ಆ್ಯಂಕರ್ ಅನುಶ್ರೀಗೆ ಡ್ರಗ್ಸ್ ಕಂಟಕ; ನಶೆಯ ಸುಳಿಯಲ್ಲಿ ಸಿಲುಕ್ತಾರಾ ನಟಿ ಅನುಶ್ರೀ ?

ಕನ್ನಡದ ಖ್ಯಾತ ನಿರೂಪಕಿ ಕಮ್ ನಟಿ ಅನುಶ್ರೀಗೆ ಮತ್ತೆ ಕಂಟಕ ಎದುರಾಗಿದೆ. ಕಳೆದೊಂದು ವರ್ಷದ ಹಿಂದೆ ಡ್ರಗ್ಸ್ ಕೇಸ್ ಸಂಬಂಧ ಮಂಗಳೂರು ಪೊಲೀಸರ ಮುಂದೆ ಹಾಜರಾಗಿ ಸಿಸಿಬಿ ತನಿಖೆಯನ್ನ ಎದುರಿಸಿದ್ದರು. ಅದೇ ಡ್ರಗ್ಸ್ ಕೇಸ್ ಪ್ರಕರಣ ಇದೀಗ ಆಂಕರ್ ಕಮ್ ನಟಿ ಅನುಶ್ರೀಗೆ ಮುಳುವಾದಂತೆ ಕಾಣ್ತಿದೆ. ಪ್ರಕರಣದ ಎ2 ಆರೋಪಿಯಾಗಿರುವ ಡ್ಯಾನ್ಸರ್ ಕಿಶೋರ್ ಅಮನ್‌ಶೆಟ್ಟಿ ಅನುಶ್ರೀ ವಿರುದ್ದ ಹೇಳಿಕೆ ನೀಡಿದ್ದು, ಮಂಗಳೂರು ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ. ಅಷ್ಟಕ್ಕೂ, ಕಿಶೋರ್ ಪೊಲೀಸರ ಮುಂದೆ ನೀಡಿರುವ ಹೇಳಿಕೆಗಳೇನು? ಚಾರ್ಜ್‌ ಶೀಟ್‌ ಯಾವೆಲ್ಲಾ ಅಂಶಗಳು ಉಲ್ಲೇಖಗೊಂಡಿವೆ ಎಂಬುದರ ಸಂಪೂರ್ಣ ಡೀಟೈಲ್ಸ್ ಇಲ್ಲಿದೆ.

1 ಅನುಶ್ರೀ ಡ್ರಗ್ಸ್ ತಗೋತ್ತಾರೆ, ಅವರೊಟ್ಟಿಗೆ ನಾವು ಡ್ರಗ್ಸ್ ತಗೊಂಡಿದ್ದೇವೆ

2 ಡ್ರಗ್ಸ್ ಸೇವನೆ ಜೊತೆಗೆ ಸಾಗಾಟ ಕೂಡ ಮಾಡ್ತಾರೆ ಅನುಶ್ರೀ

3 ನಮ್ಮ ರೂಂಗೆ ಅನುಶ್ರೀ ಎಕ್ಸ್ಟೆಸಿ ಪಿಲ್ಸ್ ತರುತ್ತಿದ್ದರು

4 ಅನುಶ್ರೀ-ತರುಣ್ ಮತ್ತೆ ನಾನು ಮೂವರು ಸೇರಿ ಡ್ರಗ್ ಪಾರ್ಟಿ ಮಾಡ್ತಿದ್ದೆವು

5 ನನ್ನ ಸ್ನೇಹಿತ ತರುಣ್ ಕಡೆಯಿಂದ ಅನುಶ್ರೀ ಪರಿಚಯವಾಗಿತ್ತು

6 ಕುಣಿಯೋಣ ಬಾರ' ಡ್ಯಾನ್ಸ್ ಶೋನಲ್ಲಿ ತರುಣ್ ಮತ್ತು ನಾನು ಅನುಶ್ರೀಗೆ ಕೊರಿಯಾಗ್ರಫಿ ಮಾಡಿದ್ವಿ.

