ಚಿತ್ರಾನ್ನಕ್ಕೆ ಕಾಂಗ್ರೇಸ್ ಕಡ್ಲೇಬೀಜ ಹಾಕದೆ ಹೋದರೂ ಪರವಾಗಿಲ್ಲ ಸೀದಾ ಸಾದಾ ಚಿತ್ರಾನ್ನ ಕೊಟ್ಟರೆ ಸಾಕು ಅಂತ ಹೇಳಿದಾಗ ಗಾಂಧಿನಗರದಲ್ಲಿದ್ದ ಎರಡು ಇಡ್ಲಿ ಒಂದು ವಡಾ ಬ್ರೇಕ್‌ಫಾಸ್ಟ್ ಪದ್ದತಿಯನ್ನೇ ಬ್ರೇಕ್ ಮಾಡಿದವರು. ತಿಂಡಿ ಇರಲಿ ತೀರ್ಥ ಇರಲಿ ಎಲ್ಲವೂ ಹೊಟ್ಟೆತುಂಬಾ ಸೇರಬೇಕು ಅಂತ ಮೀಲ್ಸ್ ಕೇಳಿದರೆ ಫುಲ್‌ಮೀಲ್ಸ್ ಕೊಟ್ಟುಕೊಂಡು ಸಿನಿಮಾ ಕಾರ್ಮಿಕರನ್ನು, ಚಿತ್ರರಂಗ ನಂಬಿಕೊಂಡಿರುವವರನ್ನು, ಪ್ರತಿಭೆವುಳ್ಳವರನ್ನು, ಸಿನಿಮಾಗೋಸ್ಕರ ನಿದ್ದೆಗೆ ಚಟ್ಟಕಟ್ಟಿ ಕೆಲಸ ಮಾಡುವವರನ್ನು ಬೆಳೆಸುತ್ತಿದ್ದಾರೆ. ನಮ್ಮ ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿಯನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದಕ್ಕೆ `ಹೊಂಬಾಳೆ ಸಂಸ್ಥೆ’ಯವರು ಪಣತೊಟ್ಟಿದ್ದಾರೆ ಅಂದರೆ ಬಹುಶ: ತಪ್ಪಾಗಲಿಕ್ಕಿಲ್ಲ ಎನಿಸುತ್ತೆ.
ಕರ್ನಾಟಕ ಸಿನಿಮಾ ಪ್ರೇಕ್ಷಕರಿಗೆ ಬಾಳೆದೆಲೆಯಲ್ಲಿ ಹಬ್ಬದೂಟ ಬಡಿಸಿ ಸಂತೃಪ್ತಿಪಡಿಸಿರುವ ಹೊಂಬಾಳೆ ಫಿಲಂಸ್, ʼಕೆಜಿಎಫ್ʼ ಚಿತ್ರದ ಮೂಲಕ ಕನ್ನಡಿಗರ ಜೊತೆಗೆ ಇಡೀ ಜಗತ್ತಿಗೆ ಬಾಳೆದೆಲೆಯಲ್ಲಿ ಬಾಡೂಟ ಹಾಕ್ಸಿದ್ದು ಇನ್ನೂ ಯಾರು ಮರೆತಿಲ್ಲ. ಮುಂದೆ ಮರೆಯೋದು ಇಲ್ಲ. ಯಾಕಂದ್ರೆ, ಗಂಧದಗುಡಿಯಲ್ಲಿ ಗೊನೆಯೊಡೆದ ಬಾಳೆದೆಲೆಗೆ ಅದರದ್ದೇ ಆದ ಮಹತ್ವವಿದೆ, ಅಂತ ಮಹತ್ವದ ಎಲೆಯ ಮೇಲೆ ಹೊಂಬಾಳೆ ಫಿಲಂಸ್ ನವರು' ಬಡಿಸಿದ ಊಟಕ್ಕೆ ಅದರದ್ದೇ ಆದ ಶ್ರೇಷ್ಟತೆಯಿದೆ. ಹೀಗಾಗಿಯೇ, ಇವತ್ತು ಇಡೀ ಭಾರತೀಯ ಚಿತ್ರರಂಗ ಹೊಂಬಾಳೆ ತಯ್ಯಾರಿಸುವ ಮೃಷ್ಟಾನ್ನ ಭೋಜನಕ್ಕಾಗಿ ಎದುರು ನೋಡುತ್ತೆ. ʼಕೆಜಿಎಫ್ ಚಾಪ್ಟರ್-2ʼ ಗಾಗಿ ವರ್ಲ್ಡ್ ವೈಡ್ ಕಣ್ಣರಳಿಸಿ ಕಾಯುತ್ತಿರುವ ಕಾಲದಲ್ಲಿ
ಗಂಧದಗುಡಿಗೆ’ ಫುಲ್‌ಮೀಲ್ಸ್ ಹಾಕೋದಕ್ಕೆ `ಹೊಂಬಾಳೆ’ಯ ಅನ್ನದಾತರು ಸಜ್ಜಾಗಿದ್ದಾರೆ.
