ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಬರ್ತ್ ಡೇ ಸಂಭ್ರಮ. 34 ನೇ ವಸಂತಕ್ಕೆ ಕಾಲಿಟ್ಟಿರುವ ಧ್ರುವ ಸರ್ಜಾ ಅದ್ದೂರಿ ಬರ್ತ್ ಡೇಗೆ ಬ್ರೇಕ್ ಹಾಕಿದ್ದಾರೆ. ಅಣ್ಣನ ಅಗಲಿಕೆ ಹಾಗೂ ಕೊರೊನಾ ಕಾರಣದಿಂದ ಕಳೆದ ವರ್ಷ ಬರ್ತ್ ಡೇ ಆಚರಣೆ ಬೇಡ ಎಂದಿದ್ದರು. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳೋದಕ್ಕೆ ಮನಸ್ಸಿಲ್ಲ ದಯವಿಟ್ಟು ಅಭಿಮಾನಿಗಳು ಯಾರು ಬೇಸರಗೊಳ್ಳಬೇಡಿ, ತಾವು ಎಲ್ಲಿರುತ್ತೀರೋ ಅಲ್ಲಿಂದಲೇ ವಿಶಸ್ ತಿಳಿಸಿ ಎಂದಿದ್ದರು. ಹೀಗಾಗಿ, ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಬಹದ್ದೂರ್ ಹುಡುಗನ ಹುಟ್ಟುಹಬ್ಬಕ್ಕೆ ನಿರ್ದೇಶಕ ಎ.ಪಿ ಅರ್ಜುನ್ ಟ್ರೀಟ್ ಕೊಟ್ಟಿದ್ದಾರೆ. ಮಾರ್ಟಿನ್ ಚಿತ್ರದ ಮಗದೊಂದು ಲುಕ್ ನ ಅನಾವರಣ ಮಾಡಿದ್ದಾರೆ. ಕೈಗೆ ತೊಡಿಸಿರುವ ಬೇಡಿಯನ್ನು ಹಲ್ಲಲ್ಲಿ ಕಡಿದು ಬಿಡಿಸಿಕೊಳ್ಳುವ, ಎದುರಾಳಿಯನ್ನು ಕೆಕ್ಕರಿಸಿಕೊಂಡು ನೋಡುತ್ತಿರುವ ದೃಶ್ಯ ಕಂಡು ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ತೋಳಿನ ಮೇಲಿರುವ ಇಂಡಿಯನ್ ಟ್ಯೂಟ್ ಹುಚ್ಚೆಬ್ಬಿಸುತ್ತಿದೆ.ಪ್ಯಾನ್ ಇಂಡಿಯಾದಲ್ಲಿ ತಯ್ಯಾರಾಗುತ್ತಿರುವ ‘ ಮಾರ್ಟಿನ್’ ಚಿತ್ರ ಟೈಟಲ್ ಮಾತ್ರವಲ್ಲ ಪೋಸ್ಟರ್ ನಿಂದಲೇ ಬಜಾರ್ ನಲ್ಲಿ ಬ್ರ್ಯಾಂಡಿಂಗ್ ನಲ್ಲಿದೆ.
ಅದ್ದೂರಿ ಕಾಂಬೋ ಮತ್ತೆ ಒಂದಾಗಿರುವ ಮಾರ್ಟಿನ್ ಮೇಲೆ ನಿರೀಕ್ಷೆಗಳು ನೂರಿವೆ. ನಾಲ್ಕನೇ ಚಿತ್ರಕ್ಕೆ ಗಡಿದಾಟಿದ ಬೆಂಕಿಚೆಂಡು ಮಾರ್ಟಿನ್ ಮೂಲಕ ಪ್ಯಾನ್ ಇಂಡಿಯಾ ತುಂಬೆಲ್ಲಾ ಮೇನಿಯಾ ಸೃಷ್ಟಿಸಿಕೊಳ್ತಾರೆ ಎನ್ನುವ ಸೂಚನೆ ಪೋಸ್ಟರ್ ನಿಂದಲೇ ಸಿಗುತ್ತಿದೆ. ಸಿಂಪಲ್ಲಾಗಿ ಮೂರು ಹೊಡೆದು ಸಿಡಿದೆದ್ದ ಸಿಡಿಗುಂಡು ನಾಲ್ಕನೇ ಚಿತ್ರದಲ್ಲಿ ಪೊಗರು ತೋರಿಸಿದರು. ಈಗ ಮಾರ್ಟಿನ್ ಮೇಲೆ ಬಹಳಷ್ಟು ವರ್ಕ್ ಮಾಡಿ ಅಖಾಡಕ್ಕೆ ಧುಮ್ಕಿದ್ದಾರೆ.
ಮತ್ತೊಂದು ಹಿಟ್ ಕೊಡುವುದಕ್ಕೆ ಧ್ರುವ ಜೊತೆ ನಿರ್ದೇಶಕ ಎ.ಪಿ ಅರ್ಜುನ್ ಕೂಡ ಪಣತೊಟ್ಟಿದ್ದಾರೆ. ಇಡೀ ಟೀಮ್ ಹಾರ್ಡ್ ವರ್ಕ್ ಮಾಡ್ತಿದ್ದು, ವೈಸಾಗ್ ನಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದೆ. ಉದಯ್ ಕೆ. ಮೆಹ್ತಾ ಬಂಡವಾಳದಲ್ಲಿ ಮಾರ್ಟಿನ್ ರಿಚ್ ಆಗಿ ಮೂಡಿಬರಲಿದೆ.
ನಟರಾಕ್ಷಸನಿಗೆ ಥಿಯೇಟರ್ ಸಿಗ್ತಿಲ್ಲವಾ? ಏನ್ ಹೇಳ್ತಿದ್ದೀರಿ ನೀವು? ಸರ್ಕಾರ ಹಂಡ್ರೆಡ್ ಪರ್ಸೆಂಟ್ ಅನುಮತಿ ಕೊಟ್ಟಿದ್ದೆ ತಾನೇ? ಮತ್ಯಾಕೆ ನಮ್ಮ ಡಾಲಿಗೆ ಥಿಯೇಟರ್ ಕೊಡ್ತಿಲ್ಲ? ಕರುನಾಡಿನಲ್ಲಿ ನಮ್ಮ ಮಿಠಾಯಿ ಸೂರಿ ಅಣ್ಣಂದು ಹವಾ ಹೆಂಗೈತಿ ಅನ್ನೋದು ಅವರಿಗೆ ಗೊತ್ತಿಲ್ಲವಾ? ಹೀಗಂತ ಕೇಳ್ತಿರೋದು ಒನ್ ಅಂಡ್ ಓನ್ಲಿ ಡಾಲಿಬಾಸ್ ಅಭಿಮಾನಿಗಳು. ಫ್ಯಾನ್ಸ್ ಕೇಳ್ತಿರೋದ್ರಲ್ಲಿ ಅರ್ಥ ಇದೆ. ಹಾಗಾದ್ರೆ, ಡಾಲಿ ದರ್ಬಾರ್ ಚಿತ್ರಮಂದಿರಲ್ಲಿ ಯಾಕಿಲ್ಲ? ರತ್ನನ್ ಪ್ರಪಂಚ ಓಟಿಟಿಯಲ್ಲಿ ಬಿಡುಗಡೆಯಾಗ್ತಿರುವುದಕ್ಕೆ ಕಾರಣ ಏನು? ನೋಡೋಣ ಬನ್ನಿ
ಡಾಲಿ ಬಜಾರ್‌ನಲ್ಲಿ ಈ ಹೆಸರಿಗಿರುವ ಬೆಲೆನೇ ಬೇರೆ ಬಿಡಿ. ಡೈರೆಕ್ಟರ್ ಸೂರಿಯವರು ಅದ್ಯಾವ್ ಗಳಿಗೆಯಲ್ಲಿ ಡಾಲಿ ಕ್ಯಾರೆಕ್ಟರ್‌ನ ಸ್ಕೆಚ್ ಮಾಡಿದ್ರೋ ಏನೋ ಗೊತ್ತಿಲ್ಲ.? ಕೇವಲ ಎರಡೇ ಎರಡು ಅಕ್ಷರದ ಡಾಲಿ ಪಾತ್ರ ಧನಂಜಯ್ ಬದುಕುನ್ನೇ ಬದಲಾಯಿಸಿಬಿಡ್ತು. ಗಾಂಧಿನಗರದಲ್ಲಿ ಡಾಲಿಯ ಹೊಸ ಅಲೆ ಆರಂಭವಾಯ್ತು, ಧನಂಜಯ್ ನಟನೆಗೆ ನಟರಾಕ್ಷಸ' ಪಟ್ಟ ಸಿಗ್ತು. ಅಭಿಮಾನಿ ಸಂಘಗಳು ಹುಟ್ಟಿಕೊಂಡವು, ಲಕ್ಷಾಂತರ ಫ್ಯಾನ್-ಫಾಲೋಯರ್ಸ್ ಸಿಕ್ಕರು. ನಿರ್ದೇಶಕರು-ನಿರ್ಮಾಪಕರು ಡಾಲಿ ಕಾಲ್‌ಶೀಟ್‌ಗೆ ಕ್ಯೂ ನಿಂತರು. ಪರಭಾಷೆಯವರು ರೆಡ್‌ಕಾರ್ಪೆಟ್ ಹಾಕಿಕೊಂಡು ರ‍್ಕೊಂಡು ಹೋದರು. ಇವತ್ತು, ಧನಂಜಯ್ ಅಕೌಂಟ್‌ನಲ್ಲಿ ಪಿಂಕ್‌ನೋಟ್ ಕೇಕೆಹಾಕ್ತಿದೆ ಅಂದರೆ, ಮನೆಮುಂದೆ ದುಬಾರಿ ಕಾರು ನಿಂತಿದೆ ಅಂದರೆ, ಕೈಯಲ್ಲಿ ಹತ್ತಾರು ಸಿನಿಮಾಗಳು ಇವೆ ಅಂದರೆ, ಅದಕ್ಕೆ ಮೊದಲ ಕಾರಣಡಾಲಿ’ ಪಾತ್ರ ಮತ್ತು ಆ ಪಾತ್ರದ ಸೃಷ್ಟಿಕರ್ತ ಸೂರಿಯವರು. ಅಂತಿಮವಾಗಿ ಸಿನಿಮಾ ಮೇಲೆ ಧನಂಜಯ್‌ಗಿರುವ ಶ್ರದ್ದೆ-ಭಕ್ತಿ-ನಿಯತ್ತು ಮತ್ತು ಕಲಾಪ್ರೀತಿಯೇ ಡಾಲಿ ಬೇಡಿಕೆಗೆ ಸಾಕ್ಷಿ ಅಲ್ಲವೇ.
