Categories
ಬ್ರೇಕಿಂಗ್‌ ನ್ಯೂಸ್

ಉಪ್ಪಿ ಹುಟ್ಟುಹಬ್ಬಕ್ಕೆ ‘ಕಬ್ಜ’ ಚಿತ್ರದ ಥೀಮ್ ಪೋಸ್ಟರ್ ಲಾಂಚ್

– ಸೆಪ್ಟೆಂಬರ್ 17 ಕ್ಕೆ  ನಟ ಉಪೇಂದ್ರ ಹುಟ್ಟು ಹಬ್ಬ

-‘ ಕಬ್ಜ’ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ.

– ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಬಿಡುಗಡೆ

–  ಉಪೇಂದ್ರ  ಅಭಿನಯ ಹಾಗೂ ಆರ್ . ಚಂದ್ರು ಕಾಂಬಿನೇಷನ್ ಸಿನಿಮಾ

– ಅದ್ದೂರಿ ವೆಚ್ಚದ ಪ್ಯಾನ್ ಇಂಡಿಯಾ ಚಿತ್ರ

– ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ ಚಿತ್ರ

– ಸೆ.17ರ ಸಂಜೆ 5 ಕ್ಕೆ ಕಬ್ಜ ಥೀಮ್ ಪೋಸ್ಟರ್ ಲಾಂಚ್

– ಬೆಂಗಳೂರು, ಹೈದರಾಬಾದ್ ಸೇರಿ ಹಲವೆಡೆ ಚಿತ್ರೀಕರಣ

–  ಜಗಪತಿ ಬಾಬು, ರಾಹುಲ್ ಜಗತಪ್,ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು ಸೇರಿ ದೊಡ್ಡ ತಾರಾಗಣ ಇರುವ ಚಿತ್ರ.

Categories
ಸಿನಿ ಸುದ್ದಿ

ಗಾಂಧಿ ಆದರ್ಶಗಳಿಗೆ ಮನಸೋತ ನಾಗೇಂದ್ರ ಪ್ರಸಾದ್ ಪುತ್ರಿ!

ಗಾಂಧಿ‌ ಮತ್ತು‌ನೋಟು’ ಚಿತ್ರದೊಂದಿಗೆ ಬೆಳ್ಳಿತೆರೆಗೆ ದ್ವಿವಿಜಾ

 

ಗಾಂಧಿ‌ ಕುರಿತು ಕನ್ನಡದಲ್ಲೇ ಸಾಕಷ್ಟು ಸಿನಿಮಾ‌ ಮಂದಿವೆ.‌ಇತ್ತೀಚೆಗಷ್ಟೇ ನಿರ್ದೇಶಕ ಶೇಷಾದ್ರಿ ನಿರ್ದೇಶಿಸಿ, ನಿರ್ಮಾಣ ಮಾಡಿದ ‘ಮೋಹನದಾಸ’ ದೊಡ್ಡ ಸುದ್ದಿ ಮಾಡಿದ್ದು ನಿಮಗೂ ಗೊತ್ತು.‌ಈಗ ಮತ್ತೊಂದು‌ ಗಾಂಧಿ ಕುರಿತ  ಚಿತ್ರ ಕನ್ನಡದಲ್ಲೇ ಸದ್ದು‌ಮಾಡುತ್ತಿದೆ. ಹಾಗಂತ ಇದು ಕೂಡ ಗಾಂಧಿ‌‌ ಕುರಿತ ಬಯೋಫಿಕ್ ಅಲ್ಲ. ಬದಲಿಗೆ ಗಾಂಧಿ ಆದರ್ಶ ಗಳಿಗೆ ಮನಸೋತ ಒಬ್ಬ ಬಾಲಕಿಯ ಕತೆ. ಆ ಚಿತ್ರದ ಹೆಸರು ಗಾಂಧಿ ಮತ್ತು‌ ನೋಟು.

……………

ಆ‌ ಹುಡುಗಿಯ ಹೆಸರು ಸುಕ್ರಿ. ಕುಗ್ರಾಮವೊಂದರಲ್ಲಿ ಓದುತ್ತಿರುವ ಬಾಲಕಿ. ಆಕೆಗೆ ಗಾಂಧಿ ಮತ್ತು ಗಾಂಧಿ‌ಯ  ಆದರ್ಶಗಳ ಮೇಲೆ‌ ತೀವ್ರ ಆಸಕ್ತಿ.  ಪರಿಣಾಮ ಗಾಂಧಿ‌ ಆದರ್ಶಗಳನ್ನು ಓದುತ್ತಾ ಹೋದಂತೆ, ಜೀವನದಲ್ಲೂ ಅಳವಡಿಸಿಕೊಳ್ಳಲು‌ ಮುಂದಾಗುತ್ತಾಳೆ. ಸತ್ಯ ಹೇಳುತ್ತಾಳೆ.‌‌  ದುಶ್ವಟಗಳಿಂದ ದೂರ ಉಳಿಯುತ್ತಾಳೆ. ಮನೆಯಲ್ಲಿ‌ ಅವರಪ್ಪ ವಿಪರೀತ ಕುಡುಕ.‌ ದುಶ್ಚಟದಿಂದ‌ ತನ್ನ‌ ತಂದೆ ದೂರವಿರುವಂತೆ ಒತ್ತಾಯಿಸು ತ್ತಾಳೆ.‌ಹಾಗೆಯೇ ಸಮಾಜದಲ್ಲಿ ಕೆಟ್ಟದ್ದು‌ನಡೆದರೆ ಖಂಡಿಸುತ್ತಾಳೆ. ದುಶ್ಚಟದಿಂದ ಜನರು ದೂರವಿರುವಂತೆ ಹೋರಾಡುತ್ತಾಳೆ.‌ ಆದರೆ ಈ‌ ಸಮಾಜ‌ ಅಥವಾ ವ್ಯವಸ್ಥೆ ಒಬ್ಬ ಬಾಲಕಿಯ ಮಾತನ್ನು ಅಷ್ಟು ಸುಲಭವಾಗಿ‌ ಒಪ್ಪಿಕೊಳ್ಳುತ್ತಾ? ಮುಂದೇನಾಗುತ್ತೆ ಎನ್ನುವುದು ಈ ಚಿತ್ರದ ಕತೆ.‌ ಅಂದ ಹಾಗೆ ಈ ಚಿತ್ರದ ಹೆಸರು’ ಗಾಂಧಿ‌ ಮತ್ತು ನೋಟು’ .ಇದು ಯೋಗಿ ದೇವಗಂಗೆ ನಿರ್ದೇಶನದ ಚಿತ್ರ.‌ ಈ‌ಹಿಂದೆ‌ಇವರು ಸೆಕೆಂಡ್ ಹಾಫ್ ಹೆಸರಿನ ಚಿತ್ರವೊಂದನ್ನು ‌ನಿರ್ದೇಶಿಸಿದ್ದರು. ಆದಾದ‌ ನಂತರ‌ಇದು ಅವರ ಮತ್ತೊಂದು ಪ್ರಾಜೆಕ್ಟ್.ವಿಶೇಷ ಅಂದ್ರೆ,  ಇದರ ಪ್ರಮುಖ‌ ಪಾತ್ರಧಾರಿ‌‌ ಬಾಲಕಿ‌ ಸುಕ್ರಿಯಾಗಿ ಕಾಣಿಸಿಕೊಳ್ಳುತ್ತಿರುವವರು ಪುಟಾಣಿ ದ್ವಿವಿಜಾ. ಈಕೆ ಸಾಹಿತಿ ನಾಗೇಂದ್ರ ಪ್ರಸಾದ್ ಪುತ್ರಿ. ಈ ಚಿತ್ರದೊಂದಿಗೆ ಬಾಲ‌ನಟಿಯಾಗಿ ಚಿತ್ರರಂಗಕ್ಕೆ‌ ಎಂಟ್ರಿಯಾಗುತ್ತಿದ್ದಾಳೆ. ಅಪ್ಪ ಸಿನಿಮಾ‌ ನಿರ್ದೇಶನ ,ಸಾಹಿತ್ಯ ‌ಮತ್ತು ನಟನೆಯಲ್ಲಿ ಮಿಂಚುತ್ತಿದ್ದರೆ, ತಂದೆಯಂತೆಯೇ ಮಗಳು ಕೂಡ  ಬಾಲ‌ನಟಿಯಾಗಿ ಬೆಳ್ಳಿ ಪರದೆಯಲ್ಲಿ‌ ಮಿಂಚಲು ರೆಡಿಯಾಗಿದ್ದಾಳೆ. ಮಗಳನ್ನು ಸಿನಿಮಾ‌ರಂಗಕ್ಕೆ‌ಪರಿಚಯಿಸುತ್ತಿರುವುದಕ್ಕೆ ಪ್ರಮುಖ‌ಕಾರಣ ಕತೆ. ಅದರಲ್ಲೂ ಅದು ಗಾಂಧಿ‌ ಆದರ್ಶಗಳ‌ ಮೇಲಿನ ಕತೆ.‌ ಮೊದಲ‌ ಬಾರಿಗೆ ಅಂತಹ ಸಿಕ್ಕಿತು.‌ಹಾಗಾಗಿ‌ ನಿರ್ದೇಶಕರ ಮಾತಿಗೆ ಗೌರವ ಕೊಟ್ಟು ಮಗಳನ್ನು‌ಈ‌ ಚಿತ್ರದಲ್ಲಿ ಅಭಿನಯಿಸಲು ಕಳುಹಿಸಿದೆ’ ಎನ್ನುತ್ತಾರೆ ಸಾಹಿತಿ ನಾಗೇಂದ್ರ ಪ್ರಸಾದ್.ದ್ವಿವಿಜಾ ಜತೆಗೆ ಸಾಕಷ್ಟು ಮಂದಿ ಅನುಭವಿ ಕಲಾವಿದರು ಚಿತ್ರದಲ್ಲಿದ್ದಾರೆ.


