ಬರ್ಕ್ಲಿ ಹಿಡಿದು ಬಂದ ನೋ ಸ್ಮೋಕಿಂಗ್‌ ಜಾಹೀರಾತಿನ ಹುಡುಗಿ- ಇದು ಸುಮನ್‌ ಕ್ರಾಂತಿ

ಸುಮನ್‌ ಕ್ರಾಂತಿ ನಿರ್ದೇಶನದ ʼಕಾಜಲ್‌ʼ ಚಿತ್ರ ಈಗ ʼಬರ್ಕ್ಲಿʼ ಎನ್ನುವ ಹೊಸ ಟೈಟಲ್‌ ಹೊತ್ತಿದೆ. ಈ ಹಿಂದೆ ಈ ಚಿತ್ರʼ ಕಾಜಲ್‌ ʼಹೆಸರಲ್ಲೇ ಸೆಟ್ಟೇರಿತ್ತು. ಆನೇಕಲ್‌ ಬಾಲರಾಜ್‌ ಇದಕ್ಕೆ ಬಂಡವಾಳ ಹೂಡಿದ್ದರು. ಅವರ ಪುತ್ರ ಸಂತೋಷ್‌ ಬಾಲರಾಜ್‌ ನಾಯಕರಾಗಿದ್ದರು. ಹೆಚ್ಚು ಕಡಿಮೆ ಎರಡು ವರ್ಷಳ ಹಿಂದೆಯೇ ಇದು ಸುದ್ದಿ ಮಾಡಿತ್ತು. ಕೊರೋನಾ ಕಾರಣಕ್ಕೆ ಇದುವರೆಗೂ ತೆರೆಮೆರೆಯಲ್ಲಿ ಉಳಿದಿದ್ದ ಈ ಚಿತ್ರ ಈಗ, ಬರ್ಕ್ಲಿ ಹೆಸರಲ್ಲಿ ಸದ್ದು ಮಾಡಲು ರೆಡಿಯಾಗಿದೆ.

ಸಿಮ್ರಾನ್ ನಟೇಕರ್ ಸ್ಯಾಂಡಲ್ ವುಡ್ ಅಂಗಳದಲ್ಲಿ ‌ಅದೃಷ್ಟ ಪರೀಕ್ಷೆಗಿಳಿಯಲು ಸಜ್ಜಾಗಿರುವ ಮುಂಬೈ ಚೆಲುವೆ. ಮಾರ್ಚ್ 31 ರಂದು ಈ ಬೊಂಬಾಟ್ ಚೆಲುವೆಯ ಫಸ್ಟ್ ಲುಕ್‌‌ ರಿವೀಲ್‌‌ ಆಗಲಿದೆ. ಅರೆ, ಇದ್ರಲೇನು ಸ್ಪೆಷಲ್‌ ಅಂತ ನಿಮಗೂ ಅನಿಸಬಹುದು. ಯಾಕಂದ್ರೆ, ಹೊರರಾಜ್ಯದಿಂದ ಚಂದನವನಕ್ಕೆ ಬಂದು, ಇಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡು ಬೆಳ್ಳಿತೆರೆಯನ್ನು ಬೆಳಗೋದು ಹೊಸದೇನಲ್ಲ. ಅದರಲ್ಲಿ ಇವ್ರು ಒಬ್ಬರು ಅನ್ನೋದು ನಿಜ, ಆದ್ರೆ ಈ ಸಿಮ್ರಾನ್‌ ಗೊಂದು ಹಿನ್ನೆಲೆಇದೆ. ಅದೇ ಕಾರಣಕ್ಕೆ ಸ್ಯಾಂಡಲ್‌ ವುಡ್‌ಗೆ ಎಂಟ್ರಿ ಆಗಿದ್ದಾರೆ. ಅದೇ ಇಲ್ಲಿನ ವಿಶೇಷ. ಹಾಗಾದ್ರೆ ಈ ಸಿಮ್ರಾನ್‌ ಹಿನ್ನೆಲೆ ಏನು?

