Categories
ಸಿನಿ ಸುದ್ದಿ

ನಂಗೆ ಪಾರ್ಟಿ ಆಫರ್ ಬಂದಿದೆ, ಆದ್ರೆ ಅದು ಇದಲ್ಲ!

ನಟ ಸುದೀಪ್ ಹೇಳಿದ್ದು ಯಾವುದರ ಕುರಿತು ಗೊತ್ತಾ?

…………………………………….

ಶಿವಣ್ಣ ಆಯ್ತು, ಉಪೇಂದ್ರ ಆಯ್ತು, ದರ್ಶನ್ ಆಯ್ತ, ಕೊನೆಗೆ ಸುದೀಪ್ ಪ್ರತಿಕ್ರಿಯೆ ಏನು ಅಂತ ಕಾತರದಲ್ಲಿದ್ದ ಚಿತ್ರೋದ್ಯಮಕ್ಕೆ‌ಕೊನೆಗೂ ಉತ್ತರ ಸಿಕ್ಕಿತು.‌‌ ಕಳೆದ ನಾಲ್ಕೈದು ದಿನಗಳಿಂದ ಬಾರೀ ಸದ್ದು‌ಮಾಡುತ್ತಿದ್ದ ಡ್ರಗ್ಸ್ ಮಾಫಿಯಾ ಕುರಿತು ನಟ ಕಿಚ್ಚ ಸುದೀಪ್ ಕೊನೆಗೂ‌ ಪ್ರತಿಕ್ರಿಯೆ ಕೊಟ್ಟರು. ಅಚ್ಚರಿ ಅಂದ್ರೆ ‌ಡ್ರಗ್ಸ್ ಮಾಫಿಯಾ ಆರೋಪ ಪ್ರಕರಣದಲ್ಲಿ ಕೇಂದ್ರ ಬಿಂದು ಆಗಿರುವ ಇಂದ್ರಜಿತ್ ಲಂಕೇಶ್ ಅವರ ಜತೆಗೆಯೇ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ್ದು.

ಡ್ರಗ್ಸ್ ಮಾಫಿಯಾ: ಸುದೀಪ್ ಹೇಳಿದ್ದಿಷ್ಟು!

ಡ್ರಗ್ಸ್ ದಂಧೆ ಬಗ್ಗೆ ನಾನೇನು ಹೇಳಲ್ಲ. ನಾನು ಕೂಡಾ ಚಿತ್ರರಂಗದವನೇ, ಆದರೆ ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡಲು ಹೋಗಬಾರದು. ನಮಗೆ ರೈಸ್, ದಾಲ್ ಗೊತ್ತು….ಇದರ ಬಗ್ಗೆ ಗೊತ್ತಿಲ್ಲ ಎಂದು ನಗೆ ಚಟಾಕಿ ಹಾರಿಸಿದರು.

ಚಿರು ಹೆಸರು ಪ್ರಸ್ತಾಪಕ್ಕೆ ಗರಂ

ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂಬುದರ ಬಗ್ಗೆ ನನಗೇನೂ ಗೊತ್ತಿಲ್ಲ. ಚಿತ್ರರಂಗವನ್ನು ಎಲ್ಲರೂ ಸೇರಿ ಕಟ್ಟಿದ್ದಾರೆ. ಯಾವುದೋ ಒಂದು ವಿಚಾರದಿಂದಾಗಿ ಚಿತ್ರರಂಗದ ದೂಷಣೆ ಬೇಡ ಎಂದು ಸುದೀಪ್ ಹೇಳಿದರು.ಹಾಗೆಯೇ ಡ್ರಗ್ಸ್ ಮಾಫಿಯಾ ಆರೋಪ ಪ್ರಕರಣದಲ್ಲಿ ಚಿರು ಹೆಸರು ಕೇಳಿಬಂದಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಟ ಚಿರಂಜೀವಿ ಸರ್ಜಾಗೆ ಕುಟುಂಬ ಇದೆ, ಪತ್ನಿಯೂ ಇದ್ದಾರೆ. ಹೀಗಾಗಿ ನಿಧನರಾದವರ ಬಗ್ಗೆ ಮಾತನಾಡೋದು ಬೇಡ ಎಂದು‌ವಿನಂತಿಸಿಕೊಂಡರು.

ನಂಗೆ ಡ್ರಗ್ಸ್ ಪಾರ್ಟಿ ಗೊತ್ತಿಲ್ಲ:
ನನಗೆ ಪಾರ್ಟಿ ಆಫರ್ ಬಂದಿರೋದು ರಾಜಕೀಯ ಪಕ್ಷಗಳಿಂದ, ಹೀಗಾಗಿ ಬೇರೆ ಪಾರ್ಟಿಗಳ ಬಗ್ಗೆ ನನಗೆ ಗೊತ್ತಿಲ್ಲ ಎನ್ನುತ್ತಾ ತಮ್ಮದೇ ಶೈಲಿಯಲ್ಲಿ ಡ್ರಗ್ಸ್ವಮಾಫಿಯಾ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟರು.

Categories
ಸಿನಿ ಸುದ್ದಿ

ಸ್ಯಾಂಡಲ್ ವುಡ್ ನ ಕ್ಯೂಟ್ ಸಿಸ್ಟರ್ಸ್ ಗೆ ಬರ್ತ್ ಡೇ ಸಂಭ್ರಮ

ಸ್ಯಾಂಡಲ್ ವುಡ್ ನ ಅವಳಿ ಸುಂದರಿಯರು ಹಾಗೂ ಕರಾವಳಿಯ ಕ್ಯೂಟ್ ಸಿಸ್ಟರ್ಸ್ ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಸಹೋದರಿಯರಿಬ್ಬರೂ ಈಗ ಬಣ್ಣದ ಲೋಕದಲ್ಲಿ ನಟಿಯರಾಗಿ ಮಿಂಚುತ್ತಿರುವ ಉದಯೋನ್ಮುಖ ತಾರೆಯರು. ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಚಾರಿ ‘ ಚಿತ್ರ ನೋಡಿದವರಿಗೆ ಈ ಅವಳಿ ಸಹೋದರಿಯರು ಚಿರ ಪರಿಚಿತ.‌ಅದೇ ಅವರಿಬ್ಬರ ಮೊದಲ‌ ಸಿನಿಮಾ. ಯಶ್ ಹಾಗೂ ರಾಧಿಕಾ ದಂಪತಿ ಅಭಿನಯಿಸಿದ್ದ ಈ ಸಿನಿಮಾದಲ್ಲಿ ಅವಳಿ ಸಹೋದರಿರು ವಿಶೇಷವಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದಲೇ ಶುರುವಾಗಿದ್ದು ಈ ಕ್ಯೂಟ್ ಟ್ವಿನ್ಸ್ ಸಿನಿ ಜರ್ನಿ.