ಇನ್ನು ಭವಾನಿ ಕ್ರಿಯೇಷನ್ಸ್ ಮೂಲಕ ಸುಧಾರಾಣಿ, ವೀಷಾ ಪದ್ನನಾಭ್ ಹಾಗೂ ಮಂಜುನಾಥ್ ಎಂಬುವರು ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಸಾಹಿತ್ಯ ನಾಗೇಂದ್ರ ಪ್ರಸಾದ್ ಬರೆದಿದ್ದು, ಗುರುಪ್ರಸಾದ್ ಸಂಭಾಷಣೆ ಚಿತ್ರಕ್ಕಿದೆ‌.‌ ವಾಣಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿರ್ದೇಶಕ ಯೋಗಿ ಪ್ರಕಾರ ಚಿತ್ರಕ್ಕೆ ಚಿತ್ರೀಕರಣ ಮುಗಿದಿದೆ. ಶಿವಮೊಗ್ಗ, ಹೊಸನಗರ, ಕೊಡಚಾದ್ರಿ‌ ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಅದರ ಜತೆಗೆ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಕೂಡ ಕಂಪ್ಲೀಟ್ ಆಗಿದೆ‌ . ಚಿತ್ರ ರಿಲೀಸ್ ಗೆ ರೆಡಿಯಿದ್ದು, ಸೂಕ್ತ ಸಮಯಕ್ಕೆ ಕಾಯುತ್ತಿದೆ ಚಿತ್ರತಂಡ.

Categories
ಸಿನಿ ಸುದ್ದಿ

ವಿಷ್ಣುವರ್ಧನ್ ಅಲ್ಲ, ಇದು ಟಿಪ್ಪುವರ್ಧನ್!

 ಟ್ರೈಲರ್ ಬಿಡುಗಡೆ ಮೂಲಕ‌ ಸದ್ದು ಮಾಡಿದ ಏಕವ್ಯಕ್ತಿ ಸಿನಿಮಾ

ಕೋರೋನಾ ಸಂಕಷ್ಟದ ಪರಿಣಾಮ‌ ಚಿತ್ರಮಂದಿರಗಳು ಬಾಗಿಲು ಮುಚ್ಚಿರುವುದು ನಿಮಗೆ ಗೊತ್ತಿರುವ ವಿಚಾರ. ಹಾಗಾಗಿ ಈಗ ನಿರ್ಮಾಪಕರು ತಮ್ಮ ಚಿತ್ರಗಳ ಬಿಡುಗಡೆಗೆ ಪರ್ಯಾಯ ಮಾರ್ಗ ಕಂಡುಕೊಂಡಿದ್ದು, ಒಟಿಟಿ‌ ಮೂಲಕ ಬಿಡುಗಡೆ ಆಗುತ್ತಿರುವ ಸಿನಿಮಾಗಳ‌ಸಾಲಿಗೆ ಈಗ ಹೊಸ ಸೆರ್ಪಡೆ ಟಿಪ್ಪುವರ್ಧನ. ಇದು ನೈಜ ಘಟನೆಗಳ ಸುತ್ತಲ‌ಕಥಾ ಹಂದರದ ಚಿತ್ರ.  ‘V4 streem’ OTT ಮೂಲಕ ಡಾ.ವಿಷ್ಣುವರ್ಧನ್ ಹುಟ್ಟಹಬ್ಬದಂದು (18.9.20) ವಿಶ್ವದಾದ್ಯಂತ  ಬಿಡುಗಡೆ ಆಗುತ್ತಿದೆ‌.

ಸಿನಿಮಾಕ್ಕೆ ರಚನೆ,ಚಿತ್ರಕತೆ, ಸಂಭಾಷಣೆ ಜತೆಗೆ ಎರಡು ಹಾಡುಗಳಿಗೆ ಸಾಹಿತ್ಯ ಬರೆದು ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುವ ಮೂಲಕ ಚಿತ್ರದ ಪ್ರಮುಖ‌ಪಾತ್ರಕ್ಕೆ ಬಣ್ಣ ಹಚ್ಚಿದವರು ಎಂ.‌ಟಿಪ್ಪುವರ್ಧನ್.

