Deshadri Hosmane
Those who came to journalism with a fighting background. Hew has over 20 years of experience as a journalist and has worked in a variety of fields including politics, crime and agriculture. He is also a film journalist by accident and has been awarded the prestigious Aragini Award by the Karnataka Media Academy. He has worked in evening newspapers like sanjevani, karunaadu Sanje. Also work in tv Chanel. ETV, Udaya TV, Janashree, Vijaya Karnataka and Kannada newspapers.
ದೇಶಾದ್ರಿ ಹೊಸ್ಮನೆ
ಹೋರಾಟದ ಹಿನ್ನೆಲೆಯೊಂದಿಗೆ ಪತ್ರಿಕೋದ್ಯಮ ಕ್ಕೆ ಬಂದವರು. ಪತ್ರಕರ್ತನಾಗಿ 20 ವರ್ಷಗಳಿಗೂ ಹೆಚ್ವು ಕಾಲ ಅನುಭವ ಹೊಂದಿದ್ದು, ರಾಜಕೀಯ, ಅಪರಾಧ, ಕೃಷಿ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿ. ಹಾಗೆಯೇ ಆಕಸ್ಮಿಕ ಎಂಬಂತೆ ಸಿನಿಮಾ ಪತ್ರಕರ್ತರಾಗಿ ಬಂದ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಪ್ರತಿಷ್ಟಿತ ಅರಗಿಣಿ ಪ್ರಶಸ್ತಿ ಗೆ ಪಾತ್ರವಾಗಿದ್ದಾರೆ. ಸಂಜೆ ವಾಣಿ, ಈಟಿವಿ, ಉದಯ ಟಿವಿ, ಜನಶ್ರೀ, ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ, ನ್ಯೂಸ್ ಮೀಡಿಯಾ ವಿಶೇಷ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.ಈಗ ಸಿನಿ ಲಹರಿ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ರೂವಾರಿ ಆಗಿದ್ದಾರೆ.
ವಿಧಿ ಅಕ್ಷರಶಃ ಕ್ರೂರಿ ಬಿಡ್ರಿ. ಸ್ಯಾಂಡಲ್‌ವುಡ್ ಗುರುನಾ ಏಕಾಏಕಿ ಕಿತ್ಕೊಂಡ ಆ ವಿಧಿಗೆ ಹಿಡಿಶಾಪ ಹಾಕ್ಲೆಬೇಕು. ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಇದ್ದ, ಕಲಾಸರಸ್ವತಿಯನ್ನ ಆರಾಧನೆ ಮಾಡುತ್ತಿದ್ದ, ಅಕ್ಷರಗಳಿಗೆ ಜೀವತುಂಬಿ ಬರೆಯುತ್ತಿದ್ದ, ಗಂಧದಗುಡಿಯಲ್ಲಿ ಬಹುಬೇಡಿಕೆಯ ಸಂಭಾಷಣೆಕಾರರಾಗಿ ಗುರ್ತಿಸಿಕೊಂಡಿದ್ದ, ಗುರುಕಶ್ಯಪ್‌ನ ಜವರಾಯ ಏಕ್ದಮ್ ಕಿತ್ಕೊಂಡಿದ್ದಾನೆ. ಮುಂದೆಂದೂ ತಿರುಗಿ ಬಾರದ ಲೋಕಕ್ಕೆ ಎಳೆದೊಯ್ದಿದ್ದಾನೆ. ಗುರುನಾ ಕಳೆದುಕೊಂಡ ಚಂದನವನ ಕಂಬನಿ ಮಿಡಿಯುತ್ತಿದೆ.
ಗುರುಕಶ್ಯಪ್ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸಂಭಾಷಣೆಕಾರರಾಗಿ ಹೆಸರು ಮಾಡಿದ್ದರು. ರಮೇಶ್ ಅರವಿಂದ್ ನಟನೆಯ ಪುಷ್ಪಕ ವಿಮಾನ', ಸುಂದರಾಂಗ ಜಾಣ, ೧೦೦ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು. ಪ್ರಿಯಾಂಕ ಉಪೇಂದ್ರ ಅಭಿನಯದದೇವಕಿ’ ಚಿತ್ರಕ್ಕೆ ಡೈಲಾಗ್ಸ್ ಗೀಚಿದ್ದರು. ಇದಲ್ಲದೇ ಸುಮಾರು ೧೫ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ಒದಗಿಸಿದ್ದರು. ಗುರುಕಶ್ಯಪ್ ನಿಧನಕ್ಕೆ ರಮೇಶ್ ಅರವಿಂದ್ ಸಂತಾಪ ಸೂಚಿಸಿದ್ದಾರೆ. `ನಾನು ಕಂಡಂತ ಅತಿ ಪ್ರತಿಭಾವಂತರಲ್ಲಿ ಗುರುಕಶ್ಯಪ್ ಕೂಡ ಒಬ್ಬರು. ಒಬ್ಬ ಒಳ್ಳೆಯ ವ್ಯಕ್ತಿ, ಶ್ರೇಷ್ಟ ಬರಹಗಾರರನ್ನು ಕಳೆದುಕೊಂಡಿದ್ದೇವೆ ಓಂ ಶಾಂತಿ’ ಎಂದು ಟ್ವೀಟ್ ಮಾಡಿದ್ದಾರೆ.
ತಾವು ಜೀವತುಂಬಿ ಸಂಭಾಷಣೆ ಒದಗಿಸುತ್ತಿದ್ದ ಸಿನಿಮಾಗಳು ಬೆಳ್ಳಿಪರದೆ ಮೇಲೆ ತೆರೆಕಾಣುವ ಮೊದಲೇ ಗುರುಕಶ್ಯಪ್ ಇಹಲೋಕ ತ್ಯಜಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಭೈರಾಗಿ', ಡಾಲಿ ಧನಂಜಯ್ ಅಭಿನಯಿಸಿರುವಮಾನ್ಸೂನ್ ರಾಗ’, ವ್ಹೀಲ್‌ಚೇರ್ ರೋಮಿಯೋ, ಸತ್ಯಮಂಗಲ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಡೈಲಾಗ್ ಬರೆಯುತ್ತಿದ್ದರು. ಗುರುಕಶ್ಯಪ್ ಅವ್ರದ್ದು ಸಾಯೋ ವಯಸ್ಸಲ್ಲ. ೪೫ ವರ್ಷ ವಯಸ್ಸಾಗಿತ್ತಷ್ಟೇ, ಸೋಮವಾರ ರಾತ್ರಿ ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಹಾಗೂ ಮಗಳನ್ನ ಅಗಲಿದ್ದಾರೆ. ಡಾಲಿ ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಗುರುಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ.
ಗುರುಕಶ್ಯಪ್ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ. ಪುಷ್ಪಕ ವಿಮಾನ' ನಿರ್ದೇಶಕ ರವೀಂದ್ರನಾಥ್ಗುರು ದೇವ್ರಂತ ಮನುಷ್ಯರಾಗಿದ್ದರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ’. ಇನ್ಸ್ಪೆಕ್ಟರ್ ವಿಕ್ರಮ್ ಚಿತ್ರಕ್ಕೆ ಗುರು ಸಂಭಾಷಣೆ ಬರೆದುಕೊಟ್ಟಿದ್ದರು. `ಗುರುನಾ ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವೇ ಸರಿ ‘ನಟ ರಘುಮುಖರ್ಜಿ ಟ್ವೀಟ್ ಮಾಡಿದ್ದಾರೆ. ಇವರಷ್ಟೇ ಅಲ್ಲ ಕಲಾವಿದರಾದ ಧರ್ಮಣ್ಣ ಕಡೂರ್, ನಟಿ ಆರೋಹಿ ನಾರಾಯಣ್, ಮಮ್ಮಿ ನಿರ್ದೇಶಕ ಲೋಹಿತ್, ನಿರ್ದೇಶಕ ಆಕಾಶ್ ಶ್ರೀವತ್ಸ ಸೇರಿದಂತೆ ಹಲವರು ಗುರು ಅಗಲಿಕೆ ಕಣ್ಣೀರು ಹಾಕಿದ್ದಾರೆ.
ದೊಡ್ಡಗೌಡರ ಮನೆ-ಮನದಂಗಳದಲ್ಲಿ ಸಂತೋಷ- ಸಂಭ್ರಮ ಹಾಗೂ ಹಬ್ಬದ ವಾತಾವರಣ. ಆನಂದಸಾಗರದಲ್ಲಿ, ಖುಷಿಯ ಅಲೆಯಲ್ಲಿ ಗೌಡ್ರ ಕುಟುಂಬ ನಲಿಯುತ್ತಿದೆ. ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ತಮ್ಮ ಮನೆಯ ಕೀರ್ತಿಯ ಕೂಸನ್ನ ಮಡಿಲಲ್ಲಿ ಹೊತ್ತಿರುವ, ಮನೆಮಗಳ ರೂಪದಲ್ಲಿರುವ ರೇವತಿಗೆ ಸೀಮಂತಕಾರ್ಯ ನಡೆಸಿದ್ದಾರೆ. ಎಚ್ ಎಸ್ ಆರ್ ಲೇಔಟ್‌ನ ಖಾಸಗಿ ಕನ್ವೆಷನ್ ಹಾಲ್‌ನಲ್ಲಿ ಗೌಡ್ರ ಕುಟುಂಬ ವಿಜೃಂಭಣೆಯಿಂದ ಸೀಮಂತಶಾಸ್ತ್ರವನ್ನು ಮಾಡಿಮುಗಿಸಿದ್ದಾರೆ.
ಪ್ರತಿಹೆಣ್ಣು ತನ್ನ ಮದುವೆ ಬಗ್ಗೆ ಎಷ್ಟು ಕನಸುಗಳನ್ನ ಕಂಡಿರುತ್ತಾಳೋ ಅಷ್ಟೇ ಆಸೆ-ಕನಸು ತನ್ನ ಸೀಮಂತಶಾಸ್ತ್ರದ ಮೇಲೆಯೂ ಹೊತ್ತಿರುತ್ತಾಳೆ. ಅದರಂತೇ, ರೇವತಿ ಕೂಡ ಬೇಬಿಶವರ್ ಮೇಲೆ ಮಹದಾಸೆ ಹೊತ್ತಿದ್ದರು. ಪತ್ನಿ ರೇವತಿಯ ಕನಸಿನಂತೆಯೇ ನಿಖಿಲ್ ಸೀಮಂತಶಾಸ್ತ್ರವನ್ನು ಅರೇಂಜ್ ಮಾಡಿದ್ದರು. ವೈಟ್ ಅಂಡ್ ವೈಟ್ ಲುಕ್‌ನಲ್ಲಿ ಗೌಡ್ರುಡುಗ ನಿಖಿಲ್ ಮಿಂಚಿದರೆ, ಗೋಲ್ಡನ್ ವಿತ್ ಆರೇಂಜ್ ಕಲರ್ ಕಾಂಬಿನೇಷನ್ ರೇಷ್ಮೆಸ್ಯಾರಿಯಲ್ಲಿ ರೇವತಿ ಕಂಗೊಳಿಸಿದರು. ಅಪ್ಪ-ಅಮ್ಮನಾಗಿ ಪ್ರಮೋಷನ್ ಪಡೆಯುತ್ತಿರುವ ನಿಖಿಲ್-ರೇವತಿ ಖುಷಿಖುಷಿಯಾಗಿ ಈ ರೀತಿ ಕ್ಯಾಮೆರಾಗೆ ಪೋಸ್ ಕೊಟ್ಟರು ನೋಡಿ.
ಕೊರೊನಾ ಆತಂಕದ ಹಿನ್ನಲೆ ಕುಟುಂಬಸ್ತರ ಜೊತೆಗೆ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಸಿನಿಮಾ ಹಾಗೂ ರಾಜಕೀಯ ಲೋಕದ ಕೆಲವೇ ಕೆಲವು ಗಣ್ಯರು ಸೀಮಂತಶಾಸ್ತ್ರದಲ್ಲಿ ಭಾಗಿಯಾಗಿದ್ದರು. ದೊಡ್ಡಗೌಡರ ಕುಡಿಯನ್ನ ಹೊತ್ತಿರುವ ರೇವತಿಗೆ ಶುಭಹಾರೈಸಿದರು. ಅಂದ್ಹಾಗೇ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಿಖಿಲ್-ರೇವತಿಗೆ ಗಂಡುಮಗು ಜನಿಸುವುದಾಗಿ ವಿನಯ್ ಗುರೂಜಿ ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಆ ಮಗು ಭವಿಷ್ಯ ಉಜ್ವಲವಾಗಿರುತ್ತದಲ್ಲದೇ ನಿಖಿಲ್‌ಗೆ ಶಾಸಕನಾಗುವ ಅದೃಷ್ಠ ಇರುವುದಾಗಿ ವಿನಯ್ ಗುರೂಜಿ ತಿಳಿಸಿದ್ದಾರೆ.
