Categories
ಸಿನಿ ಸುದ್ದಿ

ಸೂಪರ್‌ ಹೀರೋ” ಆನʼ ಚಿತ್ರದ ಟೀಸರ್‌ ಗೆ ಭರ್ಜರಿ ರೆಸ್ಪಾನ್ಸ್‌ – ರಿಲೀಸ್‌ ಗೂ ಮುನ್ನವೇ ಸೆಕೆಂಡ್‌ ಪಾರ್ಟ್‌ ಗೆ ರೆಡಿಯಾದ ಚಿತ್ರ ತಂಡ

ಏನೇ…ಅನ್ಕೊಳ್ಳಿ ಸಿನಿಮಾ ಅಂದ್ರೆ ಬರೀ ಮನರಂಜನೆ ಮಾತ್ರ ಅಲ್ಲ. ಹಾಗೆಯೇ ಬರೀ ಬಿಸಿನೆಸ್‌ ಕೂಡ ಅಲ್ಲ. ಹೊಸಬರಿಗೆ ಅದೊಂದು ಪ್ರಯೋಗ. ಅಂದ್ರೆ ಎಕ್ಸ್‌ಪೆರಿಮೆಂಟಲ್‌ ಫೀಲ್ಡ್.‌ ಹಾಗೊಂದು ಕಾರಣಕ್ಕಾಗಿಯೇ ಈಗ ಚಂದನವನದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಚಿತ್ರ “ಆನ”. ಅರೆ, ಆನ ಅಂದ್ರೇನು ? ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ಇಂತಹದೊಂದು ಪ್ರಶ್ನೆ ನಿಮ್ಮಲ್ಲೂ ಹುಟ್ಟುತ್ತೆ. ಯಾಕಂದ್ರೆ, ಕನ್ನಡದಲ್ಲಿ ಅಂತಹದೊಂದು ಪದ ಅಷ್ಟಾಗಿ ನೀವು ಕೇಳಿರಲಿಕ್ಕಿಲ್ಲ. ಆದ್ರೆ, ಚಿತ್ರದ ನಿರ್ದೇಶಕರ ಪ್ರಕಾರ ʼಆನʼ ಅಂದ್ರೆ ಅನರ್ಘ್ಯ ಅಂತ. ಕಥೆಗೆ ಪೂರಕವಾಗಿ ಅದನ್ನೇ ಚಿತ್ರದ ಶೀರ್ಷಿಕೆಯಾಗಿಸಿಕೊಂಡಿದ್ದಾರಂತೆ. ಅದರಾಚೆ ʼಆನʼ ಅನ್ನೋದು ಇಲ್ಲಿ ಚಿತ್ರದ ನಾಯಕಿ ಹೆಸರು ಕೂಡ.

ನಿಜಕ್ಕೂ ಇದೊಂದು ಎಕ್ಸ್‌ ಪೆರಿಮೆಂಟಲ್‌ ಚಿತ್ರ. ನಾಲ್ಕು ಸಾಂಗು, ನಾಲ್ಕು ಫೈಟು, ಜತೆಗೊಂದು ಐಟಂ ಸಾಂಗ್‌ ಇಡುವಂತಹ ಸಿದ್ಧ ಸೂತ್ರ ಇಟ್ಕೊಂಡು ಮಾಡಿದ ಚಿತ್ರ ಇದಲ್ಲ. ಅಂದ್ರೆ, ಇದು ಸೂಪರ್ ಹೀರೋ ಕಾನ್ಸೆಫ್ಟ್‌ ಕಥಾ ಹಂದರದ ಚಿತ್ರ. ಇಂಡಿಯಾದಲ್ಲೇ ಫಸ್ಟ್‌ ಟೈಮ್‌ ಒಬ್ಬ ನಾಯಕಿಯನ್ನೇ ಇಲ್ಲಿ ಸೂಪರ್‌ ಹೀರೋ ಶೈಲಿಯಲ್ಲಿ ತೋರಿಸಲು ಹೊರಟಿರುವ ಸಿನಿಮಾ ಇದು. ಇದರ ನಿರ್ದೇಶಕ ಮನೋಜ್ ಪಿ. ನಡುಲಮನೆ. ಸದ್ಯಕ್ಕೀಗ ಈ ಚಿತ್ರದ ಟೀಸರ್‌ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆನಂದ್‌ ಆಡಿಯೋ ಯುಟ್ಯೂಬ್‌ ಚಾನೆಲ್‌ ನಲ್ಲಿ ಟೀಸರ್‌ ಆಧಿಕೃತವಾಗಿ ಲಾಂಚ್‌ ಆಗಿದೆ. ಹೆಚ್ಚು ಕಡಿಮೆ ನಾಲ್ಕು ದಿನಗಳಿಗೆ ಅದನ್ನು ಎರಡು ಲಕ್ಷ ಜನ ವೀಕ್ಷಿಸಿದ್ದಾರೆ. ಹೊಸಬರಿಗೆ ಈ ಮಟ್ಟದ ಪ್ರತಿಕ್ರಿಯೆ ಸಿಕ್ಕಿದ್ದು ಸಾಕಷ್ಟು ಖುಷಿ ಕೊಟ್ಟಿದೆ. ಮಿಲ್ಕಿ ಬ್ಯೂಟಿ ಅದಿತಿ ಪ್ರಭುದೇವ ಇದರ ನಾಯಕಿ. ಅವರೇ ಈ ಚಿತ್ರದ ಹೀರೋ-ಕಮ್‌ ಹೀರೋಯಿನ್.‌ ಇದೇ ಮೊದಲು ಇಂತಹದೊಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಫಸ್ಟ್‌ ಟೈಮ್‌ ಸ್ಕ್ರೀನ್‌ ಮೇಲೆ ಹಾರರ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕವರು ಥ್ರಿಲ್‌ ಆಗಿದ್ದಾರೆ. ಟೀಸರ್‌ ನೋಡಿದವರಿಗೆ ಅವರ ಹಾರರ್‌ ಲುಕ್‌ ಮೈ ನಡುಗಿಸುತ್ತೆ.

ಹಾರರ್‌ ಅಂದ್ಮೇಲೆ ಒಂದ್ಕಡೆ ಕತ್ತಲು ಅಂತಲೂ ಹೌದು. ಹಾಗಾಗಿಯೇ ಚಿತ್ರೀಕರಣದ ಬಹುತೇಕ ಭಾಗ ರಾತ್ರಿ ಹೊತ್ತಲೇ ನಡೆದಿದೆಯಂತೆ. ಅದೊಂದು ವಿಶೇಷ ಅನುಭವ ಅಂತ ಅದಿತಿ ಪ್ರಭುದೇವ್‌ ಹೇಳುತ್ತಾರೆ. ಶೂಟಿಂಗ್‌ ಕಂಪ್ಲೀಟ್ ಆಗಿ, ಚಿತ್ರ ಈಗ ರಿಲೀಸ್‌ಗೆ ರೆಡಿಯಿದೆ. ಏಪ್ರಿಲ್‌ ಕೊನೆಯ ವಾರ ಅಥವಾ ಮೇ ತಿಂಗಳಲ್ಲಿ ತೆರೆಗೆ ತರಲು ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ.‌ ನಿರ್ದೇಶಕ ಮನೋಜ್‌ ಪಿ. ನಡುಲಮನೆ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆಕ್ಷನ್‌ ಕಟ್‌ ಹೇಳಿದ್ದಾರೆ. ಯುಕೆ ಪ್ರೊಡಕ್ಷನ್‌ ಮೂಲಕ ಪೂಜಾ ವಸಂತ್‌ ಕುಮಾರ್‌ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ. ಉದಯ್‌ ಲೀಲಾ ಛಾಯಾಗ್ರಹಣ, ರಿತ್ವಿಕ್‌ ಮುರುಳೀಧರ್‌ ಸಂಗೀತವಿದೆ.

ಚಿತ್ರದ ತಾರಾಗಣವೇನು ಕಮ್ಮಿ ಇಲ್ಲ. ಸುನೀಲ್‌ ಪುರಾಣಿಕ್,‌ ಚೇತನ್‌ ಗಂಧರ್ವ, ರನ್ವಿತ್‌ ಶಿವಕುಮಾರ್‌, ವಿಕಾಶ್‌ ಉತ್ತಯ್ಯ, ವರುಣ್‌ ಅಮರಾವತಿ ಮತ್ತಿತರರು ಇದ್ದಾರೆ. ಇದೀಗ ಚಿತ್ರದ ಟೀಸರ್‌ ಗೆ ಸಿಕ್ಕ ರೆಸ್ಪಾನ್ಸ್‌ ಗೆ ಚಿತ್ರ ತಂಡ ಸಿಕ್ಕಾ ಪಟ್ಟೆ ಖುಷಿ ಆಗಿದೆ. ಚಿತ್ರದ ಸೆಕೆಂಡ್‌ ಪಾರ್ಟ್‌ ನಿರ್ಮಾಣಕ್ಕೂ ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ತೆರೆಮರೆಯಲ್ಲೇ ಅದರ ಕೆಲಸ ನಡೆದಿವೆ ಅಂತ ಹೇಳ್ತಾರೆ ನಿರ್ದೇಶಕರು. ಚಿತ್ರ ಗೆದ್ದರೆ ಭಾಗ 2 ಖಂಡಿತಾ ಬರುತ್ತೆ, ಅದರ ಸಿದ್ಧತೆ ಕೂಡ ನಡೆದಿದೆ ಅಂತಾರೆ ನಿರ್ದೇಶಕ ಮನೋಜ್.‌

