ವಿಷ್ಣು ಪ್ರಿಯಗೆ ಸಾಥ್‌ ಕೊಟ್ಟ ಪವರ್‌ ಸ್ಟಾರ್‌ – ಜೂನ್‌ ಹೊತ್ತಿಗೆ ಚಿತ್ರಮಂದಿರದಲ್ಲಿ ಶ್ರೇಯಸ್‌ ಎರಡನೇ ಸಿನಿಮಾ

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್‌ ಹಾಗೂ ನ್ಯಾಷನಲ್‌ ಕ್ರಷ್‌ ಪ್ರಿಯಾ ವಾರಿಯರ್‌ ಅಭಿನಯದ ʼವಿಷ್ಣು ಪ್ರಿಯʼ ಚಿತ್ರ ರಿಲೀಸ್ ರೆಡಿ ಆಗುತ್ತಿದೆ. ಸದ್ಯಕ್ಕೇನು ಅದರ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿಲ್ಲ. ಆದರೆ, ಈಗ ಟೀಸರ್‌ ಲಾಂಚ್‌ ಮೂಲಕ ಸೌಂಡ್‌ ಮಾಡಲು ರೆಡಿಯಾಗಿದೆ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಟೀಸರ್‌ ಲಾಂಚ್‌ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದ್ದು ವಿಶೇಷ. ಬೆಂಗಳೂರಿನ ಮಲ್ಲೇಶ್ವರಂ ರೇಣುಕಾಂಬ ಡಿಜಿಟಲ್‌ ಸ್ಟುಡಿಯೋದಲ್ಕಿ ಮೊನ್ನೆಯಷ್ಟೇ”ವಿಷ್ಣು ಪ್ರಿಯʼ ಚಿತ್ರದ ಟೀಸರ್‌ ಲಾಂಚ್‌ ಕಾರ್ಯಕ್ರಮ ನಡೆಯಿತು. ಪುನೀತ್‌ ರಾಜ್‌ ಕುಮಾರ್‌ ಟೀಸರ್‌ ಲಾಂಚ್‌ ಮಾಡಿ ಶುಭ ಹಾರೈಸಿದ್ರು. ಚಿತ್ರಕ್ಕೆ ಒಳ್ಳೆಯ ಟೈಟಲ್‌ ಇಡಲಾಗಿದೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಬಂದಿರುವ ನಂಬಿಕೆ ಇದೆ ಅಂತ ಅಪ್ಪು ವಿಶ್ವಾಸ ವ್ಯಕ್ತಪಡಿಸಿದರು.

ಕಾಲೇಜು ಜೀವನದಲ್ಲಿ ಪ್ರೀತಿ ಮಾಡೋದು ಸಹಜ‌. ಕೆಲವೊಮ್ಮೆ ಪ್ರೀತಿ ಸಿಗದೆ ಹುಡುಗರು ಹುಚ್ಚರಾಗುವುದು ಅಷ್ಟೇ ಕಾಮನ್.‌ ಅಂತಹದೊಂದು ಕಥೆಯನ್ನು ಹೊತ್ತ ಸಿನಿಮಾ ವಿಷ್ಣು ಪ್ರಿಯ. ಆ ಕುರಿತು ನಿರ್ಮಾಪಕ ಮಂಜು ಮಾತನಾಡಿದರು. ” ಇದು ನೈಜಘಟನೆಯಾಧಾರಿತ ಸಿನಿಮಾ. ಬೆಳಗಾವಿಯಲ್ಲಿ 1990ಯಲ್ಲಿನಡೆದಿರುವ ಪಕ್ಕಾ ಲವ್ ಸ್ಟೋರಿಯಾಗಿದೆ. ಕಥೆ ಮನಸ್ಸಿಗೆ ನಾಟುತ್ತೆ. ‌ಮುಂದಿನ ತಿಂಗಳು ಆಡಿಯೋ ಬಿಡುಗಡೆ ನಡೆಯಲಿದೆ ಎಂದರು.” ಪಡ್ಡೆ ಹುಲಿʼ ಚಿತ್ರದ ನಂತರ ಶ್ರೇಯಸ್‌ ನಾಯಕ ನಟರಾಗಿ ಅಭಿನಯಿಸಿದ ಚಿತ್ರದ ಇದು. ಅವರಿಲ್ಲಿ ಕಾಲೇಜು ಹುಡುಗ. ಟೀಸರ್‌ ಲಾಂಚ್‌ ಗೆ ಪುನೀತ್‌ ರಾಜ್‌ ಕುಮಾರ್‌ ಅತಿಥಿಯಾಗಿ ಬಂದಿದ್ದಕ್ಕೆ ಧನ್ಯವಾದ ಹೇಳಿದರು. ನಿರ್ದೇಶಕ ವಿ.ಕೆ ಪ್ರಕಾಶ್ ಅವರಿಗೂ ಇದು ಎರಡನೇ ಸಿನಿಮಾ. ಚಿತ್ರದ ಮೇಲೆ ಅವರಿಗೂ ಸಾಕಷ್ಟು ನಿರೀಕ್ಷ ಇದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಟೀಸರ್‌ ಲಾಂಚ್‌ ಗೆ ಅತಿಥಿಯಾಗಿ ಬಂದಿದ್ದರು.

Related Posts

error: Content is protected !!