ಸ್ಯಾಂಡಲ್‌ವುಡ್ ಬಚ್ಚನ್ ಹಾಗೂ ಜಾಕ್ಸನ್ ನಡುವೆ ಬಾಕ್ಸ್ ಆಫೀಸ್ ಅಂಗಳದಲ್ಲಿ ಜಟಾಪಟಿ ನಡೆಯುತ್ತೆ !? ಸ್ಟಾರ್ ವಾರ್ ಜೊತೆಗೆ ಫ್ಯಾನ್ಸ್ ವಾರ್ ಕೂಡ ಧಗಧಗಿಸುತ್ತೆ !? ಎನ್ನುವ ಬೆಂಕಿ ಸಮಾಚಾರ ಈಗಾಗಲೇ ಗಾಂಧಿನಗರದಲ್ಲಿ ಹೊಗೆಯಾಡ್ತಿದೆ. ಈ ಮಧ್ಯೆಯೇ ಅಂದು ಸಲಗ' ಮುಹೂರ್ತಕ್ಕೆ ಸುದೀಪ್ ಗೆಸ್ಟ್, ಇಂದು ಕೋಟಿಗೊಬ್ಬನ ಜೊತೆ
ಸಲಗ’ ಫೈಟ್ ಎನ್ನುತ್ತಾ ಕೆಲವರು ಕುಹುಕವಾಡ್ತಿದ್ದಾರೆ ಅಟ್ ದಿ ಸೇಮ್ ಟೈಮ್ ಕಡ್ಡಿ ಅಲ್ಲಾಡ್ಸೋ ಕೆಲ್ಸ ಮಾಡ್ತಿದ್ದಾರೆ. ಆದರೆ ಅವರಿಗೆ `ಗೋಲ್ಡ್ ಜಿಮ್’ ಕಥೆ ಹಾಗೂ ರಂಗ ಎಸ್‌ಎಸ್‌ಎಲ್‌ಸಿ ಮ್ಯಾಟರ್ ತಿಳಿದಿಲ್ಲ ಅನ್ಸುತ್ತೆ. ಅಥವಾ ತಿಳಿದರೂ ಬೆಂಕಿ ಹಚ್ಚೋದಕ್ಕೆ ನೋಡ್ತಿದ್ದಾರೋ ನಮಗೆ ಗೊತ್ತಿಲ್ಲ. ಯಾವುದಕ್ಕೂ, ಒಮ್ಮೆ ಸಲಗ ಮತ್ತು ಕೋಟಿಗೊಬ್ಬನ ಬಾಂಡೇಜ್ ಬಡಾ ಖಬರ್‌ನ ನೋಡ್‌ಕೊಂಡು ಬರೋಣ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಇಬ್ಬರು ಥಿಯೇಟರ್ ಅಂಗಳದಲ್ಲಿ ಮುಖಾಮುಖಿಯಾಗ್ತಿದ್ದಾರೆ. ಕೋಟಿಗೊಬ್ಬನಾಗಿ ಕಿಚ್ಚ ಕಣಕ್ಕಿಳಿದರೆ, ಸಲಗ ನಡೆದಿದ್ದೇ ದಾರಿ ಎನ್ನುತ್ತಾ ವಿಜಯ್ ಫೀಲ್ಡಿಗಿಳಿಯುತ್ತಿದ್ದಾರೆ. ಆಯುಧ ಪೂಜೆಯ ದಿನದಂದು ಒಂದೇ ಅಖಾಡದಲ್ಲಿ ಗಂಧದಗುಡಿಯ ಇಬ್ಬರು ಸೂಪರ್‌ಸ್ಟಾರ್‌ಗಳ ಅಟ್ಟಹಾಸ ಶುರುವಾಗಲಿದೆ. ಸಂತೋಷ್ ಚಿತ್ರಮಂದಿರದಲ್ಲಿ ಸಲಗ ಅಬ್ಬರಿಸಿ ಬೊಬ್ಬಿರಿದರೆ, ನರ್ತಕಿ ಥಿಯೇಟರ್‌ನಲ್ಲಿ ಕೋಟಿಗೊಬ್ಬ-೩ ಚಿತ್ರ ಧಗಧಗಿಸಲಿದೆ. ಒಂದೇ ದಿನ ಇಬ್ಬರು ನಟರು ಅಖಾಡಕ್ಕೆ ಇಳಿಯೋದ್ರಿಂದ ಗಾಂಧಿನಗರದ ರಂಗೇರಲಿದೆ. ಸ್ಟಾರ್‌ನಟರುಗಳ ಅಭಿಮಾನಿ ದೇವರುಗಳು ಥಿಯೇಟರ್ ಮುಂದೆ ಹಬ್ಬ ಅಲ್ಲ ಊರಬ್ಬ ಮಾಡೋದಕ್ಕೆ ಸಜ್ಜಾದಂತೆ ಸಕಲ ತಯ್ಯಾರಿ ಮಾಡಿಕೊಳ್ತಿದ್ದಾರೆ. ಇಂತಹ ಸಂತೋಷದ ಕ್ಷಣದಲ್ಲಿ ಗಾಂಧಿನಗರದ ಕೆಲವು ಮಂದಿ ಅಂದು ಸಲಗ' ಮುಹೂರ್ತಕ್ಕೆ ಸುದೀಪ್ ಗೆಸ್ಟ್ ಆಗಿದ್ದರು. ಆದರೆ, ಇವತ್ತೇನಾಯ್ತು
ಸಲಗ’ನೊಟ್ಟಿಗೆ ಕೋಟಿಗೊಬ್ಬ ಸೆಣಸಾಡಬೇಕಿದೆ ಎಂದು ಮಾತನಾಡಿಕೊಳ್ತಿದ್ದಾರೆ.
