ಜೂ.ನಿಖಿಲ್ ಎಂಟ್ರಿಯಿಂದ ಗಂಧದಗುಡಿಯ ಯುವರಾಜ ನಿಖಿಲ್ ಗೆ ಶಾಸಕನಾಗುವ ಅದೃಷ್ಟವಿದೆ ಎನ್ನುವ ಸಮಾಚಾರವನ್ನ ವಿನಯ್ ಗುರೂಜಿಯವರು ಈ ಹಿಂದೆಯೇ ಹೇಳಿದ್ದಾರೆ. ಸದ್ಯಕ್ಕೆ, ದೊಡ್ಮನೆಯ ಯುವರಾಣಿಗೆ ಗಂಡುಮಗು ಜನನದ ಸುದ್ದಿ ಸತ್ಯವಾಗಿದೆ. ಆ ಮಗುವಿನ ಭವಿಷ್ಯ ಉಜ್ವಲವಾಗಿರುವುದರ ಜೊತೆಗೆ ನಿಖಿಲ್ ಗೆ ರಾಜಯೋಗ ಬರಲಿದೆಯಂತೆ. ಆ ದಿವ್ಯಯೋಗದ ಕ್ಷಣಕ್ಕಾಗಿ ಗೌಡ್ರ ಕುಟುಂಬ ಮಾತ್ರವಲ್ಲ ಅಭಿಮಾನಿ ದೇವರುಗಳು ಕೂಡ ಕೂತೂಹಲದಿಂದ ಎದುರುನೋಡ್ತಿದೆ.
ಬಂದಾನವ್ವ ಭೂಪ.. ಬಂದಾನವ್ವ ಭೂಪ.. ದೊಡ್ಮನೆ ಯುವರಾಣಿ ಮಡಿಲಿನಲಿ.. ಮುತ್ತು ರತ್ನದಂತೆ.. ಬೆಳ್ಳಿ ಬೊಂಬೆಯಂತೆ..ದೊಡ್ಡಗೌಡರ ವಂಶದಲ್ಲಿ.. ಯಸ್, ಮಾಜಿ ಪ್ರಧಾನಿಗಳು ಎಚ್. ಡಿ. ದೇವಗೌಡರ ಕುಟುಂಬಕ್ಕೆ ಮರಿಮೊಮ್ಮಗನ ಆಗಮನವಾಗಿದೆ. ದೊಡ್ಮನೆ ಯುವರಾಣಿ ರೇವತಿ ಗಂಡುಮಗುವಿಗೆ ಜನ್ಮಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ನ ಯುವರಾಜ ನಿಖಿಲ್ ಕುಮಾರಸ್ವಾಮಿ ತಂದೆಯಾದ ಖುಷಿಯಲ್ಲಿದ್ದಾರೆ. ದೊಡ್ಡಗೌಡರಂತೂ ಮರಿಮೊಮ್ಮಗನ ಎಂಟ್ರಿಗೆ ಹೃದಯತುಂಬಿ ನಕ್ಕಿದ್ದಾರೆ. ಕರುಳಕುಡಿಯನ್ನ ಸ್ವಾಗತಿಸೋದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ.
ದೊಡ್ಡಗೌಡರ ಕುಟುಂಬಕ್ಕೆ ಮರಿಮೊಮ್ಮಗನ ಆಗಮನವಾಗುತ್ತೆ ಅಂತ
ಅವಧೂತರಾದ ವಿನಯ್ ಗುರೂಜಿಯವರು ಭವಿಷ್ಯ ನುಡಿದಿದ್ದರು.ಕೊನೆಗೂ ಗುರೂಜಿಯ ಭವಿಷ್ಯ ನಿಜವಾಗಿದೆ. ನಿಖಿಲ್- ರೇವತಿ ದಂಪತಿಗೆ ಗಂಡುಮಗು ಜನಿಸಿದೆ. ಮರಿ ಯುವರಾಜನೋ ಅಥವಾ ಜೂನಿಯರ್ ಯುವರಾಣಿಯೋ ಎನ್ನುವ ಕಾತುರಕ್ಕೆ ಬ್ರೇಕ್ ಬಿದ್ದಿದೆ. ಜೂ. ನಿಖಿಲ್ ಕಣ್ತುಂಬಿಕೊಳ್ಳುವ ಕಾತುರ ಹೆಚ್ಚಾಗಿದೆ.