‘ಸುಳಿ’ಚಿತ್ರದೊಂದಿಗೆ ಸಿನಿ ಪಯಣ ಆರಂಭಿಸಿದ ಅದ್ವಿತಿ ಶೆಟ್ಟಿ, ಚಂದನವನದಲ್ಲೀಗ ಬೇಡಿಕೆಯ ನಟಿ . ‘ಫ್ಯಾನ್‌’ ಚಿತ್ರದ ನಂತರವೀಗ ಅವರು ಹೊಸದೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಹೆಸರು ‘ಎಸ್‌’. ಇನ್ನು ಅಶ್ವಿತಿ‌ಶೆಟ್ಟಿ ಕೂಡ’ ಸುಳಿ ‘ನಂತರ ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‌ಈಗ ನಟನೆಯನ್ನೆ ವೃತ್ತಿಯಾಗಿಸಿಕೊಂಡಿರುವ ಅಶ್ವಿತಿ ಕಿರುತೆರೆ ಯಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈ ಅವಳಿ ಸಹೋದರಿಯರಿಗೆ ಹುಟ್ಟು ಹಬ್ಬದ ಶುಭಾಶಯ.

Categories
ಸಿನಿ ಸುದ್ದಿ

ಬೇಬಿ ಡಾಲ್ ಗೆ ಇಂದು ಬರ್ತ್ ಡೇ ಸಂಭ್ರಮ

ಬೇಬಿ ಡಾಲ್ ಆದ್ಯಾಗೆ ಇಂದು ಹುಟ್ಟು‌ಹಬ್ಬದ ಸಂಭ್ರಮ. ಸಾಮಾಜಿಕ ಜಾಲ ತಾಣದಲ್ಲಿ‌ ಅಪಾರ ಅಭಿಮಾನಿಗಳನ್ನು‌ ಹೊಂದಿರುವ ಆದ್ಯಾಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಜೀ‌ ಕನ್ನಡ ವಾಹಿನಿಯ ಬಹು ಜನಪ್ರಿಯ ಕಾರ್ಯಕ್ರಮ ‘ಸರಿಗಮಪ ಲಿಟ್ಲ್ ಚಾಂಪ್ ೧೨’ ನೇ ಸರಣಿಯ ಕಂಟೆಸ್ಟೆಂಡ್ ಆಗಿದ್ದ ಅದ್ಯಾ,ತನ್ನ ಮುದ್ದು ಮುಖ, ಆಕರ್ಷಣೆಯ ನಗು ಮತ್ತು ಮಧುರವಾದ ಕಂಠ ಸಿರಿಯೊಂದಿಗೆ ಸರಿಗಮಪ ಲಿಟಲ್ ಚಾಂಪ್ ರಿಯಾಲಿಟಿ ಶೋನ ಪ್ರಮುಖ ಆಕರ್ಷಣೆ ಆಗಿದ್ದಳು. ಅಪಾರ ಪ್ರತಿಭೆಯ ಮೂಲಕ ಬೇಬಿ ಡಾಲ್ ಅಂತಲೇ ಮನೆ ಮಾತಾಗಿದ್ದು ನಿಮಗೂ ಗೊತ್ತು.‌ಅದೇ ಜನಪ್ರಿಯತೆಯೊಂದಿಗೆ ಬೇಬಿಡಾಲ್ ಆದ್ಯಾ‌, ಬಾಲ‌ನಟಿಯಾಗಿ ಚಂದನವನ ಪ್ರವೇಶಿಸಿದಳು.‌‌‌

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್” ಚಿತ್ರದಲ್ಲಿ ಕಾಣಿಸಿಕೊಂಡಳು. ಹಾಗೆಯೇ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಭೀಮಸೇನ ನಳ ಮಹಾರಾಜ’ ಚಿತ್ರದಲ್ಲೂ ಮುದ್ದಾದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾಳೆ. ಆ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.

 

ಸದ್ಯ ನಟನೆ, ವಿದ್ಯಾಭ್ಯಾಸದ ಜತೆಗೆ ಆಲ್ಬಂ ಸಾಂಗ್ ನಿರ್ಮಾಣದಲ್ಲೂ ಬ್ಯುಸಿ‌ ಆಗಿದ್ದಾಳೆ.ಸಂಗೀತದ ಮೇಲೆ ಇನ್ನಷ್ಟುಹಿಡಿತ ಸಾಧಿಸಲು ಕಲಿಕೆಗೆ ಒತ್ತು ನೀಡಿದ್ದಾಳೆ. ಆದ್ಯಾಳ ಆಸಕ್ತಿಗೆ ತಕ್ಕಂತೆ ತರಬೇತಿ ನೀಡುತ್ತಿದ್ದೇವೆ ಎನ್ನುತ್ತಾರೆ ತಾಯಿ ಅಶ್ವಿನಿ ಉಡುಪಿ.ಸಿನಿಲಹರಿ‌ ಕಡೆಯಿಂದ ಬೇಬಿಡಾಲ್ ಆದ್ಯಾಗೆ ಹುಟ್ಟು ಹಬ್ಬದ ಶುಭಾಶಯ.

Categories
ಸಿನಿ ಸುದ್ದಿ

ಸರೋಜಮ್ಮನ ಮೊಮ್ಮಗಳು ಜಯಶ್ರೀಗೆ ಒಲಿದ ಅದೃಷ್ಟ!

ಹಾಟ್ ಫೋಟೋಶೂಟ್  ಮೂಲಕವೇ ಉದಯೋನ್ಮುಖ ನಟಿಗೆ ಸಿಕ್ಕಿತಾ ಅಂತಹದೊಂದು ಅವಕಾಶ ? 

