ಎನ್.‌ ಕುಮಾರ್‌, ಇಂದ್ರಜಿತ್‌ ಲಂಕೇಶ್‌ ಸೇರಿ  ನಾಲ್ವರು ಗಣ್ಯರಿಗೆ ಈ ಬಾರಿಯ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

ಜನವರಿ 25ಕ್ಕೆ ಫಿಕ್ಸ್‌ ಆಗಿದೆ ಸಿಂಪಲ್‌ ಪ್ರಶಸ್ತಿ ಪ್ರಧಾನ ಸಮಾರಂಭ

ಪ್ರತಿ ವರ್ಷದಂತೆ ಈ ವರ್ಷ ಕೂಡ ” ಶ್ರೀ ರಾಘವೇಂದ್ರ ಚಿತ್ರವಾಣಿʼ ಸಂಸ್ಥೆ ತನ್ನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ. ಆದರೆ ಕೊರೋನಾ ಕಾರಣ ಈ ಬಾರಿ ನಾಲ್ಕು ಪ್ರಶಸ್ತಿಗಳನ್ನು ಮಾತ್ರ ಅರ್ಹ ಗಣ್ಯರಿಗೆ ನೀಡಿ ಸನ್ಮಾನಿಸಲು  ನಿರ್ಧರಿಸಿದೆ. ಅಂತೆಯೇ ಆ ನಾಲ್ಕು ಪ್ರಶಸ್ತಿಗಳ ಪೈಕಿ ಪ್ರತಿಷ್ಠಿತ “ಶ್ರೀ ರಾಘವೇಂದ್ರ ಚಿತ್ರವಾಣಿ ʼ ಪ್ರಶಸ್ತಿಗೆ ನಿರ್ಮಾಪಕ ಎನ್‌. ಕುಮಾರ್‌ ಹಾಗೂ ಹಿರಿಯ ಪತ್ರಕರ್ತರಾದ ಬಾಬು ಕೃಷ್ಣಮೂರ್ತಿ ಅವರನ್ನು ಸಂಸ್ಥೆ ಆಯ್ಕೆ ಮಾಡಿದೆ.

ಕನ್ನಡ ಚಿತ್ರರಂಗದಲ್ಲಿ ಎನ್.‌ ಕುಮಾರ್‌ ನಿರ್ಮಾಪಕರಾಗಿ, ವಿತರಕರಾಗಿ ಹೆಸರು ಮಾಡಿದವರು. ಹಾಗೆಯೇ ಹಿರಿಯ ಪತ್ರಕರ್ತರಾದ ಬಾಬು ಕೃಷ್ಣಮೂರ್ತಿ ಅವರು ಹಲವು ವರ್ಷ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಬ್ಬರ ಸೇವೆ ಮತ್ತು ಪರಿಶ್ರಮ ಪರಿಗಣಿಸಿ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆ ತನ್ನ2021  ಸಾಲಿನ ವಾರ್ಷಿಕ ಪ್ರಶಸ್ತಿ ನೀಡುತ್ತಿದೆ.ಹಾಗೆಯೇ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಕೊಡಮಾಡುವ ʼಡಾ. ರಾಜ್‌ ಕುಮಾರ್‌ ಪ್ರಶಸ್ತಿʼಗೆ ಹೆಸರಾಂತ ಗಾಯಕಿ ಶ್ರೀಮತಿ ಇಂದು ವಿಶ್ವನಾಥ್‌ ಪಾತ್ರರಾಗಿದ್ದಾರೆ. ಹಿರಿಯ ನಟಿ ಶ್ರೀಮತಿ ಡಾ. ಭಾರತಿ ವಿಷ್ಣುವರ್ದನ್‌ ಅವರು ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಮೂಲಕ ನೀಡುವ ನಿರ್ದೇಶಕ ʼದಿ. ಆರ್‌. ಶೇಷಾದ್ರಿ ಪ್ರಶಸ್ತಿʼಗೆ ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಜನವರಿ 25 ಕ್ಕೆ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 44 ನೇ ವಾರ್ಷಿಕೋತ್ಸವ ಹಾಗೆಯೇ ಚಿತ್ರವಾಣಿ ಸಂಸ್ಥೆಯ ಸ್ಥಾಪಕ ದಿ.ಡಿ.ವಿ. ಸುಧೀಂದ್ರ ಅವರ ಹುಟ್ಟು ಹಬ್ಬ. ಅದೇ ಕಾರಣಕ್ಕೆ ಸಂಸ್ಥೆಯು ಜನವರಿ 25ರಂದು ಸೋಮವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಅಯೋಜಿಸಿದೆ. ಇನ್ನು ಪ್ರತಿ ವರ್ಷ ನೀಡುತ್ತಿದ್ದ 11 ಪ್ರಶಸ್ತಿಗಳ ಪೈಕಿ ನಾಲ್ಕು ಪ್ರಶಸ್ತಿಗಳನ್ನು ಮಾತ್ರ ನೀಡುತ್ತಿರುವುದಕ್ಕೆ ಕೊರೋನಾ ಕಾರಣ ಅಂತಲೂ ಸಂಸ್ಥೆಯ ಮುಖ್ಯಸ್ಥರಾದ ಸುಧೀಂದ್ರ ವೆಂಕಟೇಶ್‌ ಹೇಳಿದ್ದಾರೆ.

Related Posts

error: Content is protected !!