ಡ್ರಗ್ಸ್ ಪ್ರಕರಣದಲ್ಲಿ ಯಾರನ್ನೂ ಕೈ ಬಿಡುವುದಿಲ್ಲ- ಗೃಹ ಸಚಿವ ಆರಗ ಜ್ಞಾನೇಂದ್ರ

ಡ್ರಗ್ಸ್‌ ಪ್ರಕರಣದಲ್ಲೀಗ ಸರ್ಕಾರ ಎಲ್ಲರಿಗೂ ನಡುಕ ಹುಟ್ಟಿಸಿದೆ. ಕೆಲವು ಸಿನಿಮಾ ತಾರೆಯರ ಮಾದಕ ಜಾಲದ ಪ್ರಕರಣಗಳು ಮತ್ತೆ ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲೇ ಗೃಹ ಸಚಿವ ಜ್ಞಾನೇಂದ್ರ ಖಡಕ್ ಹೇಳಿಕೆ ನೀಡಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ರಾಜಿ‌ಮಾತೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದಕವಸ್ತು ಪ್ರಕರಣದಲ್ಲಿ ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟ ಪಡಿಸಿದರು.


‘ಚಲನಚಿತ್ರ ನಟಿ ಅನುಶ್ರೀ ಇರಲಿ, ಯಾರೇ ಆಗಿರಲಿ ಅವರ ವಿಷಯದಲ್ಲಿ ರಾಜಕೀಯ ಒತ್ತಡವೇನಿಲ್ಲ. ಮಾದಕವಸ್ತು ಪ್ರಕರಣ ಇದಾಗಿರುವುದರಿಂದ ಯಾರೂ ಒತ್ತಡ ಹಾಕುವುದಿಲ್ಲ. ಇಂತಹ ಪ್ರಕರಣದಲ್ಲಿ ನಮ್ಮ ಸರ್ಕಾರವು ಬಹಳಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಯಾರೇ ಕಾನೂನು ಬಾಹಿರ ಚಟುವಟಿಕೆ ನಡೆಸಿದರೂ ನಾವು ಸುಮ್ಮನಿರುವುದಿಲ್ಲ. ಇಲ್ಲಿ ಅಪರಾಧ ಚಟುವಟಿಕೆಗೆ ಜಾಗ ಇಲ್ಲ.ಅಪರಾಧಿ ಎನಿಸಿದವರು ಶಿಕ್ಷೆಗೆ ಗುರಿಯಾಗುವುದು ಖಚಿತ. ಎಷ್ಟೇ ಪ್ರಭಾವಿಗಳಾಗಿದ್ದರೂ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

Related Posts

error: Content is protected !!