ಮಾರಿ‌ಮುತ್ತು ಪಾತ್ರದ ಖ್ಯಾತಿಯ ಹಿರಿಯ ನಟಿ‌ ಸರೋಜಮ್ಮ ಅವರ ಮೊಮ್ಮಗಳು‌ ಹಾಗೂ‌ ಕನ್ನಡದ‌ ಉದಯೋನ್ಮುಖ ನಟಿ ಜಯಶ್ರೀ ಆರಾಧ್ಯ ಗೆ ಅದೃಷ್ಟ ಖುಲಾಯಿಸಿದೆ. ಕೊರೋನಾ ಸಂಕಷ್ಟದ ನಡುವೆಯೂ ಅವರಿಗೆ ‌ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇತ್ತೀಚೆಗೆ ಹಾಟ್ ಫೋಟೋ ಶೂಟ್ ನಲ್ಲಿ ಪಡ್ಡೆ ಹುಡುಗರ ಎದೆಯೊಳಗೆ ಕಿಚ್ಚು ಹೊತ್ತುವ ಹಾಗೆ ಮಿರ ಮಿರ ಮಿಂಚಿದ ಕಾರಣವೋ, ಪ್ರತಿಭೆಗೆ ಒಲಿದು ಪ್ರತಿಫಲವೋ ಗೊತ್ತಿಲ್ಲ, ಬಹುಬೇಗ ಜಯಶ್ರೀ ಆರಾಧ್ಯ ಕನ್ನಡದಾಚೆ ಈಗ ಕಾಲಿವುಡ್ ಗೂ ಕಾಲಿಡುತ್ತಿರುವುದು ವಿಶೇಷ.

‘ಪುಟ್ಟರಾಜು ಲವರ್ ಆಫ್ ಶಶಿಕಲಾ’ ಹಾಗೂ ಅಧಿಕ ಪ್ರಸಂಗಿ ಚಿತ್ರಗಳ‌ ನಂತರವೀಗ ಜಯಶ್ರೀ, ಮೂರನೇ ಚಿತ್ರವೊಂದಕ್ಕೆ ನಾಯಕಿ ಆಗಿದ್ದಾರೆ.‌’ ಎ ವಿಲನ್ ಇನ್ ವಿಲ್ಲಾ ‘ ಎನ್ನುವುದು ಆ ಚಿತ್ರದ ಹೆಸರು.‌ಶುಕ್ರವಾರವಷ್ಟೆ ಆ ಚಿತ್ರದ ಮೊದಲ ಪೋಸ್ಟರ್ ರಿವೀಲ್ ಆಗಿದೆ. ನವ ಪ್ರತಿಭೆ ಅಭಿನವ್ ವಿಖ್ಯಾತ್ ಇದರ‌ ನಾಯಕ‌‌ ನಟ. ಕನ್ನಡದ ಜತೆಗೆ ಈ ಚಿತ್ರ ತಮಿಳಿನಲ್ಲೂ ನಿರ್ಮಾಣವಾಗುತ್ತಿದೆ. ವೃಂದ ಮಾಸ್ಟರ್ ನಿರ್ದೇಶನದ ಈ ಚಿತ್ರಕ್ಕೆ ದೀಪಾ ಪ್ರಶಾಂತ್ ಬಂಡವಾಳ ಹಾಕುತ್ತಿದ್ದಾರೆ. ‌ಉಳಿದಂತೆ‌ ನಟಿ ಜಯಶ್ರೀ ಪಾಲಿಗೆ ಇದು ಅದೃಷ್ಟದ ಅವಕಾಶ.

.  ಕಳೆದ ‌ವರ್ಷವಷ್ಟೇ ಪುಟ್ಟರಾಜು ಲವರ್ ಆಫ್ ಶಶಿಕಲಾ‌’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದರು.ಅ‌ ಚಿತ್ರ ತೆರೆ ಕಾಣುವ ಹೊತ್ತಿಗೆ ‘ ಅಧಿಕ ಪ್ರಸಂಗಿ’. ಹೆಸರಿನ ಹೊಸಬರ ಚಿತ್ರಕ್ಕೆನಾಯಕಿ‌ಆಗಿದ್ದರು.‌ ಕೊರೋನಾ ಕಾರಣ ಅದಿನ್ನೂ ಬಿಡುಗಡೆ ಆಗುವುದಕ್ಕೆ‌ ಸಿದ್ದತೆ ನಡೆಸಿರುವಾಗಲೇ, ದ್ವಿಭಾಷಾ ಚಿತ್ರವೊಂದಕ್ಕೆ ನಾಯಕಿ‌ಆಗಿದ್ದಾರೆ. ಅವರೇ ಹೇಳುವ ಹಾಗೆ ಇದೊಂದು‌ಅದೃಷ್ಟದ ಅವಕಾಶ‌.

‘ ನಿಜವಾಗಿಯೂ‌ ನನಗಿದು ‌ಅದೃಷ್ಟದ ಅವಕಾಶ. ಯಾಕಂದ್ರೆ ನಾನು ಇಷ್ಟು ಬೇಗ ಕಾಲಿವುಡ್ ಗೂ ಪರಿಚಯವಾಗಬಹುದು ಅಂತ ಯೋಚಿಸಿರಲಿಲ್ಲ.‌ಆದರೆ‌ ನಿರ್ದೇಶಕ ವೃಂದಾ ಮಾಸ್ಟರ್‌ ಕಡೆಯಿಂದಲೇ ಈ ಅವಕಾಶ ಬಂತು.‌ ಸಿನಿಮಾದ ಬಗ್ಗೆ ಹೇಳಿದರು.‌ ನಿರ್ಮಾಪಕರ‌ ಜತೆಗೂ ಮಾತುಕತೆ ನಡೆಯಿತು.‌ ಕತೆ‌ ಜತೆಗೆ ಪಾತ್ರದ ಬಗ್ಗೆ ಚರ್ಚೆ ಆಯಿತು. ಕತೆ‌ಜತೆಗೆ ಪಾತ್ರವೂ ಇಷ್ಟವಾಯಿತು. ಹಾಗಾಗಿ‌ಒಪ್ಪಿಕೊಂಡೆ’ ಎನ್ನುವ ‌ಜಯಶ್ರೀ ಅವರಿಗೆ ಪಾತ್ರ ಅಥವಾ ಕತೆ ಚೆನ್ನಾಗಿದೆ ಎನ್ನುವುದಕ್ಕಿಂದ  ಎರಡು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಎನ್ನುವುದೇ ಫುಲ್ ಎಕ್ಸೈಟ್ ಮೆಂಟ್ ತಂದಿದೆ.

