ಡಾಲಿ ದರ್ಬಾರ್‌ಗೆ ಥಿಯೇಟರ್ ಸಿಗ್ತಿಲ್ಲವಾ?ಧನಂಜಯ್ `ರತ್ನನ್ ಪ್ರಪಂಚ’ ಓಟಿಟಿಗೆ ಹೋಗಿದ್ಯಾಕೆ?

ನಟರಾಕ್ಷಸನಿಗೆ ಥಿಯೇಟರ್ ಸಿಗ್ತಿಲ್ಲವಾ? ಏನ್ ಹೇಳ್ತಿದ್ದೀರಿ ನೀವು? ಸರ್ಕಾರ ಹಂಡ್ರೆಡ್ ಪರ್ಸೆಂಟ್ ಅನುಮತಿ ಕೊಟ್ಟಿದ್ದೆ ತಾನೇ? ಮತ್ಯಾಕೆ ನಮ್ಮ ಡಾಲಿಗೆ ಥಿಯೇಟರ್ ಕೊಡ್ತಿಲ್ಲ? ಕರುನಾಡಿನಲ್ಲಿ ನಮ್ಮ ಮಿಠಾಯಿ ಸೂರಿ ಅಣ್ಣಂದು ಹವಾ ಹೆಂಗೈತಿ ಅನ್ನೋದು ಅವರಿಗೆ ಗೊತ್ತಿಲ್ಲವಾ? ಹೀಗಂತ ಕೇಳ್ತಿರೋದು ಒನ್ ಅಂಡ್ ಓನ್ಲಿ ಡಾಲಿಬಾಸ್ ಅಭಿಮಾನಿಗಳು. ಫ್ಯಾನ್ಸ್ ಕೇಳ್ತಿರೋದ್ರಲ್ಲಿ ಅರ್ಥ ಇದೆ. ಹಾಗಾದ್ರೆ, ಡಾಲಿ ದರ್ಬಾರ್ ಚಿತ್ರಮಂದಿರಲ್ಲಿ ಯಾಕಿಲ್ಲ? ರತ್ನನ್ ಪ್ರಪಂಚ ಓಟಿಟಿಯಲ್ಲಿ ಬಿಡುಗಡೆಯಾಗ್ತಿರುವುದಕ್ಕೆ ಕಾರಣ ಏನು? ನೋಡೋಣ ಬನ್ನಿ

ಡಾಲಿ ಬಜಾರ್‌ನಲ್ಲಿ ಈ ಹೆಸರಿಗಿರುವ ಬೆಲೆನೇ ಬೇರೆ ಬಿಡಿ. ಡೈರೆಕ್ಟರ್ ಸೂರಿಯವರು ಅದ್ಯಾವ್ ಗಳಿಗೆಯಲ್ಲಿ ಡಾಲಿ ಕ್ಯಾರೆಕ್ಟರ್‌ನ ಸ್ಕೆಚ್ ಮಾಡಿದ್ರೋ ಏನೋ ಗೊತ್ತಿಲ್ಲ.? ಕೇವಲ ಎರಡೇ ಎರಡು ಅಕ್ಷರದ ಡಾಲಿ ಪಾತ್ರ ಧನಂಜಯ್ ಬದುಕುನ್ನೇ ಬದಲಾಯಿಸಿಬಿಡ್ತು. ಗಾಂಧಿನಗರದಲ್ಲಿ ಡಾಲಿಯ ಹೊಸ ಅಲೆ ಆರಂಭವಾಯ್ತು, ಧನಂಜಯ್ ನಟನೆಗೆ ನಟರಾಕ್ಷಸ' ಪಟ್ಟ ಸಿಗ್ತು. ಅಭಿಮಾನಿ ಸಂಘಗಳು ಹುಟ್ಟಿಕೊಂಡವು, ಲಕ್ಷಾಂತರ ಫ್ಯಾನ್-ಫಾಲೋಯರ್ಸ್ ಸಿಕ್ಕರು. ನಿರ್ದೇಶಕರು-ನಿರ್ಮಾಪಕರು ಡಾಲಿ ಕಾಲ್‌ಶೀಟ್‌ಗೆ ಕ್ಯೂ ನಿಂತರು. ಪರಭಾಷೆಯವರು ರೆಡ್‌ಕಾರ್ಪೆಟ್ ಹಾಕಿಕೊಂಡು ರ‍್ಕೊಂಡು ಹೋದರು. ಇವತ್ತು, ಧನಂಜಯ್ ಅಕೌಂಟ್‌ನಲ್ಲಿ ಪಿಂಕ್‌ನೋಟ್ ಕೇಕೆಹಾಕ್ತಿದೆ ಅಂದರೆ, ಮನೆಮುಂದೆ ದುಬಾರಿ ಕಾರು ನಿಂತಿದೆ ಅಂದರೆ, ಕೈಯಲ್ಲಿ ಹತ್ತಾರು ಸಿನಿಮಾಗಳು ಇವೆ ಅಂದರೆ, ಅದಕ್ಕೆ ಮೊದಲ ಕಾರಣಡಾಲಿ’ ಪಾತ್ರ ಮತ್ತು ಆ ಪಾತ್ರದ ಸೃಷ್ಟಿಕರ್ತ ಸೂರಿಯವರು. ಅಂತಿಮವಾಗಿ ಸಿನಿಮಾ ಮೇಲೆ ಧನಂಜಯ್‌ಗಿರುವ ಶ್ರದ್ದೆ-ಭಕ್ತಿ-ನಿಯತ್ತು ಮತ್ತು ಕಲಾಪ್ರೀತಿಯೇ ಡಾಲಿ ಬೇಡಿಕೆಗೆ ಸಾಕ್ಷಿ ಅಲ್ಲವೇ.