ಮೂರು ಹಂತದಲ್ಲಿ ಬರುವ ಕತೆಯು ರಾಜಕೀಯ ವ್ಯಕ್ತಿಗಳು ಜನತೆಗೆ ಯಾವಾಗಲೂ ಒಳ್ಳೆಯದನ್ನೇ ಮಾಡಬೇಕೆಂದು ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ಹಿಂದು-ಮುಸ್ಲಿಂ ವಿಭಿನ್ನ ಜಾತಿಯ ಗೆಳೆಯರ ಗೆಳೆತನದ ನಂಟು, ಪ್ರೀತಿಯನ್ನು ಹೇಳಲಾಗಿದೆ. ಭ್ರಷ್ಟ, ಪ್ರಾಮಾಣಿಕ ರಾಜಕಾರಣಿಗಳ ಮಧ್ಯೆ ಘರ್ಷಣೆ ಆದಾಗ, ಅದಕ್ಕೆ ಒಳ್ಳೆಯ ಉತ್ತರವನ್ನು ಶಿಸ್ತಿನ ರಾಜಕಾರಣಿ ಹೇಳುತ್ತಾ ಹೋಗುತ್ತಾನೆ. ಮತ್ತು ಐಎಎಸ್ ಹುಡುಗನ ಕನ್ನಡ ಪ್ರೇಮ ದಿಟ್ಟತನದ ಅಧಿಕಾರ ಸೇವೆ ಎತ್ತಿ ತೋರಿಸಿರುವುದು ಹಿರಿಮೆಯಾಗಿದೆ.

ತಾರಗಣದಲ್ಲಿ ಅರಸಿಕೆರೆಕೇಶವಮೂರ್ತಿ, ಇನ್ಸಾಫ್‌ಖಾನ್, ಸೂರಜ್‌ಟಿಪ್ಪು, ವಟಗಲ್‌ನಾಗರಾಜ್. ತೇಜಸ್ವಿನಿ, ಗೀತಪ್ರಿಯ, ರಮ್ಯ, ಮೈಕಲ್‌ಮಧು. ಡಾ.ಚಿಕ್ಕಹೆಜ್ಜಾಜಿಮಹಾದೇವ್, ನಂದಕುಮಾರ್ ಮುಂತಾದವರು ನಟಿಸಿದ್ದಾರೆ. ನಾಲ್ಕು ಹಾಡುಗಳಿಗೆ ಆರ್.ದಾಮೋದರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಬಾಬು, ಸಂಕಲನ ಕವಿತಾಭಂಡಾರಿ ಅವರದಾಗಿದೆ. ಬೆಂಗಳೂರು, ಗಜೇಂದ್ರಗಡ, ಕೋಲಾರ ಮತ್ತು ಬಂಗಾರಪೇಟೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆರ್.ಬಿ.ನಡಾಫ್ ಗಜೇಂದ್ರಗಡ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಟಿಪ್ಪುವರ್ಧನ್ ಅವರು ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿದ್ದು, ಅವರ ಹುಟ್ಟಹಬ್ಬದ ಪ್ರಯುಕ್ತ ಸಿನಿಮಾವನ್ನು ಸಾಹಸ ಸಿಂಹನಿಗೆ ಅರ್ಪಿಸುವ ಸಲುವಾಗಿ ಅದೇ ದಿನದಂದು ಓಟಿಟಿ ಮೂಲಕ ಜನರಿಗೆ ತೋರಿಸುತ್ತಿದ್ದಾರೆ.
ಪ್ರಚಾರದ ಸಲುವಾಗಿ ಮಂಗಳವಾರದಂದು ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿತು. ಈ ಸಂದರ್ಭದಲ್ಲಿ ಚಿತ್ರತಂಡದ ಹಾಜರಿ ಇತ್ತು. ತಂಡಕ್ಕೆ ಶುಭಹಾರೈಸಲು ನಾಗೇಂದ್ರಅರಸು, ನಟ ಅಮಿತ್, ವಿಸ್ಟ್ರೀಮ್ ಪದಾದಿಕಾರಿಗಳು ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ನನ್ನೇನು‌ ಹೆದ್ರಸ್ತೀರಾ – ಗುಡುಗಿದ ವಿಲನ್ !

ಕೆಜಿಎಫ್ – 2 ನಲ್ಲಿ ಪ್ರಕಾಶ್ ರೈ – ವಿರೋಧಿಸಿದವರಿಗೆ ಬಹುಭಾಷಾ ನಟ ರೈ ಕೇಳಿದ ಪ್ರಶ್ನೆಯೇನು ಗೊತ್ತಾ?

ಪ್ರಕಾಶ್ ರೈ ಅವರನ್ನು‌ ನಿಮ್ಗೆ ನೋಡ್ಲಿಕ್ಕೆ ಇಷ್ಟ ಇಲ್ವಾ ನೋಡ್ಬೇಡಿ, ಅದು ನಿಮ್ಮ ಹಕ್ಕು….

– ‘ಕೆಜಿಎಫ್ 2 ‘ಚಿತ್ರದಲ್ಲಿ ತಾವು‌ ನಟಿಸುತ್ತಿರುವುದರ ವಿರುದ್ಧ ಸೋಷಲ್ ಮೀಡಿಯಾದಲ್ಲಿ ವ್ಯಕ್ತವಾದ ವಿರೋಧಕ್ಕೆ ನಟ ಪ್ರಕಾಶ್ ರೈ ನೀಡಿದ ಮೊದಲ ಪ್ರತಿಕ್ರಿಯೆ ಇದು.
ಖಾಸಗಿ ವಾಹಿನಿಯೊಂದಕ್ಕೆ‌ ನೀಡಿದ ಸಂದರ್ಶ‌ನದಲ್ಲಿ ಕೋರೋನಾ ನಂತರದ ವಿದ್ಯಮಾನಗಳು, ಆನಂತರ ಮತ್ತೆ ಕೆಜಿಎಫ್ 2 ಚಿತ್ರದೊಂದಿಗೆ ಕ್ಯಾಮೆರಾ ಎದುರಿಸಿದ ಕ್ಷಣಗಳನ್ನು ತುಂಬಾ ಮುಕ್ತವಾಗಿ ಹಂಚಿಕೊಂಡಿದ್ದಾರೆ ನಟ ಪ್ರಕಾಶ್.

ನೋಡಿ, ನಾನು ಸಾಹಿತ್ಯ ಓದಿಕೊಂಡು ಕೆಳಗಡೆಯಿಂದ ಮೇಲೆ ಬಂದವನು‌ನಾನು. ತುಂಬಾ ಈಜಿ ಇತ್ತು. ಅದು ಹೇಗೆ? ಒಬ್ಬ ಪ್ರತಿಭಾವಂತ ನಟ, ಒಳ್ಳೆಯವನು, ಚೆನ್ನಾಗಿದ್ದಾನೆ ಅಂತ ಜನರ ಮೆಚ್ಚುಗೆಗಷ್ಟೇ ಸಿಮೀತವಾಗಿದ್ದರೆ ನನಗೇನು‌ ಬದುಕು‌ ಕಷ್ಟವೇ ಇರಲಿಲ್ಲ. ಅದ್ರೆ ನಾನು ಅದನ್ನು ದಾಟಿ, ನನ್ನನ್ನು ನಾನು‌ ಕಂಡುಕೊಂಡಿದ್ದೇನೆ. ಹಾಗಾಗಿ ಇದೆಲ್ಲ ವಿವಾದ ಇರಬಹುದು. ಕೆಲವರಿಗೆ ಇಷ್ಟವಾಗದೆ ಇರಬಹುದು ಎನ್ನುವ ಮೂಲಕ ತಾವೇನು‌ ತಮ್ಮ ವ್ಯಕ್ತಿತ್ವವೇನು ಎಂಬುದನ್ನು ತೆರೆದಿಡುತ್ತಾರೆ ಪ್ರಕಾಶ್ ರೈ.