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್‌ಕುಮಾರಸ್ವಾಮಿಯವರು ಸಿನಿಮಾ ಮಾತ್ರವಲ್ಲದೇ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್, ಗಂಧದಗುಡಿಯ ಅಂಗಳದಲ್ಲಿ ಗೆಲುವಿನ ಗದ್ದುಗೆ ಏರುವುದರ ಜೊತೆಗೆ ರಾಜಕೀಯ ನಾಯಕರಾಗಿ ಅಧಿಕಾರದ ಚುಕ್ಕಾಣಿ ಹಿಡಿಬೇಕು ಎನ್ನುವ ಮಹದಾಸೆವೊತ್ತಿದ್ದಾರೆ. ಪಕ್ಷಸಂಘಟನೆ ಹಾಗೂ ಪ್ರಚಾರದ ಜೊತೆಗೆ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ, ರೈಡರ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಪತ್ನಿಯ ಆಸೆಯಂತೆ ಸೀಮಂತಶಾಸ್ತ್ರ ನೆರವೇರಿಸಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಬಿಡದಿಯ ಫಾರ್ಮ್ಹೌಸ್‌ನಲ್ಲಿ ನಿಖಿಲ್-ರೇವತಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಇವರಿಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಇದೀಗ ರೇವತಿಗೆ ಎಂಟುತಿಂಗಳು. ಇನ್ನೊಂದು ತಿಂಗಳಲ್ಲಿ ಗೌಡ್ರ ಮನೆಗೆ ಪುಟ್ಟಕಂದಮ್ಮನ ಆಗಮನವಾಗಲಿದೆ. ಮರಿಯುವರಾಜನೋ.. ಅಥವಾ ಮರಿ ಯುವರಾಣಿಯೋ ಕಾದುನೋಡ್ಲೆಬೇಕು ಅಲ್ಲವೇ.
ನಟಿ ಶುಭಾ ಪೂಂಜಾ ಅಭಿನಯ ಹಾಗೂ ಶ್ರೀನಿ ಹನುಮಂತರಾಜು ನಿರ್ದೇಶನದ ‘ಅಂಬುಜ’ ಚಿತ್ರ ತಂಡ ಶೂಟಿಂಗ್ ಹೊರಡುವ ತವಕದಲ್ಲಿದೆ. ಎಲ್ಲವೂ ಚಿತ್ರತಂಡ ಅಂದುಕೊಂಡಂತಾದರೆ ಅಕ್ಟೋಬರ್ ಮೊದಲ ವಾರದಿಂದ ಚಿತ್ರೀಕರಣ ಶುರುವಾಗಲಿದೆ. ಆ ನಿಟ್ಟಿನಲ್ಲಿಯೇ ತೆರೆ ಮರೆಯಲ್ಲಿ ಎಲ್ಲಾ ರೀತಿಯ ಸಿದ್ದತೆ ನಡೆಸಿದರುವ ಚಿತ್ರ ತಂಡ ಸೆಪ್ಟೆಂಬರ್ 13 ರಂದು ಸೋಮವಾರ ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡಲು ರೆಡಿ ಆಗಿದೆ. ಅಂದು ಬೆಳಗ್ಗೆ 9 ಗಂಟೆಗೆ ಫಸ್ಟ್ ಲುಕ್ ಲಾಂಚ್ ಆಗಲಿದೆ. ಗ್ಲಾಮರಸ್ ನಟಿ ಶುಭಾ ಪೂಂಜಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಈಗಾಗಲೇ ಹಲವು ಕಾರಣಕ್ಕೆ ಸುದ್ದಿ ಮಾಡಿದೆ. ‘ಕೆಲವು ದಿನಗಳ ನಂತರ’ ಹೆಸರಿನ ಚಿತ್ರದ ಮೂಲಕ ಭರವಸೆ ಮೂಡಿಸಿದ ನಿರ್ದೇಶಕ ಶ್ರೀನಿ ಹನುಮಂತರಾಜು ಮತ್ತೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. ಇದು ಅವರ ಸೆಕೆಂಡ್ ಅಟ್ಮೆಂಟ್.
ಚೊಚ್ಚಲ ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಮೂಲಕ ಕುತೂಹಲ ಮೂಡಿಸಿದ್ದ ನಿರ್ದೇಶನ ಶ್ರೀನಿ, ಈಗ ಪಕ್ಕಾ ಮಹಿಳಾ ಪ್ರಧಾನ ಕಥೆ ಆಯ್ಕೆ ಮಾಡಿಕೊಂಡಿರುವುದು ಮತ್ತೆ ಕುತೂಹಲ ಕೆರಳಿಸಿದೆ. ಈಗಾಗಲೇ ಅವರೇ ಮಾಹಿತಿ ನೀಡಿರುವ ಪ್ರಕಾರ ಇದು ಕೂಡ ಕ್ರೈಮ್ ಥ್ರಿಲ್ಲರ್ ಕಥಾ ಹಂದರದ ಪಕ್ಕಾ ಲವ್ ಸ್ಟೋರಿ ಸಿನಿಮಾ. ಎಲ್ಲವೂ ಅಂದುಕೊಂಡಂತಾಗಿದ್ದರೆ ಇಷ್ಟೊರಳಗಾಗಿಯೇ ಈ ಚಿತ್ರಕ್ಕೆ ಚಿತ್ರೀಕರಣ ಆಗಬೇಕಿತ್ತು. ಆದರೆ ಕೊರೋನಾ ಕಾರಣಕ್ಕೆ ಚಿತ್ರೀಕರಣದ ಪ್ಲಾನ್ ಕೂಡ ಏರು ಪೇರಾಯಿತು. ಅದರ ಪರಿಣಾಮ ಒಂದಷ್ಟು ದಿನ ಸೂಕ್ತಸಮಯಕ್ಕಾಗಿ ಕಾಯಬೇಕಾಯಿತು. ಈ ನಡುವೆ ಚಿತ್ರದ ಕಥಾ ನಾಯಕಿ ಶುಭಾ ಪೂಂಜಾ ಬಿಗ್ ಬಾಸ್ ಗೆ ಹೋದರು. ಇನ್ನೊಂದೆಡೆ ಈ ಚಿತ್ರದ ಇನ್ನೊಬ್ಬ ಪಾತ್ರಧಾರಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡರಿಗೆ ಆಕ್ಸಿಡೆಂಟ್ ಆಯ್ತು. ಈಗ ಎಲ್ಲವೂ ಸರಿ ಹೋಗಿದೆ. ಅದೇ ಹಿನ್ನೆಲೆಯಲ್ಲಿ ಚಿತ್ರ ತಂಡ ಚಿತ್ರೀಕರಣಕ್ಕೆ ಸಿದ್ದತೆ ನಡೆಸಿದೆ.
ಸದ್ಯಕ್ಕೆ ಫಸ್ಟ್ ಲುಕ್ ಲಾಂಚ್ ಸಿದ್ದತೆಯಲ್ಲಿರುವ ನಿರ್ದೇಶಕ ಶ್ರೀನಿ ಸಿನಿ ಲಹರಿ ಜತೆಗೆ ಮಾತನಾಡಿ, ಕೊರೋನಾ ಕಾರಣಕ್ಕೆ ಸಿನಿಮಾ ಕೆಲಸಗಳು ತಡವಾದವು. ಈಗ ಎಲ್ಲವೂ ಸರಿ ಹೋಗಿದೆ. ಸೋಮವಾರ ಫಸ್ಟ್ ಲುಕ್ ಲಾಂಚ್ ಆಗುತ್ತಿದೆ. ಬಹುತೇಕ ಅಕ್ಟೋಬರ್ ಫಸ್ಟ್ ವೀಕ್ ನಿಂದ ಶೂಟಿಂಗ್ ಹೊರಡೋಣ ಅಂತಂದುಕೊಂಡಿದ್ದೇವೆ ಎಂದರು. ಇನ್ನು ಫಸ್ಟ್ ಲುಕ್ ಕುತೂಹಲ ಮೂಡಿಸಿದೆ. ನಿರ್ದೇಶಕರ ಪ್ರಕಾರ ಚಿತ್ರದ ಕಥಾ ನಾಯಕಿ ಶುಭಾ ಪೂಂಜಾ ಅವರ ಪಾತ್ರದ ಇನ್ನೊಂದು ಲುಕ್ ಸೋಮವಾರ ರಿವೀಲ್ ಆಗಲಿದೆಯಂತೆ.
ಫೈಟ್ ಮಾಡೋಕೆ ಬೇಕಾಗಿರೋದು ಗ್ರೌಂಡು..ಬ್ಯಾಗ್ರೌಂಡ್ ಅಲ್ಲ.. ಇದು ಕೇವಲ ಬಿಲ್ಡಪ್‌ಗೋಸ್ಕರ ಹೊಡೆದಂತಹ ಡೈಲಾಗ್ ಅಲ್ಲ. ಆ ಡೈಲಾಗ್‌ಗೆ ಬಿಲ್ಡಪ್ ಸಿಗಲಿ ಅಂತ ಹೊಡೆಸಿದ್ದು ಅಷ್ಟೇ. ಇದೇ ರಿಯಲ್ಲು.. ಇದೇ ಫ್ಯಾಕ್ಟು. ಆ ಫ್ಯಾಕ್ಟ್ನಂತೆಯೇ ಫೀಲ್ಡಿಗಿಳಿದವರು, ಮೈಕೊಡವಿಕೊಂಡು ಅಖಾಡಕ್ಕೆ ಇಳಿದು ತೊಡೆತಟ್ಟಿದವರು, ಕಲೆಗಾಗಿ ಬೆವರೊಟ್ಟಿಗೆ ರಕ್ತಬಸಿದವರು, ಅಪ್ಪನ ಹೆಸರು ಬಳಸಿಕೊಳ್ಳದೇ ಸ್ವಂತ ಪರಿಶ್ರಮದಿಂದ ಹೋರಾಡಿದವರು, ಬಜಾರ್‌ನಲ್ಲಿ ಸ್ವಂತ ಬ್ರಾಂಡ್ ಆದವರು, ಗಂಧದಗುಡಿಯಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿದವರು, ಇಷ್ಟೆಲ್ಲಾ ಮಾಡಿದವರು ಬೇರಾರು ಅಲ್ಲ ತೂಗುದೀಪದ ಕುಡಿ, ಒನ್ ಅಂಡ್ ಓನ್ಲೀ ಡಿಬಾಸ್..!
ಚಾಲೆಂಜಿಂಗ್ ಸ್ಟಾರ್, ಚಕ್ರವರ್ತಿ, ಬಾಕ್ಸ್ ಆಫೀಸ್ ಸುಲ್ತಾನ್, ಯಜಮಾನ, ಒಡೆಯ, ಕುಲಕೋಟಿ ಅಭಿಮಾನಿಗಳ ಆರಾಧ್ಯದೈವ, ದಾಸ, ದಚ್ಚು, ದರ್ಶನ್, ಹೀಗೆ ಒಂದಾ.. ಎರಡಾ..ಹತ್ತಾರು ಹೆಸರುಗಳಿಂದ ಕರೆಸಿಕೊಳ್ಳುವ ನಾಯಕ ಇವರು. ಯಾರಿಗೂ ಸಲಾಂ ಹೊಡೆಯದೇ, ಬಕೆಟ್ ಹಿಡಿಯದೇ, ಸಿಂಟ್ಯಾಕ್ಸ್ ಬಳಸದೇ, ಸ್ವಂತ ಪರಿಶ್ರಮದಿಂದ ಒಂದೊಂದೇ ಮೆಟ್ಟಿಲೇರಿ ಸ್ಟಾರ್ ಆದವರು. ಶ್ರೇಷ್ಟ ಖಳನಾಯಕನ ಮಗನಾದರೂ ಕೂಡ ಅಪ್ಪನ ಹೆಸರೇಳಿ ಅವಕಾಶ ಗಿಟ್ಟಿಸಿಕೊಳ್ಳಲು ಹಿಂಜರಿದವರು. ಬಣ್ಣದ ಲೋಕಕ್ಕೆ ಧುಮಕಲೆಬೇಕು, ಅಪ್ಪನಂತೆ ಕಲಾವಿದನಾಗ್ಬೇಕು ಎನ್ನುವ ಹಂಬಲಕ್ಕೆ, ತುಡಿತಕ್ಕೆ, ಕನಸಿಗೆ, ಮಹದಾಸೆಗೆ ತಾವೇ ನೀರೆರೆದುಕೊಂಡು ಪೋಷಿಸಿದವರು. ಲೈಟ್‌ಮ್ಯಾನ್ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಹೆಜ್ಜೆಹೆಜ್ಜೆಗೂ ಕಷ್ಟ-ನೋವು-ಅವಮಾನ, ಅಪಮಾನ, ನಿಂದನಗೆಳನ್ನು ಎದುರಿಸಿದವರು. ಸವಾಲುಗಳಿಗೆ ಹೆದರದೇ ಸೆಡ್ಡುಹೊಡೆದು ಮೆಟ್ಟಿನಿಂತವರು. ಕೊನೆಗೆ ಚಾಲೆಂಜ್ ಹಾಕಿಯೇ ಲೈಫ್‌ನ ಕಂಡುಕೊಂಡವರು. ಹೀಗಾಗಿಯೇ ಇವತ್ತು ಇವರಿಗೆ ಚಾಲೆಂಜಿಂಗ್ ಸ್ಟಾರ್ ಅಂತ ಕರೆಯುತ್ತಾರೆ. ಕೋಟ್ಯಾಂತರ ಭಕ್ತರು ತಲೆಮೇಲೆ ಹೊತ್ತು ಮೆರೆಸುತ್ತಾರೆ.