Categories
ಸಿನಿ ಸುದ್ದಿ

ಎವಿಡೆನ್ಸ್‌ ಹಿಂದೆ ಬಂದ ಮಾನಸ ಜೋಶಿ

ವಿಭಿನ್ನ ಕ್ರೈಂ ಥ್ರಿಲ್ಲರ್ ನಲ್ಲಿ ರೋಬೋ ಗಣೇಶ್

ಮಾನಸ ಜೋಶಿ ಈ ಹೆಸರು ಕೇಳಿದಾಕ್ಷಣ , ಹಾಗೊಮ್ಮೆ ‘ಕಿರಗೂರಿನ ಗಯ್ಯಾಳಿಗಳು’ ಸಿನ್ಮಾ ನೆನಪಾಗುತ್ತೆ. ಪಕ್ಕಾ ಜಗಳಗಂಟಿ ಹೆಣ್ಣಾಗಿ ಗಮನ ಸೆಳೆದಿದ್ದ ಮಾನಸ ಜೋಶಿ ಆ ಬಳಿಕ ಹೊಸ ಬಗೆಯ ಕಥೆ, ಪಾತ್ರಗಳತ್ತ ಗಮನಹರಿಸಿದರು. ಈಗ ತಮಗೆ ಸರಿಹೊಂದುವ ಕಥೆ ,ಪಾತ್ರ ಹಾಗೂ ಒಳ್ಳೆಯ ತಂಡ ಸಿಕ್ಕ ಖುಷಿಯಲ್ಲಿ ಹೊಸದೊಂದು ಚಿತ್ರಕ್ಕೆ ಜೈ ಎಂದಿದ್ದಾರೆ.
ಹೌದು, ಮಾನಸ ಜೋಶಿ ಈ ಬಾರಿ ವಿಭಿನ್ನ ಕಥೆ, ಪಾತ್ರವಿರುವ ಚಿತ್ರ ಒಪ್ಪಿಕೊಂಡಿದ್ದು, ಹೊಸ ಗೆಟಪ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ ‘ಎವಿಡೆನ್ಸ್’ ಎಂದು ನಾಮಕರಣ ಮಾಡಲಾಗಿದೆ.

ಈ ಚಿತ್ರವನ್ನು ಪ್ರವೀಣ್ (ಪಿ ಆರ್) ನಿರ್ದೇಶನ ಮಾಡುತ್ತಿದ್ದಾರೆ. ಅವರದೇ ಶ್ರೀ ಧೃತಿ ಪ್ರೊಡಕ್ಷನ್ ಮೂಲಕ ತಯಾರಾಗುತ್ತಿರುವ ‘ಎವಿಡೆನ್ಸ್’ ಚಿತ್ರಕ್ಕೆ ಅರವಿಂದ್ ಕುಮಾರ್, ಸುರೇಂದ್ರ ಶೆಟ್ಟಿ, ನರಸಿಂಹಮೂರ್ತಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ವಿಶೇಷವೆಂದರೆ, ಈ ಚಿತ್ರದಲ್ಲಿ ಕೇವಲ ಎರಡು ಮುಖ್ಯ ಪಾತ್ರಗಳಿವೆ. ಮಾನಸ ಜೋಶಿ ಜೊತೆ ರೋಬೊ ಗಣೇಶ್ ನಟಿಸುತ್ತಿದ್ದಾರೆ. ಅವರಿಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದರೆ, ಮಾನಸ ಜೋಶಿ‌ ಮೊದಲ ಸಲ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥೆಯಾಗಿದ್ದು, ಒಂದೇ ರೂಮ್ ನಲ್ಲಿ ಕಥೆ ನಡಯಲಿದೆ. ಎರಡು ತಾಸು ಇಡೀ ಚಿತ್ರ ಒಂದೇ ರೂಮ್ ನಲ್ಲಿ ಸಾಗಲಿದೆ ಎಂಬುದು ವಿಶೇಷ.


ಚಿತ್ರಕ್ಕೆ ರವಿಸುವರ್ಣ ಛಾಯಾಗ್ರಹಣವಿದೆ. ಇದು ಅವರ 25ನೇ ಚಿತ್ರ ಎಂಬುದು ಮತ್ತೊಂದು ವಿಶೇಷ.
ಚಿತ್ರಕ್ಕೆ ಆರ್. ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ವೆಂಕಟೇಶ್ ಸಂಗೀತ, ಸಾಹಿತ್ಯವಿದೆ.
ಸೆಪ್ಟೆಂಬರ್ 9ರಂದು ‘ಎವಿಡೆನ್ಸ್’ ಗೆ ಪೂಜೆ ನಡೆಯಲಿದೆ. ಇಡೀ ಸಿನಿಮಾ ಕೇವಲ 7 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ

Categories
ಸಿನಿ ಸುದ್ದಿ

ನಿರ್ದೇಶಕ ಮನು ಕಲ್ಯಾಡಿ ಈಗ ಹೀರೋ‌ !

ಅವರದೇ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ ಹೊಸ‌ ಸಿನಿಮಾ

ಪ್ರಾರಂಭ‌‌ ಚಿತ್ರದ ನಿರ್ದೇಶಕ ಮನು‌ಕಲ್ಯಾಡಿ‌ ಅವರಿಗೆ ಇಂದು ಹುಟ್ಟು ಸಂಭ್ರಮ.‌‌ಪ್ರಾರಂಭ ಚಿತ್ರ ತಂಡವು ರಾತ್ರಿಯೇ ಕೇಕ್ ಕತ್ತರಿಸಿ, ಸಿಹಿ‌ಹಂಚುವ ಮೂಲಕ ಮನು‌ ಕಲ್ಯಾಡಿ ಅವರ ಹುಟ್ಟು ‌ಹಬ್ಬವನ್ನು‌ಅಚರಿಸಿತು.‌ಇದೇ‌ವೇಳೆ ನಿರ್ದೇಶಕ ಮನು ಕಲ್ಯಾಡಿ‌ ಅವರಿಗೆ ಸಹೋದರ ಜಗದೀಶ್ ಕಲ್ಯಾಡಿ ವಿಶೇಷವಾದ ಗಿಫ್ಟ್ ಕೊಟ್ಟರು. ಮನು‌ಕಲ್ಯಾಡಿ‌ ಅವರನ್ನೆ ಹೀರೋ ಆಗಿಸಿಕೊಂಡು ಹೊಸ ದೊಂದು‌ಸಿನಿಮಾ‌ ಮಾಡುವುದಾಗಿ‌ ಘೋಷಿಸಿದರು.

