Categories
ಸಿನಿ ಸುದ್ದಿ

ಅಕ್ಕ – ತಂಗಿಯರೆಂದರೆ ಹೀಗಿರಬೇಕು!

ಸ್ಟಾರ್ ಸಿಸ್ಟರ್

ನೇಹಾ- ಸೋನು‌‌ ಆತ್ಮೀಯತೆಯ‌ ಆಟ

‌ಚೆಂದನವನಲ್ಲಿ ಮಿಂಚುತ್ತಿರುವ ಸ್ಟಾರ್ ಸಿಸ್ಟರ್ ಪೈಕಿ ನೇಹಾ ಮತ್ತು ಸೋನು ಕೂಡ ಇದ್ದಾರೆ. ಇವ್ರು ಚಿತ್ರ ರಂಗದ ಹೆಸರಾಂತ ಮೆಕಪ್ ಕಲಾವಿದ ರಾಮಕೃಷ್ಣ ಅವರ ಪುತ್ರಿಯರು ಎನ್ನುವುದು ಬಣ್ಣದ ಲೋಕಕ್ಕೆ ಗೊತ್ತಿರುವ ಸಂಗತಿ. ಅದೃಷವೇ ಎನ್ನುವಂತೆ ಇಬ್ಬರು ಈಗ ಕಲರ್ಫುಲ್ ದುನಿಯಾ ಸ್ಟಾರ್ ಸಹೋದರಿಯರು.

 

ನೇಹಾ ಸೀರಿಯಲ್ ಜಗತ್ತಿನಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದರೆ, ಸೋನು ತಾನೇನುಕಮ್ಮಿಇಲ್ಲ ಅಂತ ಸಿನಿಮಾರಂಗದ ಬಹುಬೇಡಿಕೆ ನಟಿಆಗಿದ್ದಾರೆ. ಇಬ್ಬರು ಈಗಬಿಡುವಿಲ್ಲದ. ಬ್ಯುಸಿನಟಿಯರು.ಈಗ ಕೊರೋನಾಕಾರಣ ಚಿತ್ರೀಕರಣ ಇಲ್ಲದೆ ಮನೆಯಲ್ಲಿ ಕುಳಿತಿರುವ ನೇಹಾ ಮತ್ತು ಸೋನು, ಪುಟಾಣಿಗಳ ಹಾಗೆ ತಮ್ಮ ಅನನ್ಯ ಪ್ರೀತಿಗೆ, ಒಡನಾಟಕ್ಕೆ, ಆತ್ಮೀಯತೆಗೆ ಸಾಕ್ಷಿಯಾಗುವಂತೆ ಕ್ಯಾಮರಾಕ್ಕೆ ಪೋಸು ನೀಡಿದ್ದಾರೆ.

ಗುಂಡು ಮಕ್ಕಳಿಲ್ಲದ ಮೆಕಪ್ ಕಲಾವಿದ ರಾಮಕೃಷ್ಣ ಅವರಿಗೆ ಇವರೇ ಮುದ್ದಿನ ಗಂಡುಮಕ್ಕಳು.ಅಪ್ಪ-ಅಮ್ಮನ ಮುದ್ದಿನಸಹೋದರಿಯರು. ಬೇಡಿಕೆಯ ನಟಿಯರಾದರೂ, ಕಿಂಚಿತ್ತು ಜಂಬ ಅವರಲಿಲ್ಲ.ಸರಳ- ಸಜ್ಜನಿಕೆಯೇ ಅವರ ಆಸ್ತಿ. ಹಾಗೆ ಸುಮ್ಮನೆ ಸ್ಟಾರ್ ಸಿಸ್ಟರ್ ಕ್ಯಾಮರಾ ಕ್ಕೆ ಪೋಸು ನೀಡಿರುವ ರೀತಿ ನೋಡಿದರೆ, ಇತರೆಯವರಿಗೂ ಮಾದರಿ…

Categories
ಸಿನಿ ಸುದ್ದಿ

ಸಿಂಗರ್ ಚಂದನ್ ಶೆಟ್ಟಿ‌ ಅಂದ್ರೆ ಯಾಕಿಷ್ಟು ಕೋಪ?

Categories
ಸಿನಿ ಸುದ್ದಿ

ಬಯೋಫಿಕ್ ಬರೆಯುತ್ತಿದ್ದಾರೆ ಸೈಫ್ ಅಲಿಖಾನ್!