ಚಿತ್ರಾನ್ನಕ್ಕೆ ಕಾಂಗ್ರೇಸ್ ಕಡ್ಲೇಬೀಜ ಹಾಕದೆ ಹೋದರೂ ಪರವಾಗಿಲ್ಲ ಸೀದಾ ಸಾದಾ ಚಿತ್ರಾನ್ನ ಕೊಟ್ಟರೆ ಸಾಕು ಅಂತ ಹೇಳಿದಾಗ ಗಾಂಧಿನಗರದಲ್ಲಿದ್ದ ಎರಡು ಇಡ್ಲಿ ಒಂದು ವಡಾ ಬ್ರೇಕ್‌ಫಾಸ್ಟ್ ಪದ್ದತಿಯನ್ನೇ ಬ್ರೇಕ್ ಮಾಡಿದವರು. ತಿಂಡಿ ಇರಲಿ ತೀರ್ಥ ಇರಲಿ ಎಲ್ಲವೂ ಹೊಟ್ಟೆತುಂಬಾ ಸೇರಬೇಕು ಅಂತ ಮೀಲ್ಸ್ ಕೇಳಿದರೆ ಫುಲ್‌ಮೀಲ್ಸ್ ಕೊಟ್ಟುಕೊಂಡು ಸಿನಿಮಾ ಕಾರ್ಮಿಕರನ್ನು, ಚಿತ್ರರಂಗ ನಂಬಿಕೊಂಡಿರುವವರನ್ನು, ಪ್ರತಿಭೆವುಳ್ಳವರನ್ನು, ಸಿನಿಮಾಗೋಸ್ಕರ ನಿದ್ದೆಗೆ ಚಟ್ಟಕಟ್ಟಿ ಕೆಲಸ ಮಾಡುವವರನ್ನು ಬೆಳೆಸುತ್ತಿದ್ದಾರೆ. ನಮ್ಮ ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿಯನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದಕ್ಕೆ `ಹೊಂಬಾಳೆ ಸಂಸ್ಥೆ’ಯವರು ಪಣತೊಟ್ಟಿದ್ದಾರೆ ಅಂದರೆ ಬಹುಶ: ತಪ್ಪಾಗಲಿಕ್ಕಿಲ್ಲ ಎನಿಸುತ್ತೆ.
ಪವರ್‌ಸ್ಟಾರ್ ಜೊತೆ ಯುವ ನಿರ್ಮಾಪಕರಾಗಿ ಅಖಾಡಕ್ಕಿಳಿದವರು ಇವತ್ತು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದುಮಾಡುತ್ತಿದ್ದಾರೆ ಮತ್ತು ಸುದ್ದಿಯಾಗ್ತಿದ್ದಾರೆ ಅಂದ್ರೆ ಕಾರಣ ಸಿನಿಮಾ ಮೇಲೆ `ಹೊಂಬಾಳೆ ಫಿಲಂಸ್ʼ ನ ಮುಖ್ಯಸ್ಥರಿಗೆ ಸಿನಿಮಾ ಮೇಲಿರುವಂತಹ ಪ್ರೀತಿ ಮತ್ತು ಭಕ್ತಿ. ಕೇವಲ ದುಡ್ಡು ಮಾಡೋದಕ್ಕೆ ಬಂದಿರುವವರಲ್ಲ ಇವರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಸಿನಿಮಾದಿಂದ ಬಂದ ಹಣವನ್ನ ಸಿನಿಮಾಗೆ ಸುರಿಯುತ್ತಿದ್ದಾರೆ. ಕೆಜಿಎಫ್ ನಂತರ ಭರ್ತಿ ಆರು ಚಿತ್ರಗಳನ್ನ ಅನೌನ್ಸ್ ಮಾಡಿದ್ದಾರೆ. ʼಕೆಜಿಎಫ್ ಚಾಪ್ಟರ್-2ʼ ಸೇರಿದಂತೆ ಒಟ್ಟು ಹನ್ನೆರಡು ಸಿನಿಮಾಗಳು ಹೊಂಬಾಳೆ ಮುಖ್ಯಸ್ಥರ ಕೈಯಲ್ಲಿವೆ. ಆರಿದ್ದ ಚಿತ್ರಗಳು ಹನ್ನೆರಡು ಆಗಿರುವಾಗ ಗಂಧದಗುಡಿಗೆ ಫುಲ್‌ಮೀಲ್ಸ್ ಹಾಕೋದಕ್ಕೆ ಮುಂದಾಗಿದ್ದಾರೆ. ನವರಸಗಳಿಗೆ ನಾಯಕರಾಗಿರುವ ಜಗ್ಗೇಶ್ ಅವರಿಂದಲೇ ಕರ್ನಾಟಕಕ್ಕೆ ಮೃಷ್ಟಾನ್ನ ಭೋಜನ ಬಡಿಸೋದಕ್ಕೆ ಹೊಂಬಾಳೆ ಸಂಸ್ಥೆ ಸಜ್ಜಾಗಿದೆ.
