Categories
ಸಿನಿ ಸುದ್ದಿ

ಎಸ್‌ಪಿಬಿ ಪುಸ್ತಕ ಲೋಕಾರ್ಪಣೆ- ಕನ್ನಡದೊಂದಿಗೆ ಅನುಪಮ ಅನುಬಂಧ ಈ ನಮ್ಮ ಗಾಯಕ; ಇದು ಹಿರಿಯ ಪತ್ರಕರ್ತರ ಕೃತಿ

ಭಾರತೀಯ ಸಿನಿಮಾ ಕಂಡ ಮೇರು ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅಗಲಿ ಇಂದಿಗೆ (ಸೆಪ್ಟೆಂಬರ್‌ 25) ಒಂದು ವರ್ಷ. ದಾವಣಗೆರೆಯ ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ಎಸ್‌ಪಿಬಿ ಕುರಿತು ‘ಸ್ವರ ಸಾಮ್ರಾಟ ಎಸ್‌.ಪಿ.ಬಾಲಸುಬ್ರಹ್ಮಣ್ಯಂ’ ಕೃತಿ ರಚಿಸಿದ್ದಾರೆ. ಈ ಕೃತಿ ಸೆಪ್ಟೆಂಬರ್‌ 25ರಂದು ದಾವಣಗೆರೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಈ ಪುಸ್ತಕದಲ್ಲಿನ ಒಂದು ಆಯ್ದ ಟಿಪ್ಪಣಿ ಇಲ್ಲಿದೆ.

ನನ್ನನ್ನು ಭಾರತದ ಎಲ್ಲಾ ಸ್ಥಳದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ ಅದೇಕೋ ನನಗೂ ಗೊತ್ತಿಲ್ಲ. ಅವರೆಲ್ಲರಿಗಿಂತಲೂ ಕನ್ನಡಿಗರಿಗೆ ನನ್ನ ಮೇಲೆ ಪ್ರೀತಿ ಅಭಿಮಾನ ತುಸು ಹೆಚ್ಚೇ ಎನ್ನಬಹುದು. ಹೀಗಾಗಿ ಮುಂದಿನ ಜನ್ಮ ಎಂಬುದೇನಾದರೂ ಇದ್ದರೆ ಖಂಡಿತವಾಗಿಯೂ ಕರ್ನಾಟಕದಲ್ಲಿ ಹುಟ್ಟಬೇಕೆಂಬ ಆಸೆ. ಇದು ಉತ್ಪ್ರೇಕ್ಷೆ ಅಲ್ಲ ಮತ್ತು ಪ್ರಚಾರಕ್ಕಾಗಿಯೂ ಅಲ್ಲ. ನನ್ನ ಹೃದಯಾಂತರಾಳದ ಮಾತು ಎಂದು ಎಸ್.ಪಿ.ಬಿ. ಅನೇಕ ಸಂದರ್ಭದಲ್ಲಿ ಹೇಳಿದ್ದರು. ಕನ್ನಡವರಿಗೆ ಹೆಚ್ಚು ಪ್ರಿಯರಾದ ಎಸ್‌ಪಿಬಿ ಸಾವಿರಾರು ಕನ್ನಡದ ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ "ನಕ್ಕರೆ ಅದೇ ಸ್ವರ್ಗ" ಚಿತ್ರವು 1966ರಲ್ಲಿ ತೆರೆಕಂಡಿತು. ಬಾಲು ಕೂಡ ಪ್ರಥಮವಾಗಿ ಅದೇ ಸಿನಿಮಾದ ಮೂಲಕ ಕನ್ನಡಿಗರ ಹೃದಯ ಸಾಮ್ರಾಜ್ಯಕ್ಕೆ ಲಗ್ಗೆ ಹಾಕಿದರೆನ್ನಬಹುದು. ಮೊದಲ ಹಾಡಿಗೆ ದೊರೆತ ಸಂಭಾವನೆ 150ರೂ.ಗಳು. ಆ ಕಾಲಕ್ಕೆ ಕನ್ನಡದಲ್ಲಿ ಪ್ರಸಿದ್ಧರಾಗಿದ್ದ ಪಿ.ಬಿ. ಶ್ರೀನಿವಾಸ್ ಒಂದು ಹಾಡಿಗೆ 250ರೂ. ಸಂಭಾವನೆ ಪಡೆಯುತ್ತಿದ್ದರು. "ದೇವರಗುಡಿ" ಸಿನಿಮಾದಮಾಮರವೆಲ್ಲೋ ಕೋಗಿಲೆ ಎಲ್ಲೋ” ಹಾಡು ಅವರಿಗೆ ಅತ್ಯಂತ ಹೆಚ್ಚಿನ ಜನಪ್ರಿಯತೆಗೆ ನಾಂದಿ ಹಾಡಿತೆನ್ನಬಹುದು.

ಸುಮಾರು ನಾಲ್ಕೂವರೆ ದಶಕಗಳ ಕಾಲ ಕನ್ನಡದ 15ಕ್ಕೂ ಹೆಚ್ಚು ನಾಯಕನಟರಿಗೆ ಅವರ ಧ್ವನಿಯೇ ಪರ್ಫೆಕ್ಟ್ ಎಂಬಂತೆ ಹೊಂದಿಕೊಂಡಿತು. ‘ಈ ಭೂಮಿ ಬಣ್ಣದ ಬುಗುರಿ’ ಎನ್ನುವಾಗ ವಿಷ್ಣುವರ್ಧನ್ ಹಾಡಿದಂತೆ, ಚಂದನದ ಗೊಂಬೆ ಚೆಲುವಾದ ಗೊಂಬೆ" ಪಲ್ಲವಿ ಕೇಳಿದಾಗ ಅನಂತ್‌ನಾಗ್ ದನಿ ಎನ್ನುವಂತಾಗುವುದು, ‘ಜೊತೆ ಜೊತೆಯಲಿ’ ಎಂದು ಗುನುಗುವಾಗ ಶಂಕರ್‌ನಾಗ್ ಹಾಡಿದಂತೆ, ‘ಸ್ನೇಹದ ಕಡಲಲ್ಲಿ’ ಹಾಡಿನ ನೆನಪು ಶ್ರೀನಾಥ್‌ರ ದನಿಯಾಗಿ, ‘ಶಿವ ಶಿವ ಎಂದರೆ ಭಯವಿಲ್ಲ...’ ಎನ್ನುವಾಗ ಲೋಕೇಶ್,ನಮ್ಮೂರು ಮೈಸೂರು, ನಿಮ್ಮೂರು ಯಾವೂರು” ಪಲ್ಲವಿಯು ದ್ವಾರಕೀಶ್‌ರೇ ಹಾಡಿದಂತೆ, ‘ಮಂಡ್ಯದ ಗಂಡು’ ಹಾಡಿನ ನೆನಪಿಗೆ ಅಂಬರೀಶ್ ದನಿಯಾದಂತೆ, ‘ಟುವ್ವಿ ಟುವ್ವಿ’ ಎಂದಾಗ ಶಿವರಾಜ್‌ಕುಮಾರ್, `ಈ ಬೆಳದಿಂಗಳು” ಎಂದಾಗ ರಮೇಶ್ ಅರವಿಂದ್‌ರ ದನಿಯೇ ನಮಗೆ ಕೇಳಿಸಿದಂತಹ ಪ್ರಭಾವಕ್ಕೆ ಸಿಲುಕಿಸಿರುವುದರ ಹಿಂದೆ ಎಸ್.ಪಿ.ಬಿ.ಯವರೇ ಹಾಡಿದ್ದರೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಎಸ್‌ಪಿಬಿ ನಿರಂತರವಾಗಿ ಹಾಡಲು ಸಾಧ್ಯವಾದದ್ದು ಹೇಗೆ?
ಬಾಲು ಹಾಡುತ್ತಿದ್ದ ಕಾಲಘಟ್ಟದಲ್ಲಿ ಗಾಯಕರಾಗಿ ಬಂದವರು. ಹೆಚ್ಚು ವರ್ಷ ಚಾಲ್ತಿಯಲ್ಲಿ ಉಳಿಯಲಿಲ್ಲ. ಇವರು ಮಾತ್ರ ನಿರಂತರವಾಗಿ ಹಾಡುತ್ತಾ, ವಿಶ್ರಾಂತಿಯ ಸಂಗತಿಯನ್ನು ಮರೆತವರಂತಿದ್ದರು. ನಟರ ಧ್ವನಿಯನ್ನು ಅನುಸರಿಸುತ್ತಿದ್ದ ಎಸ್.ಪಿ.ಬಿ.ಗೆ ಅದೇ ಸಂಗೀತಕ್ಕೂ ವರದಾನ ಆಯಿತೆನ್ನಬಹುದು. ಹಾಡಬೇಕಾದ ನಟರ ಹೆಸರು ಹೇಳಿದರೆ ಸಾಕು. ಅವರ ಧ್ವನಿಗೆ ತಕ್ಕಂತೆ ಹಾಡುವುದು ಅವರಿಗೆ ಕರತಲಾಮಲಕ ಎನ್ನುವಂತಾಯಿತು. ಅವರ ಕಂಠ ಮಾಧುರ್ಯದ ಸಾಮರ್ಥ್ಯ ಹೇಗಿತ್ತೆಂದರೆ ಇಪ್ಪತ್ತು ವರ್ಷದ ಹಿಂದಿನ ಹಾಡನ್ನು ನಂತರ ಹಾಡಿಸಿದಾಗಲೂ ಅದೇ ಫೋರ್ಸ್‌ನಲ್ಲಿ ಅದೇ ವಾಯ್ಸ್ ಕಲ್ಚರ್‌ನಲ್ಲಿ, ಯಾವ ಲ್ಯಾಂಡಿಂಗ್ ನೋಟ್ಸ್‌ಗಳಿಗೂ ವ್ಯತ್ಯಾಸವಾಗದ ಹಾಗೆ ಪ್ರಸೆಂಟ್ ಮಾಡುವಲ್ಲಿ ಎಸ್ಪಿಬಿಯವರಿಗೆ ಅವರೇ ಸಾಟಿ ಎನಿಸಿದ್ದರು.

ಇನ್ನೊಬ್ಬರ ಅವಕಾಶವನ್ನು ಕಿತ್ತುಕೊಳ್ಳಲಾರೆ
ಚಿತ್ರವೊಂದಕ್ಕೆ ವೈದ್ಯನಾಥನ್ ಸಂಗೀತ ಸಾರಥ್ಯದಲ್ಲಿ ಬಾಲು ಹಾಡನ್ನು ಹಾಡಿ ತಮ್ಮ ಪಾಲಿನದನ್ನು ಮುಗಿಸಿದರು. ಆದರೆ ನಿರ್ಮಾಪಕರೊಬ್ಬರು ಇನ್ನೊಂದು ಹಾಡನ್ನೂ ಪ್ಲೀಸ್ ಹಾಡಿರಿ ಎಂದು ವಿನಂತಿಸಿಕೊಂಡರು. ಆ ಹಾಡನ್ನು ಪಿ.ಬಿ. ಶ್ರೀನಿವಾಸ್ ಹಾಡಬೇಕಿತ್ತು, ಸ್ವತಃ ಪಿ.ಬಿ.ಎಸ್. ಕಾಯುತ್ತಿದ್ದರೂ ಅವಕಾಶವನ್ನು ಬದಲಾಯಿಸುವ ಪ್ರಯತ್ನ ನಡೆಯಿತು. ಬಾಲು ಅಸಲಿ ವಿಷಯವನ್ನು ತಿಳಿದುಕೊಂಡರು, ಅವರಿಂದ ಹಾಡಿಸಬೇಕಾದ ಹಾಡನ್ನು ನಾನು ಕಸಿಯುವುದು ಸಮಂಜಸವಲ್ಲ, ನೀವು ಅವರಿಂದಲೇ ಹಾಡಿಸುವುದು ನ್ಯಾಯಸಮ್ಮತ, ಅವರಿಂದಲೇ ಹಾಡಿಸಿ ಎಂದರು. ನಂತರ ಪಿ.ಬಿ.ಶ್ರೀನಿವಾಸ್ ಹಾಡುವ ತನಕ ಇದ್ದು ನಂತರ ಸ್ಟುಡಿಯೋದಿಂದ ಹೊರ ಬಂದರು. ಹಿರಿಯ ಗಾಯಕನ ಬಗೆಗಿನ ಗೌರವ ಯಾವ ರೀತಿಯಲ್ಲಿ ಇತ್ತು ಎಂದು ಇದನ್ನು ಕರೆಯಬಹುದಲ್ಲವೆ?


2007 ಡಿಸೆಂಬರ್ 16 ರಂದು ಮೈಸೂರಿನಲ್ಲಿ ಎದೆತುಂಬಿ ಹಾಡುವೆನು" ಸ್ಪರ್ಧೆಯ ಸಂಬಂಧದ ಕಾರ್ಯಕ್ರಮದಲ್ಲಿ ಬಾಲು ಪಾಲ್ಗೊಂಡಿದ್ದರು. ಆ ಹೊತ್ತಿಗೆ ಅವರು ಹಾಡಲು ಶುರು ಮಾಡಿ ನಾಲ್ಕು ದಶಕಗಳು ಕಳೆದಿದ್ದವು.

ಅಷ್ಟು ವರ್ಷಗಳ ದೀರ್ಘ ಕಾಲ ಹಾಡುವುದನ್ನು ಮುಂದುವರಿಸಿದ್ದರೂ ಅದೇ ಕಂಠಸಿರಿಯನ್ನು ಉಳಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬ ಸಂದರ್ಶಕರೊಬ್ಬರ ಪ್ರಶ್ನೆಗೆ ಬಾಲು ಉತ್ತರ ಹೀಗಿತ್ತು,ಕಾಣದ ಊರಲಿ ನೀ ಕುಳಿತಿರುವೆ’, ‘ಎಲ್ಲರ ಕಥೆಯ ನೀ ಬರೆದಿರುವೆ” ಆ ಹಾಡನ್ನು ನೆನಪಿಸಿಕೊಂಡಿದ್ದರು, ಕನ್ನಡಿಗರು ಮತ್ತು ಕನ್ನಡದ ಪ್ರಸ್ತಾಪ ಬಂದಾಗಲೆಲ್ಲಾ ಎಸ್ಪಿಬಿಯವರಿಗೆ ಭಾವುಕತೆ ಗರ್ಭ ತುಂಬಿಕೊಳ್ಳುತ್ತಿತ್ತು.

Categories
ಸಿನಿ ಸುದ್ದಿ

ಸಮಂತಾ ಡಿವೋರ್ಸ್ ಕೊಟ್ರೆ ಕತ್ತರಿಸಿ ಹಾಕ್ತೀನಿ ; ರೊಚ್ಚಿಗೆದ್ದ ಅಕ್ಕಿನೇನಿ ಕುಟುಂಬದ ಹಾರ್ಡ್ ಕೋರ್‌ ಫ್ಯಾನ್ !?