ಎಲ್ಲಾ ಓಕೆ ರತ್ನನ್ ಪ್ರಪಂಚ' ಚಿತ್ರ ಓಟಿಟಿನಲ್ಲಿ ಯಾಕೇ ಬಿಡುಗಡೆಯಾಗ್ತಿದೆ? ಥಿಯೇಟರ್ ಯಾಕೇ ಸಿಗ್ತಿಲ್ಲ ಹೇಳ್ರಿ ಫಸ್ಟ್? ನಿಜವಾಗ್ಲೂ ಈ ಪ್ರಶ್ನೆಗೆ ಅಂತಿಮ ಉತ್ತರ ಕೊಡುವುದಕ್ಕೆ ಸಾಧ್ಯವಿಲ್ಲ. ಆದರೆ,ರತ್ನನ್ ಪ್ರಪಂಚ’ ಚಿತ್ರದ ಅನ್ನದಾತರು ಅಮೇಜಾನ್ ಪ್ರೆöÊಮ್‌ನಲ್ಲೇ ಮೊದಲು ರಿಲೀಸ್ ಮಾಡೋದಕ್ಕೆ ನಿರ್ಧಾರ ಮಾಡಿರೋದ್ರಿಂದ ಒಂದೊಳ್ಳೆ ರೇಟ್‌ಗೆ ಚಿತ್ರ ಮಾರಾಟವಾಗಿರಬಹುದು. ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ. ಜಿ. ರಾಜ್ ಇಬ್ಬರು ಖುಷಿಯಾಗಿರಬಹುದು. ಹೀಗಾಗಿಯೇ, ಸ್ಟಾರ್‌ನಟರುಗಳಿಬ್ಬರ ಸಿನಿಮಾದ ಅಬ್ಬರ ಆರ್ಭಟದ ನಡುವೆ `ರತ್ನನ್ ಪ್ರಪಂಚ’ ಬೇಡವೆಂದು ತೀರ್ಮಾನಿಸಿ ಓಟಿಟಿ ಮೊರೆ ಹೋಗಿರಬಹುದು ಎನ್ನುತ್ತೆ ಮೂಲ ಮತ್ತು ವಾಸ್ತವ
ಅಕ್ಟೋಬರ್ ೧೪ರಂದು ಸಲಗ-ಕೋಟಿಗೊಬ್ಬ-೩ ಚಿತ್ರ ತೆರೆಗೆ ಅಪ್ಪಳಿಸ್ತಿರುವುದು ನಿಮಗೆಲ್ಲಾ ಗೊತ್ತೆಯಿದೆ. ದುನಿಯಾ ವಿಜಯ್ ಹಾಗೂ ಅಭಿನಯ ಚಕ್ರವರ್ತಿ ಇಬ್ಬರು ಮುಖಾಮುಖಿಯಾಗ್ತಿರೋದ್ರಿಂದ ಸಣ್ಣಪುಟ್ಟ ಸಿನಿಮಾಗಳು ತಮ್ಮ ರಿಲೀಸ್ ಡೇಟ್‌ನ ಮುಂದಕ್ಕೆ ಹಾಕುತ್ತಿದ್ದಾರೆ. ಆದರೆ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕದ ರತ್ನನ್ ಪ್ರಪಂಚ' ಟೀಮ್ ಅಮೇಜಾನ್ ಪ್ರೆöÊಮ್‌ನಲ್ಲಿ ಅಕ್ಟೋಬರ್ ೨೨ರಂದು ರಿಲೀಸ್ ಮಾಡೋದಕ್ಕೆ ಮುಂದಾಗಿದ್ದಾರೆ. ಓಟಿಟಿಯಲ್ಲಿ ಬಿಡುಗಡೆ ಗೊಂಡ ನಂತರ ಎಷ್ಟೋ ಸಿನಿಮಾಗಳು ಬೆಳ್ಳಿತೆರೆಯಲ್ಲೂ ಪ್ರದರ್ಶನ ಕಾಣುತ್ತಿವೆ, ಅದರಂತೇ, ಡಾಲಿ ಧನಂಜಯ್ ಅಭಿನಯದರತ್ನನ್ ಪ್ರಪಂಚ’ ಚಿತ್ರ ಕೂಡ ಅಮೇಜಾನ್‌ನಲ್ಲಿ ವೀಕ್ಷಕರನ್ನು ತಲುಪಿ ನಂತರ ಗಾಂಧಿನಗರದಲ್ಲಿ ಚಿತ್ರಪ್ರೇಮಿಗಳನ್ನು ಕೈಬೀಸಿ ಕರೆಯಬಹುದು.
ರತ್ನನ್ ಪ್ರಪಂಚ' ಬಹಳಷ್ಟು ಕೂತೂಹಲ ಮೂಡಿಸಿದ್ದ ಚಿತ್ರ. ಇದು ಬರೀ ಸ್ಯಾಂಪಲ್ ಅಷ್ಟೇ ಇನ್ನೂ ಏನೆನೋ ಐತಿ. ಈ ನನ್ನ ಬೊಂಬಾಟ್ ಆಗಿರೋ ಪ್ರಪಂಚಾನ ನೋಡ್ಬೇಕು ನೀವು. ನಮ್ಮ ಮದರ್ ಸರೋಜಾ, ಮಯೂರಿ, ತಬಸುಮು, ಅಹಮ್ಮದ್ ಅಲಿ, ಯಲ್ಲವ್ವ, ಉಡಾಳ್ ಬಾಬುರಾವ್, ಬಸಪ್ಪ, ಬೆಣ್ಣಿ ನಾನು ರತ್ನಾಕರ ಹೀಗಂತ ಹೇಳಿ ಕೊನೆಗೆ ನಿಮ್ಮಮ್ಮ ನಿಮ್ಮಮ್ಮ ಅಲ್ಲ... ನಮ್ಮಮ್ಮ ನಮ್ಮಮ್ಮ ಅಲ್ಲ... ನಮ್ಮಮ್ಮ ನಮ್ಮಮ್ಮ...ನಿಮ್ಮಮ್ಮ ನಿಮ್ಮಮ್ಮ... ಅಂತ ಡಾಲಿ ಡೈಲಾಗ್ ಬಿಟ್ಟಿದ್ದರಿಂದ ಸಿನಿರಸಿಕರ ಮನಸ್ಸು ಅರಳಿತ್ತು. ಪ್ರೇಮ್ ಅವರ ಜೋಗಿ ಪಿಕ್ಚರ್‌ನಲ್ಲಿ ಯಾವ್ ರೇಂಜ್ಗೆ ಮದರ್ ಸೆಂಟಿಮೆAಟೋ ಇತ್ತೋ ಅಂತಹದ್ದೇ ಸೆಂಟಿಮೆAಟ್ ಇಲ್ಲೂ ಇದೆ ಅಂತ ಹೇಳಿದಾಗರತ್ನಾಕರನ ಪ್ರಪಂಚ’ ಎರಡನೇ ಜೋಗಿಯಾಗ್ಬೋದಾ ಗುರು ಅಂತ ಪ್ರೇಕ್ಷಕರು ಪ್ರಶ್ನೆ ಮಾಡಿಕೊಂಡಿದ್ದುAಟು.
ದಯವಿಟ್ಟು ಗಮನಿಸಿ' ಹೆಸರಿನ ಚಿತ್ರ ಮಾಡಿ ಕನ್ನಡ ಸಿನಿಮಾಪ್ರೇಕ್ಷಕರ ಹೃದಯ ಗೆದ್ದಿದ್ದ ನಿರ್ದೇಶಕ ರೋಹಿತ್ ಪದಕಿ,ರತ್ನನ್ ಪ್ರಪಂಚ’ ಎನ್ನುವ ಕೂತೂಹಲಭರಿತ ಚಿತ್ರದೊಂದಿಗೆ ಮರಳಿದ್ದಾರೆ. ರತ್ನಾಕರನಾಗಿ ಡಾಲಿ ಅಭಿನಯಿಸಿದ್ದು ಮಿಡಲ್ ಕ್ಲಾಸ್ ಹುಡುಗನಾಗಿ ಮಿಂಚಿದ್ದಾರೆ. ಉಮಾಶ್ರೀ ರತ್ನಾಕರನಿಗೆ ತಾಯಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ರೆಬಾ ಜಾನ್ ಹೀರೋಯಿನ್ನಾಗಿ ಕಂಗೊಳಿಸಿದ್ದಾರೆ. ಹಿರಿಯ ನಟಿ ಶ್ರುತಿ, ಅನುಪ್ರಭಾಕರ್, ರವಿಶಂಕರ್‌ಗೌಡ, ಪ್ರಮೋದ್, ವೈನಿಧಿ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂಭತ್ತು ಪಾತ್ರಗಳು ಒಂದು ಕೂತೂಹಲಭರಿತ ಕಥೆಯನ್ನು ಪ್ರೇಕ್ಷಕ ಮಹಾಷಯರಿಗೆ ಉಣಬಡಿಸೋದಕ್ಕೆ ಫಿಲ್ಮ್ಟೀಮ್ ಜೊತೆ ಅಮೇಜಾನ್ ಕೂಡ ರೆಡಿಯಾಗಿದೆ.
ನಗು-ತಿರುವು-ಪ್ರೀತಿಯ ಹೂರಣವೇ ರತ್ನನ್ ಪ್ರಪಂಚ' ಎಂದು ಟ್ವೀಟ್ ಮಾಡಿರುವ ಡಾಲಿ ಸಿನಿಮಾದತ್ತ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ರತ್ನನ್ ಪ್ರಪಂಚ’ಕ್ಕಿದ್ದು ಹಾಡುಗಳು ಅದ್ಬುತವಾಗಿ ಮೂಡಿಬಂದಿದೆ. ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯ ಚಿತ್ರ ಇದಾಗಿದೆ. ಮನರಂಜನೆಗೆ ಬರವಿಲ್ಲದ `ರತ್ನನ್ ಪ್ರಪಂಚ’ವನ್ನು ಸಿನಿಮಾಪ್ರೇಮಿಗಳು ಯಾವ್ ರೀತಿ ಸ್ವೀಕರಿಸುತ್ತಾರೆ ಅನ್ನೋದನ್ನು ಕಾದುನೋಡಬೇಕಿದೆ. ಲಾಂಗ್, ಪಿಸ್ತೂಲ್ ಬಿಟ್ಟು ಕೈಯಲ್ಲಿ ಮಲ್ಲಿಗೆ ಹೂವು, ನಿಂಬೆಹುಳಿ ಪ್ಲೇವರ್ ಪೆಪ್ಪರ್ ಮೆಂಟ್ ಇಟ್ಕೊಂಡು ಸ್ಕಿçÃನ್‌ಮೇಲೆ ಬರುತ್ತಿರುವ ಮಿಠಾಯಿ ಸೂರಿ ಮನಸೂರೆಗೊಳ್ತಾರಾ ಜಸ್ಟ್ ವೇಯ್ಟ್ ಅಂಡ್ ವಾಚ್
ಹೆಸರು ನಿಖಿತಾ ಸ್ವಾಮಿ. ಕನ್ನಡದ ಉದಯೋನ್ಮುಖ ನಟಿ. ವೃತ್ತಿಯಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿದ್ದವರು. ಸಿನಿಮಾ ಮೇಲಿನ ಆಸಕ್ತಿಯಿಂದ ಕೈತುಂಬಾ ಸಂಬಳ ಸಿಕ್ತಿದ್ದ ಆ ಕೆಲಸಕ್ಕೆ ಗುಡ್ ಬೈ ಹೇಳಿ ಗಾಂಧಿ ನಗರಕ್ಕೆ ಎಂಟ್ರಿ ಆಗಿದ್ದಾರೆ. ʼಸದ್ದುʼ ಎನ್ನುವುದು ಇವರ ಚೊಚ್ಚಲ ಮೂವೀ. ಕಳೆದ ಎರಡು ವರ್ಷಗಳ ಹಿಂದೆ, ಅಂದ್ರೆ ಕೊರೋನಾ ಬರೋದಿಕ್ಕಿಂತ ಮುಂಚೆ ಈ ಚಿತ್ರ ತೆರೆ ಕಂಡಿತ್ತಾದರೂ, ನಿರೀಕ್ಷೆಯಷ್ಟು ಈ ಸಿನಿಮಾಕ್ಕೆ ಸಕ್ಸಸ್ ಸಿಗಲಿಲ್ಲ. ಆಗ ಬಂದ ರಾಶಿ ರಾಶಿ ಚಿತ್ರಗಳ ನಡುವೆ ʼಸದ್ದುʼ ಸದ್ದೇ ಮಾಡಲಿಲ್ಲ. ಹಾಗಂತ, ನಿಖಿತಾ ಸ್ವಾಮಿ, ಅವರಿಗೇನು ನಷ್ಟ ಆಗಲಿಲ್ಲ. ಆ ಸಿನಿಮಾ ಸದ್ದು ಮಾಡದಿದ್ದರೂ, ಅವರು ಮಾತ್ರ ಸ್ಯಾಂಡಲ್‌ವುಡ್ ನಲ್ಲಿ ಸಖತ್ ಸಂಡ್ ಮಾಡಿದರು. ಆ ಸಿನಿಮಾ ಬಂದು ಹೋದ ಮೇಲೆ ಅವರಿಗೆ ಸಾಕಷ್ಟು ಸಿನಿಮಾ ಸಿಕ್ಕವು. ಕನ್ನಡದ ಜತೆಗೆ ತೆಲುಗಿಗೂ ಹೆಜ್ಜೆ ಹಾಕಿದರು. ಸದ್ಯಕ್ಕೀಗ ಅವರ ಕೈಯಲ್ಲಿ ಏಳೆಂಟು ಸಿನಿಮಾ ಇವೆ. ಅವೆಲ್ಲವೂ ಈಗ ರಿಲೀಸ್ ಗೆ ರೆಡಿ ಆಗುತ್ತಿವೆ. ಈ ಪೈಕಿ ಈ ವಾರ ʼ ಇದು ಆಕಾಶವಾಣಿ ಬೆಂಗಳೂರು ನಿಲಯʼ ಎನ್ನುವ ಹೆಸರಿನ ಚಿತ್ರ ತೆರೆ ಕಾಣುತ್ತಿದೆ.