Categories
ಸಿನಿ ಸುದ್ದಿ

ವಿಷ್ಣು ಪ್ರಿಯಗೆ ಸಾಥ್‌ ಕೊಟ್ಟ ಪವರ್‌ ಸ್ಟಾರ್‌ – ಜೂನ್‌ ಹೊತ್ತಿಗೆ ಚಿತ್ರಮಂದಿರದಲ್ಲಿ ಶ್ರೇಯಸ್‌ ಎರಡನೇ ಸಿನಿಮಾ

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್‌ ಹಾಗೂ ನ್ಯಾಷನಲ್‌ ಕ್ರಷ್‌ ಪ್ರಿಯಾ ವಾರಿಯರ್‌ ಅಭಿನಯದ ʼವಿಷ್ಣು ಪ್ರಿಯʼ ಚಿತ್ರ ರಿಲೀಸ್ ರೆಡಿ ಆಗುತ್ತಿದೆ. ಸದ್ಯಕ್ಕೇನು ಅದರ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿಲ್ಲ. ಆದರೆ, ಈಗ ಟೀಸರ್‌ ಲಾಂಚ್‌ ಮೂಲಕ ಸೌಂಡ್‌ ಮಾಡಲು ರೆಡಿಯಾಗಿದೆ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಟೀಸರ್‌ ಲಾಂಚ್‌ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದ್ದು ವಿಶೇಷ. ಬೆಂಗಳೂರಿನ ಮಲ್ಲೇಶ್ವರಂ ರೇಣುಕಾಂಬ ಡಿಜಿಟಲ್‌ ಸ್ಟುಡಿಯೋದಲ್ಕಿ ಮೊನ್ನೆಯಷ್ಟೇ”ವಿಷ್ಣು ಪ್ರಿಯʼ ಚಿತ್ರದ ಟೀಸರ್‌ ಲಾಂಚ್‌ ಕಾರ್ಯಕ್ರಮ ನಡೆಯಿತು. ಪುನೀತ್‌ ರಾಜ್‌ ಕುಮಾರ್‌ ಟೀಸರ್‌ ಲಾಂಚ್‌ ಮಾಡಿ ಶುಭ ಹಾರೈಸಿದ್ರು. ಚಿತ್ರಕ್ಕೆ ಒಳ್ಳೆಯ ಟೈಟಲ್‌ ಇಡಲಾಗಿದೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಬಂದಿರುವ ನಂಬಿಕೆ ಇದೆ ಅಂತ ಅಪ್ಪು ವಿಶ್ವಾಸ ವ್ಯಕ್ತಪಡಿಸಿದರು.

ಕಾಲೇಜು ಜೀವನದಲ್ಲಿ ಪ್ರೀತಿ ಮಾಡೋದು ಸಹಜ‌. ಕೆಲವೊಮ್ಮೆ ಪ್ರೀತಿ ಸಿಗದೆ ಹುಡುಗರು ಹುಚ್ಚರಾಗುವುದು ಅಷ್ಟೇ ಕಾಮನ್.‌ ಅಂತಹದೊಂದು ಕಥೆಯನ್ನು ಹೊತ್ತ ಸಿನಿಮಾ ವಿಷ್ಣು ಪ್ರಿಯ. ಆ ಕುರಿತು ನಿರ್ಮಾಪಕ ಮಂಜು ಮಾತನಾಡಿದರು. ” ಇದು ನೈಜಘಟನೆಯಾಧಾರಿತ ಸಿನಿಮಾ. ಬೆಳಗಾವಿಯಲ್ಲಿ 1990ಯಲ್ಲಿನಡೆದಿರುವ ಪಕ್ಕಾ ಲವ್ ಸ್ಟೋರಿಯಾಗಿದೆ. ಕಥೆ ಮನಸ್ಸಿಗೆ ನಾಟುತ್ತೆ. ‌ಮುಂದಿನ ತಿಂಗಳು ಆಡಿಯೋ ಬಿಡುಗಡೆ ನಡೆಯಲಿದೆ ಎಂದರು.” ಪಡ್ಡೆ ಹುಲಿʼ ಚಿತ್ರದ ನಂತರ ಶ್ರೇಯಸ್‌ ನಾಯಕ ನಟರಾಗಿ ಅಭಿನಯಿಸಿದ ಚಿತ್ರದ ಇದು. ಅವರಿಲ್ಲಿ ಕಾಲೇಜು ಹುಡುಗ. ಟೀಸರ್‌ ಲಾಂಚ್‌ ಗೆ ಪುನೀತ್‌ ರಾಜ್‌ ಕುಮಾರ್‌ ಅತಿಥಿಯಾಗಿ ಬಂದಿದ್ದಕ್ಕೆ ಧನ್ಯವಾದ ಹೇಳಿದರು. ನಿರ್ದೇಶಕ ವಿ.ಕೆ ಪ್ರಕಾಶ್ ಅವರಿಗೂ ಇದು ಎರಡನೇ ಸಿನಿಮಾ. ಚಿತ್ರದ ಮೇಲೆ ಅವರಿಗೂ ಸಾಕಷ್ಟು ನಿರೀಕ್ಷ ಇದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಟೀಸರ್‌ ಲಾಂಚ್‌ ಗೆ ಅತಿಥಿಯಾಗಿ ಬಂದಿದ್ದರು.

Categories
ಸಿನಿ ಸುದ್ದಿ

ದಾರಿ ಯಾವುದಯ್ಯಾ ವೈಕುಂಠಕೆ ಸಿನಿಮಾ ಕಥೆಗೆ ಸಿಕ್ತು ರಾಜಸ್ತಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ ಪ್ರಶಸ್ತಿ

ರಾಜಸ್ತಾನದ ಜೋಧ್‌ಪುರದಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡದ “ದಾರಿ ಯಾವುದಯ್ಯಾ ವೈಕುಂಠಕೆ” ಚಿತ್ರಕ್ಕೆ ಉತ್ತಮ ಕಥೆ ಪ್ರಶಸ್ತಿ ಲಭಿಸಿದೆ. ಚಿತ್ರ ವೀಕ್ಷಿಸಿದ ಜನರಿಂದಲೂ ಒಳ್ಳೆಯ ಮೆಚ್ಚುಗೆಗೆ ಪಾತ್ರವಾಗಿದೆ. ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಈಗಾಗಲೇ ಈ ಚಿತ್ರ ಹಲವು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಪ್ರದರ್ಶನ ಕಂಡು ಸುಮಾರು 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಆ [ಪೈಕಿ ನಾಲ್ಕು “ಬೆಸ್ಟ್ ಡೈರೆಕ್ಟರ್” ಅವಾರ್ಡ್ ಬಂದಿದೆ. ಬಿಡುಗಡೆಗೂ ಮುನ್ನ ಎಲ್ಲಾ ಕಡೆ ಪ್ರಶಂಸೆ ದೊರಕಿರುವುದಕ್ಕೆ ಚಿತ್ರತಂಡ ಸಂಭ್ರಮದಲ್ಲಿದೆ. ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ ಚಿತ್ರದಲ್ಲಿ ವರ್ಧನ್ ನಾಯಕರಾಗಿ ನಟಿಸಿದ್ದಾರೆ.

ಅವರೊಂದಿಗೆ “ತಿಥಿ” ಖ್ಯಾತಿಯ ಪೂಜಾ, ಅನೂಷಾ, ಬಲರಾಜವಾಡಿ, ಶೀಬಾ, ಪ್ರಶಾಂತ್ ರಾವ್ ವರ್ಕು, ಅರುಣ್‌ ಮೂರ್ತಿ, ಸಂಗೀತ, ಗೌಡಿ, ಸಿದ್ಧಾರ್ಥ್, ಪ್ರಣಯ್ ಮೂರ್ತಿ, ಸ್ಪಂದನ ಪ್ರಸಾದ್, ದಯಾನಂದ್. ಸುಚಿತ್, ಮೈಸೂರು ಬಸವರಾಜ ಇತರರು ನಟಿಸಿದ್ದಾರೆ. ಲೋಕಿ ಸಂಗೀತವಿದೆ. ನಿತಿನ್ ಛಾಯಾಗ್ರಹಣ ಮಾಡಿದರೆ, ಮುತ್ತುರಾಜ್ ಸಂಕಲನವಿದೆ.

Categories
ಸಿನಿ ಸುದ್ದಿ

ಸಸ್ಪೆನ್ಸ್‌ ಜೊತೆ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ ಮೋಕ್ಷ ಚಿತ್ರದ ಟ್ರೇಲರ್‌- ಚಿತ್ರ ತಂಡಕ್ಕೆ ಸಾಥ್‌ ಕೊಟ್ಟರು ಹಲವು ಸ್ಟಾರ್ಸ್‌!

ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಮೋಕ್ಷ ಚಿತ್ರದ ಟ್ರೇಲರ್‌ ಲಾಂಚ್‌ ಆಗಿದೆ. ಡಿ ಬೀಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಇದು ಹೊರ ಬಂದಿದೆ. ಅದು ಲಾಂಚ್‌ ಆಗಿ ಇಲ್ಲಿಗೆ ಮೂರು ದಿನಗಳು ಕಳೆದಿವೆ. ಸೋಷಲ್‌ ಮೀಡಿಯಾದಲ್ಲಿ ಟ್ರೇಲರ್‌ ಸಖತ್‌ ಸದ್ದು ಮಾಡುತ್ತಿದೆ. ಸಸ್ಪೆನ್ಸ್‌, ಥ್ರಿಲ್ಲರ್‌ ಸ್ಟೋರಿ ಅಂದ್ಮೇಲೆ ಅಲ್ಲೇನಿರುತ್ತೆ ಅಂತ ವಿವರಿಸಿ ಹೇಳಬೇಕಿಲ್ಲ, ಮರ್ಡರ್‌ ಗೇಮ್‌ ಇರುತ್ತೆ. ಯಾರೋ, ಇನ್ನಾರನ್ನೋ ಮುಗಿಸುವ ಸಂಚುಗಳಿರುತ್ತವೆ. ಅವೆಲ್ಲ ಗೊತ್ತಾಗದೆ ಹಲವು ಟರ್ನ್‌ ಅಂಡ್ ಟ್ವಿಸ್ಟ್‌ ಗಳು ಮೂಲಕ ಸಾಗುತ್ತವೆ. ಹಾಗೊಂದು ಕಥೆ ಈ ಚಿತ್ರದ್ದು ಕೂಡ. ಆ ಬಗ್ಗೆ ಒಂದಷ್ಟು ಕುತೂಹಲ ಹುಟ್ಟಿಸುತ್ತೆ ಈ ಟ್ರೇಲರ್.

‌ಚಿತ್ರ ತಂಡ ಮೊನ್ನೆಯಷ್ಟೇ ಅಧಿಕೃತವಾಗಿಯೇ ಟ್ರೇಲರ್‌ ಲಾಂಚ್‌ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅಲ್ಲಿ ಚಿತ್ರ ತಂಡವು ಟ್ರೇಲರ್‌ ವಿಶೇಷತೆ ಜತೆಗೆ ಸಿನಿಮಾದ ಕುತೂಹಲದ ಅಂಶಗಳ ಕುರಿತು ಮಾತನಾಡಿತು. “ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ನಮ್ಮ ಚಿತ್ರ ತಾಂತ್ರಿಕವಾಗಿ ಅದ್ದೂರಿತನದಿಂದ ಮೂಡಿಬಂದಿದೆ. ಅದಕ್ಕೆ ಕಾರಣ ನಮ್ಮ ಚಿತ್ರದ ತಂತ್ರಜ್ಞರು. ಟ್ರೇಲರ್‌ಗೆ ಚಿತ್ರರಂಗದ ಗಣ್ಯರು ಹಾಗೂ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡದ ಸಿನಿಮಾ ಪ್ರೇಕ್ಷಕರು ನಮ್ಮನ್ನು ಕೈ ಹಿಡಿಯಬೇಕಿದೆ ಅಂತ ಚಿತ್ರದ ನಾಯಕ ಕಮ್‌ ನಿರ್ಮಾಪಕ ಸಮರ್ಥ್ ನಾಯಕ್ ಮನವಿ ಮಾಡಿಕೊಂಡರು. ಬಾಲಿವುಡ್‌ ನಟ ಮೋಹನ್‌ ಧನರಾಜ್‌ ಈ ಚಿತ್ರದ ಪ್ರಮುಖ ಆಕರ್ಷಣೆ. ಕನ್ನಡದಲ್ಲಿ ಅವರಿಗಿದು ಚೊಚ್ಚಲ ಚಿತ್ರ. ಅವರ ಪ್ರಕಾರ ಸಸ್ಪೆನ್ಸ್‌ ಕಥೆಗಳ ತಿರುಳು ಗೊತ್ತಾಗುವುದು ಪ್ರೇಕ್ಷಕ ಚಿತ್ರ ನೋಡಿದ ಮೇಲೆಯೇ ಅಂತೆ. ಹಾಗಂತ ಅವರು ಅಲ್ಲಿ ಹೇಳಿಕೊಂಡರು.

ನಟ ತಾರಕ್‌ ಪೊನ್ನಪ್ಪ ಈ ಚಿತ್ರದ ಇನ್ನೊಂದು ಪ್ರಮುಖ ಪಾತ್ರಧಾರಿ. ಅಂದ್ರೆ ಅವರಿಲ್ಲಿ ಪೊಲೀಸ್‌ ಪಾತ್ರಧಾರಿ. ಅವರ ಪಾತ್ರವೇ ಇಲ್ಲಿ ಇನ್ನೊಂದು ಹೈಲೈಟ್‌ ಅಂತೆ. ಮಂಗಳೂರು ಚೆಲುವೆ ಆರಾಧ್ಯ ಲಕ್ಷ್ಮಣ್ ಈ ಚಿತ್ರದ ನಾಯಕಿ. ಜಯಂತ್ ಕಾಯ್ಕಿಣಿ, ಕುಮಾರ್ ದತ್ ಬರೆದ ಸಾಹಿತ್ಯಕ್ಕೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಕಿಶನ್ ಮೋಹನ್ ಅವರದು.

ಗುರುಪ್ರಶಾಂತ್ ರೈ, ಜೋಮ್ ಜೋಸೆಫ್, ಕಿರಣ್ ಹಂಪಾಪುರ ಸೇರಿದಂತೆ ಮೂವರು ಛಾಯಾಗ್ರಾಹಕರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದು, ವರುಣ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ನಟ ಕಿಚ್ಚ ಸುದೀಪ್‌, ತಮ್ಮ ಟ್ವಿಟರ್‌ ಖಾತೆಯಲ್ಲಿ ಮೋಕ್ಷ ಚಿತ್ರದ ಟೀಸರ್‌ ಲಿಂಕ್‌ ಷೇರ್ ಮಾಡಿ, ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ಹಾಗೆಯೇ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌, ನಿರ್ದೇಶಕರಾದ ಯೋಗರಾಜ್ ಭಟ್, ಸಿಂಪಲ್ ಸುನಿ ಹಾಗೂ ನಟ ರಿಷಿ ಸೇರಿದಂತೆ ಹಲವರಿಗೆ ಟ್ರೇಲರ್‌ ಹಿಡಿಸಿದೆ. ಎಲ್ಲರೂ ಮೆಚ್ಚುಗೆ ಹೇಳಿದ್ದಾರೆ. ದಿನೇ ದಿನೆ ಟ್ರೇಲರ್‌ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅದೇ ಖುಷಿಯಲ್ಲಿ ಚಿತ್ರ ತಂಡವು ಏಪ್ರಿಲ್‌ ಕ್ಕೆ 16ಈ ಚಿತ್ರವನ್ನು ರಿಲೀಸ್‌ ಮಾಡಲು ಸಿದ್ಧತೆ ನಡೆಸಿದೆ.

Categories
ಸಿನಿ ಸುದ್ದಿ

ನಟಿಯಾಗಿ ನೀನು ನ್ಯಾಷನಲ್ ಅವಾರ್ಡ್ ತಗೋಬೇಕಮ್ಮ- ಹೀಗಂತ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಹಾರೈಸಿದ್ದುಯಾರಿಗೆ ಗೊತ್ತಾ?

ನಟ ರಾಮ್ ಕುಮಾರ್ ಪುತ್ರ ಧೀರೇನ್ ರಾಮ್ ಕುಮಾರ್ ಹೀರೋ ಆಗಿ ಎಂಟ್ರಿಯಾಗುತ್ತಿದ್ದಾರೆ. ಅದೇ ಕಾರಣಕ್ಕೀಗ ಜಯಣ್ಣ ಕಂಬೈನ್ಸ್ ನಿರ್ಮಾಣದ‌ ಅದ್ದೂರಿ ವೆಚ್ವದ ‘ಶಿವ 143 ‘ ಚಿತ್ರ ಚಂದನವನದಲ್ಲಿ ತೀವ್ರ ಕುತೂಹಲ ಹುಟ್ಟಿಸಿರೋದು ನಿಮಗೂ ಗೊತ್ತು. ಹಾಗಂತ ರಾಮ್‌ ಕುಮಾರ್‌ ಪುತ್ರಿ ಧನ್ಯಾ ರಾಮ್‌ ಕುಮಾರ್‌ ಅವರೇನು ಕಮ್ಮಿ ಇಲ್ಲ. ಈಗಾಗಲೇ ಮಾಡೆಲಿಂಗ್‌ ನಲ್ಲಿ ಮಿಂಚಿದವರು. ಈಗ ಅವರು ಕೂಡ” ನಿನ್ನ ಸನಿಹಕೆʼ ಹೆಸರಿನ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿಯಾಗುತ್ತಿದ್ದಾರೆ.

ಈಗಾಗಲೇ ಆ ಚಿತ್ರದ ಚಿತ್ರೀಕರಣವು ಮುಗಿದಿದೆ. ಹಾಡುಗಳ ಮೂಲಕ ಈಗ ಸೋಷಲ್ ಮೀಡಿಯಾದಲ್ಲಿ ” ನಿನ್ನ ಸನಿಹಕೆʼ ಚಿತ್ರ ಸಖತ್ ಸದ್ದು ಮಾಡಿದೆ. ಈ ಚಿತ್ರದ ಮೂಲಕ ನಟಿಯಾಗಿ ಬೆಳ್ಳಿತೆರೆಗೆ ಗ್ರಾಂಡ್ ಎಂಟ್ರಿಯಾಗುತ್ತಿರುವ ಧನ್ಯಾ ರಾಮ್ ಕುಮಾರ್ ಮೇಲೆ ರಾಜ್‌ ಕುಟುಂಬ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ತಮ್ಮ ಕುಟುಂಬದ ಮತ್ತೊಂದು ಕುಡಿ ಇದೇ ಮೊದಲು ನಾಯಕಿಯಾಗಿ ಎಂಟ್ರಿ ಆಗುತ್ತಿರುವುದು ಅವರಿಗೂ ಖುಷಿ ಇದೆ. ಧನ್ಯಾ ರಾಮ್‌ ಕುಮಾರ್‌ ನಾಯಕಿಯಾಗಿ ನಟಿಸಿರುವ .’ನಿನ್ನ ಸನಿಹಕೆ ‘ಚಿತ್ರದ ಪ್ರಮೊಷನ್ ಕಾರ್ಯಕ್ರಮವೊಂದರಲ್ಲಿ ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಶುಭ ಹಾರೈಸಿದ ರೀತಿಯೇ ವಿಶೇಷ ವಾಗಿತ್ತು.