ಇನ್ನು’ ಕೆಜಿಎಫ್ 2′ ನಲ್ಲಿ ಅವರಿದ್ದಾರೆನ್ನುವುದಕ್ಕೆ ವ್ಯಕ್ತವಾದ ವಿರೋಧಕ್ಕೆ ತಮ್ಮದೇಯಾದ ರೀತಿಯಲ್ಲಿ ಉತ್ತರ ನೀಡುತ್ತಾರೆ ಪ್ರಕಾಶ್ ರೈ.
ಯಾಕೆ, ನಾನೇಕೆ ನಟಿಸಬಾರದು? ನಿಮ್ಗೆ ಅಂಥದ್ದೇನು‌ ಮಾಡಿದ್ದೇನೆ? ನಮಗೂ ನಿಮಗೂ ಏನಾದ್ರೂ ಪರಿಚಯ ಇದೆಯಾ? ಇಲ್ಲ, ನಿಮ್ಮನೇ ದರೋಡೆ ಮಾಡಿದ್ದೇನಾ? ಇಲ್ಲ. ಹಾಗಾದ್ರೆ ಏನು? ನಾನು ವ್ಯವಸ್ಥೆ ಕುರಿತುಒಂದಷ್ಟು ಪ್ರಶ್ನೆ ಮಾಡಿದ್ದೇನೆ. ಆ ಪ್ರಶ್ನೆಗಳು ಸರಿ‌ಯಿದ್ದರೆ ಸರಿ ಅನ್ನಿ, ಇಲ್ಲ ಅಂದ್ರೆ ತಪ್ಪ ಅನ್ನಿ. ಅದು ಬಿಟ್ಟು ನೀನು ಕೆಲಸ ಮಾಡೋಂಗಿಲ್ಲ.‌ಇಲ್ಲಿ‌ಬದುಕುವುದಕ್ಕೆ ಯೋಗ್ಯತೆ ಇಲ್ಲ.ಪಾಕಿಸ್ತಾನಕ್ಕೆ ಹೋಗು ಅಂತ ಹೇಳೋದು ಎಷ್ಟು ಸರಿ. ಇಷ್ಟಕ್ಕೂ‌ನಾನೇಕೆ ಪಾಕಿಸ್ತಾನಕ್ಕೆ ಹೋಗಬೇಕು? ದೇಶ ಬಿಟ್ಟು ಹೋಗು‌ಅಂದ್ರೆ ನಾನೇಕೆ ಹೋಗಬೇಕು ಅಂತೀನಿ. ನಾನು, ನನ್ನ ಹೆಂಡ್ತಿ, ಮಕ್ಕಳು, ಮನೆಯವರು ..ಸೇರಿ‌ನಾನು ಕೂಡ ಎಲ್ಲತರನೇ ಅಲ್ವಾ? ಎನ್ನುವುದು ಪ್ರಕಾಶ್ ರೈ ನೋವಿನ‌ಮಾತು.


ಆ‌ಸಿನಿಮಾನೇನು‌ನಿಮ್ಮ ವಿರುದ್ಧ ಮಾಡ್ತಿದ್ದೇನಾ, ಅದೊಂದುಬಲವನ್ನು ಪ್ರಯೋಗಿಸ್ತಿದ್ದೇನಾ,ಅಲ್ಲ. ಆ ನಿರ್ದೇಶಕ ಏನ್ ಮಾಡ್ದಾ, ಆ ಕತೆ ಏನ್ ಮಾಡ್ತು, ಆ ನಿರ್ಮಾಪಕ ಏನ್ ಮಾಡ್ದಾ, ಅಲ್ಲಿ ಕೆಲಸ ಮಾಡೋ‌ಜನ್ರು ಏನ್ ಮಾಡಿದ್ರು? ಅಂದ್ರೆ ಒಂದ್ ಸಿನಿಮಾದಲ್ಲಿ ಯಾರ್ ಇರ್ಬೇಕು, ಯಾರ್ ಇರ್ಬಾರ್ದು ಅಂತ ನೀವ್ ಡಿಸೈಡ್ ಮಾಡ್ತೀರಾ? ನಿಮ್ಗೆ ಪ್ರಕಾಶ್ ರೈ ನ ನೋಡ್ಲಿಕ್ಕೆ ಇಷ್ಡ ಇಲ್ವಾ, ನೋಡ್ಬೀಡಿ, ಅದು ನಿಮ್ಮ ಹಕ್ಕು. ನೋಡಿ, ನಮ್ಮಿಂದ ಸಿನಿಮಾ‌ಅಲ್ಲ,ಪ್ರೇಕ್ಷಕರಿಂದ ಸಿನಿಮಾ.‌ ಇವತ್ತು ಆರು ತಿಂಗಳು ಏನಾಯ್ತು? ನಾನು ಒಬ್ಬ ಹೀರೋ ಹತ್ರ ಮಾನಾಡ್ತಾ ಹೇಳಿದೆ. ನಾನೊಬ್ಬ ದೊಡ್ಡ ನಟ, ನೀನು ದೊಡ್ಡ ಹೀರೋ. ಸಿನಿಮಾ‌ಇಲ್ಲ, ಕ್ಯಾಮೆರಾ ಇಲ್ಲ. ನಾವ್ಯಾರು, ಸಾಮಾನ್ಯ ಮನುಷ್ಯರೇ ಅಲ್ವಾ.ಮತ್ತೆ. ಅದರಾಚೆ, ಇವ್ನು ಧರ್ಮದ ವಿರುದ್ಧ ಇದವನು,ನನ್ನ ಧರ್ಮದವನಲ್ಲ, ನಮ್ಮ ನಾಯಕನ‌ಪರವಾಗಿದ್ದವನಲ್ಲ.ಒಂದು ವ್ಯವಸ್ಥೆ ಯನ್ನು ಒಪ್ಕೊಳ್ಳಲ್ಲ, ಅಂತ ಎಲ್ಲರೂ ಸೇರಿಕೊಂಡು ನಿರಾಕರಿಸ್ತೀವಿ ಅಂತೀರಾ.‌ಅಂದ್ರೆ ಹೆದಸ್ತೀರಾ, ಉಚ್ಚಾಟನೆ ಮಾಡ್ತೀರಾ,ಹಾಗಾದ್ರೂ ಬಾಯಿ‌ಮುಚ್ಚಲಿ ಅಂತೀರಾ, ಅಂದ್ರೆ ನೀವ್ ಬಳಸ್ತೀರೋ ದಾರಿ ಏನು? ಅದು ಹಿಂಸೆ ಅಲ್ವಾ.‌ಅದು ಅಸೂಕ್ಷ್ಮತೆ ಅಲ್ವಾ. ಒಬ್ರ ಜತೆ ವಾದ ಮಂಡಿಸುವಾಗ ಚರ್ಚೆ ಕನ್ವಿಷನ್ಲ್ ಆಗಿರಬೇಕಲ್ವಾ. ಬದಲಿಗೆ ಹೆಸರಿಸಿ, ಹೊಡೆದು,ಅನ್ನ ಹಾಕದೆ, ಮೂಲೆಗೆ ತಳ್ಳಿ, ಕೆಲಸ ಕೊಡದೆ‌ಮನೆಗೆ ಓಡಿಸಿ ಇನ್ನೇನೋ‌ಮಾಡ್ತೀವಿ ಅಂದ್ರೆ ಅದಲ್ಲ‌ ಸಂವಾದ. ನಾನು‌ಕೊರೋನಾ ಟೈಮ್ ನಲ್ಲಿ ನೂರಾರು ಮಂದಿ ಅಸಹಾಕರನ್ನು ಬಸ್ ಹತ್ತಿಸಿ ಕಳುಹಿಸುವಾಗ ಅವರನ್ನು ಯಾವ್ ಜಾತಿ ಅಂತ ನಾನು ಕೇಳಲ್ಲಿಲ್ಲ.‌ಅದನ್ನ‌ಮೆಚ್ಚಿ ಕೊಳ್ತೀರಿ, ಅದೇ ಕೆಟ್ಟದ್ದನ್ನು‌ನಾನು ಪ್ರಶ್ನಿಸಿದಾಗ ಬಹಿಷ್ಕಾರ‌ಮಾತು ಹೇಳ್ತೀರಿ. ಇದಲ್ಲ‌ವಾದ- ಸಂವಾದ’ ಎನ್ನುವ ಮೂಲಕ ವಿರೋಧಿಗಳನ್ನು ಪ್ರಶ್ನಿಸುತ್ತಾರೆ ಪ್ರಕಾಶ್ ರೈ.