7 ತರುಣ್ ಬಾಡಿಗೆ ಮನೆಯಲ್ಲಿ ತಡರಾತ್ರಿವರೆಗೂ ಡ್ಯಾನ್ಸ್ ರಿಹರ್ಸಲ್ ನಡೆಯುತ್ತಿತ್ತು

8 ಡ್ಯಾನ್ಸ್ ರಿಹರ್ಸಲ್ ಮುಗಿಸಿದ್ಮೇಲೆ ಊಟಕ್ಕೂ ಮೊದಲು ಎಕ್ಸ್ಟೆಸಿ ಪಿಲ್ಸ್ ತೆಗೆದುಕೊಳ್ಳುತ್ತಿದ್ದೆವು

9 ಡ್ರಗ್ಸ್ ಸೇವಿಸಿ ಡ್ಯಾನ್ಸ್ ಮಾಡಿದರೆ ಅದರ ಕಿಕ್ಕೇ ಬೇರೆ ಎನ್ನುತ್ತಿದ್ದರು ಅನುಶ್ರೀ

10 ಕುಣಿಯೋಣ ಬಾರ’ ಶೋನಲ್ಲಿ ವಿನ್ ಆದ್ಮೇಲೆ ಡ್ರಗ್ಸ್ ಪಾರ್ಟಿ ಕೊಟ್ಟಿದ್ದರು


11 ಮಾದಕ ವಸ್ತು ಸೇವನೆ ಮಾಡಿ ಡ್ರಿಂಕ್ಸ್ ಪಾರ್ಟಿ ಮಾಡಿದ್ವಿ.

12 ಡ್ರಗ್ಸ್ ಎಲ್ಲಿಂದ ತರಿಸಿಕೊಳ್ಳುತ್ತಿದ್ದರು ಎಂಬ ಬಗ್ಗೆ ನನಗೇನು ಗೊತ್ತಿಲ್ಲ

13 ಬಹಳ ಸುಲಭವಾಗಿ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು, ಬಹುಷಃ ಅವರಿಗೆ ಡ್ರಗ್ಸ್ ಪೆಡ್ಲರ್‌ಗಳ ಪರಿಚಯ ಇರುತ್ತೆ

ಇದಿಷ್ಟು ಎ2 ಆರೋಪಿ ಕಿಶೋರ್ ಅಮನ್ ಶೆಟ್ಟಿ ಪೊಲೀಸರ ಮುಂದೆ ಕೊಟ್ಟಿರುವಂತಹ ಹೇಳಿಕೆಗಳು. ಈ ಎಲ್ಲಾ ಹೇಳಿಕೆಗಳನ್ನ ಆಧಾರವಾಗಿಟ್ಟುಕೊಂಡು ಮಂಗಳೂರು ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಆರೋಪಿ ಕಿಶೋರ್ ಶೆಟ್ಟಿ ಕೊಟ್ಟಿರುವ ಸ್ಟೇಟ್‌ಮೆಂಟ್ ಆಂಕರ್ ಕಮ್ ನಟಿ ಅನುಶ್ರೀಗೆ ಮುಳುವಾಗ್ಬೋದು ಎನ್ನುವ ಚರ್ಚೆ ಜೋರಾಗಿದೆ. ಕೋರ್ಟ್ ತನಿಖೆಗೆ ಆಗ್ರಹಿಸಿದರೆ ಕೇಸ್ ರೀ ಓಪನ್ ಆಗಲಿದೆ. ಕಿಶೋರ್ ಸ್ಟೇಟ್‌ಮೆಂಟ್‌ನಲ್ಲಿ ಒಂದ್ವೇಳೆ ಹುರುಳಿದ್ದರೆ ಅನುಶ್ರೀಗೆ ಡ್ರಗ್ಸ್ ಕಂಟಕ ಉರುಳಾಗಬಹುದು ಎನ್ನುವುದೇ ಕೂತೂಹಲ ಚರ್ಚಾ ಸಂಗತಿ.


ಕಿಶೋರ್ ಶೆಟ್ಟಿ ಹಾಗೂ ತರುಣ್ ಇಬ್ಬರು ಕೂಡ ಡ್ಯಾನ್ಸ್ ಕೊರಿಯಾಗ್ರಫರ್‌ಗಳು. ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸ್ಯಾಂಡಲ್‌ವುಡ್ ಡ್ರಗ್ ಕೇಸ್‌ಗೆ ಸಂಬಂಧ ಬೆಂಗಳೂರು ಸಿಸಿಬಿ ಪೊಲೀಸರು ಸುಮಾರು 20ಕ್ಕೂ ಹೆಚ್ಚು ಮಂದಿಯನ್ನ ವಿಚಾರಣೆಗೆ ಒಳಪಡಿಸಿದ್ದರು.