ದರ್ಶನ್ ಇವತ್ತು ಏನೇ ಆಗಿದ್ದರೂ ಕೂಡ ಅದಕ್ಕೆ ಕಾರಣ ಅವರೇ. 150 ರೂಪಾಯಿ ಬಾಟದಿಂದ ಹಿಡಿದು ೧೦ ಕೋಟಿ ಸಂಭಾವನೆ ಪಡೆಯುವುದಕ್ಕೆ ಡಿಬಾಸ್ ಪಟ್ಟಿರುವ ಕಷ್ಟ ಡಿಬಾಸ್‌ಗೆ ಮಾತ್ರ ಗೊತ್ತು. ಹೀಗಾಗಿಯೇ, ಸಾಕಷ್ಟು ಭಾರಿ ಅವರೇ ಹೇಳಿಕೊಂಡಿದ್ದಾರೆ. ನಾನು ದರ್ಶನ್‌ಗೆ ಬೆಳೆಸದೇ, ನಾನು ದರ್ಶನ್‌ಗೆ ಅವಕಾಶ ಕೊಡಿಸಿದೇ, ಈ ರೀತಿ ಹೇಳಿಕೊಳ್ಳುವ ಅವಕಾಶವನ್ನ ನಾನು ಯಾರಿಗೂ ಕೊಟ್ಟಿಲ್ಲವೆಂದು. ಅಪ್‌ಕೋರ್ಸ್ ಯಾರಿಗೂ ಸಲಾಂ ಹೊಡೆದು ಚಾನ್ಸ್ ಗಿಟ್ಟಿಸಿಕೊಂಡಿಲ್ಲ, ಸಲಾಂ ಹೊಡೆದು ಆಳೆತ್ತರಕ್ಕೆ ಬೆಳೆದು ನಿಂತಿಲ್ಲ. ಲೈಟ್‌ಮ್ಯಾನ್ ಕೆಲಸ ಮಾಡಿ, ಸಣ್ಣ-ಪುಟ್ಟ ಪಾತ್ರಗಳಿಗೆ ಜೀವತುಂಬಿ, ಸೀರಿಯಲ್ ಮಾಡಿ ತನ್ನ ಕಲೆಯನ್ನ ಪ್ರೂ ಮಾಡಿದವರು. ದಾಸನ ಕಲೆಗೆ ಬೆಲೆಕೊಟ್ಟು ಪಿ.ಎನ್. ಸತ್ಯ, ಎಂ.ಜಿ ರಾಮ್‌ಮೂರ್ತಿ ಅವರು ಬೆಳ್ಳಿತೆರೆಗೆ ಕರೆತಂದರು. ಮೆಜೆಸ್ಟಿಕ್‌ನಲ್ಲೇ ಮೆಜೆಸ್ಟಿಕ್ ತೋರ‍್ಸಿದರು. ಮುಂದಾಗಿದ್ದೆಲ್ಲವೂ ಇವತ್ತಿಗೂ ಇತಿಹಾಸವೇ ಸರೀ.
ಸಾರಥಿ ಚಿತ್ರರಂಗಕ್ಕೆ ಬಂದು ೨೪ ವರ್ಷ ಕಳೆದಿದೆ. ಈ ೨೪ ವರ್ಷದ ಸಿನಿಜರ್ನಿಯಲ್ಲಿ ೫೩ ಸಿನಿಮಾಗೆ ಜೀವಕೊಟ್ಟಿದ್ದಾರೆ. ಮಾಸ್ ಹೀರೋ ಆಗಿ ಬೆಳ್ಳಿತೆರೆಮೇಲೆ ಧಗಧಗಿಸಿದ್ದಾರೆ, ಬಾಕ್ಸ್ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಕೊಟ್ಟು ಅನ್ನದಾತರನ್ನ ಬೆಳೆಸಿದ್ದಾರೆ. ಬಾಕ್ಸ್ಆಫೀಸ್ ಸುಲ್ತಾನ್ ಪಟ್ಟಕ್ಕೇರಿದ್ದಾರೆ. ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕೋಟಿ ಕೋಟಿ ದುಡ್ಡು ಮಾಡಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡೋದಕ್ಕೆ ದರ್ಶನ್ ಗುಂಪುಕಟ್ಟಿಕೊಂಡು ಹೋರಾಡಲಿಲ್ಲ. ಮೇಲ್ನೋಟಕ್ಕೆ ಚೆನ್ನಾಗಿದ್ದು ಒಳಗೊಳಗೆ ಕೇಡು ಬಯಸುವವರಿಗೂ ಕೂಡ ಒಳ್ಳೆಯದನ್ನೇ ಬಯಸಿದರು. ಒಬ್ಬಂಟಿಯಾಗಿ ಒಂಟಿಸಲಗದಂತೆ ಹೋರಾಡಿದರು. ಅದರ ಪ್ರತಿಫಲವೇ ಇವತ್ತು ಗಂಧದಗುಡಿಯಲ್ಲಿ ಸ್ವಂತ ಸಾಮ್ರಾಜ್ಯಕ್ಕೆ ಕಟ್ಟಲಿಕ್ಕೆ ಸಾಧ್ಯವಾಗಿದ್ದು, ತೂಗುದೀಪ ವಂಶ ವಜ್ರದಂತೆ ಹೊಳೆಯುತ್ತಿರುವುದು.
ಕ್ಷೇತ್ರ ಯಾವುದೇ ಇರಲಿ ಏಕಾಂಗಿ ಹೋರಾಟ ತುಂಬಾ ಕಷ್ಟ. ಕೈಗೊಬ್ಬರು.. ಕಾಲಿಗೊಬ್ಬರು ಆಳು.. ಹೆಸರು.. ಕೀರ್ತಿ..ಹಣ..ಆಸ್ತಿ.. ಎಲ್ಲವೂ ಇದ್ದವರು, ಬಲ ತುಂಬಿಕೊಂಡವರು ಒಂಟಿಸಲಗದ ಹೋರಾಟಕ್ಕೆ ಹಿಂಜರಿಯುತ್ತಾರೆ. ಆದರೆ, ದಚ್ಚು ಎದೆಗುಂದಲಿಲ್ಲ, ಮುಂದಿಟ್ಟ ಹೆಜ್ಜೆನಾ ಹಿಂದೆ ತೆಗೆದುಕೊಳ್ಳಲಿಲ್ಲ. ಬದಲಿಗೆ, ವ್ಯಕ್ತಿನಾ ನೋಡಿ ನನ್ನ ಶಕ್ತಿ ಡಿಸೈಡ್ ಆಗಲ್ಲ. ಸೆಡ್ಡು ಹೊಡೆದು ನಿಂತ್ಮೇಲೆ ಸೈಡಿಗೆ ಹೋಗೋ ಮಾತೇಯಿಲ್ಲ. ಹೀಗನ್ನುತ್ತಲೇ ಫೀಲ್ಡಿಗಿಳಿದರು. ಮೂವೀ ಎನ್ನುವ ಮಾಯಲೋಕದಲ್ಲಿ ಮಿನುಗಿದರು. ಸಿನಿಮಾ ಎನ್ನುವ ಸಾಮ್ರಾಜ್ಯದಲ್ಲಿ ಸುಂಟರಗಾಳಿ ಎಬ್ಬಿಸಿ ಒಡೆಯನಾದರು. ಹೀಗಾಗಿ, ಬಣ್ಣ ಹಚ್ಚುವವರು ಯಜಮಾನನ ಬದುಕನ್ನ ಸ್ಪೂರ್ತಿಯಾಗಿಟ್ಟುಕೊಂಡು ಸಿನಿಮಾ ಲೋಕಕ್ಕೆ ಎಂಟ್ರಿಕೊಡ್ತಾರೆ. ಯಜಮಾನ ಸಿನಿಮಾ ನಂತರ ಎರಡನೇ ಭಾರಿ ಕ್ಯಾಪ್ ತೊಟ್ಟಿರುವ ವಿ ಹರಿಕೃಷ್ಣ ಏಕಾಂಗಿಯಾಗಿ ಹೋರಾಡೋದನ್ನ ಕಲಿಯಿರಿ' ಎನ್ನುವ ಟ್ಯಾಗ್‌ಲೈನ್ ಜೊತೆಗೆ ಚಾಲೆಂಜಿಂಗ್ಕ್ರಾಂತಿ’ ಮಾಡಿಸೋದಕ್ಕೆ ಹೊರಟಿದ್ದಾರೆ.
ಕ್ರಾಂತಿ' ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ೫೫ನೇ ಸಿನಿಮಾ. ಸಿನಿಮಾರಂಗದಲ್ಲಿ ದಚ್ಚು ಬೆಳೆದು ನಿಂತ ಪರಿಯೇ ಒಂದು ರೀತಿ ಕ್ರಾಂತಿಯಾಗಿರುವುದರಿಂದ,ಕ್ರಾಂತಿ’ ಸಿನಿಮಾ ಬಹಳಷ್ಟು ನಿರೀಕ್ಷೆಯನ್ನ ಮೂಡಿಸಿದೆ. ಬಹುಭಾಷೆಯಲ್ಲಿ ಈ ಮೂವೀ ನಿರ್ಮಾಣ ಮಾಡೋದಕ್ಕೆ ನಿರ್ಮಾಪಕರಾದ ಶೈಲಜಾ ನಾಗ್ ಹಾಗೂ ಬಿ ಸುರೇಶ್ ನಿರ್ಧರಿಸಿದ್ದಾರೆ. ಕ್ರೇಜಾ.. ಕ್ರೇಜಿಗೆ ಅಪ್ಪನಪ್ಪನಪ್ಪ ಕಣೋ ಇವ್ರು ಅಂತ ಹೇಳಿ `ಯಜಮಾನ’ ಸುದ್ದಿಗೋಷ್ಟಿಯಲ್ಲಿ ಮತ್ತೊಂದು ಚಿತ್ರ ಮಾಡುವುದಾಗಿ ತಿಳಿಸಿದ್ದರು. ಅದರಂತೇ, ಅದ್ದೂರಿ ಚಿತ್ರಕ್ಕೆ ಕೈಹಾಕಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರಾಂತಿ ಮಾಡೋದಕ್ಕೆ ಹೊರಟಿದ್ದಾರೆ. ಅಷ್ಟಕ್ಕೂ, ಸಾರಥಿಯ ಕೈಯಲ್ಲಿ ಯಾವ್ ರೀತಿಯ ಕ್ರಾಂತಿ ಮಾಡಿಸ್ತಾರೆ? ಆದ್ರೆ ಇಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದ್ದು ಕ್ರಾಂತಿ ಹೆಸರಿನ ಚಿತ್ರಕ್ಕೆ ಕೊಟ್ಟ ಟ್ಯಾಗ್ ಲೈನ್. ಲರ್ನ್ ಟು ಫೈಟ್ ಅಲೋನ್. ಅಂದ್ರೆ ಏಕಾಂಗಿಯಾಗಿ ಹೋರಾಡೋದನ್ನು ಕಲಿ ಅಂತ. ಹಾಗಾದ್ರೆ.. ಬೆಳ್ಳಿ ತೆರೆ ಮೇಲೆ ಹೀಗೆ ಹೇಳಲು ಹೊರಟವರು ಯಾರು ? ನಿರ್ದೇಶಕ ಹರಿಕೃಷ್ಣ ತಮ್ಮ ಕಥೆ ಮೂಲಕ ದರ್ಶನ್ ಅವರ ರಿಯಲ್ ಕಥೆ ಹೇಳಿಸ್ತಾರಾ ಅಥವಾ ಹೊಸ ಕಥೆನಾ ಕಟ್ಟಿ ಕೊಡ್ತರಾ ಅನ್ನೋದಿಕ್ಕೆ ಚಿತ್ರ ನೋಡಿದಾಗಲೇ ಗೊತ್ತಗಲಿದೆ. ಅಲ್ಲಿವರೆಗೂ ನೀವು ಒಬ್ಬಂಟಿಯಾಗಿ ಫೈಟ್ ಮಾಡಿ.
ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಅವರಿಗೆ ನಿರ್ದೇಶಕ ಹಾಗೂ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಶನಿಯಂತೆ ಹೆಗಲೇರುವುದು ಗ್ಯಾರಂಟಿ ಆಗಿದೆ. ಅತ್ತ ಡ್ರಗ್ಸ್ ಕೇಸ್ ನಲ್ಲಿರುವವರೆಲ್ಲರೂ ಜೈಲು ಕಂಬಿ ಎಣಿಸಬೇಕೆಂದು ಸಂಬರಗಿ ಗುಡುಗುತ್ತಿದ್ದರೆ, ಇತ್ತ ಸಂಬರಗಿ ಅವರನ್ನೇ ಚಂದ್ರಚೂಡ್ ಕಾನೂನು ತಂತ್ರ ಹೆಣೆಯುತ್ತಿದ್ದಾರೆ. ಗಣೇಶ್ ಹಬ್ಬದ ದಿನವಾದ ಶುಕ್ರವಾರವಷ್ಟೇ ಸೋಷಲ್ ಮೀಡಿಯಾದಲ್ಲಿ ಸಂಬರಗಿ ಅವರ ಮುಖವಾಡ ಬಯಲು ಮಾಡಿದ್ದ ಚಂದ್ರಚೂಡ್, ಈಗ ಅವರ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ದತೆ ನಡೆಸಿದ್ದಾರೆ. ಶುಕ್ರವಾರವೇ ಸಂಜೆ ಈ ಸಂಬಂಧ ವಕೀಲರೂ ಹಾಗೂ ಆವರ ಆತ್ಮೀಯರಾದ ಸೂರ್ಯ ಮುಕುಂದರಾಜ್ ಮತ್ತು ಸಂಪತ್ ಕುಮಾರ್, ಜತೆಗೆ ಚರ್ಚೆ ನಡೆಸಿದ್ದಾರೆ. ತಮ್ಮ ನಿವಾಸದಲ್ಲಿಯೇ ಈ ಕುರಿತು ಮಾತುಕತೆ ನಡೆಸಿರುವ ಫೋಟೋಗಳನ್ನು ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಚಂದ್ರಚೂಡ್, ಕಾನೂನು ಸಮರಕ್ಕೆ ಸಿದ್ದ ಎಂದು ಹೇಳಿದ್ದಾರೆ. ಇಷ್ಟಕ್ಕೂ, ಸಂಬರಗಿ ವಿರುದ್ಧ ಕಾನೂನು ಹೋರಾಟಕ್ಕೆ ಚಂದ್ರಚೂಡ್ ನೀಡುವ ಪ್ರಮುಖ ಕಾರಣಗಳೇನು ? ಸಂಬರಗಿ ಮಾಡಿರುವ ಅಪರಾಧಗಳೇನು ? ಅದೆಲ್ಲದ್ದರ ಬಗ್ಗೆ ಚಂದ್ರಚೂಡ್ ಅಧಿಕೃತವಾಗಿಯೇ ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೀಷ್ಟು…
ಸಾಮಾಜಿಕ ಕಾರ್ಯಕರ್ತ (ನಿಜವಾದ ಹೋರಾಟಗಾರರಲ್ಲಿ ಕ್ಷಮೆ ಕೇಳಿ )ನನ್ನ ಮೇಲೆ ವಿಪರೀತ ಕೇಸುಗಳನ್ನು ಹಾಕಲಾಗಿದೆ ಎಂದು ಪೋಸು ಕೊಡುವಾಗಲೇ -ಸಣ್ಣದೊಂದು ಮಾಹಿತಿ ತೆಗೆದರೆ ಈತ ಒಬ್ಬ ನೆಲಹಿಡುಕ ಅವುಗಳ ಹಳವಂಡದ ಕೇಸುಗಳವು. ಸೋನಿಯಾ ಗಾಂಧಿ ಮತ್ತು ಕುಸುಮಾ ಹನುಮಂತರಾಯರಪ್ಪ ಅವರ ವಿರುದ್ಧ ನೀಡಿದ ಸಂವಿಧಾನ ವಿರೋಧಿ ಹೇಳಿಕೆಗಳ ಕಾರಣಕ್ಕೆ ಕಾಂಗ್ರೆಸ್ ನ ಲೀಗಲ್ ಸೆಲ್ ಕೇಸು ಜಡಿದಿದೆ. ನಂತರ ದೇವನಾಥ್ ಎಂಬುವವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.ಉಳಿದವುಗಳಲ್ಲೇ ಭೂತಾಯಿಯ ದಲ್ಲಾಳಿ (ಅವನದೇ ಹೇಳಿಕೆ)ತನದ ಕಾರಣದ ಕೇಸುಗಳು. -ಇವನ ಬಳಿ ಇರುವ ರೇಂಜ್ ರೇವರ್ ಕಾರು ಸಿಸಿಬಿ ಕೇಸು, ಬಿಡಿಎ ರವಿ ಎಂಬಾತ ,ದೇವನಾಥ್ ಎಂಬಾತನ ಗೆಳೆತನ -ಇವುಗಳ ಸಣ್ಣ ತನಿಖೆ ಮಾಡಿದಾಗ ತಿಳಿದದ್ದು ತನ್ನ ಹೆಸರಿನ ಲೋನ್ ಪಡೆದು ಕಾರ್ ಕೊಡಿಸಿ ಅದಕ್ಕೂ ಕಮಿಷನ್ ಪಡೆದು ರಾತ್ರೋರಾತ್ರಿ ತನ್ನದೇ ಕಾರೆಂದು ನಂಬಿದ ಸ್ನೇಹಿತನಿಗೇ ವಿಶ್ವಾಸ ದ್ರೋಹ ಮಾಡಿದ ಆಸಾಮಿ ಕಂಡವರ ಬಗ್ಗೆ ಸುಳ್ಳು ಆಸ್ತಿಗಳ ಲೆಕ್ಕ ಕೇಳುತ್ತಾನೆ.
ರಾಗಿಣಿ ಸಂಜನಾ ,ಅನುಶ್ರೀ ಜಮೀರ್ ಮಹಮದ್ ಮುಂತಾದವರ ಬಗ್ಗೆ ಈತ ಈವರೆಗೂ ಒಂದು ಔನ್ಸಿನ ಮಾಹಿತಿ ಕೊಟ್ಟಿಲ್ಲ. ಪೋಲೀಸರ ಕಾರ್ಯಚರಣೆಯ predictions ಗಳನ್ನ ಹೇಳುವ ಜ್ಯೋತಿಷಿ ಇವನು.ಸಿಸಿಬಿ ಕಛೇರಿಯಿಂದ ಬುಲಾವ್ ಹೋದಾಗ ಇವನು ಹಿಡಿದಿದ್ದ ಫೈಲನ್ನೇ ಝೂಮ್ ಮಾಡಿ ಮಾಡಿ ತೋರಿಸಿದವು ಕ್ಯಾಮರಾಗಳು. -ಇವನ ಮೂಲ ಊರು ಮರಾಠರ ಪ್ರಾಂತ್ಯದ್ದು.ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಇವನು ಕನ್ನಡ ವಿರೋಧಿ ಹಿಂದಿ ಹೇರಿಕೆಯ ಹೇಳಿಕೆಗಳನ್ನ ನಾವೆಲ್ಲ ನೋಡಿಯೂ ಕೇಳಿಯೂ ಕನ್ನಡಿಗ ಅಂತ ಒಪ್ಪಿಕೊಳ್ಳುವವರ ಎದೆಭಾಷೆಯಬಗ್ಗೆ ನನಗಂತೂ ಅನುಮಾನ. ಹಾಳುಬಿದ್ದು ಹೋಗಲಿ ರಾಜಕೀಯ ಕಾರಣಕ್ಕೆ ತಾಯಿಭಾಷೆಯ ಬಲಿಕೊಡುವ ಇಂತಹ ನೆಲಹಿಡುಕರೂ ಇದ್ದಾರೆಂದರೆ ನೆಟ್ಟಗೆ ಕನ್ನಡದ ಸ್ವರ ವ್ಯಂಜನಗಳ ಪರಿಚಯವಿಲ್ಲ.
ಇನ್ನು ಇವನಿಗೆ ಜೀವದ ಗೆಳೆಯರಿರುವುದು ನನಗೆ ಅರಿವಿಲ್ಲ .ಎಲ್ಲರ ಮಾತೂ ರೆಕಾರ್ಡ್ ಎಲ್ಲರ ವೀಡಿಯೋ ರೆಕಾರ್ಡೂ…. ಬಿಗ್ ಬಾಸ್ ನ ಎರಡನೇ ಇನ್ನಿಂಗ್ಸ್ ನ ಕ್ವಾರೈಂಟೈನ್ ಸಂದರ್ಭದಲಿ ಸ್ಪರ್ಧಿ ಅರವಿಂದ ಸೇರಿದಂತೆ ಹಲವರಿಗೆ ಮಧ್ಯಪಾನದ ಪಾರ್ಟಿಕೊಟ್ಟು ( ಚಾನಲ್ ನಿಯಮಾವಳಿ ವಿರೋಧಿಸಿ)ವಿಡಿಯೋ ಮಾಡಿದ .ಸಧ್ಯ ನಾನು ಇಂತಹ ಚಾಣಪತ್ರಿಗಳನ್ನ ತುಂಬಾ ನೋಡಿದವನು ಕ್ಷಣಮಾತ್ರದಲ್ಲಿ ಕುತಂತ್ರ ಕಂಡುಹಿಡಿದು ಹೆಣ್ಣುಮಕ್ಕಳು ಅವನ ರೂಮಿಂದ ಹೋಗುವಂತೆ ಮಾಡಿದೆ.ಆದರೂ ಅರವಿಂದರ ವೀಡಿಯೋ ಮಾಡಿ ಅದನ್ನು ಯಾವಾಗ ಬಿಡುಗಡೆ ಮಾಡಬೇಕೆಂದು ಚಂದನ್ ಎಂಬ ಟ್ರೋಲಿಗನಿಗೆ ಕೊಟ್ಟುಬಂದ
ಜೀವನದಲ್ಲಿ ತಪ್ಪೇ ಮಾಡಾದವರು ಇಲ್ಲವೆಂದಲ್ಲ.ಈಗ ನೋಡಿ ಶುಗರ್ ಡ್ಯಾಡಿ ಪುಸ್ತಕ ಅಂತಾನೆ ಜಮೀರ್ ದಾಯಿತೀಗ ನವೆಂಬರ್ ಒಂದರ ಮಹೂರ್ತಕ್ಕೆ ಆಡಿಯೋ ಬಿಡ್ತೀನಿ ಅಂತಾನೆ.ಮಾಧ್ಯಮಗಳು ಜೊಲ್ಲಿನ ನಾಲಿಗೆಯೊಡ್ಡುತ್ತವೆ.ಹೀಗೆ ತಿಂಗಳಾನುಗಟ್ಟಲೆ ತಾರೀಖು ನೀಡಿ ದಾಖಲೆ ಕೊಡ್ತೀನಿ ಎನ್ನುವ ಕಳ್ಳಾಟದಿಂದ ಆಗುವ ಅನಾಹುತಕ್ಕೆ ಮಾಧ್ಯಮಗಳೂ ಹೊಣೆ.ಇವನ ಬ್ಲಾಕ್ ಮೇಲ್ ತಂತ್ರದಲ್ಲಿ ಈಗ ಅವರೂ ಪಾಲುದಾರರು.
ಇವನ ಸಿಮ್ ಕಾರ್ಡ್ ಮೊಬೈಲ್ ಜಪ್ತಿ ಮಾಡಿ ಕಾರ್ ಡೀಲರ್ ಹೆಸರಿನ ನಂಬರ್ ಗಳ ತಲೆಹಿಡುಕರ ಪಟ್ಟಿ ತೆಗೆದರೆ ಇವನ ಪತ್ನಿ ಸಂಗೀತ ಸಂಬರ್ಗಿ ಪಾಪ ಅದು ಹೇಗೆ ಮತ್ತೆ ಇವನ ಮುಖ ನೋಡುತ್ತಾರೋ? -ಖ್ಯಾತ ಗಾಯಕ ರಘುಧೀಕ್ಷಿತ್ ಬಗ್ಗೆ ಡ್ರಗ್ಸ್ ಆರೋಪ ಮಾಡಿದ.ರಘು ವ್ಯಯಕ್ತಿಕ ಜೀವನದ ನೋವು ನಲಿವುಗಳೇನೇ ಇರಲಿ ಇವನ ಆರೋಪವನ್ನ ಧೂಳಂತೆ ಕೊಡವಿಕೊಂಡು ಎದ್ದರು.ಈ ಗಿಂಡಿಮಾಣಿ ರಘು ಅವರನ್ನ ಇನ್ನೋವೇಟಿವ್ ಸಿಟಿಯಲ್ಲಿ ಮಾತಾದರೂ ಆಡಿಸಲು ತುಂಬಾ ಕರುಳು ಸವೆಸಿದರೂ ಪ್ರಯೋಜನವಾಗಲಿಲ್ಲ.ಅಷ್ಟಕ್ಕೂ ಡ್ರಗ್ ಕುರಿತಂತೆ ಪಾಲುದಾರರಿಗೆ ಶಿಕ್ಷೆಯಾಗಲಿ .ಜೊತೆಗೆ ಇಂತಹ ನಕಲಿಗಳ ಮುಖವಾಡ ಬಯಲಾಗಲಿ. ಈ ಕುರಿತಂತೆ ಯಾವ ವೇದಿಕೆಯಲ್ಲಾದರೂ ಚರ್ಚೆಗೆ ಸಿದ್ಧ….. ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ವಿರುದ್ಧ ಚಕ್ರವರ್ತಿ ಚಂದ್ರಚೂಡ್ ಮಾಡಿರುವ ಆರೋಪಗಳಿವು. ಸದ್ಯಕ್ಕೆ ಅವರು ಇವೆಲ್ಲವನ್ನು ಇಟ್ಟುಕೊಂಡೇ ಕಾನೂನು ಸಮರ ನಡೆಸುವುದಾಗಿ ಹೇಳುತ್ತಿದ್ದಾರೆ. ಮುಂದೆನದು ಕಾನೂನು ಹೋರಾಟ. ಅದು ಎಲ್ಲಿಗೆ ಹೋಗಿ ನಿಲ್ಲತ್ತೋ ಕಾದು ನೋಡಬೇಕಿದೆ.
