಠದಲ್ಲಿ ಚಿತ್ರ ತಂಡ ಸಿಂಪಲ್ ಆಗಿಯೇಮುಹೂರ್ತ ನೆರವೇರಿಸಿತು. ಈ ಚಿತ್ರಕ್ಕೆ ಆಕ್ಷನ್ ಹೇಳುತ್ತಿರುವವರು ಜಿ. ದೀಪಕ್ ಕುಮಾರ್. ಇವರದು ಮೂಲತಃ ತುಮಕೂರು. ಅಲ್ಲಿನ ಪ್ರತಿಷ್ಠಿತ ಹಣಕಾಸು ಸಂಸ್ಥೆಯೊಂದರಲ್ಲಿ ರಿಲೇಶನ್ ಶಿಪ್ ಮ್ಯಾನೇಜರ್ ಆಗಿದ್ದರಂತೆ. ಜತೆಗೆ ಕೆಲವು ಸಾಕ್ಷ್ಯ ಚಿತ್ರ ಜಾಹೀರಾತು ಆಕ್ಷನ್ ಕಟ್ ಹಾಗೂ ಕಾರ್ಪೊರೇಟ್ ಕಂಪನಿಗೆ ಆಡ್ ಮೇಕರ್ ಆಗಿದ್ದರಂತೆ. ಅದೇ ಅನುಭವದಲ್ಲಿ ನಿರ್ದೇಶಕ ಮಠ ಗುರುಪ್ರಸಾದ್ ಅವರ ಬಳಿ ಒಂದಷ್ಟು ಕಾಲ ಸಹಾಯಕ ನಿರ್ದೇಶಕರಾಗಿದ್ದರು. ಅಲ್ಲಿಂದೀಗ “ಅವಸ್ಥಾಂತರ’ ದೊಂದಿಗೆ ಪೂರ್ಣ ಪ್ರಮಾಣದ ನಿರ್ದೇಶಕ.

ತರುಣನೊಬ್ಬನ ತಳಮಳದ ಕತೆ…

ಮೂವೀ ವಾಕ್ಸ್ ಎನ್ನುವ ಸಂಸ್ಥೆ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ. ಉಳಿದಂತೆ ಸಿನಿಮಾದ ಶೀರ್ಷಿಕೆ ಹಾಗೂ ಕತೆಯ ವಿಶೇಷತೆ ಕುರಿತು ಮಾತನಾಡಿದ ನಿರ್ದೇಶದ ದೀಪಕ್ ಕುಮಾರ್, ಇದು ಹದಿಹರೆಯದ ಯುವಕನೊಬ್ಬನ ಸುತ್ತಣ ಕತೆ. ಆತನಲ್ಲಿ ಬಯಕೆ ಹಾಗೂ ಕಾಮನೆಗಳು ಅರಿವಿಲ್ಲದೆ ಹುಟ್ಟಿಕೊಂಡು, ಹೇಗೆ ಆತನನ್ನು ಅತಂತ್ರ ಸ್ಥಿತಿಗೆ ತಂದು ನಿಲ್ಲಿಸುತ್ತವೆ, ಅದರಿಂದ ಆತ ಏನೆಲ್ಲಾ ಕಷ್ಟ ಮತ್ತು ಅವಸ್ಥೆ ಸಿಲುಕಿಕೊಂಡು ಎಷ್ಟೇಲ್ಲ ತೊಂದರೆ ಅನುಭವಿಸುತ್ತಾನೆನ್ನುವುದನ್ನೇ ಚಿತ್ರದಲ್ಲಿ ತಿಳಿ ಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಅದಕ್ಕಾಗಿಯೇ ಚಿತ್ರಕ್ಕೆ ಅವಸ್ಥಾಂತರ ಅಂತ ಟೈಟಲ್ ಇಟ್ಟಿದ್ದೇವೆ. ಅವಸ್ಥಾಂತರ ಅಂದ್ರೆ ಅವಸ್ಥೆಯ ನಂತರದ ಪರಿಸ್ಥಿತಿ’ ಎಂಬುದಾಗಿ ದೀಪಕ್ ವಿವರಣೆ ನೀಡುತ್ತಾರೆ.


ಸಂಪ್ರದಾಯಸ್ಥ ಕುಟುಂಬದ ಪುಟ್ಟಗೌರಿ..

ಕತೆಯಲ್ಲಿ ಈ ಅವಸ್ಥಾಂತರ ಯಾರದು ಅಂತ ಬಿಡಿಸಿ ಹೇಳಬೇಕಿಲ್ಲ, ಅದು ಕಥಾ ನಾಯಕನ ಪರಿಸ್ಥಿತಿ. ಆ ಪಾತ್ರದಲ್ಲಿ ನಟ ಸಂಚಾರಿ ವಿಜಯ್ ಇದ್ದಾರೆ. ಅವರ ಪ್ರಕಾರ ಇದೊಂದು ಒಳ್ಳೆಯ ಸಂದೇಶ ನೀಡುವಂತಹ ಪಾತ್ರ ಮತ್ತು ಚಿತ್ರ. ಇನ್ನು ರಂಜನಿ ರಾಘವನ್ ಅವರಿಗೆ ಜೋಡಿ, ಅಂದ್ರೆ ಕಥಾ ನಾಯಕಿ. ಅವರಿಗೆ ಇಲ್ಲಿ ಒಬ್ಬ ಸಂಪ್ರದಾಯಸ್ಥ ಕುಟುಂಬದಲ್ಲಿ ಮುಗ್ದ ಹುಡುಗಿಯ ಪಾತ್ರ ಸಿಕ್ಕಿದೆ. ಅಂತಹ ಹುಡುಗಿ ಆಕಸ್ಮಾತ್ ಪ್ರೀತಿಗೆ ಸಿಲುಕಿದಾಗ ಆಗುವ ಅವಸ್ಥೆಗಳು, ಅದನ್ನವಳು ನಿಭಾಯಿಸುವ ಬಗೆ ತುಂಬಾ ಚೆನ್ನಾಗಿದೆಯಂತೆ. ಅವರೊಂದಿಗೆ ಚಿತ್ರದಲ್ಲಿ ದಿಶಾ ಕೃಷ್ಣಯ್ಯ, ಪ್ರದೀಪ್, ರೋಹಿಣಿ , ಲಕ್ಷ್ಮಿ ಭಾಗವತರ್ ಮುಂತಾದವರಿದ್ದಾರೆ. ಚಿತ್ರೀಕರಣ ಶುರುವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ. ಬಿ.ಜೆ.ಭರತ್ ಸಂಗೀತ ನೀಡುತ್ತಿದ್ದಾರೆ. ಛಾಯಾಗ್ರಹಣ ನಂದಕಿಶೋರ್, ಸಂಕಲನ ಶೇಷು ಅವರದ್ದು.

 

Related Posts

error: Content is protected !!