ಸೌತ್ ಸಿನಿಮಾ ಇಂಡಸ್ಟ್ರಿಯ ತಾರಾಜೋಡಿಗಳಾದ ನಟಿ ಸಮಂತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ದಾಂಪತ್ಯ ವಿಚ್ಛೇದನದ ಅಂತ ತಲುಪಿದೆಯೋ ಇಲ್ಲವೋ ಗೊತ್ತಿಲ್ಲ. ‌ಆದರೆ, ಗಾಸಿಪ್ ಟೋಪಿ‌ ಹಾಕಿಕೊಂಡಿರುವ ಸುದ್ದಿ ಊಸರವಳ್ಳಿಯಂತೆ ದಿನಕ್ಕೊಂದು‌ ಬಣ್ಣ ಬದಲಿಸುತ್ತಾ ಇಡೀ ಸೌತ್ ಸಿನಿಮಾ ಅಂಗಳದಲ್ಲೆಲ್ಲಾ ಗುಲ್ಲೆಬ್ಬಿಸುತ್ತಿದೆ. ಆದರೆ, ಬದುಕಲ್ಲಿ ಬಿರುಗಾಳಿ ಎದ್ದಿರುವ ಬಗ್ಗೆಯಾಗಲೀ, ಸಂಬಂಧದಲ್ಲಿ ಬಿರುಕು ಮೂಡಿರುವ ಕುರಿತಾಗಲೀ ಎಲ್ಲಿಯೂ ಚೈ ಅಂಡ್ ಸ್ಯಾಮ್ ಮುಕ್ತವಾಗಿ ಮಾತನಾಡ್ತಿಲ್ಲ. ಆದರೆ, ಗಲ್ಲಿಗಾಸಿಪ್ ಮಾತ್ರ ಇಬ್ಬರ ಡೈವರ್ಸ್ ಕಥೆ ಹೇಳ್ತಿದೆ. ಅಕ್ಟೋಬರ್ 06 ರಂದು ಅಧಿಕೃತವಾಗಿ ಇಬ್ಬರು ಡೈವರ್ಸ್ ಬಗ್ಗೆ ಸ್ಪಷ್ಟನೆ ಕೊಡಲಿದ್ದಾರಂತೆ, ಕೌನ್ಸಿಲಿಂಗ್ ಮಾಡಿಸಿದರೂ ಪ್ರಯೋಜನವಾಗಿಲ್ಲವಂತೆ, ಸಮಂತಾ 50 ಕೋಟಿ ಪರಿಹಾರ ಕೇಳಿದ್ದು, ಕಾನೂನು ಪ್ರಕ್ರಿಯೆ ಕೂಡ ಅಕ್ಟೋಬರ್ 06 ರಂದೇ ನಡೆಯಲಿದೆ‌ ಎನ್ನುವ ಗಾಸಿಪ್ ಸುದ್ದಿ ಅಚ್ಚರಿ ಮೂಡಿಸಿದೆ.‌


ಹೀಗೆ ಚೈ-ಸ್ಯಾಮ್ ಡಿವೋರ್ಸ್ ಗಾಸಿಪ್ ಮ್ಯಾಟರ್ ಗಲ್ಲಿಯಲ್ಲಿ ಥಕ್ಕಥೈ ಅಂತ ಕುಣಿಯುತ್ತಿರೋದ್ರಿಂದ ಅಕ್ಕಿನೇನಿ ಫ್ಯಾಮಿಲಿ ಫ್ಯಾನ್ಸ್ ಫುಲ್ ಅಪ್ ಸೆಟ್ ಆಗಿದ್ದಾರೆ. ಏನಾಗ್ತಿದೆ ನಟಿ ಸಮಂತಾ ಹಾಗೂ ನಾಗಚೈತನ್ಯ ಬದುಕಿನ ಬಾಂಡಲದಲ್ಲಿ ಎನ್ನುತ್ತಾ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಪ್ರೀತ್ಸಿ ಮದುವೆಯಾದ, ರೀಲ್ ಅಂಡ್ ರಿಯಲ್ ಲೈಫ್ ನಲ್ಲಿ ಸೈ ಎನಿಸಿಕೊಂಡ ಈ‌ಜೋಡಿ ಯಾವುದೇ ಕಾರಣಕ್ಕೂ ದೂರವಾಗಬಾರದು ದೇವಾ ಎನ್ನುತ್ತಾ ತಮ್ಮ ತಮ್ಮ ಮನೆದೇವರಿಗೆ ಹರಕೆ ಕಟ್ಟಿಕೊಳ್ತಿದ್ದಾರೆ. ಕಣ್ಣುಕುಕ್ಕುವಂತಿರುವ ಜೋಡಿ ಮೇಲೆ ಯಾವ ಕೆಟ್ಟಕಣ್ಣು ತಾಗದಿರಲಿ ಭಗವಂತ ಎನ್ನುತ್ತಿದ್ದಾರೆ. ಇಂತಹ ಫ್ಯಾನ್ ಫಾಲೋಯರ್ಸ್ ಮಧ್ಯೆ ಅಕ್ಕಿನೇನಿ ಫ್ಯಾಮಿಲಿ ಡೈಹಾರ್ಡ್ ಫ್ಯಾನ್ ವೊಬ್ಬ ಸಮಂತಾಗೆ ವಾರ್ನಿಂಗ್ ಮಾಡಿದ್ದಾರೆ.

ಹೌದು, ತೆಲುಗು ವೆಬ್ ಸೈಟ್ ಗಳು ವರದಿ ಮಾಡಿರುವಂತೆ ಅಕ್ಕಿನೇನಿ ಫ್ಯಾಮಿಲಿ ಫ್ಯಾನ್ ಸಮಂತಾಗೆ ವಾರ್ನ್ ಮಾಡಿದ್ದಾರಂತೆ. ಒಂದ್ವೇಳೆ ಸಮ್ಮು ಬೇಬಿ ಡಿವೋರ್ಸ್ ಕೊಟ್ಟಿದ್ದೇ ಆದಲ್ಲಿ ಕತ್ತರಿಸಿ ಹಾಕುವುದಾಗಿ ಧಮ್ಕಿ ಹಾಕಿದ್ದಾರಂತೆ. ಹೀಗಂತ, ಟಾಲಿವುಡ್ ವೆಬ್ ಸೈಟ್ ಗಳು ಸುದ್ದಿ ಬಿತ್ತರಿಸಿವೆ. ಅಷ್ಟಕ್ಕೂ, ಈ ಸುದ್ದಿಯಲ್ಲಿ ಎಷ್ಟು ಹುರುಳಿದೆಯೋ ಅಥವಾ ಎಷ್ಟು ಸುಳ್ಳಿದೆಯೋ ಗೊತ್ತಿಲ್ಲ. ಆದರೆ, ಒಂದಂತೂ ಸತ್ಯ ತಾವು ಇಷ್ಟಪಡುವ, ಆರಾಧಿಸುವ, ಅಭಿಮಾನಿಸುವ ತಾರೆಯರು ಹಾಗೂ ತಾರಾ ಜೋಡಿಗಳ ವೃತ್ತಿ ಬದುಕಿರಲಿ ಅಥವಾ ವೈಯಕ್ತಿಕ ಬದುಕಿರಲಿ ಅಲ್ಲಿ ಏನಾದರೂ ಹೆಚ್ಚುಕಮ್ಮಿಯಾದರೆ, ಬಿರುಗಾಳಿ ಎದ್ದರೆ, ಅದನ್ನ ಸಹಿಸುವ ಶಕ್ತಿ ಅಭಿಮಾನಿ ದೇವರುಗಳಿಗಿಲ್ಲ. ಹಲ್ಲಲ್ಲು ಕಡಿಯುತ್ತಲೇ, ಕಣ್ಣಲ್ಲೇ ಕೆಂಡ ಉಗುಳುತ್ತಲೇ ಅಖಾಡಕ್ಕೆ ಇಳಿದುಬಿಡ್ತಾರೆ.

ಎಲ್ಲವೂ ಸಮಾನವಾಗಿರಬೇಕು ಮತ್ತು ಸಂತೋಷದಿಂದ ಕೂಡಿರಬೇಕು ಅಂತ ಫ್ಯಾನ್ಸ್ ಬಯಸ್ತಾರೆ. ಈಗ ಸ್ಯಾಮ್ ‌ಚೈ ಫ್ಯಾನ್ಸ್ ಕೂಡ ಇದನ್ನೇ ಆಶಿಸುತ್ತಿದ್ದಾರೆ. ಬಜಾರ್ ನಲ್ಲಿ ಹಬ್ಬಿರುವ ವಿಚ್ಚೇದನದ ಸುದ್ದಿ ಸುಳ್ಳಾಗಲಿ, ಮನಂ ಜೋಡಿಯ ಮಧ್ಯೆ ವಿರಸ ಮೂಡಿರದಿರಲಿ, ಮಜಿಲಿ ಜೋಡಿ ಒಂದಾಗಿ, ಖುಷಿಯಾಗಿ, ಸುಖವಾಗಿ ಬಾಳಲಿ ಎನ್ನುವುದೇ ಅವರ ಕೋಟ್ಯಾಂತರ ಭಕ್ತರ ಕೋರಿಕೆ.

  • ಎಂಟರ್‌ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ದೊಡ್ಡಗೌಡರ ಕುಟುಂಬಕ್ಕೆ ಮರಿಮೊಮ್ಮಗನ ಆಗಮನ; ಜೂ. ನಿಖಿಲ್ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತುರ !ತಂದೆ-ತಾಯಿಯಾದ ಖುಷಿಯಲ್ಲಿ ನಿಖಿಲ್- ರೇವತಿ !

ಜೂ.ನಿಖಿಲ್ ಎಂಟ್ರಿಯಿಂದ ಗಂಧದಗುಡಿಯ ಯುವರಾಜ ನಿಖಿಲ್ ಗೆ ಶಾಸಕನಾಗುವ ಅದೃಷ್ಟವಿದೆ ಎನ್ನುವ ಸಮಾಚಾರವನ್ನ ವಿನಯ್ ಗುರೂಜಿಯವರು ಈ ಹಿಂದೆಯೇ ಹೇಳಿದ್ದಾರೆ. ಸದ್ಯಕ್ಕೆ, ದೊಡ್ಮನೆಯ ಯುವರಾಣಿಗೆ ಗಂಡುಮಗು ಜನನದ ಸುದ್ದಿ ಸತ್ಯವಾಗಿದೆ. ಆ ಮಗುವಿನ ಭವಿಷ್ಯ ಉಜ್ವಲವಾಗಿರುವುದರ ಜೊತೆಗೆ ನಿಖಿಲ್ ಗೆ ರಾಜಯೋಗ ಬರಲಿದೆಯಂತೆ. ಆ ದಿವ್ಯಯೋಗದ ಕ್ಷಣಕ್ಕಾಗಿ ಗೌಡ್ರ ಕುಟುಂಬ ಮಾತ್ರವಲ್ಲ ಅಭಿಮಾನಿ ದೇವರುಗಳು ಕೂಡ ಕೂತೂಹಲದಿಂದ ಎದುರುನೋಡ್ತಿದೆ.

ಬಂದಾನವ್ವ ಭೂಪ.. ಬಂದಾನವ್ವ ಭೂಪ.. ದೊಡ್ಮನೆ ಯುವರಾಣಿ ಮಡಿಲಿನಲಿ.. ಮುತ್ತು ರತ್ನದಂತೆ.. ಬೆಳ್ಳಿ ಬೊಂಬೆಯಂತೆ..ದೊಡ್ಡಗೌಡರ ವಂಶದಲ್ಲಿ.. ಯಸ್, ಮಾಜಿ ಪ್ರಧಾನಿಗಳು ಎಚ್. ಡಿ. ದೇವಗೌಡರ ಕುಟುಂಬಕ್ಕೆ ಮರಿಮೊಮ್ಮಗನ ಆಗಮನವಾಗಿದೆ. ದೊಡ್ಮನೆ ಯುವರಾಣಿ ರೇವತಿ ಗಂಡುಮಗುವಿಗೆ ಜನ್ಮಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ನ ಯುವರಾಜ ನಿಖಿಲ್ ಕುಮಾರಸ್ವಾಮಿ ತಂದೆಯಾದ ಖುಷಿಯಲ್ಲಿದ್ದಾರೆ. ದೊಡ್ಡಗೌಡರಂತೂ ಮರಿಮೊಮ್ಮಗನ ಎಂಟ್ರಿಗೆ ಹೃದಯತುಂಬಿ ನಕ್ಕಿದ್ದಾರೆ. ಕರುಳಕುಡಿಯನ್ನ ಸ್ವಾಗತಿಸೋದಕ್ಕೆ ತುದಿಗಾಲಿನಲ್ಲಿ‌ ನಿಂತಿದ್ದಾರೆ.

ದೊಡ್ಡಗೌಡರ ಕುಟುಂಬಕ್ಕೆ ಮರಿಮೊಮ್ಮಗನ ಆಗಮನವಾಗುತ್ತೆ ಅಂತ
ಅವಧೂತರಾದ ವಿನಯ್ ಗುರೂಜಿಯವರು ಭವಿಷ್ಯ ನುಡಿದಿದ್ದರು.‌ಕೊನೆಗೂ ಗುರೂಜಿಯ ಭವಿಷ್ಯ ನಿಜವಾಗಿದೆ. ನಿಖಿಲ್- ರೇವತಿ ದಂಪತಿಗೆ ಗಂಡುಮಗು‌ ಜನಿಸಿದೆ. ಮರಿ ಯುವರಾಜನೋ ಅಥವಾ ಜೂನಿಯರ್ ಯುವರಾಣಿಯೋ ಎನ್ನುವ ಕಾತುರಕ್ಕೆ ಬ್ರೇಕ್ ಬಿದ್ದಿದೆ. ಜೂ. ನಿಖಿಲ್ ಕಣ್ತುಂಬಿಕೊಳ್ಳುವ ಕಾತುರ ಹೆಚ್ಚಾಗಿದೆ.‌



ಜೂ.ನಿಖಿಲ್ ಎಂಟ್ರಿಯಿಂದ ಗಂಧದಗುಡಿಯ ಯುವರಾಜ ನಿಖಿಲ್ ಗೆ ಶಾಸಕನಾಗುವ ಅದೃಷ್ಟವಿದೆ ಎನ್ನುವ ಸಮಾಚಾರವನ್ನ ವಿನಯ್ ಗುರೂಜಿಯವರು ಈ ಹಿಂದೆಯೇ ಹೇಳಿದ್ದಾರೆ. ಸದ್ಯಕ್ಕೆ, ದೊಡ್ಮನೆಯ ಯುವರಾಣಿಗೆ ಗಂಡುಮಗು ಜನನದ ಸುದ್ದಿ ಸತ್ಯವಾಗಿದೆ. ಆ ಮಗುವಿನ ಭವಿಷ್ಯ ಉಜ್ವಲವಾಗಿರುವುದರ ಜೊತೆಗೆ ನಿಖಿಲ್ ಗೆ ರಾಜಯೋಗ ಬರಲಿದೆಯಂತೆ.

ಆ ದಿವ್ಯಯೋಗದ ಕ್ಷಣಕ್ಕಾಗಿ ಗೌಡ್ರ ಕುಟುಂಬ ಮಾತ್ರವಲ್ಲ ಅಭಿಮಾನಿ ದೇವರುಗಳು ಕೂಡ ಕೂತೂಹಲದಿಂದ ಎದುರುನೋಡ್ತಿದೆ. ಆ ಅದೃಷ್ಟದ ಕ್ಷಣ ಆದಷ್ಟು ಬೇಗ ಬರಲಿ ಅಲ್ಲವೇ.

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್‌ಕುಮಾರಸ್ವಾಮಿಯವರು ಸಿನಿಮಾ ಮಾತ್ರವಲ್ಲದೇ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್, ಗಂಧದಗುಡಿಯ ಅಂಗಳದಲ್ಲಿ ಗೆಲುವಿನ ಗದ್ದುಗೆ ಏರುವುದರ ಜೊತೆಗೆ ರಾಜಕೀಯ ನಾಯಕರಾಗಿ ಅಧಿಕಾರದ ಚುಕ್ಕಾಣಿ ಹಿಡಿಬೇಕು ಎನ್ನುವ ಮಹದಾಸೆವೊತ್ತಿದ್ದಾರೆ. ಪಕ್ಷಸಂಘಟನೆ ಹಾಗೂ ಪ್ರಚಾರದ ಜೊತೆಗೆ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ, ರೈಡರ್ ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ.

ಅಂದ್ಹಾಗೇ, ಇತ್ತೀಚೆಗಷ್ಟೇ ದೊಡ್ಮನೆಯ ಯುವರಾಣಿ ರೇವತಿಯವರ ಸೀಮಂತಕಾರ್ಯ ಅದ್ದೂರಿಯಾಗಿ ನೆರವೇರಿತ್ತು. ಮನೆಮಗಳ ರೂಪದಲ್ಲಿರುವ ಸೊಸೆ ರೇವತಿಯವರ ಕನಸಿನಂತೆಯೇ ಸೀಮಂತ ಶಾಸ್ತ್ರವನ್ನ ಗ್ರ್ಯಾಂಡ್ ಆಗಿ, ಸಂಪ್ರದಾಯಬದ್ಧವಾಗಿ ನೆರವೇರಿಸಿದ್ದರು. ಎಚ್ ಎಸ್ ಆರ್ ಲೇ ಔಟ್ ನ ಖಾಸಗಿ ಕನ್ವೆಷನ್ ಹಾಲ್ ನಲ್ಲಿ ರೇವತಿ ಬೇಬಿಶವರ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಕುಟುಂಬಸ್ಥರು ಹಾಗೂ ಆಪ್ತರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಶುಭಕೋರಿದ್ದರು

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಪುರ್‌ಸೊತ್‌ ಮಾಡ್ಕೊಂಡ್‌ ಲೈಫ್‌ ಎಂಜಾಯ್‌ ಮಾಡಿ! ಇದು ಸಂಚಾರಿಯ ಭಾವುಕ ಪಯಣ…

ಚಿತ್ರ ವಿಮರ್ಶೆ: ವಿಜಯ್‌ ಭರಮಸಾಗರ

ಚಿತ್ರ: ಪುಕ್ಸಟ್ಟೆ ಲೈಫು-ಪುರುಸೊತ್ತೇ ಇಲ್ಲ
ನಿರ್ಮಾಪಕ: ನಾಗರಾಜ ಸೋಮಯಾಜಿ
ನಿರ್ದೇಶನ: ಅರವಿಂದ್‌ ಕುಪ್ಳೀಕರ್‌
ತಾರಾಗಣ : ಸಂಚಾರಿ ವಿಜಯ್‌, ಅಚ್ಯುತ್‌ ಕುಮಾರ್‌, ರಂಗಾಯಣ ರಘು, ಮಾತಂಗಿ ಪ್ರಸನ್ನ ಇತರರು.

