ಮೆಡಿಷನ್ ಮಾಫಿಯಾದ ‘ವೀರಪುತ್ರ’

ನೈಜ ಘಟನೆಯ ಸಿನಿಮಾ, ವಿಜಯ್ ಪಾತ್ರಕ್ಕೆ ತ್ರಿಬಲ್ ಶೇಡ್

‘ಸಪ್ಲಿಮೆಂಟರಿ‌ ‘ಹಾಗೂ’ ಧೀರ ಸಾಮ್ರಾಟ್ ‘ಚಿತ್ರಗಳ ನಂತರವೀಗ ನಿರ್ಮಾಪಕ‌ ಗುರು ಬಂಡಿ ಮತ್ತೊಂದು‌ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇದು ಅವರ ಮೂರನೇ ಚಿತ್ರ. ಈಗಾಗಲೇ ಸಪ್ಲಿಮೆಂಟರಿ ಬಿಡುಗಡೆಯಾಗಿದೆ. ಧೀರ ಸಾಮ್ರಾಟಕ್ಕೆ‌ಹಾಡುಗಳು ಚಿತ್ರೀಕರಣ ಮಾತ್ರ ಬಾಕಿಯಿದೆ. ಈ‌ ನಡುವೆಯೇ ಕಿರುತೆರೆಯ ಜನಪ್ರಿಯ ನಟ ವಿಜಯ್ ಸೂರ್ಯ ನಾಯಕತ್ವದಲ್ಲಿ  ಮೂರನೇ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಡಾ. ದೇವರಾಜ್ ಈ ಚಿತ್ರಕ್ಕೆಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಇವರು ಗುರು ಬಂಡಿ‌ ನಿರ್ಮಾಣದ ಸಪ್ಲಿಮೆಂಟರಿ ಚಿತ್ರ ನಿರ್ದೇಶಿಸಿದ್ದರು. ಅದೇ ಸ್ನೇಹದ ಏಳೆಯೊಂದಿಗೆ ಈಗ ವೀರಪುತ್ರ ಘೋಷಿಸಿದ್ದಾರೆ.

ಈ ಚಿತ್ರ ಇನ್ನು ಮುಹೂರ್ತ ಮುಗಿಸಿ, ಚಿತ್ರೀಕರಣಕ್ಕೆ ಹೋಗುವುದಕ್ಕೆ ಇನ್ನಷ್ಟು ಸಮಯ ಬೇಕಿದೆ. ಆದರೆ ಚಿತ್ರದ ನಾಯಕ‌ನಟ ವಿಜಯ್ ಸೂರ್ಯ ಅವರ ಬರ್ತ್ ಡೇ ಗಿಫ್ಟ್ ಆಗಿ ಸೆ.೭ಕ್ಕೆ ಚಿತ್ರ ಫಸ್ಟ್ ಲುಕ್ ಲಾಂಚ್ ಮಾಡುವ ಮೂಲಕ ಚಿತ್ರ ತಂಡ ತನ್ನ ಅಧಿಕೃತವಾಗಿ ಚಿತ್ರ ನಿರ್ಮಾಣ ಘೋಷಿಸಿದರು ನಿರ್ಮಾಪಕ‌ಗುರು ಬಂಡಿ.‌ಇದಕ್ಕೂ ಮುನ್ನ ಅಂದರೆ ಸೆ.5  ರಂದು ಚಿತ್ರತಂಡ ತನ್ನ ಮೊದಲ‌ ಸುದ್ದಿಗೋಷ್ಟಿಯ ಮೂಲಕ ಮಾಧ್ಯಮದ‌ ಮುಂದೆ‌ ಹಾಜರಾಗಿ ಚಿತ್ರದ ವಿವರ ನೀಡಿತು.

ತನ್ವಿ ಪ್ರೊಡಕ್ಷನ್ ಮೂಲಕ ಇದು ಮೂರನೇ ಸಿನಿಮಾ. ನಾಯಕ‌ನಟ ವಿಜಯ್ ಸೂರ್ಯ ಅವರ ಬಹುದಿ‌ನದ ಒಡನಾಟದೊಂದಿಗೆ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಇದಕ್ಕೆ ನಾನೇ ಕತೆ ಬರೆದಿದ್ದು. ನಮ್ಮೂರು ಕಲಬುರಗಿಯಲ್ಲಿ  25 ವರ್ಷಗಳ ಹಿಂದೆ ನಡೆದ ಘಟನೆ.‌ಅದು  ಅಲೋಪತಿ ಮತ್ತು ಸಂಪ್ರಾದಾಯಕ ಔಷಧ ಬಳಕೆ ಗೆ ಸಂಬಂಧಿಸಿದ ಘಟನೆ ಅದು. ಅದಕ್ಕೆ ಒಂದಷ್ಟು ಈಗಿನ ಕಮರ್ಷಿಯಲ್ ಅಂಶಗಳನ್ನು ಸೇರಿಸಿಕೊಂಡು ಸಿನಿಮಾ‌ಮಾಡುತ್ತಿದ್ದೇವೆ’ ಎನ್ನುತ್ತಾ ಸಿನಿಮಾದ ಕತೆಯ ಕುರಿತು ಮಾಹಿತಿ ಹಂಚಿಕೊಂಡರು ನಿರ್ಮಾಪಕ ಗುರು ಬಂಡಿ.

ನಿರ್ದೇಶಕ ಡಾ. ದೇವರಾಜ್, ಈ ಕತೆಗೆ ಹೇಗೆಲ್ಲ‌ರಂಜನೀಯ ಅಂಶಗಳನ್ನು ಸೇರಿಸಲು ಸಂಶೋಧನೆ ನಡೆಸಲಾಯಿತು ಎಂಬುದನ್ನು‌ ಹೇಳಿಕೊಂಡರು. ಇದೇ ಮೊದಲು ಮೂರು ಶೇಡ್ ಇರುವಂತಹ ಪಾತ್ರಕ್ಕೆ‌ಬಣ್ಣ ಹಚ್ಚುತ್ತಿರುವ ನಟ ವಿಜಯ್ ಸೂರ್ಯ, ಸರಿಯಾದ ಸಮಯಕ್ಕೆ‌ಸರಿಯಾದ ಸಿನಿಮಾ‌‌‌ಸಿಕ್ಕಿದೆ ಅಂತ ಖುಷಿಪಟ್ಟರು. ಚಿತ್ರಕ್ಕಿನ್ನು ನಾಯಕಿ ಆಯ್ಕೆ‌ಆಗಿಲ್ಲ. ಜತೆಗೆ ಉಳಿದ ಕಲಾವಿದರ ಅಯ್ಕೆ ಕೂಡ ಬಾಕಿಯಿದೆ.‌ಅವೆಲ್ಲವನ್ನು ಮುಗಿಸಿಕೊಂಡೇ ಚಿತ್ರತಂಡ‌ ಚಿತ್ರೀಕರಣಕ್ಕೆ ಕಾಲಿಡಲಿದೆಯಂತೆ. ಉಳಿದಂತೆ ತಾಂತ್ರಿಕ ವಿಭಾಗದಲ್ಲಿ ಹೊಸಬರ ತಂಡಕ್ಕೆ ಹೆಚ್ಚು ಆದ್ಯತೆ ಸಿಕ್ಕಿದೆ ಎಂಬುದಿಲ್ಲಿ ವಿಶೇಷ.

Related Posts

error: Content is protected !!