ಆಗಲೇ ಹೇಳಿದ ಹಾಗೇ ಮೀಲ್ಸ್ ಕೇಳಿದರೆ ಫುಲ್‌ಮೀಲ್ಸ್ ಕೊಡುವ ಬ್ಯಾನರ್ ಹೊಂಬಾಳೆ'. ಚಿತ್ರಾನ್ನ ಕಂಡು ಎಕ್ಸೈಟ್ ಆಗುವ ಸಿನಿಪ್ರೇಮಿಗಳಿಗೆ ವೆಜ್‌ಪುಲಾವ್ ಬಡಿಸಿ ಸಂತೃಪ್ತಿಪಡಿಸುವ ನಿರ್ಮಾಣ ಸಂಸ್ಥೆ. ಇದೀಗ ನವರಸನಾಯಕ ಜಗ್ಗೇಶ್ ಹಾಗೂ ಸಂತೋಷ್ ಆನಂದ್‌ರಾಮ್ ಅವರ ಕಾಂಬಿನೇಷನ್‌ನಲ್ಲಿ ಡೆಲಿಷಿಯಸ್ ಫುಲ್‌ಮೀಲ್ ತಯ್ಯಾರಿಸುವ ಸಿದ್ದತೆಯಲ್ಲಿದೆ. ನವೆಂಬರ್ ೨೨ ರಂದು ಕುಕ್ಕಿಂಗ್ ಶುರುವಾಗಲಿದೆ.ʼ ರಾಜಕುಮಾರʼ ಹಾಗೂʼ ಯುವರತ್ನʼ ಚಿತ್ರದ ಸಾರಥಿ ಸಂತೋಷ್ ಆನಂದ್ ರಾಮ್ ರುಚಿಕಟ್ಟಾದ, ಸ್ವಾದಭರಿತ, ಆಹ್ಲಾದಕರವಾ ದ
ಮೃಷ್ಟಾನ್ನ’ವನ್ನು ತಯ್ಯಾರಿಸಲಿದ್ದಾರೆ. ಹಾಸ್ಯ, ಶೃಂಗಾರ, ರೌದ್ರ, ಭಯಾನಕ, ಭೀಭತ್ಸ, ವೀರ, ಕರುಣಾ, ಅದ್ಭುತ, ಶಾಂತ ಹೀಗೆ ಒಂಭತ್ತು ರಸಗಳಿಗೆ ಬ್ರಾಂಡ್ ಅಂಬಾಸೀಡರ್ ಆಗಿರುವ, ನವರಸನಾಯಕ ಎಂತಲೇ ಪ್ರಖ್ಯಾತಿ ಪಡೆದಿರುವ ಜಗ್ಗಣ್ಣ ಇಡೀ ಕರುನಾಡಿಗೆ ಫುಲ್‌ಮೀಲ್ಸ್ ಹಬ್ಬದೂಟ ಬಡಿಸ್ತಾರೆ. ಈಗಾಗಲೇ ಬಿಡುಗಡೆಯಾಗಿರುವ `ರಾಘವೇಂದ್ರ ಸ್ಟೋರ್ಸ್ʼ ಪೋಸ್ಟರ್ ನೋಡಿದ್ರೆ ನಿಮಗೆ ತಿಳಿಯುತ್ತೆ.