ಎಲ್ಲಾ ಓಕೆ ರತ್ನನ್ ಪ್ರಪಂಚ' ಚಿತ್ರ ಓಟಿಟಿನಲ್ಲಿ ಯಾಕೇ ಬಿಡುಗಡೆಯಾಗ್ತಿದೆ? ಥಿಯೇಟರ್ ಯಾಕೇ ಸಿಗ್ತಿಲ್ಲ ಹೇಳ್ರಿ ಫಸ್ಟ್? ನಿಜವಾಗ್ಲೂ ಈ ಪ್ರಶ್ನೆಗೆ ಅಂತಿಮ ಉತ್ತರ ಕೊಡುವುದಕ್ಕೆ ಸಾಧ್ಯವಿಲ್ಲ. ಆದರೆ,ರತ್ನನ್ ಪ್ರಪಂಚ’ ಚಿತ್ರದ ಅನ್ನದಾತರು ಅಮೇಜಾನ್ ಪ್ರೆöÊಮ್‌ನಲ್ಲೇ ಮೊದಲು ರಿಲೀಸ್ ಮಾಡೋದಕ್ಕೆ ನಿರ್ಧಾರ ಮಾಡಿರೋದ್ರಿಂದ ಒಂದೊಳ್ಳೆ ರೇಟ್‌ಗೆ ಚಿತ್ರ ಮಾರಾಟವಾಗಿರಬಹುದು. ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ. ಜಿ. ರಾಜ್ ಇಬ್ಬರು ಖುಷಿಯಾಗಿರಬಹುದು. ಹೀಗಾಗಿಯೇ, ಸ್ಟಾರ್‌ನಟರುಗಳಿಬ್ಬರ ಸಿನಿಮಾದ ಅಬ್ಬರ ಆರ್ಭಟದ ನಡುವೆ `ರತ್ನನ್ ಪ್ರಪಂಚ’ ಬೇಡವೆಂದು ತೀರ್ಮಾನಿಸಿ ಓಟಿಟಿ ಮೊರೆ ಹೋಗಿರಬಹುದು ಎನ್ನುತ್ತೆ ಮೂಲ ಮತ್ತು ವಾಸ್ತವ