ಚೇತನ್ ಒಬ್ಬ ನಟ. ಹಾಗೆಯೇ ಒಬ್ಬ ಸಾಮಾಜಿಕ ಹೋರಾಟಗಾರ. ಅವರಿಗಿರುವ ಅವೆರೆಡು ಬ್ರಾಂಡ್ ಗಳ ಬಗ್ಗೆ ಅನುಮಾನವೇ ಇಲ್ಲ. ಅದರಾಚೆ ಅವರು ಯಾರು ? ಅವರ ಹಿಂದಿನ ಶಕ್ತಿಯಾವುದು ? ಹೋಗ್ಲಿ ಅವರು ಒಪ್ಪಿ-ಅಪ್ಪಿಕೊಂಡಿರುವ ಸಿದ್ದಾಂತವಾದ್ರು ಯಾವ್ದು? ಈ ಪ್ರಶ್ನೆಗಳಿಗೆ ಈಗಲೂ ಉತ್ತರ ಇಲ್ಲ. ಹಾಗೆಯೇ ಚೇತನ್ ಅವರದ್ದು ಎಡಪಂಥವೂ ಅಲ್ಲ ಬಲಪಂಥವೂ ಅಲ್ಲ.
ನಟ ಚೇತನ್ ಅಹಿಂಸ ಹೀಗೇಕಾದ್ರೂ ? ಹೀಗಂತ ಕೇಳ್ತೀರೋದು ನಾವಲ್ಲ, ಬದಲಿಗೆ ಕನ್ನಡದ ಸಿನಿಮಾ ಪ್ರೇಕ್ಷಕರು ಹಾಗೂ ಅವರನ್ನು ಹತ್ತಿರದಿಂದ ಬಲ್ಲವರು. ಯಾಕಂದ್ರೆ ನಟ ಚೇತನ್ ದಿನೇ ದಿನೇ ತಾವೊಬ್ಬ ಕಾಂಟ್ರೋವರ್ಷಿ ಹೀರೋ ಎನ್ನುವುದನ್ನು ಪ್ರೂ ಮಾಡುತ್ತಲೇ ಹೊರಟಿದ್ದಾರೆ. ಕೊರೋನಾ ನಂತರದ ಈ ದಿನಗಳಲ್ಲಿ ಉಪೇಂದ್ರ ಆಯ್ತು, ಕುಮಾರ ಸ್ವಾಮಿ ಆಯ್ತು, ಕೊನೆಗೆ ಸಿದ್ದರಾಮಯ್ಯ ಅವರನ್ನು ಬಿಡದೆ ಅವರನ್ನು ಟೀಕಿಸಿದ್ದು ಮುಗೀತು. ಅಲ್ಲಿಂದೀಗ ಕಾಂಗ್ರೆಸ್‌ಗೂ ಆರ್‌ಎಸ್‌ಎಸ್ ಸಂಘಟನೆಯ ನಂಟು ಅಂಟು ಹಾಕಿ, ಬಾಯಿಗೆ ಬಂದಂತೆ ಟೀಕಿಸಿದ್ದಾರೆ. ಸೋಷಲ್ ಮೀಡಿಯಾದಲ್ಲಿ ಅವರು ಹಾಕಿರುವ ಸ್ಟೇಟಸ್ ದೊಡ್ಡ ವಿವಾದಕ್ಕೂ ನಾಂದಿ ಹಾಡಿದೆ. ಉಪೇಂದ್ರ ಬಿಟ್ರು, ಕುಮಾರ ಸ್ವಾಮಿ ಬಿಟ್ರು, ಹೋಗ್ಲಿ ಬಿಡಿ ಆತ ನಮ್ಮಡುಗ ಅಂತ ಸಿದ್ದರಾಮಯ್ಯ ಕೂಡ ಬಿಟ್ರು, ಹಾಗಂತ ಇಡೀ ಪಾರ್ಟಿಗೇ ಡ್ಯಾಮೇಜ್ ಮಾಡಲು ಹೊರಟ್ರೆ, ಕಾಂಗ್ರೆಸ್‌ನವ್ರು ಬಿಡ್ತಾರಾ?
ಸದ್ಯಕ್ಕೆ ಗೊತ್ತಾಗಿರುವ ಮಾಹಿತಿ ಪ್ರಕಾರ ನಟ ಚೇತನ್ ಅವರ ವಿರುದ್ಧ ಸೋಷಲ್ ಮೀಡಿಯಾದಲ್ಲಿಯೇ ತಕ್ಕ ಉತ್ತರ ನೀಡಲು ಕಾಂಗ್ರೆಸ್ ಮುಂದಾಗಿದೆ. ಮುಂದೆಯೂ ಹೀಗೆಯೇ ಅರ್ಥಹೀನ ಟೀಕೆ ಮಾಡಿದರೆ ಸರಿಯಾದ ಉತ್ತರ ನೀಡಲು ಕಾಂಗ್ರೆಸ್ ಮುದಾಗಿದೆಯಂತೆ. ಇರಲಿ ಬಿಡಿ, ಅದನ್ನ ಅವರವರು ನೋಡಿ ಕೊಳ್ತಾರೆ. ಪ್ರಶ್ನೆ ಇರೋದು ನಟ ಚೇತನ್ ಹೀಗೇಕೆ ಅಂತ. ಹಾಗಂತ ಸಿನಿಮಾ ಪ್ರೇಕ್ಷಕರಿಗೆ ಈ ಪ್ರಶ್ನೆ ಕಾಡ್ತಿರೋದು ಇದೇ ಮೊದಲು ಅಲ್ಲ. ಅವರು ನಟರಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಆ ದಿನಗಳಿಂದಲೂ ನಟ ಚೇತನ್ ಕೊಂಚ ವಿಚಿತ್ರವಾಗಿಯೇ ಕಾಣಿಸಿಕೊಂಡಿದ್ದು ನಿಮಗೆಲ್ಲ ಗೊತ್ತೇ ಇದೆ. ಅದು ಅವರ ಖಾಸಗಿ ಬದುಕಿನ ಜತೆಗೆ ಸಿನಿ ಕೆರಿಯರ್ ದೃಷ್ಟಿಯಿಂದಲೂ ಹೌದು. ಯುವ ನಿರ್ದೇಶಕ ಕೆ.ಎಂ. ಚೈತನ್ಯ ನಿರ್ದೇಶನ ʼ ಆ ದಿನಗಳುʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದವರು ನಟ ಚೇತನ್. ಇದು ಅವರ ಚೊಚ್ಚಲ ಸಿನಿಮಾ. ಅಮೆರಿಕದಲ್ಲಿದ್ದ ಹುಡುಗ ದಿಢೀರ್ ಕನ್ನಡಕ್ಕೆ ಬಂದು ದೊಡ್ಡ ಸಂಚಲನ ಸೃಷ್ಟಿಸಿದರು.
ಮಾಜಿ ಡಾನ್ ಅಗ್ನಿ ಶ್ರೀಧರ್ ಅವರದ್ದೇ ಬದುಕಿನ ಈ ಕಥಾ ಚಿತ್ರದಲ್ಲಿ ನಟ ಚೇತನ್ ಭರವಸೆಯ ತಾರೆಯಾಗಿ ಕಾಣಿಸಿಕೊಂಡರು. ಇನ್ನೇನು ಬಹುಬೇಡಿಕೆಯ ನಟನಾಗಿ ಅವರು ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ನಟ ಎನಿಸಿಕೊಳ್ತಾರೆ ಎನ್ನುವ ಸಿನಿಮಾ ಪ್ರೇಕ್ಷಕರ ನಿರೀಕ್ಷೆಯ ನಡುವೆಯೇ ಚೇತನ್ ಕಾಣೆಯಾದರು. ವಾಪಾಸ್ ಅಮೆರಿಕಕ್ಕೆ ಹೋದರು. ಒಂದಷ್ಟು ದಿನಗಳ ನಂತರ ಮತ್ತೆ ಅಲ್ಲಿಂದ ಬಂದವರುʼ ಮೈನಾʼ ದಂತಹ ಬ್ಲಾಕ್ ಬಸ್ಟರ್ ಚಿತ್ರದಲ್ಲಿ ಅಭಿನಯಿಸಿದರು. ಕನ್ನಡ ಚಿತ್ರರಂಗದಲ್ಲಿ ಮತ್ತೆ ಹೊಸ ಭರವಸೆ ಮೂಡಿಸಿದರು. ಆದ್ರೇನು, ಮುಂದೆ ಮತ್ತೆ ಚೇತನ್ ನಟನೆಯಾಚೆ ಹೋರಾಟ, ಸಾಮಾಜಿಕ ಕೆಲಸ ಅಂತೆಲ್ಲ ಬ್ಯುಸಿಯಾದರು. ಅವರ ಈ ನಿಲುವು ಪ್ರಶ್ನಾತೀತವೇ. ಯಾಕಂದ್ರೆ ಪ್ರತಿಯೊಬ್ಬರ ಬದುಕಿನ ಆಯ್ಕೆ, ಇನ್ನಾರೋ ಬಯಸಿದಂತೆಯೇ ಇರಬೇಕಿಲ್ಲ. ತಾನೊಬ್ಬ ನಟನಾಗುವುದಕ್ಕಿಂತ ಸಾಮಾಜಿಕ ಹೋರಾಟಗಾರನಾಬೇಕಿದೆ ಅಂತ ಚೇತನ್ ಅದಕ್ಕೆ ಸ್ಪಷ್ಟನೆ ಕೊಟ್ಟರು. ಕನ್ನಡ ಚಿತ್ರರಂಗದ ಮಟ್ಟಿಗೆ ಚೇತನ್ ಅವರನ್ನು ಇದು ಭಿನ್ನವಾದ ಸ್ಥಾನದಲ್ಲಿ ನಿಲ್ಲಿಸಿತು. ಯಾಕಂದ್ರೆ ನಟರಂದ್ರೆ, ಸಿನಿಮಾ ಮಾಡಬೇಕು, ಸ್ಟಾರ್ ಆಗಿ ಮೆರೀಬೇಕು, ಆ ಮೂಲಕ ಐಷಾರಾಮಿಯ ಕಂಪೋರ್ಟ್ ಜೋನ್ ನಲ್ಲಿ ಕುಳಿತಿರಬೇಕು ಅನ್ನೋ ಸಿನಿಮಾದ ರಂಗದ ಸಿದ್ಧ ಸೂತ್ರಗಳನ್ನು ಬ್ರೇಕ್ ಮಾಡಿ, ಅವರು ಜನರ ಪರವಾಗಿ ಬೀದಿಗಿಳಿಬೇಕು ಅಂದಾಗ ವಾಹ್ಹ್…. ಇಂತಹ ನಟ ಕನ್ನಡಕ್ಕೆ ಬೇಕಿತ್ತು ಅಂತ ಮೆಚ್ಚಿಕೊಂಡು ಮಾತನಾಡಿದವರು ಕಮ್ಮಿ ಇರಲಿಲ್ಲ.
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ, ಸಿನಿಮಾ ರಂಗದಲ್ಲಿನ ಮೀಟೂ ಪ್ರಕರಣ, ಸರ್ಕಾರದ ಬೆಲೆ ಏರಿಕೆ ಧೋರಣೆಗಳು.. ಹೀಗೆ ಒಂದಲ್ಲ ನಟ ಚೇತನ್ ಪ್ರತಿಯೊಂದಕ್ಕೂ ಇಲ್ಲಿ ಒಬ್ಬ ಸಾಮಾಜಿಕ ಹೋರಾಟಗಾರನಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇಲ್ಲೆಲ್ಲವೂ ಅನಗತ್ಯ ವಿವಾದವೇ ಆಗಿದೆ.