ʼಆಕಾಶವಾಣಿ ಬೆಂಗಳೂರು ನಿಲಯʼ ಎನ್ನುವ ಚಿತ್ರದ ಶೀರ್ಷಿಕೆಯೇ ವಿಭಿನ್ನ. ಯಾಕಂದ್ರೆ ʼಆಕಾಶವಾಣಿ ಬೆಂಗಳೂರು ನಿಲಯʼ ಎನ್ನುವ ಪದವನ್ನು ನೀವೆಲ್ಲ ಅದೆಷ್ಟು ಸಲ ಕೇಳಿದ್ದೀರೋ ಗೊತ್ತಿಲ್ಲ. ಸದಾ ರೇಡಿಯೋದಲ್ಲಿ ಇದು ಅನುರಣಿಸುತ್ತಲೇ ಇರುತ್ತದೆ. ಅದೇ ಹೆಸರಲ್ಲಿ ಈ ಸಿನಿಮಾ ರೆಡಿಯಾಗಿ ರಿಲೀಸ್ ಆಗುತ್ತಿದೆ. ಹಾಗೆಂದಾಕ್ಷಣ ಇದು ಆಕಾಶವಾಣಿ ಬೆಂಗಳೂರು ನಿಲಯಕ್ಕೆ ಸಂಬಂಧಿಸಿದ ಚಿತ್ರವಲ್ಲ. ಚಿತ್ರಕ್ಕೆ ಕಥೆ ಬರೆದ ವಿಜಯ್ ಕುಮಾರ್ ಅವರ ಪ್ರಕಾರ, ಈ ಚಿತ್ರದ ಶೀರ್ಷಿಕೆಗೂ, ಆಕಾಶಾವಾಣಿ ಬೆಂಗಳೂರು ನಿಲಯಕ್ಕೂ ಯಾವುದೇ ಕನೆಕ್ಷನ್ ಇಲ್ಲ. ಚಿತ್ರದ ನಾಯಕನ ಹೆಸರು ಆಕಾಶ, ಹಾಗೆಯೇ ನಾಯಕಿ ಹೆಸರು ವಾಣಿ. ಜತೆಗೆ ಅವರ ನಿವಾಸ ಬೆಂಗಳೂರು ನಿಲಯ. ಇದೆಲ್ಲವೂ ಇಲ್ಲಿ ಒಟ್ಟಾಗಿ ಆಕಾಶವಾಣಿ ಬೆಂಗಳೂರು ನಿಲಯ ಎನ್ನುವುದಾಗಿದೆ ಅನ್ನೋದು ಅವರ ಸ್ಪಷನೆಯ ಮಾತು. ಅಂದ ಹಾಗೆ, ಇಲ್ಲಿ ವಾಣಿಯಾಗಿ ನಿಮ್ಮ ಮುಂದೆ ಬರುತ್ತಿದ್ದಾರೆ ಗ್ಲಾಮರಸ್ ನಟಿ ನಿಖಿತಾ ಸ್ವಾಮಿ.
ʼ ಪಾತ್ರದ ಹೆಸರು ವಾಣಿ ಅಂತ. ಹೆಸರು ಒಂಥರ ಹಳೆಯ ಶೈಲಿಯಲ್ಲಿದ್ದರೂ, ಆಕೆ ಪಕ್ಕಾ ಮಾರ್ಡನ್ ಹುಡುಗಿ. ಇದು ಮಹಿಳಾ ಪ್ರದಾನ ಚಿತ್ರ. ವಾಣಿ ಬಾಲ್ಯದಲ್ಲಿ ಇದ್ದಾಗಲೇ ತನ್ನ ಪೋಷಕರನ್ನು ಕಳೆದುಕೊಳ್ಳುತ್ತಾಳೆ. ತುಂಬಾ ಕಷ್ಟ ಅನುಭವಿಸ್ತಾಳೆ. ಅವಳು ಸ್ವಂತ ದುಡಿಯಬೇಕಾಗುತ್ತದೆ. ಇದೇಕಾರಣಕ್ಕೆ ಆಕೆ ಹಳ್ಳಿ ಬಿಟ್ಟು ಬೆಂಗಳೂರಿಗೆ ಬರ್ತಾಳೆ. ಲೈಫ್ ಅನ್ನು ಚಾಲೆಂಜ್ ಆಗಿ ತೆಗೆದುಕೊಳ್ತಾಳೆ. ಹಾಗಂತ ಆಕೆ, ಸಮಾಜದಲ್ಲಿ ಯಾವುದೇ ತಪ್ಪು ದಾರಿಗೆ ಹೋಗೋದಿಲ್ಲ. ಬದಲಿಗೆ ಸಮಾಜವೇ ಮೆಚ್ಚುಗೆ ಹೇಳುವಂತ ಸ್ವಂತ ದುಡಿಮೆಗೆ ಮುಂದಾಗ್ತಾಳೆ, ಅಲ್ಲಿಂದ ಆಕೆಯ ಬದುಕಿನ ಪಯಣ ಏನು ಅಂತ ಈ ಚಿತ್ರದಲ್ಲಿ ತೋರಿಸಲಾಗಿದೆʼ ಎನ್ನುವ ಮೂಲಕ ಚಿತ್ರದಲ್ಲಿನ ಪಾತ್ರ ಬಗೆಯನ್ನು ವಿವರಿಸುತ್ತಾರೆ ನಟಿ ನಿಖಿತಾ ಸ್ವಾಮಿ.
ಕೊರೋನಾ ಅಂತ ಸಿನಿಮಾ ಚಟುವಟಿಕೆಗಳಲ್ಲಿ ಇಲ್ಲದೆ ಎರಡು ವರ್ಷಗಳೇ ಆಗಿದ್ದವು. ಮೊದಲನೇ ಅಲೆ ಮುಗಿದು ಇನ್ನೇನು ಸಿನಿಮಾ ಇಂಡಸ್ಟ್ರಿ ಸರಿ ದಾರಿಗೆ ಬಂತು ಅನ್ನೋ ಹೊತ್ತಿಗೆ ಮತ್ತೆ ಎರಡನೇ ಅಲೆ ಶುರುವಾಯಿತು. ಅಲ್ಲಿಂದ ಲಾಕ್ ಡೌನ್ ಬಂತು. ಒಂದಷ್ಟು ದಿನಗಳ ನಂತರ ಪರಿಸ್ಥಿತಿ ಒಂದಷ್ಟು ತಿಳಿಯಾಗುವ ಹಂತಕ್ಕೆ ಬಂತು. ಆಗಲೇʼ ಆಕಾಶವಾಣಿ ಬೆಂಗಳೂರು ನಿಲಯʼ ಚಿತ್ರಕ್ಕೆ ಚಿತ್ರೀಕರಣ ನಡೆದಿದ್ದು. ʼ ಹೌದು, ಇದೊಂದು ಸ್ಪೆಷಲ್ ಅಂತಲೇ ಹೇಳಬಹುದು. ಯಾಕಂದ್ರೆ ಕೊರೋನಾ ಸಮಯದಲ್ಲಿ ನಾವೆಲ್ಲ ಹೋರ ಹೋಗುವುದಕ್ಕೂ ಭಯ ಇದ್ದ ದಿನಗಳು. ಆ ಸಮಯದಲ್ಲಿ ಈ ಸಿನಿಮಾಕ್ಕೆ ಶೂಟಿಂಗ್ ಶುರುವಾಯ್ತು. ಹೇಗಪ್ಪಾ ಅಂತ ಭಯ ಇತ್ತು. ಆದ್ರೆ ನಮ್ಮ ಚಿತ್ರದ ಕಥೆ ಬರೆದ ವಿಜಯ್ ಕುಮಾರ್ ಸರ್ ಅವರ ಸ್ವಂತ ಊರು ನೊಣವಿನಕೆರೆ ಅಂತ ಇದೆ. ಅಲ್ಲಿನ ಒಂದು ಮನೆಯಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದ್ದು. ಹಾಗಾಗಿ ನಮಗೆ ಅದೆಲ್ಲ ತುಂಬಾ ಕಂಫರ್ಟ್ ಅಂತೆನಿಸಿತುʼ ಎನ್ನುವುದರ ಮೂಲಕ ʼಇದು ಆಕಾಶವಾಣಿ ಬೆಂಗಳೂರು ನಿಲಯʼ ಚಿತ್ರದ ಚಿತ್ರೀಕರಣದ ಅನುಭವವನ್ನು ತೆರೆದಿಟ್ಟರು ನಟಿ ನಿಖಿತಾ ಸ್ವಾಮಿ.
ʼಜಲ್ಲಿಕಟ್ಟುʼ,ʼಟಕಿಲಾʼ, ʼಅದೊಂದು ದಿನʼ ಚಿತ್ರಗಳ ಜತೆಗೆ ತೆಲುಗಿನಲ್ಲೂ ಒಂದು ಚಿತ್ರದಲ್ಲಿ ನಿಖಿತಾ ಬಣ್ಣ ಹಚ್ಚಿದ್ದಾರೆ. ಎಂಟ್ರಿಯಲ್ಲಿಯೇ ಸಾಕಷ್ಟು ಬ್ಯುಸಿ ಇದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಎಲ್ಲಾ ಸಿನಿಮಾಗಳು ಒಂದಲ್ಲೊಂದು ರೀತಿ ಮಹಿಳಾ ಪ್ರಧಾನ ಚಿತ್ರಗಳೇ ಅಂತೆ. ʼ ಇದೆಲ್ಲ ಹೇಗೋ ಏನೋ ನಂಗೂ ಅಚ್ಚರಿ ಎನಿಸುತ್ತೆ. ಸಿಕ್ಕಿರುವ ಸಿನಿಮಾಗಳೆಲ್ಲವೂ ಒಂದ್ರೀತಿ ಮಹಿಳಾ ಪ್ರಧಾನ ಚಿತ್ರಗಳೆ. ಇದು ನನ್ನ ಪಾಲಿಗೆ ತುಂಬಾ ಸ್ಪೆಷಲ್. ಒಬ್ಬ ನಟಿಗೆ ಇಂತಹ ಅವಕಾಶಗಳು ಬೇಕು. ನಾನು ಸಿನಿಮಾ ಜಗತ್ತಿಗೆ ಬರಬೇಕು ಅಂತ ಯೋಚಿಸುತ್ತಿದ್ದಾಗ ಇಂತಹ ಸಿನಿಮಾಗಳು ಸಿಕ್ಕರೆ ಚೆನ್ನಾಗಿರುತ್ತೆ ಅಂತಂದುಕೊಡಿದ್ದು ಹೌದು. ಅದೃಷ್ಟವೇ ಎನ್ನುವ ಹಾಗೆ ನಾನು ಬಯಸಿದಂತೆಯೇ ಆಗಿದೆʼ ಎನ್ನುತ್ತಾ ಮುದ್ದಾದ ಮುಖದಲ್ಲಿ ನಗು ಚೆಲ್ಲುತ್ತಾರೆ ಈ ನಟಿ.ಇನ್ನು ಕೊರೋನಾ ನಂತರ ಚಿತ್ರಮಂದಿರಗಳಲ್ಲಿ ಹಂಡ್ರಡ್ ಪರ್ಸೆಂಟ್ ಸೀಟು ಭರ್ತಿಗೆ ಅವಕಾಶ ಸಿಕ್ಕ ಬೆನ್ನಲೇ ನಿಖಿತಾ ಸ್ವಾಮಿ ಅಭಿನಯದ ʼಆಕಾಶವಾಣಿ ಬೆಂಗಳೂರು ನಿಲಯʼ ತೆರೆ ಕಾಣುತ್ತಿದೆ. ಇದು ನಿಖಿತಾ ಸೇರಿದಂತೆ ಇಡೀ ಚಿತ್ರ ತಂಡಕ್ಕೂ ಖುಷಿ ಕೊಟ್ಟಿದೆ. ಅದೇ ಖುಷಿಯನ್ನು ಹಂಚಿಕೊಳ್ಳುವಾಗ, ಸಂಭ್ರಮದ ಜತೆಗೆ ನೋವು ಹೊರ ಹಾಕುತ್ತಾರೆ ನಿಖಿತಾ. ಅದಕ್ಕೆ ಕಾರಣ ಕೊರೋನಾ ಅವರ ಬದುಕಿನಲ್ಲೂ ತಂದಿಟ್ಟ ತಲ್ಲಣ.