‘ಧನ್ಯಾ ನಮ್ಮನೆ ಕುಡಿ. ಮಗಳೆ, ನಿನ್ನ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ.‌ ನಿನ್ನಮ್ಮ ಪೂರ್ಣಿಮಾ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ನೀನು ಕೂಡ ನಟಿಯಾಗಿ ನ್ಯಾಷನಲ್ ಅವಾರ್ಡ್ ತಗೊಬೇಕಮ್ಮ. ಅವಾರ್ಡ್ ಬಂದೇ ಬರುತ್ತೆ ಅನ್ನೋ‌ ನಂಬಿಕೆ ನಂಗಿದೆ. ಒಳ್ಳೆಯದಾಗಲಿ. ನಿಮ್ಮ ಸಿನಿಮಾ ದೊಡ್ಡ ಸಕ್ಸಸ್ ಕಾಣಲಿ’ ಅಂತ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಶುಭ ಹಾರೈಸಿದರು. ಅವರಂತೆಯೇ ನಟ ಪುನೀತ್‌ ರಾಜ್‌ ಕುಮಾರ್‌ ಕೂಡ ಸೋಷಲ್‌ ಮೀಡಿಯಾದ ಲೈವ್‌ ನಲ್ಲಿ ಧನ್ಯಾ ರಾಮ್‌ ಕುಮಾರ್‌ ಅವರಿಗೆ ಶುಭ ಹಾರೈಸಿದರು.

ಕಲಾ ಕುಟುಂಬದಲ್ಲಿ ಹುಟ್ಟಿ ಬೆಳೆದ ಧನ್ಯ ರಾಮ್‌ ಕುಮಾರ್‌ ಅವರಿಗೆ ನಟಿಯಾಗಿ ಗುರುತಿಸಿಕೊಳ್ಳಲು ದೊಡ್ಡ ಅವಕಾಶವಿದೆ. ಅವರ ಸುತ್ತ ದೊಡ್ಡ ಕಲಾವಿದರ ಬಳಗವೇ ಇದೆ. ಹಾಗಂತ ಅದನ್ನೇ ನಂಬಿಕೊಂಡು ಧನ್ಯಾ ರಾಮ್‌ ಕುಮಾರ್‌ ನಟಿಯಾಗಲು ಹೊರಟಿಲ್ಲ. ನಟನೆ ಮೇಲೆ ದೊಡ್ಡ ಆಸಕ್ತಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ನಟನೆಯ ಎಲ್ಲಾ ಪಟ್ಟುಗಳನ್ನು ಕಲಿತುಕೊಂಡಿದ್ದಾರೆ. ಆ ಮೂಲಕವೇ ನಟಿಯಾಗಿ ಸಿನಿಮಾ ಪ್ರಪಂಚಕ್ಕೆ ಕಾಲಿಡುತ್ತಿದ್ದಾರೆ. ಅವರ ಮಾವಂದಿರು ನಿರೀಕ್ಷೆ ಮಾಡಿದಂತೆ ಧನ್ಯಾ ರಾಮ್‌ ಕುಮಾರ್‌ ಪ್ರಶಸ್ತಿ ಅರಸಿ ಬರುವಂತೆ ನಟಿಯಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವೂ ಇಲ್ಲ.

Categories
ಸಿನಿ ಸುದ್ದಿ

ಮಗ‌ ಆಸ್ಪತ್ರೆ ಯಲ್ಲಿದ್ದಾನೆ, ನಾನು ಆರ್ಥಿಕ‌ ಸಂಕಷ್ಟದಲ್ಲಿದ್ದೇನೆ, ಯಾರಾದರೂ ನೆರವು ನೀಡಿ- ನಟ, ನಿರ್ದೇಶಕ ವಿ. ಆರ್. ಭಾಸ್ಕರ್ ಮನವಿ

ನಟ ಡಾ. ವಿಷ್ಣುವರ್ಧನ್ ಅವರಿಗೆ ಬಹುಕಾಲ ಸಹಾಯಕರಾಗಿದ್ದ ನಟ, ಸಾಹಿತಿ ಹಾಗೂ ನಿರ್ದೇಶಕ ವಿ.ಆರ್. ಭಾಸ್ಜರ್ ಸಂಕಷ್ಟದಲ್ಲಿದ್ದಾರೆ. ಅವರ ಪುತ್ರ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದಾರೆ. ಆತನ ಚಿಕಿತ್ಸಾ ವೆಚ್ಚಕ್ಕೆ ಬೇಕಾದಷ್ಟು ಹಣ ಇಲ್ಲದೆ ಭಾಸ್ಕರ್ ಅವರು ಆರ್ಥಿಕ ಸಂಕಷ್ಟ ಕ್ಕೆ ಸಿಲುಕಿದ್ದು, ದಾನಿಗಳಿಂದ ಆರ್ಥಿಕ‌ ನೆರವು ಬಯಸಿದ್ದಾರೆ. ಈ ಕುರಿತು ಒಂದು ವಿಡಿಯೋಮಾಡಿ, ಸೋಷಲ್ ಮೀಡಿಯಾದಲ್ಲಿ ಹಂಚಿ ಕೊಂಡಿ ದ್ದಾರೆ. ಚಿತ್ರರಂಗದ  ಯಾರಾದರೂ  ಕೈಲಾದ ಸಹಾಯ ಮಾಡಿ‌ಅಂತ ಅಸಹಾ ಯಕತೆ ಯೊಂದಿಗೆ ಕೈ ಮುಗಿದು ಕೇಳಿಕೊಂಡಿದ್ದಾರೆ.

” ಮಗ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು , ಆತನ ಚಿಕಿತ್ಸೆಗೆ ಹೆಚ್ಚಿನ ಹಣ ಬೇಕಿದೆ. ವಿಕ್ಟೋರಿಯಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕಿತ್ಸೆಗೆ ತುಂಬಾ ಹಣ ಬೇಕಿದೆ.ಅಷ್ಟು ಹಣ ನನ್ನ ಬಳಿ ಇಲ್ಲ. ವಿಷ್ಣುವರ್ಧನ್ ಅವರ ಜತೆಯಲ್ಲಿದ್ದಾಗ ಒಂದಷ್ಟು ಹಣಕಾಸು ಮಾಡಿಕೊಂಡಿದ್ದೆ. ಆದರೆ ಇನ್ನೊಬ್ಬ ಮಗ ತೀರಿಹೋದ. ಆತನ ಚಿಕಿತ್ಸೆಗಾಗಿಯೇ ಆ ಹಣ ಖರ್ಚಾಗಿ ಹೋಯಿತು. ಈಗ ಉಳಿದ ಇನ್ನೊಬ್ಬ ಮಗನೂ ಕೂಡ ಅನಾರೋಗ್ಯ ದಲ್ಲಿದ್ದಾನೆ. ಯಾರಾದರೂ ದಾನಿಗಳು ಒಂದಷ್ಟು ಸಹಾಯ ಮಾಡಿದರೆ, ಅದು ಆತನ ಚಿಕಿತ್ಸೆಗೆ ಅನುಕೂಲವಾಗಲಿದೆ ಅಂತ ಭಾಸ್ಕರ್ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. 

ದುರಂತ ಅಂದ್ರೆ ಕೆಲವರನ್ನು ಬದುಕು ವಿನಾಕರಣ ಹೈರಾಣಾಗಿಸುತ್ತೆ. ಅಂತಹದೇ ಪರಿಸ್ಥಿಯಲ್ಲೀಗ ಭಾಸ್ಕರ್ ಇದ್ದಾರೆ. ಭಾಸ್ಕರ್ ಚಿತ್ರರಂಗಕ್ಕೆ ತುಂಬಾನೆ ಪರಿಚಿತ ಇದ್ದವರು. ನಟರಾಗಿ, ನಿರ್ದೇಶಕ ರಾಗಿ ಯೂ ಚಿರಪರಿಚಿತ. ಅದಕ್ಕಿಂತ ಮುಖ್ಯವಾಗಿ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಬಹುಕಾಲ ಸಹಾಯಕರಾಗಿದ್ದರು. ಹಾಗೆಯೇ ಅವರ ಕಾರು ಚಾಲಕರಾಗಿಯೂ ಕೆಲಸ ಮಾಡಿದ್ದರು. ಆ ದಿನಗಳಲ್ಲಿ ಅನೇಕ ನಟರೊಂದಿಗೆ ತುಂಬಾ ಒಳ್ಳೆಯ ಗೆಳೆತನ ಹೊಂದಿದ್ದರು. ವಿಷ್ಣುವರ್ಧನ್ ಅವರ ನಿಧನದ ನಂತರ ಏಕಾಂಗಿಯಂತಿರುವ ಭಾಸ್ಕರ್,  ಮಕ್ಕಳ ಅನಾರೋಗ್ಯ ದ ಕಾರಣ ನೊಂದು ಹೋಗಿದ್ದಾರೆ. ತೀವ್ರ ಆರ್ಥಿಕ‌ ಸಂಕಷ್ಟಕ್ಕೆ ಸಿಲುಕಿ, ಮಗನನ್ನು ಉಳಿಸಿಕೊಳ್ಳಲು ಪರದಾಡಬೇಕಿದೆ.

