Categories
ಸಿನಿ ಸುದ್ದಿ

ಗಡಿದಾಟಿದ ಲೂಸಿಯಾ ಹೀರೋ; ಮೋಹಕತಾರೆ ರಮ್ಯಾ ಹೇಳಿದ್ದಿಷ್ಟು ?

ಗಂಧದಗುಡಿಯ ಕಲಾವಿದರು ಒಬ್ಬೊಬ್ಬರಾಗಿ ಗಡಿದಾಟುತ್ತಿದ್ದಾರೆ. ಪರಭಾಷಾ ಅಂಗಳಕ್ಕೆ ಲಗ್ಗೆ ಇಟ್ಟು ಹವಾ ಎಬ್ಬಿಸುತ್ತಿದ್ದಾರೆ. ಅಖಾಡ ನಿಮ್ಮದಾದರೇನಂತೆ ಆಟ ನಮ್ದು ಅಂತ ತೊಡೆತಟ್ಟಿ ಫೀಲ್ಡ್‌ ಗೆ ಇಳಿಯುತ್ತಿರುವ ನಮ್ಮ ಚಂದನವನದ ಸ್ಟಾರ್ ಹೀರೋಗಳು ಪರರ ಅಖಾಡದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಅದೇ ಸಾಲಿನಲ್ಲಿ ಈಗ ಲೂಸಿಯಾ ಹೀರೋ ಸತೀಶ್ ನಿನಾಸಂ ಸರದಿ.

ಸತೀಶ್ ನಿನಾಸಂ ಸ್ಯಾಂಡಲ್‌ವುಡ್‌ನ ಒನ್ ಆಫ್ ದಿ ಫೈನೆಸ್ಟ್ ಆಕ್ಟರ್. ಗಾಡ್‌ಫಾದರ್‌ಗಳಿಲ್ಲದೇ ಗಂಧದಗುಡಿಗೆ ಕಾಲಿಟ್ಟ ಮಂಡ್ಯಹೈದ ಹೀರೋ ಪಟ್ಟಕ್ಕೇರಿದ್ದು ಇತಿಹಾಸವೇ ಸರೀ. ರಂಗಭೂಮಿಯಲ್ಲಿ ಪಳಗಿ ಥಿಯೇಟರ್‌ನಲ್ಲಿ ಕೆಲಸ ಮಾಡಿಕೊಂಡು ಬಣ್ಣದ ನಂಟನ್ನು ಬೆಸೆದುಕೊಂಡ ಸತೀಶ್ ನಿನಾಸಂ, ಸೀರಿಯಲ್‌ಗಳಲ್ಲಿ ಅಭಿನಯಿಸುತ್ತಾ, ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಾ `ಲೂಸಿಯಾ’ ಮೂಲಕ ಹೀರೋ ಆದರು. ಅಲ್ಲಿಂದ ಶುರುವಾದ ಹೀರೋಯಿಸಂ ಇವತ್ತು ಕ್ವಾಟ್ಲೇ ಹೀರೋನಾ ಗಡಿದಾಟಿಸಿದೆ. ತಮಿಳು ಚಿತ್ರರಂಗದಲ್ಲಿ ನಾಯಕನಟನಾಗಿ ಮೆರೆಯುವ ಗೋಲ್ಡನ್ ಚಾನ್ಸ್ ಸಿಕ್ಕಿದೆ.

ಯಸ್, ಲೂಸಿಯಾ ಹೀರೋ ಗಡಿದಾಟಿದ್ದಾರೆ. `ಪಗೈವುನುಕು ಅರುಳ್ವಾಯ್’ ಚಿತ್ರದ ಮೂಲಕ ಕಾಲಿವುಡ್‌ಗೆ ಗ್ರಾಂಡ್ ಎಂಟ್ರಿಕೊಟ್ಟಿದ್ದಾರೆ. ತಮಿಳಿನ ಪ್ರಖ್ಯಾತ ನಟ ನಿರ್ದೇಶಕ ಸಮುದ್ರಖಣಿಯವರು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸ್ಯಾಂಡಲ್‌ವುಡ್ ಹೀರೋನಾ ವೆಲ್‌ಕಮ್ ಮಾಡಿಕೊಂಡಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ, ಫಾರಿನ್‌ನಲ್ಲೆಲ್ಲೋ ಸೆಟಲ್ ಆಗಿರುವ ಮೋಹಕತಾರೆ ರಮ್ಯಾ ಮೇಡಂ, ಸತೀಶ್ ಅಭಿನಯದ ಚೊಚ್ಚಲ ತಮಿಳು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭಾಷಯ ಕೋರಿರುವುದು.

ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರದಿಂದ ಅಂತರ ಕಾಯ್ದುಕೊಂಡು ಬಿಂದಾಸ್ ಲೈಫ್ ಲೀಡ್ ಮಾಡ್ತಿರುವ ಗೋಲ್ಡನ್ ಕ್ವೀನ್, ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಇದೀಗ, ಅದೇ ಮೀಡಿಯಾನ ಬಳಸಿಕೊಂಡು ನಮ್ಮ ಹೀರೋ ಹೊಸ ಸಾಹಸಕ್ಕೆ ಪ್ಲಸ್ ಸಾಧನೆಗೆ ಸಾಥ್ ಕೊಟ್ಟಿದ್ದಾರೆ. ನಟ ಸತೀಶ್ ನಿನಾಸಂ ಪಾತ್ರ ಪರಿಚಯದ ಪೋಸ್ಟರ್ ರಿಲೀಸ್ ಮಾಡಿಕೊಟ್ಟು ಲೂಸಿಯಾ ಹೀರೋಗೆ ಹೊಸ ಹುರುಪು ತುಂಬಿದ್ದಾರೆ. ದಿಲ್ಲಿ ಮೇಡಂ ಸಾಥ್- ಶುಭಾಶಯ ಗಿಟ್ಟಿಸಿಕೊಂಡಿರುವ ಬ್ಯೂಟಿಫುಲ್ ಮನಸ್ಸಿನ ನಾಯಕ ಕಾಲಿವುಡ್ ಅಂಗಳದಲ್ಲೂ ಸುನಾಮಿ ಎಬ್ಬಿಸೋ ತವಕದಲ್ಲಿದ್ದಾರೆ.

ರಮ್ಯಾ ಮೇಡಂ ಜೊತೆಗೆ ಐಶಾನಿ ಶೆಟ್ಟಿ, ದಿಗಂತ್, ಅದಿತಿ ಪ್ರಭುದೇವ್, ರಾಗಿಣಿ, ಕಾರುಣ್ಯ, ರಕ್ಷಿತಾ ಪ್ರೇಮ್, ಶರ್ಮಿಳಾ ಮಾಂಡ್ರೆ, ನೆನಪಿರಲಿ ಪ್ರೇಮ್, ಶರಣ್, ರಾಜ್‌ವರ್ಧನ್, ಎ.ಪಿ ಅರ್ಜುನ್ ಲೂಸಿಯಾ ಪವನ್‌ಕುಮಾರ್, ಬಹದ್ದೂರ್ ಚೇತನ್, ಅಯೋಗ್ಯ ಮಹೇಶ್ ಸೇರಿದಂತೆ ಚಂದನವನದ ಹಲವು ಕಲಾವಿದರು ಮತ್ತು ನಿರ್ದೇಶಕರು ನಟ ಸತೀಶ್ ನಿನಾಸಂ ಹೊಸ ಜರ್ನಿಗೆ ಶುಭಹಾರೈಸಿದ್ದಾರೆ. ಗಡಿದಾಟಿದ ನನ್ನ ಮೊದಲ ಸಾಹಸಕ್ಕೆ ನನ್ನ ಜೊತೆ ಮತ್ತೆ ನೀವೆಲ್ಲರೂ ನಿಲ್ಲಬೇಕಿದೆ ಎಂದು ತಮ್ಮ ಅಭಿಮಾನಿ ದೇವರುಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಪಗೈವುನುಕು ಅರುಳ್ವಾಯ್' ಚಿತ್ರದಲ್ಲಿ ಇಬ್ಬರು ಹೀರೋಗಳು. ಸಸಿಕುಮಾರ್ ಜೊತೆ ಸತೀಶ್ ನಿನಾಸಂ ಲೀಡ್ ರೋಲ್‌ನಲ್ಲಿ ಅಭಿನಯಿಸಿದ್ದು,ವಾಣಿಭೋಜನ್ ನಾಯಕಿಯಾಗಿದ್ದಾರೆ. ಖ್ಯಾತ ಇಂಗ್ಲೀಷ್ ಸಾಹಿತಿ ವಿಲಿಯಂ ಷೇಕ್ಸ್ಪಿಯರ್‌ರ ಮ್ಯಾಕ್‌ಬೆತ್ ನಾಟಕದಿಂದ ಸ್ಪೂರ್ತಿ ಪಡೆದಿರುವ ಡೈರೆಕ್ಟರ್ ಅನೀಸ್ ಅಜಾನ್‌ದಾನ್,ಪಗೈವುನುಕು ಅರುಳ್ವಾಯ್’ ಚಿತ್ರ ನಿರ್ದೇಶಿಸಿದ್ದಾರೆ. ಇದೊಂದು ಬಿಗ್‌ಬಜೆಟ್ ಸಿನಿಮಾ ಆಗಿದ್ದು, ಕರ್ನಾಟದ ವಿವಿಧ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ರಿಲೀಸ್‌ಗೆ ರೆಡಿಯಾಗ್ತಿದೆ. ಕನ್ನಡದಲ್ಲಿ ಪೆಟ್ರೋಮ್ಯಾಕ್ಸ್, ಗೋದ್ರಾ ಸಿನಿಮಾಗಳು ತೆರೆಗೆ ಅಪ್ಪಳಿಸೋಕೆ ಸಜ್ಜಾಗಿವೆ. ರಚಿತಾ ಜೊತೆ ಮ್ಯಾಟ್ನಿ, ಶರ್ಮಿಳಾ ಮಾಂಡ್ರೆ ಜೊತೆ ದಸರಾ ಸೇರಿದಂತೆ ಪರಿಮಳ ಲಾಡ್ಜ್, ಮೈ ನೇಮ್ ಈಸ್ ಸಿದ್ದೇಗೌಡ ಚಿತ್ರಗಳು ಸತೀಶ್ ಕೈಯ್ಯಲಿವೆ. ಒಟ್ನಲ್ಲಿ ಲೂಸಿಯಾ ಹೀರೋ ಸ್ಯಾಂಡಲ್‌ವುಡ್‌ನ ಬ್ಯುಸಿಯೆಸ್ಟ್ ಆಕ್ಟರ್ ಕಮ್ ಫೈನೆಸ್ಟ್ ಆಕ್ಟರ್. ಕನ್ನಡದಲ್ಲಿ ಬ್ಯುಸಿಯಾದಂತೆ ತಮಿಳು ಚಿತ್ರರಂಗದಲ್ಲೂ ಸತೀಶ್ ಬ್ಯುಸಿಯಾಗ್ಲಿ. ಕನ್ನಡದ ಕೀರ್ತಿಪತಾಕೆ ಕಾಲಿವುಡ್‌ನಲ್ಲಿ ಎತ್ತಿಹಿಡಿಯಲಿ.