ಆ ಹೊತ್ತಿಗೆ ಅವರೊಬ್ಬ ಸಾಮಾಜಿಕ ಹೋರಾಟಗಾರನಾಗಿ ಮಾತ್ರ ಗುರುತಿಸಿಕೊಂಡಿದ್ದರು. ಅಲ್ಲಿಂದಾಚೆ ಯಾವುದೇ ಈಸಂ ಗೂ ಸಿಲುಕಿರಲಿಲ್ಲ. ಹಾಗಾಗಿ ಕನ್ನಡದ ಅದೆಷ್ಟೋ ಸಿನಿಮಾ ಪ್ರೇಕ್ಷಕರು ನಟ ಚೇತನ್ ಅವರನ್ನು ಒಬ್ಬ ಡಿಫೆರೆಂಟ್ ಆಕ್ಟರ್ ಅಂತಲೇ ಮಾತನಾಡಿದ್ದರು. ಮುಂದೇನಾಯ್ತೋ ಗೊತ್ತಿಲ್ಲ, ಚೇತನ್ ನಿಲುವು, ನಡೆ ಎಲ್ಲವೂ ಬದಲಾದವು. ಯಾರ ಅಂಕೆಗೂ ಸಿಲುಕದೆ ಹುಚ್ಚು ಕುದುರೆಯಂತೆ ಓಡತೊಡಗಿದರು ಚೇತನ್. ರಾಜಕೀಯ, ಸಾಮಾಜಿಕ, ಆರ್ಥಿಕ ರಂಗಗಳು ಸೇರಿದಂತೆ ಪ್ರಚಲಿತ ವಿದ್ಯಮಾನಗಳಿಗೆಲ್ಲ ಪ್ರತಿಕ್ರಿಯೆ ನೀಡತೊಡಗಿದರು. ವಿವಾದವೋ, ವಿಚಿತ್ರವೋ ದೊಡ್ಡ ಮಟ್ಟದ ಪ್ರಚಾರದಲ್ಲಿ ಚೇತನ್ ಧಗ ಧಗಸಿತೊಡಗಿದರು. ಮೊದಲೆಲ್ಲ ಅವರನ್ನು ಮೆಚ್ಚಿಕೊಂಡು ಮಾತನಾಡಿದವರೆಲ್ಲ ಚೇತನ್ ವಿರುದ್ಧ ಗಡುಗತೊಡಗಿದರು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ, ಸಿನಿಮಾ ರಂಗದಲ್ಲಿನ ಮೀಟೂ ಪ್ರಕರಣ, ಸರ್ಕಾರದ ಬೆಲೆ ಏರಿಕೆ ಧೋರಣೆಗಳು.. ಹೀಗೆ ಒಂದಲ್ಲ ನಟ ಚೇತನ್ ಪ್ರತಿಯೊಂದಕ್ಕೂ ಇಲ್ಲಿ ಒಬ್ಬ ಸಾಮಾಜಿಕ ಹೋರಾಟಗಾರನಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇಲ್ಲೆಲ್ಲವೂ ಅನಗತ್ಯ ವಿವಾದವೇ ಆಗಿದೆ. ಚೇತನ್ ಪ್ರಸ್ತಾಪಿಸಿದ ವಿಷಯ ಎಷ್ಟು ಗಂಭೀರವಾದದ್ದು ಎನ್ನುವುದಕ್ಕಿಂತ ಚೇತನ್ ಅವರನ್ನೇ ಟಾರ್ಗೆಟ್ ಮಾಡಿ, ಟೀಕಿಸಲಾಯಿತು. ಮೀಟೂ ಪ್ರಕರಣದಲ್ಲಂತೂ ಚೇತನ್ ಕೊಲೆ ಬೆದರಿಕೆ ಎದುರಿಸಿದರು. ಚಿತ್ರರಂಗ ಕೂಡ ಅವರನ್ನು ದೂರವೇ ನಿಲ್ಲಿಸಿತು. ಯಾಕಂದ್ರೆ, ಇಲ್ಲಿ ಚೇತನ್ ಅಂದ್ರೆ ಒಬ್ಬ ನಟ ಎಂದಷ್ಟೇ ಕಂಡಿತೇ ಹೊರತು, ಅದರಾಚೆ ಅವರಾರು ಅನ್ನೋದೇ ಇಲ್ಲಿ ದೊಡ್ಡ ಪ್ರಶ್ನೆ ಆಗಿ ಉಳಿಯಿತು.
ಹೌದು, ಅದು ನಿಜವೂ ಕೂಡ, ಚೇತನ್ ಅಂದ್ರೆ ಯಾರು ಎನ್ನುವುದು ಈಗಲೂ ಎಲ್ಲರಿಗೂ ಇರುವ ಯಕ್ಷ ಪ್ರಶ್ನೆ. ಚೇತನ್ ಒಬ್ಬ ನಟ ಹಾಗೆಯೇ ಒಬ್ಬ ಸಾಮಾಜಿಕ ಹೋರಾಟಗಾರ. ಅವರಿಗಿರುವ ಅವೆರೆಡು ಬ್ರಾಂಡ್ ಗಳ ಬಗ್ಗೆ ಅನುಮಾನವೇ ಇಲ್ಲ. ಅದರಾಚೆ ಅವರು ಯಾರು ? ಅವರ ಹಿಂದಿನ ಶಕ್ತಿಯಾವುದು ? ಹೋಗ್ಲಿ ಅವರು ಒಪ್ಪಿ-ಅಪ್ಪಿಕೊಂಡಿರುವ ಸಿದ್ದಾಂತವಾದ್ರು ಯಾವ್ದು? ಈ ಪ್ರಶ್ನೆಗಳಿಗೆ ಈಗಲೂ ಉತ್ತರ ಇಲ್ಲ. ಚೇತನ್ ಅವರದ್ದು ಎಡಪಂಥಿಯವೋ, ಬಲಪಂಥೀಯವೋ ಅದರಲ್ಲೂ ಗೊಂದಲ ಇದೆ. ಹಾಗಂತ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಅವರು ಒಲವು ಹೊಂದಿರುವ ಪಕ್ಷ ಯಾವುದು ಅಂತಲೂ ಹೇಳೋ ಹಾಗಿಲ್ಲ. ಒಂದೊಮ್ಮೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರ ಸ್ವಾಮಿ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದ ಚೇತನ್, ಈಗ ಈಗ ಕಾಂಗ್ರೆಸ್ -ಬಿಜೆಪಿ ಎರಡು ಆರ್ ಎಸ್ ಎಸ್ ನ ಕೊಂಬೆಗಳೇ ಅಂತ ಟೀಕಿಸಿ ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ಅಲ್ಲಿಂದಾಚೆ, ಚೇತನ್ ಅವರು ಒಬ್ಬ ಕಮ್ಯುನಿಸ್ಟಾ? ಅದು ಅಲ್ಲ. ಕಮ್ಯುನಿಸ್ಟರ ಮೇಲೂ ನಂಬಿಕೆ ಇಲ್ಲ. ಉಳಿದಂತೆ ಉಪೇಂದ್ರ ಅವರ ಪ್ರಜಾಕೀಯವನ್ನು ಅವರು ಒಪ್ಪಿಕೊಂಡಿಲ್ಲ. ಉಪೇಂದ್ರ ಅವರು ಕೂಡ ಚೇತನ್ ಅವರ ಟೀಕೆಯ ಬಾಣಕ್ಕೆ ಸಿಲುಕಿ ಒದ್ದಾಡಿದವರೇ. ಹೀಗಾಗಿ ಒಂದ್ರೀತಿ ಚೇತನ್ ಅವರದ್ದು ಏಕಾಂಗಿ, ಎಡಬಿಡಂಗಿ ನಿಲುವು. ಮೇಲ್ನೋಟಕ್ಕೆ ಚೇತನ್ , ಬಿಜೆಪಿ ಸೇರಿದಂತೆ ಬಲಪಂಥೀಯ ಶಕ್ತಿಗಳ ವಿರೋಧಿ ಅಂತ ಕಂಡರೂ, ಈಗ ತಾವೊಬ್ಬ ಕಾಂಗ್ರೆಸ್ ವಿರೋಧಿ ಅಂತಲೂ ತೋರಿಸಿಕೊಂಡಿದ್ದಾರೆ. ಈ ನಿಲುವೇ ಅವರನ್ನು ಒಬ್ಬ ಎಡಬಿಡಂಗಿ ವ್ಯಕ್ತಿಯನ್ನಾಗಿ ರೂಪಿಸುತ್ತಿದೆ. ಯಾರನ್ನು, ಹೇಗೆ, ಯಾವ ರೂಪದಲ್ಲಿ ಟೀಕಿಸಬೇಕೆನ್ನುವ ಅರಿವಿಲ್ಲದೆ ಸಿಕ್ಕ ಸಿಕ್ಕವರನ್ನು ಟೀಕಿಸುತ್ತಿದ್ದಾರೆ. ಆ ಮೂಲಕ ಚೇತನ್ ಒಬ್ಬ ಸಾಮಾಜಿಕ ಹೋರಾಟಗಾರ ಎನ್ನುವುದರ ಬದಲಿಗೆ, ಕಾಂಟ್ರೋವರ್ಷಿ ಹೀರೋ ಅಂತ ಗುರುತಿಸುವಂತೆ ಮಾಡಿದೆ. ಚೇತನ್ ಅವರಿಗೆ ಈ ಅರಿವು ಈಗಲಾದರೂ ಬಂದರೆ ಒಳ್ಳಿತು.
ನಾಡಿನಾದ್ಯಂತ ಗೌರಿ-ಗಣೇಶ ಸಂಭ್ರಾಮಚರಣೆ ಜೋರಾಗಿದೆ. ತರಹೇವಾರಿ ಗೌರಿ-ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ, ಜನರನ್ನ ಭಾರೀ ಅಟ್ರ್ಯಾಕ್ಟ್ ಮಾಡ್ತಿರುವುದು ವಿಕ್ರಾಂತ್ ರೋಣ ಗಣೇಶ. ಯಸ್, ಈ ಭಾರಿ ವಿಕ್ರಾಂತ್ ರೋಣ ಗಣೇಶನ ಹವಾ ಜೋರಾಗಿದೆ. ಸುದೀಪಿಯನ್ಸ್ ಮಾತ್ರವಲ್ಲ ಸಾಮಾನ್ಯರು ಕೂಡ ವಿಕ್ರಾಂತ್ ರೋಣ ಗಣೇಶನಿಗಾಗಿ ಮುಗಿಬೀಳ್ತಿದ್ದಾರೆ. ಬೇಡಿಕೆ ಹೆಚ್ಚಿಸಿಕೊಂಡು ಟ್ರೆಂಡ್ ಸೃಷ್ಟಿಮಾಡುತ್ತಿರುವ `ವಿಕ್ರಾಂತ್ ರೋಣ ಗಣೇಶನ’ ಸೂಪರ್ಬ್ ಸ್ಟೋರಿ ಇಲ್ಲಿದೆ ಹ್ಯಾವ್ ಎ ಲುಕ್.
ಮಾಯಲೋಕದಲ್ಲಿ ವಿಕ್ರಾಂತ್ ರೋಣ ಹವಾ ಹೆಂಗೈತಿ ಎನ್ನುವುದು ಬಹುಶ: ನಿಮ್ಮೆಲ್ಲರಿಗೂ ಗೊತ್ತಿದೆ. ಬುರ್ಜ್ ಖಲೀಫಾವನ್ನು ಮೆಟ್ಟಿನಿಂತು ನಯಾ ಮೇನಿಯಾ ಸೃಷ್ಟಿಸಿಕೊಂಡಿರುವ ಅಭಿನಯ ಚಕ್ರವರ್ತಿ ಅಭಿನಯದ ʼವಿಕ್ರಾಂತ್ ರೋಣ’, ಗೌರಿ-ಗಣೇಶ ಹಬ್ಬದಂದು ಹೊಸದೊಂದು ಹವಾ ಶುರುವಿಟ್ಟುಕೊಂಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಪಡೆದು ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಅದಕ್ಕೆ ಕಾರಣ ವಿಕ್ರಾಂತ್ ರೋಣ ಗಣೇಶ’ ಮೂರ್ತಿ ಎನ್ನುವುದು ವಿಶೇಷ ಪ್ರತಿವರ್ಷ ಗೌರಿ-ಗಣೇಶ ಹಬ್ಬಕ್ಕೆ ಸ್ಟಾರ್‌ನಟರುಗಳ ಅವತಾರವೆತ್ತಿ ಗಣೇಶಪ್ಪ ಗ್ರಾಂಡ್ ಎಂಟ್ರಿಕೊಡ್ತಾನೆ. ಮಾರುಕಟ್ಟೆಯಲ್ಲಿ ನಂದೇ ಹವಾ ಅಂತ ತಿಂಗಳಾನುಗಟ್ಟಲ್ಲೇ ಮೆರೆಯುತ್ತಾನೆ. ಸ್ಟಾರ್‌ನಟರುಗಳ ಅಭಿಮಾನಿಗಳನ್ನು ಮಾತ್ರವಲ್ಲ ನಾಡಿನ ಜನರ ಹೃದಯ ಗೆದ್ದು ಅವರುಗಳ ಮನೆಯಲ್ಲಿ ಹೋಗಿ ಚಕ್ಕಮಕ್ಕಳ ಹಾಕಿಕೊಂಡು ಕೂತುಬಿಡ್ತಾನೆ. ಅದರಂತೇ, ಈ ವರ್ಷವಿಕ್ರಾಂತ್ ರೋಣ ಗಣೇಶ’ ಅಖಾಡದಲ್ಲಿ ಹವಾ ಎಬ್ಬಿಸುತ್ತಿದ್ದಾನೆ. ಕಿಚ್ಚನಂತೆ ಹ್ಯಾಟ್ ಹಾಕಿಕೊಂಡು, ಕೈಯಲ್ಲಿ ಗನ್ ಹಿಡಿದುಕೊಂಡು ಮ್ಯಾಸೀವ್ ಸೀಟ್‌ನಲ್ಲಿ ಕುಳಿತಿರುವ ಗಣೇಶನನ್ನ ನೋಡಿ ಕಿಚ್ಚ ಫ್ಯಾನ್ಸ್ ಮಾತ್ರವಲ್ಲ ಸಕಲರೂ ಕೂಡ ಫಿದಾ ಆಗಿದ್ದಾರೆ. ವಿಕ್ರಾಂತ್ ರೋಣ ಗಣೇಶನನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ.