ಮನು ಕಲ್ಯಾಡಿ‌ ನಿರ್ದೇಶನದ’  ಪ್ರಾರಂಭ‌ ‘ಚಿತ್ರವು ಹೊರಬರುತ್ತಿದ್ದಂತೆ‌ ಮನುಕಲ್ಯಾಡಿ‌ ಆ‌ವರನ್ನು‌ ಹೀರೋ ಆಗಿ‌ಬೆಳ್ಳಿತೆರೆಗೆ ಪರಿಚಯಿಸುವುದಾಗಿ‌ಜಗದೀಶ್ ಕಲ್ಯಾಡಿ‌  ಭರವಸೆ ನೀಡಿದರು.‌ ಅಂದ‌ಹಾಗೆ‌ ಈ‌ಚಿತ್ರಕ್ಕೆ‌ಈಗಾಗಲೇ‌‌ನಿರ್ದೇಶಕರು‌ಫಿಕ್ಸ್ ಆಗಿದ್ದಾರೆ. ಸಾಯಿ‌ಕಿಶೋರ್ ತಲ್ಲ ಆ್ಯಕ್ಚನ್ ಹೇಳಲು‌ ರೆಡಿ ಆಗಿದ್ದಾರೆ. ಸ್ಕ್ರಿಪ್ಟ್ ‌ವರ್ಕ್ ಕೂಡ‌ಮುಗಿದಿದೆ.‌ ನಾಯಕಿ‌ಸೇರಿದಂತೆ‌ಉಳಿದ‌ಕಲಾವಿದರ‌ಆಯ್ಕೆ ಬಾಕಿಯಿದೆ.ಅಕ್ಟೋಬರ್ ‌ತಿಂಗಳಲ್ಲಿ‌ಈ‌ಚಿತ್ರ‌ಸೆಟ್ಟೇರುವುದು‌‌ ಗ್ಯಾರಂಟಿ ಯಂತೆ.‌

ಇನ್ನು‌ಎಲ್ಲವೂ‌ಅಂದುಕೊಂಡಂತೆಯೇ ಆಗಿದ್ದರೆ‌ಜಗದೀಶ್ ಕಲ್ಯಾಡಿ‌ನಿರ್ಮಾಣ‌ಹಾಗೂ‌ ಮನು‌ಕಲ್ಯಾಡಿ‌‌ ನಿರ್ದೇಶನದ ಪ್ರಾರಂಭ‌ಚಿತ್ರ ರಿಲೀಸ್‌ಆಗಬೇಕಿತ್ತು.‌ ಆದರೆ‌ಕೊರೋನಾ‌ ಕಾರಣ‌ಎಲ್ಲವೂ‌‌ ಏರುಪೇರಾಯಿತು.‌ಈಗ‌ ಕೊರೋನಾ‌‌ ಭೀತಿ‌ ಒಂದಷ್ಟು ತಿಳಿಯಾಗುತ್ತಿದೆ.‌ ನಿರ್ಮಾಪಕ‌ ಜಗದೀಶ್  ಕಲ್ಯಾಡಿ  ಪ್ರಾರಂಭ ರಿಲೀಸ್ ಗೆ‌ಸಿದ್ದತೆ‌‌ನಡೆಸಿದ್ದಾರೆ.‌ಅದು ತೆರೆಗೆ‌ ಬರುತ್ತಿದ್ದಂತೆ ಮನು‌ಕಲ್ಯಾಡಿ‌ ಅಭಿನಯದ ಚೊಚ್ಚಲ ಚಿತ್ರ ಸೆಟ್ಟೇರಲಿದೆ‌‌  ಎನ್ನುವುದು  ತಂಡದ ಅಧಿಕೃತ ಮಾಹಿತಿ.

Categories
ಸಿನಿ ಸುದ್ದಿ

ನಿರ್ದೇಶಕ ಮನು ಕಲ್ಯಾಡಿ ಈಗ ಹೀರೋ!

ಅವರದೇ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ ಹೊಸ‌ ಸಿನಿಮಾ

‘ಪ್ರಾರಂಭ‌‌’ ಚಿತ್ರದ ನಿರ್ದೇಶಕ ಮನು‌ಕಲ್ಯಾಡಿ‌ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.‌‌ಪ್ರಾರಂಭ ಚಿತ್ರ ತಂಡವು ರಾತ್ರಿಯೇ ಕೇಕ್ ಕತ್ತರಿಸಿ, ಸಿಹಿ‌ಹಂಚುವ ಮೂಲಕ ಮನು‌ ಕಲ್ಯಾಡಿ ಅವರ ಹುಟ್ಟು ‌ಹಬ್ಬವನ್ನು‌ಅಚರಿಸಿತು.‌ಇದೇ‌ವೇಳೆ ನಿರ್ದೇಶಕ ಮನು ಕಲ್ಯಾಡಿ‌ ಅವರಿಗೆ ಸಹೋದರ ಜಗದೀಶ್ ಕಲ್ಯಾಡಿ ವಿಶೇಷವಾದ ಗಿಫ್ಟ್ ಕೊಟ್ಟರು. ಮನು‌ಕಲ್ಯಾಡಿ‌ ಅವರನ್ನೆ ಹೀರೋ ಆಗಿಸಿಕೊಂಡು ಹೊಸ ದೊಂದು‌ಸಿನಿಮಾ‌ ಮಾಡುವುದಾಗಿ‌ ಘೋಷಿಸಿದರು.
ಮನು ಕಲ್ಯಾಡಿ‌ ನಿರ್ದೇಶನದ’ ‘ಪ್ರಾರಂಭ‌ ‘ಚಿತ್ರವು ಹೊರಬರುತ್ತಿದ್ದಂತೆ‌ ಮನುಕಲ್ಯಾಡಿ‌ ಆ‌ವರನ್ನು‌ ಹೀರೋ ಆಗಿ‌ಬೆಳ್ಳಿತೆರೆಗೆ ಪರಿಚಯಿಸುವುದಾಗಿ‌
ಜಗದೀಶ್ ಕಲ್ಯಾಡಿ‌ ಭರವಸೆ ನೀಡಿದರು.‌ಅಂದ‌ಹಾಗೆ‌ಈ‌ಚಿತ್ರಕ್ಕೆ‌ಈಗಾಗಲೇ‌‌ನಿರ್ದೇಶಕರು‌ಫಿಕ್ಸ್ ಆಗಿದ್ದಾರೆ. ಸಾಯಿ‌ಕಿಶೋರ್ ತಲ್ಲ ಆ್ಯಕ್ಚನ್ ಹೇಳಲು‌ ರೆಡಿ ಆಗಿದ್ದಾರೆ. ಸ್ಕ್ರಿಪ್ಟ್ ‌ವರ್ಕ್