  • ಎಂಟರ್‌ಟೈನ್ಮೆಂಟ್ ಬ್ಯುರೋ ಸಿನಿಲಹರಿ
Categories
ಸಿನಿ ಸುದ್ದಿ

ಬೈಟು ಲವ್ ಟೀಸರ್ ಸದ್ದು! ಧನ್ವೀರ್ ಬರ್ತ್ ಡೇಗೆ ಟೀಮ್ ಸ್ಪೆಷಲ್ ಗಿಫ್ಟ್

ಹರಿ ಸಂತೋಷ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಬೈ ಟು ಲವ್‌’ ಸಿನಿಮಾ ತಂಡ, ನಟ ಧನ್ವೀರ್ ಬರ್ತ್ ಡೇ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದ್ದ ಟೀಸರ್ ಗೆ ಎಲ್ಲೆಡೆಯಿಂದ, ಮೆಚ್ಚುಗೆ ಸಿಕ್ಕಿದೆ.ಪೋಸ್ಟರ್ ನೋಡಿದವರಿಗೆ ಫ್ಯಾಮಿಲಿ ಇದೊಂದು ಪಕ್ಕಾ ಸಿನಿಮಾ ಅನ್ನಿಸಿದೇ ಇರದು. ಇನ್ನು ರಿಲೀಸ್ ಆಗಿರುವ ಟೀಸರ್ ನೋಡಿದರೆ ಮಾಸ್ ಫೀಲ್ ಸಿನಿಮಾ ಅನ್ನುತ್ತಿದ್ದಾರೆ.

‘ಬಜಾರ್‌’ ಬಳಿಕ ಧನ್ವೀರ್‌ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ಫಸ್ಟ್ ಲುಕ್‌ ಮೂಲಕ ಸಾಕಷ್ಟು ಕುತೂಹಲ ಮೂಡಿಸಿತ್ತು ಚಿತ್ರತಂಡ. ಧನ್ವೀರ್‌-ಶ್ರೀಲೀಲಾ ಹಾಗೂ ಪುಟ್ಟ ಮಗುವೊಂದು ಹಸೆಮಣೆ ಮೇಲೆ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್‌ ಆಗಿತ್ತು.ಸೆಪ್ಟೆಂಬರ್‌ 8ರಂದು ಚಿತ್ರದ ನಾಯಕ ಧನ್ವೀರ್‌ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಖುಷಿಗೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಮೊದಲ ಚಿತ್ರದಲ್ಲಿ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಧನ್ವೀರ್‌ಗಿಲ್ಲಿ ಲವರ್‌ ಬಾಯ್‌ ಪಾತ್ರ ಆಗಿದ್ದಾರೆ.

ಸುಮಾರು 70 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ನಡೆಸಸಲಾಗಿದೆ. ಧನ್ವೀರ್‌ ಹಾಗೂ ಶ್ರೀಲೀಲಾ ಜೋಡಿ ತೆರೆಯ ಮೇಲೆ ಮೋಡಿ ಮಾಡಲಿದೆ ಎಂಬುದು ನಿರ್ದೇಶಕರ ಮಾತು. ಗಣೇಶ್‌ ನಟನೆಯ ಸಖತ್‌, ನಿಖಿಲ್‌ ಕುಮಾರ್‌ಸ್ವಾಮಿ ನಟನೆಯ ಹೊಸ ಸಿನಿಮಾ ಹಾಗೂ ಜೋಗಿ ಪ್ರೇಮ್‌-ಧ್ರುವ ಸರ್ಜಾ ಕಾಂಬಿನೇಷನ್‌ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್‌ ಪ್ರೊಡಕ್ಷನ್ಸ್ ‘ಬೈ ಟು ಲವ್‌’ಗೆ ಹಣ ಹಾಕಿದೆ.ಚಿತ್ರದ ಕಥೆ ಮೆಚ್ಚಿಕೊಂಡು ಈ ಸಿನಿಮಾ ನಿರ್ಮಾಣ ಮಾಡಲು ಮುಂದಾದ ಕೆವಿಎನ್‌ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾದ ಎರಡನೇ ಸಿನಿಮಾವಿದು. ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಡ್ರಗ್ಸ್ ಪ್ರಕರಣದಲ್ಲಿ ಯಾರನ್ನೂ ಕೈ ಬಿಡುವುದಿಲ್ಲ- ಗೃಹ ಸಚಿವ ಆರಗ ಜ್ಞಾನೇಂದ್ರ

ಡ್ರಗ್ಸ್‌ ಪ್ರಕರಣದಲ್ಲೀಗ ಸರ್ಕಾರ ಎಲ್ಲರಿಗೂ ನಡುಕ ಹುಟ್ಟಿಸಿದೆ. ಕೆಲವು ಸಿನಿಮಾ ತಾರೆಯರ ಮಾದಕ ಜಾಲದ ಪ್ರಕರಣಗಳು ಮತ್ತೆ ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲೇ ಗೃಹ ಸಚಿವ ಜ್ಞಾನೇಂದ್ರ ಖಡಕ್ ಹೇಳಿಕೆ ನೀಡಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ರಾಜಿ‌ಮಾತೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದಕವಸ್ತು ಪ್ರಕರಣದಲ್ಲಿ ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟ ಪಡಿಸಿದರು.


‘ಚಲನಚಿತ್ರ ನಟಿ ಅನುಶ್ರೀ ಇರಲಿ, ಯಾರೇ ಆಗಿರಲಿ ಅವರ ವಿಷಯದಲ್ಲಿ ರಾಜಕೀಯ ಒತ್ತಡವೇನಿಲ್ಲ. ಮಾದಕವಸ್ತು ಪ್ರಕರಣ ಇದಾಗಿರುವುದರಿಂದ ಯಾರೂ ಒತ್ತಡ ಹಾಕುವುದಿಲ್ಲ. ಇಂತಹ ಪ್ರಕರಣದಲ್ಲಿ ನಮ್ಮ ಸರ್ಕಾರವು ಬಹಳಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಯಾರೇ ಕಾನೂನು ಬಾಹಿರ ಚಟುವಟಿಕೆ ನಡೆಸಿದರೂ ನಾವು ಸುಮ್ಮನಿರುವುದಿಲ್ಲ. ಇಲ್ಲಿ ಅಪರಾಧ ಚಟುವಟಿಕೆಗೆ ಜಾಗ ಇಲ್ಲ.ಅಪರಾಧಿ ಎನಿಸಿದವರು ಶಿಕ್ಷೆಗೆ ಗುರಿಯಾಗುವುದು ಖಚಿತ. ಎಷ್ಟೇ ಪ್ರಭಾವಿಗಳಾಗಿದ್ದರೂ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

Categories
ಸಿನಿ ಸುದ್ದಿ

ಅನಿತಾಭಟ್‌ ಈಗ ನಿರ್ಮಾಪಕಿ; ಅನದರ್‌ ಸ್ಟೋರಿ ಹೇಳೋಕೆ ಹೊರಟ್ರು ಭಟ್ರು!

ಅನಿತಾಭಟ್ ನಿರ್ಮಾಣದ ಸಿನಿಮಾ ಶೀರ್ಷಿಕೆಯನ್ನು ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರು ಬಿಡುಗಡೆ ಮಾಡುತ್ತಿರುವುದು ವಿಶೇಷ.
ಸದ್ಯ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರು ಅನಿತಾಭಟ್‌ ನಿರ್ಮಾಣದ ಸಿನಿಮಾ ಟೈಟಲ್‌ ರಿಲೀಸ್‌ ಮಾಡಲಿದ್ದಾರೆ ಎಂಬ ವಿಷಯ ಹೊತ್ತ ಪೋಸ್ಟರ್‌ ಗಮನಸೆಳೆಯುತ್ತಿದೆ. ಅಲೆಗಳಿರುವ ಒಂದು ಸಮುದ್ರದ ಭಾವಚಿತ್ರದಲ್ಲಿ “ಪ್ರತಿ ಕ್ಷಣ ಈ ಸಮುದ್ರ ಒಂದೊಂದು ಕಥೆ ಹೇಳ್ತಾ ಇರುತ್ತೆ ಎಂಬ ಬರಹವಿದೆ. ಜೊತೆಗೆ “ಅನದರ್‌ ಸ್ಟೋರಿ” ಎಂಬ ಹೈಲೈಟ್ರು ಬರಹವೂ ಇದೆ. ಚಿತ್ರದ ಶೀರ್ಷಿಕೆಯನ್ನು ಶ್ರೀಮುರಳಿ ಸೆಪ್ಟೆಂಬರ್‌ 10ರಂದು ಬಿಡುಗಡೆ ಮಾಡುತ್ತಿದ್ದಾರೆ.

ಕನ್ನಡದ ಮೋಸ್ಟ್ ಅಟ್ರ್ಯಾಕ್ಷನ್ ನಟಿ ಅಂತಾನೇ ಕರೆಸಿಕೊಂಡಿರುವ ಅನಿತಾಭಟ್, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹೀಗಂದಾಕ್ಷಣ, ಅಚ್ಚರಿಯಾಗಬಹುದು. ನಿಜ, ಅನಿತಾಭಟ್‌, ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿ ಈಗ ಹದಿಮೂರು ವರ್ಷಗಳು ಕಳೆದಿವೆ. ಇಂದಿಗೂ ತನ್ನ ಛಾಪು ಮೂಡಿಸುತ್ತಲೇ ಬಂದಿರುವ ಅನಿತಾಭಟ್‌, ಎಲ್ಲಾ ಜಾನರ್‌ ಸಿನಿಮಾಗಳಲ್ಲೂ ಕಾಣಿಸಿಕೊಂಡು ಸೈ ಎನಿಸಿಕೊಂಡವರು. ಸಿನಿಮಾನೇ ಪ್ರಾಣ ಅಂದುಕೊಂಡಿರುವ ಅನಿತಾಭಟ್‌, ಸದಾ ಹೊಸತೇನನ್ನೋ ಮಾಡಬೇಕು ಅಂದುಕೊಂಡವರು. ಆ ಹೊಸತನ್ನು ಹುಡುಕಿ ಹೊರಟ ಅವರನ್ನು ಸಿನಿಮಾ ನಿರ್ಮಾಪಕಿಯನ್ನಾಗಿಸಿದೆ. ಹೌದು, ಅನಿತಾಭಟ್‌ ನಿರ್ಮಾಪಕಿಯಾಗಿದ್ದಾರೆ.