ಬಹುಕಾಲ ನಟ ವಿಷ್ಣುವರ್ಧನ್ ಅವರನ್ನುದೇವರಂತೆ ನಂಬಿಕೊಂ ಡಿದ್ದ‌ಭಾಸ್ಕರ್ ಗೆ, ವಿಷ್ಣುವರ್ಧನ್ ‌ಇಲ್ಲದ ದಿನಗಳು ತೀವ್ರ ಕಷ್ಟಕರ ವಾಗಿವೆ ಅಂತ ಅವರ ಕುಟುಂಬ ಹೇಳಿಕೊಂಡಿದೆ.  ವಿಷ್ಣುವರ್ಧನ್ ಅಭಿಮಾನಿಗಳು ಯಾರಾದರೂ‌ಮುಂದೆ ಬಂದು ಭಾಸ್ಕರ್ ನೆರವಿಗೆ ನಿಂತರೆ, ಭಾಸ್ಕರ್ ಪುತ್ರ ನನ್ನು ಉಳಿಸಿಕೊಳ್ಳಲಿದ್ದಾರೆ.ಆ ಕೆಲಸ ವಿಷ್ಣುವರ್ಧನ್ ಅಭಿಮಾನಿಗಳು ಹಾಗೂ‌ ಅಭಿಮಾನಿ‌ಸಂಘಗಳಿಂದ ಆದೀತೆ ಅಂತ‌ಭಾಸ್ಕರ್ ಕುಟುಂಬ‌ಕೂಡ ಎದುರು‌ನೋಡುತ್ತಿದೆ. ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ 8495085291 ಕ್ಕೆ ಕರೆ ಮಾಡಬಹುದು.

..

Categories
ಸಿನಿ ಸುದ್ದಿ

ಬರ್ಕ್ಲಿ ಹಿಡಿದು ಬಂದ ನೋ ಸ್ಮೋಕಿಂಗ್‌ ಜಾಹೀರಾತಿನ ಹುಡುಗಿ- ಇದು ಸುಮನ್‌ ಕ್ರಾಂತಿ

ಸುಮನ್‌ ಕ್ರಾಂತಿ ನಿರ್ದೇಶನದ ʼಕಾಜಲ್‌ʼ ಚಿತ್ರ ಈಗ ʼಬರ್ಕ್ಲಿʼ ಎನ್ನುವ ಹೊಸ ಟೈಟಲ್‌ ಹೊತ್ತಿದೆ. ಈ ಹಿಂದೆ ಈ ಚಿತ್ರʼ ಕಾಜಲ್‌ ʼಹೆಸರಲ್ಲೇ ಸೆಟ್ಟೇರಿತ್ತು. ಆನೇಕಲ್‌ ಬಾಲರಾಜ್‌ ಇದಕ್ಕೆ ಬಂಡವಾಳ ಹೂಡಿದ್ದರು. ಅವರ ಪುತ್ರ ಸಂತೋಷ್‌ ಬಾಲರಾಜ್‌ ನಾಯಕರಾಗಿದ್ದರು. ಹೆಚ್ಚು ಕಡಿಮೆ ಎರಡು ವರ್ಷಳ ಹಿಂದೆಯೇ ಇದು ಸುದ್ದಿ ಮಾಡಿತ್ತು. ಕೊರೋನಾ ಕಾರಣಕ್ಕೆ ಇದುವರೆಗೂ ತೆರೆಮೆರೆಯಲ್ಲಿ ಉಳಿದಿದ್ದ ಈ ಚಿತ್ರ ಈಗ, ಬರ್ಕ್ಲಿ ಹೆಸರಲ್ಲಿ ಸದ್ದು ಮಾಡಲು ರೆಡಿಯಾಗಿದೆ.

ಸಿಮ್ರಾನ್ ನಟೇಕರ್ ಸ್ಯಾಂಡಲ್ ವುಡ್ ಅಂಗಳದಲ್ಲಿ ‌ಅದೃಷ್ಟ ಪರೀಕ್ಷೆಗಿಳಿಯಲು ಸಜ್ಜಾಗಿರುವ ಮುಂಬೈ ಚೆಲುವೆ. ಮಾರ್ಚ್ 31 ರಂದು ಈ ಬೊಂಬಾಟ್ ಚೆಲುವೆಯ ಫಸ್ಟ್ ಲುಕ್‌‌ ರಿವೀಲ್‌‌ ಆಗಲಿದೆ. ಅರೆ, ಇದ್ರಲೇನು ಸ್ಪೆಷಲ್‌ ಅಂತ ನಿಮಗೂ ಅನಿಸಬಹುದು. ಯಾಕಂದ್ರೆ, ಹೊರರಾಜ್ಯದಿಂದ ಚಂದನವನಕ್ಕೆ ಬಂದು, ಇಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡು ಬೆಳ್ಳಿತೆರೆಯನ್ನು ಬೆಳಗೋದು ಹೊಸದೇನಲ್ಲ. ಅದರಲ್ಲಿ ಇವ್ರು ಒಬ್ಬರು ಅನ್ನೋದು ನಿಜ, ಆದ್ರೆ ಈ ಸಿಮ್ರಾನ್‌ ಗೊಂದು ಹಿನ್ನೆಲೆಇದೆ. ಅದೇ ಕಾರಣಕ್ಕೆ ಸ್ಯಾಂಡಲ್‌ ವುಡ್‌ಗೆ ಎಂಟ್ರಿ ಆಗಿದ್ದಾರೆ. ಅದೇ ಇಲ್ಲಿನ ವಿಶೇಷ. ಹಾಗಾದ್ರೆ ಈ ಸಿಮ್ರಾನ್‌ ಹಿನ್ನೆಲೆ ಏನು?

ತುಂಬಾ ವರ್ಷಗಳ ಹಿಂದೆ ಕಿರುತೆರೆ ಹಾಗೂ ಚಿತ್ರ ಮಂದಿರಗಳಲ್ಲಿ ಧೂಮಪಾನ ಜಾಗೃತಿ ಕುರಿತು ಒಂದು ಜಾಹೀರಾತು ಬಿತ್ತರಗೊಳ್ಳುತ್ತಿತ್ತು. ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದನ್ನು ಮನವರಿಕೆ ಮಾಡಿ ಕೋಡೋ ಜಾಹೀರಾತು ಅದು. ಒಬ್ಬ ಮನೆ ಯಜಮಾನ ಮನೆಯಲ್ಲಿಯೇ ತನ್ನ ಹೆಂಡತಿ ಮತ್ತು ಪುಟ್ಟ ಮಗಳೆದುರು ಸೀಗರೇಟು ಸೇದುವ ಸನ್ನಿವೇಶ ಅದು. ಕೊನೆಗೆ ಮಗಳು ಅದನ್ನು ಪ್ರತಿರೋಧಿಸುವ ಸಣ್ಣ ಸೂಚನೆಯೊಂದಿಗೆ ಆತ ಅಲ್ಲಿಗೆ ಸೀಗರೇಟ್‌ ಸೇವನೆ ನಿಲ್ಲಿಸುತ್ತಾನೆ. ಇಲ್ಲಿ ಆ ಜಾಹೀರಾತಿನೊಳಗೆ ಪುಟಾಣಿ ಬಾಲಕಿಯಾಗಿ ಕಾಣಿಸಿಕೊಂಡ ಹುಡುಗಿಯೇ ಸಿಮ್ರಾನ್‌ ನಟೇಕರ್.‌ ಇವತ್ತವರು ಬೆಳೆದು ದೊಡ್ಡವರಾಗಿದ್ದಾರೆ. ಬೇಬಿಡಾಲ್ ಗ್ಲಾಮರ್ ಬೊಂಬೆಯಾಗಿ ಬೆಳೆದು‌ನಿಂತಿದ್ದಾರೆ. ಮರಾಠಿ ಕಿರುತೆರೆಯಲ್ಲಿ‌ ಮಿನುಗಿ, ಹಿಂದಿ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.ಇದೀಗ ಅಲ್ಲಿಂದ ಸ್ಯಾಂಡಲ್ ವುಡ ಗೂ ಲಗ್ಗೆ ಇಟ್ಟಿದ್ದಾರೆ.

ನಿಮಗೆ ನೆನಪಿರಬಹುದು, ಎರಡು ವರ್ಷಗಳ ಹಿಂದೆ ಅಂದ್ರೆ 2019 ರಲ್ಲೇ ಸಿಮ್ರಾನ್ ಕನ್ನಡಕ್ಕೆ ಬರ್ತಾರೆ ಅಂತ ಸುದ್ದಿಯಾಗಿತ್ತು. ನಿರ್ದೇಶಕ ಸುಮನ್ ಕ್ರಾಂತಿ, ತಾವು ನಿರ್ದೇಶಿಸುತ್ತಿರುವ ʼಕಾಜಲ್‌ʼ ಹೆಸರಿನ ಚಿತ್ರದೊಂದಿಗೆ ನೋ‌ ಸ್ಮೋಕಿಂಗ್ ಸುಂದರಿಯನ್ನು ಹುಡುಕಿ ಚಂದನವನಕ್ಕೆ ಪರಿಚಯಿಸುತ್ತಿದ್ದಾರೆ ಎನ್ನುವ ಸುದ್ದಿ ಸಿನಿಪ್ರಿಯರಿಗೆ ಕುತೂಹಲ ಮೂಡಿಸಿತ್ತು. ಅವರು ಹೇಳಿದಂತೆ ಸಿಮ್ರಾನ್‌ ಕನ್ನಡಕ್ಕೂ ಬಂದರು. ಶೂಟಿಂಗ್‌ ನಲ್ಲೂ ಭಾಗವಹಿಸಿದ್ದರು. ಮುಂದೇನು ಎನ್ನುವ ಹೊತ್ತಿಗೆ ಕೊರೋನಾ ಬಂತು, ಅಲ್ಲಿಂದ ಸೈಲೆಂಟ್‌ ಆಗಿದ್ದ ಚಿತ್ರ ತಂಡ ಈಗ ಹೊಸ ಹೆಸರಲ್ಲಿ ಸದ್ದು ಮಾಡಲು ಹೊರಟಿದೆ.