ಯಶ್ವಂತ್ ಶೆಟ್ಟಿ
ಅಷ್ಟಕ್ಕೂ, ವಿಕ್ರಾಂತ್ ರೋಣ ಗಣೇಶನ ಕಲ್ಪನೆ ಮೂಡಿದ್ದು ಮತ್ತು ಮಾರುಕಟ್ಟೆಗೆ ತರಬೇಕು ಎನ್ನುವ ಕನಸು ಕಂಡಿದ್ದು ಮಾಣಿಕ್ಯನ ಅಪ್ಪಟ ಅಭಿಮಾನಿ ಯಶ್ವಂತ್ ಶೆಟ್ಟಿ. ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಎದುರುನೋಡ್ತಿರುವ ಯಶ್ವಂತ್, ಭಾರತೀಯ ಚಿತ್ರರಂಗದಲ್ಲಿ ಹವಾ ಎಬ್ಬಿಸುವವಿಕ್ರಾಂತ್ ರೋಣ’ ಲುಕ್‌ನ ನೋಡಿ ಪ್ರೇರಣೆಗೊಂಡರು. ಈ ಭಾರಿ ಗೌರಿ-ಗಣೇಶ ಹಬ್ಬಕ್ಕೆ ಕಿಚ್ಚನ ಅಭಿಮಾನಿಯಾಗಿ ಕಾಣಿಕೆ ಕೊಡಬೇಕು ಎಂದು ನಿರ್ಧರಿಸಿ ವರದನಾಯಕನ’ ಮೂರ್ತಿ ಕೆತ್ತನೆಯ ಕೆಲಸದಲ್ಲಿ ಬ್ಯುಸಿಯಾದರು. ಸುಮಾರು ಎರಡು ತಿಂಗಳು ಟೈಮ್ ತೆಗೆದುಕೊಂಡುವಿಕ್ರಾಂತ್ ರೋಣ ಗಣೇಶಪ್ಪನಿಗೆ’ ಜೀವ ತುಂಬಿದರು. ಆನ್‌ಲೈನ್‌ನಲ್ಲಿ ಹಾಗೆಯೇ ಪೋಸ್ಟ್ ಮಾಡಿದರು. ಇದಾಗಿ, ಕೆಲವೇ ನಿಮಿಷಗಳಲ್ಲಿ ಟ್ರೆಂಡ್‌ಸೆಟ್ ಆಗಿದೆ ಜೊತೆಗೆ ಸುದೀಪಿಯನ್ಸ್ ಕಡೆಯಿಂದ ಶುಭಾಷಯದ ಮಹಾಪೂರವು ಹರಿದು ಹೋಗಿದೆ.
ವಿಕ್ರಾಂತ್ ರೋಣ’ ಗಣೇಶನನ್ನು ಕೆತ್ತನೆ ಮಾಡಿ ನಿಲ್ಲಿಸಿರುವ ಯಶ್ವಂತ್‌ಗೆ ಬೇಜಾನ್ ಆರ್ಡರ್ ಬುಕ್ ಆಗಿದೆ. ಮಾಣಿಕ್ಯನ ಅಭಿಮಾನಿಗಳು ಮಾತ್ರವಲ್ಲ ಬೇರೆಯವರು ಕೂಡವಿಕ್ರಾಂತ್ ರೋಣ ಗಣೇಶನನ್ನು ಬುಕ್ ಮಾಡಿಕೊಂಡು ಮನೆಗೆ ಕೊಂಡೊಯ್ದಿದ್ದಾರಂತೆ. ಈ ಬಗ್ಗೆ ಖಾಸಗಿ ಪತ್ರಿಕೆಗೆ ಯಶ್ವಂತ್ ಸಂದರ್ಶನ ನೀಡಿದ್ದು ಖುಷಿ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈಗೇನಿದ್ರೂ ವಿಕ್ರಾಂತ್ ರೋಣನದ್ದೇ ಕಾರುಬಾರು. `ಊರಲ್ಲೆಲ್ಲಾ ಒಬ್ಬರದ್ದೇ ಸೌಂಡು ಅವರೇ ವಿಕ್ರಾಂತ್ ರೋಣ’ ಅಂತ ಶ್ರೀಲಂಕನ್ ಬ್ಯೂಟಿ ಹೇಳಿದ್ದೇ ಬಂತು ಸೌಂಡ್ ಇನ್ನೂ ಜಾಸ್ತಿಯಾಗಿದೆ. ಅನುಪ್ ಭಂಡಾರಿ ನಿರ್ದೇಶನದ-ಕಿಚ್ಚ ಅಭಿನಯದ- ಜಾಕ್‌ಮಂಜು ನಿರ್ಮಾಣದ ಈ ಮಹಾಮೂವೀಯ ಮೇಲಿನ ನಿರೀಕ್ಷೆ ಗಳಿಗಳಿಗೆಗೂ ಹೆಚ್ಚುತ್ತಲೇ ಇದೆ. ಡೆಡ್ಸ್ ಆಂಥಮ್ ಸಾಂಗ್ ಸುನಾಮಿ ಎಬ್ಬಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಜಾಕ್ವೆಲಿನ್ ಡಬ್ಬಿಂಗ್ ಮಾಡೋದಕ್ಕೆ ಮತ್ತೆ ಬೆಂಗಳೂರಿಗೆ ಬರಲಿದ್ದಾರೆ. ಅಲ್ಲಿವರೆಗೂ ಕಿಚ್ಚನಷ್ಟೇ ತಾಳ್ಮೆಯಿಂದ ನೀವೆಲ್ಲರೂ ಕಾಯ್ರಿ.
ಡಿಎನ್‌ಎ ಅಂದ್ರೆ ನಮಗೆಲ್ಲ ಗೊತ್ತಿರೋದು ಜೀನ್ಸ್ ಅಥವಾ ವಂಶವಾಹಿ ಅಂತ. ಆದ್ರೆ ನಿರ್ದೇಶಕ ಪ್ರಕಾಶ್‌ರಾಜಮೇಹುʼ ಡಿಎನ್‌ಎʼ ಎನ್ನುವ ಚಿತ್ರದ ಶೀರ್ಷಿಕೆಗೆ ಧೃವ ನಕ್ಷತ್ರ ಆಕಾಶ ಅಂತ ಸಬ್ ಟೈಟಲ್ ಇಟ್ಕೊಂಡು ಪ್ರೇಕ್ಷಕರಿಗೆ ಏನನ್ನು ಹೇಳೋದಿಕ್ಕೆ ಪ್ರಯತ್ನಿಸಿದ್ದಾರೋ ಗೊತ್ತಿಲ್ಲ, ಆದರೆ ಚಿತ್ರದ ಶೀರ್ಷಿಕೆಗೆ ತಕ್ಕಂತೆ ಇದೊಂದು ವಂಶವಾಹಿಗೆ ಕನೆಕ್ಟ್ ಆಗುವ ಕಥೆ ಅನ್ನೋದು ಅಷ್ಟೇ ಸತ್ಯ. ಹಾಗಾಗಿಯೇ ತಮ್ಮ ಚಿತ್ರದ ಕಥಾ ಹೂರಣಕ್ಕೆ ಕನೆಕ್ಟ್ ಆಗುವ ಹಾಗೆ ʼಸಂಬಂಜ ಅನ್ನೋದು ದೊಡದು ಕನಾ..ʼ ಎನ್ನುವ ಮಾತನ್ನು ಹೈಲೈಟ್ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕೆ ಈಗ ಗೌರಿ, ಗಣೇಶ ಹಬ್ಬದ ಸಂಭ್ರಮದಲ್ಲಿ ಚಿತ್ರ ಪ್ರೇಮಿಗಳಿಗೆ ಶುಭಾಶಯ ಕೋರಿರುವ ಚಿತ್ರ ತಂಡವು ಗೌರಿ-ಗಣೇಶನಿಗೂ ಇದೆ ಡಿಎನ್ ಎ ನಂಟು ಎಂಬುದಾಗಿ ಕಥೆಯ ಎಳೆಯೊಂದನ್ನು ರಿವೀಲ್ ಮಾಡಿದೆ.
ʼ ಇಬ್ಬರು ಗೌರಿಯರು, ಇಬ್ಬರು ಗಣೇಶಂದಿರು ಮತ್ತು ಇಬ್ಬರು ಶಿವನ ನಡುವಿನ ಭಾವನಾತ್ಮಕ ಸಂಬಂಧದ ಕಥೆಯೇ ಡಿಎನ್ ಎ. ಎಲ್ಲಾ ಕುಟುಂಬಗಳಿಗೂ ಕನೆಕ್ಟ್ ಆಗುತ್ತೆ. ಹಾಗೆಯೇ ಗೌರಿ-ಗಣೇಶ ಹಬ್ಬಕ್ಕೂ ಅದರ ಕನೆಕ್ಟ್ ಇದೆ. ಅದು ಹೇಗೆ ಅನ್ನೋದು ಸಿನಿಮಾ ನೋಡಿದಾಗಲೇ ಗೊತ್ತಾಗಲಿದೆ. ಸಂಬಂಜ ಅನ್ನೋದು ದೊಡದು ಕನಾ ಎನ್ನುವ ಸಂದೇಶ ಸಾರುವ ಕಥಾ ಹಂದರೊಂದಿಗೆ ಸಧಬಿರುಚಿಯ ಕೌಟುಂಬಿಕ ಚಿತ್ರ ವಿದು ಎಂದಿದ್ದಾರೆ ನಿರ್ದೇಶಕ ಪ್ರಕಾಶರಾಜ್ ಮೇಹು.ಮಾತೃಶ್ರೀ ಎಂಟರ್ ಪ್ರೈಸಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿರ್ಮಾಪಕ ಎಂ. ಮೈಲಾರಿ ಬಂಡವಾಳ ಹಾಕಿದ್ದು, ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ಎಸ್ಟರ್ ನರೋನ್ಹಾ, ಯುಮನಾ, ಮಾಸ್ಟರ್ ಆನಂದ್ ಪುತ್ರ ಮಾಸ್ಟರ್ ಕೃಷ್ಣ ಚೈತನ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಒಂದ್ರೀತಿ ಇದು ಮಲ್ಟಿಸ್ಟಾರ್ ಸಿನಿಮಾ. ಅನೇಕ ಅನುಭವಿ ಕಲಾವಿದರ ಸಮಾಗಮ ಇಲ್ಲಿದೆ. ಹಾಗೆಯೇ ಇದು ಬಿಗ್ ಬಜೆಟ್ ಸಿನಿಮಾವೂ ಹೌದು. ಕಥೆಗೆ ತಕ್ಕಂತೆ ನಿರ್ಮಾಪಕರು ಅದ್ದೂರಿ ವೆಚ್ಚದಲ್ಲಿಯೇ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಅದರ ಛಾಯೆ ಚಿತ್ರದ ಪ್ರಮೋಷನಲ್ ಹಾಡಿನಲ್ಲಿ ಅನಾವರಣ ಗೊಂಡಿದೆ.
ನಿರ್ದೇಶಕ ಪ್ರಕಾಶ್ ರಾಜ್ ಮೇಹು, ನಿರ್ಮಾಪಕ ಮೈಲಾರಿ
ಆ ಮೂಲಕ ಸೋಷಲ್ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಇಷ್ಟೊತ್ತಿಗೆ ಈ ಚಿತ್ರ ತೆರೆಗೆ ಬಂದು ಹಳೇ ಮಾತೇ ಆಗುತ್ತಿತ್ತೇನೋ. ಆದರೆ ಕೊರೋನಾ ಕಾರಣಕ್ಕೆ ತಡವಾಗಿ ತೆರೆ ಕಾಣಲಿದೆ. ತಡವಾದರೂ, ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಒಂದೊಳ್ಳೆಯ ಕಥಾ ಹಂದರದ ಮೂಲಕ ಭಾವನೆಗಳ ಕದ ತಟ್ಟಲಿದೆ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್ ರಾಜ ಮೇಹು.