. ಈ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಮತ್ತೊಂದು ಹೆಜ್ಜೆ ಇಡುತ್ತಿದ್ದಾರೆ. ಅಂದಹಾಗೆ, ಅನಿತಾಭಟ್‌ ಈಗಾಗಲೇ “ಅನಿತಾಭಟ್‌ ಕ್ರಿಯೇಷನ್ಸ್‌ ಮೂಲಕ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರೊಂದಿಗೆ ರಾಜಲಕ್ಷ್ಮಿ ಅನ್ನುವವರು ಕೂಡ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ವಿಶೇಷವೆಂದರೆ, ಅನಿತಾಭಟ್‌ ಇಲ್ಲಿ ವಿಶೇಷ ಕಥೆಯೊಂದನ್ನು ಹಿಡಿದು ಪ್ರೇಕ್ಷಕರ ಮುಂದೆ ತರಲು ಅಣಿಯಾಗಿದ್ದಾರೆ. ಆ ಚಿತ್ರದ ಶೀರ್ಷಿಕೆಯ ಗುಟ್ಟು ರಟ್ಟು ಮಾಡದ ಅನಿತಾಭಟ್‌, ಅದನ್ನು ಸೆಪ್ಟೆಂಬರ್‌ 10ರ ಗಣೇಶ ಹಬ್ಬದಂದು ಅನಾವರಣಗೊಳಿಸುತ್ತಿದ್ದಾರೆ.

ಅವರ ಮೊದಲ ನಿರ್ಮಾಣದ ಸಿನಿಮಾದ ಶೀರ್ಷಿಕೆಯನ್ನು ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರು ಬಿಡುಗಡೆ ಮಾಡುತ್ತಿರುವುದು ವಿಶೇಷ.
ಸದ್ಯ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರು ಅನಿತಾಭಟ್‌ ನಿರ್ಮಾಣದ ಸಿನಿಮಾ ಟೈಟಲ್‌ ರಿಲೀಸ್‌ ಮಾಡಲಿದ್ದಾರೆ ಎಂಬ ವಿಷಯ ಹೊತ್ತ ಪೋಸ್ಟರ್‌ ಗಮನಸೆಳೆಯುತ್ತಿದೆ. ಅಲೆಗಳಿರುವ ಒಂದು ಸಮುದ್ರದ ಭಾವಚಿತ್ರದಲ್ಲಿ “ಪ್ರತಿ ಕ್ಷಣ ಈ ಸಮುದ್ರ ಒಂದೊಂದು ಕಥೆ ಹೇಳ್ತಾ ಇರುತ್ತೆ” ಎಂಬ ಬರಹವಿದೆ. “ಅನದರ್‌ ಸ್ಟೋರಿ” ಇರುವ ಚಿತ್ರದ ಶೀರ್ಷಿಕೆಯನ್ನು ಶ್ರೀಮುರಳಿ ಅವರು ಸೆಪ್ಟೆಂಬರ್‌ 10ರಂದು ಬಿಡುಗಡೆ ಮಾಡುತ್ತಿದ್ದಾರೆ.

ಆ ಸಿನಿಮಾದ ಟೈಟಲ್‌ ಏನು ಅನ್ನೋದು ಅಂದೇ ಗೊತ್ತಾಗಲಿದೆ. ಬಹುಶಃ ಅನಿತಾಭಟ್‌ ಅವರ ಟೀಮ್‌ ಈಗ ಪೋಸ್ಟ್‌ ಮಾಡಿರುವ ಪೋಸ್ಟರ್‌ ಗಮನಿಸಿದರೆ, ಅದೊಂದು ಸಮುದ್ರದ ಕಥೆನೇ ಇರಬಹುದೇನೋ ಅಂತೆನಿಸುತ್ತದೆ. ಸಮುದ್ರದ ಕಥೆ ಆಗಿದ್ದರಿಂದ ಸಿನಿಮಾದ ಟೈಟಲ್‌ ಕೂಡ ಅದಕ್ಕೆ ಸಂಬಂಧಿಸಿದಂತೆಯೇ ಇರಬಹುದೇನೋ? ಗೊತ್ತಿಲ್ಲ ಅದು ಏನಿರಬಹುದು‌ ಎಂಬ ಕುತೂಹಲಕ್ಕೆ ಗಣೇಶನ ಹಬ್ಬದವರೆಗೆ ಕಾಯಬೇಕಿದೆ.

ಇನ್ನು “ಸಿನಿಲಹರಿ” ಜೊತೆ ಮಾತಾಡಿದ ಅನಿತಾಭಟ್‌, “ನಾನು ಮೊದಲಿನಿಂದಲೂ ಒಳ್ಳೆಯ ಕಥೆಗಾಗಿ ಹುಡುಕಾಟ ನಡೆಸುತ್ತಲೇ ಇದ್ದೆ. ಒಳ್ಳೆ ಕಥೆ ಸಿಕ್ಕರೆ ನಾನೇ ನಿರ್ಮಾಣ ಮಾಡಬೇಕು ಅಂತ. ಅದು ಸಿಕ್ಕಿದ್ದರಿಂದಲೇ ನಾನು ನಿರ್ಮಾಪಕಿಯಾಗಿದ್ದೇನೆ. ವಿಶೇಷವೆಂದರೆ, ನಾನು ಒಂದಲ್ಲ ಎರಡು ಸಿನಿಮಾಗಳನ್ನು ನಿರ್ಮಿಸಿದ್ದೇನೆ. ಆ ಪೈಕಿ ಈಗ ಒಂದು ಸಿನಿಮಾ ಸೆನ್ಸಾರ್‌ಗೆ ಹೋಗಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

ಎರಡು ಸಿನಿಮಾಗಳ ಕಥೆ ಚೆನ್ನಾಗಿವೆ. ಕಥೆಗೆ ಏನೆಲ್ಲಾ ಬೇಕೋ ಅದನ್ನು ಪೂರೈಸಿ, ಒಂದೊಳ್ಳೆಯ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಾಗಿದೆ. ನನ್ನೊಂದಿಗೆ ರಾಜಲಕ್ಷ್ಮಿ ಅವರು ಕೈ ಜೋಡಿಸಿದ್ದಾರೆ. ಒಳ್ಳೆಯ ತಂಡ ನನ್ನೊಂದಿಗಿದೆ. ರಿಷಿ ಮತ್ತು ಧನುಷ್‌ ಇವರೊಂದಿಗೆ ತೃಪ್ತಿ ಎನಿಸುವ ಸಿನಿಮಾ ಮಾಡಿದ ಖುಷಿ ಇದೆ. ನಿಜ ಹೇಳ್ತೀನಿ. ಎರಡು ಸಿನಿಮಾ ನಿರ್ಮಾಣ ಮಾಡಿದ್ದರೂ, ಆ ಎರಡು ಸಿನಿಮಾಗಳು ಕಮರ್ಷಿಯಲ್‌ ಆಗಿವೆ. ಕಂಟೆಂಟ್‌ ಕೂಡ ಅಷ್ಟೇ ಚೆನ್ನಾಗಿದೆ” ಎನ್ನುತ್ತಾರೆ ಅನಿತಾಭಟ್.‌

ಒಂದು ಸಿನಿಮಾದಲ್ಲಿ ನಾನು ಮತ್ತು ಶಿವಧ್ವಜ್‌ ನಟಿಸಿದ್ದೇವೆ. ಇನ್ನೊಂದು ಸಿನಿಮಾದಲ್ಲಿ ನಾನು, ನೀತು, ಷಫಿ, ಟಿವಿ ಸುದ್ದಿ ವಾಚಕ ರೆಹಮಾನ್‌, ಚಕ್ರವರ್ತಿ ಚಂದ್ರಚೂಡ್‌ ಕಾಣಿಸಿಕೊಂಡಿದ್ದೇವೆ. ಇವರೆಲ್ಲರೂ ಕೂಡ ನನ್ನ ಸಿನಿಮಾಗೆ ಸಾಥ್‌ ನೀಡಿದ್ದಾರೆ. ಸಹಕಾರ ನೀಡಿ, ಪ್ರೋತ್ಸಾಹಿಸಿದ್ದರಿಂದಲೇ ಇಂದು ನಾನು ನಿರ್ಮಾಣ ಮಾಡೋಕೆ ಸಾಧ್ಯವಾಗಿದೆ. ಮುಂದೆ ಇನ್ನೂ ಒಳ್ಳೆಯ ಸಿನಿಮಾ ಮಾಡುವ ಆಸೆ ಇದೆ. ಅದರಲ್ಲೂ ನಾನು ಶಿವರಾಜಕುಮಾರ್‌ ಫ್ಯಾನ್.‌ ಅವರಿಗೆ ಒಂದೊಳ್ಳೆಯ ಸಿನಿಮಾ ನಿರ್ಮಿಸುವ ಆಸೆಯೂ ನನಗಿದೆ. ನೋಡೋಣ. ಎಲ್ಲದ್ದಕ್ಕೂ ಒಳ್ಳೆಯ ಸಮಯ ಬರಬೇಕು ಎನ್ನುವ ಅನಿತಾಭಟ್‌, ಸದ್ಯ ನಿರ್ಮಿಸಿರುವ ಸಿನಿಮಾಗಳನ್ನು ಬಿಡುಗಡೆ ಮಾಡಿ, ಜನಮನ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಕನ್ನಡದಲ್ಲಿ ನಟಿಯಾಗಿ ಬಂದು, ಈಗ ನಿರ್ಮಾಪಕಿಯಾಗಿರುವ ಅನಿತಾಭಟ್‌, ಇನ್ನೂ ಒಳ್ಳೆಯ ಸಿನಿಮಾಗಳನ್ನು ಕನ್ನಡಕ್ಕೆ ಕೊಡಲಿ ಎಂಬುದು “ಸಿನಿಲಹರಿ” ಹಾರೈಕೆ.

Categories
ಸಿನಿ ಸುದ್ದಿ

`ಜನಪ್ರಿಯ ನಿರೂಪಕಿ’ ಕನ್ನಡಿಗರು ತೊಡಿಸಿದ ಕಿರೀಟ; ಧಕ್ಕೆ ತಂದಿಲ್ಲ-ತರಲ್ಲ; ಉಳಿಸಿಕೊಳ್ತಾರಾ ಅನುಶ್ರೀ ?

ಖ್ಯಾತ ನಿರೂಪಕಿ ಪಟ್ಟ ಅನುಶ್ರೀಗೆ ಸುಲಭಕ್ಕೆ ದಕ್ಕಿರುವುದಲ್ಲ. ಅನುಶ್ರೀ ಕೈಗೆ ಸಡನ್ನಾಗಿ ಮೈಕ್ ಸಿಕ್ಕಿಲ್ಲ. ಸಲೀಸಾಗಿ ಸ್ಟೇಜ್ ಹತ್ತುವ ಚಾನ್ಸ್ ಕೂಡ ದಕ್ಕಿಲ್ಲ. ಲಂಗ-ದಾವಣಿಯಿಂದ ಹಿಡಿದು ಲಕ್ಷಾಂತರ ಬೆಲೆಬಾಳುವ ಲೆಹೆಂಗಾ ಹಾಕಿಕೊಂಡು ಶೋ ನಡೆಸುವುದಕ್ಕೆ, ಬಹುಬೇಡಿಕೆ ನಿರೂಪಕಿ ಪಟ್ಟಕ್ಕೇರಿ ರಾರಾಜಿಸ್ತಿರುವುದಕ್ಕೆ, ಆಕೆ ಪಟ್ಟ ಶ್ರಮ ಎಷ್ಟು ಎನ್ನುವುದು ಆಕೆಗಷ್ಟೇ ಗೊತ್ತು.

ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್‌ಗೆ ಸಂಬಂಧಪಟ್ಟಂತೆ ಆಂಕರ್ ಅನುಶ್ರೀ ಹೆಸರು ಮತ್ತೆ ಕೇಳಿಬಂದಿದೆ. ಪ್ರಕರಣದ ಎ೨ ಆರೋಪಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಅನುಶ್ರೀ ವಿರುದ್ದ ಹೇಳಿಕೆಗಳನ್ನ ಕೊಟ್ಟಿದ್ದು, ಮಂಗಳೂರು ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆಂದು ವರದಿಯಾಗಿದೆ. ಹೀಗಾಗಿ, ಕಳೆದೊಂದು ವರ್ಷದ ಹಿಂದೆ ಕ್ಯಾಮೆರಾ ಮುಂದೆ ಅನುಶ್ರೀ ಕಣ್ಣೀರಿಟ್ಟ ದೃಶ್ಯಗಳು ಕಣ್ಮುಂದೆ ಬರುತ್ತಿವೆ. ಜೊತೆಗೆ ಕನ್ನಡಿಗರಿಗೆ ಅನುಶ್ರೀ ಪ್ರಮಾಣದ ರೀತಿಯಲ್ಲಿ ಕೊಟ್ಟಂತಹ ಮಾತುಗಳು ನೆನಪಿಗೆ ಬರುತ್ತಿವೆ. ಕನ್ನಡಿಗರು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸ ಹಾಗೂ ನಂಬಿಕೆಯನ್ನ ಎಂದೆಂದಿಗೂ ಕಳೆದುಕೊಳ್ಳಲ್ಲ. ಯಾವುದೇ ಕಾರಣಕ್ಕೂ ಕನ್ನಡಿಗರು ಕೊಟ್ಟಿರುವ ಹೆಸರು ಹಾಗೂ ಕನ್ನಡಿಗರು ತೊಡಿಸಿದಂತಹ ಕಿರೀಟಕ್ಕೆ ಧಕ್ಕೆ ತಂದಿಲ್ಲ ಮತ್ತು ತರುವುದು ಇಲ್ಲ. ಈ ರೀತಿ ಕ್ಯಾಮೆರಾ ಮುಂದೆ ಲೈವ್ ಬಂದು ಹೇಳಿಕೊಂಡಿದ್ದರು ಆಂಕರ್ ಕಮ್ ನಟಿ ಅನುಶ್ರೀಯವರು

ಅನುಶ್ರೀ ಕೊಟ್ಟ ಮಾತಿಗೆ ಬದ್ದರಾಗಿದ್ದಾರಾ? ಬದ್ದರಾಗಿರುತ್ತಾರಾ? ಈ ಮಾತಿಗೆ ಹೌದು ಇರ್ತಾರೆ ಅಂತ ನಾವು ಹೇಳೋದಕ್ಕೆ ಆಗೋದಿಲ್ಲ. ಮಾತು ಯಾರೇ ಕೊಟ್ಟಿರಲಿ ಉಳಿಸಿಕೊಂಡು ಹೋದರೆ ಬೆಳೆಯುತ್ತಾರೆ ಇಲ್ಲವಾದಲ್ಲಿ ಕೆಳಕೆಳಕ್ಕೆ ಕುಸಿಯುತ್ತಾರೆ. ಅದೇನೇ ಇರಲಿ ಅನುಶ್ರೀ `ಜನಪ್ರಿಯ ನಿರೂಪಕಿ’ ಪಟ್ಟ ಹಾಗೂ ಕನ್ನಡಿಗರು ತೊಡಿಸಿದ ಕಿರೀಟವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗ್ಬೇಕು. ಅಷ್ಟಕ್ಕೂ, ಖ್ಯಾತ ನಿರೂಪಕಿ ಪಟ್ಟ ಅನುಶ್ರೀಗೆ ಸುಲಭಕ್ಕೆ ದಕ್ಕಿರುವುದಲ್ಲ. ನಮ್ಮ ಕರುನಾಡ ಮಂದಿ ಸುಮ್‌ಸುಮ್ಮನೇ ಮಂಗಳೂರು ಚೆಲುವೆಗೆ ಕಿರೀಟ ತೊಡಿಸಿಲ್ಲ. ಕನ್ನಡಿಗರು ಪ್ರೀತಿ ತರ‍್ಸೋದಕ್ಕೂ-ತಲೆಮೇಲೆ ಹೊತ್ತು ಮೆರೆಸುವುದಕ್ಕೂ ಕಾರಣಯಿದೆ, ಕಾರಣ ಎನ್ನುವುದಕ್ಕಿಂತ ಆಕೆಯ ಕಠಿಣ ಪರಿಶ್ರಮ-ಶ್ರದ್ದೆ-ಕೆಲಸದ ಮೇಲಿರುವ ಭಕ್ತಿ-ಮಾತುಗಾರಿಕೆ-ಸಾಧಿಸುವ ಹುಮ್ಮಸ್ಸು ಜೊತೆಗೆ ಕಲಾ ತಪ್ಪಸ್ಸು ಇವತ್ತು ಅನುಶ್ರೀಯವರನ್ನು ಬೇಡಿಕೆಯ ನಿರೂಪಕಿ ಸ್ಥಾನದಲ್ಲಿ ಕೂರಿಸಿದೆ. ನಟಿಯಾಗಿ ಬೆಳ್ಳಿತೆರೆಯನ್ನೂ ಬೆಳಗುವ ಅವಕಾಶವನ್ನು ಕೊಡಿಸಿದೆ.

ಅಂದ್ಹಾಗೇ, ಒಂದು ನೆನಪಿಡಬೇಕು ಅನುಶ್ರೀ ಕೈಗೆ ಸಡನ್ನಾಗಿ ಮೈಕ್ ಸಿಕ್ಕಿಲ್ಲ. ಸಲೀಸಾಗಿ ಸ್ಟೇಜ್ ಹತ್ತುವ ಚಾನ್ಸ್ ಕೂಡ ದಕ್ಕಿಲ್ಲ. ಲಂಗ-ದಾವಣಿಯಿಂದ ಹಿಡಿದು ಲಕ್ಷಾಂತರ ಬೆಲೆಬಾಳುವ ಲೆಹೆಂಗಾ ಹಾಕಿಕೊಂಡು ಶೋ ನಡೆಸುವುದಕ್ಕೆ ಆಂಕರ್ ಅನುಶ್ರೀ ಪಟ್ಟ ಶ್ರಮ ಎಷ್ಟು ಎನ್ನುವುದು ಆಕೆಗಷ್ಟೇ ಗೊತ್ತು. ಬರಿಗೈನಲ್ಲಿ ಬೆಂಗಳೂರಿಗೆ ಬಂದು ಇವತ್ತು ಸ್ವಂತ ಮನೆಮಾಡಿಕೊಂಡಿರುವುದಕ್ಕಿಂತ ಬೆಲೆಕಟ್ಟಲಾಗದ ಜನರ ಮನದಲ್ಲಿ ಮನೆಮಾಡಿದ್ದಾರೆ. ಟೆಲಿ ಅಂತ್ಯಾಕ್ಷರಿಯಿಂದ ಶುರುವಾದ ಆಂಕರಿಂಗ್ ಜರ್ನಿ, ಜೀ ಕನ್ನಡದ ಹೆಮ್ಮೆಯ ಶೋಗಳಾದ ಸರಿಗಮಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವರೆಗೂ ತಂದುನಿಲ್ಲಿಸಿದೆ. ಟಿವಿ ಲೋಕದಲ್ಲಿ ಮಾತ್ರವಲ್ಲ ಕರುನಾಡಿನ ಅಂಗಳದಲ್ಲಿ ನಡೆಯುವ ಬಹುತೇಕ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಅನುಶ್ರೀಯೇ ಫಿಕ್ಸು. ಅಷ್ಟರ ಮಟ್ಟಿಗೆ ಅನುಶ್ರೀ ತಮ್ಮ ಛಾಪನ್ನ ಮೂಡಿಸಿದ್ದಾರೆ. ಬಹುಬೇಡಿಕೆಯ ನಿರೂಪಕಿಯಾಗಿ ಮುನ್ನುಗುತ್ತಿದ್ದಾರೆ. ಇಂತಹ ಹೊತ್ತಲ್ಲೇ ಅನುಶ್ರೀಗೆ ಡ್ರಗ್ಸ್ ಕಂಟಕ ಎದುರಾಗಿದೆ.

ಮಾದಕ ಲೋಕದ ಜೊತೆಗೆ ತನ್ನ ಹೆಸರು ತಳುಕು ಹಾಕಿಕೊಳ್ಳುತ್ತೆ ಅಂತ ಅನುಶ್ರೀ ಕನಸು-ಮನಸಲ್ಲೂ ಊಹಿಸಿಕೊಂಡಿರಲಿಲ್ಲ. ಕನ್ನಡಿಗರು ಕೂಡ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ಹರಳು ಉರಿದಂತೆ ಮಾತನಾಡುವ, ಮಾತಲ್ಲೇ ಮೋಡಿ ಮಾಡುವ ಚಿನಕುರಳಿ ಅನುಶ್ರೀಗೂ, ಡ್ರಗ್ಸ್ ಲೋಕಕ್ಕೂ ನಂಟಿದೆ ಅಂದರೆ ಅನುಶ್ರೀಗೆ ಮಾತ್ರವಲ್ಲ ಆಕೆಯನ್ನ ಕೈಹಿಡಿದು ನಡೆಸಿದವರಿಗೂ ಹಾಗೂ ಬೆಳೆಸಿದವರಿಗೂ ಅಚ್ಚರಿಯಾಗುತ್ತೆ. ಈಗ ಆಗಿರುವುದು ಅದೇ. ಸ್ಯಾಂಡಲ್‌ವುಡ್ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಎ೨ ಆರೋಪಿಯಾಗಿರುವ ಕಿಶೋರ್ ಶೆಟ್ಟಿ ನೀಡಿರುವ ಹೇಳಿಕೆ ಎನ್ನಲಾದ ಹಾಗೂ ಸಿಸಿಬಿ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ಪಟ್ಟಿಯನ್ನ ನೋಡಿ ಎಲ್ಲರೂ ಬೆಚ್ಚಿಬೆರಗಾಗಿದ್ದಾರೆ. ಈ ನಡುವೆ ಆರೋಪಿ ಕಿಶೋರ್ ಶೆಟ್ಟಿ ಚಾರ್ಜ್ ಶೀಟ್ ನಲ್ಲಿ ಸುಳ್ಳು ಹೇಳಿಕೆ ದಾಖಲೆ ಮಾಡಲಾಗಿದೆ ಎಂದು ಮಾಧ್ಯಮಗಳ ಮುಂದೆ ಬಂದು ಹೇಳಿಕೆ ಕೊಡ್ತಿದ್ದಾರೆ.