ʼ ಕೊರೋನಾ ಅನೇಕ ರೀತಿಯಲ್ಲಿ ಪ್ರತಿಯೊಬ್ಬರ ಬದುಕನ್ನು ಕಾಡಿದೆ. ಸಿನಿಮಾ ರಂಗವಂತೂ ತಲ್ಲಣಿಸಿ ಹೋಯಿತು. ಹಾಗೆಯೇ ನನ್ನದೇ ಬದುಕಿನಲ್ಲೂ ಕೊರೋನಾದ ಕಠೋರ ಅನುಭವ ಆಯಿತು. ತಂದೆ ಹುಷಾರಿಲ್ಲದಂತೆ ಆಯಿತು. ಪರೀಕ್ಷೆ ಮಾಡಿಸಿದರೆ, ಕೊರೋನಾ ಪಾಸಿಟಿವ್ ಬಂತು. ಆದಾಗಲೇ ಸಿನಿಮಾ ಕೆಲಸ ಇಲ್ಲದೆ ವರ್ಷಗಳೇ ಆಗಿದ್ದವು. ಕೈಯಲ್ಲಿ ಕಾಸಿಲ್ಲ. ಆ ಸಮಯದಲ್ಲಿ ಅಪ್ಪನನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ, ಅವರನ್ನು ಸೇಪ್ ಆಗಿ ಮನೆಗೆ ಕರೆದುಕೊಂಡು ಬರುವಷ್ಟರಲ್ಲಿ ಸಾಕಷ್ಟು ದುಡ್ಡು ಖರ್ಚಾಯಿತು. ಹಣದ ವಿಷಯ ಇರಲಿ, ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋದೆವು. ಆ ಸಮಯದಲ್ಲಿ ಅನೇಕ ಸಹಾಯಕ್ಕಾಗಿ ಯಾರನ್ನಾದರೂ ಕೇಳೋಣ ಅಂತೆನಿಸಿದರೂ ಮನಸು ಒಪ್ಪಲಿಲ್ಲ. ನಿಜ ಹೇಳ್ತೀನಿ ಅಂತಹ ಜೀವನ ಯಾರಿಗೂ ಬೇಡ. ಅದನ್ನೆಲ್ಲ ನೆನಪಿಸಿಕೊಳ್ಳುವುದಕ್ಕೂ ನಂಗೆ ಕಷ್ಟ ಆಗ್ತಿದೆ ಎನ್ನುತ್ತಾ ದು:ಖ ನುಂಗಿ ಕೊಂಡು ನಕ್ಕರು ನಿಖಿತಾ ಸ್ವಾಮಿ. ಆದರೂ ಈಗ ತಾವು ನಾಯಕಿ ಆಗಿ ಅಭಿನಯಿಸಿರುವ ಆಕಾಶವಾಣಿ ಬೆಂಗಳೂರು ನಿಲಯ ತೆರೆ ಕಾಣುತ್ತಿರುವುದಕ್ಕೆ ಖುಷಿಯಲಿರುವ ಅವರು, ಪ್ರೇಕ್ಷಕರು ಹೆಚ್ಚಿನ ಸುರಕ್ಷತೆ ತೆಗೆದುಕೊಂಡು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಮೂಲಕ ನಮ್ಮನ್ನೆಲ್ಲ ಬೆಳೆಸಬೇಕು ಎಂದು ವಿನಂತಿಸಿಕೊಂಡರು. ಇದೇ ಶುಕ್ರವಾರ ಈ ಚಿತ್ರ ರಾಜ್ಯದ 100 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಗ್ರಾಂಡ್ ಆಗಿ ತೆರೆ ಕಾಣುತ್ತಿದೆ.
ನಿರ್ದೇಶಕ ವಿಜಯ ಪ್ರಸಾದ್ ಮತ್ತು ಲೂಸ್ ಮಾದ ಯೋಗಿ ಇಬ್ಬರ ಕಾಂಬಿನೇಷನ್‌ನಲ್ಲಿ “ಸಿದ್ಲಿಂಗು” ಚಿತ್ರ ಸೂಪರ್ ಹಿಟ್ ಆಗಿತ್ತು. ಇದು ಎಲ್ಲರಿಗೂ ಗೊತ್ತಿರೋ ವಿಷಯ. ಈಗ “ಸಿದ್ಲಿಂಗು ೨” ಬರಲಿದೆ ಎಂಬ ಸುದ್ದಿ ಹೊಸದೇನಲ್ಲ. ಅದಕ್ಕೂ ಮೊದಲು ಮತ್ತೊಂದು ಹೊಸ ಸುದ್ದಿ ಇದೆ. ಅದೇ ಈ ಹೊತ್ತಿನ ವಿಶೇಷ.
ಹೌದು, ನಿರ್ದೇಶಕ ವಿಜಯ ಪ್ರಸಾದ್ ಈಗ ಎರಡು ಸಿನಿಮಾಗಳನ್ನು ನಿರ್ದೇಶಿಸಿ, ಅವುಗಳನ್ನು ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿದ್ದಾರೆ. ಜಗ್ಗೇಶ್ ಅಭಿನಯದ “ತೋತಾಪುರಿ ೧” ಮತ್ತು ಸತೀಶ್ ನೀನಾಸಂ ಅವರ “ಪೆಟ್ರೋಮ್ಯಾಕ್ಸ್” ಚಿತ್ರಗಳನ್ನು ತೆರೆಗೆ ತರುವ ಯೋಜನೆಯಲ್ಲಿದ್ದಾರೆ. ಈ ಎರಡು ಸಿನಿಮಾಗಳ ನಂತರ ನಿರ್ದೇಶಕ ವಿಜಯಪ್ರಸಾದ್ ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಅದೇ “ಪರಿಮಳ ಲಾಡ್ಜ್”.
ಹೌದು, ಕಳೆದ ಎರಡು ವರ್ಷಗಳ ಹಿಂದೆ ನಿರ್ದೇಶಕ ವಿಜಯಪ್ರಸಾದ್ ಅವರು “ಪರಿಮಳ ಲಾಡ್ಜ್” ಸಿನಿಮಾ ಅನೌನ್ಸ್ ಮಾಡಿದ್ದರು. ಈ ಚಿತ್ರಕ್ಕೆ ಪ್ರಸನ್ನ ನಿರ್ಮಾಪಕರಾಗಿದ್ದರು. ಈ ಚಿತ್ರದ ಆರಂಭಕ್ಕೂ ಮನ್ನ ಟೀಸರ್ ಕೂಡ ಬಂದಿತ್ತು. ಸತೀಶ್ ನೀನಾಸಂ, ಲೂಸ್ ಮಾದ ಯೋಗೇಶ್, ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಆ ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಹೊಸ ಸುದ್ದಿ ಅಂದರೆ, ಈ ಚಿತ್ರದ ಪರಿಮಳ ಮತ್ತೆ ಸೂಸುತ್ತಿದೆ.
ಹೌದು, ಸತೀಶ್ ನೀನಾಸಂ ಈಗ “ಪರಿಮಳ ಲಾಡ್ಜ್” ಸಿನಿಮಾದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ವತಃ ವಿಜಯಪ್ರಸಾದ್ ಅವರೇ ಹೇಳಿಕೊಂಡ ಸುದ್ದಿ ಎಲ್ಲೆಡೆ ಹರಡಿದೆ. ಅವರ “ಪರಿಮಳ ಲಾಡ್ಜ್”ಗೆ ಲೂಸ್ ಮಾದ ಯೋಗೇಶ್ ನಾಯಕರಾಗಿ ಮುಂದುವರೆಯಲಿದ್ದಾರೆ. ಉಳಿದಂತೆ ನಟಿ ಸುಮನ್ ರಂಗನಾಥ್ ಇರಲಿದ್ದಾರೆ. ಆದರೆ, ನಾಯಕಿ ಯಾರೆಂಬುದು ಅಂತಿಮವಾಗಬೇಕಿದೆ.
ಹಿರಿಯ ನಟ ಸತ್ಯಜಿತ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸತ್ಯಜಿತ್, ಮೂರುವರೆ ದಶಕಗಳಿಂದಲೂ ಚಿತ್ರರಂಗದಲ್ಲಿರುವ ಸತ್ಯಜಿತ್, ಈವರೆಗೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳು ಸೇರಿದಂತೆ ಖಳನಟರಾಗಿಯೂ ನಟಿಸಿದ್ದಾರೆ.
ಹಲವು ವರ್ಷಗಳಿಂದ ಅವರ ಆರೋಗ್ಯ ಏರುಪೇರಾಗಿತ್ತು. ಅಲ್ಲದೆ, ಅವರ ಕಾಲಿಗೆ ಗ್ಯಾಂಗ್ರಿನ್ ಆಗಿದ್ದ ಕಾರಣ ಒಂದು ಕಾಲನ್ನು ತೆಗೆಯಲಾಗಿತ್ತು. ಆ ನಂತರವೂ ಸತ್ಯಜಿತ್ ಸುಧಾರಿಸಿಕೊಂಡು, ಸಿನಿಮಾ ಮೇಲಿನ ಪ್ರೀತಿಗೆ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದರು. ಸದ್ಯ ಸತ್ಯಜಿತ್ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ. ಅವರ ಆರೋಗ್ಯವೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಹು ಬೇಡಿಕೆಯ ನಟರಾಗಿದ್ದ ಸತ್ಯಜಿತ್ ಅವರಿಗೆ ಅನಾರೋಗ್ಯ ಕಾಡಿದ್ದರಿಂದ ಕ್ರಮೇಣವಾಗಿ ಸಿನಿಮಾ ಅವಕಾಶಗಳು ಕಡಿಮೆಯಾಗಿ ಅವರು ಆರ್ಥಿಕ ಸಂಕಷ್ಟ ಎದುರಿಸಿದ್ದರು. ಚಿತ್ರರಂಗ ಕೂಡ ಅವರ ಸಮಸ್ಯೆಗೆ ಸ್ಪಂದಿಸಿತ್ತು. ಅನಾರೋಗ್ಯ ಒಂದು ಕಡೆಯಾಗಿದ್ದರೆ, ಅವರ ಕುಟುಂಬಂದ ಸಮಸ್ಯೆಯಿಂದಲೂ ಸತ್ಯಜಿತ್ ಬಳಲಿದ್ದರು. ಸ್ವತಃ ಸತ್ಯಜಿತ್ ಅವರ ಪುತ್ರಿ ತಂದೆ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತಂತೆ ಸತ್ಯಜಿತ್ ಹಾಗೂ ಅವರ ಪುತ್ರ ಆಕಾಶ್ ಸ್ಪಷ್ಟನೆ ನೀಡಿದ್ದರು.