ಜೂ.ನಿಖಿಲ್ ಎಂಟ್ರಿಯಿಂದ ಗಂಧದಗುಡಿಯ ಯುವರಾಜ ನಿಖಿಲ್ ಗೆ ಶಾಸಕನಾಗುವ ಅದೃಷ್ಟವಿದೆ ಎನ್ನುವ ಸಮಾಚಾರವನ್ನ ವಿನಯ್ ಗುರೂಜಿಯವರು ಈ ಹಿಂದೆಯೇ ಹೇಳಿದ್ದಾರೆ. ಸದ್ಯಕ್ಕೆ, ದೊಡ್ಮನೆಯ ಯುವರಾಣಿಗೆ ಗಂಡುಮಗು ಜನನದ ಸುದ್ದಿ ಸತ್ಯವಾಗಿದೆ. ಆ ಮಗುವಿನ ಭವಿಷ್ಯ ಉಜ್ವಲವಾಗಿರುವುದರ ಜೊತೆಗೆ ನಿಖಿಲ್ ಗೆ ರಾಜಯೋಗ ಬರಲಿದೆಯಂತೆ.
ಆ ದಿವ್ಯಯೋಗದ ಕ್ಷಣಕ್ಕಾಗಿ ಗೌಡ್ರ ಕುಟುಂಬ ಮಾತ್ರವಲ್ಲ ಅಭಿಮಾನಿ ದೇವರುಗಳು ಕೂಡ ಕೂತೂಹಲದಿಂದ ಎದುರುನೋಡ್ತಿದೆ. ಆ ಅದೃಷ್ಟದ ಕ್ಷಣ ಆದಷ್ಟು ಬೇಗ ಬರಲಿ ಅಲ್ಲವೇ.
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್‌ಕುಮಾರಸ್ವಾಮಿಯವರು ಸಿನಿಮಾ ಮಾತ್ರವಲ್ಲದೇ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್, ಗಂಧದಗುಡಿಯ ಅಂಗಳದಲ್ಲಿ ಗೆಲುವಿನ ಗದ್ದುಗೆ ಏರುವುದರ ಜೊತೆಗೆ ರಾಜಕೀಯ ನಾಯಕರಾಗಿ ಅಧಿಕಾರದ ಚುಕ್ಕಾಣಿ ಹಿಡಿಬೇಕು ಎನ್ನುವ ಮಹದಾಸೆವೊತ್ತಿದ್ದಾರೆ. ಪಕ್ಷಸಂಘಟನೆ ಹಾಗೂ ಪ್ರಚಾರದ ಜೊತೆಗೆ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ, ರೈಡರ್ ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ.
ಅಂದ್ಹಾಗೇ, ಇತ್ತೀಚೆಗಷ್ಟೇ ದೊಡ್ಮನೆಯ ಯುವರಾಣಿ ರೇವತಿಯವರ ಸೀಮಂತಕಾರ್ಯ ಅದ್ದೂರಿಯಾಗಿ ನೆರವೇರಿತ್ತು. ಮನೆಮಗಳ ರೂಪದಲ್ಲಿರುವ ಸೊಸೆ ರೇವತಿಯವರ ಕನಸಿನಂತೆಯೇ ಸೀಮಂತ ಶಾಸ್ತ್ರವನ್ನ ಗ್ರ್ಯಾಂಡ್ ಆಗಿ, ಸಂಪ್ರದಾಯಬದ್ಧವಾಗಿ ನೆರವೇರಿಸಿದ್ದರು. ಎಚ್ ಎಸ್ ಆರ್ ಲೇ ಔಟ್ ನ ಖಾಸಗಿ ಕನ್ವೆಷನ್ ಹಾಲ್ ನಲ್ಲಿ ರೇವತಿ ಬೇಬಿಶವರ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಕುಟುಂಬಸ್ಥರು ಹಾಗೂ ಆಪ್ತರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಶುಭಕೋರಿದ್ದರು
ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