ಹೌದು, ಡ್ರಗ್ಸ್ ಆರೋಪ ಎದುರಿಸುತ್ತಿರುವ ಕಿಶೋರ್ ಶೆಟ್ಟಿ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಅನುಶ್ರೀ ವಿರುದ್ದ ಹೇಳಿಕೆ ಕೊಟ್ಟಿದ್ದೇನೆ ಎನ್ನುವ ಸುದ್ದಿಯೇ ಸುಳ್ಳು. ಅವರ ಫೋನ್ ನಂಬರ್ ನನ್ನ ಬಳಿ ಇಲ್ಲ, ಅವರೊಟ್ಟಿಗೆ ನಾನು ಸಂಪರ್ಕವೂ ಇಟ್ಟುಕೊಂಡಿಲ್ಲ. ಅಂದ್ಹಾಗೇ, ಅನುಶ್ರೀಯವರು ಸ್ಪರ್ಧೆ ಮಾಡಿದ್ದ `ಕುಣಿಯೋಣ ಬಾರಾ’ ಶೋಗೆ ಕೊರಿಯಾಗ್ರಫಿ ಮಾಡಿದ್ದು ನಿಜ. ರಿಹರ್ಸಲ್ ಮಾಡಿ ಲೇಟ್‌ನೈಟ್ ಮನೆಗೆ ಬರುತ್ತಿದ್ದೆವು ಆದರೆ ನಾವು ಡ್ರಗ್ಸ್ ಪಾರ್ಟಿ ಮಾಡಿಲ್ಲ. ಅನುಶ್ರೀಯವರು ತುಂಬಾ ಕಷ್ಟಪಟ್ಟು ಮೇಲೆಬಂದಿದ್ದಾರೆ. ಅವರ ಮೇಲೆ ನನಗೆ ತುಂಬಾ ಗೌರವವಿದೆ. ನನ್ನ ಡ್ಯಾನ್ಸ್ ಕ್ಲಾಸ್‌ನ ಅವರೇ ಉದ್ಘಾಟನೆ ಮಾಡಿಕೊಟ್ಟಿದ್ದರು. ಫೇಮಸ್ಸ್ ಕೊರಿಯಾಗ್ರಫರ್ ಆಗ್ಬೇಕು ಎನ್ನುವ ಕನಸಿದೆ. ಆ ಕನಸಿನ ಸಾಕಾರಕ್ಕಾಗಿ ಎದುರುನೋಡ್ತಿದ್ದೇನೆ. ನನ್ನ ಹೆಸರು ಕೆಡಿಸೋದಕ್ಕೆ ಯಾರೋ ಈ ರೀತಿ ಮಾಡುತ್ತಿದ್ದಾರೆ. ನಾನು ಎರಡು ಭಾರಿ ಡ್ರಗ್ಸ್ ಪಡೆದಿದ್ದು ನಿಜ ಆದರೆ ಪೆಡ್ಲಿಂಗ್-ಗಿಡ್ಲಿಂಗ್ ಎಲ್ಲಾ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಮಂಗಳೂರು ಪೊಲೀಸರು ನೋಡಿದ್ರೆ ಕಿಶೋರ್ ಶೆಟ್ಟಿ ಅನುಶ್ರೀ ವಿರುದ್ದ ಹೇಳಿಕೆ ಕೊಟ್ಟಿದ್ದಾರೆ ಅಂತ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇತ್ತ ಆರೋಪಿ ಸ್ತಾನದಲ್ಲಿರುವ ಕಿಶೋರ್ ಶೆಟ್ಟಿ ಚಾರ್ಜ್ ಶೀಟ್ ಸಲ್ಲಿಕೆಯಲ್ಲಿರುವ ಸ್ಟೇಟ್‌ಮೆಂಟ್ ನಾನು ಕೊಟ್ಟಿಲ್ಲ ಅಂತಿದ್ದಾರೆ. ಹಾಗಾದ್ರೆ, ಯಾವುದು ಸತ್ಯ? ಯಾವುದು ಸುಳ್ಳು? ಸದ್ಯಕ್ಕಂತೂ ಸರಿಯಾದ ಉತ್ತರವಿಲ್ಲದ
ಉತ್ತರವೇ ಕಣ್ಮುಂದೆ ರುದ್ರತಾಂಡವವಾಡ್ತಿದೆ. ಅಸಲಿ ಸತ್ಯ ಬೆಳಕಿಗೆ ಬರಬೇಕಿದೆ. ಅಲ್ಲಿವರೆಗೂ ಕಣ್ಣಿಗೆ ಬಟ್ಟೆಕಟ್ಟಿಕೊಂಡೇ ನ್ಯಾಯದೇವತೆ ತರ ಕಾಯೋಣ ಅಲ್ಲವೇ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಆ್ಯಂಕರ್ ಅನುಶ್ರೀಗೆ ಡ್ರಗ್ಸ್ ಕಂಟಕ; ನಶೆಯ ಸುಳಿಯಲ್ಲಿ ಸಿಲುಕ್ತಾರಾ ನಟಿ ಅನುಶ್ರೀ ?

ಕನ್ನಡದ ಖ್ಯಾತ ನಿರೂಪಕಿ ಕಮ್ ನಟಿ ಅನುಶ್ರೀಗೆ ಮತ್ತೆ ಕಂಟಕ ಎದುರಾಗಿದೆ. ಕಳೆದೊಂದು ವರ್ಷದ ಹಿಂದೆ ಡ್ರಗ್ಸ್ ಕೇಸ್ ಸಂಬಂಧ ಮಂಗಳೂರು ಪೊಲೀಸರ ಮುಂದೆ ಹಾಜರಾಗಿ ಸಿಸಿಬಿ ತನಿಖೆಯನ್ನ ಎದುರಿಸಿದ್ದರು. ಅದೇ ಡ್ರಗ್ಸ್ ಕೇಸ್ ಪ್ರಕರಣ ಇದೀಗ ಆಂಕರ್ ಕಮ್ ನಟಿ ಅನುಶ್ರೀಗೆ ಮುಳುವಾದಂತೆ ಕಾಣ್ತಿದೆ. ಪ್ರಕರಣದ ಎ2 ಆರೋಪಿಯಾಗಿರುವ ಡ್ಯಾನ್ಸರ್ ಕಿಶೋರ್ ಅಮನ್‌ಶೆಟ್ಟಿ ಅನುಶ್ರೀ ವಿರುದ್ದ ಹೇಳಿಕೆ ನೀಡಿದ್ದು, ಮಂಗಳೂರು ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ. ಅಷ್ಟಕ್ಕೂ, ಕಿಶೋರ್ ಪೊಲೀಸರ ಮುಂದೆ ನೀಡಿರುವ ಹೇಳಿಕೆಗಳೇನು? ಚಾರ್ಜ್‌ ಶೀಟ್‌ ಯಾವೆಲ್ಲಾ ಅಂಶಗಳು ಉಲ್ಲೇಖಗೊಂಡಿವೆ ಎಂಬುದರ ಸಂಪೂರ್ಣ ಡೀಟೈಲ್ಸ್ ಇಲ್ಲಿದೆ.

1 ಅನುಶ್ರೀ ಡ್ರಗ್ಸ್ ತಗೋತ್ತಾರೆ, ಅವರೊಟ್ಟಿಗೆ ನಾವು ಡ್ರಗ್ಸ್ ತಗೊಂಡಿದ್ದೇವೆ

2 ಡ್ರಗ್ಸ್ ಸೇವನೆ ಜೊತೆಗೆ ಸಾಗಾಟ ಕೂಡ ಮಾಡ್ತಾರೆ ಅನುಶ್ರೀ

3 ನಮ್ಮ ರೂಂಗೆ ಅನುಶ್ರೀ ಎಕ್ಸ್ಟೆಸಿ ಪಿಲ್ಸ್ ತರುತ್ತಿದ್ದರು

4 ಅನುಶ್ರೀ-ತರುಣ್ ಮತ್ತೆ ನಾನು ಮೂವರು ಸೇರಿ ಡ್ರಗ್ ಪಾರ್ಟಿ ಮಾಡ್ತಿದ್ದೆವು

5 ನನ್ನ ಸ್ನೇಹಿತ ತರುಣ್ ಕಡೆಯಿಂದ ಅನುಶ್ರೀ ಪರಿಚಯವಾಗಿತ್ತು

6 ಕುಣಿಯೋಣ ಬಾರ' ಡ್ಯಾನ್ಸ್ ಶೋನಲ್ಲಿ ತರುಣ್ ಮತ್ತು ನಾನು ಅನುಶ್ರೀಗೆ ಕೊರಿಯಾಗ್ರಫಿ ಮಾಡಿದ್ವಿ.

7 ತರುಣ್ ಬಾಡಿಗೆ ಮನೆಯಲ್ಲಿ ತಡರಾತ್ರಿವರೆಗೂ ಡ್ಯಾನ್ಸ್ ರಿಹರ್ಸಲ್ ನಡೆಯುತ್ತಿತ್ತು

8 ಡ್ಯಾನ್ಸ್ ರಿಹರ್ಸಲ್ ಮುಗಿಸಿದ್ಮೇಲೆ ಊಟಕ್ಕೂ ಮೊದಲು ಎಕ್ಸ್ಟೆಸಿ ಪಿಲ್ಸ್ ತೆಗೆದುಕೊಳ್ಳುತ್ತಿದ್ದೆವು

9 ಡ್ರಗ್ಸ್ ಸೇವಿಸಿ ಡ್ಯಾನ್ಸ್ ಮಾಡಿದರೆ ಅದರ ಕಿಕ್ಕೇ ಬೇರೆ ಎನ್ನುತ್ತಿದ್ದರು ಅನುಶ್ರೀ

10 ಕುಣಿಯೋಣ ಬಾರ’ ಶೋನಲ್ಲಿ ವಿನ್ ಆದ್ಮೇಲೆ ಡ್ರಗ್ಸ್ ಪಾರ್ಟಿ ಕೊಟ್ಟಿದ್ದರು


11 ಮಾದಕ ವಸ್ತು ಸೇವನೆ ಮಾಡಿ ಡ್ರಿಂಕ್ಸ್ ಪಾರ್ಟಿ ಮಾಡಿದ್ವಿ.

12 ಡ್ರಗ್ಸ್ ಎಲ್ಲಿಂದ ತರಿಸಿಕೊಳ್ಳುತ್ತಿದ್ದರು ಎಂಬ ಬಗ್ಗೆ ನನಗೇನು ಗೊತ್ತಿಲ್ಲ

13 ಬಹಳ ಸುಲಭವಾಗಿ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು, ಬಹುಷಃ ಅವರಿಗೆ ಡ್ರಗ್ಸ್ ಪೆಡ್ಲರ್‌ಗಳ ಪರಿಚಯ ಇರುತ್ತೆ

ಇದಿಷ್ಟು ಎ2 ಆರೋಪಿ ಕಿಶೋರ್ ಅಮನ್ ಶೆಟ್ಟಿ ಪೊಲೀಸರ ಮುಂದೆ ಕೊಟ್ಟಿರುವಂತಹ ಹೇಳಿಕೆಗಳು. ಈ ಎಲ್ಲಾ ಹೇಳಿಕೆಗಳನ್ನ ಆಧಾರವಾಗಿಟ್ಟುಕೊಂಡು ಮಂಗಳೂರು ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಆರೋಪಿ ಕಿಶೋರ್ ಶೆಟ್ಟಿ ಕೊಟ್ಟಿರುವ ಸ್ಟೇಟ್‌ಮೆಂಟ್ ಆಂಕರ್ ಕಮ್ ನಟಿ ಅನುಶ್ರೀಗೆ ಮುಳುವಾಗ್ಬೋದು ಎನ್ನುವ ಚರ್ಚೆ ಜೋರಾಗಿದೆ. ಕೋರ್ಟ್ ತನಿಖೆಗೆ ಆಗ್ರಹಿಸಿದರೆ ಕೇಸ್ ರೀ ಓಪನ್ ಆಗಲಿದೆ. ಕಿಶೋರ್ ಸ್ಟೇಟ್‌ಮೆಂಟ್‌ನಲ್ಲಿ ಒಂದ್ವೇಳೆ ಹುರುಳಿದ್ದರೆ ಅನುಶ್ರೀಗೆ ಡ್ರಗ್ಸ್ ಕಂಟಕ ಉರುಳಾಗಬಹುದು ಎನ್ನುವುದೇ ಕೂತೂಹಲ ಚರ್ಚಾ ಸಂಗತಿ.