ಅದರಲ್ಲಿ ಎ.15 ಆರೋಪಿ ಪ್ರತೀಕ್ ಶೆಟ್ಟಿ ಕೊಟ್ಟಂತಹ ಸುಳಿವಿನಿಂದ ಕಿಶೋರ್ ಶೆಟ್ಟಿ ಹಾಗೂ ತರುಣ್ ಬಗ್ಗೆ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಬೆಂಗಳೂರು ಸಿಸಿಬಿ ಪೊಲೀಸರು, ಮಂಗಳೂರು ಸಿಸಿಬಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಕಿಶೋರ್ ಶೆಟ್ಟಿ ಹಾಗೂ ತರುಣ್‌ರನ್ನ ಬಂಧಿಸಿ ತನಿಖೆಗೆ ಒಳಪಡಿಸಿದ್ದರು. ಆಗ ಅವರುಗಳ ಕೊಟ್ಟ ಮಾಹಿತಿಯ ಮೇರೆಗೆ ಅನುಶ್ರೀಯವರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದ್ದರು.

2020 ಸೆಪ್ಟೆಂಬರ್ 26 ರಂದು ಮಾಧ್ಯಮಗಳ ಮುಂದೆ ಹಾಜರಾಗಿದ್ದ ಅನುಶ್ರೀ, ಕಿಶೋರ್ ಶೆಟ್ಟಿ ಹಾಗೂ ತರುಣ್ ಇಬ್ಬರು ಕೂಡ `ಕುಣಿಯೋಣ ಬಾರ’ ಡ್ಯಾನ್ಸ್ ರಿಯಾಲಿಟಿ ಶೋಗೆ ಕೊರಿಯಾಗ್ರಫಿ ಮಾಡಿದ್ದರು. ಆದರೆ, ಸದ್ಯಕ್ಕೆ ಅವರೊಟ್ಟಿಗೆ ನನಗೆ ಒಡನಾಟ ಇಲ್ಲ. ಕಳೆದ ಹನ್ನೆರಡು ವರ್ಷಗಳ ಹಿಂದೆ ಕೊರಿಯಾಗ್ರಫಿ ಮಾಡಿದ್ದರು ಅನ್ನೋದು ಬಿಟ್ಟರೆ ಅವರೊಟ್ಟಿಗೆ ವೈಯಕ್ತಿಕವಾಗಿ ನಾನು ಸಂಪರ್ಕ ಇಟ್ಟುಕೊಂಡಿಲ್ಲ. ಕಿಶೋರ್ ಅವರ ಒಡೆತನದ ಡ್ಯಾನ್ಸ್ ಕ್ಲಾಸ್ ಉದ್ಘಾಟನೆ ಮಾಡಿಕೊಟ್ಟಿದ್ದೇನೆ ಬಿಟ್ಟರೆ ಮತ್ಯಾವ ನಂಟು ಕೂಡ ಅವರೊಂದಿಗಿಲ್ಲ ಎಂದು ಹೇಳಿಕೊಂಡಿದ್ದರು. ಇದನ್ನ ಕಿಶೋರ್ ಕೂಡ ಸಿಸಿಬಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಆದರೆ, ಡ್ರಗ್ಸ್ ತೆಗೆದುಕೊಳ್ಳುತ್ತಿದ್ದದ್ದು ಮಾತ್ರ ಸತ್ಯ ಎನ್ನುವ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಇದೊಂದೇ ಹೇಳಿಕೆ ಅನುಶ್ರೀಗೆ ಸಂಕಷ್ಟ ತಂದೊಡಿದೆ. ಮುಂದೇನಾಗಲಿದೆ ಈ ಕೇಸ್ ಕೂತೂಹಲದಿಂದ ಕಾಯಬೇಕು ಅಷ್ಟೇ.

Related Posts

error: Content is protected !!