ಸ್ಯಾಂಡಲ್‌ವುಡ್ ಬಚ್ಚನ್ ಹಾಗೂ ಜಾಕ್ಸನ್ ನಡುವೆ ಬಾಕ್ಸ್ ಆಫೀಸ್ ಅಂಗಳದಲ್ಲಿ ಜಟಾಪಟಿ ನಡೆಯುತ್ತೆ !? ಸ್ಟಾರ್ ವಾರ್ ಜೊತೆಗೆ ಫ್ಯಾನ್ಸ್ ವಾರ್ ಕೂಡ ಧಗಧಗಿಸುತ್ತೆ !? ಎನ್ನುವ ಬೆಂಕಿ ಸಮಾಚಾರ ಈಗಾಗಲೇ ಗಾಂಧಿನಗರದಲ್ಲಿ ಹೊಗೆಯಾಡ್ತಿದೆ. ಈ ಮಧ್ಯೆಯೇ ಅಂದು ಸಲಗ' ಮುಹೂರ್ತಕ್ಕೆ ಸುದೀಪ್ ಗೆಸ್ಟ್, ಇಂದು ಕೋಟಿಗೊಬ್ಬನ ಜೊತೆಸಲಗ’ ಫೈಟ್ ಎನ್ನುತ್ತಾ ಕೆಲವರು ಕುಹುಕವಾಡ್ತಿದ್ದಾರೆ ಅಟ್ ದಿ ಸೇಮ್ ಟೈಮ್ ಕಡ್ಡಿ ಅಲ್ಲಾಡ್ಸೋ ಕೆಲ್ಸ ಮಾಡ್ತಿದ್ದಾರೆ. ಆದರೆ ಅವರಿಗೆ `ಗೋಲ್ಡ್ ಜಿಮ್’ ಕಥೆ ಹಾಗೂ ರಂಗ ಎಸ್‌ಎಸ್‌ಎಲ್‌ಸಿ ಮ್ಯಾಟರ್ ತಿಳಿದಿಲ್ಲ ಅನ್ಸುತ್ತೆ. ಅಥವಾ ತಿಳಿದರೂ ಬೆಂಕಿ ಹಚ್ಚೋದಕ್ಕೆ ನೋಡ್ತಿದ್ದಾರೋ ನಮಗೆ ಗೊತ್ತಿಲ್ಲ. ಯಾವುದಕ್ಕೂ, ಒಮ್ಮೆ ಸಲಗ ಮತ್ತು ಕೋಟಿಗೊಬ್ಬನ ಬಾಂಡೇಜ್ ಬಡಾ ಖಬರ್‌ನ ನೋಡ್‌ಕೊಂಡು ಬರೋಣ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಇಬ್ಬರು ಥಿಯೇಟರ್ ಅಂಗಳದಲ್ಲಿ ಮುಖಾಮುಖಿಯಾಗ್ತಿದ್ದಾರೆ. ಕೋಟಿಗೊಬ್ಬನಾಗಿ ಕಿಚ್ಚ ಕಣಕ್ಕಿಳಿದರೆ, ಸಲಗ ನಡೆದಿದ್ದೇ ದಾರಿ ಎನ್ನುತ್ತಾ ವಿಜಯ್ ಫೀಲ್ಡಿಗಿಳಿಯುತ್ತಿದ್ದಾರೆ. ಆಯುಧ ಪೂಜೆಯ ದಿನದಂದು ಒಂದೇ ಅಖಾಡದಲ್ಲಿ ಗಂಧದಗುಡಿಯ ಇಬ್ಬರು ಸೂಪರ್‌ಸ್ಟಾರ್‌ಗಳ ಅಟ್ಟಹಾಸ ಶುರುವಾಗಲಿದೆ. ಸಂತೋಷ್ ಚಿತ್ರಮಂದಿರದಲ್ಲಿ ಸಲಗ ಅಬ್ಬರಿಸಿ ಬೊಬ್ಬಿರಿದರೆ, ನರ್ತಕಿ ಥಿಯೇಟರ್‌ನಲ್ಲಿ ಕೋಟಿಗೊಬ್ಬ-೩ ಚಿತ್ರ ಧಗಧಗಿಸಲಿದೆ. ಒಂದೇ ದಿನ ಇಬ್ಬರು ನಟರು ಅಖಾಡಕ್ಕೆ ಇಳಿಯೋದ್ರಿಂದ ಗಾಂಧಿನಗರದ ರಂಗೇರಲಿದೆ. ಸ್ಟಾರ್‌ನಟರುಗಳ ಅಭಿಮಾನಿ ದೇವರುಗಳು ಥಿಯೇಟರ್ ಮುಂದೆ ಹಬ್ಬ ಅಲ್ಲ ಊರಬ್ಬ ಮಾಡೋದಕ್ಕೆ ಸಜ್ಜಾದಂತೆ ಸಕಲ ತಯ್ಯಾರಿ ಮಾಡಿಕೊಳ್ತಿದ್ದಾರೆ. ಇಂತಹ ಸಂತೋಷದ ಕ್ಷಣದಲ್ಲಿ ಗಾಂಧಿನಗರದ ಕೆಲವು ಮಂದಿ ಅಂದು ಸಲಗ' ಮುಹೂರ್ತಕ್ಕೆ ಸುದೀಪ್ ಗೆಸ್ಟ್ ಆಗಿದ್ದರು. ಆದರೆ, ಇವತ್ತೇನಾಯ್ತುಸಲಗ’ನೊಟ್ಟಿಗೆ ಕೋಟಿಗೊಬ್ಬ ಸೆಣಸಾಡಬೇಕಿದೆ ಎಂದು ಮಾತನಾಡಿಕೊಳ್ತಿದ್ದಾರೆ.
ಉರಿಯೋ ಬೆಂಕಿಗೆ ತುಪ್ಪ ಸುರಿಯುವವರು ನಮ್ಮ ಮಧ್ಯೆ ತುಂಬಾ ಜನ ಇರುತ್ತಾರೆ. ದುಷ್ಮನ್ ಕಹಾ ಹೈ ಅಂದ್ರೆ ಬಗಲ್ ಮೈ ಎನ್ನುವಂತೆ ಇಬ್ಬರು ಮಧ್ಯೆ ಕಡ್ಡಿಗೀರಿ ಸಿಗರೇಟ್ ಹಚ್ಚಿಕೊಂಡ್ರೇನೇ ಕೆಲವರಿಗೆ ಹಾರ್ಟ್-ಲಿವರ್ ಬೆಚ್ಚಗಾಗೋದು. ಅದೇ ಕೆಲಸವನ್ನು ಮುಂದುವರೆಸಿರುವ ಕಿಡಿಗೇಡಿಗಳು ಬಚ್ಚನ್ ಮತ್ತು ಜಾಕ್ಸನ್ ಮಧ್ಯೆ ತಂದಿಡುವುದಕ್ಕೆ ನೋಡ್ತಿದ್ದಾರೆ. ನೋಡಿ ಸಾರ್ ನೀವೇ ಹೋಗಿ ಸಲಗ' ಚಿತ್ರಕ್ಕೆ ಫಸ್ಟ್ ಕ್ಲಾಪ್ ಮಾಡಿ ಬಂದ್ರಿ. ಇವತ್ತು ಆಸಲಗ’ನೇ ನಿಮಗೆ ನೆಕ್ ಟು ನೆಕ್ ಫೈಟ್ ಕೊಡ್ತಿದ್ದಾನೆ. ನಿಮಗೋಸ್ಕರ ಆದರೂ ರಿಲೀಸ್ ಡೇಟ್ ಮುಂದಕ್ಕೆ ಹಾಕಿಕೊಳ್ಳಬಹುದಿತ್ತು ಆದರೆ ಆ `ಸಲಗ’ ಹಂಗ್ ಮಾಡಲಿಲ್ಲ ನೋಡಿ ಎನ್ನುತ್ತಾ ಸುದೀಪ್ ಸಿಡಿದೇಳುವಂತೆ ಮಾಡ್ತಿದ್ದಾರೆ. ಆದರೆ, ಕಿಚ್ಚನಿಗೆ ವಾಸ್ತವ ಏನು ಎನ್ನುವುದರ ಅರಿವಿದೆ. ಕಡ್ಡಿಗೀರುವವರ ಕಥೆ ಏನು ಎನ್ನುವುದು ತಿಳಿದಿದೆ. ಜೊತೆಗೆ ವಿಜಯ್ ಜೊತೆಗಿನ ಗೋಲ್ಡ್ ಜಿಮ್ ದಿನಗಳ ನೆನಪಿದೆ.
ಕೋಟಿಗೊಬ್ಬನ ಮುಂದೆ ಸಲಗ'ನ ಬಗ್ಗೆ ಹಾಕಿಕೊಡುವವರು ಇರುವಂತೆ,ಸಲಗ’ನ ಮುಂದೆ ಕೋಟಿಗೊಬ್ಬನ ಬಗ್ಗೆ ಹಾಕಿಕೊಡುವವರು ಇದ್ದೇ ಇರ್ತಾರೆ. ಅಲ್ಲಾ, ಮುಹೂರ್ತಕ್ಕೆ ಬಂದು ಒಳ್ಳೆಯದಾಗಲಿ ಅಂತ ಹಾರೈಸಿದರು, ರಿಲೀಸ್ ಡೇಟ್‌ನ ಅನೌನ್ಸ್ ಮಾಡಿದಾಗ್ಲೂ ಸೋಷಿಯಲ್ ಮೀಡಿಯಾದಲ್ಲಿ ಶುಭಕೋರಿದರು. ಅವರಿಗೆ ಅಷ್ಟೆಲ್ಲಾ ಒಳ್ಳೆಯ ಮನಸ್ಸಿದೆಯಲ್ಲವಾ, ನಿರ್ಮಾಪಕ ಸೂರಪ್ಪ ಬಾಬು ಅವರ ಹತ್ತಿರ ಮಾತನಾಡಿ ಕೋಟಿಗೊಬ್ಬ-೩ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿಸಬಹುದಿತ್ತು. ಆದರೆ, ಮಾಣಿಕ್ಯ ಹಂಗ್ ಮಾಡಲಿಲ್ಲ ನೋಡಿ ವಿಜಿಯಣ್ಣ ಅಂತ ಬ್ಲ್ಯಾಕ್ ಕೋಬ್ರಾ ಮುಂದೆ ಹೇಳಿಕೊಂಡಿರ್ತಾರೆ. ಆಗ ವಿಜಯ್ ಅವರು ʼರಂಗ ಎಸ್‌ಎಸ್‌ಎಲ್‌ಸಿʼ ದಿನಗಳನ್ನು ಕಣ್ಮುಂದೆ ತಂದುಕೊಂಡಿರ‍್ತಾರೆ. ಹೀಗಾಗಿ ಏನು ರಿಯಾಕ್ಟ್ ಮಾಡಿರಲಿಕ್ಕೆ ಸಾಧ್ಯವಿಲ್ಲ ಅನ್ಸುತ್ತೆ.
ʼಜಯಮ್ಮನ ಮಗʼನ ಸಿನಿಮಾಜರ್ನಿ ಬಗ್ಗೆ ತಿಳಿದವರಿಗೆ ರಂಗಎಸ್‌ಎಸ್‌ಎಲ್‌ಸಿ ಪಾತ್ರ ಏನು ಅಂತ ಗೊತ್ತಿರುತ್ತೆ. ರಂಗಎಸ್‌ಎಸ್‌ಎಲ್‌ಸಿಯೇ ದುನಿಯಾ ವಿಜಯ್ ಅವರು ಬಣ್ಣ ಹಚ್ಚಿದ ಮೊದಲ ಸಿನಿಮಾ. ಅಲ್ಲಿಂದ ಸಾಗಿಬಂದು ಇವತ್ತು ಓನ್ ಬ್ರ್ಯಾಂಡ್ ಆಗಿದ್ದಾರೆ. ಗಂಧದಗುಡಿಯಲ್ಲಿ ಭದ್ರಬುನಾದಿ ಹಾಕಿಕೊಂಡಿದ್ದಾರೆ. ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದಾರೆ. ಕರುನಾಡಿನ ತುಂಬೆಲ್ಲಾ ಕೋಟ್ಯಾಂತರ ಅಭಿಮಾನಿ ಬಳಗ ಸಂಪಾದನೆ ಮಾಡಿದ್ದಾರೆ. ಹದಿನೆಂಟು ವರ್ಷಗಳ ಸಿನಿಮಾ ಜರ್ನಿಯಲ್ಲಿ ಇದೇ ಮೊದಲ ಭಾರಿಗೆ ಡೈರೆಕ್ಟರ್ ಹ್ಯಾಟ್ ತೊಟ್ಟು `ಸಲಗ’ ಸಿನಿಮಾ ನಿರ್ದೇಶಿಸಿದ್ದಾರೆ. ಡೈರೆಕ್ಟರ್ ಆದ ಖುಷಿ-ಸಂತೋಷ ವಿಜಯ್‌ಗೆಷ್ಟು ಇದೆಯೋ ಅಷ್ಟೇ ಖುಷಿ-ಸಂತೋಷ ಸುದೀಪ್ ಅವರಿಗೂ ಇದೆ. ಯಾಕಂದ್ರೆ, ವಿಜಯ್‌ರನ್ನು ಸುದೀಪ್ ಆಕ್ಟರ್ ಅಲ್ಲ ಫೈಟರ್ ಆದ ದಿನಗಳಿಂದಲೂ ನೋಡಿದ್ದಾರೆ ಮಾತ್ರವಲ್ಲ ಫೈಟರ್ ಆಗೋದಕ್ಕೂ ಮುನ್ನಾ ದಿನಗಳಿಂದಲೂ ಕಂಡಿದ್ದಾರೆ.
