ಗ್ಲಾಮರಸ್ ನಟಿ ಶುಭಾಪುಂಜಾ ಅಭಿನಯದ ಅಂಬುಜ ಚಿತ್ರತಂಡದಿಂದ ಇಂದು(ಸೆ.6) ಮತ್ತೊಂದು ತಾಜಾ ಸುದ್ದಿ ಹೊರಬಿದ್ದಿದೆ.ನಿರ್ದೇಶಕ ಶ್ರೀನಿ ಹನುಮಂತರಾಜು ಚಿತ್ರದಲ್ಲಿನ ಮತ್ತೊಂದು ಪಾತ್ರದ ಕಲಾವಿದರ ಹೆಸರು ರಿವಿಲ್ ಮಾಡಿದ್ದಾರೆ.
ಕಾಮಿಡಿಕಿಲಾಡಿಗಳು ಹಾಗೂ ಡ್ರಾಮಾಜೂನಿಯರ್ಸ್ ರಿಯಾಲಿಟಿ ಶೋ ನಿರ್ದೇಶಕ ಶರಣಯ್ಯ ಅಂಬುಜ ಚಿತ್ರದ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಚಿತ್ರದಲ್ಲಿ ಅವರು ‘ಬ್ರೋಕರ್ ಬಸವ’ ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.’ಅಂಬುಜ” ಒಂದು ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಈಗಾಗಲೇ ಹಲವು ಕಾರಣಕ್ಕೆ ಕುತೂಹಲ ಮೂಡಿಸಿದೆ.
ಶುಭಾ ಪುಂಜಾ ಪಾತ್ರ ರಿವೀಲ್ ಆದ ನಂತರವೀಗ ಶರಣಯ್ಯ ಅವರ ಪಾತ್ರವನ್ನು ಪರಿಚಯಿಸಿಕೊಟ್ಟಿದ್ದಾರೆ ನಿರ್ದೇಶಕ ಶ್ರೀನಿ.