ಪೊಲೀಸು ಸಾಯಿಸ್ಬೋದು. ಆದರೆ, ಕೊಲೆ ಮಾಡಬಾರದು…
ಆ ತನಿಖಾಧಿಕಾರಿ ಈ ಡೈಲಾಗ್ ಹೇಳುವ ಹೊತ್ತಿಗೆ, ಅಲ್ಲೊಂದು ಕೊಲೆ ನಡೆದಿರುತ್ತೆ. ಅಲ್ಲಿ ಕೊಲೆಯಾದವ ಯಾರು, ಆ ಕೊಲೆ ಮಾಡಿದ್ದು ಯಾರು, ಯಾಕೆ ಅನ್ನೋ ಕುತೂಹಲವಿದ್ದರೆ, ಯಾವುದೇ ಅನುಮಾನವಿಲ್ಲದೆ “ಪುಕ್ಸಟ್ಟೆ ಲೈಫು” ಸಿನಿಮಾ ನೋಡಬಹುದು. ಅಲ್ಲಲ್ಲಿ ಕಚಗುಳಿ ಇಡುತ್ತಲೇ, ಆಗಾಗ ಕಾಡುವ, ದಿಟ್ಟಿಸಿ ನೋಡುವ, ವಾಸ್ತವತೆ ಸಾರುವ, ಒಮ್ಮೊಮ್ಮೆ ಭಾವುಕತೆಗೆ ನೂಕಿ, ಭಾರವೆನಿಸಿ ನೈಜತೆಗೆ ಹತ್ತಿರವಾಗುವ ಸಿನಿಮಾ ಇದು. ಇಲ್ಲಿ ಓದುವುದಕ್ಕಿಂತ ಹಾಗೊಮ್ಮೆ ಪುರುಸೊತ್ತು ಮಾಡಿಕೊಂಡು ಸಿನಿಮಾ ನೋಡಿದರೆ ಅದಕ್ಕೊಂದು ಅರ್ಥ.

ಇಡೀ ಸಿನಿಮಾದ ಆಕರ್ಷಣೆ ಮನಮಿಡಿಯೋ ಕಥೆ. ಅದನ್ನು ಅಷ್ಟೇ ಸೊಗಸಾಗಿಯೇ ಕಟ್ಟಿಕೊಡುವ ಪ್ರಯತ್ನ ನಿರ್ದೇಶಕ ಅರವಿಂದ್ ಕುಪ್ಳೀಕರ್‌ ಅವರಿಂದ ಆಗಿದೆ. ಮೊದಲರ್ಧ ಸುಮ್ಮನೆ ನೋಡಿಸಿಕೊಂಡು ಹೋಗುವ ತಾಕತ್ತು ಚಿತ್ರಕಥೆಗಿದೆ. ಒಂದಷ್ಟು ಕುತೂಹಲ ಕೆರಳಿಸುತ್ತಲೇ ದ್ವಿತಿಯಾರ್ಧ ಸಾಗುತ್ತದೆಯಾದರೂ, ನೋಡುವ ಪ್ರೇಕ್ಷಕನಿಗೆ ಮುಂದೇನಾಗುತ್ತೆ ಅನ್ನುವುದರ ಅರಿವು ಕೂಡ ಗೊತ್ತಾಗುತ್ತೆ. ಅಲ್ಲಲ್ಲಿ ಇನ್ನಷ್ಟು ಬಿಗಿಯಾದ ನಿರೂಪಣೆ ಇರಬೇಕಿತ್ತು. ಕೆಲವು ಕಡೆ ನಿರ್ದೇಶಕರ ಹಿಡಿತ ಕೈ ತಪ್ಪಿದೆಯಾದರೂ, ಕೊನೆ ಕೊನೆಯಲ್ಲಿ ಸೀಟಿನ ಅಂಚಿಗೆ ಕೂರಿಸುವ ತಾಕತ್ತು ಆ ಕಥೆಯಲ್ಲಿದೆ. ಎಲ್ಲೋ ಒಂದು ಕಡೆ ಕಥೆ ಆಶಯ ಬೇರೆಲ್ಲೋ ಸಾಗುತ್ತಿದೆ ಅನ್ನುವ ಹೊತ್ತಿಗೆ ಚಿತ್ರದ ಸಂಭಾಷಣೆ, ಹಿನ್ನೆಲೆ ಸಂಗೀತ ಮತ್ತು ಪಾತ್ರಗಳಲ್ಲಿನ ಲವಲವಿಕೆ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಒಂದು ಸಿನಿಮಾ ನೈಜತೆಗೆ ಹತ್ತಿರವಾಗಿರಬೇಕು ಜೊತೆಗೆ ಸಮಾಜದೊಳಗಿನ ವಾಸ್ತವದ ಅರಿವನ್ನು ತೆರೆದಿಡುವಂತಿರಬೇಕು ಅನ್ನುವುದಕ್ಕೆ ಈ ಚಿತ್ರ ಸಾಕ್ಷಿ. ಪ್ರಸ್ತುತ ವಿದ್ಯಮಾನಗಳನ್ನೇ ಇಟ್ಟುಕೊಂಡು ನಿರೂಪಿಸಿರುವ ಜಾಣತನ ನಿರ್ದೇಶಕರದ್ದು.

ಇದು ಸಾರಾಂಶ…
ಅಲ್ಲೊಬ್ಬ ಷಹಜಾನ್. ಅವನಿಗೊಬ್ಬ ಮಮ್ತಾಜ್ ಕೂಡ ಇದ್ದಾಳೆ. ಹಾಗಂತ, ಇಲ್ಲಿ ‘ತಾಜ್ ಮಹಲ್’ನಂತಹ ಪ್ರೇಮ್ ಕಹಾನಿ ಇಲ್ಲ. ಷಹಜಾನ್ ಒಬ್ಬ ಕೀ ಮೇಕರ್. ಅಷ್ಟೇನು ಸ್ಥಿತಿವಂತನಲ್ಲದ ಷಹಜಾನ್, ಪೋಲೀಸರ ಆಟದಗೊಂಬೆ ಆಗ್ತಾನೆ. ಅದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಅಂತಿಟ್ಟುಕೊಳ್ಳಿ. ಏನನ್ನೂ ಅರಿಯದ ಷಹಜಾನ್ ತನ್ನದಲ್ಲದ ತಪ್ಪಿಗೆ ಬಂಧಿಯಾಗ್ತಾನೆ. ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿ ನಲುಗಿ ಹೋಗ್ತಾನೆ. ಘಟನೆಯೊಂದರಲ್ಲಿ ಮನಸ್ಸೊಪ್ಪದಿದ್ದರೂ ಪರಿಸ್ಥಿತಿ ಅವನನ್ನು ಕಳ್ಳನನ್ನಾಗಿಸುತ್ತೆ. ಅವನ ಆ ಪರಿಸ್ಥಿತಿಗೆ ಕಾರಣವೇನು? ಅದೇ ಸಿನಿಮಾದ ಟ್ವಿಸ್ಟು! ಈ ಕಥೆಯಲ್ಲಿ ಷಹಜಾನ್‌ನ ವ್ಯಥೆಯೂ ಇದೆ. ಅದೇನು ಎಂಬ ಪ್ರಶ್ನೆಗೆ ಉತ್ತರ ಬೇಕಿದ್ದರೆ, ಒಂದು ಬಾರಿ ಷಹಜಾನ್‌ನ ನೊಂದ-ಬೆಂದ ಕಥೆಯ ಚಿತ್ರಣ ನೋಡಬಹುದು.

ಇನ್ನು ಚಿತ್ರದ ಮತ್ತೊಂದು ಹೈಲೈಟ್‌ ಅಂದರೆ, ಸಂಗೀತ. ಚಿತ್ರದ ವೇಗಕ್ಕೆ ಹಿನ್ನೆಲೆ ಸಂಗೀತ ಹೆಗಲು ಕೊಟ್ಟಿದೆ. ಪ್ರತಿ ದೃಶ್ಯದಲ್ಲೂ ಅದ್ವೈತ ಗುರುಮೂರ್ತಿ ಅವರ ಕ್ಯಾಮೆರಾ ಕೈಚಳಕ ಖುಷಿ ಕೊಡುತ್ತದೆ. ಅದಕ್ಕೆ ಪೂರಕವಾಗಿ ಸಂಕಲನವೂ ಇದೆ. ಅಲ್ಲಲ್ಲಿ ಬರುವ ಹಾಡುಗಳಿಗೂ ಇಲ್ಲಿ ಮಹತ್ವವಿದೆ. ಇನ್ನು, ನಟನೆ ವಿಚಾರಕ್ಕೆ ಬಂದರೆ, ಸಂಚಾರಿ ವಿಜಯ್ ಅವರ ಬಗ್ಗೆ ಮಾತಾಡುವಂತಿಲ್ಲ. ಇಡೀ ಪಾತ್ರವನ್ನು ಅವರು ಜೀವಿಸಿದ್ದಾರೆ. ಮುಸ್ಲಿಂ ಯುವಕನ ಪಾತ್ರದ ನೋಡಿದವರಿಗೆ ಖಂಡಿತ ಖುಷಿಯಾಗದೇ ಇರದು. ಆ ಪಾತ್ರ ಮೂಲಕವೂ ಅವರು ಭಾವುಕತೆ ಹೆಚ್ಚಿಸಿದ್ದಾರೆ.

ಸಿನಿಮಾ ನೋಡಿ ಹೊರಬಂದವರಿಗೆ ಸಂಚಾರಿಯ ಭಾವುಕ ಪಯಣ ನೆನಪಾಗದೇ ಇರದು. ಅಷ್ಟರಮಟ್ಟಿಗೆ ಆವರಿಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ ಎಂದಿನಂತೆಯೇ ಗಮನ ಸೆಳೆಯುತ್ತಾರೆ. ಪೊಲೀಸ್‌ ಅಧಿಕಾರಿಯೊಬ್ಬನ ಹಣದಾಸೆ ಹೇಗೆಲ್ಲಾ ಇರುತ್ತೆ, ಅದರೊಂದಿಗೂ ಸಣ್ಣದ್ದೊಂದು ಮಾನವೀಯ ಗುಣವುಳ್ಳ ಪಾತ್ರವದು. ಇನ್ನು, ರಂಗಾಯಣ ರಘು ತನಿಖಾಧಿಕಾರಿಯಾಗಿ ಇಷ್ಟವಾಗುತ್ತಾರೆ. ಈವರೆಗೆ ಮಾಡಿದ ಪಾತ್ರಗಳಿಗಿಂತ ಇಲ್ಲಿನ ಪಾತ್ರ ವಿಭಿನ್ನ ಮತ್ತು ವಿಶಿಷ್ಟ ಎನ್ನಬಹುದು. ಉಳಿದಂತೆ ಅಲ್ಲಲ್ಲಿ ಬರುವ ಪ್ರತಿ ಪಾತ್ರಗಳು ಸಹ ಸಿನಿಮಾದಲ್ಲಿ ಜೀವಿಸಿವೆ.

ಕೊನೇ ಮಾತು: ಈ ಭಾವುಕ ಪಯಣದಲ್ಲಿ ಪುರುಸೊತ್ತು ಮಾಡ್ಕೊಂಡು ‘ಲೈಫ್’ ಎಂಜಾಯ್ ಮಾಡಿ..

Categories
ಸಿನಿ ಸುದ್ದಿ

ಗಂಧದಗುಡಿಗೆ ಹೊಂಬಾಳೆ ಫುಲ್‌ಮೀಲ್ಸ್ ; ಹಬ್ಬದೂಟ ಬಡಿಸ್ತಾರೆ ಸಂತೋಷ್-ಜಗ್ಗೇಶ್ ! `ರಾಘವೇಂದ್ರ ಸ್ಟೋರ್ಸ್ʼನ ಮೃಷ್ಟಾನ್ನ ಭೋಜನ !

ಚಿತ್ರಾನ್ನಕ್ಕೆ ಕಾಂಗ್ರೇಸ್ ಕಡ್ಲೇಬೀಜ ಹಾಕದೆ ಹೋದರೂ ಪರವಾಗಿಲ್ಲ ಸೀದಾ ಸಾದಾ ಚಿತ್ರಾನ್ನ ಕೊಟ್ಟರೆ ಸಾಕು ಅಂತ ಹೇಳಿದಾಗ ಗಾಂಧಿನಗರದಲ್ಲಿದ್ದ ಎರಡು ಇಡ್ಲಿ ಒಂದು ವಡಾ ಬ್ರೇಕ್‌ಫಾಸ್ಟ್‌ ಪದ್ದತಿಯನ್ನೇ ಬ್ರೇಕ್ ಮಾಡಿದವರು. ತಿಂಡಿ ಇರಲಿ ತೀರ್ಥ ಇರಲಿ ಎಲ್ಲವೂ ಹೊಟ್ಟೆತುಂಬಾ ಸೇರಬೇಕು ಅಂತ ಮೀಲ್ಸ್ ಕೇಳಿದರೆ ಫುಲ್‌ಮೀಲ್ಸ್ ಕೊಟ್ಟುಕೊಂಡು ಸಿನಿಮಾ ಕಾರ್ಮಿಕರನ್ನು, ಚಿತ್ರರಂಗ ನಂಬಿಕೊಂಡಿರುವವರನ್ನು, ಪ್ರತಿಭೆವುಳ್ಳವರನ್ನು, ಸಿನಿಮಾಗೋಸ್ಕರ ನಿದ್ದೆಗೆ ಚಟ್ಟಕಟ್ಟಿ ಕೆಲಸ ಮಾಡುವವರನ್ನು ಬೆಳೆಸುತ್ತಿದ್ದಾರೆ. ನಮ್ಮ ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿಯನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದಕ್ಕೆ `ಹೊಂಬಾಳೆ ಸಂಸ್ಥೆ’ಯವರು ಪಣತೊಟ್ಟಿದ್ದಾರೆ ಅಂದರೆ ಬಹುಶ: ತಪ್ಪಾಗಲಿಕ್ಕಿಲ್ಲ ಎನಿಸುತ್ತೆ.