ಸಾಧಕರ ಆತ್ಮಕತೆಗಳಿಗೂ ಬಾಲಿವುಡ್ ಹತ್ತಿರದ ನಂಟು. ಯಾಕಂದ್ರೆ ಸಾಧಕರ ಬಯೋಫಿಕ್ ಆಧರಿಸಿ ಸಿನಿಮಾ ಮಾಡುವುದು ಅಲ್ಲಿನ ಪ್ಯಾಷನ್. ಹಾಗೆಯೇ ಅದಕ್ಕಲ್ಲಿ ದೊಡ್ಡ ಮಾರ್ಕೆಟ್ ಕೂಡ ಇದೆ. ಹಲವು ಸಿನಿಮಾಗಳಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದು ಸಾಕ್ಷಿ. ಅಲ್ಲಿನ ಸದ್ಯದ ಪರಿಸ್ಥಿತಿ ಹೀಗಿರುವಾಗಲೇ ನಟ , ನಿರ್ಮಾಪಕ ಸೈಪ್ ಅಲಿಖಾನ್ ತಮ್ಮದೇ ಬಯೋಫಿಕ್ ಬರೆಯುವುದಾಗಿ ಹೇಳಿದ್ದಾರೆ.

ಈಗಾಗಲೇ ಚಿತ್ರೋದ್ಯಮದಲ್ಲಿ೨೫ ವರ್ಷ ಗಳಿಂದ ವಿವಿಧ ಪಾತ್ರ, ವಿವಿಧ ಹಂತಗಳಲ್ಲಿ ಕೆಲಸ ಮಾಡಿರುವ ನಟಿ ಸೈಪ್, ನಟಿ ಕರೀನಾ ಕೈ ಹಿಡಿಯುವ ಮೂಲಕದೊಡ್ಡ ಸುದ್ದಿ ಯಾಗಿದ್ದು ಅವರ ಸಿನಿ ಜರ್ನಿ ಯ ಇನ್ನೊಂದು ಘಟ್ಟ. ಅಷ್ಟು ಮಾತ್ರವೇ ಅಲ್ಲ, ನಟನಾಗಿ ಸೋಲು- ಗೆಲವು ಕಂಡಿದ್ದಾರೆ.

ಅಗರ್ಭ ಶ್ರೀಮಂತಿಕೆ ಇದ್ದರೂ, ನಟನಾಗಿ ನಿರೀಕ್ಷೆ ಯಷ್ಟು ಮಿಂಚಲು ಆಗಿಲ್ಲ. ಅವೆಲ್ಲವನ್ನೂ ಈಗ ತಮ್ಮ ಆತ್ಮ ಚರಿತ್ರೆಯ ಲ್ಲಿ ತೆರೆದಿಡಲಿದ್ದಾರಂತ. ಹಾಗಂತ ಬಯೋಫಿಕ್ ಬರೆಯುವುದು ಅದ್ಬುತ ಅಂತ ಅವರು ಭಾವಿಸಿಲ್ಲ. ಅದೊಂದು ಸ್ವಾರ್ಥದ ಹೊತ್ತಿಕೆ ಆಗುವುದು ಅನ್ನುವ ಅರಿವು ಕೂಡ ಅವರಿಗಿದೆ.

ಅದೇ ವೇಳೆ, ಅಭಿಮಾನಿಗಳಿಗೆ ಕುತೂಹಲ ಇದ್ದೇ ಇರುತ್ತದೆ ಎನ್ನುವ ನಂಬಿಕೆ ಅವರದು. ಹಾಗಾಗಿಯೇ ಬಯೋಫಿಕ್ ಬರೆಯುವುದಕ್ಕೆ ಶುರು ಮಾಡಿದ್ದೇನೆ ಎನ್ನುತ್ತಾರೆ ನವಾಬ್ ಸೈಪ್ ಅಲಿಖಾನ್. ಹಲವು ಸಂಗತಿಗಳು ಬದಲಾಗುತ್ತವೆ. ಅವು ಗಳನ್ನು ನೆನಪಿಸಿಕೊಳ್ಳುವುದು, ಬರೆಯುವುದು ಒಂಥರ ವಿಶೇಷ ಅನುಭವ ಎನ್ನುವ ಸೈಪ್, ಅಭಿಮಾನಿಗಳಿಗೆ ಅದೆಲ್ಲ ಮೆಚ್ಚುಗೆ ಆಗಬಹುದೆನ್ನುವ ನಿರೀಕ್ಷೆಯಲ್ಲಿದ್ದಾರೆ . ಸೈಪ್ ಹಾಗೂ ಕರೀನಾ ಜೋಡಿ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದೆ.

