ಸಮಂತಾ ಡಿವೋರ್ಸ್ ಕೊಟ್ರೆ ಕತ್ತರಿಸಿ ಹಾಕ್ತೀನಿ ; ರೊಚ್ಚಿಗೆದ್ದ ಅಕ್ಕಿನೇನಿ ಕುಟುಂಬದ ಹಾರ್ಡ್ ಕೋರ್‌ ಫ್ಯಾನ್ !?

ಸೌತ್ ಸಿನಿಮಾ ಇಂಡಸ್ಟ್ರಿಯ ತಾರಾಜೋಡಿಗಳಾದ ನಟಿ ಸಮಂತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ದಾಂಪತ್ಯ ವಿಚ್ಛೇದನದ ಅಂತ ತಲುಪಿದೆಯೋ ಇಲ್ಲವೋ ಗೊತ್ತಿಲ್ಲ. ‌ಆದರೆ, ಗಾಸಿಪ್ ಟೋಪಿ‌ ಹಾಕಿಕೊಂಡಿರುವ ಸುದ್ದಿ ಊಸರವಳ್ಳಿಯಂತೆ ದಿನಕ್ಕೊಂದು‌ ಬಣ್ಣ ಬದಲಿಸುತ್ತಾ ಇಡೀ ಸೌತ್ ಸಿನಿಮಾ ಅಂಗಳದಲ್ಲೆಲ್ಲಾ ಗುಲ್ಲೆಬ್ಬಿಸುತ್ತಿದೆ. ಆದರೆ, ಬದುಕಲ್ಲಿ ಬಿರುಗಾಳಿ ಎದ್ದಿರುವ ಬಗ್ಗೆಯಾಗಲೀ, ಸಂಬಂಧದಲ್ಲಿ ಬಿರುಕು ಮೂಡಿರುವ ಕುರಿತಾಗಲೀ ಎಲ್ಲಿಯೂ ಚೈ ಅಂಡ್ ಸ್ಯಾಮ್ ಮುಕ್ತವಾಗಿ ಮಾತನಾಡ್ತಿಲ್ಲ. ಆದರೆ, ಗಲ್ಲಿಗಾಸಿಪ್ ಮಾತ್ರ ಇಬ್ಬರ ಡೈವರ್ಸ್ ಕಥೆ ಹೇಳ್ತಿದೆ. ಅಕ್ಟೋಬರ್ 06 ರಂದು ಅಧಿಕೃತವಾಗಿ ಇಬ್ಬರು ಡೈವರ್ಸ್ ಬಗ್ಗೆ ಸ್ಪಷ್ಟನೆ ಕೊಡಲಿದ್ದಾರಂತೆ, ಕೌನ್ಸಿಲಿಂಗ್ ಮಾಡಿಸಿದರೂ ಪ್ರಯೋಜನವಾಗಿಲ್ಲವಂತೆ, ಸಮಂತಾ 50 ಕೋಟಿ ಪರಿಹಾರ ಕೇಳಿದ್ದು, ಕಾನೂನು ಪ್ರಕ್ರಿಯೆ ಕೂಡ ಅಕ್ಟೋಬರ್ 06 ರಂದೇ ನಡೆಯಲಿದೆ‌ ಎನ್ನುವ ಗಾಸಿಪ್ ಸುದ್ದಿ ಅಚ್ಚರಿ ಮೂಡಿಸಿದೆ.‌


ಹೀಗೆ ಚೈ-ಸ್ಯಾಮ್ ಡಿವೋರ್ಸ್ ಗಾಸಿಪ್ ಮ್ಯಾಟರ್ ಗಲ್ಲಿಯಲ್ಲಿ ಥಕ್ಕಥೈ ಅಂತ ಕುಣಿಯುತ್ತಿರೋದ್ರಿಂದ ಅಕ್ಕಿನೇನಿ ಫ್ಯಾಮಿಲಿ ಫ್ಯಾನ್ಸ್ ಫುಲ್ ಅಪ್ ಸೆಟ್ ಆಗಿದ್ದಾರೆ. ಏನಾಗ್ತಿದೆ ನಟಿ ಸಮಂತಾ ಹಾಗೂ ನಾಗಚೈತನ್ಯ ಬದುಕಿನ ಬಾಂಡಲದಲ್ಲಿ ಎನ್ನುತ್ತಾ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಪ್ರೀತ್ಸಿ ಮದುವೆಯಾದ, ರೀಲ್ ಅಂಡ್ ರಿಯಲ್ ಲೈಫ್ ನಲ್ಲಿ ಸೈ ಎನಿಸಿಕೊಂಡ ಈ‌ಜೋಡಿ ಯಾವುದೇ ಕಾರಣಕ್ಕೂ ದೂರವಾಗಬಾರದು ದೇವಾ ಎನ್ನುತ್ತಾ ತಮ್ಮ ತಮ್ಮ ಮನೆದೇವರಿಗೆ ಹರಕೆ ಕಟ್ಟಿಕೊಳ್ತಿದ್ದಾರೆ. ಕಣ್ಣುಕುಕ್ಕುವಂತಿರುವ ಜೋಡಿ ಮೇಲೆ ಯಾವ ಕೆಟ್ಟಕಣ್ಣು ತಾಗದಿರಲಿ ಭಗವಂತ ಎನ್ನುತ್ತಿದ್ದಾರೆ. ಇಂತಹ ಫ್ಯಾನ್ ಫಾಲೋಯರ್ಸ್ ಮಧ್ಯೆ ಅಕ್ಕಿನೇನಿ ಫ್ಯಾಮಿಲಿ ಡೈಹಾರ್ಡ್ ಫ್ಯಾನ್ ವೊಬ್ಬ ಸಮಂತಾಗೆ ವಾರ್ನಿಂಗ್ ಮಾಡಿದ್ದಾರೆ.