ʼಬರ್ಕ್ಲಿʼ ಎನ್ನುವುದು ಸುಮನ್‌ ನಿರ್ದೇಶನದ ಹೊಸ ಚಿತ್ರದ ಹೆಸರು. ಅಂದ್ರೆ ಕಾಜಲ್‌ ಹೆಸರಲ್ಲಿ ಸೆಟ್ಟೇರಿ, ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರಕ್ಕೀಗ ʼಬರ್ಕ್ಲಿʼ ಎನ್ನುವ ಹೊಸ ಟೈಟಲ್‌ ಹೊತ್ತಿದೆ. ಅದನ್ನು ಶೀಘ್ರವೇ ಚಿತ್ರ ತಂಡ ರಿವೀಲ್‌ ಮಾಡುವ ಆಲೋಚನೆಯಲ್ಲಿದೆ. ಸದ್ಯಕ್ಕೆ ಈ ಚಿತ್ರದೊಂದಿಗೆ ಕನ್ನಡಕ್ಕೆ ಎಂಟ್ರಿಯಾಗುತ್ತಿರುವ ನೋ ಸ್ಮೋಕಿಂಗ್‌ ಹುಡುಗಿ ಸಿಮ್ರಾನ್‌ ನಟೇಕರ್‌ ಅವರನ್ನು ಹೊಸ ರೀತಿಯಲ್ಲೇ ಪರಿಚಯಿಸಲು ಹೊರಟಿದ್ದಾರೆ. ಮಾರ್ಚ್‌ 31ಕ್ಕೆ ಸ್ಪೆಷಲ್‌ ರಿವೀಲ್‌ ಈವೆಂಟ್‌ ಹಮ್ಮಿಕೊಂಡಿದ್ದಾರೆ. ಆ ಕಥೆ ಇರಲಿ, ಕಾಜಲ್‌ ಎನ್ನುವ ಟೈಟಲ್‌ ಈಗ ʼಬರ್ಕ್ಲಿʼ ಅಂತಾಗಿದ್ದೇಕೆ?

ಬರ್ಕಿಲಿ ಎಂದಾಕ್ಷಣ ಸಿಗರೇಟ್ ಮತ್ತೆ ಕಣ್ಮುಂದೆ ಬರುತ್ತೆ. ಅಲ್ಲಾ. ನೋ‌ ಸ್ಮೋಕಿಂಗ್ ಎಂದ‌ ಬೇಬಿ‌ಡಾಲ್‌ ಇದೀಗʼ ಬರ್ಕ್ಲಿʼ ಹಿಡಿದು ಬರ್ತಿದ್ದಾಳೆ. ಅಂದರೆ ಸಿಗರೇಟ್ ಆರೋಗ್ಯಕ್ಕೆ ಹಾನಿಕಾರ ಅಂತ ಮತ್ತೆ ಮೆಸೇಜ್ ಕೊಡ್ತಾಳಾ ಅಥವಾ ಸಿಗರೇಟ್ ಹೊತ್ತಿಸಿಕೊಂಡು ಗುಲಾಬಿ ತುಟಿಯ ಮೇಲಿಟ್ಟುಕೊಂಡು ಪಡ್ಡೆಹೈಕ್ಳಿಗೆ ಕಿಕ್ಕೇರಿಸ್ತಾಳಾ ? ಈ ಕೌತುಕದ ಕೊಶ್ವನ್ಗೆ ನೀವೆಲ್ಲರೂ 31 ರವರೆಗೆ ಕಾಯಬೇಕು. ಆದ್ರೆ, ಕೊರೊನಾ ಹಾವಳಿಯ ನಡುವೆ ನಿರ್ದೇಶಕ ಸುಮನ್ ಕ್ರಾಂತಿ ಟೈಟಲ್ ನಲ್ಲಿ ಕ್ರಾಂತಿ ಮಾಡಿದ್ದಾರೆ. ʼಬರ್ಕ್ಲಿʼ ಅಂತ ಹೊಸ ಹೆಸರಿಟ್ಟಿದ್ದಾರೆ. ಟೈಟಲ್ ನಿಂದಲೇ ನಶೇಯೇರಿಸೋ ಈ‌ ಚಿತ್ರಕ್ಕೆ ಅನೇಕಲ್ ಬಾಲರಾಜ್ ಬಂಡವಾಳ‌ ಸುರಿಯುತ್ತಿದ್ದಾರೆ. ʼಗಣಪ‌ʼಸಿನಿಮಾ ಖ್ಯಾತಿಯ ಸಂತೋಷ್ ಚಿತ್ರದ ನಾಯಕರಾಗಿದ್ದು, ನೋ ಸ್ಮೋಕಿಂಗ್ ಸುಂದರಿ ಸಿಮ್ರಾನ್ ನಟೇಕರ್ ಸಂತೋಷ್ ಗೆ ಜೊತೆಯಾಗಲಿದ್ದಾರೆ. ಶೀಘ್ರದಲ್ಲೇ “ಬರ್ಕ್ಲಿʼ ನಿಮ್ನೆಲ್ಲರಿಗೂ‌ ಕಿಕ್ಕೇರಿಸಲಿದೆ.

Categories
ಸಿನಿ ಸುದ್ದಿ

ಕನ್ನಡಕ್ಕೆ ಬಂದ ಬಾಲಿವುಡ್‌ ಗಾಯಕ- ಇವ್ರು ಕಿಚ್ಚ ಸುದೀಪ್‌ ಬಿಗ್‌ಫ್ಯಾನ್‌ !


ಅಲಿ ಕ್ವಿಲಿ ಮಿರ್ಜಾ, ಸದ್ಯಕ್ಕೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಹೆಸರು. ಗಾಯಕ ಕಮ್‌ ನಟ. ಹಿಂದಿ ಬಿಗ್‌ ಬಾಸ್‌ ನ ಮಾಜಿ ಕಂಟೆಸ್ಟೆಂಟ್‌ ಕೂಡ. ಈಗ ನಟನೆಯ ಜತೆಗೆ ಸಿಂಗರ್‌ ಆಗಿಯೇ ಹೆಚ್ಚು ಸದ್ದು ಮಾಡುತ್ತಿರುವ ಅಲಿ ಕ್ವಿಲಿ ಕನ್ನಡಕ್ಕೂ ಬರುತ್ತಿದ್ದಾರೆ. ʼಲವ್‌ಗುರುʼ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ರಾಜ್‌ ನಿರ್ದೇಶನದ ಹೊಸ ಸಿನಿಮಾದಲ್ಲಿ ಅಲಿ ಕ್ವಿಲಿ ಮಿರ್ಜಾ ಅಭಿನಯಿಸುತ್ತಿದ್ದಾರೆಂಬ ಸುದ್ದಿಯಿದೆ. ಸದ್ಯ ಕ್ಕೆ ಈ ಸಿನಿಮಾದ ಕುರಿತು ಚಿತ್ರ ತಂಡದಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಬಾಲಿವುಡ್‌ ಗಾಯಕ ಅಲಿ ಕ್ವಿಲಿ ನಟರಾಗಿ ಕನ್ನಡಕ್ಕೆ ಬರುತ್ತಿರುವುದು ನೂರಕ್ಕೆ ನೂರಷ್ಟು ಸತ್ಯ. ಅದರಲ್ಲೂ ವಿಶೇಷ ಅಂದ್ರೆ ವಿಲನ್‌ ಅಗಿ ಅವರು ಕನ್ನಡಕ್ಕೆ ಎಂಟ್ರಿ ಆಗುತ್ತಿದ್ದಾರೆನ್ನುವುದು ಇನ್ನು ವಿಶೇಷ.

ಬಾಲಿವುಡ್‌ಮಟ್ಟಿಗೆ ಅಲಿ ಕ್ವಿಲಿ ಸಿಕ್ಕಾಪಟ್ಟೆ ಫೇಮಸ್.‌ ಗಾಯಕರಾಗಿ, ಜತೆಗೆ ನಟರಾಗಿಯೂ ಹೆಸರು ಮಾಡಿದವರು. ಅದಕ್ಕೂ ಮುನ್ನ ಹಿಂದಿಯ ಬಿಗ್‌ಬಾಸ್‌ನಲ್ಲೂ ಸಾಕಷ್ಟು ಹೆಸರು ಮಾಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅಲಿ ಸಿಂಗರ್‌ ಆಗಿಯೇ ಖ್ಯಾತಿ. ಮಿಕ್‌ಸಿಂಗ್‌ ಜೋಡಿಯಾಗಿ “ಇಸ್ಕಂʼ ವಿಡಿಯೋ ಆಲ್ಬಂ ಸಾಂಗ್‌ ಹೊರ ತಂದಿದ್ದಾರೆ. ಹಾಗೆಯೇ ʼಮಿರ್ಜಾಪುರ 2ʼ ವೆಬ್‌ ಸೀರಿಸ್‌ ನಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆಕ್ಟಿಂಗ್‌ ಹಾಗೂ ಸಿಂಗಿಂಗ್‌ ಎರಡರಲ್ಲೂ ಒಟ್ಟಿಗೆ ತೊಡಗಿಸಿಕೊಂಡಿರುವ ಅಲಿ ಕ್ವಿಲಿ, ಈಗ ಸೌತ್‌ ಇಂಡಸ್ಟ್ರಿ ಕಡೆ ಮುಖ ಮಾಡಿದ್ದಾರೆ. ಇದೇ ಉದ್ದೇಶದ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಅಲಿ ಕ್ವಿಲಿ ಮಿರ್ಜಾ, ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಸಿನಿ ಲಹರಿ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡರು.

