ಹಿರಿಯ ನಟ ಸತ್ಯಜಿತ್‌ ಅನಾರೋಗ್ಯ: ಆಸ್ಪತ್ರೆಗೆ ದಾಖಲು

ಹಿರಿಯ ನಟ ಸತ್ಯಜಿತ್‌ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸತ್ಯಜಿತ್‌, ಮೂರುವರೆ ದಶಕಗಳಿಂದಲೂ ಚಿತ್ರರಂಗದಲ್ಲಿರುವ ಸತ್ಯಜಿತ್‌, ಈವರೆಗೆ ಸಾಕಷ್ಟು ಹಿಟ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳು ಸೇರಿದಂತೆ ಖಳನಟರಾಗಿಯೂ ನಟಿಸಿದ್ದಾರೆ.

ಹಲವು ವರ್ಷಗಳಿಂದ ಅವರ ಆರೋಗ್ಯ ಏರುಪೇರಾಗಿತ್ತು. ಅಲ್ಲದೆ, ಅವರ ಕಾಲಿಗೆ ಗ್ಯಾಂಗ್ರಿನ್ ಆಗಿದ್ದ ಕಾರಣ ಒಂದು ಕಾಲನ್ನು ತೆಗೆಯಲಾಗಿತ್ತು. ಆ ನಂತರವೂ ಸತ್ಯಜಿತ್‌ ಸುಧಾರಿಸಿಕೊಂಡು, ಸಿನಿಮಾ ಮೇಲಿನ ಪ್ರೀತಿಗೆ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದರು. ಸದ್ಯ ಸತ್ಯಜಿತ್‌ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ. ಅವರ ಆರೋಗ್ಯವೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


ಬಹು ಬೇಡಿಕೆಯ ನಟರಾಗಿದ್ದ ಸತ್ಯಜಿತ್‌ ಅವರಿಗೆ ಅನಾರೋಗ್ಯ ಕಾಡಿದ್ದರಿಂದ ಕ್ರಮೇಣವಾಗಿ ಸಿನಿಮಾ ಅವಕಾಶಗಳು ಕಡಿಮೆಯಾಗಿ ಅವರು ಆರ್ಥಿಕ ಸಂಕಷ್ಟ ಎದುರಿಸಿದ್ದರು. ಚಿತ್ರರಂಗ ಕೂಡ ಅವರ ಸಮಸ್ಯೆಗೆ ಸ್ಪಂದಿಸಿತ್ತು. ಅನಾರೋಗ್ಯ ಒಂದು ಕಡೆಯಾಗಿದ್ದರೆ, ಅವರ ಕುಟುಂಬಂದ ಸಮಸ್ಯೆಯಿಂದಲೂ ಸತ್ಯಜಿತ್‌ ಬಳಲಿದ್ದರು. ಸ್ವತಃ ಸತ್ಯಜಿತ್‌ ಅವರ ಪುತ್ರಿ ತಂದೆ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತಂತೆ ಸತ್ಯಜಿತ್‌ ಹಾಗೂ ಅವರ ಪುತ್ರ ಆಕಾಶ್‌ ಸ್ಪಷ್ಟನೆ ನೀಡಿದ್ದರು.

Related Posts

error: Content is protected !!