ಕರ್ನಾಟಕ ಸಿನಿಮಾ ಪ್ರೇಕ್ಷಕರಿಗೆ ಬಾಳೆದೆಲೆಯಲ್ಲಿ ಹಬ್ಬದೂಟ ಬಡಿಸಿ ಸಂತೃಪ್ತಿಪಡಿಸಿರುವ ಹೊಂಬಾಳೆ ಫಿಲಂಸ್‌, ʼಕೆಜಿಎಫ್ʼ ಚಿತ್ರದ ಮೂಲಕ ಕನ್ನಡಿಗರ ಜೊತೆಗೆ ಇಡೀ ಜಗತ್ತಿಗೆ ಬಾಳೆದೆಲೆಯಲ್ಲಿ ಬಾಡೂಟ ಹಾಕ್ಸಿದ್ದು ಇನ್ನೂ ಯಾರು ಮರೆತಿಲ್ಲ. ಮುಂದೆ ಮರೆಯೋದು ಇಲ್ಲ. ಯಾಕಂದ್ರೆ, ಗಂಧದಗುಡಿಯಲ್ಲಿ ಗೊನೆಯೊಡೆದ ಬಾಳೆದೆಲೆಗೆ ಅದರದ್ದೇ ಆದ ಮಹತ್ವವಿದೆ, ಅಂತ ಮಹತ್ವದ ಎಲೆಯ ಮೇಲೆ ಹೊಂಬಾಳೆ ಫಿಲಂಸ್‌ ನವರು' ಬಡಿಸಿದ ಊಟಕ್ಕೆ ಅದರದ್ದೇ ಆದ ಶ್ರೇಷ್ಟತೆಯಿದೆ. ಹೀಗಾಗಿಯೇ, ಇವತ್ತು ಇಡೀ ಭಾರತೀಯ ಚಿತ್ರರಂಗ ಹೊಂಬಾಳೆ ತಯ್ಯಾರಿಸುವ ಮೃಷ್ಟಾನ್ನ ಭೋಜನಕ್ಕಾಗಿ ಎದುರು ನೋಡುತ್ತೆ. ʼಕೆಜಿಎಫ್ ಚಾಪ್ಟರ್-2ʼ ಗಾಗಿ ವರ್ಲ್ಡ್‌ ವೈಡ್ ಕಣ್ಣರಳಿಸಿ ಕಾಯುತ್ತಿರುವ ಕಾಲದಲ್ಲಿಗಂಧದಗುಡಿಗೆ’ ಫುಲ್‌ಮೀಲ್ಸ್ ಹಾಕೋದಕ್ಕೆ `ಹೊಂಬಾಳೆ’ಯ ಅನ್ನದಾತರು ಸಜ್ಜಾಗಿದ್ದಾರೆ.

ಚಿತ್ರಾನ್ನಕ್ಕೆ ಕಾಂಗ್ರೇಸ್ ಕಡ್ಲೇಬೀಜ ಹಾಕದೆ ಹೋದರೂ ಪರವಾಗಿಲ್ಲ ಸೀದಾ ಸಾದಾ ಚಿತ್ರಾನ್ನ ಕೊಟ್ಟರೆ ಸಾಕು ಅಂತ ಹೇಳಿದಾಗ ಗಾಂಧಿನಗರದಲ್ಲಿದ್ದ ಎರಡು ಇಡ್ಲಿ ಒಂದು ವಡಾ ಬ್ರೇಕ್‌ಫಾಸ್ಟ್‌ ಪದ್ದತಿಯನ್ನೇ ಬ್ರೇಕ್ ಮಾಡಿದವರು. ತಿಂಡಿ ಇರಲಿ ತೀರ್ಥ ಇರಲಿ ಎಲ್ಲವೂ ಹೊಟ್ಟೆತುಂಬಾ ಸೇರಬೇಕು ಅಂತ ಮೀಲ್ಸ್ ಕೇಳಿದರೆ ಫುಲ್‌ಮೀಲ್ಸ್ ಕೊಟ್ಟುಕೊಂಡು ಸಿನಿಮಾ ಕಾರ್ಮಿಕರನ್ನು, ಚಿತ್ರರಂಗ ನಂಬಿಕೊಂಡಿರುವವರನ್ನು, ಪ್ರತಿಭೆವುಳ್ಳವರನ್ನು, ಸಿನಿಮಾಗೋಸ್ಕರ ನಿದ್ದೆಗೆ ಚಟ್ಟಕಟ್ಟಿ ಕೆಲಸ ಮಾಡುವವರನ್ನು ಬೆಳೆಸುತ್ತಿದ್ದಾರೆ. ನಮ್ಮ ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿಯನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದಕ್ಕೆ `ಹೊಂಬಾಳೆ ಸಂಸ್ಥೆ’ಯವರು ಪಣತೊಟ್ಟಿದ್ದಾರೆ ಅಂದರೆ ಬಹುಶ: ತಪ್ಪಾಗಲಿಕ್ಕಿಲ್ಲ ಎನಿಸುತ್ತೆ.

ಪವರ್‌ಸ್ಟಾರ್ ಜೊತೆ ಯುವ ನಿರ್ಮಾಪಕರಾಗಿ ಅಖಾಡಕ್ಕಿಳಿದವರು ಇವತ್ತು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದುಮಾಡುತ್ತಿದ್ದಾರೆ ಮತ್ತು ಸುದ್ದಿಯಾಗ್ತಿದ್ದಾರೆ ಅಂದ್ರೆ ಕಾರಣ ಸಿನಿಮಾ ಮೇಲೆ `ಹೊಂಬಾಳೆ ಫಿಲಂಸ್‌ʼ ನ ಮುಖ್ಯಸ್ಥರಿಗೆ ಸಿನಿಮಾ ಮೇಲಿರುವಂತಹ ಪ್ರೀತಿ ಮತ್ತು ಭಕ್ತಿ. ಕೇವಲ ದುಡ್ಡು ಮಾಡೋದಕ್ಕೆ ಬಂದಿರುವವರಲ್ಲ ಇವರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಸಿನಿಮಾದಿಂದ ಬಂದ ಹಣವನ್ನ ಸಿನಿಮಾಗೆ ಸುರಿಯುತ್ತಿದ್ದಾರೆ. ಕೆಜಿಎಫ್ ನಂತರ ಭರ್ತಿ ಆರು ಚಿತ್ರಗಳನ್ನ ಅನೌನ್ಸ್ ಮಾಡಿದ್ದಾರೆ. ʼಕೆಜಿಎಫ್ ಚಾಪ್ಟರ್-2ʼ ಸೇರಿದಂತೆ ಒಟ್ಟು ಹನ್ನೆರಡು ಸಿನಿಮಾಗಳು ಹೊಂಬಾಳೆ ಮುಖ್ಯಸ್ಥರ ಕೈಯಲ್ಲಿವೆ. ಆರಿದ್ದ ಚಿತ್ರಗಳು ಹನ್ನೆರಡು ಆಗಿರುವಾಗ ಗಂಧದಗುಡಿಗೆ ಫುಲ್‌ಮೀಲ್ಸ್ ಹಾಕೋದಕ್ಕೆ ಮುಂದಾಗಿದ್ದಾರೆ. ನವರಸಗಳಿಗೆ ನಾಯಕರಾಗಿರುವ ಜಗ್ಗೇಶ್ ಅವರಿಂದಲೇ ಕರ್ನಾಟಕಕ್ಕೆ ಮೃಷ್ಟಾನ್ನ ಭೋಜನ ಬಡಿಸೋದಕ್ಕೆ ಹೊಂಬಾಳೆ ಸಂಸ್ಥೆ ಸಜ್ಜಾಗಿದೆ.

ಆಗಲೇ ಹೇಳಿದ ಹಾಗೇ ಮೀಲ್ಸ್ ಕೇಳಿದರೆ ಫುಲ್‌ಮೀಲ್ಸ್ ಕೊಡುವ ಬ್ಯಾನರ್ ಹೊಂಬಾಳೆ'. ಚಿತ್ರಾನ್ನ ಕಂಡು ಎಕ್ಸೈಟ್‌ ಆಗುವ ಸಿನಿಪ್ರೇಮಿಗಳಿಗೆ ವೆಜ್‌ಪುಲಾವ್ ಬಡಿಸಿ ಸಂತೃಪ್ತಿಪಡಿಸುವ ನಿರ್ಮಾಣ ಸಂಸ್ಥೆ. ಇದೀಗ ನವರಸನಾಯಕ ಜಗ್ಗೇಶ್ ಹಾಗೂ ಸಂತೋಷ್ ಆನಂದ್‌ರಾಮ್ ಅವರ ಕಾಂಬಿನೇಷನ್‌ನಲ್ಲಿ ಡೆಲಿಷಿಯಸ್ ಫುಲ್‌ಮೀಲ್ ತಯ್ಯಾರಿಸುವ ಸಿದ್ದತೆಯಲ್ಲಿದೆ. ನವೆಂಬರ್ ೨೨ ರಂದು ಕುಕ್ಕಿಂಗ್ ಶುರುವಾಗಲಿದೆ.ʼ ರಾಜಕುಮಾರʼ ಹಾಗೂʼ ಯುವರತ್ನʼ ಚಿತ್ರದ ಸಾರಥಿ ಸಂತೋಷ್ ಆನಂದ್ ರಾಮ್ ರುಚಿಕಟ್ಟಾದ, ಸ್ವಾದಭರಿತ, ಆಹ್ಲಾದಕರವಾ ದಮೃಷ್ಟಾನ್ನ’ವನ್ನು ತಯ್ಯಾರಿಸಲಿದ್ದಾರೆ. ಹಾಸ್ಯ, ಶೃಂಗಾರ, ರೌದ್ರ, ಭಯಾನಕ, ಭೀಭತ್ಸ, ವೀರ, ಕರುಣಾ, ಅದ್ಭುತ, ಶಾಂತ ಹೀಗೆ ಒಂಭತ್ತು ರಸಗಳಿಗೆ ಬ್ರಾಂಡ್ ಅಂಬಾಸೀಡರ್ ಆಗಿರುವ, ನವರಸನಾಯಕ ಎಂತಲೇ ಪ್ರಖ್ಯಾತಿ ಪಡೆದಿರುವ ಜಗ್ಗಣ್ಣ ಇಡೀ ಕರುನಾಡಿಗೆ ಫುಲ್‌ಮೀಲ್ಸ್ ಹಬ್ಬದೂಟ ಬಡಿಸ್ತಾರೆ. ಈಗಾಗಲೇ ಬಿಡುಗಡೆಯಾಗಿರುವ `ರಾಘವೇಂದ್ರ ಸ್ಟೋರ್ಸ್ʼ ಪೋಸ್ಟರ್ ನೋಡಿದ್ರೆ ನಿಮಗೆ ತಿಳಿಯುತ್ತೆ.

ಅಂದ್ಹಾಗೇ,ರಾಘವೇಂದ್ರ ಸ್ಟೋರ್ಸ್ʼ ಪಕ್ಕಾ ಪ್ಯೂರ್ ವೆಜ್ ಖಾನಾವಳಿ. ಎರಡು ಇಡ್ಲಿ ಮೆಣಸಿನಕಾಯಿ ಜೊತೆ ತೂತ್‌ವಡೆ ಸಿಗುತ್ತೆ. ಉಪ್ಪಿಟ್ಟು ಖಾಯಂ, ನೆಂಚಿಗೆ ಬೇಕಾದರೆ ಟೇಬಲ್ ಮೇಲೆ ಈರುಳ್ಳಿ ಇರುತ್ತೆ. ತಿನ್ನೋವಾಗ ಕೂದಲು ಸಿಗ್ಬೋದು ಅರ್ಜೆಸ್ಟ್ ಮಾಡ್ಕೊಬೇಕಾಗುತ್ತದೆ. ಮುಖಕ್ಕೆ ಅಡುಗೆ ಭಟ್ಟ ಹಿಟ್ಟು ಮೆತ್ಕೊಂಡಿದ್ದಾನೆ ಎನ್ನುವ ಕಾರಣಕ್ಕೆ ಕ್ಲೀನ್ ಇಲ್ಲ ಎಂದುಕೊಳ್ಳಬೇಡಿ. ಕ್ಲಿನಿಕ್ ಆಲ್‌ಕ್ಲಿಯರ್ ಶಾಂಪು ಥರ ಈ ಹೋಟೆಲ್ ಪಕ್ಕಾ ಕ್ಲೀನ್ ಅಂಡ್ ಕ್ಲಿಯರ್ ಅದರಲ್ಲೂ,ರಾಘವೇಂದ್ರ ಸ್ಟೋರ್ಸ್ʼ ನಲ್ಲಿ ಅಡುಗೆ ಮಾಡುವ ಭಟ್ಟರು ಹಾಗೂ ಬಡಿಸೋರು ಶ್ರೀ ಗುರು ರಾಘವೇಂದ್ರ ಸ್ವಾಮಿಯ ಪರಮಭಕ್ತರಾಗಿರೋದ್ರಿಂದ ಕ್ಲೀನ್ ಆಗಿರಲೆಬೇಕು ಅಪ್‌ಕೋರ್ಸ್ ಇರುತ್ತಾರೆ ಕೂಡ.

ಅಣ್ಣಾವ್ರು ಮಂತ್ರಾಲಯ ಮಹಾತ್ಮೆ' ಸಿನಿಮಾ ಮಾಡುವಾಗ ಮಡಿಮೈಲಿಗೆಯಿಂದ ಇದ್ದರು ಜೊತೆಗೆ ನಾನ್‌ವೆಜ್ ತ್ಯಜಿಸಿದ್ದರು. ಅದರಂತೇ, ಜಗ್ಗಣ್ಣ ಕೂಡರಾಘವೇಂದ್ರ ಸ್ಟೋರ್ಸ್ʼಗಾಗಿ ನಾನ್‌ವೆಜ್ ಬಿಡ್ತಾರೆ ಅನ್ಸುತ್ತೆ. ಮೇಲ್ನೋಟಕ್ಕೆ ರಾಘವೇಂದ್ರ ಸ್ಟೋರ್ಸ್‌ʼ ಪ್ಯೂರ್ ವೆಜ್ ರೀತಿ ಕಾಣುತ್ತಿದೆ, ಪೋಸ್ಟರ್‌ನಲ್ಲಿ ಪಕ್ಕಾ ವೆಜ್ ಐಟಮ್ ಇರೋದ್ರಿಂದ ಪ್ಯೂರ್ ವೆಜಿಟೇರಿಯನ್ ಸಿನಿಮಾ ಅನ್ಸುತ್ತೆ. ಹೀಗಾಗಿ, ನಾನ್‌ವೆಜ್ ಬಿಡುವ ಸಂದರ್ಭ ಬರೋದಿಲ್ಲ ಆದರೂ ಕೂಡ ಜಗ್ಗಣ್ಣ ರಾಯರನ್ನ ಆರಾಧನೆ ಮಾಡೋದ್ರಿಂದ ರಾಘವೇಂದ್ರ ಸ್ಟೋರ್ಸ್‌ʼಗಾಗಿ ಬಾಡೂಟ ಬಿಟ್ಟರೂ ಬಿಡ್ಬೋದು ಕಾದುನೋಡಬೇಕು. ಒಟ್ನಲ್ಲಿ ರಾಘವೇಂದ್ರ ಸ್ಟೊರ್ಸ್‌ʼ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಫುಲ್‌ಮೀಲ್ಸ್ ಕೊಡ್ಬೇಕು ಅಂತ ಹೊಂಬಾಳೆ ನಿರ್ಧರಿಸಿದರೇ,ನಗಬೇಕು-ನಗಿಸಬೇಕು ಇದೇ ನನ್ನ ಧರ್ಮ’ ಫುಲ್‌ಮೀಲ್ಸ್ ಹಬ್ಬದೂಟ ಬಡಿಸ್ತೀನಿ ಎಂದು ಜಗ್ಗಣ್ಣ ರೆಡಿಯಾಗಿದ್ದಾರೆ. ಸಂತೋಷ್-ಜಗ್ಗೇಶ್ ತಯ್ಯಾರಿಸಲಿರುವ ಮೃಷ್ಟಾನ್ನ ಹೇಗಿರಲಿದೆ ಜಸ್ಟ್ ವೇಯ್ಟ್ ಅಂಡ್ ವಾಚ್

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಹೊಂಬಾಳೆ ಫಿಲಂಸ್ ಮನಸ್ಸು ಮಾಡಿದ್ರೆ ಇದೇನು ಮಹಾ ಕಷ್ಟ-ವಿಜಯ್‌ ಕಿರಗಂದೂರು ಮನಸ್ಸು ಮಾಡುವರೇ?