Categories
ಸಿನಿ ಸುದ್ದಿ

ಡೆಡ್ಲಿ ಆದಿತ್ಯಗೆ ಪ್ರಕಾಶ್ ಹೆಬ್ಬಾಳ ಆ್ಯಕ್ಷನ್ ಕಟ್

ಮತ್ತೊಂದು‌ಆ್ಯಕ್ಷನ್, ಥ್ರಿಲ್ಲರ್ ಸಿನಿಮಾದಲ್ಲಿ  ಡೆಡ್ಲಿ

ಡೆಡ್ಲಿ ಆದಿತ್ಯ ಆಭಿನಯದಲ್ಲಿ ಹೊಸ ಸಿನಿಮಾ‌ ಶುರುವಾಗುತ್ತಿದೆ. ಪ್ರಕಾಶ್ ಹೆಬ್ಬಾಳ್ ನಿರ್ದೇಶನದ ಆ್ಯಕ್ಷನ್, ಥ್ರಿಲ್ಲರ್ ಕಥಾ ಹಂದರ ಸಿನಿಮಾಕ್ಕೆ‌ಆದಿತ್ಯ ನಾಯಕರಾಗಿದ್ದಾರೆ.  ಸದ್ಯಕ್ಕೆ ಚಿತ್ರಕ್ಕೆ ಕತೆ, ಚಿತ್ರಕತೆ ಹಾಗೂ‌ಸಂಭಾಷಣೆ ಕೆಲಸಗಳೆಲ್ಲ ಮುಗಿದಿದೆ. ಇಷ್ಟರಲ್ಲಿಯೇ ಸಿನಿಮಾ‌‌‌ಸೆಟ್ಟೇರುವುದು ಖಚಿತವಾಗಿ ದೆ. ಸಿಎಚ್ ಇ ಕಂಬೈನ್ಸ್ ಮೂಲಕ‌ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅನುಭವಿ ತಂತ್ರಜ್ಞರೆ ಕೆಲಸ ಮಾಡಲಿದ್ದಾರೆ.

 

 

Categories
ಸಿನಿ ಸುದ್ದಿ

ಅವಳಿ‌ ಸಹೋದರಿಯರ ನಡುವೆ ಅವನೊಬ್ಬ ಗಣಪ…!?

ಸ್ಯಾಂಡಲ್ವುಡ್ ನಲ್ಲಿ ಸದ್ಯಕ್ಕೆ‌ ಸೆನ್ಸೆಷೆನಲ್ ಸಿಸ್ಟರ್ ಅಂದ್ರೆ ಅದ್ವಿತಿ ಶೆಟ್ಟಿ ಹಾಗೂ ಅಶ್ವಿತ ಶೆಟ್ಟಿ. ಈಗಾಗಲೇ ಅದ್ವಿತಿ ಶೆಟ್ಟಿ‌ಚಿತ್ರರಂಗಕ್ಕೆ‌ ಬಂದು ಸಾಕಷ್ಟು ಹೆಸರು ಮಾಡಿರುವುದು ನಿಮಗೂ‌ಗೊತ್ತು. ಈಗ ಅಕ್ಕನ‌ ಹಾದಿಯಲ್ಲಿ ತಂಗಿಯೂ ಇದ್ದಾರೆ.‌ ಇಂತಿಪ್ಪಾ ಅವಳಿ ಸಹೋದರಿಯರ ನಡುವೆ ಅವನೊಬ್ಬ ಗಣಪ ಬಂದಿದ್ದಾನೆ.‌ಆತ ಇಬ್ಬರಿಗೂ ಇಷ್ಡ.