ಕಿಶೋರ್ ಶೆಟ್ಟಿ ಹಾಗೂ ತರುಣ್ ಇಬ್ಬರು ಕೂಡ ಡ್ಯಾನ್ಸ್ ಕೊರಿಯಾಗ್ರಫರ್‌ಗಳು. ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸ್ಯಾಂಡಲ್‌ವುಡ್ ಡ್ರಗ್ ಕೇಸ್‌ಗೆ ಸಂಬಂಧ ಬೆಂಗಳೂರು ಸಿಸಿಬಿ ಪೊಲೀಸರು ಸುಮಾರು 20ಕ್ಕೂ ಹೆಚ್ಚು ಮಂದಿಯನ್ನ ವಿಚಾರಣೆಗೆ ಒಳಪಡಿಸಿದ್ದರು.

ಅದರಲ್ಲಿ ಎ.15 ಆರೋಪಿ ಪ್ರತೀಕ್ ಶೆಟ್ಟಿ ಕೊಟ್ಟಂತಹ ಸುಳಿವಿನಿಂದ ಕಿಶೋರ್ ಶೆಟ್ಟಿ ಹಾಗೂ ತರುಣ್ ಬಗ್ಗೆ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಬೆಂಗಳೂರು ಸಿಸಿಬಿ ಪೊಲೀಸರು, ಮಂಗಳೂರು ಸಿಸಿಬಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಕಿಶೋರ್ ಶೆಟ್ಟಿ ಹಾಗೂ ತರುಣ್‌ರನ್ನ ಬಂಧಿಸಿ ತನಿಖೆಗೆ ಒಳಪಡಿಸಿದ್ದರು. ಆಗ ಅವರುಗಳ ಕೊಟ್ಟ ಮಾಹಿತಿಯ ಮೇರೆಗೆ ಅನುಶ್ರೀಯವರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದ್ದರು.

2020 ಸೆಪ್ಟೆಂಬರ್ 26 ರಂದು ಮಾಧ್ಯಮಗಳ ಮುಂದೆ ಹಾಜರಾಗಿದ್ದ ಅನುಶ್ರೀ, ಕಿಶೋರ್ ಶೆಟ್ಟಿ ಹಾಗೂ ತರುಣ್ ಇಬ್ಬರು ಕೂಡ `ಕುಣಿಯೋಣ ಬಾರ’ ಡ್ಯಾನ್ಸ್ ರಿಯಾಲಿಟಿ ಶೋಗೆ ಕೊರಿಯಾಗ್ರಫಿ ಮಾಡಿದ್ದರು. ಆದರೆ, ಸದ್ಯಕ್ಕೆ ಅವರೊಟ್ಟಿಗೆ ನನಗೆ ಒಡನಾಟ ಇಲ್ಲ. ಕಳೆದ ಹನ್ನೆರಡು ವರ್ಷಗಳ ಹಿಂದೆ ಕೊರಿಯಾಗ್ರಫಿ ಮಾಡಿದ್ದರು ಅನ್ನೋದು ಬಿಟ್ಟರೆ ಅವರೊಟ್ಟಿಗೆ ವೈಯಕ್ತಿಕವಾಗಿ ನಾನು ಸಂಪರ್ಕ ಇಟ್ಟುಕೊಂಡಿಲ್ಲ. ಕಿಶೋರ್ ಅವರ ಒಡೆತನದ ಡ್ಯಾನ್ಸ್ ಕ್ಲಾಸ್ ಉದ್ಘಾಟನೆ ಮಾಡಿಕೊಟ್ಟಿದ್ದೇನೆ ಬಿಟ್ಟರೆ ಮತ್ಯಾವ ನಂಟು ಕೂಡ ಅವರೊಂದಿಗಿಲ್ಲ ಎಂದು ಹೇಳಿಕೊಂಡಿದ್ದರು. ಇದನ್ನ ಕಿಶೋರ್ ಕೂಡ ಸಿಸಿಬಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಆದರೆ, ಡ್ರಗ್ಸ್ ತೆಗೆದುಕೊಳ್ಳುತ್ತಿದ್ದದ್ದು ಮಾತ್ರ ಸತ್ಯ ಎನ್ನುವ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಇದೊಂದೇ ಹೇಳಿಕೆ ಅನುಶ್ರೀಗೆ ಸಂಕಷ್ಟ ತಂದೊಡಿದೆ. ಮುಂದೇನಾಗಲಿದೆ ಈ ಕೇಸ್ ಕೂತೂಹಲದಿಂದ ಕಾಯಬೇಕು ಅಷ್ಟೇ.

Categories
ಸಿನಿ ಸುದ್ದಿ

ತಮಿಳು ನಾಡಿನಲ್ಲೂ ಸಲಗನ ಹವಾ

ಕನ್ನಡದಲ್ಲೀಗ ಸಿನಿಮಾ ಬಿಡುಗಡೆಗೆ ಸಾಲು ಸಾಲು ಚಿತ್ರಗಳು ರೆಡಿಯಾಗಿವೆ.‌ಆ‌ ಸಾಲಿಗೆ ದುನಿಯಾ ವಿಜಯ್ ಅಭಿನಯದ ಸಲಗ ಕೂಡ ರೆಡಿಯಾಗಿದೆ.

ಸಲಗ ಆರಂಭದಿಂದಲೂ ಜೋರು ಸದ್ದು ಮಾಡುತ್ತಲೇ ಬಂದಿದೆ. ಈಗ ಹೊಸ ಸುದ್ದಿ ಅಂದರೆ ತಮಿಳುನಾಡಲ್ಲೂ ಸಲಗ ಸದ್ದು ಮಾಡುತ್ತಿದೆ.


ಹೌದು, ದುನಿಯಾ ವಿಜಯ್ ಅವರ ತಮಿಳು ಅಭಿಮಾನಿಗಳಿಂದ ವಿಜಯ್ ಅವರಿಗೆ ಜೈಕಾರ ಸಿಕ್ಕಿದೆ. ಇತ್ತೀಚೆಗೆ ತಮಿಳು ನಾಡಿಗೆ ದುನಿಯಾ ವಿಜಯ್ ಅವರು ಭೇಟಿ‌ ಕೊಟ್ಟ ಸಂದರ್ಭದಲ್ಲಿ ಅಲ್ಲಿನ ಅಭಿಮಾನಿಗಳು ಸಲಗ ಚಿತ್ರದ ಮೇಲಿಟ್ಟಿರೋ ಕ್ರೇಜ್ ಹಾಗೂ ವಿಜಯ್ ಅವರ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ರೀತಿ ಇದು.

Categories
ಸಿನಿ ಸುದ್ದಿ

ಸರಿಗಮಪ ಸಂಗೀತ ಮಹಾಯುದ್ಧ ; ಕಂಠದ ಜೊತೆ ಗೆದ್ದವರ ಕಾದಾಟ ! ವಿನ್ನರ್ಸ್ ಜೊತೆ ರನ್ನರ್ಸ್ ಇರ್ತಾರಾ?

ಜೀ‌ ಅಖಾಡದಲ್ಲಿ ಸರಿಗಮಪ ಮಹಾಯುದ್ಧಕ್ಕೆ ಕೌಂಟ್ ಡೌನ್ ಶುರುವಾಗಿದೆ. ದಿವ್ಯಮುಹೂರ್ತದಲ್ಲಿ ಸಂಗೀತ ಸಮರ ಏರ್ಪಡಿಸುವುದಕ್ಕೆ ಸಕಲ ಸಿದ್ದತೆ ನಡೆದಿದೆ. ಸರಿಗಮಪ ಸಿಂಗಿಂಗ್ ಶೋಗೆ ಹೊಸ ರೂಪ ಸಿಕ್ಕಿದ್ದು, ಸರಿಗಮಪ ಚಾಂಪಿಯನ್ ಶಿಪ್ ಅದ್ಧೂರಿಯಾಗಿ ಆರಂಭವಾಗ್ತಿದೆ.

ಸರಿಗಮಪ ಮನರಂಜನಾ ಲೋಕದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ. ಜೀ ಕನ್ನಡದ ಹೆಮ್ಮೆಯ ಸಂಗೀತ ಕಾರ್ಯಕ್ರಮ. ಇಲ್ಲಿವರೆಗೂ ಭರ್ತಿ ಹದಿನೇಳು ಸೀಸನ್ ಗಳನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿರುವ ಸರಿಗಮಪ
ಕಾರ್ಯಕ್ರಮಕ್ಕೆ ಹೊಸ ರೂಪ ಸಿಕ್ಕಿದೆ. ಸರಿಗಮಪ‌ ಚಾಂಪಿಯನ್ ‌ಶಿಪ್ ಅದ್ಧೂರಿ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ರಿಲೀಸ್ ಆಗಿರುವ ಪ್ರೋಮೋ ಕೂತೂಹಲ ಮೂಡಿಸಿದೆ.

ಈ ಶೋ ಗಾಗಿ ಇಡೀ ಕರುನಾಡು ಕೂತೂಹಲದಿಂದ
ಕಾಯುತ್ತೆ. ಯಾಕಂದ್ರೆ, ಕರುನಾಡ ಮೂಲೆಮೂಲೆಯಲ್ಲಿ ಎಲೆಮರೆಕಾಯಿಯಂತಿದ್ದ ಪ್ರತಿಭೆಗಳನ್ನ ಕರೆತಂದು, ಕಂಠದೊಳಗಿದ್ದ ಕಸುವನ್ನ ಕನ್ನಡಿಗರ ಮುಂದೆ ಅನಾವರಣ ಮಾಡಿ ಕರುನಾಡ ಮಡಿಲಿಗೆ ಗಾನಕೋಗಿಲೆಗಳನ್ನ ಅರ್ಪಣೆ ಮಾಡ್ತಾರೆ. ಆದರೆ, ಈ‌ ಭಾರಿ ಸ್ವರಾನ್ವೇಷಣೆಗೆ ಬ್ರೇಕ್ ಹಾಕಿದ್ದಾರೆ. ಬದಲಾಗಿ, ಈಗಾಗಲೇ ಸರಿಗಮಪ ಸ್ವರಸಾಮ್ರಾಜ್ಯದಲ್ಲಿ ಕಂಠಕುಣಿಸಿ ಸೈ‌ ಎನಿಸಿಕೊಂಡು ಕಿರೀಟ ಮುಡಿಗೇರಿಸಿಕೊಂಡವರನ್ನು ಮತ್ತೆ ವೇದಿಕೆಗೆ ಕರೆತರುತ್ತಿದ್ದಾರೆ. ಸರಿಗಮಪ ಚಾಂಪಿಯನ್ ಶಿಪ್ ಅಂಗಳದಲ್ಲಿ ಬರೀ ವಿನ್ನರ್ಸ್ ಇರುತ್ತಾರಾ? ಅಥವಾ ರನ್ನರ್ ಅಪ್ಸ್ ಗಳಿಗೂ ಅವಕಾಶ ಕೊಡ್ತಾರಾ ಎನ್ನುವುದು ಸದ್ಯಕ್ಕಿರುವ ಕೂತೂಹಲ.

