ನಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಮಗಳ ಹುಟ್ಟು ಹಬ್ಬದ ಸಂದರ್ಭದಲ್ಲೀಗ ” ಸಕತ್ʼ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ನಟ ಗಣೇಶ್, ವಿಡಿಯೋ ಮೂಲಕ ಮಗಳಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದು, ಆ ವಿಡಿಯೋ ಈಗ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಂತ ಅವರು ವಿಶ್ ಮಾಡಿದ್ದಕ್ಕಷ್ಟೆ ಈ ವಿಡಿಯೋ ವೈರಲ್ ಆಗಿದೆ ಅಂತಲ್ಲ, ಪುತ್ರಿ ಚಾರಿತ್ಯ್ರಾ ಡಾನ್ಸ್ ಮಾಡುವ ವಿಡಿಯೋ ಹಾಕಿ, ಬರ್ತ್ ಡೇ ವಿಶ್ ಮಾಡಿದ್ದಾರೆ. ಚಾರಿತ್ರ್ಯಾ ಅಲ್ಲಿ ಸಖತ್ ಆಗಿಯೇ ಡಾನ್ಸ್ ಮಾಡಿದ್ದಾರೆ. ಗಣೇಶ್ ಅಭಿಮಾನಿಗಳಿಗೆ ಇದು ಸಖತ್ ಖುಷಿಕೊಟ್ಟಿದೆ.
ತಂದೆಯಂತೆಯೇ ಮಗಳು ಕೂಡ ಸಿನಿಮಾ ರಂಗಕ್ಕೆ ಬರುವುದು ಖಾತರಿ ಇದೆ ಅನ್ನೋದು ಈ ವಿಡಿಯೋ ವೈರಲ್ ಆಗೋದಿಕ್ಕೆ ಕಾರಣವಾಗಿದೆ. ಗಣೇಶ್ ಅಭಿಮಾನಿಗಳು ಚಾರಿತ್ರ್ಯಾಗೆ ಭರ್ಜರಿಯಾಗಿಯೇ ಬರ್ತ್ ಡೇ ವಿಶ್ ಮಾಡಿದ್ದಾರೆ. ಸದ್ಯಕ್ಕೀಗ ನಟ ಗಣೇಶ್ ʼ ಗಾಳಿ ಪಟ 2 ʼ ಹಾಗೂ ಸಖತ್ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ʼಗಾಳಿಪಟ 2ʼ ಚಿತ್ರೀಕರಣಕ್ಕಾಗಿ ಇತ್ತೀಚೆಗಷ್ಟೆ ಕಜಕಿಸ್ತಾನ್ ಗೂ ಹೋಗಿ ಬಂದಿದ್ದಾರೆ. ಈಗ ʼಸಕತ್ʼ ಚಿತ್ರೀಕರಣ ಭರದಿಂದ ಸಾಗಿದೆ. ಮುಂದೆ ಪ್ರಶಾಂತ್ ರಾಜ್ ನಿರ್ದೇಶನದ ಮತ್ತೊಂದು ಚಿತ್ರಕ್ಕೂ ಗಣೇಶ್ ನಾಯಕರಾಗಿದ್ದಾರೆನ್ನುವ ಸುದ್ದಿಯಿದೆ.