Categories
ಸಿನಿ ಸುದ್ದಿ

ಮೆಡಿಷನ್ ಮಾಫಿಯಾದ ‘ವೀರಪುತ್ರ’

ನೈಜ ಘಟನೆಯ ಸಿನಿಮಾ, ವಿಜಯ್ ಪಾತ್ರಕ್ಕೆ ತ್ರಿಬಲ್ ಶೇಡ್

Categories
ಸಿನಿ ಸುದ್ದಿ

ಬರಲು ರೆಡಿಯಾದ ಮಹಿಷಾಸುರ

ಇದು ತ್ರಿಕೋನ ಪ್ರೇಮ‌ಕತೆಯ ಸಮರ

ಹೊಸಬರ ಮಹಿಷಾಸುರ ತೆರೆಗೆ ಬರಲು ರೆಡಿಯಾಗಿದ್ದಾನೆ. ಅಂದ ಹಾಗೆ ,ಇದು ಮೆಳೆಕೋಟೆ ಮತ್ತು ಮೈತ್ರಿ ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಾಣವಾದ ಮಹಿಷಾಸುರ ಚಿತ್ರದ ಸದ್ಯದ ವಿಚಾರ. ಸದ್ಯಕ್ಕೆ ಈ ಚಿತ್ರದ ಬಿಡುಗಡೆ ದಿನಾಂಕ‌ ಫಿಕ್ಸ್ ಆಗಿಲ್ಲ. ಆದರೆ ಸದ್ಯದಲ್ಲಿಯೇ ಚಿತ್ರವನ್ನು ಚಿತ್ರಮಂದಿರಕ್ಕೆ ತರಲು ಚಿತ್ರ ತಂಡ ಸಜ್ಜಾಗಿದೆ.
ಈಗಾಗಲೇ ಚಿತ್ರದ ಟ್ರೇಲರ್ ಕೂಡ ಹೊರಬಂದಿದೆ. ಜತೆಗೆ ಸೆನ್ಸಾರ್ ಮುಗಿದು , ಅಲ್ಲಿಂದ ಯು /ಎ ಪ್ರಮಾಣ ಪತ್ರ ಸಿಕ್ಕಿದೆ.‌ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಮೆಚ್ಚುಗೆಯ ಮಾತು ಹೇಳಿದ್ದು, ಚಿತ್ರತಂಡಕ್ಕೂ ಖುಷಿ ಕೊಟ್ಟಿದೆ. ಇನ್ನು ಚಿತ್ರದ ಕತೆ ಮತ್ತು ತಾರಾಗಣ ಎಲ್ಲವೂ ಹೊಸತು. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಸೇಡಿನ ಕತೆ. ಅದು ಪ್ರೇಮದ ಸುತ್ತಲ ಸಮರ. ಅದಕ್ಕೆತ್ರಿಕೋನ ಪ್ರೇಮಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ‌.ನಿರ್ದೇಶಕರು.

ಅವರ ಪ್ರಕಾರ ಇದು ನಿಜ ಜೀವನದಲ್ಲಿ ನಡೆದ ಘಟನೆ. ಅದರ ಸುತ್ತ ಸಿನಿಮಾ ಅಂಶಗಳನ್ನು ಸೇರಿಸಿದ್ದಾರಂತೆ. ನಿರ್ದೇಶಕ ಉದಯ ಪ್ರಸನ್ನ ಅವರೇ ಚಿತ್ರಕ್ಕೆ ಕಥೆ ಚಿತ್ರಕಥೆ‌ಬರೆದು, ನಿರ್ದೇಶನ ಮಾಡಿದ್ದಾರಂತೆ. ಲೀಲಾವತಿ ಸುರೇಶ್ ಕುಮಾರ್, ಪ್ರೇಮಾ ಚಂದ್ರಯ್ಯ ನಾಗಸಂದ್ರ, ಮೈತ್ರಿ ಮಂಜುನಾಥ್ ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ಅರ್ಜುನ್, ಬಿಂದುಶ್ರೀ, ಮಂಜು‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ಅವರೊಂದಿಗೆ ರಘು ಪಾಂಡೇಶ್ವರ, ರಾಕ್ ಲೈನ್ ಸುಧಾಕರ್, ಮಾಸ್ಟರ್ ತುಷಾರ್, ಮಾಸ್ಟರ್ ಸುಜಿತ್, ರವಿಚಂದ್ರ ಮುಂತಾದವರ ತಾರಾಬಳಗವಿದೆ.

ಚಿತ್ರಕ್ಕೆ ಸುನಿಲ್ ಕೌಶಿಕ್, ಸಾಯಿಕಿರಣ್ ಸಂಗೀತ, ಕೃಷ್ಣ ಛಾಯಾಗ್ರಹಣ, ರಾಘವೇಂದ್ರ ವಿ. ಹಿನ್ನೆಲೆ ಸಂಗೀತ, ವೆಂಕಿ ಡಿವಿಡಿ ಸಂಕಲನ, ರಾಕಿ ರಮೇಶ್ ಸಾಹಸ, ಸುಜಿತ್ ಕಿಶೋರ್ ನೃತ್ಯ ನಿರ್ದೇಶನ, ವಿರಾಟ್ ರಾಜು ಸಂಭಾಷಣೆ ಚಿತ್ರಕ್ಕಿದೆ.‌ಎಲ್ಲವೂ ಅಂದುಕೊಂಡಂತಾದರೆ ಈ ಚಿತ್ರವು ನವೆಂಬರ್ ಕೊನೆ ವಾರ, ಇಲ್ಲವೇ ಡಿಸೆಂಬರ್‌ ಮೊದಲ‌ವಾರದಲ್ಲೇ ತೆರೆಗೆ ಬರಲಿದೆಯಂತೆ.

Categories
ಸಿನಿ‌ ಆ್ಯಡ್

ಅಂಬುಜದಲ್ಲಿ‌ ಶರಣಯ್ಯ!