ಸರಿಗಮಪ ಕೇವಲ ಸಿಂಗಿಂಗ್ ಶೋ‌ ಅಲ್ಲ. ಕಲೆಯಿದ್ದು ಕತ್ತಲೆ ತುಂಬಿದ ಎಷ್ಟೋ ಜನರ ಬಾಳಿಗೆ ಬೆಳಕಾದ ದಿವ್ಯಕಾರ್ಯಕ್ರಮ. ಹೀಗಾಗಿಯೇ, ಕಣ್ಣಿಲ್ಲದ ಸಹೋದರಿಯರಾದ ರತ್ನಮ್ಮ- ಮಂಜಮ್ಮ ಸೇರಿದಂತೆ ಮೋನಮ್ಮ, ಸಂಗೀತವ್ವ, ರುಬೀನಾ, ಹಳ್ಳಿಹೈದ ಹನುಮಂತ, ಸುನೀಲ್, ಮೆಹಬೂಬ್ ಸಾಬ್, ಇವರಷ್ಟೇ ಅಲ್ಲ‌ ಬಹುತೇಕ ಗ್ರಾಮೀಣ ಪ್ರತಿಭೆಗಳ ಪರಿಚಯವಾಯ್ತು. ತಮ್ಮೊಳಗಿನ ಪ್ರತಿಭೆ ಅರವಿಟ್ಟ ಇವರೆಲ್ಲರೂ ಕೂಡ ಕರುನಾಡ ಅಂಗಳದಲ್ಲಿ ಮೆರವಣಿಗೆ ಹೋಗಿಬಂದರು. ಇವರಲ್ಲಿ ಗೆಲುವಿನ‌ ಗದ್ದುಗೆ ಏರಿದವರಿಗೆ ಮತ್ತೊಮ್ಮೆ ಅವಕಾಶ ಸಿಗುತ್ತಾ ಕಾದು ನೋಡಬೇಕು.

ಅಂದ್ಹಾಗೇ, ಸರಿಗಮಪ ಚಾಂಪಿಯನ್ ಶಿಪ್ ಗೆದ್ದವರು ಮತ್ತೊಮ್ಮೆ ಗೆಲುವಿದ ಗದ್ದುಗೆಗಾಗಿ ಕಂಠದ ಜೊತೆ ಕಾದಾಡುವಂತಹ ಶೋ. ಸರಿಗಮಪ ಕಿರೀಟ ಮುಡಿಗೇರಿಸಿಕೊಂಡು ವಿಜೃಂಭಿಸಿದವರಿಗೆ ಮತ್ತೊಮ್ಮೆ ಸ್ವರಸಾಮ್ರಾಜ್ಯಕ್ಕೆ ಲಗ್ಗೆ ಇಡುವ ಅವಕಾಶ ಸಿಗುತ್ತಿದೆ. ಮಹಾಗುರುಗಳಾದ
ನಾದಬ್ರಹ್ಮ ಹಂಸಲೇಖ ಅವರೊಟ್ಟಿಗೆ ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ಸಾರಥ್ಯದಲ್ಲಿ ಹಲವು ಸಂಗೀತ ದಿಗ್ಗಜರ ಸಮ್ಮುಖದಲ್ಲಿ ಚಾಂಪಿಯನ್ ಶಿಪ್ ಅದ್ದೂರಿ ಓಪನ್ನಿಂಗ್ ಪಡೆದುಕೊಳ್ಳಲಿದೆ. ಹೇಗಿರಲಿದೆ ಗೆದ್ದವರ ಸ್ವರಸಮರ ? ಕಣ್ಣರಳಿಸಿ ಕಾಯ್ತಾಯಿರಿ. ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ.

ಎಂಟರ್‌ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಡಿಸೆಂಬರ್‌ನಲ್ಲಿ ಸಿನಿಮಾ ಮದ! ಪ್ರೇಕ್ಷಕರ ಮುಂದೆ ಬರಲು ಮದಗಜ ಜೋರು ತಯಾರಿ…


ಶ್ರೀಮುರಳಿ ಮತ್ತು ಮಹೇಶ್‌ ಕಾಂಬಿನೇಷನ್‌ನ ಮೊದಲ ಸಿನಿಮಾ. ಇನ್ನು, ಉಮಾಪತಿ ನಿರ್ಮಾಣದ ಸಿನಿಮಾ ಅಂದಮೇಲೆ, ಭರ್ಜರಿಯಾಗಿಯೇ ಇರುತ್ತೆ. ನಿರ್ದೇಶಕ ಮಹೇಶ್‌ ತಮ್ಮ ಮೊದಲ ಸಿನಿಮಾ “ಆಯೋಗ್ಯ”ದಲ್ಲೇ ಭರ್ಜರಿ ಸಕ್ಸಸ್‌ ಕಂಡವರು. ಅದೇ ಸಕ್ಸಸ್‌ ಉಳಿಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ “ಮದಗಜ” ಚಿತ್ರಕ್ಕೆ ಹಗಲಿರುಳು ಶ್ರಮಿಸಿದ್ದಾರೆ. ಒಂದೊಳ್ಳೆಯ ತಂಡ ಕಟ್ಟಿಕೊಂಡು ತಾವು ಅಂದುಕೊಂಡಂತೆಯೇ ಸಿನಿಮಾ ಮಾಡಿ ಮುಗಿಸಿದ್ದಾರೆ

ಮದಗಜ ಸದ್ಯದ ಮಟ್ಟಿಗೆ ಬಹು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ ಈ ಚಿತ್ರ ಶೀರ್ಷಿಕೆ ಅನಾವರಣದಿಂದಲೇ ಸಾಕಷ್ಟು ಕುತೂಹಲ ಕೆರಳಿಸಿತ್ತು. ಚಿತ್ರೀಕರಣ ನಡೆಯುವ ಸಂದರ್ಭದಲ್ಲೂ ಆ ಕುತೂಹಲ ಉಳಿಸಿಕೊಂಡಿದ್ದು ಸುಳ್ಳಲ್ಲ. ಇತ್ತೀಚೆಗಷ್ಟೇ ಚಿತ್ರೀಕರಣ ಮುಕ್ತಾಯಗೊಂಡಿದೆ. ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಹೌದು, ಶ್ರೀಮುರಳಿ ಅವರ ಮತ್ತೊಂದು ನಿರೀಕ್ಷಿತ ಸಿನಿಮಾ ಇದು. ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಈಗ ಬಿಡುಗಡೆಯ ತಯಾರಿ ನಡೆಸುತ್ತಿದೆ.

ನಿರ್ದೇಶಕ ಮಹೇಶ್‌ ಅವರು, “ಮದಗಜ” ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಅದರಂತೆಯೇ ಅವರು ಯಶಸ್ವಿಯಾಗಿಯೇ ಚಿತ್ರೀಕರಣ ಮಾಡಿದ್ದಾರೆ. ಕನ್ನಡದಲ್ಲಿ ಮತ್ತೊಂದು ಅದ್ಧೂರಿ ಸಿನಿಮಾ ಇದು. ಅದರಲ್ಲೂ ಶ್ರೀಮುರಳಿ ಮತ್ತು ಮಹೇಶ್‌ ಕಾಂಬಿನೇಷನ್‌ನ ಮೊದಲ ಸಿನಿಮಾ. ಇನ್ನು, ಉಮಾಪತಿ ನಿರ್ಮಾಣದ ಸಿನಿಮಾ ಅಂದಮೇಲೆ, ಭರ್ಜರಿಯಾಗಿಯೇ ಇರುತ್ತೆ. ನಿರ್ದೇಶಕ ಮಹೇಶ್‌ ಅವರು ತಮ್ಮ ಮೊದಲ ಸಿನಿಮಾ “ಆಯೋಗ್ಯ”ದಲ್ಲೇ ಭರ್ಜರಿ ಸಕ್ಸಸ್‌ ಕಂಡವರು. ಅದೇ ಸಕ್ಸಸ್‌ ಉಳಿಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ “ಮದಗಜ” ಚಿತ್ರಕ್ಕೆ ಹಗಲಿರುಳು ಶ್ರಮಿಸಿದ್ದಾರೆ. ಒಂದೊಳ್ಳೆಯ ತಂಡ ಕಟ್ಟಿಕೊಂಡು ತಾವು ಅಂದುಕೊಂಡಂತೆಯೇ ಸಿನಿಮಾ ಮಾಡಿ ಮುಗಿಸಿದ್ದಾರೆ.

ಈಗ “ಮದಗಜ” ಜೋರು ಸದ್ದು ಮಾಡಾಗಿದೆ. ಪ್ರೇಕ್ಷಕರ ಮುಂದೆ ಬರುವುದಕ್ಕೂ ತಯಾರಿ ನಡೆಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, “ಮದಗಜ” ಡಿಸೆಂಬರ್‌ನಲ್ಲಿ ದರ್ಶನ ನೀಡಲಿದ್ದಾನೆ. ಅದಕ್ಕಾಗಿ ಚಿತ್ರತಂಡ ಪ್ಲ್ಯಾನ್‌ ಮಾಡುತ್ತಿದೆ. ಈಗಾಗಲೇ ಒಂದು ಸುತ್ತಿನ ಚರ್ಚೆ ಕೂಡ ನಡೆಸಿರುವ ಚಿತ್ರತಂಡ, ಡಿಸೆಂಬರ್‌ ವೇಳೆಗೆ “ಮದಗಜ”ನನ್ನು ಪ್ರೇಕ್ಷಕರ ಮುಂದೆ ತರಬೇಕು ಎಂಬ ಮಾತುಕತೆ ನಡೆದಿದೆ. ಈ ಕಾರಣದಿಂದಲೇ ನಿರ್ದೇಶಕ ಮಹೇಶ್‌ ಅವರು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಇದೊಂದು ಭರ್ಜರಿ ಬಜೆಟ್‌ ಸಿನಿಮಾ. ಅಷ್ಟೇ ಮಾಸ್‌ ಎಲಿಮೆಂಟ್ಸ್‌ ಕೂಡ ಇಲ್ಲಿರಲಿವೆ.

