ಬರ್ತ್ ಡೇ ಬಾಯ್ ಗೆ ಪ್ರೋಮೋ ಗಿಫ್ಟ್
ನನ್ನ ಪ್ರಕಾರ ಇದು ರೈಟ್ ಟೈಮ್, ರೈಟ್ ಪ್ರಾಜೆಕ್ಟ್, ಹಾಗೆಯೇ ರೈಟ್ ಡಿಸಿಷೆನ್….
ಕೊರೋನಾ ಕಾಲದಲ್ಲೇ ತಾವು ಒಪ್ಪಿಕೊಂಡ ‘ ವೀರಪುತ್ರ’ ಹೆಸರಿನ ಚಿತ್ರದ ಬಗ್ಗೆ ಹೀಗೊಂದು ವಿಶ್ವಾಸದ ಮಾತು ಹೇಳಿ ನಕ್ಕರು ನಟ ವಿಜಯ್ ಸೂರ್ಯ.
ಕಿರುತೆರೆ ಲೋಕಕ್ಕೆ ಚಿರಪರಿಚಿತವಾದದ್ದು ಈ ಹೆಸರು. ವಿಜಯ್ ಸೂರ್ಯ ಅಂದಾಕ್ಷಣ ಜನಪ್ರಿಯ ಧಾರಾವಾಹಿ ಅಗ್ನಿ ಸಾಕ್ಷಿ ನೆನಪಾಗುತ್ತದೆ. ಅದರಲ್ಲಿನ ಸಿದ್ಧಾರ್ಥ್ ಪಾತ್ರದ ಮೂಲಕ ಬಹುಕಾಲ ಕಿರುತೆರೆ ಲೋಕದ ನೆಚ್ಚಿನ ನಟ ಆಗಿದ್ದು ಇದೇ ವಿಜಯ್ ಸೂರ್ಯ. ಅಲ್ಲಿಂದೀಗ ಸಿನಿ ರಂಗಕ್ಕೂ ಕಾಲಿಟ್ಟಿರುವ ವಿಜಯ್ ಸೂರ್ಯ ಈಗಾಗಲೇ ನಾಲ್ಕೈದು ಸಿನಿಮಾಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಕಿರುತೆರೆಯಲ್ಲಿ ಸಿಕ್ಕಷ್ಟುಜನಪ್ರಿಯತೆ ಈ ಸಿನಿಮಾ ರಂಗದಲ್ಲಿ ಇನ್ನುಸಿಕ್ಕಿಲ್ಲ ಎನ್ನುವ ನೋವು ಅವರದು.
ಇದು ರೈಟ್ ಟೈಮ್
ಹಾಗಂತ ಮುಂದಿನದು? ಅಂತಹದೊಂದು ಕುತೂಹಲದ ಪ್ರಶ್ನೆ ಎದುರಾಗುವ ಮುನ್ನವೇ ಮುಖದಲ್ಲಿ ನಗು ತುಂಬಿಕೊಂಡು ಮಾತಿಗಿಳಿಯುವ ವಿಜಯ್ ಸೂರ್ಯ, ಹಾಗಾಗಲ್ಲ. ಮುಂದಿನ ದಾರಿ, ಗುರಿ ತುಂಬಾ ಸ್ಪಷ್ಟವಾಗಿದೆ ಎನ್ನುವ ಆತ್ಮವಿಶ್ವಾಸ ದಲ್ಲಿ ಮಾತನಾಡುತ್ತಾರೆ.’ ಬಣ್ಣ ಹಚ್ಚಿ ಪ್ರೇಕ್ಷಕರ ಮುಂದೆ ಇಲ್ಲಿಗೆ ಹತ್ತು ವರ್ಷ ಕಳೆಯಿತು. ಇದೀಗ ಹನ್ನೊಂದನೇ ವರ್ಷ . ಅಗ್ನಿ ಸಾಕ್ಷಿ ಧಾರಾವಾಹಿ ನಂತರ ಏನಾಯ್ತು ಅಂತ ಎಲ್ಲರಿಗೂ ಗೊತ್ತೇ ಇದೆ. ಜನ್ರು ನನ್ನ ಮೇಲಿಟ್ಟ ನಂಬಿಕೆ, ವಿಶ್ವಾಸ ಉಳಿಸಿಕೊಂಡೇ ಬರಬೇಕೆಂದು ತಾಜಾ ತನದ ಕತೆ, ಹೊಸ ಬಗೆಯಾ ಪಾತ್ರಗಳನ್ನೇ ಆಯ್ಕೆಮಾಡಿಕೊಂಡು ಬಂದೆ. ಆದ್ರೆನನಗೆ ನಿರೀಕ್ಷಿತ ಗೆಲವು ಸಿಕ್ಕಿಲ್ಲ. ಅದ್ಯಾಕೆ ಎನ್ನುವ ಕಾರಣವೂ ಗೊತ್ತಾಗಿಲ್ಲ. ಎಲ್ಲೋ ಒಂದುಕಡೆ ಆಯ್ಕೆಗಳೇ ತಪ್ಪಾದವೇ ಎನ್ನುವ ಕೊರಗು ಕೂಡ ನಂಗಿತ್ತು. ಆದರೆ ಈಗ ಹಾಗಾಗಲು ಸಾಧ್ಯವಿಲ್ಲ. ನನ್ನ ಪ್ರಕಾರ ಇದು ರೈಟ್ ಟೈಮ್, ರೈಟ್ ಪ್ರಾಜೆಕ್ಟ್ ,ಹಾಗೆಯೇ ರೈಟ್ ಡಿಸಿಷೆನ್ ಕೂಡ ಹೌದು’ ಎನ್ನುತ್ತಾರೆ ನಟ ವಿಜಯ್ ಸೂರ್ಯ.