ವಿಶೇಷ ಲೇಖನ: ದೇಶಾದ್ರಿ ಹೊಸ್ಮನೆ

ಕೊರೋನಾವೂ ಸೇರಿದಂತೆ ಅನೇಕ ಕಾರಣಗಳಿಗೆ ರಾಜ್ಯದಲ್ಲೀಗ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಹಾಕುತ್ತಿವೆ. ಆಗೊಂದು ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚಿದ್ದ ಚಿತ್ರಮಂದಿರಗಳ ಸಂಖ್ಯೆ ಈಗ ೫೦೦ಕ್ಕೆ ಬಂದಿದೆ ಎನ್ನುತ್ತವೆ ಮೂಲಗಳು. ಭವಿಷ್ಯದ ದಿನಗಳಲ್ಲಿ ಈ ಸಂಖ್ಯೆ ನೂರಿನ್ನೂರಕ್ಕೆ ಇಳಿದರೂ ಅಚ್ಚರಿ ಇಲ್ಲ. ಇದಕ್ಕೆ ಪರ್ಯಾಯವಾಗಿ ಸಿನಿಮಾದ ಹೊಸ ಮಾರುಕಟ್ಟೆ ಓಟಿಟಿ. ಅಮೆಜಾನ್‌, ನೆಟ್‌ ಫ್ಲಿಕ್ಸ್‌ ಸೇರಿದಂತೆ ಇದಕ್ಕೂ ಈಗ ಹತ್ತಾರು ಪ್ಲಾಟ್‌ ಫಾರ್ಮ್‌ ಇವೆ. ಆದರೂ ಕನ್ನಡಕ್ಕೆ ಯೋಗ್ಯವಾದ್ದದೊಂದು ಓಟಿಟಿ ಫ್ಲಾಟ್‌ ಫಾರ್ಮ್‌ ಈಗಲೂ ಇಲ್ಲ. ಅದೇ ಕಾರಣಕ್ಕೆ ಹೊಂಬಾಳೆ ಫಿಲಂಸ್‌ ನಂತಹ ಒಂದು ದೊಡ್ಡ ಸಂಸ್ಥೆ ಕನ್ನಡ ಸಿನಿಮಾಗಳಿಗೇ ಮೀಸಲಾಗಿ ಒಂದು ಒಟಿಟಿ ಪ್ಲಾಟ್‌ ಫಾರ್ಮ್‌ ಶುರು ಮಾಡಿದರೆ ಕನ್ನಡ ಸಿನಿಮಾ ಉಳಿಯುತ್ತೆ, ಹಾಗೆಯೇ ಕನ್ನಡ ಸಿನಿಮಾ ನಂಬಿ ಬಂದ ನಿರ್ಮಾಪಕರೂ ಉಳಿಯಬಲ್ಲರು ಅಲ್ಲವೇ?

ಹೊಂಬಾಳೆ ಫಿಲಂಸ್‌… ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿಯೇ ಅತೀ ಹೆಚ್ಚು ಸೌಂಡ್‌ ಮಾಡುತ್ತಿರುವ ಚಿತ್ರ ನಿರ್ಮಾಣ ಸಂಸ್ಥೆ. ಇದು ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್‌ ಹೌಸ್‌ ಅನ್ನೋದು ಮತ್ತೊಂದು ಹೆಮ್ಮೆ. ಅದಕ್ಕೆ ಕಾರಣ ʼಕೆಜಿಎಫ್‌ʼ ಚಿತ್ರ. ಕನ್ನಡ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿಯೇ ʼಕೆಜಿಎಫ್‌ʼ ಸಂಚಲನ ಸೃಷ್ಟಿ ಮಾಡಿದ ರೀತಿ ಈಗಲೂ ಸೋಜಿಗ. ಸಮುದ್ರದೊಳಗೆ ಇದಕ್ಕಿದ್ದಂತೆ ದೊಡ್ಡ ಅಲೆಯೇ ಎದ್ದು ಬಂದಂತೆ ಭಾರತೀಯ ಚಿತ್ರರಂಗಕ್ಕೆ ಸುನಾಮಿಯಂತೆ ಅಪ್ಪಳಿಸಿದ್ದು ಕೆಜಿಎಫ್‌ ಚಿತ್ರ. ಈ ಸಿನಿಮಾ ಸೃಷ್ಟಿಸಿದ ಅಬ್ಬರಕ್ಕೆ ಇಡೀ ಭಾರತೀಯ ಚಿತ್ರರಂಗವೇ ಅರೆಕ್ಷಣ ಕನ್ನಡದತ್ತ ತಿರುಗಿ ನೋಡಿದ್ದೀಗ ಇತಿಹಾಸ. ಕನ್ನಡದ ಚಿತ್ರವೊಂದು ಆ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿದ್ದು ಅದೇ ಮೊದಲು. ಅದರ ಕೀರ್ತಿ ಹೊಂಬಾಳೆ ಫಿಲಂಸ್‌ನ ರೂವಾರಿ ವಿಜಯ್‌ ಕಿರಗಂದೂರು ಹಾಗೂ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರದ್ದು.

ಕೆಜಿಎಫ್‌ ಮೂಲಕ ನಿರ್ದೇಶಕ ಪ್ರಶಾಂತ್‌ ನೀಲ್‌ ಸೃಷ್ಟಿಸಿದ ಆ ಮ್ಯಾಜಿಕ್‌ ಬಗ್ಗೆ ಎಷ್ಟು ವರ್ಣಿಸಿದರು ಕಮ್ಮಿಯೇ. ಅದರ ದೊಡ್ಡ ಪ್ರಭಾವವೇ ಕನ್ನಡ ಸಿನಿಮಾರಂಗದಲ್ಲೂ ಎದ್ದು ನಿಂತ ಪ್ಯಾನ್‌ ಇಂಡಿಯಾ ಟ್ರೆಂಡ್. ಅದೇ ಕಾರಣಕ್ಕೆ ಇವತ್ತು ಇಡಿಯಾ ಲೆವೆಲ್‌ ನಲ್ಲಿ ಕನ್ನಡ ಸಿನಿಮಾ ಅಂದ್ರೆ ಹೊಂಬಾಳೆ ಫಿಲಂಸ್‌ ಎನ್ನುವಷ್ಟರ ಮಟ್ಟಿಗೆ ಕೆಜಿಎಫ್‌ ದೊಡ್ಡ ಹವಾ ಸೃಷ್ಟಿಸಿದೆ. ಹಾಗಂತ ಕನ್ನಡ ಸಿನಿಮಾ ಅಂದ್ರೆ ಹೊಂಬಾಳೆ ಫಿಲಂಸ್‌ ಅಂತ ನಾವು ಹೇಳುತ್ತಿಲ್ಲ. ಅಷ್ಟೇ ಯಾಕೆ, ಈ ಮಾತನ್ನು ಹೊಂಬಾಳೆ ಫಿಲಂಸ್‌ ನ ರೂವಾರಿ ವಿಜಯ್‌ ಕಿರಗಂದೂರು ಕೂಡ ಒಪ್ಪುವುದಿಲ್ಲ. ಯಾಕಂದ್ರೆ ಕನ್ನಡ ಸಿನಿಮಾದ ಇತಿಹಾಸ ದೊಡ್ಡದಿದೆ. ಆದರೆ ಬದಲಾದ ಕಾಲದ ಸಿನಿಮಾ ಮಾರ್ಕೆಟ್‌ ದೃಷ್ಟಿಯಲ್ಲಿ ಕನ್ನಡ ಸಿನಿಮಾ ಅಂದ್ರೆ ಬಾಲಿವುಡ್‌ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಒಂದು ಕ್ಷಣ ಅಚ್ಚರಿಯಾಗುವಂತೆ ಮಾಡಿದ್ದು ಕೆಜಿಎಫ್‌ ಚಿತ್ರ ಎನ್ನುವುದಕ್ಕೆ ಬಹುಶ: ಯಾರದೇ ತಕರಾರು ಇರದು.‌

ಅಷ್ಟು ಮಾತ್ರವಲ್ಲ, ʼಕೆಜಿಎಫ್‌ʼ ಬಂದು ಹೋದ ನಂತರ ಉಂಟಾದ ಪ್ರಭಾವ ಸಾಕಷ್ಟಿದೆ. ಆನಂತರ ಕನ್ನಡದಲ್ಲಿ ಶುರುವಾದ ಪ್ಯಾನ್‌ ಇಂಡಿಯಾಗಳ ದೊಡ್ಡ ಪಟ್ಟಿಯೇ ಅದಕ್ಕೆ ಸಾಕು. ಇರಲಿ, ಅದು ಕೆಜಿಎಫ್‌ ನ ತಾಕತ್ತು. ಅಲ್ಲಿಂದೀಗ ಕನ್ನಡದ ಸಿನಿಮಾ ಪ್ರೇಕ್ಷಕ ಮಾತ್ರವಲ್ಲ ಇಡೀ ಭಾರತೀಯ ಚಿತ್ರೋದ್ಯಮವೇ ʼಕೆಜಿಎಫ್‌ ೨ʼ ಚಿತ್ರದ ರಿಲೀಸ್‌ ದಿನಕ್ಕೆ ಕಾಯುತ್ತಿದೆ. ಹಾಗೆಯೇ ದೊಡ್ಡ ಕುತೂಹಲ ಹೊಂಬಾಳೆ ಫಿಲಂಸ್‌ ಬ್ಯಾನರ್‌ನ ಇತರೆ ಸಿನಿಮಾಗಳ ಮೇಲೂ ಇದೆ. ಪ್ರಭಾಸ್‌ ಅಭಿನಯದ ʼಸಲಾರ್ʼ ಮೊದಲ್ಗೊಂದು ಬುಧವಾರವಷ್ಟೇ ಅನೌನ್ಸ್‌ ಆದ ಹೊಂಬಾಳೆ ಫಿಲಂಸ್‌ ನ 12 ನೇ ಚಿತ್ರ ʼರಾಘವೇಂದ್ರ ಸ್ಟೋರ್ಸ್‌ʼ ಮೇಲೂ ಅಷ್ಟೇ ನಿರೀಕ್ಷೆ ಇದೆ. ಹೊಂಬಾಳೆ ಫಿಲಂಸ್‌ ಅಂದ್ರೆ ಸಿನಿಮಾ ಪ್ರೇಕ್ಷಕ ಪಾಲಿಗೆ ಅಂತಹ ಕುತೂಹಲ ಹಾಗೂ ನಿರೀಕ್ಷೆಗೆ ಕಾರಣವಾಗಿದ್ದು ʼಕೆಜಿಎಫ್‌ʼ ಚಿತ್ರ.

ಆ ಕತೆ ಇರಲಿ, ಕನ್ನಡದ ಸಿನಿಮಾ ಚೈತನ್ಯ ಕೊರೋನಾ ಕಾಲದಲ್ಲೂ ಕಿಂಚಿತ್ತು ಉಡುಗದಂತೆ ಮಾಡಿದ್ದು ಹೊಂಬಾಳೆ ಫಿಲಂಸ್‌ ಇನ್ನೊಂದು ಮಹತ್ಕಾರ್ಯ. ಯಾಕಂದ್ರೆ, ಕೊರೋನಾ ಅಂತ ಇಡೀ ಉದ್ಯಮ ಈಗಲೂ ಕೈ ಕಟ್ಟಿ ಕುಳಿತಿದೆ. ಅವಕಾಶ ಇದ್ದಾಗ್ಯೂ ಈಗ ಸಿನಿಮಾ ರಿಲೀಸ್‌ ಮಾಡೋದಿಕ್ಕೆ ಹಿಂದೆ ಮುಂದೆ ನೋಡಬೇಕಾದ ಸ್ಥಿತಿ ಇದೆ. ಇನ್ನು ದೊಡ್ಡ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಗಳೇ ಹೊಸ ಸಿನಿಮಾಗಳ ನಿರ್ಮಾಣಕ್ಕೆ ಮನಸ್ಸು ಮಾಡದೆ, ತಲೆ ಮೇಲೆ ಕೈ ಹೊತ್ತು ಕುಳಿತಿವೆ. ಕೊರೋನಾದ ಈ ಕಾಲದಲ್ಲಿ ದುಡ್ಡು ಹಾಕಿ ಸಿನಿಮಾ ಮಾಡಿದರೆ, ಮುಂದೆ ಹೇಗೋ ಎನೋ ಎನ್ನುವ ಆತಂಕ ಅವರಿಗೆ ಮನೆ ಮಾಡಿದೆ. ಆದರೆ ಹೊಂಬಾಳೆ ಫಿಲಂಸ್‌ ಮಾತ್ರ, ಕೊರೋನಾ ಕಾಲದಲ್ಲೂ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಅನೌನ್ಸ್‌ ಮಾಡುತ್ತಾ, ಕನ್ನಡ ಚಿತ್ರೋದ್ಯಮಕ್ಕೆ ಹೊಸ ಚೈತನ್ಯ ತುಂಬಿದ್ದು ಮಾತ್ರವಲ್ಲ, ನೆರೆ ಚಿತ್ರೋದ್ಯಮದ ಮಂದಿ ಅಚ್ಚರಿಯಾಗುವಂತೆ ಮಾಡಿದೆ.

ಇದು ಸ್ವಂತಕ್ಕೋ, ಸ್ವಾರ್ಥಕ್ಕೋ ಅದು ಏನೇ ಆಗಿದ್ದರೂ, ಒಂದು ಸಿನಿಮಾ ನಿರ್ಮಾಣವಾಗುತ್ತಿದೆ ಅಂದರೆ ಅದರಿಂದ ಅದೆಷ್ಟೋ ಕಾರ್ಮಿಕರಿಗೆ ಕೆಲಸ ಸಿಗುತ್ತದೆ. ಹಾಗೆಯೇ ಉದ್ಯಮ ಕೂಡ ಜೀವಂತವಾಗುಳಿದಿರುತ್ತದೆ ಎನ್ನುವುದು ಅಷ್ಟೇ ಸತ್ಯ. ಒಂದಲ್ಲ ಎರಡಲ್ಲ ಇವತ್ತು ಆರು ಸಿನಿಮಾಗಳು ಹೊಂಬಾಳೆ ಫಿಲಂಸ್‌ ಮೂಲಕ ಪ್ರೊಡಕ್ಷನ್‌ ಹಂತದಲ್ಲಿವೆ. ಅಲ್ಲಿಗೆ ನೂರು, ಇನ್ನೂರು ಮಾತ್ರವಲ್ಲ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಸಿಗುತ್ತಿದೆ. ಹಾಗೆಯೇ ಕೊರೋನಾ ಎಂಬ ಸಂಕಷ್ಟದಿಂದ ಚಿತ್ರೋದ್ಯಮ ಹೊರ ಬರುವುದಕ್ಕೆ ಇದು ದೊಡ್ಡ ಸಹಕಾರಿ ಆಗಿದೆ. ಆ ಮಟ್ಟಿಗೆ ಹೊಂಬಾಳೆ ಫಿಲಂಸ್‌ ನ ಸಿನಿಮಾ ಮೇಲಿನ ಕಾಳಜಿಗೆ ಒಂದು ಸೆಲ್ಯೂಟ್‌.

ಯಾಕಂದ್ರೆ, ಇದು ಸಿನಿಮಾ ಮೇಲಿನ ಪ್ರೀತಿಗಾಗಿ ಮಾಡುತ್ತಿರುವ ಕೆಲಸ. ಅದೊಂದೇ ಕಾರಣಕ್ಕೆ ದುಡ್ಡಿಗಿಂತ ಹೆಚ್ಚಾಗಿ ಕಲೆಗೆ ಬೆಲೆ ಕೊಟ್ಟು ಹೊಂಬಾಳೆ ಫಿಲಸ್‌ ಕನ್ನಡದ ಸ್ಟಾರ್ ಗಳಿಗೆ, ಪ್ರತಿಭಾವಂತ ನಿರ್ದೇಶಕರನ್ನೆಲ್ಲ ತನ್ನ ಕುಟುಂಬಕ್ಕೆ ಸೇರಿಸಿಕೊಂಡು ಸಿನಿಮಾ ಕಟ್ಟುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅದೇ ಹಾದಿಯಲ್ಲಿ ಅದೀಗ ಇನ್ನೊಂದು ಸಾಹಸ ಮಾಡಿದರೆ ಉದ್ಯಮವೂ ಉಳಿಯುತ್ತದೆ. ಆ ಕೆಲಸವೇ ಒಟಿಟಿ ಪ್ಲಾಟ್‌ ಫಾರ್ಮ್.‌ ಹಾಗಂತ ಕನ್ನಡ ಸಿನಿಮಾಗಳ ಮಾರುಕಟ್ಟೆಗೆ ಬೇರಾವುದೇ ಒಟಿಟಿ ಪ್ಲಾಟ್‌ ಫಾರ್ಮ್‌ ಇಲ್ಲಿಲ್ಲ ಅಂತಲ್ಲ. ಅಮೆಜಾನ್‌, ನೆಟ್‌ ಪ್ಲಿಕ್ಸ್‌ ಸೇರಿದಂತೆ ಸಾಕಷ್ಟು ಒಟಿಟಿ ಪ್ಲಾಟ್‌ ಫಾರ್ಮ್‌ ಇಲ್ಲಿವೆ. ಆದರೆ ಕನ್ನಡಕ್ಕೆ ಯೋಗ್ಯವಾದ ಒಂದು ಒಟಿಟಿ ಪ್ಲಾಟ್‌ ಫಾರ್ಮ್‌ ಇಲ್ಲ. ಇದ್ದವರು ಕೂಡ ಕನ್ನಡದ ನಿರ್ಮಾಪಕರಿಗೆ ಪೂರಕವಾಗಿಲ್ಲ. ಅದೊಂದು ಬೇಸರ ಈಗ ಇಡೀ ಚಿತ್ರೋದ್ಯಮವನ್ನು ಆವರಿಸಿಕೊಂಡಿದೆ.

