ರಕ್ಷಿತ್‌ ಶೆಟ್ಟಿ ಶುರು ಮಾಡ್ತಿದ್ದಾರೆ ಮತ್ತೊಂದು ಸಿನಿಮಾ ? ಇದು ರಿಚರ್ಡ್‌ ಆಂಟನಿ ಅಲ್ಲ !

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅದ್ಯಾಕೋ ಸಿಡಿದೆದಿದ್ದಾರೆ. ಕೊರೋನಾ ಕಾಲದಲ್ಲಿ ಕೈ ಕಟ್ಟಿ ಕುಳಿತಿದ್ದು ಸಾಕೆಂದು ಹೊರ ಬಂದ ಬೆನ್ನಲೇ ಅವರು ಕನ್ನಡದ ಪ್ರತಿಷ್ಠಿತ ಹೊಂಬಾಳೆ ಫಿಲಂಸ್‌ ಬ್ಯಾನರ್‌ ನಲ್ಲಿ ‘ರಿಚರ್ಡ್‌ ಆಂಟನಿ’ ಹೆಸರಿನ ಸಿನಿಮಾ ಅನೌನ್ಸ್‌ ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ. ಸದ್ಯಕ್ಕೀಗ ಅದರ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ. ಈ ನಡುವೆಯೇ ಮತ್ತೊಂದು ಚಿತ್ರ ಮಾಡಲು ಹೊರಟ್ರಾ ? ಹಾಗೊಂದು ಅನುಮಾನ ಅವರು ಸೋಮವಾರ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡಿರುವ ಸ್ಟೇಟಸ್‌ ಕಾರಣವಾಗಿದೆ.

ಸದ್ಯಕ್ಕೆ ಅವರು ಸಿನಿಮಾ ಮಾಡಲು ಹೊರಟಿರೋದು ನಿಜ. ಆದರೆ ಇದು ಅವರೇ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸುತ್ತಿರುವ ಸಿನಿಮಾವಂತೂ ಅಲ್ಲ. ಲೂಸಿಯಾ, ರಂಗಿ ತರಂಗ, ರಾಮಾ ರಾಮಾ ರೇ ಹಾಗೂ ಒಂದು ಮೊಟ್ಟೆಯ ಕಥೆ, ಕವಲು ದಾರಿ ಹಾಗೂ ದಿಯಾ ಸೇರಿದಂತೆ ಕನ್ನಡದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಹೆಚ್ಚು ಸದ್ದು ಮಾಡಿದ ಹೊಸ ಅಲೆಯ ಸಿನಿಮಾಗಳು ತಮ್ಮಗೆ ಅತೀವವಾಗಿ ಪ್ರಭಾವ ಬೀರಿವೆ. ಆ ರೀತಿಯ ಸಿನಿಮಾಗಳ ಸಮೂಹಕ್ಕೆ ಇದು ಕೂಡ ಸೇರಲಿದೆ ಅಂತ ಅವರು ಹೇಳಿಕೊಂಡಿದ್ದನ್ನು ನೋಡಿದರೆ ಅವರು ತಮ್ಮದೇ ಪರಮವ್ಹ ಸಂಸ್ಥೆಯ ಬ್ಯಾನರ್‌ ಮೂಲಕ ಗಟ್ಟಿ ಕಥೆಯ, ಕಡಿಮೆ ಬಜೆಟ್‌ ಒಂದೊಳ್ಳೆಯ ಸಿನಿಮಾ ನಿರ್ಮಾಣ ಮಾಡುವ ಆಸೆ ಅವರೊಳಗಡೆ ಇರೋದು ನಿಜ. ಅದು ಏನು ಅನ್ನೋದು ಇಂದು ಸಂಜೆಯೇ ಗೊತ್ತಾಗಲಿದೆ.

ಇಂದು ಸಂಜೆ 4.05 ಕ್ಕೆ ಅದು ನಿಮ್ಮ ಮುಂದೆ ಅನಾವರಣಗೊಳ್ಳಲಿದೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ. ಅಂದ ಹಾಗೆ, ನಟ ರಕ್ಷಿತ್‌ ಶೆಟ್ಟಿ ಈಗ ಹೊಸ ಬಗೆಯ ಕಥೆಗಳನ್ನು ತಮ್ಮದೇ ಬ್ಯಾನರ್‌ ನಲ್ಲಿ ನಿರ್ಮಾಣ ಮಾಡುವುದಕ್ಕೆ ಮನಸು ಮಾಡಿದ್ದಾರೆ. ಆ ಕುರಿತು ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡ ಸ್ಟೇಟಸ್‌ ಹೀಗಿದೆ.