ಅಂದ್ಹಾಗೇ,ರಾಘವೇಂದ್ರ ಸ್ಟೋರ್ಸ್ʼ ಪಕ್ಕಾ ಪ್ಯೂರ್ ವೆಜ್ ಖಾನಾವಳಿ. ಎರಡು ಇಡ್ಲಿ ಮೆಣಸಿನಕಾಯಿ ಜೊತೆ ತೂತ್‌ವಡೆ ಸಿಗುತ್ತೆ. ಉಪ್ಪಿಟ್ಟು ಖಾಯಂ, ನೆಂಚಿಗೆ ಬೇಕಾದರೆ ಟೇಬಲ್ ಮೇಲೆ ಈರುಳ್ಳಿ ಇರುತ್ತೆ. ತಿನ್ನೋವಾಗ ಕೂದಲು ಸಿಗ್ಬೋದು ಅರ್ಜೆಸ್ಟ್ ಮಾಡ್ಕೊಬೇಕಾಗುತ್ತದೆ. ಮುಖಕ್ಕೆ ಅಡುಗೆ ಭಟ್ಟ ಹಿಟ್ಟು ಮೆತ್ಕೊಂಡಿದ್ದಾನೆ ಎನ್ನುವ ಕಾರಣಕ್ಕೆ ಕ್ಲೀನ್ ಇಲ್ಲ ಎಂದುಕೊಳ್ಳಬೇಡಿ. ಕ್ಲಿನಿಕ್ ಆಲ್‌ಕ್ಲಿಯರ್ ಶಾಂಪು ಥರ ಈ ಹೋಟೆಲ್ ಪಕ್ಕಾ ಕ್ಲೀನ್ ಅಂಡ್ ಕ್ಲಿಯರ್ ಅದರಲ್ಲೂ,
ರಾಘವೇಂದ್ರ ಸ್ಟೋರ್ಸ್ʼ ನಲ್ಲಿ ಅಡುಗೆ ಮಾಡುವ ಭಟ್ಟರು ಹಾಗೂ ಬಡಿಸೋರು ಶ್ರೀ ಗುರು ರಾಘವೇಂದ್ರ ಸ್ವಾಮಿಯ ಪರಮಭಕ್ತರಾಗಿರೋದ್ರಿಂದ ಕ್ಲೀನ್ ಆಗಿರಲೆಬೇಕು ಅಪ್‌ಕೋರ್ಸ್ ಇರುತ್ತಾರೆ ಕೂಡ.
ಅಣ್ಣಾವ್ರು ಮಂತ್ರಾಲಯ ಮಹಾತ್ಮೆ' ಸಿನಿಮಾ ಮಾಡುವಾಗ ಮಡಿಮೈಲಿಗೆಯಿಂದ ಇದ್ದರು ಜೊತೆಗೆ ನಾನ್‌ವೆಜ್ ತ್ಯಜಿಸಿದ್ದರು. ಅದರಂತೇ, ಜಗ್ಗಣ್ಣ ಕೂಡ
ರಾಘವೇಂದ್ರ ಸ್ಟೋರ್ಸ್ʼಗಾಗಿ ನಾನ್‌ವೆಜ್ ಬಿಡ್ತಾರೆ ಅನ್ಸುತ್ತೆ. ಮೇಲ್ನೋಟಕ್ಕೆ ರಾಘವೇಂದ್ರ ಸ್ಟೋರ್ಸ್ʼ ಪ್ಯೂರ್ ವೆಜ್ ರೀತಿ ಕಾಣುತ್ತಿದೆ, ಪೋಸ್ಟರ್‌ನಲ್ಲಿ ಪಕ್ಕಾ ವೆಜ್ ಐಟಮ್ ಇರೋದ್ರಿಂದ ಪ್ಯೂರ್ ವೆಜಿಟೇರಿಯನ್ ಸಿನಿಮಾ ಅನ್ಸುತ್ತೆ. ಹೀಗಾಗಿ, ನಾನ್‌ವೆಜ್ ಬಿಡುವ ಸಂದರ್ಭ ಬರೋದಿಲ್ಲ ಆದರೂ ಕೂಡ ಜಗ್ಗಣ್ಣ ರಾಯರನ್ನ ಆರಾಧನೆ ಮಾಡೋದ್ರಿಂದ ರಾಘವೇಂದ್ರ ಸ್ಟೋರ್ಸ್ʼಗಾಗಿ ಬಾಡೂಟ ಬಿಟ್ಟರೂ ಬಿಡ್ಬೋದು ಕಾದುನೋಡಬೇಕು. ಒಟ್ನಲ್ಲಿ ರಾಘವೇಂದ್ರ ಸ್ಟೊರ್ಸ್ʼ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಫುಲ್‌ಮೀಲ್ಸ್ ಕೊಡ್ಬೇಕು ಅಂತ ಹೊಂಬಾಳೆ ನಿರ್ಧರಿಸಿದರೇ,
ನಗಬೇಕು-ನಗಿಸಬೇಕು ಇದೇ ನನ್ನ ಧರ್ಮ’ ಫುಲ್‌ಮೀಲ್ಸ್ ಹಬ್ಬದೂಟ ಬಡಿಸ್ತೀನಿ ಎಂದು ಜಗ್ಗಣ್ಣ ರೆಡಿಯಾಗಿದ್ದಾರೆ. ಸಂತೋಷ್-ಜಗ್ಗೇಶ್ ತಯ್ಯಾರಿಸಲಿರುವ ಮೃಷ್ಟಾನ್ನ ಹೇಗಿರಲಿದೆ ಜಸ್ಟ್ ವೇಯ್ಟ್ ಅಂಡ್ ವಾಚ್
- ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