ಸರಿಗಮಪ ಸಂಗೀತ ಮಹಾಯುದ್ಧ ; ಕಂಠದ ಜೊತೆ ಗೆದ್ದವರ ಕಾದಾಟ ! ವಿನ್ನರ್ಸ್ ಜೊತೆ ರನ್ನರ್ಸ್ ಇರ್ತಾರಾ?

ಜೀ‌ ಅಖಾಡದಲ್ಲಿ ಸರಿಗಮಪ ಮಹಾಯುದ್ಧಕ್ಕೆ ಕೌಂಟ್ ಡೌನ್ ಶುರುವಾಗಿದೆ. ದಿವ್ಯಮುಹೂರ್ತದಲ್ಲಿ ಸಂಗೀತ ಸಮರ ಏರ್ಪಡಿಸುವುದಕ್ಕೆ ಸಕಲ ಸಿದ್ದತೆ ನಡೆದಿದೆ. ಸರಿಗಮಪ ಸಿಂಗಿಂಗ್ ಶೋಗೆ ಹೊಸ ರೂಪ ಸಿಕ್ಕಿದ್ದು, ಸರಿಗಮಪ ಚಾಂಪಿಯನ್ ಶಿಪ್ ಅದ್ಧೂರಿಯಾಗಿ ಆರಂಭವಾಗ್ತಿದೆ.

ಸರಿಗಮಪ ಮನರಂಜನಾ ಲೋಕದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ. ಜೀ ಕನ್ನಡದ ಹೆಮ್ಮೆಯ ಸಂಗೀತ ಕಾರ್ಯಕ್ರಮ. ಇಲ್ಲಿವರೆಗೂ ಭರ್ತಿ ಹದಿನೇಳು ಸೀಸನ್ ಗಳನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿರುವ ಸರಿಗಮಪ
ಕಾರ್ಯಕ್ರಮಕ್ಕೆ ಹೊಸ ರೂಪ ಸಿಕ್ಕಿದೆ. ಸರಿಗಮಪ‌ ಚಾಂಪಿಯನ್ ‌ಶಿಪ್ ಅದ್ಧೂರಿ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ರಿಲೀಸ್ ಆಗಿರುವ ಪ್ರೋಮೋ ಕೂತೂಹಲ ಮೂಡಿಸಿದೆ.

ಈ ಶೋ ಗಾಗಿ ಇಡೀ ಕರುನಾಡು ಕೂತೂಹಲದಿಂದ
ಕಾಯುತ್ತೆ. ಯಾಕಂದ್ರೆ, ಕರುನಾಡ ಮೂಲೆಮೂಲೆಯಲ್ಲಿ ಎಲೆಮರೆಕಾಯಿಯಂತಿದ್ದ ಪ್ರತಿಭೆಗಳನ್ನ ಕರೆತಂದು, ಕಂಠದೊಳಗಿದ್ದ ಕಸುವನ್ನ ಕನ್ನಡಿಗರ ಮುಂದೆ ಅನಾವರಣ ಮಾಡಿ ಕರುನಾಡ ಮಡಿಲಿಗೆ ಗಾನಕೋಗಿಲೆಗಳನ್ನ ಅರ್ಪಣೆ ಮಾಡ್ತಾರೆ. ಆದರೆ, ಈ‌ ಭಾರಿ ಸ್ವರಾನ್ವೇಷಣೆಗೆ ಬ್ರೇಕ್ ಹಾಕಿದ್ದಾರೆ. ಬದಲಾಗಿ, ಈಗಾಗಲೇ ಸರಿಗಮಪ ಸ್ವರಸಾಮ್ರಾಜ್ಯದಲ್ಲಿ ಕಂಠಕುಣಿಸಿ ಸೈ‌ ಎನಿಸಿಕೊಂಡು ಕಿರೀಟ ಮುಡಿಗೇರಿಸಿಕೊಂಡವರನ್ನು ಮತ್ತೆ ವೇದಿಕೆಗೆ ಕರೆತರುತ್ತಿದ್ದಾರೆ. ಸರಿಗಮಪ ಚಾಂಪಿಯನ್ ಶಿಪ್ ಅಂಗಳದಲ್ಲಿ ಬರೀ ವಿನ್ನರ್ಸ್ ಇರುತ್ತಾರಾ? ಅಥವಾ ರನ್ನರ್ ಅಪ್ಸ್ ಗಳಿಗೂ ಅವಕಾಶ ಕೊಡ್ತಾರಾ ಎನ್ನುವುದು ಸದ್ಯಕ್ಕಿರುವ ಕೂತೂಹಲ.