ಹೌದು, ದುನಿಯಾ ವಿಜಯ್ ಆಕ್ಟರ್ ಆಗೋದಕ್ಕೂ ಮುನ್ನ ಫೈಟರ್. ಫೈಟರ್ ಆಗಿ ಫೀಲ್ಡಿಗಿಳಿಯೋದಕ್ಕೆ ಮುನ್ನ ಗೋಲ್ಡ್' ಜಿಮ್‌ನಲ್ಲಿ ಬೆವರಿಳಿಸುತ್ತಿದ್ದರು. ಅಲ್ಲಿಗೆ, ಸುದೀಪ್ ಟೈಂಪಾಸ್‌ಗೋಸ್ಕರ ವರ್ಕೌಟ್ ಮಾಡೋದಕ್ಕೆ ಹೋಗ್ತಿದ್ದರಂತೆ. ಈ ಸಂಗತಿಯನ್ನು ಸ್ವತಃ ಸುದೀಪ್ ಅವರೇಸಲಗ’ ಸಿನಿಮಾದ ಮುಹೂರ್ತದ ಸಂದರ್ಭದಲ್ಲಿ ಬಿಚ್ಚಿಟ್ಟಿದ್ದರು. ವಿಜಯ್ ನಡೆದುಬಂದ ಹಾದಿಯೇ ಅಚ್ಚರಿ ಮತ್ತು ವಿಶೇಷ. ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡು ಸ್ಟ್ರಗಲ್ ಮಾಡಿಕೊಂಡೇ ಇಲ್ಲಿವರೆಗೆ ತಲುಪಿರುವ ನಟ ವಿಜಯ್‌ಗೆ ಒಳ್ಳೆಯದಾಗಬೇಕು. ಡೈರೆಕ್ಷನ್‌ಗೆ ಇಳಿದಿರುವುದು ನಿಜಕ್ಕೂ ನನಗೆ ಸಂತಸ ತಂದಿದೆ. ಪ್ರತಿಯೊಬ್ಬ ಕಲಾವಿದನಲ್ಲೂ ಒಬ್ಬ ನಿರ್ದೇಶಕ ಇರ್ತಾನೆ, ಅದರಂತೇ, ಪ್ರತಿಯೊಬ್ಬ ನಿರ್ದೇಶಕನಲ್ಲೂ ಒಬ್ಬ ಕಲಾವಿದ ಇರ್ತಾನೆ. ಅವನಿಗೆ ಅವನೇ ಪ್ರೂ ಮಾಡಿಕೊಳ್ಳಬೇಕು ಈಗ ವಿಜಯ್ ಟೈಮ್. ಹೀಗಂತ ಹೇಳಿಕೊಂಡ ಕಿಚ್ಚ `೨೦೦೦’ ರೂಪಾಯಿ ಕಾಣಿಕೆ ಕೊಟ್ಟು ಇದು ಕೋಟಿಯಾಗಲಿ ಅಂತ ಹರಸಿ ಬಂದಿದ್ದರು.
ನಿಜಕ್ಕೂ ಸಲಗ' ಕೋಟಿ ಕೋಟಿ ಕೊಳ್ಳೆಹೊಡೆಯೋದ್ರಲ್ಲಿ ನೋ ಡೌಟ್. ಯಾಕಂದ್ರೆ, ಘೀಳಿಡೋದಕ್ಕೆ ರೆಡಿಯಾಗಿರುವ ಸಲಗ ಕ್ರೇಜ್ ಜೋರಾಗಿದೆ. ಈಗಾಗಲೇ ಹಲವರುಸಲಗ’ ಭವಿಷ್ಯ ನುಡಿದ್ದಾರೆ. ಲವ್-ಆಕ್ಷನ್-ರೌಡಿಸಂ-ಹಾಸ್ಯ ಹೀಗೆ ಒಂದೊಳ್ಳೆ ಮಾಸ್ ಎಂಟರ್‌ಟೈನರ್ ಒಂಟಿಸಲಗ ಪ್ರೇಕ್ಷಕರಿಗೆ ಹಬ್ಬದೂಟ ಬಡಿಸೋದಕ್ಕೆ ಒಂಟಿಕಾಲಿನಲ್ಲಿಯೇ ನಿಂತಿದೆ. ಅದ್ದೂರಿಯಾಗಿಯೇ ತೆರೆಮೇಲೆ ತರೋದಕ್ಕೆ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸಕಲ ತಯ್ಯಾರಿ ಮಾಡಿಕೊಂಡಿದ್ದಾರೆ. ಅದರಂತೇ, ನಿರ್ಮಾಪಕ ಸೂರಪ್ಪ ಬಾಬು ಕೂಡ ಕೋಟಿಗೊಬ್ಬ-೩' ಚಿತ್ರವನ್ನು ಗ್ರ್ಯಾಂಡ್ ಆಗಿ ಬಿಡುಗಡೆ ಮಾಡೋದಕ್ಕೆ ಮುಂದಾಗಿದ್ದಾರೆ. ಇದೇ ಅಕ್ಟೋಬರ್ ೧೪ರಂದುಸಲಗ’ ಹಾಗೂ ಕೋಟಿಗೊಬ್ಬ-೩ ಚಿತ್ರದ ದರ್ಶನವಾಗಲಿದೆ. ಅಷ್ಟಕ್ಕೂ, ಎರಡು ಸಿನಿಮಾಗಳು ಒಟ್ಟಿಗೆ ಲಗ್ಗೆ ಇಡುವುದಕ್ಕೆ ಕಾರಣ ಈ ಎರಡು ಚಿತ್ರಗಳ ನಿರ್ಮಾಪಕರ ಅಭಿಪ್ರಾಯವೇ ಹೊರೆತು ಇದರಲ್ಲಿ ಸುದೀಪ್ ಹಾಗೂ ವಿಜಯ್ ಅವರ ಪಾತ್ರವೇನಿಲ್ಲ.
ಅನ್ನದಾತರ ನಿರ್ಣಯ ಕೈಗೊಂಡ ಮೇಲೆ ಸ್ಟಾರ್‌ಗಳು ಹೂಃ ಎನ್ನಬೇಕಾಗುತ್ತದೆ. ಅದರಂತೇ, ಸುದೀಪ್ ಹಾಗೂ ವಿಜಯ್ ಅವರವರ ಸಿನಿಮಾ ನಿರ್ಮಾಪಕರುಗಳ ಚಿತ್ರ ಬಿಡುಗಡೆಯ ದಿನಾಂಕಕ್ಕೆ ತಲೆಬಾಗಿದ್ದಾರೆ. ಹೀಗಾಗಿ, ಇವರಿಬ್ಬರ ನಡುವೆ ಸ್ಟಾರ್‌ವಾರ್ ಪ್ರಸಂಗ ಬರುವುದಿಲ್ಲ ಆದರೆ ಗಾಂಧಿನಗರದ ಮಂದಿ ಮಾತ್ರ ಇದನ್ನು ಸ್ಟಾರ್‌ವಾರ್ ಅಂತಲೇ ಕರೆಯುತ್ತಿದ್ದಾರೆ. ಸ್ಟಾರ್‌ವಾರ್ ನಡೆಯಲಿದೆ ಅಂತ ಭವಿಷ್ಯ ನುಡಿಯುತ್ತಿದ್ದಾರೆ. ಅಷ್ಟಕ್ಕೂ, ಆಯುಧ ಪೂಜೆಯ ದಿನದಂದು ಅದೇನ್ ಆಗಲಿದೆ ಅನ್ನೋದನ್ನು ಕಾದುನೋಡಬೇಕು ಅಷ್ಟೇ. ಆದರೆ, ಒಂದು ನೆನಪಿರಲಿ ಹೆಬ್ಬುಲಿ ಹಾಗೂ ಕರಿಚಿರತೆಯ ಮಧ್ಯೆ ಒಂದೊಳ್ಳೆ ಬಾಂಡೇಜ್ ಇದೆ. ಹದಿನೆಂಟು ವರ್ಷದ ಸ್ನೇಹವಿದೆ. ಹೀಗಾಗಿಯೇ, ಸುದೀಪ್ ವಿಜಯ್ ಚಿತ್ರಕ್ಕೆ ಶುಭಕೋರಿರುವುದು. ವಿಜಯ್ ಕೂಡ ಇದು ಸಹೋದರರ ಸವಾಲ್ ಅಲ್ಲ ಇದು ಸಹೋದರರ ಪ್ರೀತಿ ಎಂದು ಬಣ್ಣಿಸಿರುವುದು.
ಕನ್ನಡ ಚಿತ್ರರಂಗ ಈಗ ಹೊಸ ಹುರುಪಿನಲ್ಲಿದೆ. ಕೊರೊನಾ ಆತಂಕ ಕೊಂಚ ಕಡಿಮೆಯಾಗುತ್ತಿದ್ದಂತೆಯೇ ಸರ್ಕಾರ ಕೂಡ ಚಿತ್ರರಂಗದ ಚಟುವಟಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈಗ ಶೇ.೧೦೦ರಷ್ಟು ಆಸನ ಭರ್ತಿಗೆ ಅನುಮತಿ ಸಿಕ್ಕಾಗಿದೆ. ಸ್ಟಾರ್ ಸಿನಿಮಾಗಳು ಸೇರಿದಂತೆ ಹೊಸಬರ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿವೆ. ಅತ್ತ, ಹೊಸಬರ ಸಿನಿಮಾಗಳೂ ಸೆಟ್ಟೇರುತ್ತಿವೆ. ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿಸಿದ್ದ ಕೆಲವು ಸಿನಿಮಾಗಳು ಸಹ ತನ್ನ ಚಿತ್ರೀಕರಣ ಮುಂದುವರೆಸುತ್ತಿವೆ. ಆ ಸಾಲಿಗೆ “ಶಿವನಪಾದ” ಸಿನಿಮಾವೂ ಸೇರಿದೆ.
ಹೌದು, ಸೀ ಶೋರ್ ಸ್ಟುಡಿಯೋಸ್ ಬ್ಯಾನರ್‌ನಡಿ ಸಂದೀಶ್ ಹೆಚ್.ಟಿ. ಹಾಗೂ ಪೆರುಮಾಳ್ ವಿ. ಅವರ ನಿರ್ಮಾಣದ ಈ ಚಿತ್ರ ಲವ್, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಹಾರರ್ ಟಚ್ ಹೊಂದಿದೆ. ಜೊತೆಗೆ ಕ್ರೈಮ್ ಕೂಡ ಇಲ್ಲಿದೆ. ಈ ಹಿಂದೆ ಲೂಸ್ ಮಾದ ಯೋಗಿ ಅಭಿನಯದ “ಬಂಗಾರಿ” ಹಾಗು ಮಕ್ಕಳ ಸಿನಿಮಾಗಳಾದ “ಬೆಟ್ಟದ ದಾರಿ”, “ನಡಗಲ್ಲು”, ತಮಿಳಿನ “ಕಾದಲ್ ಪೈತ್ಯಂ” ಚಿತ್ರಗಳನ್ನು ನಿರ್ದೇಶಿಸಿದ್ದ ಮಾ.ಚಂದ್ರು ಅವರು “ಶಿವನಪಾದ” ಚಿತ್ರಕ್ಕೆ ನಿರ್ದೇಶಕರು. ಸದ್ಯ ಈ ಚಿತ್ರ ಶೇ.೫೦ರಷ್ಟು ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಮಾತಿನಭಾಗ ಹಾಗೂ ಎರಡು ಹಾಡುಗಳನ್ನು ಸಾಗರ, ಮದ್ದೂರು, ಪುಟ್ಟಣ್ಣ ಸ್ಟುಡಿಯೋ, ಮಿಲನಹೌಸ್ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುತ್ತಿದೆ. ಮುದಿನ ವಾರದಿಂದ ಶೂಟಿಂಗ್ ಶುರುವಾಗಲಿದೆ.
ಆರು ಪಾತ್ರಗಳ ಸುತ್ತ ನಡೆಯುವ ಕುತೂಹಲದ ಕಥೆಯಲ್ಲಿ ಒಂದು ಕೊಲೆ ನಡೆಯುತ್ತೆ. ಅದೇ ಚಿತ್ರದ ಹೈಲೈಟ್. ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಹೆಚ್.ಟಿ. ಸಾಂಗ್ಲಿಯಾನ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿಯೇ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷತೆಗಳಲ್ಲೊಂದು.