ಹಲೋ ಬೆಂಗಳೂರು ಅಂತಲೇ ಮಾತು ಶುರು ಮಾಡಿದ ಅಲಿ, ಬೆಂಗಳೂರು ಅಂದ್ರೆ ನಂಗೆ ತುಂಬಾ. ಅನೇಕ ಸಲ ಇಲ್ಲಿಗೆ ಬಂದಿದ್ದೇನೆ. ಅಫಿಸಿಯಲಿ ಅಂತ ಬಂದಿದ್ದು ಇದೇ ಮೊದಲು. ಒಂದು ಸಿನಿಮಾ ಉದ್ದೇಶಕ್ಕೆ ಇಲ್ಲಿಗೆ ಬಂದಿದ್ದೇನೆ. ಶೀಘ್ರದಲ್ಲಿಯೇ ಅದರ ವಿಚಾರ ರಿವೀಲ್‌ ಆಗಲಿದೆ ಅಂತ ಪರಿಚಯಿಸಿಕೊಂಡರು. ಕರ್ನಾಟಕ ಹಾಗೂ ಕನ್ನಡ ಇಂಡಸ್ಟ್ರಿ ಬಗ್ಗೆ ಮಾತನಾಡಿದ ಅಲಿ, ರಾಜ್‌ ಕುಮಾರ್‌ ನಂಗೊಂತ್ತು. ಅವರು ಹಾಡಿದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.. ಹಾಡು ನಂಗಿಷ್ಟ. ಹಾಗೆಯೇ ಎಸ್‌ ಪಿ ಬಿ ಕೂಡ ತುಂಬಾ ಇಷ್ಟ. ಇಬ್ಬರು ಈಗಿಲ್ಲ ಅನ್ನೋದು ತುಂಬಾ ನೋವಿನ ಸಂಗತಿ ಅಂತ ದುಃಖ ವ್ಯಕ್ತಪಡಿಸಿದರು ಅಲಿ ಕ್ವಿಲಿ.

ಸದ್ಯದ ಸ್ಯಾಂಡಲ್‌ ವುಡ್‌ ಸ್ಟಾರ್‌ ಗಳಲ್ಲಿ ಸುದೀಪ್‌ ಅಂದ್ರೆ ಅಲಿಗೆ ತುಂಬಾ ಇಷ್ಟ. ಅವರ ಬಿಗ್‌ ಫ್ಯಾನಂತೆ. ಆ ವಿಚಾರವನ್ನು ಸಂದರ್ಶನದಲ್ಲಿ ರಿವೀಲ್‌ ಮಾಡಿದರು. ” ನಾನು ಸುದೀಪ್‌ ಅವರ ಬಿಗ್‌ ಫ್ಯಾನ್.‌ ಹಿಂದಿಗೆ ಡಬ್‌ ಆಗಿ ಬಂದ ಅವರ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ. ಸ್ಪೆಷಲ್‌ ಅಂದ್ರೆ ಅವರ ಈಗ ಸಿನಿಮಾ ನನ್ನ ಫೆವರೇಟ್‌ ಮೂವೀʼ ಅಂದ್ರು ಅಲಿ ಕ್ವಿಲಿ ಮಿರ್ಜಾ.
ಬಾಲಿವುಡ್‌ ಮಟ್ಟಿಗೆ ಮಿರ್ಜಾ ಸಿಕ್ಕಾಪಟ್ಟೆ ಬೇಡಿಕೆ ಇರುವ ನಟ ಹಾಗೂ ಸಿಂಗರ್.‌ ಇಷ್ಟಾಗಿಯೂ ಕಿಂಚಿತ್ತು ಅಹಂಕಾರ ಇಲ್ಲ ಅವರಿಗೆ ಹೆಚ್ಚು ಕಡಿಮೆ, ಅರ್ಧ ಗಂಟೆಗೂ ಹೆಚ್ಚು ಕಾಲ ಸಂದರ್ಶನದಲ್ಲಿ ಕಾಮಿಡಿ ಲವಲವಿಕೆಯಿಂದಲೇ ಮಾತನಾಡಿದರು. ಹಾಡುತ್ತಾ, ಮಿಮಿಕ್ರಿ ಮಾಡುತ್ತಾ, ನಗುತ್ತಾ, ಡೈಲಾಗ್‌ ಹೊಡೆಯುತ್ತಾ ಮಾತನಾಡಿದರು. ” ನಾನು ಕನ್ನಡಕ್ಕೆ ಬರುತ್ತಿದ್ದೇನೆ, ಖುಷಿಆಗುತ್ತಿದೆ. ನಿಮ್ಮೆಲ್ಲರ ಬೆಂಬಲ ಬೇಕಿದೆʼ ಅಂತ ಖಡಕ್‌ ವಿಲನ್‌ ಲುಕ್‌ ಕೊಟ್ಟರು.

Categories
ಸಿನಿ ಸುದ್ದಿ

ಮಗಳು ಚಾರಿತ್ರ್ಯಾ ಬರ್ತ್‌ ಡೇ ಗೆ ವಿಶೇಷವಾಗಿ ವಿಶ್‌ ‌ ಹೇಳಿದ ನಟ ಗಣೇಶ್‌

ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಪುತ್ರಿ ಚಾರಿತ್ರ್ಯಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಮಗಳ ಹುಟ್ಟು ಹಬ್ಬದ ಸಂದರ್ಭದಲ್ಲೀಗ ” ಸಕತ್‌ʼ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ನಟ ಗಣೇಶ್‌, ವಿಡಿಯೋ ಮೂಲಕ ಮಗಳಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದು, ಆ ವಿಡಿಯೋ ಈಗ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಾಗಂತ ಅವರು ವಿಶ್‌ ಮಾಡಿದ್ದಕ್ಕಷ್ಟೆ ಈ ವಿಡಿಯೋ ವೈರಲ್‌ ಆಗಿದೆ ಅಂತಲ್ಲ, ಪುತ್ರಿ ಚಾರಿತ್ಯ್ರಾ ಡಾನ್ಸ್‌ ಮಾಡುವ ವಿಡಿಯೋ ಹಾಕಿ, ಬರ್ತ್‌ ಡೇ ವಿಶ್‌ ಮಾಡಿದ್ದಾರೆ. ಚಾರಿತ್ರ್ಯಾ ಅಲ್ಲಿ ಸಖತ್‌ ಆಗಿಯೇ ಡಾನ್ಸ್‌ ಮಾಡಿದ್ದಾರೆ. ಗಣೇಶ್‌ ಅಭಿಮಾನಿಗಳಿಗೆ ಇದು ಸಖತ್‌ ಖುಷಿಕೊಟ್ಟಿದೆ.

ತಂದೆಯಂತೆಯೇ ಮಗಳು ಕೂಡ ಸಿನಿಮಾ ರಂಗಕ್ಕೆ ಬರುವುದು ಖಾತರಿ ಇದೆ ಅನ್ನೋದು ಈ ವಿಡಿಯೋ ವೈರಲ್‌ ಆಗೋದಿಕ್ಕೆ ಕಾರಣವಾಗಿದೆ. ಗಣೇಶ್‌ ಅಭಿಮಾನಿಗಳು ಚಾರಿತ್ರ್ಯಾಗೆ ಭರ್ಜರಿಯಾಗಿಯೇ ಬರ್ತ್‌ ಡೇ ವಿಶ್‌ ಮಾಡಿದ್ದಾರೆ. ಸದ್ಯಕ್ಕೀಗ ನಟ ಗಣೇಶ್‌ ʼ ಗಾಳಿ ಪಟ 2 ʼ ಹಾಗೂ ಸಖತ್‌ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ʼಗಾಳಿಪಟ 2ʼ ಚಿತ್ರೀಕರಣಕ್ಕಾಗಿ ಇತ್ತೀಚೆಗಷ್ಟೆ ಕಜಕಿಸ್ತಾನ್‌ ಗೂ ಹೋಗಿ ಬಂದಿದ್ದಾರೆ. ಈಗ ʼಸಕತ್‌ʼ ಚಿತ್ರೀಕರಣ ಭರದಿಂದ ಸಾಗಿದೆ. ಮುಂದೆ ಪ್ರಶಾಂತ್‌ ರಾಜ್‌ ನಿರ್ದೇಶನದ ಮತ್ತೊಂದು ಚಿತ್ರಕ್ಕೂ ಗಣೇಶ್‌ ನಾಯಕರಾಗಿದ್ದಾರೆನ್ನುವ ಸುದ್ದಿಯಿದೆ.

