ರಾಯರ ಮಗನ ರಾಘವೇಂದ್ರ ಸ್ಟೋರ್ಸ್ : ಹೊಂಬಾಳೆ ಫಿಲಂಸ್‌ ನಲ್ಲಿ‌ ನಟನೆಯ ಅಖಾಡಕ್ಕಿಳಿದ ನವರಸನಾಯಕ ಜಗ್ಗೇಶ್ !

ಹೊಂಬಾಳೆ ಫಿಲಂಸ್‌ ಅಚ್ಚರಿ ಹುಟ್ಟಿಸುತ್ತಿದೆ. ಕೊರೋನಾ ಅಂತ ಉದ್ಯಮವೇ ಸೈಲೆಂಟ್‌ ಆಗಿರುವಾಗ ಹೊಂಬಾಳೆ ಫಿಲಂಸ್‌ ಮಾತ್ರ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಅನೌನ್ಸ್‌ ಮಾಡುತ್ತಿದೆ. ಲಾಕ ಡೌನ್‌ ನಂತರದ ದಿನಗಳಲೇ ಪ್ರಭಾಸ್‌ ಆಯ್ತು, ಅಲ್ಲಿಂದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಆಯ್ತು, ಜತೆಗೆ ರಿಷಬ್‌ ಶೆಟ್ಟಿ , ರಕ್ಷಿತ್‌ ಶೆಟ್ಟಿ ಅವರಿಗೂ ಸಿನಿಮಾ ಅನೌನ್ಸ್‌ ಮಾಡಿ ಆಯ್ತು. ಈಗ ಕನ್ನಡದ ಹಿರಿಯ ನಟ ನವರಸ ನಾಯಕ ಜಗ್ಗೇಶ್‌ ಕಾಂಬಿನೇಷನ್‌ ಮೂಲಕ ಮತ್ತೊಂದು ಸಿನಿಮಾ ಅನೌನ್ಸ್‌ ಮಾಡಿ ಕುತೂಹಲ ಮೂಡಿಸಿದೆ ʼಕೆಜಿಎಫ್‌ʼ ಖ್ಯಾತಿಯ ಹೊಂಬಾಳೆ ಫಿಲಂಸ್.‌

ಸಿನಿಮಾ ಪ್ರೇಮಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಕನ್ನಡದ ಪ್ರತಿಷ್ಟಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ನ 12 ನೇ ಸಿನಿಮಾದ ಟೈಟಲ್‌ ಏನು, ಅದರ ನಾಯಕ ಯಾರು ಎನ್ನುವ ಕ್ಯೂರಿಯಾಸಿಟಿಗೆ ಇಂದು ಉತ್ತರ ಸಿಕ್ಕಿದೆ. ಈ ಮೊದಲೇ ಹೇಳಿದಂತೆ ಹೊಂಬಾಳೆ ಫಿಲಂಸ್‌ ತನ್ನ 12ನೇ ಸಿನಿಮಾದ ಟೈಟಲ್‌ ಜತೆಗೆ ಫಸ್ಟ್‌ ಲುಕ್‌ ಪೋಸ್ಟರ್‌ ಲಾಂಚ್‌ ಮೂಲಕ ಅದರ ನಾಯಕ ಯಾರು ಎನ್ನುವುದನ್ನು ರಿವೀಲ್‌ ಮಾಡಿದೆ. ಒಂದ್ರೀತಿ ಇದು ಅಚ್ಚರಿಯನ್ನೇ ಹೊತ್ತು ಬಂದಿರುವುದು ವಿಶೇಷ.

ಅಂದ ಹಾಗೆ, ಹೊಂಬಾಳೆ ಫಿಲಂಸ್‌ ನಿರ್ಮಾಣದ 12 ನೇ ಚಿತ್ರದ ಹೆಸರು ರಾಘವೇಂದ್ರ ಸ್ಟೋರ್ಸ್‌ʼ ಇದರ ನಾಯಕ ನಟ ಜಗ್ಗೇಶ್.‌ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್.‌ ಕನ್ನಡದ ಹಿರಿಯ ನಟ ನವರಸ ನಾಯಕ ಜಗ್ಗೇಶ್‌ ಇದೇ ಮೊದಲು ಹೊಂಬಾಳೆ ಫಿಲಂಸ್‌ ಬ್ಯಾನರ್‌ ಮೂಲಕ ನಟನೆಯ ಅಖಾಡಕ್ಕೆ ಇಳಿದಿದ್ದಾರೆ. ಅವರಿಗೆ ಇಲ್ಲಿ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಜತೆಯಾಗಿದ್ದಾರೆ. ಇದೇ ಮೊದಲು ಇವರಿಬ್ಬರ ಜುಗಲ್‌ ಬಂಧಿ ರಾಘವೇಂದ್ರ ಸ್ಟೋರ್ಸ್‌ ನಲ್ಲಿ ಆಗಿದೆ.