ಅಕ್ಟೋಬರ್ ೧೪ರಂದು ಸಲಗ-ಕೋಟಿಗೊಬ್ಬ-೩ ಚಿತ್ರ ತೆರೆಗೆ ಅಪ್ಪಳಿಸ್ತಿರುವುದು ನಿಮಗೆಲ್ಲಾ ಗೊತ್ತೆಯಿದೆ. ದುನಿಯಾ ವಿಜಯ್ ಹಾಗೂ ಅಭಿನಯ ಚಕ್ರವರ್ತಿ ಇಬ್ಬರು ಮುಖಾಮುಖಿಯಾಗ್ತಿರೋದ್ರಿಂದ ಸಣ್ಣಪುಟ್ಟ ಸಿನಿಮಾಗಳು ತಮ್ಮ ರಿಲೀಸ್ ಡೇಟ್‌ನ ಮುಂದಕ್ಕೆ ಹಾಕುತ್ತಿದ್ದಾರೆ. ಆದರೆ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕದ ರತ್ನನ್ ಪ್ರಪಂಚ' ಟೀಮ್ ಅಮೇಜಾನ್ ಪ್ರೆöÊಮ್‌ನಲ್ಲಿ ಅಕ್ಟೋಬರ್ ೨೨ರಂದು ರಿಲೀಸ್ ಮಾಡೋದಕ್ಕೆ ಮುಂದಾಗಿದ್ದಾರೆ. ಓಟಿಟಿಯಲ್ಲಿ ಬಿಡುಗಡೆ ಗೊಂಡ ನಂತರ ಎಷ್ಟೋ ಸಿನಿಮಾಗಳು ಬೆಳ್ಳಿತೆರೆಯಲ್ಲೂ ಪ್ರದರ್ಶನ ಕಾಣುತ್ತಿವೆ, ಅದರಂತೇ, ಡಾಲಿ ಧನಂಜಯ್ ಅಭಿನಯದರತ್ನನ್ ಪ್ರಪಂಚ’ ಚಿತ್ರ ಕೂಡ ಅಮೇಜಾನ್‌ನಲ್ಲಿ ವೀಕ್ಷಕರನ್ನು ತಲುಪಿ ನಂತರ ಗಾಂಧಿನಗರದಲ್ಲಿ ಚಿತ್ರಪ್ರೇಮಿಗಳನ್ನು ಕೈಬೀಸಿ ಕರೆಯಬಹುದು.

ರತ್ನನ್ ಪ್ರಪಂಚ' ಬಹಳಷ್ಟು ಕೂತೂಹಲ ಮೂಡಿಸಿದ್ದ ಚಿತ್ರ. ಇದು ಬರೀ ಸ್ಯಾಂಪಲ್ ಅಷ್ಟೇ ಇನ್ನೂ ಏನೆನೋ ಐತಿ. ಈ ನನ್ನ ಬೊಂಬಾಟ್ ಆಗಿರೋ ಪ್ರಪಂಚಾನ ನೋಡ್ಬೇಕು ನೀವು. ನಮ್ಮ ಮದರ್ ಸರೋಜಾ, ಮಯೂರಿ, ತಬಸುಮು, ಅಹಮ್ಮದ್ ಅಲಿ, ಯಲ್ಲವ್ವ, ಉಡಾಳ್ ಬಾಬುರಾವ್, ಬಸಪ್ಪ, ಬೆಣ್ಣಿ ನಾನು ರತ್ನಾಕರ ಹೀಗಂತ ಹೇಳಿ ಕೊನೆಗೆ ನಿಮ್ಮಮ್ಮ ನಿಮ್ಮಮ್ಮ ಅಲ್ಲ... ನಮ್ಮಮ್ಮ ನಮ್ಮಮ್ಮ ಅಲ್ಲ... ನಮ್ಮಮ್ಮ ನಮ್ಮಮ್ಮ...ನಿಮ್ಮಮ್ಮ ನಿಮ್ಮಮ್ಮ... ಅಂತ ಡಾಲಿ ಡೈಲಾಗ್ ಬಿಟ್ಟಿದ್ದರಿಂದ ಸಿನಿರಸಿಕರ ಮನಸ್ಸು ಅರಳಿತ್ತು. ಪ್ರೇಮ್ ಅವರ ಜೋಗಿ ಪಿಕ್ಚರ್‌ನಲ್ಲಿ ಯಾವ್ ರೇಂಜ್ಗೆ ಮದರ್ ಸೆಂಟಿಮೆAಟೋ ಇತ್ತೋ ಅಂತಹದ್ದೇ ಸೆಂಟಿಮೆAಟ್ ಇಲ್ಲೂ ಇದೆ ಅಂತ ಹೇಳಿದಾಗರತ್ನಾಕರನ ಪ್ರಪಂಚ’ ಎರಡನೇ ಜೋಗಿಯಾಗ್ಬೋದಾ ಗುರು ಅಂತ ಪ್ರೇಕ್ಷಕರು ಪ್ರಶ್ನೆ ಮಾಡಿಕೊಂಡಿದ್ದುAಟು.