Categories
ಸಿನಿ ಸುದ್ದಿ

ಕಟಿಂಗ್‌ ಶಾಪ್‌ ನಲ್ಲಿ ಕಾಮಿಡಿ ಕಿಕ್-‌ ಹೊಸಬರ ಚಿತ್ರದ ಟೀಸರ್‌ ಗೆ ಭರ್ಜರಿ ರೆಸ್ಪಾನ್ಸ್‌ !

ಇದೇನು ಚಿತ್ರದ ಟೈಟಲ್‌ ಹೀಗಿದೆ ? ” ಕಟಿಂಗ್‌ ಶಾಪ್‌ʼ ಎನ್ನುವ ಚಿತ್ರದ ಟೈಟಲ್‌ ಕೇಳಿದವರಿಗೆ ತಕ್ಷಣಕ್ಕೆ ಹೀಗೆನಿಸುವುದು ಅಷ್ಟೇ ಸಹಜ. ಯಾಕಂದ್ರೆ, ಕಟಿಂಗ್‌ ಶಾಪ್‌ ಅಂದಾಕ್ಷಣ ನಮಗೆಲ್ಲ ತಕ್ಷಣಕ್ಕೆ ಕಣ್ಣ ಮುಂದೆ ಬರೋದೇ ಬೇರೆ. ಆದ್ರೆ ಇದು ಅದಲ್ಲ. ಅದಕ್ಕೂ ಈ ಚಿತ್ರಕ್ಕೂ ಯಾವುದೇ ಕನೆಕ್ಷನ್‌ ಕೂಡ ಇಲ್ಲ. ಇದು ಸಿನಿಮಾ ಸಂಕಲನಕಾರನೊಬ್ಬನ ಕಥೆ. ಸಿನಿ ದುನಿಯಾದಲ್ಲಿ ಇಲ್ಲಿ ತನಕ ನಿರ್ದೇಶಕರು, ಸಂಗೀತ ನಿರ್ದೇಶಕರು ಸೇರಿದಂತೆ ವಿವಿಧ ವಿಭಾಗಗಳಲ್ಲಿನ ವ್ಯಕ್ತಿಗಳ ಕುರಿತು ಸಿನಿಮಾ ಬಂದಿವೆ. ಆದ್ರೆ ಸಿನಿಮಾ ಇತಿಹಾಸದಲ್ಲೇ ಫಸ್ಟ್‌ ಟೈಮ್‌ ಸಿನಿಮಾ ಎಡಿಟರ್‌ ಮೇಲೊಂದು ಸಿನಿಮಾ ಮಾಡಿ ತೆರೆಗೆ ತರಲು ಹೊರಟಿದ್ದಾರೆ ಯುವ ನಿರ್ದೇಶಕ ಪವನ್‌ ಭಟ್. ಗುರುಪುರ ಕೆ. ಉಮೇಶ್‌ ಹಾಗೂ ಕೆ. ಗಣೇಶ ಐತಾಳ್ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.

ಗುರುವಾರ ಸಂಜೆ ಈ ಚಿತ್ರದ ಟೀಸರ್‌ ಲಾಂಚ್‌ ಆಗಿದೆ. ಪಿಆರ್‌ಕೆ ಆಡಿಯೋ ಸಂಸ್ಥೆಯ ಮೂಲಕ ಇದು ಹೊರ ಬಂದಿದೆ. ಡಾಲಿ ಖ್ಯಾತಿಯ ನಟ ಧನಂಜಯ್‌ ಟೀಸರ್‌ ಲಾಂಚ್‌ ಮಾಡಿ, ಹೊಸಬರಿಗೆ ಶುಭ ಕೋರಿದ್ದಾರೆ. ಚಿತ್ರದ ಶೀರ್ಷಿಕೆಯ ಹಾಗೆಯೇ ಟೀಸರ್‌ ತುಂಬಾನೆ ಡಿಫೆರೆಂಟ್‌ ಆಗಿದೆ. ಸಿನಿಮಾ ಪ್ರೇಕ್ಷಕರಿಗೆ ಥ್ರಿಲ್‌ ನೀಡುತ್ತಿದೆ. ಟೀಸರ್‌ ಪ್ರತಿ ಸೀನ್‌ ಮಜಾ ವಾಗಿದೆ.

ಸಿನಿಮಾ, ಪ್ರೇಮ, ಕಾಲೇಜು ಕತೆಗಳ ಸುತ್ತಲ ದೃಶ್ಯದ ತುಣುಕುಗಳು ಕಾಮಿಡಿಯ ಕಿಕ್ಕೋ ಕಿಕ್.‌ ಲಾಂಚ್‌ ಕೆಲವೇ ಗಂಟೆಗಳಲ್ಲಿ ಅದು ಸೋಷಲ್‌ ಮೀಡಿಯಾದಲ್ಲಿ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿತ್ತು. ಇದು ಬಿಡಿ, ಟೀಸರ್‌ ಮಾಡಿದ ಸಂದರ್ಭವೇ ಡಿಫೆರೆಂಟ್‌ ಆಗಿತ್ತು. ಚಿತ್ರ ತಂಡ ಅವತ್ತು ನಟ ಧನಂಜಯ್‌ ಅವರನ್ನು ಭೇಟಿ ಮಾಡಿತ್ತು. ಹೋಗುವ ಮುನ್ನವೇ ಧನಂಜಯ್‌ ಅವರಿಂದ ಅಪಾಯಿಂಟ್‌ ಮೆಂಟ್‌ ಪಡೆದಿತ್ತು. ಹೋಗುವಾಗ ತಾವುಮಾಧ್ಯಮದವರು, ಸಂದರ್ಶನ ಬೇಕು ಅಂತ ಹೇಳಿತ್ತು. ಕೊನೆಗೆ ಧನಂಜಯ್‌ ಅವರನ್ನು ಭೇಟಿ ಮಾತಿಗೆ ಕುಳಿತಾಗ ತಾವೊಂದು ಸಿನಿಮಾ ಟೀಮ್‌ ಕಡೆಯಿಂದ ಬಂದಿದ್ದೇವೆ. ಕಟಿಂಗ್‌ ಶಾಪ್‌ ಅಂತ ಸಿನಿಮಾ ಅಂತಂದಾಗ ಧನಂಜಯ್‌ ಅವರೇ ಶಾಕ್.‌ ಹಾಗೊಂದು ಡಿಫೆರೆಂಟ್‌ ಸ್ಟೈಲ್‌ ನಲ್ಲಿʼ ಕಟಿಂಗ್‌ ಶಾಪ್‌ʼ ಟೀಸರ್‌ ಲಾಂಚ್‌ ಆಗಿದೆ.

ನವ ಪ್ರತಿಭೆ ಪವನ್‌ ಭಟ್‌ ಈ ಚಿತ್ರದ ನಿರ್ದೇಶಕರು. ಈ ಹಿಂದೆ ಅವರು ಆಪರೇಷನ್‌ ಅಲಮೇಲಮ್ಮ, ಮಾಯಾ ಬಜಾರ್‌, ಅಳಿದು ಉಳಿದವರು, ರಾಂಚಿ ಸೇರಿದಂತೆ ಹಲವು ಚಿತ್ರಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಸಾಹಿತ್ಯ ಕೂಡ ಬರೆದಿದ್ದಾರೆ. ಇದೇ ಮೊದಲು ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್‌ ವುಡ್‌ ಗೆ ಎಂಟ್ರಿಯಾಗಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯದ ಜತೆಗೆ ನಿರ್ದೇಶನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅವರಿಗೆ ಕೆ.ಬಿ. ಪ್ರವೀಣ್‌ ಕೂಡ ಸಾಥ್‌ ನೀಡಿದ್ದಾರೆ. ಹಾಗೆಯೇ ಪ್ರವೀಣ್‌ ಈ ಚಿತ್ರದಲ್ಲಿ ನಾಯಕನಟರಾಗಿ ಕಾಣಿಸಿಕೊಂಡಿದ್ದು ಮಾತ್ರವಲ್ಲ ಸಂಗೀತ ನಿರ್ದೇಶನದ ಜವಾಬ್ದಾರಿಯೂ ಅವರದ್ದೇ. ಸ್ಕಂದ ರತ್ನ ಛಾಯಾಗ್ರಹಣ ಮಾಡಿದ್ದಾರೆ. ಸಾಗರ್‌ ಗಣೇಶ್‌ ಸಂಕಲನ ಈ ಚಿತ್ರಕ್ಕಿದೆ. ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ದೀಪಕ್ ಭಟ್, ಅಭಿಷೇಕ್ ಸಾವಳಗಿ, ನವೀನ್ ಕೃಷ್ಣ , ಹಿರಿಯ ನಿರ್ದೇಶಕ ಭಗವಾನ್‌, ಓಂ ಪ್ರಕಾಶ್‌ ರಾವ್‌ ಜತೆಗೆ ರಾಬರ್ಟ್‌ ಖ್ಯಾತಿಯ ನಿರ್ದೇಶಕ ತರುಣ್‌ ಸುಧೀರ್‌ ಕೂಡ ಇದ್ದಾರೆ. ಸದ್ಯಕ್ಕೆ ಚಿತ್ರ ತಂಡ ಟೀಸರ್‌ ಲಾಂಚ್‌ ಮೂಲಕ ಸದ್ದು ಮಾಡಿದೆ. ಮುಂದಿನ ದಿನಗಳಲ್ಲಿ ಟ್ರೇಲರ್‌ ಮೂಲಕ ಸೌಂಡ್‌ ಮಾಡಲು ಸಿದ್ಧತೆ ನಡೆಸಿದೆ.

error: Content is protected !!