ತುಂಬಾ ವರ್ಷಗಳ ಹಿಂದೆ ಕಿರುತೆರೆ ಹಾಗೂ ಚಿತ್ರ ಮಂದಿರಗಳಲ್ಲಿ ಧೂಮಪಾನ ಜಾಗೃತಿ ಕುರಿತು ಒಂದು ಜಾಹೀರಾತು ಬಿತ್ತರಗೊಳ್ಳುತ್ತಿತ್ತು. ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದನ್ನು ಮನವರಿಕೆ ಮಾಡಿ ಕೋಡೋ ಜಾಹೀರಾತು ಅದು. ಒಬ್ಬ ಮನೆ ಯಜಮಾನ ಮನೆಯಲ್ಲಿಯೇ ತನ್ನ ಹೆಂಡತಿ ಮತ್ತು ಪುಟ್ಟ ಮಗಳೆದುರು ಸೀಗರೇಟು ಸೇದುವ ಸನ್ನಿವೇಶ ಅದು. ಕೊನೆಗೆ ಮಗಳು ಅದನ್ನು ಪ್ರತಿರೋಧಿಸುವ ಸಣ್ಣ ಸೂಚನೆಯೊಂದಿಗೆ ಆತ ಅಲ್ಲಿಗೆ ಸೀಗರೇಟ್‌ ಸೇವನೆ ನಿಲ್ಲಿಸುತ್ತಾನೆ. ಇಲ್ಲಿ ಆ ಜಾಹೀರಾತಿನೊಳಗೆ ಪುಟಾಣಿ ಬಾಲಕಿಯಾಗಿ ಕಾಣಿಸಿಕೊಂಡ ಹುಡುಗಿಯೇ ಸಿಮ್ರಾನ್‌ ನಟೇಕರ್.‌ ಇವತ್ತವರು ಬೆಳೆದು ದೊಡ್ಡವರಾಗಿದ್ದಾರೆ. ಬೇಬಿಡಾಲ್ ಗ್ಲಾಮರ್ ಬೊಂಬೆಯಾಗಿ ಬೆಳೆದು‌ನಿಂತಿದ್ದಾರೆ. ಮರಾಠಿ ಕಿರುತೆರೆಯಲ್ಲಿ‌ ಮಿನುಗಿ, ಹಿಂದಿ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.ಇದೀಗ ಅಲ್ಲಿಂದ ಸ್ಯಾಂಡಲ್ ವುಡ ಗೂ ಲಗ್ಗೆ ಇಟ್ಟಿದ್ದಾರೆ.

ನಿಮಗೆ ನೆನಪಿರಬಹುದು, ಎರಡು ವರ್ಷಗಳ ಹಿಂದೆ ಅಂದ್ರೆ 2019 ರಲ್ಲೇ ಸಿಮ್ರಾನ್ ಕನ್ನಡಕ್ಕೆ ಬರ್ತಾರೆ ಅಂತ ಸುದ್ದಿಯಾಗಿತ್ತು. ನಿರ್ದೇಶಕ ಸುಮನ್ ಕ್ರಾಂತಿ, ತಾವು ನಿರ್ದೇಶಿಸುತ್ತಿರುವ ʼಕಾಜಲ್‌ʼ ಹೆಸರಿನ ಚಿತ್ರದೊಂದಿಗೆ ನೋ‌ ಸ್ಮೋಕಿಂಗ್ ಸುಂದರಿಯನ್ನು ಹುಡುಕಿ ಚಂದನವನಕ್ಕೆ ಪರಿಚಯಿಸುತ್ತಿದ್ದಾರೆ ಎನ್ನುವ ಸುದ್ದಿ ಸಿನಿಪ್ರಿಯರಿಗೆ ಕುತೂಹಲ ಮೂಡಿಸಿತ್ತು. ಅವರು ಹೇಳಿದಂತೆ ಸಿಮ್ರಾನ್‌ ಕನ್ನಡಕ್ಕೂ ಬಂದರು. ಶೂಟಿಂಗ್‌ ನಲ್ಲೂ ಭಾಗವಹಿಸಿದ್ದರು. ಮುಂದೇನು ಎನ್ನುವ ಹೊತ್ತಿಗೆ ಕೊರೋನಾ ಬಂತು, ಅಲ್ಲಿಂದ ಸೈಲೆಂಟ್‌ ಆಗಿದ್ದ ಚಿತ್ರ ತಂಡ ಈಗ ಹೊಸ ಹೆಸರಲ್ಲಿ ಸದ್ದು ಮಾಡಲು ಹೊರಟಿದೆ.