ಅದು ದೂರವಾಗಬೇಕಾದರೆ ಕನ್ನಡದ ನಿರ್ಮಾಪಕರನ್ನು ಉಳಿಸುವಂತಹ, ಕಂಟೆಂಟ್‌ ಆಧರಿತ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುವಂತಹ ಒಂದು ಚೆಂದದ ಉದ್ಯಮ ಸ್ನೇಹಿ ಪ್ಲಾಟ್‌ ಫಾರ್ಮ್‌ ಕನ್ನಡಕ್ಕೆ ಬೇಕಿದೆ. ಆ ಕೆಲಸವನ್ನು ಹೊಂಬಾಳೆ ಫಿಲಂಸ್‌ಗೆ ಮಾಡುವ ಸಾಮಾರ್ಥ್ಯವಿದೆ.ತೆಲುಗಿನಲ್ಲೀಗ ನಟ ಅಲ್ಲು ಅರ್ಜುನ್‌ ಆಹಾ ಹೆಸರಲ್ಲೊಂದು ಒಟಿಟಿ ಪ್ಲಾಟ್‌ ಫಾರ್ಮ್‌ ಶುರು ಮಾಡಿದ್ದಾರೆ. ಅದು ತೆಲುಗು ಸಿನಿಮಾ, ವೆಬ್‌ ಸೀರಿಸ್‌ ಗೆ ಮಾತ್ರ ಸೀಮಿತವಾಗಿದೆ. ಅಂತಹದೇ ಒಂದು ಪ್ಲಾಟ್‌ ಫಾರ್ಮ್‌ ಅನ್ನು ಹೊಂಬಾಳೆ ಫಿಲಂಸ್‌ ಶುರು ಮಾಡಿದರೆ, ಕನ್ನಡದ ಅದೆಷ್ಟೋ ಸ್ಟಾರ್ ಗಳು, ನಿರ್ದೇಶಕರು, ತಂತ್ರಜ್ಜರಿಗೆ ಕೆಲಸ ಕೊಟ್ಟ ಹಾಗೆಯೇ, ಕನ್ನಡದ ಅದೆಷ್ಟೋ ನಿರ್ಮಾಪಕರನ್ನು ಉಳಿಸುವ ಕೆಲಸ ಆಗುತ್ತದೆ. ಹೊಂಬಾಳೆ ಫಿಲಂಸ್‌ ನಂತಹ ದೈತ್ಯ ಸಂಸ್ಥೆಗೆ ಇದೇನು ಕಷ್ಟದ ಕೆಲಸವೇನು ಅಲ್ಲ. ಮನಸ್ಸು ಮಾಡಬೇಕು ಅಷ್ಟೇ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಡಾರ್ಲಿಂಗ್‌ ಕೃಷ್ಣನ ಜೊತೆ ಜೊತೆಯಲಿ ಮೇಘಾ ಶೆಟ್ಟಿ; ಶಿವತೇಜಸ್ ನಿರ್ದೇಶನದ ಚಿತ್ರಕ್ಕೆ ನಾಯಕಿ


ಶಿವತೇಜಸ್‌ ನಿರ್ದೇಶನದ ಈ ಚಿತ್ರದಲ್ಲಿಇಬ್ಬರು ನಾಯಕಿಯರು. ಆ ಪೈಕಿ ಒಬ್ಬರು ಈಗ ಅಂತಿಮಗೊಂಡಿದ್ದಾರೆ. ಅದು ಬೇರಾರು ಅಲ್ಲ, “ಜೊತೆ ಜೊತೆಯಲಿ” ಖ್ಯಾತಿಯ ಮೇಘಾಶೆಟ್ಟಿ. ಈಗಾಗಲೇ ಗಣೇಶ್‌ ಅಭಿನಯದ “ತ್ರಿಬಲ್‌ ರೈಡಿಂಗ್‌” ಸಿನಿಮಾಗೆ ನಾಯಕಿಯಾಗಿಋುವ ಮೇಘಾಶೆಟ್ಟಿ, ಈಗ ಶಿವತೇಜಸ್‌ ನಿರ್ದೇಶನದ ಸಿನಿಮಾಗೆ ನಾಯಕಿ. ಇಲ್ಲಿ ಮೇಘಾಶೆಟ್ಟಿ ಪಾತ್ರವೇನು? ಎಂಬುದನ್ನು ಸಿನಿಮಾದಲ್ಲೇ ಕಾಣಬೇಕು

ನಿರ್ದೇಶಕ ಶಿವತೇಜಸ್‌ ಅವರು “ಡಾರ್ಲಿಂಗ್‌” ಕೃಷ್ಣ ಅವರಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆ ಚಿತ್ರಕ್ಕೆ ಸುಮಂತ್‌ ಕ್ರಾಂತಿ ನಿರ್ಮಾಣ ಮಾಡುತ್ತಿರುವುದು ಗೊತ್ತು. ಆ ಚಿತ್ರದ ಶೀರ್ಷಿಕೆ ಏನೆಂಬುದನ್ನು ನಿರ್ದೇಶಕರು ಗೌಪ್ಯವಾಗಿಟ್ಟಿದ್ದಾರೆ. ಸೆಪ್ಟೆಂಬರ್‌ 27ರಂದು ಸಂಜೆ 6.30ಕ್ಕೆ ಐಪಿಎಸ್‌ ಅಧಿಕಾರಿ ರವಿ ಡಿ.ಚನ್ನಣ್ಣವರ್ ಚಿತ್ರದ ಶೀರ್ಷಿಕೆ ಅನಾವರಣ‌ ಮಾಡಲಿದ್ದಾರೆ. ಈಗ ಹೊಸ ಸುದ್ದಿ ಅಂದರೆ, ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಆ ಪೈಕಿ ಒಬ್ಬರು ಅಂತಿಮಗೊಂಡಿದ್ದಾರೆ. ಅದು ಬೇರಾರು ಅಲ್ಲ, “ಜೊತೆ ಜೊತೆಯಲಿ” ಖ್ಯಾತಿಯ ಮೇಘಾಶೆಟ್ಟಿ. ಹೌದು, ಈಗಾಗಲೇ ಮೇಘಾಶೆಟ್ಟಿ ಅವರು ಗಣೇಶ್‌ ಅಭಿನಯದ “ತ್ರಿಬಲ್‌ ರೈಡಿಂಗ್‌” ಸಿನಿಮಾಗೆ ನಾಯಕಿಯಾಗಿದ್ದಾರೆ. ಈಗ ಶಿವತೇಜಸ್‌ ನಿರ್ದೇಶನದ ಸಿನಿಮಾಗೆ ನಾಯಕಿ. ಈ ಚಿತ್ರದಲ್ಲಿ ಮೇಘಾಶೆಟ್ಟಿ ಅವರ ಪಾತ್ರವೇನು? ಅದನ್ನು ಬಿಟ್ಟುಕೊಡದ ನಿರ್ದೇಶಕರು, ಸಿನಿಮಾದಲ್ಲೇ ಅದನ್ನು ಕಾಣಬೇಕು ಎನ್ನುತ್ತಿದ್ದಾರೆ.


ಶಿವತೇಜಸ್‌ ಹೆಣೆದಿರುವ ಬ್ಯೂಟಿಫುಲ್‌ ಲವ್‌ಸ್ಟೋರಿ ಕೇಳಿದ “ಡಾರ್ಲಿಂಗ್‌” ಕೃಷ್ಣ ಅದಕ್ಕೆ ಒಪ್ಪಿಕೊಂಡು ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಸ್ಕ್ರಿಪ್ಟ್ ಪೂಜೆ ನಡೆದಿದೆ. ಈ ಚಿತ್ರದಲ್ಲಿ ಹಲವು ವಿಶೇಷತೆಗಳೇ ತುಂಬಿವೆ. ಆ ವಿಶೇಷತೆಗಳಲ್ಲಿ ಮೊದಲ ಸ್ಪೆಷಲ್‌ ಅಂದರೆ, ನಿರ್ದೇಶಕ ಶಿವತೇಜಸ್‌ ಅವರನ್ನು ನಂಬಿ, ಅವರು ಮಾಡಿಕೊಂಡಿರುವ ಲವ್‌ಸ್ಟೋರಿಯನ್ನು ಒಪ್ಪಿ, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿರೋದು ನಿರ್ಮಾಪಕ ಸುಮಂತ್‌ ಕ್ರಾಂತಿ ಇದು ಅವರ ರಶ್ಮಿ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ.‌

ಸುಮಂತ್‌ ಕ್ರಾಂತಿ ನಿರ್ದೇಶಕರು. ಈಗ ಶಿವತೇಜಸ್‌ ಕಥೆಗೆ ಹಣ ಹಾಕುವ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಂಡಾಗಿದೆ. ಈ ಹಿಂದೆಯೇ ಸುಮಂತ್‌ ಕ್ರಾಂತಿ “ಕಾಲಚಕ್ರ” ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.

ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇನ್ನು, “ಬರ್ಕ್ಲಿ” ಎಂಬ ಮತ್ತೊಂದು ಫೆಂಟಾಸ್ಟಿಕ್‌ ಸಿನಿಮಾ ಮಾಡಿದ್ದು, ಅದರ ಹಿಂದೆಯೇ ಅವರು ಪ್ರಜ್ವಲ್‌ ದೇವರಾಜ್‌ ಅವರಿಗೊಂದು ಸಿನಿಮಾ ಮಾಡಲೂ ಮುಂದಾಗಿದ್ದಾರೆ.

ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಟ್ಟಿರುವುದೇ ವಿಶೇಷ. ಶಿವತೇಜಸ್ ಈ ಬಾರಿ ಪುನಃ ಬ್ಯೂಟಿಫುಲ್‌ ಲವ್‌ಸ್ಟೋರಿ ಜೊತೆ ಬರುತ್ತಿದ್ದಾರೆ. ನವೆಂಬರ್‌ನಿಂದ ಸಿನಿಮಾ ಶುರುವಾಗಲಿದೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದಾರೆ. ಉಳಿದಂತೆ ಇನ್ನಿತರೆ ಕಲಾವಿದರ ಆಯ್ಕೆ ನಡೆಯುತ್ತಿದೆ.

Categories
ಸಿನಿ ಸುದ್ದಿ

ಹೊಸಬರ ಸುಕನ್ಯ ದ್ವೀಪ; ಫಸ್ಟ್‌ ಶೆಡ್ಯೂಲ್‌ ಮುಗಿಸಿದ ಚಿತ್ರತಂಡ

ಸುಕನ್ಯ ದ್ವೀಪ ಎನ್ನುವ ಟೈಟಲ್ ಕೇಳಿದೊಡನೆ ಇದೊಂದು ಸಸ್ಪೆನ್ಸ್ ಚಿತ್ರ ಇರಬದುದೇನೋ ಎಂಬ ಪ್ರಶ್ನೆ ಎದುರಾಗುತ್ತೆ. ಆದರೆ, ಇದು ಸಸ್ಪೆನ್ಸ್‌ ಸಿನಿಮಾವಂತೂ ಅಲ್ಲ. ಇದೊಂದು ಪಕ್ಕಾ ಫ್ಯಾಮಿಲಿ ಮತ್ತು ಲವ್‌ ಜಾನರ್‌ ಕಥೆ ಹೊಂದಿರುವ ಸಿನಿಮಾ. ಇದರೊಂದಿಗೆ ಹಾಸ್ಯದ ಲೇಪನವೂ ಇಲ್ಲಿದೆ. ಅಂದಹಾಗೆ, ಈ ಚಿತ್ರವನ್ನು ಎಂ.ಡಿ. ಅಫ್ಜಲ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ “ಮೊಬೈಲ್ ರಾಜʼ ಸಿನಿಮಾ ನಿರ್ದೇಶಿಸಿರುವ ಅಫ್ಜಲ್‌, ಆ ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ. ಅದರ ಬೆನ್ನಲ್ಲೇ, ಇದೀಗ “ಸುಕನ್ಯ ದ್ವೀಪ” ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ.


ನಿರ್ದೇಶಕ ಅಫ್ಜಲ್ ಅವರು, ಇದುವರೆಗೆ 18 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ನಿರ್ದೇಶನದ ‌ಎರಡನೇ ಸಿನಿಮಾ ಇದಾಗಿದ್ದು, ರಾಜ್‌ಪ್ರಭು ಅವರ ಮೂಲಕ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಮೂವರು ಅಕ್ಕ-ತಂಗಿಯರ ಸುತ್ತ ನಡೆಯುವ ಕಥಾಹಂದರ ಇಲ್ಲಿದೆ. ಇಲ್ಲಿ ವಿಶೇಷ ಪಾತ್ರದಲ್ಲಿ ರಾಜ್‌ಪ್ರಭು ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ ಸಬ್ಜೆಕ್ಟ್ ನಲ್ಲಿ ಲವ್‌ಸ್ಟೋರಿ ಕೂಡ ಇದೆ. ಕಾಮಿಡಿಗೆ ಹೆಚ್ಚು ಒತ್ತು ನೀಡಿರುವುದು ಇನ್ನೊಂದು ವಿಶೇಷ. ಈಗಾಗಲೇ ಬೆಂಗಳೂರು ಸುತ್ತಮುತ್ತ ಒಂದು ಹಂತದ ಶೂಟಿಂಗ್ ಮುಗಿಸಿದ್ದು, ಮುಂದಿನ ಹಂತದಲ್ಲಿ ಹಾಸನ, ಕಳಸ, ಬೇಲೂರು ಹೀಗೆ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರತಂಡದ್ದು. “ಸುಕನ್ಯ” ಎಂದರೆ ಹೆಣ್ಣು, ದ್ವೀಪ ಎಂದರೆ ಅವರಿರುವ ಮನೆಗೆ ಹೋಲಿಸಲಾಗಿದೆ. ಆ ಮೂವರು ಹೆಣ್ಣು ಮಕ್ಕಳು ಪ್ರೇಮದ ಬಲೆಗೆ ಬಿದ್ದಾಗ ಫ್ಯಾಮಿಲಿಯಿಂದ ಅಡ್ಡಿಯಾಗುತ್ತದೆ, ನಂತರ ಚಿತ್ರದಲ್ಲೊಂದು ಮೇಜರ್ ಟ್ವಿಸ್ಟ್ ಇದೆ. ಹಾಗಂತ, ಕೊಲೆ, ಸಸ್ಪೆನ್ಸ್ ಅಂಥದ್ದೇನೂ ಇಲ್ಲ. ಸ್ನೇಹಿತ ಅಲ್ವಿನ್ ಸೊಗಸಾದ ಡೈಲಾಗ್‌ಗಳನ್ನು ಬರೆದುಕೊಟ್ಟಿದ್ದಾರೆ ಎಂದು ಮಾಹಿತಿ ಕೊಡುತ್ತಾರೆ ನಿರ್ದೇಶಕ ಅಫ್ಜಲ್.

ಕಾರ್ಯಕಾರಿ ನಿರ್ಮಾಪಕ ರಾಜ್ ಪ್ರಭು ಅವರು, ತಮಿಳಿನ ಹಾಸ್ಯನಟ ದಿ. ವಿವೇಕ್ ಅವರಿಂದ ಸ್ಫೂರ್ತಿ ಪಡೆದು ಈ ಈ ಕಥೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ ನನ್ನ ಪಾತ್ರ ಸೆಕೆಂಡ್ ಹಾಫ್ ನಲ್ಲಿ ಬರುತ್ತೆ, ಅದರಲ್ಲಿ ಒಂದಷ್ಟು ಕುತೂಹಲವೂ ಇದೆ ಅನ್ನುತ್ತಾರೆ ಅವರು. ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಅವರಿಗೆ ರಾಜ್‌ಪ್ರಭು ಕಥೆ ಹೇಳಿದಾಗ ಇಷ್ಟವಾಯ್ತು, ಚಿತ್ರದ ೫ ಹಾಡುಗಳಿಗೆ ಸಂಗೀತ ನೀಡಲಾಗಿದೆ ಎಂಬ ಮಾಹಿತಿ ಕೊಡುತ್ತಾರೆ.
ನಿರ್ಮಾಪಕ ವೀರಬಾಹು, ರಾಜಪ್ರಭು ಒಂದೊಳ್ಳೆ ಕಥೆ ರೆಡಿ ಇದೆ. ಸಿನಿಮಾ ಮಾಡೋಣ ಅಂದರು. ಒನ್ ಲೈನ್ ಕಥೆ ಕೇಳಿಯೇ ನಾನು ನಿರ್ಮಾಣಕ್ಕೆ ಒಪ್ಪಿದೆ. ಮಚ್ಚು, ಲಾಂಗು ಇಲ್ಲದ ನೀಟ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಇದು ಎಂದರು.