ಕೂಡ‌ಮುಗಿದಿದೆ.‌ನಾಯಕಿ‌ಸೇರಿದಂತೆ‌ಉಳಿದ‌ಕಲಾವಿದರ‌ಆಯ್ಕೆ‌ಬಾಕಿಯಿದೆ.‌‌ಅಕ್ಟೋಬರ್ ‌ತಿಂಗಳಲ್ಲಿ‌ಈ‌ಚಿತ್ರ‌ಸೆಟ್ಟೇರುವುದು‌‌ ಗ್ಯಾರಂಟಿ ಯಂತೆ.‌ಇನ್ನು‌ಎಲ್ಲವೂ‌ಅಂದುಕೊಂಡಂತೆಯೇ ಆಗಿದ್ದರೆ‌ಜಗದೀಶ್ ಕಲ್ಯಾಡಿ‌ನಿರ್ಮಾಣ‌ಹಾಗೂ‌ ಮನು‌ಕಲ್ಯಾಡಿ‌‌ ನಿರ್ದೇಶನದ ಪ್ರಾರಂಭ‌ಚಿತ್ರ ರಿಲೀಸ್‌ಆಗಬೇಕಿತ್ತು.‌ಆದರೆ‌ಕೊರೋನಾ‌ ಕಾರಣ‌ಎಲ್ಲವೂ‌‌ ಏರುಪೇರಾಯಿತು.‌ಈಗ‌ ಕೊರೋನಾ‌‌ ಭೀತಿ‌ ಒಂದಷ್ಟು ತಿಳಿಯಾಗುತ್ತಿದೆ.‌ ನಿರ್ಮಾಪಕ‌ ಜಗದೀಶ್ ಕಲ್ಯಾಡಿ ಪ್ರಾರಂಭ ರಿಲೀಸ್ ಗೆ‌ಸಿದ್ದತೆ‌‌ನಡೆಸಿದ್ದಾರೆ.‌ಅದು ತೆರೆಗೆ‌ ಬರುತ್ತಿದ್ದಂತೆ ಮನು‌ಕಲ್ಯಾಡಿ‌ ಅಭಿನಯದ ಚೊಚ್ಚಲ ಚಿತ್ರ ಸೆಟ್ಟೇರಲಿದೆ‌‌ ಎನ್ನುವುದು ತಂಡದ ಅಧಿಕೃತ ಮಾಹಿತಿ.

Categories
ಸಿನಿ ಸುದ್ದಿ

ಮಳೆಯಲಿ, ಜೊತೆಯಲಿ ‘ ಕಿಯಾ’ ಳೊಂದಿಗೆ ‘ಸಂಚಾರಿ’!

ತಲೆದಂಡದ ಗುಂಗು, ಮಲೆನಾಡಿನ ಮೆರಗು

ಎಲ್ಲೆಡೆ‌ಹಸಿರು, ಬೆಟ್ಟ ಗುಡ್ಡ,ಅವುಗಳ‌ ನಡುವೆ ಬೋರ್ಗೆರೆಯುವ ಜಲಪಾತ, ತಣ್ಣನೆಯ ವಾತಾವರಣ, ಮನಸ್ಸಿಗೆ ಹಿತ ನೀಡುವ ಹಿತವಾದ ಗಾಳಿ, ಅಲಲ್ಲಿ ಕಾಫಿತೋಟ, ಮಧುರವಾಗಿ ಕೇಳಿಸುವ ಪ್ರಾಣಿ -ಪಕ್ಷಿ ಸಂಕುಲದ ಸಪ್ಪಳ…ಅಬ್ಬಾ, ಕಾಫಿನಾಡು‌ ಚಿಕ್ಕಮಗಳೂರು ಅಂದ್ರೇನೆ ಹಾಗೆ. ಅಲ್ಲಿದ್ದವರಿಗಿಂತ ಬಯಲು‌ ನಾಡಿನ ಜನರಿಗೆ ಅದೊಂದು‌ ಸ್ವರ್ಗದ ಸೀಮೆ.‌ ಅದರಲ್ಲೂ‌ ಮಳೆಗಾಲದ ಮಳೆಯೊಳಗಡೆ ಚಿಕ್ಕಮಗಳೂರಿಗೆ ಕಾಲಿಟ್ಟರೆ ಅದೊಂದು ರೋಮಾಂಚಕಾರಿ ಅನುಭವ.ಸದ್ಯಕ್ಕೀಗ ಚಿಕ್ಕಮಗಳೂರಿಗೆ ಹೋಗಿ ಅಂತಹ ಅನುಭವ ಕಂಡು‌ ಬಂದಿದ್ದಾರೆ ‌ನಟ ಸಂಚಾರಿ ವಿಜಯ್ !

ಸಂಚಾರಿಯವರ ಈ ಸಂಚಾರ ಯಾಕಾಗಿ? ಯಾವುದಾದ್ರೂ ಚಿತ್ರೀಕರಣವೇ, ಇಲ್ಲವೇ ಸುಮ್ನೆ ಕಣ್ಣೋಟದ ಪ್ರಯಾಣವೇ?‌ ನಟ ವಿಜಯ್ ಅವರ ಪ್ರಕಾರ ಇವೆರಡೂ ಅಲ್ಲ. ಕೊರೋನಾ‌ ಕಾಲದಲ್ಲಿ‌ಚಿತ್ರೀಕರಣ ಇಲ್ಲ, ಹೊರ ಊರುಗಳಿಗೂ ಹೋಗಿರಲಿಲ್ಲ ಎನ್ನುವುದು ನಿಜವಾಗಿದ್ದರೂ, ನಾನು ಚಿಕ್ಕಮಗಳೂರು ಹೋಗಿದ್ದು ಒಂದು ಖಾಸಗಿ ಕೆಲಸದ ಮೇಲೆ. ಹಾಗೆಯೇ ಸಮಯ ಇತ್ತು, ಅದನ್ನೇ ಬಳಸಿಕೊಂಡು‌ ಚಿಕ್ಕಮಗಳೂರಿನಿಂದ ಬಾಳೆ ಹೊನ್ನುರು ಮಾರ್ಗವಾಗಿ ಶೃಂಗೇರಿಗೆ ಹೋಗಿ ಬಂದೆ.

ಅವರು ಏನೇ ಹೇಳಿದ್ರೂ ಅವರ ಈ ಜಾಲಿ‌ಮೂಡ್ ನ ಪ್ರವಾಸಕ್ಕಿದ್ದ ಪ್ರೇರಣೆ ‘ಕಿಯಾ ‘! ಉಳಿದಂತೆ‌ ಅವರೀಗ ತಲೆ ದಂಡ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ‌ ಚಿತ್ರೀಕರಣ ಮುಗಿಸಿರುವ ಮೇಲೊಬ್ಬ ಮಾಯಾವಿ, ಪುಕ್ಸಟೆ ಲೈಪು ರಿಲೀಸ್ ಗೆ ರೆಡಿ ಆಗಿವೆ. ಮತ್ತೆ ಮೂರು ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ.