ʼಲೂಸಿಯಾ, ರಾಮಾ ರಾಮಾ ರೇ, ರಂಗಿತರಂಗ, ಒಂದು ಮೊಟ್ಟೆಯ ಕಥೆ, ಕವಲುದಾರಿ, ದಿಯಾ.. ಈ ಸಿನಿಮಾಗಳು ನನ್ನ ಮೇಲೆ ಉಂಟುಮಾಡಿದ ಪ್ರಭಾವ ಅತಿ ಪ್ರಬಲವಾಗಿತ್ತು ಹಾಗೂ ಅದನ್ನು ಜಗತ್ತಿನ ಜೊತೆ ಹಂಚಿಕೊಳ್ಳಲು ಅತಿ ಸಂತಸವಾದ ವಿಷಯವಾಗಿತ್ತು. ಇಂದು ಇದೇ ರೀತಿ ಪ್ರಭಲವಾದ ಪ್ರಭಾವ ಬೀರುವ ಅಂತದ್ದೇ ಒಂದು ಸಹಯೋಗ ಈ ಸಿನಿಮಾದ ಮೂಲಕ ಕೂಡಿ ಬಂದಿದೆ. ಇದು ನಿಮಗೂ ಸಹ ಭಾವನೆಗಳನ್ನು ಬಡಿದೇಳಿಸುವ ವರ್ಣ ಚಿತ್ರಗಳ ಸಮೂಹವಾ ಗುವುದರಲ್ಲಿ ಎರಡು ಮಾತಿಲ್ಲ. ಇಂದು ಸಂಜೆ ೪.೦೫ ಕ್ಕೆ ನಿಮ್ಮ ಮುಂದೆ ಅನಾವರಣಗೊಳಿಸಲಿದ್ದೇವೆ.. ಇದಿಷ್ಟು ನಟ ರಕ್ಷಿತ್‌ ಶೆಟ್ಟಿ ಹಾಕಿಕೊಂಡಿರೋ ಸ್ಟೇಟಸ್.‌

ಪ್ಯಾನ್‌ ಇಂಡಿಯಾ ಸ್ಟಾರ್‌ ರಕ್ಷಿತ್‌ ಶೆಟ್ಟಿ ಮೇಲೆ ಇತ್ತೀಚೆಗೆ ಹಿಗ್ಗಾ ಮುಗ್ಗಾ ವಾರ್‌ ಆಗಿದ್ದು, ಅವರನ್ನು ಬಡಿದೆಬ್ಬಿಸುವಂತೆ ಮಾಡಿರೋದು ಸತ್ಯ. ಟೀಕೆಗಳನ್ನುಸವಾಲಾಗಿಯೇ ಸ್ವೀಕರಿಸಿರುವ ಅವರೀಗ ತಮ್ಮ ಕೆಲಸಗಳ ಮೂಲಕ ಉತ್ತರಿಸಲು ಹೊರಟಂತಿದೆ. ಅದರ ಮೊದಲ ಕೌಂಟರ್‌ ರಿಚರ್ಡ್‌ ಆಂಟನಿ. ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ ದೊಡ್ಡ ಟೀಕೆಗೆ ಒಳಗಾದ ದಿನದಲ್ಲಿಯೇ ಅದಕ್ಕೆ ದೊಡ್ಡದಾಗಿ ಕೌಂಟರ್‌ ಕೊಟ್ಟರು. ಹೊಂಬಾಳೆ ಫಿಲಂಸ್‌ ಬ್ಯಾನರ್‌ ನಲ್ಲಿ ಅವರು ರಿಚರ್ಡ್‌ ಆಂಟನಿ ಮೂಲಕ ನಿರ್ದೇಶನ ಮತ್ತು ನಟನೆಗೆ ಇಳಿದಾಗ ಎಲ್ಲರೂ ನಿಬ್ಬೆರಗಾಗಿ ನಿಂತರು. ಅಲ್ಲಿಂದ ಈಗ ತಮ್ಮದೇ ಸಂಸ್ಥೆಯ ಮೂಲಕ ಹೊಸ ಅಲೆಯ ಸಿನಿಮಾ ನಿರ್ಮಾಣಕ್ಕೆ ಇಳಿಯುತ್ತಿದ್ದಾರೆ. ಆ ಸಿನಿಮಾದ ನಿರ್ದೇಶಕ, ನಾಯಕ ನಟ, ಉಳಿದಂತೆ ಕಲಾವಿದರು, ತಂತ್ರಜ್ಜರ ವಿವರ ಇಂದು ಸಂಜೆಯೇ ಬಹಿರಂಗವಾಗುವುದು ಗ್ಯಾರಂಟಿ.
– ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!