ಡಿಫೆರೆಂಟ್ ಪಾತ್ರ, ಮೂರು ಶೇಡ್ಸ್
‘ಇದೊಂದು ಫುಲ್ ಡಿಫೆರೆಂಟ್ ಸಿನಿಮಾ.ಅಂದ್ರೆ ಇದರ ಕತೆಯೇ ಹಾಗಿದೆ. ಸುಮಾರು 25 ವರ್ಷಗಳ ಹಿಂದೆ ನಡೆದ ಘಟನೆ.ಅದನ್ನೇ ಆಧರಿಸಿ ನಿರ್ಮಾಪಕರಾದ ಗುರು ಬಂಡಿ ಕತೆ ಬರೆದಿದ್ದಾರೆ. ಸೈನ್ಸ್ ಫಿಕ್ಷನ್ ಕತೆ.ಆಲೋಪತಿ ಬಳಕೆಗೆ ಹೇಗೆ ಆರ್ಯವೇದ ಅಥವಾ ಸಂಪ್ರಾದಾಯಕ ಔಷಧಿ ನಾಶವಾಯಿತು. ಬ್ಯಾನ್ ಮಾತ್ರೆಗಳು ಜನರ ಜೀವ ಹೇಗೆ ಬಲಿ ಪಡೆಯುತ್ತಿವೆ ಎನ್ನುವುದು ಚಿತ್ರಕತೆಯ ಒನ್ಲೈನ್. ಹಾಗೆಯೇ ಅದು ಚಿತ್ರದ ಮುಖ್ಯ ಪಾರ್ಟ್.ಅದರ ಜತೆಗೆ ಒಂದಷ್ಟು ಕಮರ್ಷಿಯಲ್ ಎಲಿಮೆಂಟ್ ಇವೆ. ಅವೆಲ್ಲವನ್ನೂ ಅಚ್ಚುಕಟ್ಟಾಗಿ ತೆರೆ ತರಬೇಕೆನ್ನುವುದು ನಿರ್ದೇಶದ ಡಾ. ದೇವೇಂದ್ರ ಅವರ ಆಸೆ.ಅದು ಹೇಗೆ ಅಂತ ಮುಂದೆ ಗೊತ್ತಾಗಲಿದೆ. ಯಾಕಂದ್ರೆ ಸಿನಿಮಾ ಕೆಲಸ ಈಗ ಶುರುವಾಗಬೇಕಿದೆ. ಇನ್ನು ಚಿತ್ರದ ಶೀರ್ಷಿಕೆಯೇ ಇಲ್ಲಿ ಪವರ್ ಫುಲ್ ಆಗಿದೆ. ಇದರಲ್ಲಿ ಮೂರು ಶೇಡ್ಸ್ ಇವೆ. ಇದೇ ಮೊದಲ ಬಾರಿಗೆ ತ್ರಿಬಲ್ ರೋಲ್ ಮಾಡುತ್ತಿದ್ದೇನೆ , ಅದಕ್ಕೆ ಫುಲ್ ಎಕ್ಸೈಟ್ ಮೆಂಟ್ ಇದೆ’ ಎನ್ನುತ್ತಾರೆ ನಟ ವಿಜಯ್ ಸೂರ್ಯ.
ಒಟಿಟಿಗಾಗಿಯೇ ಇನ್ನೊಂದು ಸಿನಿಮಾ
ಕೋರೋನಾ ಕಾಲದ ಮುಂಚೆಯೇ ವಿಜಯ್ ಸೂರ್ಯ ಒಂದು ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಅಚೆಲುವ ಅಗಿಲೀಸ್ ಗೆ ರೆಡಿಯಿದೆ. ಸದ್ಯಕ್ಕೀಗ ಅದಕ್ಕೆ ಟೈಟಲ್ ಫೈನಲ್ ಆಗಿಲ್ಲ. ಆ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಕ್ಕೂ ಅವರು ರೆಡಿಯಿಲ್ಲ. ಅದರೆ ಕಿರುತೆರೆಯಿಂದ ಹಿರಿತೆರೆಗೆ ಬಂದು, ತಮ್ಮದೇ ಛಾಪು ಮೂಡಿಸಲು ಕಸರತ್ತು ಹಾಕುತ್ತಿರುವ ವಿಜಯ್ ಸೂರ್ಯ, ಮೊದಲಿಗಿಂದ ಈಗ ಸಾಕಷ್ಟು ಬದಲಾಗಿದ್ದಾರೆ. ಅಗ್ನಿ ಸಾಕ್ಷಿ ಜನಪ್ರಿಯತೆ ಯ ಗುಂಗಿನಿಂದ ಹೊರಬಂದು, ನಿರ್ದೇಶಕರ ನಟನಾಗುವ ದಾರಿಯಲ್ಲಿದ್ದಾರೆ. ಅದೇ ಕಾರಣಕ್ಕೆ ವೀರಪುತ್ರ ನಿರೀಕ್ಷೆಯ ಸಿನಿಮಾ ಆಗಿದೆ.