ಹೊಂಬಾಳೆ ಫಿಲಂಸ್‌ ಇದೆಲ್ಲ ವಿವರವನ್ನು ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಟೈಟಲ್‌ ಮೂಲಕವೇ ಕುತೂಹಲ ಹುಟ್ಟಿಸುವ ಈ ಸಿನಿಮಾ ಇದು. ರಾಘವೇಂದ್ರ ಅಂದಾಕ್ಷಣ ಅದು ಜಗ್ಗೇಶ್‌ ಅವರಿಗೆ ಕನೆಕ್ಟ್.‌ ಅದೇ ಕಾರಣಕ್ಕೆ ನಟ ಜಗ್ಗೇಶ್‌ ಅವರ ಪಾಲಿಗೆ ಇದು ಸಾಕಷ್ಟು ವಿಶೇಷತೆ ಹೊಂದಿದ ಸಿನಿಮಾ. ಯಾಕಂದ್ರೆ, ನಟ ಜಗ್ಗೇಶ್‌ ಅವರು ಗುರು ರಾಘವೇಂದ್ರ ಪರಮ ಭಕ್ತರು. ರಾಯರ ಮಗ ಅಂತಲೇ ನಂಬಿಕೆ. ಕಾಕತಾಳೀಯ ಎನ್ನುವ ಹಾಗೆ ಈಗವರು ರಾಯರ ಹೆಸರಿನ ಚಿತ್ರಕ್ಕೆ ನಾಯಕರಾಗಿದ್ದಾರೆ. ಅದರ ನಂಟಿನ ಬಗ್ಗೆಯೇ ಅವರು ಮೊದಲ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ʼ ರಾಯರ ಮಗನಿಗೆ ರಾಘವೇಂದ್ರ ಸ್ಟೋರ್ಸ್ ʼ ಚಿತ್ರ ಬದುಕಿನ ಪರಿಪೂರ್ಣ ಅವರ್ಥ. ನಗಿಸುತ್ತ ಬಿಡಿಸಿ ಹೇಳುವ ಅದ್ಭುತ ಕೃತಿ.‌ ಹೊಂಬಾಳೆ ಸಿನಿಮಾದ್‌ ಜತೆಗೆ ಇದು ನನ್ನ ಮೊದಲ ಸಿನಿಮಾವಾಗಿದ್ದು, ಈ ಹೊಸ ಪ್ರಯತ್ನವನ್ನು ಪ್ರೇಕ್ಷಕರು ಮೆಚ್ಚಿ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆʼ ಎನ್ನುವುದರ ಮೂಲಕ ʼರಾಘವೇಂದ್ರ ಸ್ಟೋರ್ಸ್‌ʼ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ ನಟ ಜಗ್ಗೇಶ್. ಇನ್ನು ರಾಘವೇಂದ್ರ ಸ್ಟೋರ್ಸ್‌ ಬಗ್ಗೆ ಹೊಂಬಾಳೆ ಫಿಲಂಸ್‌ ಎರಡು ದಿನಗಳ ಮುಂಚೆಯೇ ಕೊಟ್ಟ ಹಿಂಟ್ಸ್‌ ಏನು ಅಂತ ನಿಮಗೆಲ್ಲ ಗೊತ್ತೇ ಇದೆ. ಬಾಳೆ ಏಲೆ, ಅದರ ಮೇಲೆ ಒಂದಷ್ಟು ಅಕ್ಷರ. ಪ್ರತಿಯೊಬ್ಬರಲ್ಲೂ ಹಸಿವಿದೆ, ಪ್ರತಿ ಅಗಳಿನಲ್ಲೂ ತಿನ್ನುವವರ ಹೆಸರಿದೆ. ಅನ್ನದಾತೋ ಸುಖೀಭವ ಎಂಬುದಾಗಿ ಬರೆದು, ಚಿತ್ರದ ಟೈಟಲ್‌ ಅನೌನ್ಸ್‌ ಜತೆಗೆ ಅದರ ನಾಯಕ ಯಾರು ಎನ್ನುವುದರ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಹುಟ್ಟಿಸಿತ್ತು ಹೊಂಬಾಳೆ ಫಿಲಂಸ್.‌