ದಯವಿಟ್ಟು ಗಮನಿಸಿ' ಹೆಸರಿನ ಚಿತ್ರ ಮಾಡಿ ಕನ್ನಡ ಸಿನಿಮಾಪ್ರೇಕ್ಷಕರ ಹೃದಯ ಗೆದ್ದಿದ್ದ ನಿರ್ದೇಶಕ ರೋಹಿತ್ ಪದಕಿ,ರತ್ನನ್ ಪ್ರಪಂಚ’ ಎನ್ನುವ ಕೂತೂಹಲಭರಿತ ಚಿತ್ರದೊಂದಿಗೆ ಮರಳಿದ್ದಾರೆ. ರತ್ನಾಕರನಾಗಿ ಡಾಲಿ ಅಭಿನಯಿಸಿದ್ದು ಮಿಡಲ್ ಕ್ಲಾಸ್ ಹುಡುಗನಾಗಿ ಮಿಂಚಿದ್ದಾರೆ. ಉಮಾಶ್ರೀ ರತ್ನಾಕರನಿಗೆ ತಾಯಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ.
ರೆಬಾ ಜಾನ್ ಹೀರೋಯಿನ್ನಾಗಿ ಕಂಗೊಳಿಸಿದ್ದಾರೆ. ಹಿರಿಯ ನಟಿ ಶ್ರುತಿ, ಅನುಪ್ರಭಾಕರ್, ರವಿಶಂಕರ್‌ಗೌಡ, ಪ್ರಮೋದ್, ವೈನಿಧಿ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂಭತ್ತು ಪಾತ್ರಗಳು ಒಂದು ಕೂತೂಹಲಭರಿತ ಕಥೆಯನ್ನು ಪ್ರೇಕ್ಷಕ ಮಹಾಷಯರಿಗೆ ಉಣಬಡಿಸೋದಕ್ಕೆ ಫಿಲ್ಮ್ಟೀಮ್ ಜೊತೆ ಅಮೇಜಾನ್ ಕೂಡ ರೆಡಿಯಾಗಿದೆ.

ನಗು-ತಿರುವು-ಪ್ರೀತಿಯ ಹೂರಣವೇ ರತ್ನನ್ ಪ್ರಪಂಚ' ಎಂದು ಟ್ವೀಟ್ ಮಾಡಿರುವ ಡಾಲಿ ಸಿನಿಮಾದತ್ತ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ರತ್ನನ್ ಪ್ರಪಂಚ’ಕ್ಕಿದ್ದು ಹಾಡುಗಳು ಅದ್ಬುತವಾಗಿ ಮೂಡಿಬಂದಿದೆ. ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯ ಚಿತ್ರ ಇದಾಗಿದೆ. ಮನರಂಜನೆಗೆ ಬರವಿಲ್ಲದ `ರತ್ನನ್ ಪ್ರಪಂಚ’ವನ್ನು ಸಿನಿಮಾಪ್ರೇಮಿಗಳು ಯಾವ್ ರೀತಿ ಸ್ವೀಕರಿಸುತ್ತಾರೆ ಅನ್ನೋದನ್ನು ಕಾದುನೋಡಬೇಕಿದೆ. ಲಾಂಗ್, ಪಿಸ್ತೂಲ್ ಬಿಟ್ಟು ಕೈಯಲ್ಲಿ ಮಲ್ಲಿಗೆ ಹೂವು, ನಿಂಬೆಹುಳಿ ಪ್ಲೇವರ್ ಪೆಪ್ಪರ್ ಮೆಂಟ್ ಇಟ್ಕೊಂಡು ಸ್ಕಿçÃನ್‌ಮೇಲೆ ಬರುತ್ತಿರುವ ಮಿಠಾಯಿ ಸೂರಿ ಮನಸೂರೆಗೊಳ್ತಾರಾ ಜಸ್ಟ್ ವೇಯ್ಟ್ ಅಂಡ್ ವಾಚ್

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!