ಚಿತ್ರದ ನಾಯಕರಲ್ಲೊಬ್ಬರಾದ ಸಚಿನ್ ಪುರೋಹಿತ್, “ಸ್ಟೂಡೆಂಟ್ʼ, “ಚರಂತಿ”, “ಗಡಿಯಾರ” ನಂತರ ಇದು ನನ್ನ ನಾಲ್ಕನೇ ಚಿತ್ರ, “ತಮಸ್‌”ನಲ್ಲಿ ನಾನು ರಾಜ್‌ಪ್ರಭು ಒಟ್ಟಿಗೇ ಕೆಲಸ ಮಾಡಿದ್ದೆವು. ನನ್ನದು ಲವರ್ ಬಾಯ್ ಥರದ ಪಾತ್ರ ಅಂದರು. ಮತ್ತೊಬ್ಬ ನಟ ರವಿ ಅನುಭವ ಹಂಚಿಕೊಂಡರು. ಛಾಯಾಗ್ರಾಹಕ ವಿಘ್ನೇಶ್ ನಾಗೇಂದ್ರ, ನಾಯಕಿಯರಾದ ಶ್ರೇಯಾ ವಸಂತ್, ಅಕ್ಷಿತ ನಾಗರಾಜ್, ಚುಂಬಿತ ಮಾತನಾಡಿದರು. ಇಲ್ಲಿ ಎಂ.ಡಿ. ಕೌಶಿಕ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ರಾಯರ ಮಗನ ರಾಘವೇಂದ್ರ ಸ್ಟೋರ್ಸ್ : ಹೊಂಬಾಳೆ ಫಿಲಂಸ್‌ ನಲ್ಲಿ‌ ನಟನೆಯ ಅಖಾಡಕ್ಕಿಳಿದ ನವರಸನಾಯಕ ಜಗ್ಗೇಶ್ !

ಹೊಂಬಾಳೆ ಫಿಲಂಸ್‌ ಅಚ್ಚರಿ ಹುಟ್ಟಿಸುತ್ತಿದೆ. ಕೊರೋನಾ ಅಂತ ಉದ್ಯಮವೇ ಸೈಲೆಂಟ್‌ ಆಗಿರುವಾಗ ಹೊಂಬಾಳೆ ಫಿಲಂಸ್‌ ಮಾತ್ರ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಅನೌನ್ಸ್‌ ಮಾಡುತ್ತಿದೆ. ಲಾಕ ಡೌನ್‌ ನಂತರದ ದಿನಗಳಲೇ ಪ್ರಭಾಸ್‌ ಆಯ್ತು, ಅಲ್ಲಿಂದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಆಯ್ತು, ಜತೆಗೆ ರಿಷಬ್‌ ಶೆಟ್ಟಿ , ರಕ್ಷಿತ್‌ ಶೆಟ್ಟಿ ಅವರಿಗೂ ಸಿನಿಮಾ ಅನೌನ್ಸ್‌ ಮಾಡಿ ಆಯ್ತು. ಈಗ ಕನ್ನಡದ ಹಿರಿಯ ನಟ ನವರಸ ನಾಯಕ ಜಗ್ಗೇಶ್‌ ಕಾಂಬಿನೇಷನ್‌ ಮೂಲಕ ಮತ್ತೊಂದು ಸಿನಿಮಾ ಅನೌನ್ಸ್‌ ಮಾಡಿ ಕುತೂಹಲ ಮೂಡಿಸಿದೆ ʼಕೆಜಿಎಫ್‌ʼ ಖ್ಯಾತಿಯ ಹೊಂಬಾಳೆ ಫಿಲಂಸ್.‌

ಸಿನಿಮಾ ಪ್ರೇಮಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಕನ್ನಡದ ಪ್ರತಿಷ್ಟಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ನ 12 ನೇ ಸಿನಿಮಾದ ಟೈಟಲ್‌ ಏನು, ಅದರ ನಾಯಕ ಯಾರು ಎನ್ನುವ ಕ್ಯೂರಿಯಾಸಿಟಿಗೆ ಇಂದು ಉತ್ತರ ಸಿಕ್ಕಿದೆ. ಈ ಮೊದಲೇ ಹೇಳಿದಂತೆ ಹೊಂಬಾಳೆ ಫಿಲಂಸ್‌ ತನ್ನ 12ನೇ ಸಿನಿಮಾದ ಟೈಟಲ್‌ ಜತೆಗೆ ಫಸ್ಟ್‌ ಲುಕ್‌ ಪೋಸ್ಟರ್‌ ಲಾಂಚ್‌ ಮೂಲಕ ಅದರ ನಾಯಕ ಯಾರು ಎನ್ನುವುದನ್ನು ರಿವೀಲ್‌ ಮಾಡಿದೆ. ಒಂದ್ರೀತಿ ಇದು ಅಚ್ಚರಿಯನ್ನೇ ಹೊತ್ತು ಬಂದಿರುವುದು ವಿಶೇಷ.

ಅಂದ ಹಾಗೆ, ಹೊಂಬಾಳೆ ಫಿಲಂಸ್‌ ನಿರ್ಮಾಣದ 12 ನೇ ಚಿತ್ರದ ಹೆಸರು ರಾಘವೇಂದ್ರ ಸ್ಟೋರ್ಸ್‌ʼ ಇದರ ನಾಯಕ ನಟ ಜಗ್ಗೇಶ್.‌ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್.‌ ಕನ್ನಡದ ಹಿರಿಯ ನಟ ನವರಸ ನಾಯಕ ಜಗ್ಗೇಶ್‌ ಇದೇ ಮೊದಲು ಹೊಂಬಾಳೆ ಫಿಲಂಸ್‌ ಬ್ಯಾನರ್‌ ಮೂಲಕ ನಟನೆಯ ಅಖಾಡಕ್ಕೆ ಇಳಿದಿದ್ದಾರೆ. ಅವರಿಗೆ ಇಲ್ಲಿ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಜತೆಯಾಗಿದ್ದಾರೆ. ಇದೇ ಮೊದಲು ಇವರಿಬ್ಬರ ಜುಗಲ್‌ ಬಂಧಿ ರಾಘವೇಂದ್ರ ಸ್ಟೋರ್ಸ್‌ ನಲ್ಲಿ ಆಗಿದೆ.

ಹೊಂಬಾಳೆ ಫಿಲಂಸ್‌ ಇದೆಲ್ಲ ವಿವರವನ್ನು ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಟೈಟಲ್‌ ಮೂಲಕವೇ ಕುತೂಹಲ ಹುಟ್ಟಿಸುವ ಈ ಸಿನಿಮಾ ಇದು. ರಾಘವೇಂದ್ರ ಅಂದಾಕ್ಷಣ ಅದು ಜಗ್ಗೇಶ್‌ ಅವರಿಗೆ ಕನೆಕ್ಟ್.‌ ಅದೇ ಕಾರಣಕ್ಕೆ ನಟ ಜಗ್ಗೇಶ್‌ ಅವರ ಪಾಲಿಗೆ ಇದು ಸಾಕಷ್ಟು ವಿಶೇಷತೆ ಹೊಂದಿದ ಸಿನಿಮಾ. ಯಾಕಂದ್ರೆ, ನಟ ಜಗ್ಗೇಶ್‌ ಅವರು ಗುರು ರಾಘವೇಂದ್ರ ಪರಮ ಭಕ್ತರು. ರಾಯರ ಮಗ ಅಂತಲೇ ನಂಬಿಕೆ. ಕಾಕತಾಳೀಯ ಎನ್ನುವ ಹಾಗೆ ಈಗವರು ರಾಯರ ಹೆಸರಿನ ಚಿತ್ರಕ್ಕೆ ನಾಯಕರಾಗಿದ್ದಾರೆ. ಅದರ ನಂಟಿನ ಬಗ್ಗೆಯೇ ಅವರು ಮೊದಲ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ʼ ರಾಯರ ಮಗನಿಗೆ ರಾಘವೇಂದ್ರ ಸ್ಟೋರ್ಸ್ ʼ ಚಿತ್ರ ಬದುಕಿನ ಪರಿಪೂರ್ಣ ಅವರ್ಥ. ನಗಿಸುತ್ತ ಬಿಡಿಸಿ ಹೇಳುವ ಅದ್ಭುತ ಕೃತಿ.‌ ಹೊಂಬಾಳೆ ಸಿನಿಮಾದ್‌ ಜತೆಗೆ ಇದು ನನ್ನ ಮೊದಲ ಸಿನಿಮಾವಾಗಿದ್ದು, ಈ ಹೊಸ ಪ್ರಯತ್ನವನ್ನು ಪ್ರೇಕ್ಷಕರು ಮೆಚ್ಚಿ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆʼ ಎನ್ನುವುದರ ಮೂಲಕ ʼರಾಘವೇಂದ್ರ ಸ್ಟೋರ್ಸ್‌ʼ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ ನಟ ಜಗ್ಗೇಶ್. ಇನ್ನು ರಾಘವೇಂದ್ರ ಸ್ಟೋರ್ಸ್‌ ಬಗ್ಗೆ ಹೊಂಬಾಳೆ ಫಿಲಂಸ್‌ ಎರಡು ದಿನಗಳ ಮುಂಚೆಯೇ ಕೊಟ್ಟ ಹಿಂಟ್ಸ್‌ ಏನು ಅಂತ ನಿಮಗೆಲ್ಲ ಗೊತ್ತೇ ಇದೆ. ಬಾಳೆ ಏಲೆ, ಅದರ ಮೇಲೆ ಒಂದಷ್ಟು ಅಕ್ಷರ. ಪ್ರತಿಯೊಬ್ಬರಲ್ಲೂ ಹಸಿವಿದೆ, ಪ್ರತಿ ಅಗಳಿನಲ್ಲೂ ತಿನ್ನುವವರ ಹೆಸರಿದೆ. ಅನ್ನದಾತೋ ಸುಖೀಭವ ಎಂಬುದಾಗಿ ಬರೆದು, ಚಿತ್ರದ ಟೈಟಲ್‌ ಅನೌನ್ಸ್‌ ಜತೆಗೆ ಅದರ ನಾಯಕ ಯಾರು ಎನ್ನುವುದರ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಹುಟ್ಟಿಸಿತ್ತು ಹೊಂಬಾಳೆ ಫಿಲಂಸ್.‌

ಆ ಕುತೂಹಲಕ್ಕೆ ಈಗ ತೆರೆ ಎಳೆದಿದೆ. ಮೊದಲೇ ಹೇಳಿದಂತೆ ಬುಧವಾರ ಟೈಟಲ್‌ ಜತೆಗೆ ಅದರ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ರಿವೀಲ್‌ ಆಗಿದೆ. ಕಳೆದೆರೆಡು ದಿನಗಳಿಂದ ಏನೇನೋ ಕಲ್ಪಿಸಿಕೊಂಡವರಿಗೆ ಇವತ್ತು ನಿಜಕ್ಕೂ ಶಾಕ್.‌ ಯಾಕಂದ್ರೆ ʼರಾಜಕುಮಾರʼ ಖ್ಯಾತಿಯ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರಿಗೆ ಇಲ್ಲಿ ಜೋಡಿಯಾಗಿದ್ದು ಕನ್ನಡದ ಹಿರಿಯ ನಟ, ನವರಸನಾಯಕ ಜಗ್ಗೇಶ್.‌ ಇನ್ನು ಟೃಟಲ್‌ ಅನೌನ್ಸ್‌ ಗೆ ಬಾಳೆ ಎಲೆ ಹಾಸಿ, ಒಂದಷ್ಟು ಕುತೂಹಲದ ಕೊಟೇಷನ್‌ ಹಾಕಿದ್ದ ಹೊಂಬಾಳೆ ಫಿಲಂಸ್‌ ನ 12 ನೇ ಚಿತ್ರದ ಕಥೆ ಬಗೆಗಿನ ಕುತೂಹಲಕ್ಕೂ ಒಂದಷ್ಟು ಮಾಹಿತಿ ಇಲ್ಲಿ ರಿವೀಲ್‌ ಆಗಿದೆ. ಅದಕ್ಕಿಂತ ಮೊದಲು ಹೊಂಬಾಳೆ ಫಿಲಂಸ್‌ ನಲ್ಲಿ ನಟ ಜಗ್ಗೇಶ್‌ ಇದೇ ಮೊದಲು ನಟನೆಯ ಅಖಾಡಕ್ಕೆ ಇಳಿದಿರುವುದು ಇಲ್ಲಿ ವಿಶೇಷ. ಆ ಬಗ್ಗೆ ನಿರ್ಮಾಪಕ ವಿಜಯ್‌ ಕಿರಗಂದೂರು ಕೂಡ ಹರ್ಷ ವ್ಯಕ್ತಪಡಿಸುತ್ತಾರೆ.

ʼ ಹಿರಿಯ ನಟರಾದ ಜಗ್ಗೇಶ್‌ ಅವರು ಇದೇ ಮೊದಲು ನಮ್ಮ ಬ್ಯಾನರ್‌ ನಲ್ಲಿ ನಟಿಸುತ್ತಿರುವುದು ನಮ್ಮನ್ನು ಪುಳಕಿತರನ್ನಾಗಿ ಮಾಡಿದೆ. ಇದು ನಮಗೆ ಹೆಮ್ಮೆಯ ವಿಷಯವೂ ಹೌದು.ಕನ್ನಡ ಚಲನಚಿತ್ರರಂಗ ಕೀರ್ತಿಯಲ್ಲಿ ಜಗ್ಗೇಶ್‌ ಅವರ ಪಾತ್ರಾಪಾರವಾದದ್ದು.ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅವೀಸ್ಮರಣಿಯ. ಅವರು ಚಿತ್ರರಂಗದ ಬಹುದೊಡ್ಡ ಆಸ್ತಿ. ಹೀಗಾಗಿ ಹೊಂಬಾಳೆ ಟೀಮ್‌ ಗೆ ನವರಸನಾಯಕ ಜಗ್ಗೇಶ್‌ ಅವರ ಸೇರ್ಪಡೆ ನಮ್ಮ ಸೌಭಾಗ್ಯʼ ಎನ್ನುವ ಮಾತುಗಳೊಂದಿಗೆ ತಮ್ಮ ಸಂಸ್ಥೆಯ ಸಿನಿಮಾಕ್ಕೆ ಅದ್ಧೂರಿ ಸ್ವಾಗತ ನೀಡಿದ್ದಾರೆ ನಿರ್ಮಾಪಕ ವಿಜಯ್‌ ಕಿರಗಂದೂರು. ಹಾಗೆಯೇ ರಾಜಕುಮಾರ, ಯುವರತ್ನ ಚಿತ್ರದ ನಂತರ ಮತ್ತೆ ಈಗ ಮೂರನೇ ಸಿನಿಮಾದೊಂದಿಗೆ ಹೊಂಬಾಳೆ ಫಿಲಂಸ್‌ ಮೂಲಕ ಹ್ಯಾಟ್ರಿಕ್‌ ಬಾರಿಸುತ್ತಿರುವ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರ ಬಗ್ಗೆಯೂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುವ ನಿರ್ಮಾಪಕ ವಿಜಯ್‌ ಕಿರಗಂದೂರು, ಹೊಸ ಚಲನಚಿತ್ರವನ್ನು ಚಿತ್ರ ರಸಿಕರ ನಿರೀಕ್ಷೆಗೆ ತಕ್ಕಂತೆ ರೂಪಿಸಲಿದ್ದಾರೆಂಬ ಆತ್ಮವಿಶ್ವಾಸ, ನಂಬಿಕೆ ನನಗಿದೆ ಎಂದಿದ್ದಾರೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಛೇ, ಅವರು ಇರಲೇಬೇಕಿತ್ತು….ಅಂತ ನಿಮಗೂ ಅನಿಸುತ್ತೆ : ಸೆ.24ಕ್ಕೆ ಬೆಳ್ಳಿತೆರೆ ಮೇಲೆ ಪುಕ್ಸಟ್ಟೆ ಲೈಪು ಪುರ್ ಸೊತ್ತೇ ಇಲ್ಲ !