ʼಬರ್ಕ್ಲಿʼ ಎನ್ನುವುದು ಸುಮನ್‌ ನಿರ್ದೇಶನದ ಹೊಸ ಚಿತ್ರದ ಹೆಸರು. ಅಂದ್ರೆ ಕಾಜಲ್‌ ಹೆಸರಲ್ಲಿ ಸೆಟ್ಟೇರಿ, ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರಕ್ಕೀಗ ʼಬರ್ಕ್ಲಿʼ ಎನ್ನುವ ಹೊಸ ಟೈಟಲ್‌ ಹೊತ್ತಿದೆ. ಅದನ್ನು ಶೀಘ್ರವೇ ಚಿತ್ರ ತಂಡ ರಿವೀಲ್‌ ಮಾಡುವ ಆಲೋಚನೆಯಲ್ಲಿದೆ. ಸದ್ಯಕ್ಕೆ ಈ ಚಿತ್ರದೊಂದಿಗೆ ಕನ್ನಡಕ್ಕೆ ಎಂಟ್ರಿಯಾಗುತ್ತಿರುವ ನೋ ಸ್ಮೋಕಿಂಗ್‌ ಹುಡುಗಿ ಸಿಮ್ರಾನ್‌ ನಟೇಕರ್‌ ಅವರನ್ನು ಹೊಸ ರೀತಿಯಲ್ಲೇ ಪರಿಚಯಿಸಲು ಹೊರಟಿದ್ದಾರೆ. ಮಾರ್ಚ್‌ 31ಕ್ಕೆ ಸ್ಪೆಷಲ್‌ ರಿವೀಲ್‌ ಈವೆಂಟ್‌ ಹಮ್ಮಿಕೊಂಡಿದ್ದಾರೆ. ಆ ಕಥೆ ಇರಲಿ, ಕಾಜಲ್‌ ಎನ್ನುವ ಟೈಟಲ್‌ ಈಗ ʼಬರ್ಕ್ಲಿʼ ಅಂತಾಗಿದ್ದೇಕೆ?

ಬರ್ಕಿಲಿ ಎಂದಾಕ್ಷಣ ಸಿಗರೇಟ್ ಮತ್ತೆ ಕಣ್ಮುಂದೆ ಬರುತ್ತೆ. ಅಲ್ಲಾ. ನೋ‌ ಸ್ಮೋಕಿಂಗ್ ಎಂದ‌ ಬೇಬಿ‌ಡಾಲ್‌ ಇದೀಗʼ ಬರ್ಕ್ಲಿʼ ಹಿಡಿದು ಬರ್ತಿದ್ದಾಳೆ. ಅಂದರೆ ಸಿಗರೇಟ್ ಆರೋಗ್ಯಕ್ಕೆ ಹಾನಿಕಾರ ಅಂತ ಮತ್ತೆ ಮೆಸೇಜ್ ಕೊಡ್ತಾಳಾ ಅಥವಾ ಸಿಗರೇಟ್ ಹೊತ್ತಿಸಿಕೊಂಡು ಗುಲಾಬಿ ತುಟಿಯ ಮೇಲಿಟ್ಟುಕೊಂಡು ಪಡ್ಡೆಹೈಕ್ಳಿಗೆ ಕಿಕ್ಕೇರಿಸ್ತಾಳಾ ? ಈ ಕೌತುಕದ ಕೊಶ್ವನ್ಗೆ ನೀವೆಲ್ಲರೂ 31 ರವರೆಗೆ ಕಾಯಬೇಕು. ಆದ್ರೆ, ಕೊರೊನಾ ಹಾವಳಿಯ ನಡುವೆ ನಿರ್ದೇಶಕ ಸುಮನ್ ಕ್ರಾಂತಿ ಟೈಟಲ್ ನಲ್ಲಿ ಕ್ರಾಂತಿ ಮಾಡಿದ್ದಾರೆ. ʼಬರ್ಕ್ಲಿʼ ಅಂತ ಹೊಸ ಹೆಸರಿಟ್ಟಿದ್ದಾರೆ. ಟೈಟಲ್ ನಿಂದಲೇ ನಶೇಯೇರಿಸೋ ಈ‌ ಚಿತ್ರಕ್ಕೆ ಅನೇಕಲ್ ಬಾಲರಾಜ್ ಬಂಡವಾಳ‌ ಸುರಿಯುತ್ತಿದ್ದಾರೆ. ʼಗಣಪ‌ʼಸಿನಿಮಾ ಖ್ಯಾತಿಯ ಸಂತೋಷ್ ಚಿತ್ರದ ನಾಯಕರಾಗಿದ್ದು, ನೋ ಸ್ಮೋಕಿಂಗ್ ಸುಂದರಿ ಸಿಮ್ರಾನ್ ನಟೇಕರ್ ಸಂತೋಷ್ ಗೆ ಜೊತೆಯಾಗಲಿದ್ದಾರೆ. ಶೀಘ್ರದಲ್ಲೇ “ಬರ್ಕ್ಲಿʼ ನಿಮ್ನೆಲ್ಲರಿಗೂ‌ ಕಿಕ್ಕೇರಿಸಲಿದೆ.

Related Posts

error: Content is protected !!