ಶ್ರೀಮುರಳಿ ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್‌ ಕಾಣಿಸಿಕೊಂಡಿದ್ದಾರೆ. ಶ್ರೀಮುರಳಿ ಅವರೊಂದಿಗೆ ಮೊದಲ ಸಲ ತೆರೆ ಹಂಚಿಕೊಳ್ಳುತ್ತಿದ್ದಾರೆ ಆಶಿಕಾ. ಸದ್ಯ ಆಶಿಕಾ ಅವರ ಎರಡು ಲುಕ್‌ ಬಿಡುಗಡೆಯಾಗಿದ್ದು, ಅದೊಂದು ಹಳ್ಳಿ ಹುಡುಗಿಯ ಪಾತ್ರ ಎಂಬುದನ್ನು ಪೋಸ್ಟರ್‌ ಹೇಳಿದೆ. ಇನ್ನೊಂದು ಪೋಸ್ಟರ್‌ ಕೂಡ ಮಾಸ್‌ ಲುಕ್‌ನಲ್ಲಿದೆ. ಅದರಲ್ಲೂ ಆಶಿಕಾ ಅವರು ಕೈಯಲ್ಲಿ ಸಿಗರೇಟ್‌ ಹಿಡಿದು ಧಮ್‌ ಹೊಡಿತಿರೋ ಪೋಸ್ಟರ್‌ ಕೂಡ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ, ತೆಲುಗಿನ ಜಗಪತಿ ಬಾಬು ಅವರಿಲ್ಲಿ ವಿಲನ್‌ ಆಗಿ ನಟಿಸಿದ್ದಾರೆ. ಅವರ ಪಾತ್ರದ ಕುರಿತ ಒಂದು ಟೀಸರ್‌ ಕೂಡ ರಿಲೀಸ್‌ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದಿದೆ. ಮತ್ತೊಂದು ವಿಶೇಷವೆಂದರೆ,
ದಕ್ಷಿಣ ಭಾರತದ ಖ್ಯಾತ ನಟಿ ದೇವಯಾನಿ ‘ಮದಗಜ’ ಚಿತ್ರದ ಮೂಲಕ ಎರಡು ದಶಕದ ಬಳಿಕ ಎಂಟಿರಯಾಗಿದ್ದಾರೆ.

Categories
ಸಿನಿ ಸುದ್ದಿ

`ಪುಷ್ಪ’ ಜೊತೆ ಡಿಜೆ ವರ್ಕೌಟ್; ಫಿಟ್ನೆಸ್ ಫ್ರೀಕ್ ಚಕ್ರವರ್ತಿ ಚಂದ್ರಚೂಡ್ !

ಡಿ.ಜೆ ಚಕ್ರವರ್ತಿಯವರ ಹೊಸ ಜಿಮ್ ಪಾರ್ಟ್ನರ್ ಇವರು. ಇವರ ಹೆಸರು ಪುಷ್ಪ. ಇತ್ತೀಚೆಗೆ ಚಕ್ರವರ್ತಿ ಚಂದ್ರಚೂಡ್ ಅವರು ಪುಷ್ಪ ಜೊತೆ ವರ್ಕೌಟ್ ಮಾಡಿದ್ದಾರೆ. ಮೈ ಬೆವರಿಳಿಸಿ, ಕೊಬ್ಬು ಕರಗಿಸಿ ಇರೋಬರೋ ಪ್ಯಾಕ್ಸೆಲ್ಲಾ ಬರಿಸಿಕೊಂಡಿದ್ದಾರೆ. ಡಿಜೆ ಪ್ಲಸ್ ಪುಷ್ಪ ವರ್ಕೌಟ್ ಕಥೆ ಇಲ್ಲಿದೆ ನೋಡಿ

ಚಕ್ರವರ್ತಿ ಚಂದ್ರಚೂಡ್ ಸಾಮಾಜಿಕ ಹೋರಾಟಗಾರರು, ಬರಹಗಾರರು, ಪತ್ರಕರ್ತರು ಕಮ್ ಬಿಗ್‌ಬಾಸ್ ಸೀಸನ್ ೮ರ ಪ್ರಬಲ ಸ್ಪರ್ಧಿ. ದೊಡ್ಮನೆಯಲ್ಲಿ ಟಫ್ ಕಾಂಪಿಟೇಷನ್ ಕೊಟ್ಟು ಟಾಪ್ ಫೈವ್ ವರೆಗೂ ಬಂದಿದ್ದರು. ಕೊನೆಗೆ ಕಿಚ್ಚನ ಅಕ್ಕ-ಪಕದಲ್ಲಿ ನಿಲ್ಲೋದಕ್ಕೆ ಆಗಲಿಲ್ಲ. ಬಿಗ್‌ಬಾಸ್ ವಿನ್ನರ್-ರನ್ನರ್ ಅಪ್ ಕಿರೀಟ ಗೆಲ್ಲದೇ ಇದ್ದರೆ ಏನಂತೆ? ಬಾದ್ ಷಾ ಬರ್ತ್ಡೇಗೆ ಸುದೀಪಿಯನ್ಸ್'ಸಾಂಗ್‌ನ ಗಿಫ್ಟ್ ಮಾಡಿ ಕಿಚ್ಚನ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದರು.ಮಾಣಿಕ್ಯನ ಹೆತ್ತವರು ಮಾತ್ರವಲ್ಲ ಅಭಿನಯ ಚಕ್ರವರ್ತಿಯೂ ಖುಷಿಪಡುವಂತೆ ಮತ್ತು ಹೆಮ್ಮೆಪಡುವಂತೆ ಮಾಡಿದರು.ಈಗ ಪುಷ್ಪ’ ಜೊತೆ ವರ್ಕೌಟ್ ಮಾಡಿ ಚಕ್ರವರ್ತಿಯವರು ಸೌಂಡ್ ಮಾಡ್ತಿದ್ದಾರೆ.

ಪುಷ್ಪ ಅಂದಾಕ್ಷಣ ಯಾವ್ ಪುಷ್ಪ? ಏನ್ ಸಮಾಚಾರ? ಎನ್ನುವ ಕೂತೂಹಲ ಹೆಚ್ಚುತ್ತೆ. ಆ ಕ್ಯೂರಿಯಾಸಿಟಿಗೆ ಬ್ರೇಕ್ ಹಾಕಬೇಕು ಅಂದರೆ ಚಕ್ರವರ್ತಿ ವರ್ಕೌಟ್ ವಿತ್ ಪುಷ್ಪ' ಕಥೆನಾ ಹೇಳಲೆಬೇಕು.ಚಕ್ರವರ್ತಿ ಚಂದ್ರಚೂಡ್ ಅವರು ಫಿಟ್ನೆಸ್ ಫ್ರೀಕ್. ಜಿಮ್ಮು-ವರ್ಕೌಟ್-ಡಯಟ್ ಅಂತ ಕಟ್ಟುನಿಟ್ಟಾಗಿ ಪಾಲಿಸುತ್ತಾ ಫಿಟ್ ಅಂಡ್ ಫೈನ್ ಆಗಿರೋದಕ್ಕೆ ಬಯಸ್ತಾರೆ.ಇತ್ತೀಚೆಗೆ ಜಿಮ್‌ನಲ್ಲಿ ಮೈ ಬೆವರಿಳಿಸೋದಕ್ಕೆಪುಷ್ಪ’ ಸಪೋರ್ಟ್ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ, ಆ ಪುಷ್ಪ ಹುಡುಗನೂ ಅಲ್ಲ…ಹುಡುಗಿನೂ ಅಲ್ಲ… ಆಂಟಿನೂ ಅಲ್ಲ.. ಅಂಕಲ್ಲು ಅಲ್ಲ.. ಹಾಗಾದ್ರೆ ಮತ್ಯಾರು ಅಂತೀರಾ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ `ಪುಷ್ಪ’ ಸಿನಿಮಾ ಗುರು

ಯಸ್, ಚಕ್ರವರ್ತಿ ಚಂದ್ರಚೂಡ್ ಅವರು ಇತ್ತೀಚೆಗೆ ಜಿಮ್ ಮಾಡುವಾಗ ಪುಷ್ಪ' ಸಪೋರ್ಟ್ ತೆಗೆದುಕೊಂಡಿದ್ದಾರೆ.ಬೆಳಕನು ತಿಂತದೆ ಎಲೆ. ಎಲೆಯನು ತಿಂತದೆ ಮೇಕೆ. ಮೇಕೆಯನು ತಿಂತದೆ ಹುಲಿ.ಇದು ಹಸಿವಿನ ಹಾವಳಿ.. ಇದು `ಪುಷ್ಪ’ ಸಿನಿಮಾದ ಕನ್ನಡ ವರ್ಷನ್ ಹಾಡು. ಈ ಸಾಂಗ್‌ನ ಪ್ಲೇ ಮಾಡಿಕೊಂಡು ಡಂಬಲ್ಸ್ ನ ಎತ್ತಿ-ಇಳಿಸಿದ್ದಾರೆ. ಫಿಟ್ ಅಂಡ್ ಫೈನ್ ಆಗಿರಲು ಹೀರೋಗಳು ವರ್ಕೌಟ್ ಮಾಡಿದಂತೆ, ಕಟ್ಟುಮಸ್ತಾದ ದೇಹವನ್ನು ಕಾಪಾಡಿಕೊಳ್ಳೋದಕ್ಕೆ ಚಂದ್ರಚೂಡ್ ಅವರು ಜಿಮ್‌ನಲ್ಲಿ ಕಸರತ್ತು ಶುರುವಿಟ್ಟುಕೊಂಡಿದ್ದಾರೆ.

ಅಂದ್ಹಾಗೇ, ವರ್ಕೌಟ್ ಮಾಡುವಾಗ ಬ್ಯಾಗ್ರೌಂಡ್‌ನಲ್ಲಿ ಯಾವುದಾದರೊಂದು ಸಾಂಗ್ ಪ್ಲೇ ಆಗ್ಬೇಕು. ಥ್ರೆಡ್ ಮಿಲ್ ಮೇಲೆ ಓಡುವಾಗ, ವೇಯ್ಟ್ ಲಿಫ್ಟಿಂಗ್ ಮಾಡುವಾಗ, ಬೈಸೆಪ್ ವರ್ಕೌಟ್ ಮಾಡುವಾಗ ಸಾಂಗ್ ಪ್ಲೇ ಆದರೆ ಅದರ ಕಿಕ್ಕೇ ಬೇರೆ. ಹೀಗಾಗಿ, ಜಿಮ್‌ನಲ್ಲಿ ಸಾಂಗ್ ಹವಾ ಜೋರಾಗಿರುತ್ತೆ. ಫಿಟ್ನೆಸ್ ಫ್ರೀಕ್‌ಗಳನ್ನ ಚಿಯರ್ ಅಪ್ ಮಾಡುತ್ತಿರುತ್ತೆ. ಸದ್ಯಕ್ಕೆ, ಡಿಜೆ ಚಕ್ರವರ್ತಿಯವರಿಗೆ ಪುಷ್ಪ ಸಾಂಗ್ ಚಿಯರ್ ಅಪ್ ಮಾಡ್ತಿದೆ.

error: Content is protected !!