ಸರಿಗಮಪ ಕೇವಲ ಸಿಂಗಿಂಗ್ ಶೋ‌ ಅಲ್ಲ. ಕಲೆಯಿದ್ದು ಕತ್ತಲೆ ತುಂಬಿದ ಎಷ್ಟೋ ಜನರ ಬಾಳಿಗೆ ಬೆಳಕಾದ ದಿವ್ಯಕಾರ್ಯಕ್ರಮ. ಹೀಗಾಗಿಯೇ, ಕಣ್ಣಿಲ್ಲದ ಸಹೋದರಿಯರಾದ ರತ್ನಮ್ಮ- ಮಂಜಮ್ಮ ಸೇರಿದಂತೆ ಮೋನಮ್ಮ, ಸಂಗೀತವ್ವ, ರುಬೀನಾ, ಹಳ್ಳಿಹೈದ ಹನುಮಂತ, ಸುನೀಲ್, ಮೆಹಬೂಬ್ ಸಾಬ್, ಇವರಷ್ಟೇ ಅಲ್ಲ‌ ಬಹುತೇಕ ಗ್ರಾಮೀಣ ಪ್ರತಿಭೆಗಳ ಪರಿಚಯವಾಯ್ತು. ತಮ್ಮೊಳಗಿನ ಪ್ರತಿಭೆ ಅರವಿಟ್ಟ ಇವರೆಲ್ಲರೂ ಕೂಡ ಕರುನಾಡ ಅಂಗಳದಲ್ಲಿ ಮೆರವಣಿಗೆ ಹೋಗಿಬಂದರು. ಇವರಲ್ಲಿ ಗೆಲುವಿನ‌ ಗದ್ದುಗೆ ಏರಿದವರಿಗೆ ಮತ್ತೊಮ್ಮೆ ಅವಕಾಶ ಸಿಗುತ್ತಾ ಕಾದು ನೋಡಬೇಕು.

ಅಂದ್ಹಾಗೇ, ಸರಿಗಮಪ ಚಾಂಪಿಯನ್ ಶಿಪ್ ಗೆದ್ದವರು ಮತ್ತೊಮ್ಮೆ ಗೆಲುವಿದ ಗದ್ದುಗೆಗಾಗಿ ಕಂಠದ ಜೊತೆ ಕಾದಾಡುವಂತಹ ಶೋ. ಸರಿಗಮಪ ಕಿರೀಟ ಮುಡಿಗೇರಿಸಿಕೊಂಡು ವಿಜೃಂಭಿಸಿದವರಿಗೆ ಮತ್ತೊಮ್ಮೆ ಸ್ವರಸಾಮ್ರಾಜ್ಯಕ್ಕೆ ಲಗ್ಗೆ ಇಡುವ ಅವಕಾಶ ಸಿಗುತ್ತಿದೆ. ಮಹಾಗುರುಗಳಾದ
ನಾದಬ್ರಹ್ಮ ಹಂಸಲೇಖ ಅವರೊಟ್ಟಿಗೆ ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ಸಾರಥ್ಯದಲ್ಲಿ ಹಲವು ಸಂಗೀತ ದಿಗ್ಗಜರ ಸಮ್ಮುಖದಲ್ಲಿ ಚಾಂಪಿಯನ್ ಶಿಪ್ ಅದ್ದೂರಿ ಓಪನ್ನಿಂಗ್ ಪಡೆದುಕೊಳ್ಳಲಿದೆ. ಹೇಗಿರಲಿದೆ ಗೆದ್ದವರ ಸ್ವರಸಮರ ? ಕಣ್ಣರಳಿಸಿ ಕಾಯ್ತಾಯಿರಿ. ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ.

ಎಂಟರ್‌ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!