ಉರಿಯೋ ಬೆಂಕಿಗೆ ತುಪ್ಪ ಸುರಿಯುವವರು ನಮ್ಮ ಮಧ್ಯೆ ತುಂಬಾ ಜನ ಇರುತ್ತಾರೆ. ದುಷ್ಮನ್ ಕಹಾ ಹೈ ಅಂದ್ರೆ ಬಗಲ್ ಮೈ ಎನ್ನುವಂತೆ ಇಬ್ಬರು ಮಧ್ಯೆ ಕಡ್ಡಿಗೀರಿ ಸಿಗರೇಟ್ ಹಚ್ಚಿಕೊಂಡ್ರೇನೇ ಕೆಲವರಿಗೆ ಹಾರ್ಟ್-ಲಿವರ್ ಬೆಚ್ಚಗಾಗೋದು. ಅದೇ ಕೆಲಸವನ್ನು ಮುಂದುವರೆಸಿರುವ ಕಿಡಿಗೇಡಿಗಳು ಬಚ್ಚನ್ ಮತ್ತು ಜಾಕ್ಸನ್ ಮಧ್ಯೆ ತಂದಿಡುವುದಕ್ಕೆ ನೋಡ್ತಿದ್ದಾರೆ. ನೋಡಿ ಸಾರ್ ನೀವೇ ಹೋಗಿ ಸಲಗ' ಚಿತ್ರಕ್ಕೆ ಫಸ್ಟ್ ಕ್ಲಾಪ್ ಮಾಡಿ ಬಂದ್ರಿ. ಇವತ್ತು ಆ
ಸಲಗ’ನೇ ನಿಮಗೆ ನೆಕ್ ಟು ನೆಕ್ ಫೈಟ್ ಕೊಡ್ತಿದ್ದಾನೆ. ನಿಮಗೋಸ್ಕರ ಆದರೂ ರಿಲೀಸ್ ಡೇಟ್ ಮುಂದಕ್ಕೆ ಹಾಕಿಕೊಳ್ಳಬಹುದಿತ್ತು ಆದರೆ ಆ `ಸಲಗ’ ಹಂಗ್ ಮಾಡಲಿಲ್ಲ ನೋಡಿ ಎನ್ನುತ್ತಾ ಸುದೀಪ್ ಸಿಡಿದೇಳುವಂತೆ ಮಾಡ್ತಿದ್ದಾರೆ. ಆದರೆ, ಕಿಚ್ಚನಿಗೆ ವಾಸ್ತವ ಏನು ಎನ್ನುವುದರ ಅರಿವಿದೆ. ಕಡ್ಡಿಗೀರುವವರ ಕಥೆ ಏನು ಎನ್ನುವುದು ತಿಳಿದಿದೆ. ಜೊತೆಗೆ ವಿಜಯ್ ಜೊತೆಗಿನ ಗೋಲ್ಡ್ ಜಿಮ್ ದಿನಗಳ ನೆನಪಿದೆ.