ಗ್ಲಾಮರಸ್ ನಟಿ ಶುಭಾ‌ಪುಂಜಾ ಅಭಿನಯದ ಅಂಬುಜ ಚಿತ್ರತಂಡದಿಂದ ಇಂದು(ಸೆ.6) ಮತ್ತೊಂದು ತಾಜಾ ಸುದ್ದಿ ಹೊರಬಿದ್ದಿದೆ.ನಿರ್ದೇಶಕ ಶ್ರೀನಿ ಹನುಮಂತರಾಜು ಚಿತ್ರದಲ್ಲಿನ ಮತ್ತೊಂದು ಪಾತ್ರದ ಕಲಾವಿದರ ಹೆಸರು ರಿವಿಲ್ ಮಾಡಿದ್ದಾರೆ.
ಕಾಮಿಡಿ‌ಕಿಲಾಡಿಗಳು ಹಾಗೂ ಡ್ರಾ‌ಮಾ‌ಜೂನಿಯರ್ಸ್ ರಿಯಾಲಿಟಿ‌ ಶೋ‌ ನಿರ್ದೇಶಕ ಶರಣಯ್ಯ ಅಂಬುಜ ಚಿತ್ರದ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಚಿತ್ರದಲ್ಲಿ ಅವರು ‘ಬ್ರೋಕರ್ ಬಸವ’ ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.’ಅಂಬುಜ” ಒಂದು ನೈಜ ಘಟನೆಯಾಧಾ‌ರಿತ ಚಿತ್ರವಾಗಿದ್ದು, ಈಗಾಗಲೇ ಹಲವು ಕಾರಣಕ್ಕೆ ಕುತೂಹಲ ಮೂಡಿಸಿದೆ.‌
ಶುಭಾ ಪುಂಜಾ‌ ಪಾತ್ರ ರಿವೀಲ್ ಆದ ನಂತರವೀಗ ಶರಣಯ್ಯ ಅವರ ಪಾತ್ರವನ್ನು ಪರಿಚಯಿಸಿಕೊಟ್ಟಿದ್ದಾರೆ ನಿರ್ದೇಶಕ ಶ್ರೀನಿ.
Categories
ಸಿನಿ‌ ಆ್ಯಡ್

ಲಕ್ಕಿಗೆ ಹುಟ್ಟು ಹಬ್ಬ

ಲಕ್ಕಿಗೆ ಹುಟ್ಟು ಹಬ್ಬ
ಡೆಮೋಪೀಸ್’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಬಂದ ಕಿರುತೆರೆಯ ಜನಪ್ರಿಯ ‌ನಟ ಭರತ್ ಬೋಪಣ್ಣ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತದ್ದಾರೆ.
ಬ್ರಹ್ಮಗಂಟು ಧಾರಾವಾಹಿ ನೋಡಿದವರಿಗೆ ಭರತ್ ಅವರದು ಚಿರಪರಿಚಿತ ಹೆಸರು.
ಅಲ್ಲಿನ‌ ಲಕ್ಕಿ ಪಾತ್ರದ ನಾಯಕ‌ ನಟ. ಕಿರುತೆರೆಯ ಜನಪ್ರಿಯ ತೆಯ ಮೂಲಕವೇ ಸಿನಿ ದುನಿಯಾದಲ್ಲಿ‌ಅದೃಷ್ಡ ಪರೀಕ್ಷೆಗಿಳಿದ ಭರತ್ ಅವರಿಗೆ ಚೊಚ್ಚಲ ಚಿತ್ರದಲ್ಲಿನ ಅಷ್ಟೇನು‌ಸಕ್ಸಸ್ ಸಿಕ್ಕಿಲ್ಲ.
ಹಾಗಂತ ಕಿರುತೆರೆಯ ಜನಪ್ರಿಯತೆ ಕುಂದಿಲ್ಲ.
ಆ ಮೂಲಕವೇ ಮತ್ತೊಂದು ಚಿತ್ರಕ್ಕೆ ನಾಯಕರಾಗಲಿದ್ದಾರಂತೆ ಭರತ್. ಅಂದ ಹಾಗೆ, ಭರವಸೆ ಯ ನಟ ಭರತ್ ಗೆ ‘ಸಿನಿ‌ಲಹರಿ‌’ಕಡೆಯಿಂದ ಜನ್ಮ‌ದಿನದ ಶುಭಾಶಯ.

Categories
ಸಿನಿ‌ ಆ್ಯಡ್

ವಿಜಯ್ ಸೂರ್ಯ ಈಗ’ ವೀರಪುತ್ರ’

