ಬಹದ್ದೂರ್ ಬರ್ತ್ ಡೇ; ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್- ರಿಲೀಸ್ ಆಯ್ತು ಮಾರ್ಟಿನ್ ಲುಕ್!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಬರ್ತ್ ಡೇ ಸಂಭ್ರಮ. 34 ನೇ ವಸಂತಕ್ಕೆ ಕಾಲಿಟ್ಟಿರುವ ಧ್ರುವ ಸರ್ಜಾ ಅದ್ದೂರಿ ಬರ್ತ್ ಡೇಗೆ ಬ್ರೇಕ್ ಹಾಕಿದ್ದಾರೆ. ಅಣ್ಣನ ಅಗಲಿಕೆ ಹಾಗೂ ಕೊರೊನಾ ಕಾರಣದಿಂದ ಕಳೆದ ವರ್ಷ ಬರ್ತ್ ಡೇ ಆಚರಣೆ ಬೇಡ ಎಂದಿದ್ದರು. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳೋದಕ್ಕೆ ಮನಸ್ಸಿಲ್ಲ ದಯವಿಟ್ಟು ಅಭಿಮಾನಿಗಳು ಯಾರು ಬೇಸರಗೊಳ್ಳಬೇಡಿ, ತಾವು ಎಲ್ಲಿರುತ್ತೀರೋ ಅಲ್ಲಿಂದಲೇ ವಿಶಸ್ ತಿಳಿಸಿ ಎಂದಿದ್ದರು. ಹೀಗಾಗಿ, ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಬಹದ್ದೂರ್ ಹುಡುಗನ ಹುಟ್ಟುಹಬ್ಬಕ್ಕೆ ನಿರ್ದೇಶಕ ಎ.ಪಿ ಅರ್ಜುನ್ ಟ್ರೀಟ್ ಕೊಟ್ಟಿದ್ದಾರೆ. ಮಾರ್ಟಿನ್ ಚಿತ್ರದ ಮಗದೊಂದು ಲುಕ್ ನ ಅನಾವರಣ ಮಾಡಿದ್ದಾರೆ. ಕೈಗೆ ತೊಡಿಸಿರುವ ಬೇಡಿಯನ್ನು ಹಲ್ಲಲ್ಲಿ ಕಡಿದು ಬಿಡಿಸಿಕೊಳ್ಳುವ, ಎದುರಾಳಿಯನ್ನು ಕೆಕ್ಕರಿಸಿಕೊಂಡು ನೋಡುತ್ತಿರುವ ದೃಶ್ಯ ಕಂಡು ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ತೋಳಿನ ಮೇಲಿರುವ ಇಂಡಿಯನ್ ಟ್ಯೂಟ್ ಹುಚ್ಚೆಬ್ಬಿಸುತ್ತಿದೆ.ಪ್ಯಾನ್ ಇಂಡಿಯಾದಲ್ಲಿ ತಯ್ಯಾರಾಗುತ್ತಿರುವ ‘ ಮಾರ್ಟಿನ್’ ಚಿತ್ರ ಟೈಟಲ್ ಮಾತ್ರವಲ್ಲ ಪೋಸ್ಟರ್ ನಿಂದಲೇ ಬಜಾರ್ ನಲ್ಲಿ ಬ್ರ್ಯಾಂಡಿಂಗ್ ನಲ್ಲಿದೆ.

ಅದ್ದೂರಿ ಕಾಂಬೋ ಮತ್ತೆ ಒಂದಾಗಿರುವ ಮಾರ್ಟಿನ್ ಮೇಲೆ ನಿರೀಕ್ಷೆಗಳು ನೂರಿವೆ. ನಾಲ್ಕನೇ ಚಿತ್ರಕ್ಕೆ ಗಡಿದಾಟಿದ ಬೆಂಕಿಚೆಂಡು ಮಾರ್ಟಿನ್ ಮೂಲಕ ಪ್ಯಾನ್ ಇಂಡಿಯಾ ತುಂಬೆಲ್ಲಾ ಮೇನಿಯಾ ಸೃಷ್ಟಿಸಿಕೊಳ್ತಾರೆ ಎನ್ನುವ ಸೂಚನೆ ಪೋಸ್ಟರ್ ನಿಂದಲೇ ಸಿಗುತ್ತಿದೆ. ಸಿಂಪಲ್ಲಾಗಿ ಮೂರು ಹೊಡೆದು ಸಿಡಿದೆದ್ದ ಸಿಡಿಗುಂಡು ನಾಲ್ಕನೇ ಚಿತ್ರದಲ್ಲಿ ಪೊಗರು ತೋರಿಸಿದರು. ಈಗ ಮಾರ್ಟಿನ್ ಮೇಲೆ ಬಹಳಷ್ಟು ವರ್ಕ್ ಮಾಡಿ ಅಖಾಡಕ್ಕೆ ಧುಮ್ಕಿದ್ದಾರೆ.

ಮತ್ತೊಂದು ಹಿಟ್ ಕೊಡುವುದಕ್ಕೆ ಧ್ರುವ ಜೊತೆ ನಿರ್ದೇಶಕ ಎ.ಪಿ ಅರ್ಜುನ್ ಕೂಡ ಪಣತೊಟ್ಟಿದ್ದಾರೆ. ಇಡೀ ಟೀಮ್ ಹಾರ್ಡ್ ವರ್ಕ್ ಮಾಡ್ತಿದ್ದು, ವೈಸಾಗ್ ನಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದೆ. ಉದಯ್ ಕೆ. ಮೆಹ್ತಾ ಬಂಡವಾಳದಲ್ಲಿ ಮಾರ್ಟಿನ್ ರಿಚ್ ಆಗಿ ಮೂಡಿಬರಲಿದೆ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!