ಕೊರೋನಾ ಭೀತಿ ದೂರವಾದರೆ ಅವು ಇಷ್ಟರಲ್ಲಿಯೇ ಶುರುವಾಗಲಿವೆ. ಬಹುತೇಕ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಆ ಸಿನಿಮಾಗಳಿಗೆ‌‌ಚಾಲನೆ ಸಿಗಬಹುದು ಎನ್ನುವ ಮಾತು‌ಅವರದು. ಉಳಿದಂತೆ‌ ಇಲ್ಲಿ ‘ ಕಿಯಾ’ ಬೇರಾರು ಅಲ್ಲ.ಅವರು ತೆಗೆದುಕೊಂಡಿರುವ ಹೊಸ‌ಕಾರು!

Categories
ಗಾಳಿ ಮಾತು

ಬಾಳಿ ಬದುಕುವ ಕುರಿತು ಉಪದೇಶ ಕೊಟ್ರು‌‌‌‌ ಈ ನಟಿ ! ಈ ನಟಿ ಈ ಮಾತು ಯಾಕೆ ಹೇಳಿದ್ರು ಗೊತ್ತಾ?

 

ಬಾಳು ಇರುವುದು ಬದುಕುವುದಕ್ಕಾಗಿ, ಬದುಕಿ ಬೆಳೆಯುವುದಕ್ಕಾಗಿ’

 

 

 

ಇವರು ‘ತರಲೆ ನನ್ಮಕ್ಳು ‘ಚಿತ್ರದೊಂದಿಗೆ ಬಣ್ಣದ ಲೋಕಕ್ಕೆ ಬಂದ ನಟಿ. ಹೆಸರು ಅಂಜನಾ.ಅದು‌ ಯಾಕೋ‌ ಸರಿ ಬರಲಿಲ್ಲ ಅಂತ ನ್ಯೂಮ್ಯಾರಾಲಜಿ ಪ್ರಕಾರ ಸುಕೃತಾ ದೇಶಪಾಂಡೆ ಅಂತ ಹೆಸರು ಬದಲಾಯಿ ಸಿಕೊಂಡರು.‌ಹಾಗಂತ ಕೈ ತುಂಬಾ ಅವಕಾಶ ಪಡೆದು, ರಾತ್ರೋರಾತ್ರಿ ಸ್ಟಾರ್ ಆದ್ರಾ? ಅದು ಇಲ್ಲ.‌ ಹೆಸರು ಬದಲಾದರೂ ಹಣೆ ಬರಹ ಬದಲಾಗಬೇಕಲ್ಲ?ಮೊದಲ‌ಸಿನಿಮಾಕ್ಕೆ‌ಅವರು ನಾಯಕಿ‌ಅಂತ ಆಗಿದ್ದಷ್ಟೇ ಲಾಭ.‌ಅದು ಅಂತಹ ಸಕ್ಸಸ್ ಕಾಣಲಿಲ್ಲ.ಇತ್ತ ಅಂಜನಾ‌ ಅಲಿಯಾಸ್ ಸುಕೃತಾ ಅವರಿಗೂ ಹೆಸರು ತಂದು ಕೊಡಲಿಲ್ಲ. ಅವಕಾಶಗಳೂ ಹುಡುಕಿ ಬರಲಿಲ್ಲ. ಹಾಗಂತ ಅವರಿಗೆ ಬೇರೆಯವರ ಹಾಗೆ ನಟಿಯಾಗಿ ಮಿಂಚುವ ಹುಚ್ಚು, ಕೆಚ್ಚು ಬಿಡಲಿಲ್ಲ. ಅತ್ತ ಮೆಲ್ಲನೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು. ಅಲ್ಲೂ‌ ಒಂದೆರೆಡು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಯಾವೊಂದು ಅಲ್ಲಿ ಸುದ್ದಿಯಾಗಲಿಲ್ಲ. ಪುನಃ ಗಾಂಧಿನಗರದತ್ತ ಮುಖ ಮಾಡಿದ ಈ ನಟಿಗೆ ಸಿಕ್ಕಿದ್ದು “ಪ್ರೀತಿಯ ರಾಯಭಾರಿ’ ಎಂಬ ಹೊಸಬರ ಸಿನಿಮಾ.

ಅದರಿಂದಲೇ ಈಗ ನಟಿಯಾಗಿ ಒಂದಷ್ಟು ಗುರುತಿಸಿಕೊಂಡಿರುವ ಸುಕೃತಾ ದೇಶಪಾಂಡೆ, ಕೊರೋನಾ ಕಾರಣಕ್ಕೆ ಸಿನಿಮಾ‌ ಗಿನಿಮಾ‌ಅಂತೆಲ್ಲ ತಲೆ‌ಕಡೆಸಿಕೊಳ್ಳದೇ ಮನೆಯಲ್ಲಿದ್ದು‌ಬದುಕಿನ‌ ಪಾಠ‌ಕಲಿಯುತ್ತಿದ್ದಾರೆ. ಪಾಠ ಅಲ್ಲ‌ಅದು‌ ಉಪದೇಶ. ‘ ಬಾಳು ಇರುವುದು ಬದುಕುವುದಕ್ಕಾಗಿ; ಬದುಕಿ ಬೆಳೆಯುವುದಕ್ಕಾಗಿ.’ ಈ‌ ಮಾತನ್ನು ಹೇಳಿದ್ದಾರೋ‌ ಗೊತ್ತಿಲ್ಲ.‌ಅದರೆ ಈ‌ಮಾತನ್ನು ಸುಕೃತಾ ತಮ್ಮ‌ ಫೇಸ್ ಬುಕ್ ಖಾತೆಯಲ್ಲಿ ‌ಹಾಕಿಕೊಂಡು, ಗಮನ ಸೆಳೆದಿದ್ದಾರೆ. ‌ಅವರ‌ಕಾರ್ಯಕ್ಕೆ‌ಗಮನ‌ ಅಥವಾ ಕುತೂಹಲ‌ ಯಾಕೆ‌ ಗೋತ್ತಾ?