ಬರ್ತ್ ಡೇ ಬಾಯ್ ಗೆ ಪ್ರೋಮೋ ಗಿಫ್ಟ್

ನನ್ನ ಪ್ರಕಾರ ಇದು ರೈಟ್ ಟೈಮ್, ರೈಟ್ ಪ್ರಾಜೆಕ್ಟ್, ಹಾಗೆಯೇ ರೈಟ್ ಡಿಸಿಷೆನ್….
ಕೊರೋನಾ‌‌ ಕಾಲದಲ್ಲೇ ತಾವು ಒಪ್ಪಿಕೊಂಡ ‘ ವೀರಪುತ್ರ’ ಹೆಸರಿ‌ನ ಚಿತ್ರದ ಬಗ್ಗೆ ಹೀಗೊಂದು‌ ವಿಶ್ವಾಸದ ಮಾತು ಹೇಳಿ ನಕ್ಕರು ನಟ ವಿಜಯ್ ಸೂರ್ಯ.
ಕಿರುತೆರೆ ಲೋಕಕ್ಕೆ ಚಿರಪರಿಚಿತವಾದದ್ದು ಈ ಹೆಸರು. ವಿಜಯ್ ಸೂರ್ಯ ಅಂದಾಕ್ಷಣ ಜನಪ್ರಿಯ ಧಾರಾವಾಹಿ ಅಗ್ನಿ ಸಾಕ್ಷಿ ನೆನಪಾಗುತ್ತದೆ. ಅದರಲ್ಲಿನ‌ ಸಿದ್ಧಾರ್ಥ್ ಪಾತ್ರದ ಮೂಲಕ ಬಹುಕಾಲ ಕಿರುತೆರೆ ಲೋಕದ ನೆಚ್ಚಿನ ನಟ‌ ಆಗಿದ್ದು ಇದೇ ವಿಜಯ್ ಸೂರ್ಯ.‌ ಅಲ್ಲಿಂದೀಗ ಸಿನಿ ರಂಗಕ್ಕೂ ಕಾಲಿಟ್ಟಿರುವ ವಿಜಯ್ ಸೂರ್ಯ ಈಗಾಗಲೇ ನಾಲ್ಕೈದು ಸಿನಿಮಾಗಳಲ್ಲಿ ನಾಯಕರಾಗಿ‌ ಕಾಣಿಸಿಕೊಂಡಿದ್ದಾರೆ. ಆದರೆ ಕಿರುತೆರೆಯಲ್ಲಿ ಸಿಕ್ಕಷ್ಟು‌ಜನಪ್ರಿಯತೆ ಈ ಸಿನಿಮಾ ರಂಗದಲ್ಲಿ ಇನ್ನು‌‌ಸಿಕ್ಕಿಲ್ಲ ಎನ್ನುವ ನೋವು ಅವರದು.
ಇದು ರೈಟ್ ಟೈಮ್
ಹಾಗಂತ ಮುಂದಿನದು? ಅಂತಹದೊಂದು‌ ಕುತೂಹಲದ ಪ್ರಶ್ನೆ ಎದುರಾಗುವ ಮುನ್ನವೇ ಮುಖದಲ್ಲಿ ‌ನಗು‌ ತುಂಬಿಕೊಂಡು ಮಾತಿಗಿಳಿಯುವ ವಿಜಯ್ ಸೂರ್ಯ, ಹಾಗಾಗಲ್ಲ. ಮುಂದಿನ ದಾರಿ, ಗುರಿ ತುಂಬಾ ಸ್ಪಷ್ಟವಾಗಿದೆ ಎನ್ನುವ ಆತ್ಮವಿಶ್ವಾಸ ದಲ್ಲಿ ಮಾತನಾಡುತ್ತಾರೆ‌.’ ಬಣ್ಣ ಹಚ್ಚಿ ಪ್ರೇಕ್ಷಕರ ಮುಂದೆ ಇಲ್ಲಿಗೆ ಹತ್ತು ವರ್ಷ ಕಳೆಯಿತು. ಇದೀಗ ಹನ್ನೊಂದನೇ ವರ್ಷ . ಅಗ್ನಿ ಸಾಕ್ಷಿ ಧಾರಾವಾಹಿ ನಂತರ ಏನಾಯ್ತು ಅಂತ ಎಲ್ಲರಿಗೂ ಗೊತ್ತೇ ಇದೆ. ಜನ್ರು ನನ್ನ ಮೇಲಿಟ್ಟ ನಂಬಿಕೆ, ವಿಶ್ವಾಸ ಉಳಿಸಿಕೊಂಡೇ ಬರಬೇಕೆಂದು ತಾಜಾ ತನದ ಕತೆ, ಹೊಸ ಬಗೆಯಾ ಪಾತ್ರಗಳನ್ನೇ ಆಯ್ಕೆ‌ಮಾಡಿಕೊಂಡು‌ ಬಂದೆ. ಆದ್ರೆ‌ನನಗೆ ನಿರೀಕ್ಷಿತ ಗೆಲವು ಸಿಕ್ಕಿಲ್ಲ.‌ ಅದ್ಯಾಕೆ‌ ಎನ್ನುವ ಕಾರಣವೂ‌ ಗೊತ್ತಾಗಿಲ್ಲ. ಎಲ್ಲೋ ಒಂದುಕಡೆ ಆಯ್ಕೆಗಳೇ ತಪ್ಪಾದವೇ ಎನ್ನುವ ಕೊರಗು ಕೂಡ ನಂಗಿತ್ತು. ಆದರೆ ಈಗ ಹಾಗಾಗಲು ಸಾಧ್ಯವಿಲ್ಲ. ನನ್ನ ಪ್ರಕಾರ ಇದು ರೈಟ್ ಟೈಮ್, ರೈಟ್ ಪ್ರಾಜೆಕ್ಟ್ ,ಹಾಗೆಯೇ ರೈಟ್ ಡಿಸಿಷೆನ್ ಕೂಡ ಹೌದು’ ಎನ್ನುತ್ತಾರೆ ನಟ ವಿಜಯ್ ಸೂರ್ಯ.
ಡಿಫೆರೆಂಟ್ ಪಾತ್ರ, ಮೂರು ಶೇಡ್ಸ್ 
‘ಇದೊಂದು ಫುಲ್ ಡಿಫೆರೆಂಟ್ ಸಿನಿಮಾ.‌ಅಂದ್ರೆ ಇದರ ಕತೆಯೇ ಹಾಗಿದೆ. ಸುಮಾರು 25 ವರ್ಷಗಳ ಹಿಂದೆ ನಡೆದ ಘಟನೆ.‌ಅದನ್ನೇ ಆಧರಿಸಿ‌ ನಿರ್ಮಾಪಕರಾದ ಗುರು ಬಂಡಿ ಕತೆ ಬರೆದಿದ್ದಾರೆ. ಸೈನ್ಸ್ ಫಿಕ್ಷನ್ ಕತೆ.ಆಲೋಪತಿ‌ ಬಳಕೆಗೆ ಹೇಗೆ ಆರ್ಯವೇದ ಅಥವಾ ಸಂಪ್ರಾದಾಯಕ ಔಷಧಿ ನಾಶವಾಯಿತು. ಬ್ಯಾನ್ ಮಾತ್ರೆಗಳು ಜನರ ಜೀವ ಹೇಗೆ ಬಲಿ ಪಡೆಯುತ್ತಿವೆ ಎನ್ನುವುದು ಚಿತ್ರಕತೆಯ ಒನ್ಲೈನ್. ಹಾಗೆಯೇ ಅದು‌ ಚಿತ್ರದ ಮುಖ್ಯ ಪಾರ್ಟ್.‌ಅದರ ಜತೆಗೆ ಒಂದಷ್ಟು ಕಮರ್ಷಿಯಲ್ ಎಲಿಮೆಂಟ್ ಇವೆ. ಅವೆಲ್ಲವನ್ನೂ ಅಚ್ಚುಕಟ್ಟಾಗಿ ತೆರೆ ತರಬೇಕೆನ್ನುವುದು ನಿರ್ದೇಶದ ಡಾ. ದೇವೇಂದ್ರ ಅವರ ಆಸೆ.ಅದು ಹೇಗೆ ಅಂತ ಮುಂದೆ ಗೊತ್ತಾಗಲಿದೆ. ಯಾಕಂದ್ರೆ ಸಿನಿಮಾ ಕೆಲಸ ಈಗ ಶುರುವಾಗಬೇಕಿದೆ.‌ ಇನ್ನು ಚಿತ್ರದ ಶೀರ್ಷಿಕೆಯೇ ಇಲ್ಲಿ ಪವರ್ ಫುಲ್ ಆಗಿದೆ. ಇದರಲ್ಲಿ ಮೂರು ಶೇಡ್ಸ್ ಇವೆ. ಇದೇ ಮೊದಲ ಬಾರಿಗೆ ತ್ರಿಬಲ್ ರೋಲ್ ಮಾಡುತ್ತಿದ್ದೇನೆ , ಅದಕ್ಕೆ ಫುಲ್ ಎಕ್ಸೈಟ್ ಮೆಂಟ್ ಇದೆ’ ಎನ್ನುತ್ತಾರೆ ನಟ ವಿಜಯ್ ಸೂರ್ಯ.
ಒಟಿಟಿಗಾಗಿಯೇ ಇನ್ನೊಂದು ಸಿನಿಮಾ
ಕೋರೋನಾ‌ ಕಾಲದ ಮುಂಚೆಯೇ ವಿಜಯ್ ಸೂರ್ಯ ಒಂದು ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಅಚೆಲುವ ಅಗಿಲೀಸ್ ಗೆ ರೆಡಿಯಿದೆ. ಸದ್ಯಕ್ಕೀಗ ಅದಕ್ಕೆ ಟೈಟಲ್ ಫೈನಲ್ ಆಗಿಲ್ಲ. ಆ‌ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಕ್ಕೂ ಅವರು ರೆಡಿಯಿಲ್ಲ. ಅದರೆ ಕಿರುತೆರೆಯಿಂದ ಹಿರಿತೆರೆಗೆ ಬಂದು, ತಮ್ಮದೇ ಛಾಪು ಮೂಡಿಸಲು ಕಸರತ್ತು ಹಾಕುತ್ತಿರುವ ವಿಜಯ್ ಸೂರ್ಯ, ಮೊದಲಿಗಿಂದ ಈಗ ಸಾಕಷ್ಟು ಬದಲಾಗಿದ್ದಾರೆ‌. ಅಗ್ನಿ ಸಾಕ್ಷಿ ಜನಪ್ರಿಯತೆ ಯ ಗುಂಗಿನಿಂದ ಹೊರಬಂದು, ನಿರ್ದೇಶಕರ ನಟನಾಗುವ ದಾರಿಯಲ್ಲಿದ್ದಾರೆ. ಅದೇ ಕಾರಣಕ್ಕೆ ವೀರಪುತ್ರ ನಿರೀಕ್ಷೆಯ ಸಿನಿಮಾ ಆಗಿದೆ.
Categories
ಸಿನಿ ಸುದ್ದಿ