ಕೋಟಿಗೊಬ್ಬನ ಮುಂದೆ ಸಲಗ'ನ ಬಗ್ಗೆ ಹಾಕಿಕೊಡುವವರು ಇರುವಂತೆ,
ಸಲಗ’ನ ಮುಂದೆ ಕೋಟಿಗೊಬ್ಬನ ಬಗ್ಗೆ ಹಾಕಿಕೊಡುವವರು ಇದ್ದೇ ಇರ್ತಾರೆ. ಅಲ್ಲಾ, ಮುಹೂರ್ತಕ್ಕೆ ಬಂದು ಒಳ್ಳೆಯದಾಗಲಿ ಅಂತ ಹಾರೈಸಿದರು, ರಿಲೀಸ್ ಡೇಟ್‌ನ ಅನೌನ್ಸ್ ಮಾಡಿದಾಗ್ಲೂ ಸೋಷಿಯಲ್ ಮೀಡಿಯಾದಲ್ಲಿ ಶುಭಕೋರಿದರು. ಅವರಿಗೆ ಅಷ್ಟೆಲ್ಲಾ ಒಳ್ಳೆಯ ಮನಸ್ಸಿದೆಯಲ್ಲವಾ, ನಿರ್ಮಾಪಕ ಸೂರಪ್ಪ ಬಾಬು ಅವರ ಹತ್ತಿರ ಮಾತನಾಡಿ ಕೋಟಿಗೊಬ್ಬ-೩ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿಸಬಹುದಿತ್ತು. ಆದರೆ, ಮಾಣಿಕ್ಯ ಹಂಗ್ ಮಾಡಲಿಲ್ಲ ನೋಡಿ ವಿಜಿಯಣ್ಣ ಅಂತ ಬ್ಲ್ಯಾಕ್ ಕೋಬ್ರಾ ಮುಂದೆ ಹೇಳಿಕೊಂಡಿರ್ತಾರೆ. ಆಗ ವಿಜಯ್ ಅವರು ʼರಂಗ ಎಸ್‌ಎಸ್‌ಎಲ್‌ಸಿʼ ದಿನಗಳನ್ನು ಕಣ್ಮುಂದೆ ತಂದುಕೊಂಡಿರ‍್ತಾರೆ. ಹೀಗಾಗಿ ಏನು ರಿಯಾಕ್ಟ್ ಮಾಡಿರಲಿಕ್ಕೆ ಸಾಧ್ಯವಿಲ್ಲ ಅನ್ಸುತ್ತೆ.
ʼಜಯಮ್ಮನ ಮಗʼನ ಸಿನಿಮಾಜರ್ನಿ ಬಗ್ಗೆ ತಿಳಿದವರಿಗೆ ರಂಗಎಸ್‌ಎಸ್‌ಎಲ್‌ಸಿ ಪಾತ್ರ ಏನು ಅಂತ ಗೊತ್ತಿರುತ್ತೆ. ರಂಗಎಸ್‌ಎಸ್‌ಎಲ್‌ಸಿಯೇ ದುನಿಯಾ ವಿಜಯ್ ಅವರು ಬಣ್ಣ ಹಚ್ಚಿದ ಮೊದಲ ಸಿನಿಮಾ. ಅಲ್ಲಿಂದ ಸಾಗಿಬಂದು ಇವತ್ತು ಓನ್ ಬ್ರ್ಯಾಂಡ್ ಆಗಿದ್ದಾರೆ. ಗಂಧದಗುಡಿಯಲ್ಲಿ ಭದ್ರಬುನಾದಿ ಹಾಕಿಕೊಂಡಿದ್ದಾರೆ. ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದಾರೆ. ಕರುನಾಡಿನ ತುಂಬೆಲ್ಲಾ ಕೋಟ್ಯಾಂತರ ಅಭಿಮಾನಿ ಬಳಗ ಸಂಪಾದನೆ ಮಾಡಿದ್ದಾರೆ. ಹದಿನೆಂಟು ವರ್ಷಗಳ ಸಿನಿಮಾ ಜರ್ನಿಯಲ್ಲಿ ಇದೇ ಮೊದಲ ಭಾರಿಗೆ ಡೈರೆಕ್ಟರ್ ಹ್ಯಾಟ್ ತೊಟ್ಟು `ಸಲಗ’ ಸಿನಿಮಾ ನಿರ್ದೇಶಿಸಿದ್ದಾರೆ. ಡೈರೆಕ್ಟರ್ ಆದ ಖುಷಿ-ಸಂತೋಷ ವಿಜಯ್‌ಗೆಷ್ಟು ಇದೆಯೋ ಅಷ್ಟೇ ಖುಷಿ-ಸಂತೋಷ ಸುದೀಪ್ ಅವರಿಗೂ ಇದೆ. ಯಾಕಂದ್ರೆ, ವಿಜಯ್‌ರನ್ನು ಸುದೀಪ್ ಆಕ್ಟರ್ ಅಲ್ಲ ಫೈಟರ್ ಆದ ದಿನಗಳಿಂದಲೂ ನೋಡಿದ್ದಾರೆ ಮಾತ್ರವಲ್ಲ ಫೈಟರ್ ಆಗೋದಕ್ಕೂ ಮುನ್ನಾ ದಿನಗಳಿಂದಲೂ ಕಂಡಿದ್ದಾರೆ.