Categories
ಸಿನಿ ಸುದ್ದಿ

ಕರ್ವ ನವನೀತ್ ಜತೆ ಕಾಮಿಡಿ‌ ಕಿಂಗ್ಸ್

ಕಾಮಿಡಿ ಕಿಂಗ್ಸ್ ಜತೆಗೆ ನವನೀತ್

  ಕಾಮಿಡಿ‌ ಟಾನಿಕ್ ಗೆ ನವನೀತ್ ಫುಲ್ ಖುಷ್

‘ಕರ್ವ’ ಖ್ಯಾತಿಯ ನಿರ್ದೇಶಕ ಈಗ ಹೊಸದೊಂದು ಸಿನಿಮಾದ ಸಿದ್ದತೆಯಲ್ಲಿದ್ದಾರೆ. ಈಗಾಗಲೇ ಈ‌ಚಿತ್ರಕ್ಕೆ ಚಾಲನೆ‌ಯೂ‌ ಸಿಕ್ಕಿದೆ.  ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನವನೀತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತರುಣ್ ಶಿವಪ್ಪ ಅದರ ನಿರ್ಮಾಣದ ಹೊಣೆ ಹೊತ್ತಿದ್ದಾರೆ‌ .‌ಕೊರೊನಾ ಕಾರಣಕ್ಕೆ ಆ ಸಿನಿಮಾದ ಕೆಲಸ ಈಗ ತಟಸ್ಥಗೊಂಡಿದೆ.‌ ಅದಕ್ಕೀಗ ಮತ್ತೆ ಚಾಲನೆ ಸಿಕ್ಕಂತೆ ಕಾಣುತ್ತಿದೆ.‌‌ನಿರ್ದೇಶಕ ನವನೀತ್ ಮನೆಯಲ್ಲಿ ಕನ್ನಡದ ಕಾಮಿಡಿ‌ಕಿಲಾಡಿಗಳ ಬಳಗ ಒಂದಾಗಿದೆ.  ಅಂದ ಹಾಗೆ, ಕಾಮಿಡಿ‌ಕಿಲಾಡಿಗಳು ಅಂದಾಕ್ಣಣ ಜೀ ಕನ್ನಡದ ಕಾಮಿಡಿ ಕಿಲಾಡಿಗಳ ಪ್ರತಿಭೆಗಳಲ್ಲ, ಇವರು ರಿಯಲ್ ಲೈಫ್ ನಲ್ಲಿನ‌ಕಾಮಿಡಿ ಕಿಂಗ್ ಗಳು.‌ಹಾಸ್ಯ ಕಾರ್ಯಕ್ರಮಗಳ ಮೂಲಕ‌ಮನೆ ಮಾತಾದ ಗಂಗಾವತಿ ಪ್ರಾಣೇಶ್,  ಜೋಷಿ, ಮಹಾಮನೆ ಜತೆಗೆ ಅವರದೇ ಮನೆಯಲ್ಲಿ ತಿಂಡಿ ಸವಿದಿದ್ದಾರೆ.‌ ಅವರೆಲ್ಲ ಜತೆಗಿರುವ ಫೋಟೋವೊಂದನ್ನು‌ಸೋಷಲ್ ಮೀಡಿಯಾದಲ್ಲಿ ಹಂಚಿಕೊ‌ಂಡಿದ್ದು‌ಕುತೂಹಲ‌ಕೆರಳಿಸಿದೆ.ಕೊರೋನಾ‌ನಡುವೆಯೂ ಇವರೆಲ್ಲ ಒಟ್ಟಾಗಿರುವುದನ್ನು‌ನೋಡಿದರೆ,ನವನೀತ್  ಮುಂದಿನ‌ಸಿನಿಮಾದಲ್ಲಿ ಇವರೆಲ್ಲ ಇರುತ್ತಾರಾ ಎನ್ನುವ ಆಸಕ್ತಿಗೂ ಹುಟ್ಟಿದೆ.

 

Categories
ಸಿನಿ ಸುದ್ದಿ

‘ಆಡಿಸಿದಾತ’ನ ಟೀಸರ್ ಲಾಂಚ್

ರಾಘವೇಂದ್ರ ರಾಜಕುಮಾರ್ ಅಭಿನಯದ 25 ನೇ ಚಿತ್ರ ‘ಆಡಿಸಿದಾತ’ ಟೀಸರ್ ಹೊರಬಂದಿದೆ. ಡಿ.ಬಿಟ್ಸ್ ಮ್ಯೂಜಿಕ್ ಸಂಸ್ಥೆಯ ಮೂಲಕ ಟೀಸರ್ ಲಾಂಚ್ ಆಗಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಟೀಸರ್ ಲಾಂಚ್ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದರು. ‘ ಟೀಸರ್ ತುಂಬಾ ಚೆನ್ನಾಗಿದೆ’. ಅಣ್ಣ ರಾಘವೇಂದ್ರ ರಾಜ್ ಕುಮಾರ್ ಲುಕ್ ಅದ್ಬುತವಾಗಿದೆ. ಚಿತ್ರ ಪ್ರೇಕ್ಷಕರಿಗೆ ಖುಷಿ ಕೊಡಲಿದೆ‌ ಅಂತ ‘ಆಡಿಸಿದಾತ’ ಚಿತ್ರತಂಡಕ್ಕೆ ಶುಭ ಕೋರಿದರು.ಈ ಸಂದರ್ಭದಲ್ಲಿ ಎಸ್.ಎ.ಗೋವಿಂದ ರಾಜು, ನಿರ್ಮಾಪಕ ಹೆಚ್‌. ಹಾಲೇಶ್, ನಾಗರಾಜ್ ವಿ ಹಾಗೂ ನಿರ್ದೇಶಕ ಫಣೀಶ್ ಭಾರದ್ವಾಜ್ ಉಪಸ್ಥಿತಿತರಿದ್ದರು.