ನಟ ಸಂಚಾರಿ ವಿಜಯ್‌ ಈಗಿಲ್ಲ ಅನ್ನೋದನ್ನು ಈಗಲೂ ಅರಗಿಸಿಕೊಳ್ಳಲಾಗದ ಸಂಗತಿ. ಆದರೂ ಅದು ವಾಸ್ತವ. ಅವರು ಕಡೆಯದಾಗಿ ಅಭಿನಯಿಸಿದ ಸಿನಿಮಾಗಳು ಈಗ ಬೆಳ್ಳಿತೆರೆ ಮೇಲೆ ಚಿಮ್ಮಲು ಕಾದಿವೆ. ಆ ಪೈಕಿ ಸೆ.24 ಕ್ಕೆ ಪುಕ್ಸಟ್ಟೆ ಲೈಪು ಪುರ್‌ ಸೊತ್ತೇ ಇಲ್ಲ ಸಿನಿಮಾ ರಿಲೀಸ್‌ ಆಗುತ್ತಿದೆ. ಈ ಸಿನಿಮಾ ಅನೇಕ ಕಾರಣಕ್ಕೆ ತುಂಬಾ ಸ್ಪೆಷಲ್.‌ ಅದರಲ್ಲಿ ವಿಜಯ್‌ ಅವರ ಪಾತ್ರ, ನಟನೆಯೂ ಕೂಡ ಕಾರಣ.

ಛೇ, ಅವರು ಇರಲೇಬೇಕಿತ್ತು…ಹೌದು, ಆ ಚಿತ್ರದ ಟ್ರೇಲರ್‌ನಲ್ಲಿ ಕಾಣುವ ಅವರ ನಟನೆಯನ್ನು ನೋಡಿದಾಗ ನಮ್ಮೊಳಗೆ ಅಂತಹದೊಂದು ವೇದನೆ ಗಾಢವಾಗಿ ಕಾಡುತ್ತದೆ. ಕೇವಲ ಎರಡೇ ನಿಮಿಷದ ಆ ಟ್ರೇಲರ್‌ ನಲ್ಲಿನ ಅವರ ಅಭಿನಯ ನೋಡ ನೋಡುತ್ತಲೇ ಛೇ, ಅವರು ನಮ್ಮೊಂದಿಗೆ ಇರಲೇಬೇಕಿತ್ತು ಅಂತ ಮನಸ್ಸು ಪರಿತಪಿಸತೊಡಗುತ್ತದೆ. ಒಂದ್ರೀತಿಯ ಬೇಸರ ನಮ್ಮನ್ನೇ ಆವರಿಸಿಕೊಳ್ಳುತ್ತದೆ. ಟ್ರೇಲರ್‌ ಮುಗಿಯುತಾ ಬಂದಾಗ ಒಂದು ಡೈಲಾಗ್‌ ಕೇಳುತ್ತದೆ. ʼಎಲ್ಲಾದರೂ ಕಾಣದಂತೆ ಆರು ತಿಂಗಳು ಹೊರಟು ಹೋಗು, ಯಾರ ಕಣ್ಣಿಗೂ ಕಾಣಬೇಡʼ ಅಂತ ಪೊಲೀಸ್‌ ಪಾತ್ರದಾರಿ ಅಚ್ಯುತ್‌ ಕುಮಾರ್‌ ಹೇಳುತ್ತಾರೆ. ಹಾಗೆಯೇ ನಟ ಸಂಚಾರಿ ವಿಜಯ್‌ ಹೊರಟು ಹೋಗಿದ್ದಾರೆಯೇ ಎನ್ನುವ ಕೊಂಚ ಸಮಾಧಾನದ ಮಾತು ಅಲ್ಲಿ ಕೇಳಿದರೂ ವಾಸ್ತವದಲ್ಲಿ ಅವರಿಲ್ಲ ಎನ್ನುವ ಗಾಢ ಬೇಸರದಲ್ಲಿಯೇ ಟ್ರೇಲರ್‌ ನಲ್ಲಿನ ಅವರ ಅಭಿನಯ ನಮ್ಮೆನ್ನೆಲ್ಲ ಮಂತ್ರ ಮುಗ್ದಗೊಳಿಸುತ್ತದೆ. ಅಂದ ಹಾಗೆ ಆ ಟ್ರೇಲರ್‌ ʼಪುಕ್ಸಟ್ಟೆ ಲೈಪು ಪುರ್‌ ಸೊತ್ತೇ ಇಲ್ಲʼ ಚಿತ್ರದ್ದು.

ನಟ ಸಂಚಾರಿ ವಿಜಯ್‌ ಈಗಿಲ್ಲ. ಆದರೆ ಅವರ ಅಭಿನಯದ ಕೊನೆಯ ಸಿನಿಮಾಗಳು ಈಗ ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಕಾದಿವೆ. ಆ ಪೈಕಿ ʼಪುಕ್ಸಟ್ಟೆ ಲೈಪು ಪುರ್‌ ಸೊತ್ತೇ ಇಲ್ಲʼ ಸಿನಿಮಾ ಕೂಡ ಒಂದು. ಆರಂಭದಿಂದಲೂ ಟೈಟಲ್‌ ಮೂಲಕವೇ ಕುತೂಹಲ ಮೂಡಿಸಿದ ಸಿನಿಮಾ ಇದು. ಜತೆಗೆ ಟೀಸರ್‌ ಹಾಗೂ ಟ್ರೇಲರ್‌ ಮೂಲಕವೂ ಮತ್ತಷ್ಟು ಸದ್ದು ಮಾಡಿ, ಈಗ ಪ್ರೇಕ್ಷಕರ ಮುಂದೆ ಬರುತ್ತಿದೆ. ಸೆ.24 ಕ್ಕೆ ಈ ಚಿತ್ರ ಗ್ರಾಂಡ್ ರಿಲೀಸ್‌‌ ಗೆ ರೆಡಿ ಆಗಿದೆ. ಶೇಕಡಾ 50 ರಷ್ಟು ಸೀಟು ಭರ್ತಿಯ ಅವಕಾಶದ ನಡುವೆಯೇ ಈ ಚಿತ್ರ ಇದೇ ವಾರ ಚಿತ್ರಮಂದಿರಗಳಿಗೆ ದಾಂಗುಡಿ ಇಡುತ್ತಿದೆ. ಕೊರೋನಾ ಆರಂಭಕ್ಕೂ ಮುನ್ನ ಇದ್ದ ಸಿನಿಮಾ ವಾತಾವರಣ ಈಗಿಲ್ಲ ಎನ್ನುವುದು ಸತ್ಯವೇ ಆಗಿದ್ದರೂ, ಸಂಕಷ್ಟದ ಪರಿಸ್ಥಿತಿ ಈಗ ತಿಳಿಯಾಗುತ್ತಿದೆ. ಈ ವಾರದಲ್ಲಿಯೇ ಚಿತ್ರಮಂದಿರಗಳಲ್ಲಿ ಶೇ. 100 ರಷ್ಟು ಸೀಟು ಭರ್ತಿಗೂ ಅವಕಾಶ ಸಿಗುವ ಸಾಧ್ಯತೆಗಳಿವೆ.

ಚಿತ್ರರಂಗದ ಪಾಲಿಗೆ ಇದು ದೊಡ್ಡ ಆಶಾಭಾವನೆ ಹುಟ್ಟು ಹಾಕಿದೆ. ಆ ದಿನಗಳು ಮತ್ತೆ ಬಂದೇ ಬರಬಹುದು ಎನ್ನುವ ದೊಡ್ಡ ಭರವಸೆ ಮೂಲಕ ರಿಲೀಸ್‌ ಗೆ ರೆಡಿ ಇರುವ ಸಿನಿಮಾಗಳು, ಚಿತ್ರಮಂದಿರಗಳಿಗೆ ನುಗ್ಗಲು ತಯಾರಿ ನಡೆಸಿವೆ. ಈ ಪೈಕಿ ಈಗ ಬೆಳ್ಳಿತೆರೆಯಲ್ಲಿ ಅಬ್ಬರಿಸಲು ತುದಿಗಾಲ ಮೇಲೆ ನಿಂತಿರೋ ಸಿನಿಮಾ ʼಪುಕ್ಸಟ್ಟೆ ಲೈಪು ಪರುಸೊತ್ತೇ ಇಲ್ಲʼ. ನಟ ಸಂಚಾರಿ ವಿಜಯ್‌ ಅಭಿನಯದ ಕಾರಣಕ್ಕೆ ದೊಡ್ಡ ಕುತೂಹಲ ಹುಟ್ಟು ಹಾಕಿರೋ ಸಿನಿಮಾ ಇದು. ಅವರೊಂದಿಗೆ ಇಲ್ಲಿ ಅಚ್ಯುತ್ ಕುಮಾರ್‌, ರಂಗಾಯಣ ರಘು, ಜಯಶ್ರೀ ಸೇರಿದಂತೆ ರಂಗಭೂಮಿಯ ದೊಡ್ಡ ಕಲಾವಿದರ ಸಮಾಗಮವೇ ಇಲ್ಲಿದೆ. ಸರ್ವಸ್ವ ಪ್ರೊಡಕ್ಷನ್‌ ಮೂಲಕ ನಿರ್ಮಾಣವಾಗಿರೋ ಈ ಸಿನಿಮಾಕ್ಕೆ ಅರವಿಂದ್‌ ಕುಪ್ಲೀಕರ್‌ ನಿರ್ದೇಶಕ. ರಂಗಭೂಮಿಯ ದೊಡ್ಡ ಅನುಭವ ಅವರಿಗಿದೆ. ಟ್ರೇಲರ್‌ ನೋಡಿದಾಗ ಈ ಸಿನಿಮಾದ ತಿರುಳು ಕೊಂಚ ನಿಮಗೂ ಅರ್ಥವಾಗಿರಬಹುದು. ʼಬೇಲಿಯೇ ಎದ್ದು ಹೊಲ ಮೇಯ್ದದಂತೆ ʼಎನ್ನುವ ಗಾದೆ ಮಾತಿನಂತೆ ಇಲ್ಲಿ ಪೊಲೀಸರೇ ಕಳ್ಳರ ಜತೆ ಸೇರಿ ಕಳ್ಳತನ ಮಾಡಿದ್ರೆ ಹೇಗಿರುತ್ತೆ ಎನ್ನುವ ಸಣ್ಣ ಎಳೆಯೊಂದನ್ನು ಇಟ್ಟುಕೊಂಡು ನಿರ್ಮಾಣ ಮಾಡಿರುವ ಸಿನಿಮಾ ಇದು.

ಅಚ್ಯುತ್‌ ಕುಮಾರ್‌ ಪೊಲೀಸ್‌ ಪಾತ್ರದಲ್ಲಿ, ರಂಗಾಯಣ ಮಾಲೀಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರಗಳೇ ಇಲ್ಲಿ ವಿಭಿನ್ನ, ವಿಶಿಷ್ಟವಾಗಿವೆ. ಚಿತ್ರದ ಪ್ರಮುಖ ಪಾತ್ರದಾರಿ ವಿಜಯ್‌ ಅವರದ್ದು ಈಲ್ಲಿ ಬೀಗ ರಿಪೇರಿ ಮಾಡುವ ಒಬ್ಬ ಯುವಕ. ಆತನ ಹೆಸರು ಶಹಜಹಾನ್.‌ ಆತ ಬೀಗ ರಿಪೇರಿಯಿಂದ ಬರುವ ಸಂಪಾದನೆಯಿಂದ ಜೀವನ ನಡೆಸಲು ಕಷ್ಟ ಆದಾಗ, ಕಳ್ಳತನಕ್ಕೆ ಕೈ ಹಾಕುತ್ತಾರೆ. ಅಲ್ಲಿಂದ ಏನೆಲ್ಲ ಘಟನೆಗಳು ಘಟಿಸುತ್ತವೆ ಎನ್ನುವ ಕಥಾನಕವೇ ಈ ಚಿತ್ರದ್ದು. ವಿಜಯ್‌ ಅವರಿಗೆ ಇಲ್ಲಿ ಜೋಡಿಯಾಗಿ ಮಾತಂಗಿ ಪ್ರಸನ್ನ ನಟಿಸಿದ್ದಾರೆ. ಅವರೆಲ್ಲ ಟ್ರೇಲರ್‌ ನಲ್ಲಿ ಕಾಣಿಸಿಕೊಂಡು ಭಾರೀ ಕುತೂಹಲ ಮೂಡಿಸಿರುವುದು ವಿಶೇಷ.

ಅಷ್ಟು ಮಾತ್ರವಲ್ಲ,ರಿಲೀಸ್‌ ಹಿನ್ನೆಲೆಯಲ್ಲೀಗ ಚಿತ್ರ ತಂಡ ಪ್ರಚಾರಕ್ಕಾಗಿ ಮೊನ್ನೆಯಷ್ಟೇ ವಿಶೇಷವಾದ ಆನಿಮೇಟೆಡ್‌ ವಿಡಿಯೊವೊಂದನ್ನು ಲಾಂಚ್‌ ಮಾಡಿದೆ. ಆ ವಿಡಿಯೋ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುವ ವಿಶಿಷ್ಟ ಪ್ರಯೋಗವನ್ನು ಚಿತ್ರ ತಂಡ ಮಾಡಿದೆ. ಇದು ತುಂಬಾನೆ ಡಿಫೆರೆಂಟ್‌ ಆಗಿದೆ.ಆನಿಮೇಟೆಡ್‌ ವಿಡಿಯೋದಲ್ಲಿ ದಿವಂಗತ ನಟರಾದ ರಾಜ್‌ ಕುಮಾರ್‌, ಶಂಕರ್‌ ನಾಗ್‌, ವಿಷ್ಣುವರ್ದನ್‌, ಅಂಬರೀಷ್‌ ಸೇರಿ ಹಲವು ಕಲಾವಿದರ ಜೊತೆಗೆ ನನ ದಿವಂಗತ ಸಂಚಾರಿ ವಿಜಯ್‌ ಅವರು ಮಾತುಕತೆ ನಡೆಸುತ್ತಾ ತಮ್ಮ ಹೊಸ ಚಿತ್ರದ ಬಗ್ಗೆ ವಿವರಿಸುವ ದೃಶ್ಯವದು.

ಈ ವಿಡಿಯೋ ಮೂಲಕ ವಿಜಯ್‌ ಅವರನ್ನು ಹಲವರು ನೆನಪಿಸಿಕೊಂಡಿದ್ದಾರೆ. ಅದು ಕೂಡ ಚಿತ್ರದ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಹುಟ್ಟುವಂತೆ ಮಾಡಿದೆ. ಚಿತ್ರ ತಂಡ ಹೇಳುವ ಪ್ರಕಾರ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್‌ ಆಗುತ್ತಿದೆ. ನಟ ವಿಜಯ್‌ ಅಭಿಮಾನಿಗಳು ಕೂಡ ದೊಡ್ಡ ಕಾತರದಲ್ಲಿದ್ದಾರೆ. ಕಥೆ ಜತೆಗೆ ಕಲಾವಿದರ ಅಭಿನಯವೂ ಕೂಡ ಇಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿವೆ. ಆ ಕಾರಣಕ್ಕೆ ಸಿನಿಮಾಕ್ಕೆ ದೊಡ್ಡ ರೆಸ್ಪಾನ್ಸ್‌ ಸಿಗುವ ನಿರೀಕ್ಷೆ ಕೂಡ ಚಿತ್ರ ತಂಡಕ್ಕಿದೆ. ಚಿತ್ರ ತಂಡ ಅಂದುಕೊಂಡಂತೆ ಸಿನಿಮಾ ಕನ್ನಡ ಸಿನಿಮಾ ರಸಿಕರ ಆಶೀರ್ವಾದವೂ ಸಿಗಲಿ.

  • ಎಂಟರ್‌ ಟೈನ್‌ಮೆಂಟ್‌ ಬ್ಯೂರೋ ಸಿನಿಲಹರಿ

error: Content is protected !!