ಹೌದು, ದುನಿಯಾ ವಿಜಯ್ ಆಕ್ಟರ್ ಆಗೋದಕ್ಕೂ ಮುನ್ನ ಫೈಟರ್. ಫೈಟರ್ ಆಗಿ ಫೀಲ್ಡಿಗಿಳಿಯೋದಕ್ಕೆ ಮುನ್ನ ಗೋಲ್ಡ್' ಜಿಮ್‌ನಲ್ಲಿ ಬೆವರಿಳಿಸುತ್ತಿದ್ದರು. ಅಲ್ಲಿಗೆ, ಸುದೀಪ್ ಟೈಂಪಾಸ್‌ಗೋಸ್ಕರ ವರ್ಕೌಟ್ ಮಾಡೋದಕ್ಕೆ ಹೋಗ್ತಿದ್ದರಂತೆ. ಈ ಸಂಗತಿಯನ್ನು ಸ್ವತಃ ಸುದೀಪ್ ಅವರೇ
ಸಲಗ’ ಸಿನಿಮಾದ ಮುಹೂರ್ತದ ಸಂದರ್ಭದಲ್ಲಿ ಬಿಚ್ಚಿಟ್ಟಿದ್ದರು. ವಿಜಯ್ ನಡೆದುಬಂದ ಹಾದಿಯೇ ಅಚ್ಚರಿ ಮತ್ತು ವಿಶೇಷ. ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡು ಸ್ಟ್ರಗಲ್ ಮಾಡಿಕೊಂಡೇ ಇಲ್ಲಿವರೆಗೆ ತಲುಪಿರುವ ನಟ ವಿಜಯ್‌ಗೆ ಒಳ್ಳೆಯದಾಗಬೇಕು. ಡೈರೆಕ್ಷನ್‌ಗೆ ಇಳಿದಿರುವುದು ನಿಜಕ್ಕೂ ನನಗೆ ಸಂತಸ ತಂದಿದೆ. ಪ್ರತಿಯೊಬ್ಬ ಕಲಾವಿದನಲ್ಲೂ ಒಬ್ಬ ನಿರ್ದೇಶಕ ಇರ್ತಾನೆ, ಅದರಂತೇ, ಪ್ರತಿಯೊಬ್ಬ ನಿರ್ದೇಶಕನಲ್ಲೂ ಒಬ್ಬ ಕಲಾವಿದ ಇರ್ತಾನೆ. ಅವನಿಗೆ ಅವನೇ ಪ್ರೂ ಮಾಡಿಕೊಳ್ಳಬೇಕು ಈಗ ವಿಜಯ್ ಟೈಮ್. ಹೀಗಂತ ಹೇಳಿಕೊಂಡ ಕಿಚ್ಚ `೨೦೦೦’ ರೂಪಾಯಿ ಕಾಣಿಕೆ ಕೊಟ್ಟು ಇದು ಕೋಟಿಯಾಗಲಿ ಅಂತ ಹರಸಿ ಬಂದಿದ್ದರು.