 

ಯಾವುದೋ ಕಾಣಕ್ಕೆ‌ಇವತ್ತು ಸೆಲಿಬ್ರಿಟಿಗಳು ಸುಸೈಡ್ ಹಂತಕ್ಕೆ ಯೋಚಿಸುತ್ತಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣ ಬೆಚ್ಚಿ ಬೀಳಿಸಿದೆ. ಅದಿರಲಿ, ಬಿಗ್ ಬಾಸ್ ಖ್ಯಾತಿಯ ಕನ್ನಡದ ನಟಿ ಜಯಶ್ರೀ ರಾಮಯ್ಯ ಕೂಡ ಅಂತಹ‌ ಕೆಟ್ಟ ವಿಚಾರಕ್ಮೆ ಅಲೋಚಿಸಿ‌ದೊಡ್ಡ ಸುದ್ದಿ ಆಗಿದ್ದರು.‌ನಾಗಮಂಡಲದ ನಟಿ‌ ವಿಜಯಲಕ್ಷ್ಮಿ‌ ಕೂಡ ಅದೇ ಕಾರಣಕ್ಕೆ ಸಾಕಷ್ಟು ಸುದ್ದಿಯಾದರು. ಇಂತಹ ಕ್ಷೀಣ ಮನಸ್ಸು ಗಳ‌ನಡುವೆ ನಟಿ‌ಸುಕೃತಾ ಬಾಳಿ ಬದುಕುವ ಮಹತ್ವ ಮಾತನ್ನು ತಮ್ಮ‌ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡು‌‌ ಬಾಳು‌ಬದುಕುವುದಕ್ಕಾಗಿಯೇ ಹೇಳಿರುವುದು ವಿಶೇಷ.

Categories
ಸೌತ್‌ ಸೆನ್ಸೇಷನ್

ತುಂಟರಿ ತುಂಟಿಯ ಬೆನ್ನತ್ತಿದವರ ಸಂಖ್ಯೆ 2 ಲಕ್ಷ!

ಅಭಿಮಾನಿಗಳ‌ ಅಭಿಮಾನಕ್ಕೆ ಧನ್ಯವಾದ ಹೇಳಿದ ನುಸ್ರುತ್ ಚೆಲುವೆ ಲತಾ ಹೆಗಡೆ

ಕಾಲ ಬದಲಾಗಿದೆ. ಒಬ್ಬ ನಟ ಅಥವಾ ನಟಿಗೆ ಎಷ್ಟು ಜನ ಅಭಿಮಾನಿಗಳಿದ್ದಾರೆ, ಅವರ ಸ್ಟ್ರೆಂತ್ ಏನು ಅಂತ ಈಗ ಸೋಷಲ್ ಮೀಡಿಯಾ ತೋರಿಸಿ‌ಬಿಡುತ್ತದೆ. ಸೋಷಲ್ ಮೀಡಿಯಾ ದಲ್ಲಿ ಅವರು ತಮ್ಮ‌ಖಾತೆ ತೆರೆದರೆ ಅವರನ್ನು ಹಿಂಬಾಲಿಸುವ ಅಭಿಮಾನಿಗಳು ಎಷ್ಟು ಅಂತ ಗೊತ್ತಾಗಿ ಬಿಡುತ್ತದೆ. ಸದ್ಯಕ್ಕೆ ಅಂತಹದೇ ಒಂದು ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡು ಖುಷಿಯಲ್ಲಿದ್ದಾರೆ ನುಸ್ರುತ್ ಖ್ಯಾತಿಯ ನಟಿ ಲತಾ ಹೆಗಡೆ.

ಅತಿರಥ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ವಿದೇಶ ಮೂಲದ ಕನ್ನಡತಿ ಲತಾ ಹೆಗಡೆ. ಮೂಲತಃ ಕನ್ನಡದವೇ ಆದರೂ, ನ್ಯೂಜಿಲೆಂಡ್ ನಿವಾಸಿ ಈ ಚೆಲುವೆ. ಇಂಜಿನಿಯರಿಂಗ್ ಮುಗಿಸಿ, ಸಾಫ್ಟ್‌ವೇರ್ ಉದ್ಯೋ ಗಿ ಆಗಿದ್ದರೂ, ನಟಿಯಾಗುವ ಆಸೆಯಿಂದ ತೆಲುಗಿನ ‘ತುಂಟರಿ’ ಚಿತ್ರದೊಂದಿಗೆ ನಟಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟ ಹೆಗ್ಗಳಿಕೆ ಅವರದು.‌ಅಲ್ಲಿಂದ ಆ‌ದಿನಗಳು ಚೇತನ್ ಜೋಡಿಯಾಗಿ ‘ಅತಿರಥ’ ತವರೂರು ಕನ್ನಡಕ್ಕೂ ಬಂದರು ಎನ್ನುವುದೀಗ ಎಲ್ಲರಿಗೂ ಗೊತ್ತಿರುವ ವಿಚಾರ.ಈಗ ಸೋಷಲ್ ಮೀಡಿಯಾದಲ್ಲಿ‌ಅವರ ಫಾಲೋವರ್ ಸಂಖ್ಯೆ ಎರಡು ಲಕ್ಷ ದಾಟಿದೆ.‌‌


  • ಒಬ್ಬ ನಟಿಯಾಗಿ ಲತಾ‌ಹೆಗಡೆಗೆ ಒದು ಭಾರೀ‌ ಸಂತಸ ಮೂಡಿಸಿದೆ. ಆ‌‌ಸಂತೋಷ‌
    ಮತ್ತು ಸಂಭ್ರಮವನ್ನು ಅವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಅಭಾರಿಯಾಗಿದ್ದೇನೆ.‌ನಿಮ್ಮ‌ಈ ಬೆಂಬಲ‌ ಹೀಗೆಯೇ ನಿರಂತರವಾಗಿರಲಿ’ ಎಂದು ಸ್ಟೇಟಸ್ ಪೋಸ್ಟ್ ಮಾಡಿದ್ದಾರೆ.
  • ಅಂದ ಹಾಗೆ ವಿನಯ್ ರಾಜ್ ಕುಮಾರ್ ಅಭಿನಯದ ‘ಅನಂತು ವರ್ಸಸ್ ನುಸ್ರುತ್ ‘ಚಿತ್ರದಲ್ಲಿನ‌ಮುಸ್ಲಿಂ ಹುಡುಗಿ ಪಾತ್ರದಲ್ಲಿಲತಾ ಅದ್ಬುತವಾಗಿ ಅಭಿನಯಿಸಿದ್ದರು. ಸದ್ಯಕ್ಕೆ ತಮ್ಮದೇ ಕೆಲಸಗಳಲ್ಲಿ ಬ್ಯುಸಿ ಆಗಿರುವ ಅವರು, ಕನ್ನಡದ ಜತೆಗೆ ತೆಲುಗಿನಲ್ಲೂ‌ ಮತ್ತಷ್ಟು ಅವಕಾಶಗಳೊಂದಿಗೆ ಸಕ್ರಿಯವಾಗುವ ನಿರೀಕ್ಷೆಯಲ್ಲಿದ್ದಾರೆ.
error: Content is protected !!