“ಶಿವನಪಾದ” ಎನ್ನುವುದು ಉತ್ತರ ಕರ್ನಾಟಕದಲ್ಲಿರುವ ಒಂದು ಪ್ರಸಿದ್ದ ಪ್ರವಾಸಿ ತಾಣ. ಈ ಚಿತ್ರದಲ್ಲಿ ಆ ಲೊಕೇಶನ್ ಕೂಡ ಒಂದು ಪಾತ್ರವಾಗಿಯೇ ಮೂಡಿಬರಲಿದ್ದು, ಬಹುತೇಕ ಜರ್ನಿಯಲ್ಲೇ ನಡೆಯೋ ಕುತೂಹಲಕರ ಕಥೆ ಇದು ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ನಾಗೇಶ್ ಆರ್. ಆನಂದ್, ವರ್ಷಿತ ಗಿರೀಶ್, ಮೇಘನಾ, ಬಲ ರಾಜವಾಡಿ, ನವೀನ್ ಡಿ.ಪಡೀಲ್, ಅಂಜಲಿ, ಹರಿಹರನ್ ಬಿ.ಪಿ, ಆಟೋ ನಾಗರಾಜ್, ಶೇಷಗಿರಿ, ನರಸಿಂಹಮೂರ್ತಿ, ಸೂರಿ, ರಂಭಾ ಇತರರು ಇದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೀನಸ್ ಮೂರ್ತಿ ಕ್ಯಾಮೆರಾ ಹಿಡಿದರೆ, ವೀರ್ ಸಮರ್ಥ ಅವರ ಸಂಗೀತವಿದೆ. ವಿಜಯ್ ಭರಮಸಾಗರ ಅವರ ಸಾಹಿತ್ಯ, ವೆಂಕಿ ಯುವಿಡಿ ಸಂಕಲನ ಈ ಚಿತ್ರಕ್ಕಿದೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅದ್ಯಾಕೋ ಸಿಡಿದೆದಿದ್ದಾರೆ. ಕೊರೋನಾ ಕಾಲದಲ್ಲಿ ಕೈ ಕಟ್ಟಿ ಕುಳಿತಿದ್ದು ಸಾಕೆಂದು ಹೊರ ಬಂದ ಬೆನ್ನಲೇ ಅವರು ಕನ್ನಡದ ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ‘ರಿಚರ್ಡ್ ಆಂಟನಿ’ ಹೆಸರಿನ ಸಿನಿಮಾ ಅನೌನ್ಸ್ ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ. ಸದ್ಯಕ್ಕೀಗ ಅದರ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ. ಈ ನಡುವೆಯೇ ಮತ್ತೊಂದು ಚಿತ್ರ ಮಾಡಲು ಹೊರಟ್ರಾ ? ಹಾಗೊಂದು ಅನುಮಾನ ಅವರು ಸೋಮವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ಸ್ಟೇಟಸ್ ಕಾರಣವಾಗಿದೆ.
ಸದ್ಯಕ್ಕೆ ಅವರು ಸಿನಿಮಾ ಮಾಡಲು ಹೊರಟಿರೋದು ನಿಜ. ಆದರೆ ಇದು ಅವರೇ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸುತ್ತಿರುವ ಸಿನಿಮಾವಂತೂ ಅಲ್ಲ. ಲೂಸಿಯಾ, ರಂಗಿ ತರಂಗ, ರಾಮಾ ರಾಮಾ ರೇ ಹಾಗೂ ಒಂದು ಮೊಟ್ಟೆಯ ಕಥೆ, ಕವಲು ದಾರಿ ಹಾಗೂ ದಿಯಾ ಸೇರಿದಂತೆ ಕನ್ನಡದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಹೆಚ್ಚು ಸದ್ದು ಮಾಡಿದ ಹೊಸ ಅಲೆಯ ಸಿನಿಮಾಗಳು ತಮ್ಮಗೆ ಅತೀವವಾಗಿ ಪ್ರಭಾವ ಬೀರಿವೆ. ಆ ರೀತಿಯ ಸಿನಿಮಾಗಳ ಸಮೂಹಕ್ಕೆ ಇದು ಕೂಡ ಸೇರಲಿದೆ ಅಂತ ಅವರು ಹೇಳಿಕೊಂಡಿದ್ದನ್ನು ನೋಡಿದರೆ ಅವರು ತಮ್ಮದೇ ಪರಮವ್ಹ ಸಂಸ್ಥೆಯ ಬ್ಯಾನರ್ ಮೂಲಕ ಗಟ್ಟಿ ಕಥೆಯ, ಕಡಿಮೆ ಬಜೆಟ್ ಒಂದೊಳ್ಳೆಯ ಸಿನಿಮಾ ನಿರ್ಮಾಣ ಮಾಡುವ ಆಸೆ ಅವರೊಳಗಡೆ ಇರೋದು ನಿಜ. ಅದು ಏನು ಅನ್ನೋದು ಇಂದು ಸಂಜೆಯೇ ಗೊತ್ತಾಗಲಿದೆ.
ಇಂದು ಸಂಜೆ 4.05 ಕ್ಕೆ ಅದು ನಿಮ್ಮ ಮುಂದೆ ಅನಾವರಣಗೊಳ್ಳಲಿದೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ. ಅಂದ ಹಾಗೆ, ನಟ ರಕ್ಷಿತ್ ಶೆಟ್ಟಿ ಈಗ ಹೊಸ ಬಗೆಯ ಕಥೆಗಳನ್ನು ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣ ಮಾಡುವುದಕ್ಕೆ ಮನಸು ಮಾಡಿದ್ದಾರೆ. ಆ ಕುರಿತು ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡ ಸ್ಟೇಟಸ್ ಹೀಗಿದೆ.
ʼಲೂಸಿಯಾ, ರಾಮಾ ರಾಮಾ ರೇ, ರಂಗಿತರಂಗ, ಒಂದು ಮೊಟ್ಟೆಯ ಕಥೆ, ಕವಲುದಾರಿ, ದಿಯಾ.. ಈ ಸಿನಿಮಾಗಳು ನನ್ನ ಮೇಲೆ ಉಂಟುಮಾಡಿದ ಪ್ರಭಾವ ಅತಿ ಪ್ರಬಲವಾಗಿತ್ತು ಹಾಗೂ ಅದನ್ನು ಜಗತ್ತಿನ ಜೊತೆ ಹಂಚಿಕೊಳ್ಳಲು ಅತಿ ಸಂತಸವಾದ ವಿಷಯವಾಗಿತ್ತು. ಇಂದು ಇದೇ ರೀತಿ ಪ್ರಭಲವಾದ ಪ್ರಭಾವ ಬೀರುವ ಅಂತದ್ದೇ ಒಂದು ಸಹಯೋಗ ಈ ಸಿನಿಮಾದ ಮೂಲಕ ಕೂಡಿ ಬಂದಿದೆ. ಇದು ನಿಮಗೂ ಸಹ ಭಾವನೆಗಳನ್ನು ಬಡಿದೇಳಿಸುವ ವರ್ಣ ಚಿತ್ರಗಳ ಸಮೂಹವಾ ಗುವುದರಲ್ಲಿ ಎರಡು ಮಾತಿಲ್ಲ. ಇಂದು ಸಂಜೆ ೪.೦೫ ಕ್ಕೆ ನಿಮ್ಮ ಮುಂದೆ ಅನಾವರಣಗೊಳಿಸಲಿದ್ದೇವೆ.. ಇದಿಷ್ಟು ನಟ ರಕ್ಷಿತ್ ಶೆಟ್ಟಿ ಹಾಕಿಕೊಂಡಿರೋ ಸ್ಟೇಟಸ್.
ಪ್ಯಾನ್ ಇಂಡಿಯಾ ಸ್ಟಾರ್ ರಕ್ಷಿತ್ ಶೆಟ್ಟಿ ಮೇಲೆ ಇತ್ತೀಚೆಗೆ ಹಿಗ್ಗಾ ಮುಗ್ಗಾ ವಾರ್ ಆಗಿದ್ದು, ಅವರನ್ನು ಬಡಿದೆಬ್ಬಿಸುವಂತೆ ಮಾಡಿರೋದು ಸತ್ಯ. ಟೀಕೆಗಳನ್ನುಸವಾಲಾಗಿಯೇ ಸ್ವೀಕರಿಸಿರುವ ಅವರೀಗ ತಮ್ಮ ಕೆಲಸಗಳ ಮೂಲಕ ಉತ್ತರಿಸಲು ಹೊರಟಂತಿದೆ. ಅದರ ಮೊದಲ ಕೌಂಟರ್ ರಿಚರ್ಡ್ ಆಂಟನಿ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ದೊಡ್ಡ ಟೀಕೆಗೆ ಒಳಗಾದ ದಿನದಲ್ಲಿಯೇ ಅದಕ್ಕೆ ದೊಡ್ಡದಾಗಿ ಕೌಂಟರ್ ಕೊಟ್ಟರು. ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಅವರು ರಿಚರ್ಡ್ ಆಂಟನಿ ಮೂಲಕ ನಿರ್ದೇಶನ ಮತ್ತು ನಟನೆಗೆ ಇಳಿದಾಗ ಎಲ್ಲರೂ ನಿಬ್ಬೆರಗಾಗಿ ನಿಂತರು. ಅಲ್ಲಿಂದ ಈಗ ತಮ್ಮದೇ ಸಂಸ್ಥೆಯ ಮೂಲಕ ಹೊಸ ಅಲೆಯ ಸಿನಿಮಾ ನಿರ್ಮಾಣಕ್ಕೆ ಇಳಿಯುತ್ತಿದ್ದಾರೆ. ಆ ಸಿನಿಮಾದ ನಿರ್ದೇಶಕ, ನಾಯಕ ನಟ, ಉಳಿದಂತೆ ಕಲಾವಿದರು, ತಂತ್ರಜ್ಜರ ವಿವರ ಇಂದು ಸಂಜೆಯೇ ಬಹಿರಂಗವಾಗುವುದು ಗ್ಯಾರಂಟಿ. – ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿಲಹರಿ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಷ್ಟು ದೊಡ್ಡ ಸೆಲಿಬ್ರಿಟಿ ಅಂತ ಇಡೀ ಕರ್ನಾಟಕಕ್ಕೆ ಗೊತ್ತು. ಆದರೆ, ಬಹದ್ದೂರ್ ಹುಡುಗ ನಾನೇನ್ ದೊಡ್ಡ ಸೆಲಿಬ್ರಿಟಿ ಅಲ್ಲ ಬಿಡಿ ಅಂತಾರೇ. ಸ್ಟಾರ್ ನಟನಾಗಿ ಬೆಳೆದು ನಿಂತರೂ ಕೂಡ ಈ ರೀತಿ ಹೇಳೋದು ಅವರ ದೊಡ್ಡ ಗುಣ. ಮಾಡಿರುವುದು ನಾಲ್ಕೇ ನಾಲ್ಕು ಸಿನಿಮಾ ಇರ್ಬೋದು ಆದರೆ ಸಾಧನೆ ಮುಗಿಲೆತ್ತರ, ಅಭಿಮಾನಿಗಳು ಕೋಟ್ಯಾಂತರ.
ಇವತ್ತು, ಭರ್ಜರಿ ಹುಡುಗ ತಮ್ಮ ವಿಐಪಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅದ್ದೂರಿ ಹುಡುಗನ ಅಭಿಮಾನಿಗಳು ಈ ನ್ಯೂಸ್ ನ ನಿರೀಕ್ಷೆ ಮಾಡಿರಲಿಲ್ಲ. ಅಕ್ಟೋಬರ್ 06 ರಂದು ಹಬ್ಬ ಮಾಡಬೇಕು, ತಮ್ಮ ನೆಚ್ಚಿನ ನಟ ಆಕ್ಷನ್ ಪ್ರಿನ್ಸ್ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಣೆ ಮಾಡಬೇಕು ಅಂತ ಕನಸು ಕಂಡಿದ್ದರು. ಆದರೆ, ಧ್ರುವ ಬರ್ತ್ ಡೇಗೆ ಬ್ರೇಕ್ ಹಾಕಿದ್ದಾರೆ. ಜನ್ಮದಿನ ಆಚರಣೆ ಮಾಡಿಕೊಳ್ಳದಿರಲು ನಿರ್ಧಾರ ಮಾಡಿದ್ದಾರೆ.