ಹೌದು, ತೆಲುಗು ವೆಬ್ ಸೈಟ್ ಗಳು ವರದಿ ಮಾಡಿರುವಂತೆ ಅಕ್ಕಿನೇನಿ ಫ್ಯಾಮಿಲಿ ಫ್ಯಾನ್ ಸಮಂತಾಗೆ ವಾರ್ನ್ ಮಾಡಿದ್ದಾರಂತೆ. ಒಂದ್ವೇಳೆ ಸಮ್ಮು ಬೇಬಿ ಡಿವೋರ್ಸ್ ಕೊಟ್ಟಿದ್ದೇ ಆದಲ್ಲಿ ಕತ್ತರಿಸಿ ಹಾಕುವುದಾಗಿ ಧಮ್ಕಿ ಹಾಕಿದ್ದಾರಂತೆ. ಹೀಗಂತ, ಟಾಲಿವುಡ್ ವೆಬ್ ಸೈಟ್ ಗಳು ಸುದ್ದಿ ಬಿತ್ತರಿಸಿವೆ. ಅಷ್ಟಕ್ಕೂ, ಈ ಸುದ್ದಿಯಲ್ಲಿ ಎಷ್ಟು ಹುರುಳಿದೆಯೋ ಅಥವಾ ಎಷ್ಟು ಸುಳ್ಳಿದೆಯೋ ಗೊತ್ತಿಲ್ಲ. ಆದರೆ, ಒಂದಂತೂ ಸತ್ಯ ತಾವು ಇಷ್ಟಪಡುವ, ಆರಾಧಿಸುವ, ಅಭಿಮಾನಿಸುವ ತಾರೆಯರು ಹಾಗೂ ತಾರಾ ಜೋಡಿಗಳ ವೃತ್ತಿ ಬದುಕಿರಲಿ ಅಥವಾ ವೈಯಕ್ತಿಕ ಬದುಕಿರಲಿ ಅಲ್ಲಿ ಏನಾದರೂ ಹೆಚ್ಚುಕಮ್ಮಿಯಾದರೆ, ಬಿರುಗಾಳಿ ಎದ್ದರೆ, ಅದನ್ನ ಸಹಿಸುವ ಶಕ್ತಿ ಅಭಿಮಾನಿ ದೇವರುಗಳಿಗಿಲ್ಲ. ಹಲ್ಲಲ್ಲು ಕಡಿಯುತ್ತಲೇ, ಕಣ್ಣಲ್ಲೇ ಕೆಂಡ ಉಗುಳುತ್ತಲೇ ಅಖಾಡಕ್ಕೆ ಇಳಿದುಬಿಡ್ತಾರೆ.

ಎಲ್ಲವೂ ಸಮಾನವಾಗಿರಬೇಕು ಮತ್ತು ಸಂತೋಷದಿಂದ ಕೂಡಿರಬೇಕು ಅಂತ ಫ್ಯಾನ್ಸ್ ಬಯಸ್ತಾರೆ. ಈಗ ಸ್ಯಾಮ್ ‌ಚೈ ಫ್ಯಾನ್ಸ್ ಕೂಡ ಇದನ್ನೇ ಆಶಿಸುತ್ತಿದ್ದಾರೆ. ಬಜಾರ್ ನಲ್ಲಿ ಹಬ್ಬಿರುವ ವಿಚ್ಚೇದನದ ಸುದ್ದಿ ಸುಳ್ಳಾಗಲಿ, ಮನಂ ಜೋಡಿಯ ಮಧ್ಯೆ ವಿರಸ ಮೂಡಿರದಿರಲಿ, ಮಜಿಲಿ ಜೋಡಿ ಒಂದಾಗಿ, ಖುಷಿಯಾಗಿ, ಸುಖವಾಗಿ ಬಾಳಲಿ ಎನ್ನುವುದೇ ಅವರ ಕೋಟ್ಯಾಂತರ ಭಕ್ತರ ಕೋರಿಕೆ.

  • ಎಂಟರ್‌ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!