ಗಂಧದಗುಡಿಯ ಕಲಾವಿದರು ಒಬ್ಬೊಬ್ಬರಾಗಿ ಗಡಿದಾಟುತ್ತಿದ್ದಾರೆ. ಪರಭಾಷಾ ಅಂಗಳಕ್ಕೆ ಲಗ್ಗೆ ಇಟ್ಟು ಹವಾ ಎಬ್ಬಿಸುತ್ತಿದ್ದಾರೆ. ಅಖಾಡ ನಿಮ್ಮದಾದರೇನಂತೆ ಆಟ ನಮ್ದು ಅಂತ ತೊಡೆತಟ್ಟಿ ಫೀಲ್ಡ್ ಗೆ ಇಳಿಯುತ್ತಿರುವ ನಮ್ಮ ಚಂದನವನದ ಸ್ಟಾರ್ ಹೀರೋಗಳು ಪರರ ಅಖಾಡದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಅದೇ ಸಾಲಿನಲ್ಲಿ ಈಗ ಲೂಸಿಯಾ ಹೀರೋ ಸತೀಶ್ ನಿನಾಸಂ ಸರದಿ.
ಸತೀಶ್ ನಿನಾಸಂ ಸ್ಯಾಂಡಲ್‌ವುಡ್‌ನ ಒನ್ ಆಫ್ ದಿ ಫೈನೆಸ್ಟ್ ಆಕ್ಟರ್. ಗಾಡ್‌ಫಾದರ್‌ಗಳಿಲ್ಲದೇ ಗಂಧದಗುಡಿಗೆ ಕಾಲಿಟ್ಟ ಮಂಡ್ಯಹೈದ ಹೀರೋ ಪಟ್ಟಕ್ಕೇರಿದ್ದು ಇತಿಹಾಸವೇ ಸರೀ. ರಂಗಭೂಮಿಯಲ್ಲಿ ಪಳಗಿ ಥಿಯೇಟರ್‌ನಲ್ಲಿ ಕೆಲಸ ಮಾಡಿಕೊಂಡು ಬಣ್ಣದ ನಂಟನ್ನು ಬೆಸೆದುಕೊಂಡ ಸತೀಶ್ ನಿನಾಸಂ, ಸೀರಿಯಲ್‌ಗಳಲ್ಲಿ ಅಭಿನಯಿಸುತ್ತಾ, ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಾ `ಲೂಸಿಯಾ’ ಮೂಲಕ ಹೀರೋ ಆದರು. ಅಲ್ಲಿಂದ ಶುರುವಾದ ಹೀರೋಯಿಸಂ ಇವತ್ತು ಕ್ವಾಟ್ಲೇ ಹೀರೋನಾ ಗಡಿದಾಟಿಸಿದೆ. ತಮಿಳು ಚಿತ್ರರಂಗದಲ್ಲಿ ನಾಯಕನಟನಾಗಿ ಮೆರೆಯುವ ಗೋಲ್ಡನ್ ಚಾನ್ಸ್ ಸಿಕ್ಕಿದೆ.
ಯಸ್, ಲೂಸಿಯಾ ಹೀರೋ ಗಡಿದಾಟಿದ್ದಾರೆ. `ಪಗೈವುನುಕು ಅರುಳ್ವಾಯ್’ ಚಿತ್ರದ ಮೂಲಕ ಕಾಲಿವುಡ್‌ಗೆ ಗ್ರಾಂಡ್ ಎಂಟ್ರಿಕೊಟ್ಟಿದ್ದಾರೆ. ತಮಿಳಿನ ಪ್ರಖ್ಯಾತ ನಟ ನಿರ್ದೇಶಕ ಸಮುದ್ರಖಣಿಯವರು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸ್ಯಾಂಡಲ್‌ವುಡ್ ಹೀರೋನಾ ವೆಲ್‌ಕಮ್ ಮಾಡಿಕೊಂಡಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ, ಫಾರಿನ್‌ನಲ್ಲೆಲ್ಲೋ ಸೆಟಲ್ ಆಗಿರುವ ಮೋಹಕತಾರೆ ರಮ್ಯಾ ಮೇಡಂ, ಸತೀಶ್ ಅಭಿನಯದ ಚೊಚ್ಚಲ ತಮಿಳು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭಾಷಯ ಕೋರಿರುವುದು.
ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರದಿಂದ ಅಂತರ ಕಾಯ್ದುಕೊಂಡು ಬಿಂದಾಸ್ ಲೈಫ್ ಲೀಡ್ ಮಾಡ್ತಿರುವ ಗೋಲ್ಡನ್ ಕ್ವೀನ್, ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಇದೀಗ, ಅದೇ ಮೀಡಿಯಾನ ಬಳಸಿಕೊಂಡು ನಮ್ಮ ಹೀರೋ ಹೊಸ ಸಾಹಸಕ್ಕೆ ಪ್ಲಸ್ ಸಾಧನೆಗೆ ಸಾಥ್ ಕೊಟ್ಟಿದ್ದಾರೆ. ನಟ ಸತೀಶ್ ನಿನಾಸಂ ಪಾತ್ರ ಪರಿಚಯದ ಪೋಸ್ಟರ್ ರಿಲೀಸ್ ಮಾಡಿಕೊಟ್ಟು ಲೂಸಿಯಾ ಹೀರೋಗೆ ಹೊಸ ಹುರುಪು ತುಂಬಿದ್ದಾರೆ. ದಿಲ್ಲಿ ಮೇಡಂ ಸಾಥ್- ಶುಭಾಶಯ ಗಿಟ್ಟಿಸಿಕೊಂಡಿರುವ ಬ್ಯೂಟಿಫುಲ್ ಮನಸ್ಸಿನ ನಾಯಕ ಕಾಲಿವುಡ್ ಅಂಗಳದಲ್ಲೂ ಸುನಾಮಿ ಎಬ್ಬಿಸೋ ತವಕದಲ್ಲಿದ್ದಾರೆ.
ರಮ್ಯಾ ಮೇಡಂ ಜೊತೆಗೆ ಐಶಾನಿ ಶೆಟ್ಟಿ, ದಿಗಂತ್, ಅದಿತಿ ಪ್ರಭುದೇವ್, ರಾಗಿಣಿ, ಕಾರುಣ್ಯ, ರಕ್ಷಿತಾ ಪ್ರೇಮ್, ಶರ್ಮಿಳಾ ಮಾಂಡ್ರೆ, ನೆನಪಿರಲಿ ಪ್ರೇಮ್, ಶರಣ್, ರಾಜ್‌ವರ್ಧನ್, ಎ.ಪಿ ಅರ್ಜುನ್ ಲೂಸಿಯಾ ಪವನ್‌ಕುಮಾರ್, ಬಹದ್ದೂರ್ ಚೇತನ್, ಅಯೋಗ್ಯ ಮಹೇಶ್ ಸೇರಿದಂತೆ ಚಂದನವನದ ಹಲವು ಕಲಾವಿದರು ಮತ್ತು ನಿರ್ದೇಶಕರು ನಟ ಸತೀಶ್ ನಿನಾಸಂ ಹೊಸ ಜರ್ನಿಗೆ ಶುಭಹಾರೈಸಿದ್ದಾರೆ. ಗಡಿದಾಟಿದ ನನ್ನ ಮೊದಲ ಸಾಹಸಕ್ಕೆ ನನ್ನ ಜೊತೆ ಮತ್ತೆ ನೀವೆಲ್ಲರೂ ನಿಲ್ಲಬೇಕಿದೆ ಎಂದು ತಮ್ಮ ಅಭಿಮಾನಿ ದೇವರುಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಪಗೈವುನುಕು ಅರುಳ್ವಾಯ್' ಚಿತ್ರದಲ್ಲಿ ಇಬ್ಬರು ಹೀರೋಗಳು. ಸಸಿಕುಮಾರ್ ಜೊತೆ ಸತೀಶ್ ನಿನಾಸಂ ಲೀಡ್ ರೋಲ್‌ನಲ್ಲಿ ಅಭಿನಯಿಸಿದ್ದು,ವಾಣಿಭೋಜನ್ ನಾಯಕಿಯಾಗಿದ್ದಾರೆ. ಖ್ಯಾತ ಇಂಗ್ಲೀಷ್ ಸಾಹಿತಿ ವಿಲಿಯಂ ಷೇಕ್ಸ್ಪಿಯರ್‌ರ ಮ್ಯಾಕ್‌ಬೆತ್ ನಾಟಕದಿಂದ ಸ್ಪೂರ್ತಿ ಪಡೆದಿರುವ ಡೈರೆಕ್ಟರ್ ಅನೀಸ್ ಅಜಾನ್‌ದಾನ್,ಪಗೈವುನುಕು ಅರುಳ್ವಾಯ್’ ಚಿತ್ರ ನಿರ್ದೇಶಿಸಿದ್ದಾರೆ. ಇದೊಂದು ಬಿಗ್‌ಬಜೆಟ್ ಸಿನಿಮಾ ಆಗಿದ್ದು, ಕರ್ನಾಟದ ವಿವಿಧ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ರಿಲೀಸ್‌ಗೆ ರೆಡಿಯಾಗ್ತಿದೆ. ಕನ್ನಡದಲ್ಲಿ ಪೆಟ್ರೋಮ್ಯಾಕ್ಸ್, ಗೋದ್ರಾ ಸಿನಿಮಾಗಳು ತೆರೆಗೆ ಅಪ್ಪಳಿಸೋಕೆ ಸಜ್ಜಾಗಿವೆ. ರಚಿತಾ ಜೊತೆ ಮ್ಯಾಟ್ನಿ, ಶರ್ಮಿಳಾ ಮಾಂಡ್ರೆ ಜೊತೆ ದಸರಾ ಸೇರಿದಂತೆ ಪರಿಮಳ ಲಾಡ್ಜ್, ಮೈ ನೇಮ್ ಈಸ್ ಸಿದ್ದೇಗೌಡ ಚಿತ್ರಗಳು ಸತೀಶ್ ಕೈಯ್ಯಲಿವೆ. ಒಟ್ನಲ್ಲಿ ಲೂಸಿಯಾ ಹೀರೋ ಸ್ಯಾಂಡಲ್‌ವುಡ್‌ನ ಬ್ಯುಸಿಯೆಸ್ಟ್ ಆಕ್ಟರ್ ಕಮ್ ಫೈನೆಸ್ಟ್ ಆಕ್ಟರ್. ಕನ್ನಡದಲ್ಲಿ ಬ್ಯುಸಿಯಾದಂತೆ ತಮಿಳು ಚಿತ್ರರಂಗದಲ್ಲೂ ಸತೀಶ್ ಬ್ಯುಸಿಯಾಗ್ಲಿ. ಕನ್ನಡದ ಕೀರ್ತಿಪತಾಕೆ ಕಾಲಿವುಡ್‌ನಲ್ಲಿ ಎತ್ತಿಹಿಡಿಯಲಿ.
ಡ್ರಗ್ಸ್ ಪ್ರಕರಣದಲ್ಲೀಗ ಸರ್ಕಾರ ಎಲ್ಲರಿಗೂ ನಡುಕ ಹುಟ್ಟಿಸಿದೆ. ಕೆಲವು ಸಿನಿಮಾ ತಾರೆಯರ ಮಾದಕ ಜಾಲದ ಪ್ರಕರಣಗಳು ಮತ್ತೆ ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲೇ ಗೃಹ ಸಚಿವ ಜ್ಞಾನೇಂದ್ರ ಖಡಕ್ ಹೇಳಿಕೆ ನೀಡಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ರಾಜಿಮಾತೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದಕವಸ್ತು ಪ್ರಕರಣದಲ್ಲಿ ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟ ಪಡಿಸಿದರು.
‘ಚಲನಚಿತ್ರ ನಟಿ ಅನುಶ್ರೀ ಇರಲಿ, ಯಾರೇ ಆಗಿರಲಿ ಅವರ ವಿಷಯದಲ್ಲಿ ರಾಜಕೀಯ ಒತ್ತಡವೇನಿಲ್ಲ. ಮಾದಕವಸ್ತು ಪ್ರಕರಣ ಇದಾಗಿರುವುದರಿಂದ ಯಾರೂ ಒತ್ತಡ ಹಾಕುವುದಿಲ್ಲ. ಇಂತಹ ಪ್ರಕರಣದಲ್ಲಿ ನಮ್ಮ ಸರ್ಕಾರವು ಬಹಳಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಯಾರೇ ಕಾನೂನು ಬಾಹಿರ ಚಟುವಟಿಕೆ ನಡೆಸಿದರೂ ನಾವು ಸುಮ್ಮನಿರುವುದಿಲ್ಲ. ಇಲ್ಲಿ ಅಪರಾಧ ಚಟುವಟಿಕೆಗೆ ಜಾಗ ಇಲ್ಲ.ಅಪರಾಧಿ ಎನಿಸಿದವರು ಶಿಕ್ಷೆಗೆ ಗುರಿಯಾಗುವುದು ಖಚಿತ. ಎಷ್ಟೇ ಪ್ರಭಾವಿಗಳಾಗಿದ್ದರೂ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.