ಕಳೆದ ವರ್ಷವೂ ಧ್ರುವ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರಲಿಲ್ಲ. ಅಣ್ಣನನ್ನು ಕಳೆದುಕೊಂಡ ನೋವಲ್ಲೇ ದಿನದೂಡುತ್ತಿದ್ದ, ಈಗಲೂ ಸಹೋದರ ಚಿರು ನೆನಪಲ್ಲೇ ಬದುಕು ಸಾಗಿಸುತ್ತಿರುವ ಧ್ರುವ ಸರ್ಜಾ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳದಿರಲು ತೀರ್ಮಾನ ಮಾಡಿದ್ದಾರೆ ಅನ್ಸುತ್ತೆ. ಅಷ್ಟಕ್ಕೂ, ಬರ್ತ್ ಡೇ ದಿನ ಧ್ರುವ ಬೆಂಗಳೂರಿನಲ್ಲಿ ಇರೋದಿಲ್ಲ. ʼಮಾರ್ಟಿನ್ʼ ಚಿತ್ರದ ಚಿತ್ರೀಕರಣಕ್ಕಾಗಿ ವೈಜಾಗ್ ಗೆ ತೆರಳುತ್ತಿದ್ದಾರೆ. ಹೀಗಾಗಿ, ಅಭಿಮಾನಿ ದೇವರುಗಳನ್ನು ಭೇಟಿ ಮಾಡುವುದಕ್ಕೆ ಸಾಧ್ಯವಿಲ್ಲ.
ಅಣ್ಣನ ಅಗಲಿಕೆಯ ನೋವು ಒಂದು ಕಡೆಯಾದರೆ, ಕೊರೋನಾ ಆತಂಕವೂ ಇನ್ನೂ ಇರೋದ್ರಿಂದ ಗುಂಪು ಸೇರಿಸುವುದು ಬೇಡ ಎನ್ನುವುದು ಆಕ್ಷನ್ ಪ್ರಿನ್ಸ್ ನಿರ್ಧಾರ. ಹೀಗಾಗಿ, ಮನೆ ಮುಂದೆ ಸಂಭ್ರಮಾಚರಣೆ ಬೇಡವೆಂದು ಡಿಸೈಡ್ ಮಾಡಿದ್ದಾರೆ. ಇದ್ದಲಿಂದಲೇ ಶುಭಾಶಯ ಕೋರುವಂತೆ ತಿಳಿಸಿದ್ದಾರೆ. ಬಹದ್ದೂರ್ ಹುಡುಗನ ನಿಲುವು ವಿಐಪಿಗಳಿಗೆ ಬೇಸರ ತಂದರೂ ಅದನ್ನು ಒಪ್ಪಿಕೊಳ್ತಾರೆ. ತಾವಿರುವ ಜಾಗದಿಂದಲೇ ಶುಭಾಶಯ ಹೇಳಲಿದ್ದಾರೆ.
ಮಾರ್ಟಿನ್ ನಿಮ್ಮೆಲ್ಲರಿಗೂ ಗೊತ್ತಿರುವಂತೆ ಬಹು ನಿರೀಕ್ಷೆಯ ಸಿನಿಮಾ. ಅದ್ದೂರಿ ಕಾಂಬೋ ಜೊತೆಯಾಗಿ ಮಾಡ್ತಿರುವ ಮಹಾಮೂವೀ. ಹೀಗಾಗಿ, ನಿರೀಕ್ಷೆ ಗರಿಗೆದರಿದೆ. ಚಿತ್ರಪ್ರೇಮಿಗಳ ನಿರೀಕ್ಷೆಯನ್ನೂ ಮೀರಿ ಸಿನಿಮಾ ನಿರ್ಮಾಣ ಮಾಡೋದಕ್ಕೆ ಇಡೀ ಮಾರ್ಟಿನ್ ಟೀಮ್ ಶ್ರಮವಹಿಸಿ ಕೆಲಸ ಮಾಡ್ತಿದೆ. ಪ್ರತಿ ಸಿನಿಮಾದಂತೆ ʼಮಾರ್ಟಿನ್ʼ ಗೂ ನಿಮ್ಮ ಪ್ರೀತಿ ಪ್ರೋತ್ಸಾಹ ಇರಲೆಂದು ಧ್ರುವ ವಿಐಪಿಗಳಿಗೆ ಕೇಳಿಕೊಂಡಿದ್ದಾರೆ. ಬಹದ್ದೂರ್ ಹುಡುಗರು ಮಾರ್ಟಿನ್ ಚಿತ್ರವನ್ನು ತಲೆ ಮೇಲೆ ಹೊತ್ತು ಮೆರೆಸೋಕೆ ಕಾತುರರಾಗಿದ್ದಾರೆ ಅದರಲ್ಲಿ ನೋಡೌಟ್.
ತೆಲುಗು ತಾರಾ ದಂಪತಿ ಸಮಂತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ನಾಲ್ಕು ವರ್ಷದ ವೈವಾಹಿಕ ಬದುಕಿಗೆ ಎಳ್ಳುನೀರು ಬಿಟ್ಟಿದ್ದಾರೆ. ೧೧ ವರ್ಷಗಳ ಕಾಲ ಪ್ರೀತ್ಸಿ ಮದುವೆಯಾದ ಈ ಜೋಡಿ ಕೊನೆಗೂ ಸಂಸಾರ ಸಾಗರದ ಬಂಧನದಿಂದ ಬೇರ್ಪಟ್ಟಿದ್ದಾರೆ. ರೀಲ್ ಅಂಡ್ ರಿಯಲ್ ಲೈಫ್‌ನಲ್ಲಿ ಸೈ ಎನಿಸಿಕೊಂಡ ಚೈ ಅಂಡ್ ಸ್ಯಾಮ್ ಅದ್ಯಾಕೆ ವಿಚ್ಚೇದನದಂತಹ ನಿರ್ಧಾರಕ್ಕೆ ಬಂದ್ರು ? ೧೦ ಕೋಟಿ ಖರ್ಚು ಮಾಡಿ ಇಡೀ ಸೌತ್-ನಾರ್ತ್ ಸಿನಿಮಾ ಇಂಡಸ್ಟ್ರಿ ನಿಬ್ಬೆರಗಾಗುವಂತೆ ಹಸೆಮಣೆ ಏರಿದ ಈ ಕ್ಯೂಟ್ ಕಪಲ್ಸ್ ಕೇವಲ ನಾಲ್ಕೇ ನಾಲ್ಕು ವರ್ಷಕ್ಕೆ ಅದ್ಯಾಕೆ ದಾಂಪತ್ಯ ಜೀವನವನ್ನು ಕೊನೆಗೊಳಿಸಿಕೊಂಡ್ರು? ಈ ಪ್ರಶ್ನೆಗೆ ಕೇವಲ ಒಂದೇ ಸಾಲಿನ ಉತ್ತರ ನಿಡೋದಕ್ಕೆ ಸಾಧ್ಯವಿಲ್ಲ. ಫ್ಯಾಮಿಲಿಮ್ಯಾನ್ ವೆಬ್‌ಸಿರೀಸೇ ಮಜಿಲಿ ಜೋಡಿಯನ್ನು ದೂರ ದೂರ ಮಾಡ್ತು ಎಂತಲೂ ಹೇಳೋದಕ್ಕೆ ಆಗಲ್ಲ. ಆದರೆ, ಮಾಧರಿಯಾಗಬೇಕಿದ್ದ ಈ ಇಬ್ಬರು ತಾರಾಜೋಡಿಗಳು ನಾನೊಂದು ತೀರಾ, ನೀನೊಂದು ತೀರಾ ಅಂತ ಬೇರ್ಪಟ್ಟಿದ್ದು ಮಾತ್ರ ಅರಗಿಸಿಕೊಳ್ಳೋದಕ್ಕೆ ಸಾಧ್ಯವಾಗ್ತಿಲ್ಲ.
ಸ್ಯಾಮ್ ಅಂಡ್ ಚೈ ದೂರವಾಗ್ತಿರೋದು ಅವರ ಕುಟುಂಬಕ್ಕೆ ಎಷ್ಟು ನೋವುಂಟು ಮಾಡಿದೆಯೋ ಅಷ್ಟೇ ನೋವು ಮನಂ ಜೋಡಿಯ ಕೋಟ್ಯಾಂತರ ಅಭಿಮಾನಿಗಳಿಗೆ ಆಗಿದೆ. ಮಜಿಲಿ ಜೋಡಿಯ ವಿಚ್ಚೇದನದ ಸುದ್ದಿ ಕೇಳಿ ಅಭಿಮಾನಿಗಳ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ.
ನಾಲ್ಕು ದಿನ ಕಳೆದರೆ ಚೈ ಅಂಡ್ ಸ್ಯಾಮ್ ಗುಡ್ ನ್ಯೂಸ್ ಕೊಡ್ತಾರೆ, ವಾರ್ಷಿಕೋತ್ಸವಕ್ಕೆ ಸಿಹಿ ಸುದ್ದಿ ಸಿಗುತ್ತೆ ಅಂತ ಕಾಯ್ತಿದ್ದ ಫ್ಯಾನ್ಸ್ ಗೆ ನಿರಾಶೆಯಾಗಿದೆ. ಬರೀ ನಿರಾಸೆ ಅಲ್ಲ ಆಕಾಶವೇ ಕಳಚಿ ತಲೆಮೇಲೆ ಬಿದ್ದಾಗಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ, ಮಜಿಲಿ ಜೋಡಿ ದೂರವಾಗೋದನ್ನ ಸಹಿಸೋ ಶಕ್ತಿ ಅಭಿಮಾನಿಗಳಿಗಿರಲಿಲ್ಲ. ಇಬ್ಬರು ಬೇರೆಯಾಗ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಾಗಿನಿಂದಲೂ ಅಭಿಮಾನಿಗಳ ಪ್ರಾರ್ಥನೆ ಒಂದೇ ಆಗಿತ್ತು ಅದು ಸ್ಯಾಮ್ ಅಂಡ್ ಚೈ ಡಿವೋರ್ಸ್ ಸುದ್ದಿ ಸುಳ್ಳಾಗಬೇಕು, ಅವರಿಬ್ಬರು ಒಂದಾಗಬೇಕು ಎನ್ನುವುದು. ಆದ್ರೆ, ಇವತ್ತು ಈ ತಾರಾ ಜೋಡಿ ಅಧಿಕೃತವಾಗಿ ವಿಚ್ಚೇದನವನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ಈಗ್ಲೂ ಹೇಳ್ತಿರೋದು ಒಂದೇ ಇನ್ನೂ ಕಾಲ ಮಿಂಚಿಲ್ಲ ನಿಮ್ಮ ನಿರ್ಧಾರ ಬದಲಾಯಿಸಿಕೊಳ್ಳಿ ಅಂತ.
ಒಡೆದ ಹಾಲು, ಚೂರಾದ ಕನ್ನಡಿ ಮತ್ತೆ ಒಂದು ಗೂಡಿಸೋದಕ್ಕೆ ಆಗಲ್ಲ ಅಂತಾರೇ. ಅಷ್ಟಕ್ಕೂ, ಸ್ಟಾರ್ ಕಪಲ್‌ಗಳಾದ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಸಂಬಂಧ ಹೊಡೆದು ಚೂರಾಗಿದೆಯೋ ಅಥವಾ ನುಚ್ಚುನೂರಾಗಿದೆಯೋ ಗೊತ್ತಿಲ್ಲ. ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ವೈವಾಹಿಕ ಬದುಕಿನಿಂದ ದೂರವಾಗ್ತಿರುವುದಾಗಿ ಹೇಳಿಕೊಂಡಿದ್ದಾರೆ. ತೆಗೆದುಕೊಂಡಿರುವ ತೀರ್ಮಾನದಿಂದ ಹಿಂದೆ ಸರಿಯುತ್ತಾರೋ ಇಲ್ಲವೋ ಗೊತ್ತಿಲ್ಲ. ಹಿಂದೆ ಸರಿಬೇಕು ಒಂದಾಗಿ ಬದುಕಬೇಕು ಎನ್ನುವುದು ಅಕ್ಕಿನೇನಿ ಫ್ಯಾಮಿಲಿ-ಸಮಂತಾ ಕುಟುಂಬದ ಕಳಕಳಿ ಮಾತ್ರವಲ್ಲ ಕೋಟ್ಯಾಂತರ ಭಕ್ತರ ಆಶಯ. ಆ ಆಸೆ ಈಡೇರುತ್ತೋ ಇಲ್ಲವೋ ಕೂತೂಹಲದಿಂದ ಕಾಯಬೇಕು. ಭಗ್ತವಂತ ಅವರಿಬ್ಬರ ಮನಸನ್ನು ಬದಲಾಯಿಸಬೇಕು ಹಾಗಾದ್ರೆ ಮಾತ್ರ ಏ ಮಾಯ ಚೇಸ್ಯಾವೆ ಜೋಡಿ ಒಂದಾಗಲು ಸಾಧ್ಯ.