ಭದ್ರಾವತಿ ಚೆಲುವೆ ಆಶಾಭಟ್ ಗೆ ಬರ್ತ್ ಡೇ ಸಂಭ್ರಮ

ರಾಬರ್ಟ್ ಚಿತ್ರ ತಂಡದಿಂದ ಸಿಗ್ತು ಫಸ್ಟ್ ಲುಕ್ ಗಿಫ್ಟ್

‘ ರಾಬರ್ಟ್‌ ‘ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಭದ್ರಾವತಿಯ ಚೆಲುವೆ ಆಶಾಭಟ್. ಮೊದಲ ಚಿತ್ರದಲ್ಲೆ ಸ್ಟಾರ್ ನಟನ ಜತೆಗೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊ‌ಂಡ ಮಾಡೆಲ್. ಸಿನಿ‌ರಂಗಕ್ಕೆ ಕಾಲಿಡುವ ಮುನ್ನ ಮಾಡೆಲಿಂಗ್ ಜಗತ್ರಿನಲ್ಲಿ ದೊಡ್ಡ ಹೆಸರು ಮಾಡಿದ ಹೆಗ್ಗಳಿಕೆ ಇವರದು. ಸೂಪರ್ ನ್ಯಾಷನಲ್ ಹಾಗೂ‌ಮಿಸ್ ದಿವಾ ಕಿರೀಟ ಮುಡಿಗೇರಿಸಿಕೊಂಡ ಕನ್ನಡದ ಕುವರಿ.‌ ಇಂದು‌( ಸೆ. 5) ಅವರ ಹುಟ್ಟು‌ಹಬ್ಬ. ಈ ಹಿನ್ನೆಲೆಯಲ್ಲಿ ರಾಬರ್ಟ್ ಚಿತ್ರ ತಂಡ ಅವರ ಹುಟ್ಟು ಹಬ್ಬಕ್ಕೆ‌ಚಿತ್ರದಲ್ಲಿನ‌ಅವರ ಪಾತ್ರದ ಫಸ್ಟ್ ಲಾಂಚ್ ಮಾಡಿದೆ.

ಇದು ಅವರಿಗೆ ಚಿತ್ರ ತಂಡದಿಂದ ಸಿಕ್ಕ ಬರ್ತ್ ಡೇ ಗಿಫ್ಟ್.ಇದುವರೆಗೂ‌ ನೋಡಿದ ಆಶಾಭಟ್ ಇಲ್ಲಿ ಕಂಪ್ಲೀಟ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇವರೇನಾ ಆಶಾಭಟ್ ಎನ್ನುವಷ್ಟು ಲುಕ್ ಚೇಂಜ್ ಇದೆ.ವಿದೇಶದಿಂದ ಬಂದ ಹುಡುಗಿ ಅಮೃತ ಪಾತ್ರದಲ್ಲಿ ಆಶಾ ಭಟ್ ರಾಬರ್ಟ್ ನಲ್ಲಿ ನಟಿಸುತ್ತಿದ್ದಾರಂತೆ. ಸಹಜವಾಗಿಯೇ ರಾಬರ್ಟ್ ಚಿತ್ರದಲ್ಲಿ ಆಶಾಭಟ್ ಕೂಡ ನಿರೀಕ್ಷೆ ಹುಟ್ಟಿಸಿದ್ದಾರೆ. ಇನ್ನು ಆಶಾಭಟ್ ಮಾಡೆಲ್ ಆಗಿ ನಂತರ ಚಿತ್ರದ ನಾಯಕಿಯಾಗಿ ಹಿಂದಿಯ ‘ಜಂಗ್ಲಿ ‘ಮೂಲಕ‌ನಟನೆಗೆ ಪಾದಾರ್ಪಣೆ ಮಾಡಿದ್ದರು.‌ಅಲ್ಲಿಂದೀಗ ಕನ್ನಡಕ್ಕೂ ಕಾಲಿಟ್ಟಿದ್ದಾರೆ. ಮೂಲತಃ ಶಿವಮೊಗ್ಗದವರಾದ ಆಶಾ ಭಟ್ ಪ್ರಸ್ತುತ ಕಾರ್ಯನಿಮಿತ್ತ ಮುಂಬೈಯಲ್ಲಿ ನೆಲೆಸಿದ್ದಾರೆ.‌

ಈ ಬಾರಿಯ ಹುಟ್ಟು ಹಬ್ಬ ಮತ್ತು ಚಿತ್ರದಲ್ಲಿನ ತಮ್ನ ಪಾತ್ರದ ಫಸ್ಟ್ ಲುಕ್ ಗೆ ಆಶಾ ಭಟ್ ಪ್ರತಿಕ್ರಿಯೆ‌ನೀಡಿದ್ದು ಹೀಗೆ; ‘ ಇದೊಂದು ಸ್ಪೆಷಲ್ ಆಕೇಷನ್.ಯಾಕಂದ್ರೆ ಕಳೆದ ವರ್ಷ ನನ್ನ ಹುಟ್ಟುಹಬ್ಬದ ಸಮಯದಲ್ಲಿ ಚಿತ್ರದ ಶೂಟಿಂಗ್ ಶುರುವಾಯಿತು. ಈಗ ಶೂಟಿಂಗ್ ಮುಗಿದು ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಅದರ ಭಾಗವಾಗಿಯೇ ಈಗ ಫಸ್ಟ್ ಲುಕ್ ಗಿಫ್ಟ್ ಸಿಕ್ಕಿದೆ. ಚಿತ್ರಕ್ಕೆ ಸಾಕಷ್ಟು ಜನರು ಕಾಯುತ್ತಿದ್ದಾರೆ, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವುದು ಖುಷಿ ತರುತ್ತಿದೆ’ ಎನ್ನುತ್ತಾರೆ.

ಉಮಾಪತಿ ಬ್ಯಾನರ್ ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಟಾಲಿವುಡ್ ನಟ ಜಗಪತಿ ಬಾಬು, ದೇವರಾಜ್, ವಿನೋದ್ ಪ್ರಭಾಕರ್, ಸೋನಲ್ ಮೊಂಟೆರೊ, ರವಿ ಕಿಶನ್, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ ಮೊದಲಾದವರಿದ್ದಾರೆ. ಅಭಿನಯಿಸಿದ್ದಾರೆ

error: Content is protected !!