ನಿಜಕ್ಕೂ ಸಲಗ' ಕೋಟಿ ಕೋಟಿ ಕೊಳ್ಳೆಹೊಡೆಯೋದ್ರಲ್ಲಿ ನೋ ಡೌಟ್. ಯಾಕಂದ್ರೆ, ಘೀಳಿಡೋದಕ್ಕೆ ರೆಡಿಯಾಗಿರುವ ಸಲಗ ಕ್ರೇಜ್ ಜೋರಾಗಿದೆ. ಈಗಾಗಲೇ ಹಲವರು
ಸಲಗ’ ಭವಿಷ್ಯ ನುಡಿದ್ದಾರೆ. ಲವ್-ಆಕ್ಷನ್-ರೌಡಿಸಂ-ಹಾಸ್ಯ ಹೀಗೆ ಒಂದೊಳ್ಳೆ ಮಾಸ್ ಎಂಟರ್‌ಟೈನರ್ ಒಂಟಿಸಲಗ ಪ್ರೇಕ್ಷಕರಿಗೆ ಹಬ್ಬದೂಟ ಬಡಿಸೋದಕ್ಕೆ ಒಂಟಿಕಾಲಿನಲ್ಲಿಯೇ ನಿಂತಿದೆ. ಅದ್ದೂರಿಯಾಗಿಯೇ ತೆರೆಮೇಲೆ ತರೋದಕ್ಕೆ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸಕಲ ತಯ್ಯಾರಿ ಮಾಡಿಕೊಂಡಿದ್ದಾರೆ. ಅದರಂತೇ, ನಿರ್ಮಾಪಕ ಸೂರಪ್ಪ ಬಾಬು ಕೂಡ ಕೋಟಿಗೊಬ್ಬ-೩' ಚಿತ್ರವನ್ನು ಗ್ರ್ಯಾಂಡ್ ಆಗಿ ಬಿಡುಗಡೆ ಮಾಡೋದಕ್ಕೆ ಮುಂದಾಗಿದ್ದಾರೆ. ಇದೇ ಅಕ್ಟೋಬರ್ ೧೪ರಂದು
ಸಲಗ’ ಹಾಗೂ ಕೋಟಿಗೊಬ್ಬ-೩ ಚಿತ್ರದ ದರ್ಶನವಾಗಲಿದೆ. ಅಷ್ಟಕ್ಕೂ, ಎರಡು ಸಿನಿಮಾಗಳು ಒಟ್ಟಿಗೆ ಲಗ್ಗೆ ಇಡುವುದಕ್ಕೆ ಕಾರಣ ಈ ಎರಡು ಚಿತ್ರಗಳ ನಿರ್ಮಾಪಕರ ಅಭಿಪ್ರಾಯವೇ ಹೊರೆತು ಇದರಲ್ಲಿ ಸುದೀಪ್ ಹಾಗೂ ವಿಜಯ್ ಅವರ ಪಾತ್ರವೇನಿಲ್ಲ.
ಅನ್ನದಾತರ ನಿರ್ಣಯ ಕೈಗೊಂಡ ಮೇಲೆ ಸ್ಟಾರ್‌ಗಳು ಹೂಃ ಎನ್ನಬೇಕಾಗುತ್ತದೆ. ಅದರಂತೇ, ಸುದೀಪ್ ಹಾಗೂ ವಿಜಯ್ ಅವರವರ ಸಿನಿಮಾ ನಿರ್ಮಾಪಕರುಗಳ ಚಿತ್ರ ಬಿಡುಗಡೆಯ ದಿನಾಂಕಕ್ಕೆ ತಲೆಬಾಗಿದ್ದಾರೆ. ಹೀಗಾಗಿ, ಇವರಿಬ್ಬರ ನಡುವೆ ಸ್ಟಾರ್‌ವಾರ್ ಪ್ರಸಂಗ ಬರುವುದಿಲ್ಲ ಆದರೆ ಗಾಂಧಿನಗರದ ಮಂದಿ ಮಾತ್ರ ಇದನ್ನು ಸ್ಟಾರ್‌ವಾರ್ ಅಂತಲೇ ಕರೆಯುತ್ತಿದ್ದಾರೆ. ಸ್ಟಾರ್‌ವಾರ್ ನಡೆಯಲಿದೆ ಅಂತ ಭವಿಷ್ಯ ನುಡಿಯುತ್ತಿದ್ದಾರೆ. ಅಷ್ಟಕ್ಕೂ, ಆಯುಧ ಪೂಜೆಯ ದಿನದಂದು ಅದೇನ್ ಆಗಲಿದೆ ಅನ್ನೋದನ್ನು ಕಾದುನೋಡಬೇಕು ಅಷ್ಟೇ. ಆದರೆ, ಒಂದು ನೆನಪಿರಲಿ ಹೆಬ್ಬುಲಿ ಹಾಗೂ ಕರಿಚಿರತೆಯ ಮಧ್ಯೆ ಒಂದೊಳ್ಳೆ ಬಾಂಡೇಜ್ ಇದೆ. ಹದಿನೆಂಟು ವರ್ಷದ ಸ್ನೇಹವಿದೆ. ಹೀಗಾಗಿಯೇ, ಸುದೀಪ್ ವಿಜಯ್ ಚಿತ್ರಕ್ಕೆ ಶುಭಕೋರಿರುವುದು. ವಿಜಯ್ ಕೂಡ ಇದು ಸಹೋದರರ ಸವಾಲ್ ಅಲ್ಲ ಇದು ಸಹೋದರರ ಪ್ರೀತಿ ಎಂದು ಬಣ್ಣಿಸಿರುವುದು.
- ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