ಕನ್ನಡದಲ್ಲೀಗ ಸಿನಿಮಾ ಬಿಡುಗಡೆಗೆ ಸಾಲು ಸಾಲು ಚಿತ್ರಗಳು ರೆಡಿಯಾಗಿವೆ.ಆ ಸಾಲಿಗೆ ದುನಿಯಾ ವಿಜಯ್ ಅಭಿನಯದ ಸಲಗ ಕೂಡ ರೆಡಿಯಾಗಿದೆ.
ಸಲಗ ಆರಂಭದಿಂದಲೂ ಜೋರು ಸದ್ದು ಮಾಡುತ್ತಲೇ ಬಂದಿದೆ. ಈಗ ಹೊಸ ಸುದ್ದಿ ಅಂದರೆ ತಮಿಳುನಾಡಲ್ಲೂ ಸಲಗ ಸದ್ದು ಮಾಡುತ್ತಿದೆ.
ಹೌದು, ದುನಿಯಾ ವಿಜಯ್ ಅವರ ತಮಿಳು ಅಭಿಮಾನಿಗಳಿಂದ ವಿಜಯ್ ಅವರಿಗೆ ಜೈಕಾರ ಸಿಕ್ಕಿದೆ. ಇತ್ತೀಚೆಗೆ ತಮಿಳು ನಾಡಿಗೆ ದುನಿಯಾ ವಿಜಯ್ ಅವರು ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲಿನ ಅಭಿಮಾನಿಗಳು ಸಲಗ ಚಿತ್ರದ ಮೇಲಿಟ್ಟಿರೋ ಕ್ರೇಜ್ ಹಾಗೂ ವಿಜಯ್ ಅವರ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ರೀತಿ ಇದು.