Categories
ಸಿನಿ ಸುದ್ದಿ

ಡಿಎನ್ಎ ಟೆಸ್ಟ್ ಗೆ ರೆಡಿ

ಸಿನಿಮಾ ಪ್ರೇಕ್ಷಕ ಡಿ ಎನ್ ಎ ಟೆಸ್ಟ್ ಗೆ ರೆಡಿ ಆಗಬೇಕಿದೆ. ಯಾಕಂದ್ರೆ ನಿರ್ದೇಶಕ ಪ್ರಕಾಶ್ ಮೇಹು ಡಿಎನ್ ಎ ಟೆಸ್ಟ್ ಮಾಡಿಸಲು ಬರುತ್ತಿದ್ದಾರೆ. ಅಂದ ಹಾಗೆ ಅವರೇನು ವೈದ್ಯರೇ ಅಂತ ಯೋಚಿಸಬೇಡಿ. ಅವರು ನಿರ್ದೇಶಿಸಿ, ತೆರೆಗೆ ತರಲು ಹೊರಟಿರುವ ‘ಡಿಎನ್ ಎ’ ಹೆಸರಿನ ಚಿತ್ರ ರಿಲೀಸ್ ಗೆ ರೆಡಿ ಆಗಿದೆ. ಸದ್ಯಕ್ಕೆ ಚಿತ್ರದ ಸೆನ್ಸಾರ್ ಕೂಡ ಮುಗಿದಿದೆ. ಮೇಹು ಪ್ರಕಾರ ಅದಕ್ಲೆ ಸೆನ್ಸಾರ್ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆಯಂತೆ.

ಚಿ ತ್ರ ನೋಡಿದ ತಂತ್ರಜ್ಞರು ಅನೇಕರು ಬಹಳ ಮೆಚ್ಚುಗೆಯ ಮಾತನ್ನಾಡಿದ್ದಾರೆ, ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೆ ಒಟ್ಟಿಗೆ ಕುಳಿತು ಕುತೂಹಲದಿಂದ ನೋಡಿಸಿಕೊಳ್ಳುವ ಭಾವನಾತ್ಮಕ ಚಿತ್ರ ಇದಾಗಿದೆ, ರಾಜಕುಮಾರ್,ಪುಟ್ಟಣ್ಣನವರ ಕಾಲದ ಕಥಾಪ್ರಧಾನ ಚಿತ್ರಗಳನ್ನು ನೆನಪಿಸಿಕೊಳ್ಳುವವರಿಗೆ ಈ ಚಿತ್ರ ರಸದೌತಣ ನೀಡಲಿದೆ ಅನ್ನುವುದು ನೋಡಿದವರ ಒಟ್ಟಾರೆ ಅಭಿಪ್ರಾಯ, ಪುನೀತ್ ರಾಜಕುಮಾರ್ ಅವರ “ರಾಜಕುಮಾರ” ನಂತರ ಆ ಜಾನರ್ನಲ್ಲಿ ಬರುತ್ತಿರುವ ಉತ್ತಮ ಚಿತ್ರ ಅನ್ನುವುದು ಸೆನ್ಸಾರ್ ಮಾಡಿದವರು ವ್ಯಕ್ತಪಡಿಸಿದ ಅಭಿಪ್ರಾಯ’ ಎನುತ್ತಾರೆ ನಿರ್ದೇಶಕ ಪ್ರಕಾಶ್ ಮೇಹು.

Categories
ಬ್ರೇಕಿಂಗ್‌ ನ್ಯೂಸ್

ಯೋಗಿಗೆ ಅದೃಷ್ಟ

– ಲೂಸ್ ಮಾದ ಯೋಗಿಗೆ ಖುಲಾಯಿಸಿದ ಅದೃಷ್ಟ

– ದೇವೇಂದ್ರ ಬಡಿಗೇರ್ ಹೊಸ ಸಿನಿಮಾಕ್ಕೆ ನಾಯಕ ನಟ

–  ಯೋಗಿಗೆ ಜೋಡಿಯಾಗಿ ಗೊಂಬೆಗಳ ಖ್ಯಾತಿಯ ಚೆಲುವೆ

– ಪಾವನಾ ಗೌಡ ನಾಯಕಿಯಾಗಿ ಆಯ್ಜೆ

– ಡಿಸೆಂಬರ್ ಹೊತ್ತಿಗೆ ಸಿನಿಮಾ‌ಶುರು

error: Content is protected !!