ಆ ಕುತೂಹಲಕ್ಕೆ ಈಗ ತೆರೆ ಎಳೆದಿದೆ. ಮೊದಲೇ ಹೇಳಿದಂತೆ ಬುಧವಾರ ಟೈಟಲ್‌ ಜತೆಗೆ ಅದರ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ರಿವೀಲ್‌ ಆಗಿದೆ. ಕಳೆದೆರೆಡು ದಿನಗಳಿಂದ ಏನೇನೋ ಕಲ್ಪಿಸಿಕೊಂಡವರಿಗೆ ಇವತ್ತು ನಿಜಕ್ಕೂ ಶಾಕ್.‌ ಯಾಕಂದ್ರೆ ʼರಾಜಕುಮಾರʼ ಖ್ಯಾತಿಯ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರಿಗೆ ಇಲ್ಲಿ ಜೋಡಿಯಾಗಿದ್ದು ಕನ್ನಡದ ಹಿರಿಯ ನಟ, ನವರಸನಾಯಕ ಜಗ್ಗೇಶ್.‌ ಇನ್ನು ಟೃಟಲ್‌ ಅನೌನ್ಸ್‌ ಗೆ ಬಾಳೆ ಎಲೆ ಹಾಸಿ, ಒಂದಷ್ಟು ಕುತೂಹಲದ ಕೊಟೇಷನ್‌ ಹಾಕಿದ್ದ ಹೊಂಬಾಳೆ ಫಿಲಂಸ್‌ ನ 12 ನೇ ಚಿತ್ರದ ಕಥೆ ಬಗೆಗಿನ ಕುತೂಹಲಕ್ಕೂ ಒಂದಷ್ಟು ಮಾಹಿತಿ ಇಲ್ಲಿ ರಿವೀಲ್‌ ಆಗಿದೆ. ಅದಕ್ಕಿಂತ ಮೊದಲು ಹೊಂಬಾಳೆ ಫಿಲಂಸ್‌ ನಲ್ಲಿ ನಟ ಜಗ್ಗೇಶ್‌ ಇದೇ ಮೊದಲು ನಟನೆಯ ಅಖಾಡಕ್ಕೆ ಇಳಿದಿರುವುದು ಇಲ್ಲಿ ವಿಶೇಷ. ಆ ಬಗ್ಗೆ ನಿರ್ಮಾಪಕ ವಿಜಯ್‌ ಕಿರಗಂದೂರು ಕೂಡ ಹರ್ಷ ವ್ಯಕ್ತಪಡಿಸುತ್ತಾರೆ.

ʼ ಹಿರಿಯ ನಟರಾದ ಜಗ್ಗೇಶ್‌ ಅವರು ಇದೇ ಮೊದಲು ನಮ್ಮ ಬ್ಯಾನರ್‌ ನಲ್ಲಿ ನಟಿಸುತ್ತಿರುವುದು ನಮ್ಮನ್ನು ಪುಳಕಿತರನ್ನಾಗಿ ಮಾಡಿದೆ. ಇದು ನಮಗೆ ಹೆಮ್ಮೆಯ ವಿಷಯವೂ ಹೌದು.ಕನ್ನಡ ಚಲನಚಿತ್ರರಂಗ ಕೀರ್ತಿಯಲ್ಲಿ ಜಗ್ಗೇಶ್‌ ಅವರ ಪಾತ್ರಾಪಾರವಾದದ್ದು.ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅವೀಸ್ಮರಣಿಯ. ಅವರು ಚಿತ್ರರಂಗದ ಬಹುದೊಡ್ಡ ಆಸ್ತಿ. ಹೀಗಾಗಿ ಹೊಂಬಾಳೆ ಟೀಮ್‌ ಗೆ ನವರಸನಾಯಕ ಜಗ್ಗೇಶ್‌ ಅವರ ಸೇರ್ಪಡೆ ನಮ್ಮ ಸೌಭಾಗ್ಯʼ ಎನ್ನುವ ಮಾತುಗಳೊಂದಿಗೆ ತಮ್ಮ ಸಂಸ್ಥೆಯ ಸಿನಿಮಾಕ್ಕೆ ಅದ್ಧೂರಿ ಸ್ವಾಗತ ನೀಡಿದ್ದಾರೆ ನಿರ್ಮಾಪಕ ವಿಜಯ್‌ ಕಿರಗಂದೂರು. ಹಾಗೆಯೇ ರಾಜಕುಮಾರ, ಯುವರತ್ನ ಚಿತ್ರದ ನಂತರ ಮತ್ತೆ ಈಗ ಮೂರನೇ ಸಿನಿಮಾದೊಂದಿಗೆ ಹೊಂಬಾಳೆ ಫಿಲಂಸ್‌ ಮೂಲಕ ಹ್ಯಾಟ್ರಿಕ್‌ ಬಾರಿಸುತ್ತಿರುವ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರ ಬಗ್ಗೆಯೂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುವ ನಿರ್ಮಾಪಕ ವಿಜಯ್‌ ಕಿರಗಂದೂರು, ಹೊಸ ಚಲನಚಿತ್ರವನ್ನು ಚಿತ್ರ ರಸಿಕರ ನಿರೀಕ್ಷೆಗೆ ತಕ್ಕಂತೆ ರೂಪಿಸಲಿದ್ದಾರೆಂಬ ಆತ್ಮವಿಶ್ವಾಸ, ನಂಬಿಕೆ ನನಗಿದೆ ಎಂದಿದ್ದಾರೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!